Tag: Shaukat Ali

  • ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ಲಕ್ನೋ: ಉತ್ತರಪ್ರದೇಶದ (UttarPradesh) ಸಂಭಾಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹಿಂದೂಗಳ (Hindu Community) ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ (AIMIM) ಅಧ್ಯಕ್ಷ ಶೌಕತ್ ಅಲಿ (Shaukat Ali) ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಶೌಕತ್ ಅಲಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295-A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಶೌಕತ್ ಅಲಿ ಹೇಳಿದ್ದೇನು?: ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶೌಕತ್ ಅಲಿ (Shaukat Ali), 832 ವರ್ಷಗಳ ಕಾಲ ಮುಸ್ಲಿಮರು (Muslims) ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ `ಜಿ, ಹುಜೂರ್’ ಎಂದು ತಲೆಬಾಗುತ್ತಿದ್ದರು. ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ (Marriage). ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನ ಇಟ್ಟುಕೊಳ್ಳುತ್ತಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!

    ಮುಂದುವರಿದು ಮಾತನಾಡಿದ ಅಲಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದು ಹಿಂದೂಗಳು ಆರೋಪಿಸುತ್ತಾರೆ. ನಾವು ಎರಡು ಬಾರಿ ಮದುವೆಯಾಗುತ್ತೇವೆ ನಿಜ. ಆದರೆ ಇಬ್ಬರು ಹೆಂಡತಿಯರಿಗೂ ಗೌರವ ನೀಡುತ್ತೇವೆ. ಆದರೆ ನೀವು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುವುದು ಯಾರಿಗೂ ತಿಳಿದಿಲ್ಲ. ಅವರಲ್ಲಿ ಯಾರಿಗೂ ನೀವು ಗೌರವ ಕೊಡುವುದಿಲ್ಲ ಎಂದು ಕಿಡಿಕಾರಿದರು. ಮುಂದೆ ಬಿಜೆಪಿ ದುರ್ಬಲವಾದಾಗ ಹಿಂದೂಗಳು ಮುಸ್ಲಿಮರ ಹಿಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ಮೂರು ಮದುವೆ ಮಾಡಿಕೊಂಡ್ರೂ ಪತ್ನಿಯನ್ನು ಗೌರವಿಸುತ್ತೇವೆ, ಆದ್ರೆ ಹಿಂದೂಗಳು…: AIMIM ಮುಖಂಡ

    ನಾವು ಮೂರು ಮದುವೆ ಮಾಡಿಕೊಂಡ್ರೂ ಪತ್ನಿಯನ್ನು ಗೌರವಿಸುತ್ತೇವೆ, ಆದ್ರೆ ಹಿಂದೂಗಳು…: AIMIM ಮುಖಂಡ

    ಲಕ್ನೋ: ನಾವು ಎರಡರಿಂದ ಮೂರು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಮೂವರು ಪತ್ನಿಯಂದಿರಿಗೂ (Wives) ಗೌರವ ನೀಡುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿರುತ್ತಾರೆ ಎಂದು ಉತ್ತರಪ್ರದೇಶದ ಎಐಎಂಐಎಂ (AIMIM) ರಾಜ್ಯಾಧ್ಯಕ್ಷ ಶೌಕತ್ ಅಲಿ (Shaukat Ali) ವಿವಾದಾತ್ಮಕ ಹೇಳಿಕೆ ನೀಡಿದರು.

    ಸಭೆಯಲ್ಲಿ ಮಾತನಾಡಿದ ಅವರು, ನಾವು ಎರಡು ಮದುವೆಗಳನ್ನು (Marriage) ಮಾಡಿಕೊಂಡಿದ್ದರೆ, ಅವರನ್ನು ನಾವು ಪರಸ್ಪರ ಅರ್ಥ ಮಾಡಿಕೊಂಡು, ಗೌರವದಿಂದ ಇಡುತ್ತೇವೆ. ಜೊತೆಗೆ ನಮ್ಮ ಮಕ್ಕಳ ಹೆಸರು ಪಡಿತರ ಚೀಟಿಯಲ್ಲಿರುತ್ತದೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯನ್ನು ಹೊಂದಿರುತ್ತಾರೆ. ಪತ್ನಿಯನ್ನು ಅಥವಾ ಪ್ರೇಯಸಿಯನ್ನು ಅವರು ಗೌರವಿಸುವುದಿಲ್ಲ ಎಂದು ತಿಳಿಸಿದರು.

    ಹಿಜಬ್‍ನ (Hijab) ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ. ಬದಲಿಗೆ ಸಂವಿಧಾನ ನಿರ್ಧರಿಸುತ್ತದೆ. ಬಿಜೆಪಿ (BJP) ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವ ಕೆಲಸ ಮಾಡುತ್ತದೆ. ಮದರಸಾ, ಲಿಂಚಿಂಗ್, ವಕ್ಫ್ ಮತ್ತು ಹಿಜಾಬ್‍ನಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಬಿಜೆಪಿ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಏಕೆಂದರೆ ಬಿಜೆಪಿ ದುರ್ಬಲವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ಆಕ್ಷೇಪ – ಕರ್ನಾಟಕದ ಹೆಸರು ಕಿತ್ತು ಹಾಕುವ ಎಚ್ಚರಿಕೆ

    ಶಾಲೆ-ಕಾಲೇಜುಗಳ ತರಗತಿ ಒಳಗಡೆ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆ. 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‍ನಿಂದ ಭಿನ್ನ ತೀರ್ಪು ಪ್ರಕಟವಾಗಿದ್ದು ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ

    Live Tv
    [brid partner=56869869 player=32851 video=960834 autoplay=true]