Tag: Sheep Market

  • ಆರೋಗ್ಯ ಸಚಿವರ ತವರೂರಲ್ಲೇ ಕುರಿ ಸಂತೆ- ಸಾವಿರಾರು ಮಂದಿ ಜಮಾವಣೆ

    ಆರೋಗ್ಯ ಸಚಿವರ ತವರೂರಲ್ಲೇ ಕುರಿ ಸಂತೆ- ಸಾವಿರಾರು ಮಂದಿ ಜಮಾವಣೆ

    ಚಿಕ್ಕಬಳ್ಳಾಪುರ: ಕುರಿ, ಮೇಕೆ ಮಾರಾಟ ಮಾಡಲು ಸಂತೆಯಲ್ಲಿ ಸಾವಿರಾರು ಮಂದಿ ಜಮಾವಣೆಯಾಗಿದ್ದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

    ಪೇರೇಸಂದ್ರ ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಆವರಣದಲ್ಲಿ ಪ್ರತಿ ಸೋಮವಾರ ಸಾವಿರಾರು ಮಂದಿ ಜಮಾವಣೆಯಾಗುತ್ತಾರೆ. ಈ ವಾರವೂ ಸಹ ಕೊರೊನಾ ನಡುವೆಯೂ ಎಂದಿನಂತೆ ಸಾವಿರಾರು ಮಂದಿ ಜಮಾವಣೆಯಾಗಿದ್ದು ಕುರಿ ಸಂತೆ ಕೊರೊನಾ ಜಾತ್ರೆಯಾಗಲಿದ್ಯಾ ಎಂಬಂತಾಗಿದೆ.

    ಬಹುತೇಕರು ಮಾಸ್ಕ್ ಧಾರಣೆ ಮಾಡಿಲ್ಲ. ಮಾಸ್ಕ್ ಧರಿಸಿದ್ರೂ ಸುಖಾಸುಮ್ಮನೆ ಗಲ್ಲಕ್ಕೆ ಧರಿಸಿದ್ದು, ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಸಹ ಕಣ್ಣಿದ್ದು ಕುರುಡರಾಗಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ಸಂತೆಗೆ ಕೇವಲ ನಮ ರಾಜ್ಯ ಅಷ್ಟೇ ಅಲ್ಲದೆ ಪಕ್ಕದ ಆಂಧ್ರಪ್ರದೇಶದಿಂದಲೂ ಜನ ಆಗಮಿಸುತ್ತಾರೆ. ಇದನ್ನೂ ಓದಿ: ಪೊಲೀಸ್ ಆಯುಕ್ತ ಕಮಲ್ ಪಂತ್‍ಗೆ ಕೊರೊನಾ ಪಾಸಿಟಿವ್

    ಈಗಗಾಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದೆ. ಸಮುದಾಯದಲ್ಲಿ ಪ್ರಸರಣವಾಗಿದ್ದು ಜನಸಂದಣಿಗಳಿಗೆ ಬ್ರೇಕ್ ಹಾಕಬೇಕಿದೆ. ಜಿಲ್ಲಾಡಳಿತ ಆದಷ್ಟು ಬೇಗ ಈ ಕ್ರಮಕೈಗೊಳ್ಳಬೇಕು ಅಂತ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

  • ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    – ಆಂಧ್ರ ಪ್ರದೇಶದ ಕುರಿ ಸಂತೆಗೆ ಮಾಜಿ ಸ್ಪೀಕರ್ ಭೇಟಿ

    ಕೋಲಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಹಾಗೂ 17 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರೈತನಾಗಿ ಹೊಸ ವ್ಯಾಪಾರ ಶುರು ಮಾಡಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಕೆ.ಆರ್.ರಮೇಶ್ ಕುಮಾರ್ ಅವರು ಕೊಂಚ ರಾಜಕೀಯದಿಂದ ರಿಲ್ಯಾಕ್ಸ್ ಆಗಿದ್ದಾರೆ. ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರು ಕುರಿ ಸಾಕಾಣಿಕೆ ಸೇರಿದಂತೆ ವ್ಯವಸಾಯದ ಕಡೆ ಗಮನ ಕೊಡಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಕುರಿ ಸಂತೆಯಲ್ಲಿ ವ್ಯಾಪಾರ ಮಾಡುವ ಮೂಲಕ ರೈತರಾಗಿದ್ದಾರೆ.

    ರಮೇಶ್ ಕುಮಾರ್ ಅವರು ಸಂತೆಯಲ್ಲಿನ ಓಡಾಟ, ವ್ಯಾಪರದ ದೃಶ್ಯವನ್ನು ಬೆರೆ ಬೆಂಬಲಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈತರ ಗೆಟಪ್‍ನಲ್ಲಿ ರಮೇಶ್ ಕುಮಾರ್ ಅವರು ತಲೆಗೆ ಟವೆಲ್ ಸುತ್ತಿಕೊಂಡು ಸಾಮಾನ್ಯರಂತೆ ಸಂತೆಯಲ್ಲಿ ಕುರಿ ಖರೀದಿಸುವಲ್ಲಿ ಬ್ಯುಸಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹಿಂದಿನಿಂದಲೂ ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ವ್ಯವಸಾಯದಲ್ಲಿ ಹೆಚ್ವು ಆಸಕ್ತಿ ತೋರುತ್ತಾ ಬಂದಿದ್ದಾರೆ. ಹೀಗಾಗಿ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಶನಿವಾರ ಸಂತೆಯಲ್ಲಿ ಕುರಿ ವ್ಯಾಪಾರದಲ್ಲಿ ಬಿಸಿಯಾಗಿದ್ದರು.