Tag: Sheep Farming

  • ಕುರಿ ಸಾಕಾಣಿಕೆ ಒಂದು ಎಟಿಎಂ ಕಾರ್ಡ್ ಇದ್ದಂತೆ – ದರ್ಶನ್

    ಕುರಿ ಸಾಕಾಣಿಕೆ ಒಂದು ಎಟಿಎಂ ಕಾರ್ಡ್ ಇದ್ದಂತೆ – ದರ್ಶನ್

    ಬೆಂಗಳೂರು: ಕುರಿ ಸಾಕಾಣಿಕೆ ಎಂಬುವುದು ಒಂದು ಎಟಿಎಂ ಕಾರ್ಡ್ ಇದ್ದ ಹಾಗೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ದರ್ಶನ್ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಕುರಿತ ಒಂದಷ್ಟು ಇಂಟರೆಸ್ಟಿಂಗ್ ಸ್ಟೋರಿಯನ್ನು ಪಬ್ಲಿಕ್ ಟಿವಿ ಜೊತೆ ದರ್ಶನ್ ಹಂಚಿಕೊಂಡಿದ್ದಾರೆ. ಇಷ್ಟು ದಿನ ಆನೆ, ಕುದುರೆ, ಶ್ವಾನ ಹೀಗೆ ಹಲವು ಪ್ರಾಣಿ ಪಕ್ಷಿಗಳನ್ನು ಇಷ್ಟ ಪಡುತ್ತಿದ್ದ ದರ್ಶನ್ ಇದೀಗ ಕುರಿ ಸಾಕಾಣಿಕೆ ವಿಚಾರವಾಗಿ ತಮಗಿರುವ ಒಲವನ್ನು ತೊಡಿಕೊಂಡಿದ್ದಾರೆ.

    ಒಮ್ಮೆ ಕಾರ್ಯಕ್ರಮಯೊಂದರ ಬಾಡೂಟಕ್ಕೆ ದರ್ಶನ್ ಸ್ನೇಹಿತರೊಬ್ಬರು ಕುರಿ ಪಡೆದಿದ್ದು, ಕಾರ್ಯಕ್ರಮದ ಮುಗಿದ ಬಳಿಕ ದರ್ಶನ್ ಬಳಿ ಕುರಿ ಬಾಡೂಟದ ಬಗ್ಗೆ ಸಂತಸ ವ್ಯಕ್ತಪಡಿಸಿ, ಉಳಿದ ಕುರಿಯನ್ನು ಏನು ಮಾಡುತ್ತೀಯಾ ಎಂಬ ಪ್ರಶ್ನೆ ಕೇಳಿದ್ದರಂತೆ. ಈ ವೇಳೆ ಲಾಕ್‍ಡೌನ್‍ನಲ್ಲಿ ಕೆಲಸವಿಲ್ಲದೇ ಖಾಲಿ ಕೈನಲ್ಲಿ ಕುಳಿತಿದ್ದ ದರ್ಶನ್, ಏಕೆ ಕುರಿ ಸಾಕಾಣಿಕೆ ಮಾಡಬಾರದು ಎಂದು ಆಲೋಚಿಸಿ ಕುರಿ ಸಾಕಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಕುರಿ ಸಾಕಿ ಮಾರಾಟ ಮಾಡಿದ್ದರಿಂದ ಖರ್ಚಿಗೆ ಹಣ ಸಂಪಾದಿಸಿದ ದರ್ಶನ್ ಕುರಿ ಸಾಕಾಣಿಕೆ ಎಂಬುವುದು ಒಂದು ಎಟಿಎಂ ಕಾರ್ಡ್ ಇದ್ದ ಹಾಗೇ. ಕಷ್ಟದ ಸಮಯದಲ್ಲಿ ಕುರಿಸಾಕಾಣಿಕೆ ನಮ್ಮ ಕೈ ಹಿಡಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಾಸ್ಯ ನಟ ಚಿಕ್ಕಣ್ಣ ಕೂಡ ದರ್ಶನ್‍ನಿಂದ ಸ್ಪೂರ್ತಿ ಪಡೆದು ಫಾರ್ಮ್ ಹೌಸ್‍ನಲ್ಲಿ ಕುರಿಸಾಕಾಣಿಯನ್ನು ಆರಂಭಿಸಿದ್ದು, ಕುರಿ ಜೊತೆ ಈವರೆಗೂ ಸುಮಾರು 650 ಕೋಳಿಯನ್ನು ಸಾಕಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಫಾರ್ಮ್ ಹೌಸ್‍ಗೆ ಭೇಟಿ ನೀಡಿ ಕುರಿ ಸಾಕಾಣಿಕೆ ಕುರಿತ ಕೆಲವೊಂದು ಟಿಪ್ಸ್ ಕೂಡ ನೀಡಿರುವುದಾಗಿ ದರ್ಶನ್ ಈ ವೇಳೆ ತಿಳಿಸಿದರು.

    ಅಷ್ಟಕ್ಕೂ ಕುರಿ ಸಾಕಾಣಿಕೆ ಅಷ್ಟು ಸುಲಭದ ಕೆಲಸವಲ್ಲ. ಕೆಲವು ದಿನಗಳ ಹಿಂದೆ ಹಕ್ಕಿ ಜ್ವರದಿಂದ ಕಾಣಿಸಿಕೊಂಡು ಕೋಳಿಗಳು ಮೃತಪ್ಟವು ಹಾಗೆಯೇ ಆಕಸ್ಮಿಕವಾಗಿ ಕುರಿ ಕಾಯಿಲೆಯಿಂದ ಮೃತಪಟ್ಟರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಂದು ಹೇಳಿಕೊಂಡಿದ್ದಾರೆ.

  • ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

    -ಕುರಿ ಸಾಕಾಣಿಕೆಗೆ ಮುಂದಾದ ವ್ಯಕ್ತಿ

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಮದ್ಯ ಸಿಗದೆ ಪರದಾಡಿದವರೇ ಹೆಚ್ಚು. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಮದ್ಯವ್ಯಸನಿ ವೃದ್ಧನೋರ್ವ ಕುಡಿತ ಬಿಟ್ಟು ಕುರಿ ತಂದು ಸಾಕಾಣಿಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

    ಗ್ರಾಮದ ಚಿಕ್ಕಮುನಿಯಪ್ಪ ಎಂಬವರು ಮದ್ಯವ್ಯಸನಿಂದ ದೂರು ಬಂದು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‍ಡೌನ್ ನಡುವೆ ಎಣ್ಣೆ ಸಿಗದೇ ಪರಿತಪ್ಪಿಸಿದ್ದ ಚಿಕ್ಕಮುನಿಯಪ್ಪ ಕೊನಗೆ ಮದ್ಯಕ್ಕೆ ವಿದಾಯ ಹೇಳಿ ಈಗ ಎರಡು ಕುರಿ ತಂದು ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಸುಮಾರು 6,000 ರೂ.ನಿಂದ ಒಂದು ಕುರಿ ಹಾಗೂ ಕುರಿ ಮರಿ ಖರೀದಿಸಿ ಈಗ ಅವುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಹಲವು ವರ್ಷಗಳಿಂದಲೂ ಮದ್ಯ ವ್ಯಸನಿಯಾಗಿದ್ದ ಚಿಕ್ಕಮನಿಯಪ್ಪ ಕೂಲಿ ನಾಲಿ ಮಾಡಿ ಬಂದ ಹಣವನ್ನೆಲ್ಲಾ ಮದ್ಯ ಖರೀದಿಗೆ ಬಳಸುತ್ತಿದ್ದರು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಮದ್ಯವೂ ಸಿಗದೆ ಪರಿತಪಿಸಿದ್ದ ಚಿಕ್ಕಮುನಿಯಪ್ಪರಿಗೆ ಮೊದ ಮೊದಲು ಕೈ ಕಾಲು ನಡುಗುವುದು, ಅದರುವುದು ಆಗಿದೆ. ಆದರೆ ಗಟ್ಟಿ ಮನಸ್ಸು ಮಾಡಿದ ಚಿಕ್ಕಮುನಿಯಪ್ಪ ದಿನದಿಂದ ದಿನಕ್ಕೆ ಮದ್ಯದ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಗೆ ಎರಡು ಕುರಿ ಮರಿ ತಂದು ಸಾಕುವ ನಿರ್ಧಾರ ಮಾಡಿ ಕುರಿ ಹಾಗೂ ಮರಿಯೊಂದನ್ನ ಖರೀದಿ ಮಾಡಿ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇನ್ನೂ ಮೂರು ದಿನಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದರೂ, ಎಣ್ಣೆ ಸಿಗುತ್ತೆ ಅಂತ ಗೊತ್ತಿದ್ರೂ ಮದ್ಯದತ್ತ ಮುಖ ಮಾಡದ ಚಿಕ್ಕಮುನಿಯಪ್ಪ, ಕುರಿಗಳ ಸಾಕಾಣಿಕೆ ಜೊತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ವೃದ್ಧನ ಮಾದರಿ ನಿರ್ಧಾರಕ್ಕೆ ಗ್ರಾಮಸ್ಥರು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಕುರಿಗಳನ್ನ ತಂದು ಸಾಕಾಣಿಕೆ ಮಾಡಬೇಕು ಎಂದು ವೃದ್ದ ಚಿಕ್ಕಮುನಿಯಪ್ಪ ಹೇಳುತ್ತಾರೆ.