Tag: Shaving

  • ಜೆಡಿಎಸ್ ಅಭ್ಯರ್ಥಿಗೆ ವೋಟ್ ಮಾಡಿದ್ರೆ ಉಚಿತ ಕಟ್ಟಿಂಗ್ , ಶೇವಿಂಗ್ – ಅಭಿಮಾನಿಯಿಂದ ಆಫರ್

    ಜೆಡಿಎಸ್ ಅಭ್ಯರ್ಥಿಗೆ ವೋಟ್ ಮಾಡಿದ್ರೆ ಉಚಿತ ಕಟ್ಟಿಂಗ್ , ಶೇವಿಂಗ್ – ಅಭಿಮಾನಿಯಿಂದ ಆಫರ್

    ಕೋಲಾರ: ಚುನಾವಣೆ ಸಂದರ್ಭದಲ್ಲಿ ವೋಟ್‍ಗಾಗಿ ನಾಯಕರು ಭರ್ಜರಿ ಗಿಫ್ಟ್ ಅಥವಾ ಹಣ ಕೊಡುವುದನ್ನು ನೋಡಿರುತ್ತೇವೆ. ಆದರೆ ಕೋಲಾರದ ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದರೆ  ಕಟ್ಟಿಂಗ್ , ಶೇವಿಂಗ್ ಫ್ರೀಯಾಗಿ ಮಾಡುವುದಾಗಿ ತಿಳಿಸುವ ಮೂಲಕ ವ್ಯಕ್ತಿಯೋರ್ವ ಭಾರೀ ಸುದ್ದಿಯಲ್ಲಿದ್ದಾರೆ.

    ಹೌದು, ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡರಿಗೆ ವೋಟ್ ಹಾಕಿದರೆ, ಉಚಿತವಾಗಿ ಕಟ್ಟಿಂಗ್ ಮಾಡುವುದಾಗಿ ಕ್ಷೌರ ಅಂಗಡಿ ಮಾಲೀಕರೊಬ್ಬರು ಆಫರ್ ನೀಡಿದ್ದಾನೆ. ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದಲ್ಲಿರುವ ಈ ಕ್ಷೌರ ಅಂಗಡಿಯಲ್ಲಿ ಜೆಡಿಎಸ್ ಹಾಗೂ ಅವರ ಬೆಂಬಲಿಗರಿಗೆ ಉಚಿತ ಕಟಿಂಗ್ ಮಾಡಲಾಗುತ್ತದೆ ಎಂಬ ಅನೌನ್ಸ್‌ಮೆಂಟ್ ಮಾಡುವ ಮೂಲಕ ಒಂದು ರೀತಿ ವಿಚಿತ್ರವಾಗಿ ಕ್ಯಾಂಪೇನ್ ಮಾಡಲಾಗಿದೆ. ಇದನ್ನೂ ಓದಿ: ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವ್ರು ಸತ್ಯವನ್ನೇ ಹೇಳಿದ್ದಾರೆ: ಡಿಕೆಶಿ

    ಮಾಜಿ ಸೈನಿಕರು, ವೃದ್ಧರು, ಜೆಡಿಎಸ್‍ಗೆ ವೋಟ್ ಹಾಕುವವರಿಗೆ ಉಚಿತವಾಗಿ ಕ್ಷೌರ ಕೆಲಸ ಮಾಡುವುದಾಗಿ ಕ್ಷೌರ ಅಂಗಡಿ ಮಾಲೀಕ ತಿಳಿಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಮೇಗೌಡ ಅವರ ಭಾವಚಿತ್ರ ಹಾಕಿದ್ದು, ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆಗಳನ್ನು ಉಲ್ಲೇಖಿಸಿ ಜೆಡಿಎಸ್ ಅಭಿಮಾನ ಮೆರೆದಿದ್ದಾನೆ. ಇನ್ನೂ ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡುವುದು, ಸೇರಿದಂತೆ ತನಗಿರುವ ಪಕ್ಷದ ಅಭಿಮಾನವನ್ನು ತಮ್ಮ ವೃತ್ತಿ ಮೂಲಕ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಬಾಗಲಕೋಟೆ: ಲೋಕಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಬಾಗಲಕೋಟೆಯ ಕ್ಷೌರಿಕರೊಬ್ಬರು ಉಚಿತವಾಗಿ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ನಗರದ ಲಕ್ಕಿ ಹೇರ್ ಕಟಿಂಗ್ ಸೆಲೂನ್ ಮಾಲೀಕ ಸುನೀಲ್ ಶಹಪೂರ್ ಹಾಗೂ ಸಹೋದರರ ತಂಡ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಬ್ರದರ್ಸ್, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ಕಟಿಂಗ್, ಶೇವಿಂಗ್ ಮಾಡುವುದಾಗಿ ತಮ್ಮ ಅಂಗಡಿಯ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.

    ಮೋದಿ ಹಾಗೂ ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುನೀಲ್ ಶಹಪೂರ್ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಅವರ ಈ ಅಭಿಮಾನದ ಕಾರ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಬೆಳಗ್ಗೆಯಿಂದಲೇ ಗ್ರಾಹಕರು ಉಚಿತ ಕ್ಷೌರ ಮಾಡಿಕೊಳ್ಳಲು ಮುಗಿ ಬಿದ್ದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

  • ದರ್ಶನ್ ಹುಟ್ಟುಹಬ್ಬಕ್ಕೆ ತೆಲುಗು ಅಭಿಮಾನಿಯಿಂದ ಉಚಿತ ಹೇರ್ ಕಟಿಂಗ್, ಶೇವಿಂಗ್!

    ದರ್ಶನ್ ಹುಟ್ಟುಹಬ್ಬಕ್ಕೆ ತೆಲುಗು ಅಭಿಮಾನಿಯಿಂದ ಉಚಿತ ಹೇರ್ ಕಟಿಂಗ್, ಶೇವಿಂಗ್!

    ಮಂಡ್ಯ: ಉಚಿತವಾಗಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವಿಭಿನ್ನವಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದಾರೆ.

    ಮೂಲತಃ ಆಂಧ್ರಪ್ರದೇಶದವರಾದ ಓಂಕಾರ್ ಕಳೆದ ಹತ್ತು ವರ್ಷಗಳ ಹಿಂದೆ ಮಂಡ್ಯಕ್ಕೆ ಉದ್ಯೋಗಕ್ಕಾಗಿ ಆಗಮಿಸಿದ್ದರು. ಆರಂಭದಲ್ಲಿ ಬೇರೆಯವರ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಓಂಕಾರ್ ಇದೀಗ ಮಂಡ್ಯದ ಬನ್ನೂರು ರಸ್ತೆಯಲ್ಲಿ ಓಂಕಾರ್ ಮೆನ್ಸ್ ಪಾರ್ಲರ್ ತೆರೆದಿದ್ದಾರೆ.

    ಆರಂಭದಿಂದಲೂ ದರ್ಶನ್ ಸಿನಿಮಾಗಳನ್ನು ರಿಲೀಸ್ ಆದ ದಿನವೇ ನೋಡುವ ಓಂಕಾರ್ ಮನೆ ಭಾಷೆ ತೆಲುಗು ಆಗಿದ್ದರೂ, ಕನ್ನಡದ ದರ್ಶನ್ ಎಂದರೆ ಅಚ್ಚುಮೆಚ್ಚು. ಇಂದಿಗೂ ಓಂಕಾರ್ ತಂದೆ-ತಾಯಿ ಸೇರಿದಂತೆ ಕುಟುಂಬದವರೆಲ್ಲ ಆಂಧ್ರದಲ್ಲಿ ನೆಲೆಸಿದ್ದಾರೆ.

    ಕನ್ನಡದವರೇ ತೆಲುಗು ಸಿನಿಮಾಗಳನ್ನು ಮುಗಿಬಿದ್ದು ನೋಡುವಾಗ ಓಂಕಾರ್ ಮಾತ್ರ ದರ್ಶನ್ ಸಿನಿಮಾವನ್ನು ಎಷ್ಟೇ ಕಷ್ಟ ಆದ್ದರೂ ಬಿಡದೇ ಮೊದಲ ದಿನವೇ ನೋಡುತ್ತಾರೆ. ತನ್ನ ಅಭಿಮಾನದ ಸಂಕೇತವಾಗಿ ಸಲೂನ್‍ ಮುಂದೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಟಿಂಗ್, ಶೇವಿಂಗ್ ಮಾಡಿ ಅಭಿಮಾನ ಮೆರೆದಿದ್ದಾನೆ.

    ದರ್ಶನ್ ಭೇಟಿ ಮಾಡಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಒಂದು ಬಾರಿಯಾದರೂ ನಟನನ್ನು ನೋಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರಥಿಗೆ 41ನೇ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಸಂಭ್ರಮ