Tag: Shave

  • ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ವಿಕೃತ ಕಾನೂನುಗಳ ಮೂಲಕ ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳ ನೀಡುತ್ತಿರುವ ವಿಷಯ ಹೊಸತೇನು ಅಲ್ಲ. ಇದೀಗ ಕೇಶ ವಿನ್ಯಾಸಕ್ಕೂ ನಿಷೇಧ ಹೇರಿರುವುದು ಸುದ್ದಿಯಾಗುತ್ತಿದೆ.

    ಪುರುಷರ ಕೇಶ ವಿನ್ಯಾಸ ಮೇಲೂ ನಿಷೇಧ ಹೇರಿರುವುದಾಗಿ ಘೋಷಿಸಿದೆ. ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಪುರುಷರು ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್ ಮಾಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ:  ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು, ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್‍ನಲ್ಲಿರುವ ಪುರುಷರ ಸಲೂನ್‍ಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಸ್ಟೈಲಿಷ್ ಕೇಶ ವಿನ್ಯಾಸ, ಸಂಪೂರ್ಣ ದಾಡಿ ತೆಗೆಯುವುದು ಹಾಗೂ ಟ್ರಿಮ್ ಮಾಡಬಾರದು ಎಂದು ಸೂಚಿಸಿದೆ. ಇದನ್ನೂ ಓದಿ:  ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಕ್ಷೌರದ ಅಂಗಡಿಗಳಲ್ಲಿ ಜನಪ್ರಿಯ ಸಂಗೀತ ಇಲ್ಲವೇ ಶ್ಲೋಕಗಳನ್ನು ಬಳಸಬಾರದು ಎಂದು ಸಹ ತಾಲಿಬಾನ್ ಆದೇಶಿಸಿದೆ. ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ ಅನುಸರಿಸುತ್ತಿರುವ ದಮನಕಾರಿ ಕಾನೂನು ನೋಡಿದರೆ ಮತ್ತೆ ಹಳೆಯ ನೀತಿಗಳಿಗೆ ಮರಳುತ್ತಿವೆ. ನಾವು ಬದಲಾಗಿದ್ದೇವೆ ಎಂದು ಹೇಳುತ್ತಲೇ ತಮ್ಮ ಹಳೆಯ ಧೋರಣೆಯನ್ನು ಪಾಲಿಸುತ್ತಾ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರಿಸಿದೆ. ಈ ಗುಂಪು ಇತ್ತೀಚೆಗೆ ಪಶ್ಚಿಮ ಹೆರಾತ್ ನಗರದಲ್ಲಿ ಅಪಹರಿಸಲು ಯತ್ನಿಸಿದ ನಾಲ್ವರ ಹತ್ಯೆ ನಡೆಸಿ ಅವರ ಮೃತ ದೇಹಗಳನ್ನು ಬಹಿರಂಗ ಸ್ಥಳದಲ್ಲಿ ಪ್ರದರ್ಶಿಸಿತ್ತು.

  • ಬಲವಂತವಾಗಿ ಮುಸ್ಲಿಂ ಯುವಕನ ಗಡ್ಡ ತೆಗೆಸಿದ ದುಷ್ಕರ್ಮಿಗಳು!

    ಬಲವಂತವಾಗಿ ಮುಸ್ಲಿಂ ಯುವಕನ ಗಡ್ಡ ತೆಗೆಸಿದ ದುಷ್ಕರ್ಮಿಗಳು!

    ಚಂಡೀಗಢ: ಮುಸ್ಲಿಂ ಯುವಕೊಬ್ಬನನ್ನು ಗಡ್ಡ ತೆಗೆಸಬೇಕೆಂದು ಒತ್ತಾಯಿಸಿ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿ, ಬಲವಂತವಾಗಿ ಕ್ಷೌರ ಮಾಡಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಮೇವಾಟ್ ಜಿಲ್ಲೆಯ ಬದ್ಲಿ ನಿವಾಸಿ ಜಾಫರ್ ಉದ್ದಿನ್ ಹಲ್ಲೆಗೆ ಒಳಗಾದ ಮುಸ್ಲಿಂ ಯುವಕ. ಜಾಫರ್ ಉದ್ದಿನ್‍ನನ್ನು ಕ್ಷೌರದ ಅಂಗಡಿಗೆ ಬಲವಂತವಾಗಿ ಎತ್ತಿಕೊಂಡು ಬಂದಿದ್ದಾರೆ. ಗಡ್ಡ ತೆಗೆಯಲು ನಿರಾಕರಿಸಿದ ಕ್ಷೌರಿಕನ ಮೇಲೂ ದುಷ್ಕಮಿಗಳು ಹಲ್ಲೆ ಮಾಡಿದ್ದಾರೆ.

    ಧರ್ಮ ಸೂಚಕವಾಗಿ ಗಡ್ಡ ಬಿಟ್ಟಿರುವೆ ಎಂದು ಹೇಳಿ ಥಳಿಸಿದ ದುಷ್ಕರ್ಮಿಗಳು, ಕ್ಷೌರದ ಅಂಗಡಿಗೆ ಬಲವಂತವಾಗಿ ನನ್ನನ್ನು ಎಳೆದುಕೊಂಡು ಹೋಗಿದ್ದರು. ಕ್ಷೌರಿಕ ಗಡ್ಡ ತೆಗೆಯಲು ಹಿಂದೇಟು ಹಾಕಿದ್ದಕ್ಕೆ, ಆತನ ಮೇಲೂ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ನೀನು ಪಾಕಿಸ್ತಾನಿ ವ್ಯಕ್ತಿ, ಹೀಗಾಗಿ ಗಡ್ಡ ತೆಗೆಯಲು ಹಿಂದೇಟು ಹಾಕುತ್ತಿರುವೆ ಎಂದು ಥಳಿಸಿದ್ದರು. ಬಲವಂತವಾಗಿ ಕುರ್ಚಿಯ ಮೇಲೆ ಕೂರಿಸಿ, ಕ್ಷೌರಿಕನಿಗೆ ಗಡ್ಡ ಬೊಳಿಸುವಂತೆ ಒತ್ತಾಯಿಸಿದ್ದರು ಎಂದು ಜಾಫರ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಕುರಿತು ಜಾಫರ್ ಉದ್ದಿನ್ ಗುರುಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.