Tag: shavige

  • ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಆದೇಶ

    ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಆದೇಶ

    ಬೆಳಗಾವಿ: ಸುವರ್ಣಸೌಧ ಮುಂಭಾಗದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಲು ನಿರ್ದೇಶನ ನೀಡಲಾಗಿದೆ ಎಂದು ನಗರದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾವಿಗೆ ಒಣಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಒದಗಿಸಿಕೊಂಡಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು. ಗುತ್ತಿಗೆದಾರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಲ್ಲಮ್ಮ ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದರು. ಆದರೆ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರಲಿಲ್ಲ, ಬೇರೆ ಸ್ಥಳಕ್ಕೆ ಕೆಲಸ ಮಾಡಲು ನಿಯೋಜಿಸಲಾಗಿತ್ತಷ್ಟೇ ಎಂದರು.

    ಇದಲ್ಲದೇ ನಾನು ಕೂಡ ಸುವರ್ಣಸೌಧಕ್ಕೆ ಭೇಟಿ ನೀಡಿ ಸಂಬಳ ಕಟ್ ಮಾಡಬಾರದು. ಯಾರನ್ನು ಕೆಲಸದಿಂದ ತೆಗೆದುಹಾಕಬಾರದು ಅಂತಾ ಹೇಳಿದ್ದೆ. ಇನ್ನೂ ಬೇರೆ ಸ್ಥಳಕ್ಕೆ ಕೆಲಸ ಮಾಡಲು ಮಲ್ಲಮ್ಮಗೆ ತಿಳಿಸಲಾಗಿತ್ತು. ಆದರೆ ಬೇರೆ ಸ್ಥಳದಲ್ಲಿ ಕೆಲಸ ಮಾಡೋದಕ್ಕೆ ಮಹಿಳೆಗೆ ದೂರ ಆಗುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಅಂತಾ ಕೆಲ ಮಾಧ್ಯಮದವರು ಗಮನಕ್ಕೆ ತಂದರು. ಹೀಗಾಗಿ ತಕ್ಷಣದಿಂದಲೇ ಸುವರ್ಣ ಸೌಧದಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ. ಇಂದು ಅಥವಾ ನಾಳೆ ಕೆಲಸಕ್ಕೆ ಹಾಜರಾಗಬಹುದು. ಅವರಿಗೆ ಯಾವುದೇ ಸಂಬಳ ಕಟ್ ಮಾಡುವುದಿಲ್ಲ ಎಂದರು.

    ಮನೆ ನಿರ್ಮಾಣ ವಿಚಾರವಾಗಿ ಮಾತನಾಡಿ, ಮೂಲತಃ ಖಾನಾಪೂರದ ತಾಲೂಕಿನ ಮಲ್ಲಮ್ಮಳಿಗೆ ಪತಿ ಮರಣ ಹೊಂದಿದ್ದಾರೆ. ಹೀಗಾಗಿ ಸದ್ಯ ತಮ್ಮ ಸಂಬಂಧಿಕರ ಮನೆಯಾಗಿರುವ ಕೊಂಡಸಕೊಪ್ಪ ಗ್ರಾಮದಲ್ಲಿ ಇದ್ದಾರೆ. ಮಲ್ಲಮ್ಮಗೆ ಮನೆ ಕೊಡೊದಕ್ಕೆ ಬೇಡಿಕೆ ಬಂದಿದೆ. ಈ ಬಗ್ಗೆ ಜಿಪಂ ಸಿಇಓ ಜೊತೆಗೆ ಚರ್ಚೆ ಮಾಡಿದ್ದೇನೆ. ಬಸ್ತವಾಡ ಗ್ರಾಮದಲ್ಲಿ ಜಾಗ ಇದೆ. ಅವರು ಒಪ್ಪಿದರೆ ಜಾಗ ಕೊಡುತ್ತೇವೆ. ಬಸವ ವಸತಿ ಇಲ್ಲವೇ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಕೊಡುತ್ತೇವೆ ಎಂದರು.

  • ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಬೆಳಗಾವಿ: ಸುವರ್ಣಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ‘ಶಾವಿಗೆ’ ಒಣಗಿಸಿದ್ದ ಪ್ರಕರಣದ ವಿಚಾರವಾಗಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

    ಸುವರ್ಣಸೌಧದ ಸ್ವಚ್ಛತಾ ಕಾರ್ಯ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಗುತ್ತಿಗೆದಾರರು ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ, ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಮಹಿಳೆಯು ದಿನಗೂಲಿ ಆಧಾರದ ಮೇಲೆ ಸುವರ್ಣಸೌಧದ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಸುವರ್ಣ ಸೌಧ ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

  • ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿ: ಕುಂದಾನಗರಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ಫೋಟೋ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ, ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನವ್ಯಕ್ತವಾಗಿದೆ.

    ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತಾ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು

    ಈ ಕುರಿತಂತೆ ಬೆಳಗಾವಿಯ ನಾಗರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತಗಳ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೀಗ ಈ ಫೋಟೊಗಳು ಸಾಕಷ್ಟು ವೈರಲ್ ಆಗಿವೆ. ಇನ್ನೂ ಇದರ ನಿರ್ವಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ಸುವರ್ಣ ಸೌಧದ ಕಡೆಗೆ ತಿರುಗಿ ನೋಡಿಲ್ಲ. ಇನ್ನು ಈ ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕೈಗಾರಿಕಾ ಭದ್ರತಾ ಪೊಲೀಸ್ ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆ ಈ ಅವಾಂತರಕ್ಕೆ ಕಾರಣವಾಗಿದೆ. ಒಟ್ಟಾರೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸುವರ್ಣ ಸೌಧದ ಮುಂದೆ ಶಾವಿಗೆ ಹಾಕಿರೋದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

  • ಹೀಗೆ ಮಾಡಿದ್ರೆ ಶ್ಯಾವಿಗೆ ಇಡ್ಲಿ ಸೂಪರ್

    ಹೀಗೆ ಮಾಡಿದ್ರೆ ಶ್ಯಾವಿಗೆ ಇಡ್ಲಿ ಸೂಪರ್

    ಸಾಮಾನ್ಯವಾಗಿ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಶ್ಯಾವಿಗೆ ಇಡ್ಲಿ ಸಹ ಟ್ರೈ ಮಾಡಬಹುದು. ಇದು ಕೇಳಲು ವಿಚಿತ್ರವಾಗಿದ್ದರೂ, ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಶ್ಯಾವಿಗೆ- 2 ಕಪ್
    * ತುರಿದ ಕ್ಯಾರೆಟ್- 1 ಕಪ್
    * ಅವಲಕ್ಕಿ- ಅರ್ಧ ಕಪ್
    * ತೆಂಗಿನಕಾಯಿ ತುರಿ- ಅರ್ಧ ಕಪ್
    * ಮೊಸರು ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಹಸಿ ಮೆಣಸು- 3 ರಿಂದ 4
    * ಹಸಿ ಬಟಾಣಿ- ಸ್ವಲ್ಪ

    ಮಾಡುವ ವಿಧಾನ:

    * ಒಂದು ಬಾಣಲೆಗೆ ಶ್ಯಾವಿಗೆ ಹಾಕಿ, ಅದನ್ನ ಸ್ವಲ್ಪ ಹುರಿದುಕೊಂಡು ನಂತರ ಅದನ್ನ ಆರಿಸಿ ನೀರು ಹಾಕಿ ನೆನೆಸಿಡಿ. ಎರಡು ಗಂಟೆಯಾದರೂ ಅಕ್ಕಿ ನೆನಸಿದ ಬಳಿಕ, 1 ಕಪ್‍ನಷ್ಟು ಕ್ಯಾರೆಟ್ ಸಿಪ್ಪೆ ತೆಗೆದುಕೊಂಡು ತುರಿದುಕೊಂಡು ಹಾಕಿಕೊಳ್ಳಬೇಕು.

    * ಮಿಕ್ಸಿ ಜಾರಿನಲ್ಲಿ ಒಂದು ಹಿಡಿ ಹಸಿ ಬಟಾಣಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಮೆಣಸಿನ ಕಾಯಿ, ಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ. ರುಬ್ಬುವಾಗ ಹಿಟ್ಟು ಇಡ್ಲಿಯ ಹದಕ್ಕೆ ಇದ್ದರೆ ಉತ್ತಮ.

    * ತಯಾರಿಸಿಕೊಂಡ ಮಿಶ್ರಣಕ್ಕೆ ಶ್ಯಾವಿಗೆ, ಕ್ಯಾರೆಟ್ ಹಾಕಿ ಮತ್ತು ಗಟ್ಟಿ ಮೊಸರು ಕಪ್ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ.


    * ನಂತರ ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಶ್ಯಾವಿಗೆ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.