Tag: Shashidhar

  • ‘ಪಬ್ಲಿಕ್‌ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್‌ ನಿಧನ

    ‘ಪಬ್ಲಿಕ್‌ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್‌ ನಿಧನ

    ಶಿವಮೊಗ್ಗ: ‘ಪಬ್ಲಿಕ್ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಧರ್ ಇಂದು (ಶನಿವಾರ) ಸಂಜೆ ಅಕಾಲಿಕ ನಿಧನ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ಕಳೆದ 6 ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಶಶಿಧರ್ ಮೂಲತಃ ಅರಸೀಕೆರೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದ್ದು, 40 ವರ್ಷ ವಯಸ್ಸಾಗಿತ್ತು.

    ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಪಬ್ಲಿಕ್ ಟಿವಿ ಬಳಗ ಶಶಿಧರ್ ನಿಧನಕ್ಕೆ ಸಂತಾಪ ಸೂಚಿಸಿದೆ.

    ಶಶಿಧರ್‌ ಅವರು ಶಿವಮೊಗ್ಗದ ಆಕ್ಟಿವ್ ಜರ್ನಲಿಸ್ಟ್ ಎಂದೇ ಬಿಂಬಿತರಾಗಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರಿಗೆ ಸನಿಹವಿರುವ ಕಲ್ಲಳ್ಳಿ ಗ್ರಾಮದವರು. ತಂದೆ ಹೊಸಂತಪ್ಪ ಹಾಗೂ ತಾಯಿ ಸಾವಿತ್ರಮ್ಮನ ಹಿರಿಯ ಪುತ್ರನಾಗಿ ಜನಿಸಿದ ಇವರು ಸ್ವಗ್ರಾಮದಲ್ಲಿ ಪ್ರಾಥಮಿಕ, ನಂತರ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು.

    ಪತ್ರಿಕೋದ್ಯಮಕ್ಕೆ ಬರುವ ಆಶಯದೊಂದಿಗೆ ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂಗೆ ಸೇರ್ಪಡೆಗೊಂಡರು. ಸ್ನಾತಕೋತ್ತರ ಪದವಿಯ ನಂತರ ಈಟಿವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ಚಾಮರಾಜನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ‘ಪಬ್ಲಿಕ್ ಟಿವಿ’ಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದರು.

    ಶಶಿಧರ್ ಅವರ ಅಕಾಲಿಕ ಮರಣ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಳೆ ಹುಟ್ಟೂರಿನಲ್ಲಿ ಶಶಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಶಶಿ ಅವರ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಕಂಬನಿ ಮಿಡಿದಿದೆ.

  • ‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್

    ‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್

    ಗಾಗಲೇ ನಾನಾ ರೀತಿಯ ಪಾತ್ರಗಳನ್ನು ಮಾಡಿರುವ ಪ್ರಜ್ವಲ್ ದೇವರಾಜ್, ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ನಟಿಸಿದ್ದಾರೆ. ವೀರಂ ಚಿತ್ರದಲ್ಲಿ ಅವರದ್ದು ವಿಷ್ಣುವರ್ಧನ್ ಅಭಿಮಾನಿ ಪಾತ್ರವಾಗಿದ್ದು, ಈ ಸಿನಿಮಾವನ್ನು ನೋಡಲು ವಿಷ್ಣು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ.

    ನಿರ್ಮಾಪಕ ಕೆ.ಎಂ. ಶಶಿಧರ್ (Shashidhar) ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂರನೇ ಪ್ರಾಜೆಕ್ಟ್ ಆಗಿ ಎಮೋಷನಲ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ‘ವೀರಂ’ (Veeram) ಚಿತ್ರವನ್ನು  ನಿರ್ಮಿಸಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಚಿತ್ರದ ನಂತರ ಈಗ ಆಕ್ಷನ್ ಥ್ರಿಲ್ಲರ್  ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ.

    ಪ್ರಜ್ವಲ್ ದೇವರಾಜ್, ರಚಿತಾರಾಮ್  ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.  ಖದರ್ ಕುಮಾರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಏಪ್ರಿಲ್ 7ಕ್ಕೆ ರಾಜ್ಯಾದ್ಯಂತ  ತೆರೆಕಾಣುತ್ತಿದೆ.   ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಖದರ್‌ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ  ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಹಿರಿಯನಟಿ ಶೃತಿ (Shruti), ಅಕ್ಕ ತಮ್ಮನಾಗಿ ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ.

    ಎಮೋಷನಲ್ ಥ್ರಿಲ್ಲರ್ ಡ್ರಾಮಾ  ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಮೂವೀ ಇದಾಗಿದ್ದು,  ಸೆಕೆಂಡ್ ಹಾಫ್‌ನಲ್ಲಿ  ಥ್ರಿಲ್ಲರ್ ಅಂಶವಿದೆ. ಜೊತೆಗೆ  ಶಿಷ್ಯ ದೀಪಕ್‌ (Shishya Deepak) ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಲಾಗಿದೆ. ಹಾಗಾಗಿ ಈ ಸಿನಿಮಾವನ್ನು ವಿಷ್ಣು   ಅವರಿಗೇ ಅರ್ಪಣೆ ಮಾಡಿದ್ದಾರೆ ಚಿತ್ರತಂಡ.

  • ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

    ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

    ನಿರ್ಮಾಪಕ ಕೆ.ಎಂ. ಶಶಿಧರ್ (Shashidhar) ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂರನೇ ಪ್ರಾಜೆಕ್ಟ್ ಆಗಿ ಎಮೋಷನಲ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ‘ವೀರಂ’ (Veeram) ಚಿತ್ರವನ್ನು  ನಿರ್ಮಿಸಿದ್ದಾರೆ, ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಚಿತ್ರದ ನಂತರ ಈಗ ಆಕ್ಷನ್ ಥ್ರಿಲ್ಲರ್  ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ.  ಪ್ರಜ್ವಲ್ ದೇವರಾಜ್, ರಚಿತಾರಾಮ್  ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಪ್ರಸನ್ನ ಥಿಯೇಟರ್‌ನಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ನಡುವೆ ನೆರವೇರಿತು.  ಖದರ್ ಕುಮಾರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಏಪ್ರಿಲ್ 7ಕ್ಕೆ ರಾಜ್ಯಾದ್ಯಂತ  ತೆರೆಕಾಣುತ್ತಿದೆ.  ಹಿರಿಯನಟ ದೇವರಾಜ್ ಅವರು ಚಿತ್ರದ ಟ್ರೈಲರ್ (Trailer) ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಖದರ್‌ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ  ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಹಿರಿಯನಟಿ ಶೃತಿ (Shruti), ಅಕ್ಕ ತಮ್ಮನಾಗಿ ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ.

    ಟ್ರೈಲರ್ ನೋಡಿದ ನಂತರ ಮಾತನಾಡಿದ ದೇವರಾಜ್, ಟ್ರೈಲರ್‌ನಲ್ಲಿ ವೀರಾವೇಶ ಕಾಣಿಸ್ತಿದೆ. ಶೃತಿ ಅವರಿದ್ದ ಮೇಲೆ ಎಮೋಷನ್ ಸೀನ್‌ಗಳು ಇದ್ದೇ ಇರುತ್ತದೆ, ಪ್ರಜ್ವಲ್, ಕಿಟ್ಟಿ ಹೀಗೆ ಎಲ್ಲ ಯಂಗ್ ಸ್ಟರ್ಸ್  ಸೇರಿ ಈ ಚಿತ್ರ ಮಾಡಿದ್ದಾರೆ.  ಥೇಟರ್‌ನಲ್ಲಿ ಟ್ರೈಲರ್ ನೋಡಿದ್ದು ನನಗೆ ಮೊದಲ ಅನುಭವ, ಜನರ ಕೂಗಾಟ, ಚಪ್ಪಾಳೆ ಕೇಳಿ ತುಂಬಾ ಖುಷಿಯಾಯ್ತು ಎಂದು ಹೇಳಿದರು. ನಟ ಶೃತಿ ಮಾತನಾಡಿ ಇವರೆಲ್ಲ ಸಿನಿಮಾನ ಪ್ರೀತಿಸುವಂಥ ಜನ, ಚಪ್ಪಾಳೆ ಶಿಳ್ಳೆ ಇದನ್ನೆಲ್ಲ ಬಹಳ ದಿನಗಳ ನಂತರ ನೋಡಿ ಖುಷಿಯಾಯ್ತು. ಸಿನಿಮಾದಲ್ಲಿರುವ ಹೋರಾಟ, ಸಾಹಸ ಜನರಿಗೆ ತಲುಪಬೇಕು, ಈ ಸಿನಿಮಾ ನನಗೆ ತುಂಬಾ ವಿಶೇಷ, ಏಕೆಂದರೆ ನಾನು ವಿಷ್ಣು ಸರ್ ಅಭಿಮಾನಿಯಾಗಿಯೇ ಬಂದವಳು, ಇದರಲ್ಲೂ ಅದೇಥರದ ಪಾತ್ರವಿದೆ, ಫಸ್ಟ್ ಟೈಮ್ ಪ್ರಜ್ವಲ್ ಅವರ ಅಭಿನಯ ನೋಡಿ ಕಣ್ಣಲ್ಲಿ ನೀರುಬಂತು, ಸಾಮಾನ್ಯವಾಗಿ ನಾನು ಡಬ್ಬಿಂಗ್ ಮಾಡುವಾಗ, ನನ್ನ ಪಾತ್ರನೋಡಿ ನಾನೇ ನಗುತ್ತೇನೆ. ಈಗ ಎಲ್ಲಾಕಡೆ ಪ್ಯಾನ್ ಇಂಡಿಯಾ ಬಂದಿದೆ, ಆದರೆ ಫ್ಯಾನ್ಸ್ ಇಂಡಿಯಾ ಸಿನಿಮಾ ಇರುವುದು ಕರ್ನಾಟಕದಲ್ಲಿ ಮಾತ್ರ. ಅವರ ಶಿಳ್ಳೆ, ಕೇಕೆಯೇ ಕಲಾವಿದರಿಗೆ ಖುಷಿ ಎಂದರು.

    ಶ್ರೀನಗರಕಿಟ್ಟಿ ಮಾತನಾಡಿ ವಿಷ್ಣು ದಾದಾ ಅವರ ಸವಿನೆನಪಿನಲ್ಲಿ ಈ ಚಿತ್ರ ರಿಲೀಸಾಗುತ್ತಿದೆ. ಒಂದು ಸಿನಿಮಾನ ತೆರೆಯಮೇಲೆ ತಂದು ನಿಲ್ಲಿಸುವುದರ ಕಷ್ಟ ಆ ನಿರ್ಮಾಪಕನಿಗಷ್ಟೇ ಗೊತ್ತು ಎಂದರು. ನಿರ್ಮಾಪಕ ಶಶಿಧರ್ ಮಾತನಾಡಿ, ಈ ಸಿನಿಮಾ ನಿಂತೋಯ್ತು, ಆಗೋದೇ ಇಲ್ಲ ಎಂದು ಕೆಲವರು ಹೇಳಿದ್ದರು, ಅವರಿಗೆಲ್ಲ ಈ ಸಿನಿಮಾ ತೋರಿಸುತ್ತೇನೆ. ಎಮೋಷನಲ್ ಥ್ರಿಲ್ಲರ್ ಡ್ರಾಮಾ  ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಮೂವೀ ಇದಾಗಿದ್ದು,  ಸೆಕೆಂಡ್ ಹಾಫ್‌ನಲ್ಲಿ  ಥ್ರಿಲ್ಲರ್ ಕಥೆಯಿದೆ.  ಶಿಷ್ಯ ದೀಪಕ್‌ (Shishya Deepak) ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಿದ್ದೇವೆ, ವಿಷ್ಣು  ಫ್ಯಾನ್ಸ್ಗೆ ಚಿತ್ರ ತುಂಬಾನೇ ಇಷ್ಟವಾಗುತ್ತದೆ, ಚಿತ್ರವನ್ನು ವಿಷ್ಣು ಅವರಿಗೇ ಅರ್ಪಣೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ನಿರ್ದೇಶಕ ಖದರ್‌ಕುಮಾರ್ ಮಾತನಾಡಿ ನಾನು ಚಿಕ್ಕವನಿದ್ದಾಗ ವಿಷ್ಣು ಅವರ ದಾದಾ ಚಿತ್ರವನ್ನು 2.75 ರೂಪಾಯಿ ಕೊಟ್ಟು ಇಲ್ಲೇ ನೋಡಿದ್ದೆ. ಈಗ ಇದೇ ಚಿತ್ರಮಂದಿರದಲ್ಲಿ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವೇ ಇದೆ ಎಂದು ಹೇಳಿದರು.

    ನಾಯಕ ಪ್ರಜ್ವಲ್ ಮಾತನಾಡಿ ನಾನು ಹೋದ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೆ ಅಂತ ಕಾಣಿಸುತ್ತೆ, ಇಂಥ ತಂದೆ ತಾಯಿ ಪಡೆದ ನಾನೇ ಧನ್ಯ, ಆರಂಭದಲ್ಲಿ ನಿರ್ಮಾಪಕ, ನಿರ್ದೇಶಕರು ನನ್ನ ಬಳಿ ಬಂದಾಗ ಅವರ ಕಣ್ನಲ್ಲಿ ಒಂದು ಕನಸಿತ್ತು. ಕಿಟ್ಟಣ್ಣ ಕೂಡ ನನ್ನ ಜೊತೆ ಅಂದಕೂಡಲೇ ಕಥೆಕೇಳದೆ ಒಪ್ಪಿಕೊಂಡರು. ದಾದಾ ಅವರ ಅಚ್ಚೆ ಕೈಮೇಲೆ ಹಾಕಿಕೊಂಡು ಆಕ್ಟ್ ಮಾಡಲು ತುಂಬಾ ಖುಷಿಯಾಗಿತ್ತು. ನನ್ನ ದೊಡ್ಡ ಪವರ್ ಅಂದ್ರೆ ನನ್ನ ಅಭಿಮಾನಿಗಳು, ಮತ್ತೊಂದುಕಡೆ ನನ್ನ ಕುಟುಂಬ ಎಂದು ಹೇಳಿದರು.

    ಖಳನಟನಾಗಿ ಕಾಣಿಸಿಕೊಂಡಿರುವ ಶಿಷ್ಯ ದೀಪಕ್ ಮಾತನಾಡುತ್ತಾ ಈ ಪಾತ್ರವನ್ನು ನಾನು ಅನುಭವಿಸಿ ಮಾಡಿದ್ದೇನೆ. ನಿರ್ಮಾಪಕರು ನನ್ನ ಬಗ್ಗೆ ಬಹಳಷ್ಟು ಜನ ನೆಗೆಟಿವ್ ಮಾತಾಡಿದರೂ ಅದನ್ನು ಲೆಕ್ಕಿಸದೆ ನನಗೆ ಸಪೋರ್ಟ್ ಮಾಡಿದರು. ಶಿಶ್ಯ ದೀಪಕ್‌ನನ್ನು ಜೇಡ ದೀಪಕ್ ಮಾಡಿದ್ದಾರೆ ಎಂದು ಗಗ್ಗದಿತರಾದರು, ಅನೂಪ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿದೆ.

  • ‘ತರ್ಲೆ ವಿಲೇಜ್’ ಖ್ಯಾತಿಯ ನಿರ್ದೇಶಕ ಕೆ.ಎಂ ರಘು ಹೊಸ ಚಿತ್ರ ಘೋಷಣೆ

    ‘ತರ್ಲೆ ವಿಲೇಜ್’ ಖ್ಯಾತಿಯ ನಿರ್ದೇಶಕ ಕೆ.ಎಂ ರಘು ಹೊಸ ಚಿತ್ರ ಘೋಷಣೆ

    ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೆಣೆದು ನಿರ್ದೇಶನಕ್ಕೆ ಕೆ.ಎಂ ರಘು ಸಜ್ಜಾಗಿದ್ದು ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ.

    ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ‘ಇರುವುದೆಲ್ಲವ ಬಿಟ್ಟು’, ‘ಗಜಾನನ ಗ್ಯಾಂಗ್’ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಪೈನಲ್ ಆಗಬೇಕಿದ್ದು,ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ಕೆ.ಎಂ ರಘು. ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಈ ಬಾರಿಯ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಇದೀಗ ಮೊದಲ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಶೇರ್ ಮಾಡಿಕೊಳ್ಳಲಿದೆ ಚಿತ್ರತಂಡ.

    ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ‘ಜಸ್ಟ್ ಪಾಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಮೊದಲಾದವರ ತಾರಾಬಳಗ ಸಿನಿಮಾದಲ್ಲಿದೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮೊತ್ತಕ್ಕೆ ಶುಗರ್ ಲೆಸ್ ಗೆ ಹಿಂದಿ  ರೀಮೇಕ್ ರೈಟ್ಸ್

    ಭಾರೀ ಮೊತ್ತಕ್ಕೆ ಶುಗರ್ ಲೆಸ್ ಗೆ ಹಿಂದಿ ರೀಮೇಕ್ ರೈಟ್ಸ್

    ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಶುಗರ್‌ ಲೆಸ್ ಚಿತ್ರದ  ಹಿಂದಿ ರೀಮೇಕ್ ರೈಟ್ಸ್ ನ್ನು ಹೆಸರಾಂತ ಸಂಸ್ಥೆಯೊಂದು ಖರೀದಿಸಿದೆ. ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್ (ಲಂಡನ್ ಹಾಗೂ ಮುಂಬೈ)ನ ಶಿವ ಆರ್ಯನ್ ಅವರು ಶುಗರ್ಲೆಸ್ ವಿತ್ರದ ಕಂಟೆಂಟ್ ನಿರೂಪಣೆಯನ್ನು ಇಷ್ಟ ಪಟ್ಟು  ಉತ್ತಮ ಬೆಲೆಗೆ ಖರೀದಿಸಿದ್ದಾರೆ. ಶಿವ ಆರ್ಯನ್ ಕೂಡ ಒಬ್ಬ ಪ್ರತಿಭಾವಂತ ಕಲಾವಿದ, ನಿರ್ಮಾಪಕ ಹಾಗೂ ಉದ್ಯಮಿಯಾಗಿದ್ದು  ಶುಗರ್ ಲೆಸ್ ಸಿನಿಮಾದ ಮೇಕಿಂಗ್ ಅವರಿಗೆ ಇಷ್ಟವಾಗಿದೆ. ಬರುವ ಜುಲೈ ತಿಂಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

    ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಸಹ ಶಶಿಧರ್ ಕೆ.ಎಂ. ಅವರೇ ಮಾಡಿದ್ದು, ಅವರ ಜೊತೆ  ಸಹಾಯಕ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿಕೃಷ್ಣೇಗೌಡ ಸಾತ್ ನೀಡಿದ್ದಾರೆ. ಅಲ್ಲದೆ ಈ ಚಿತ್ರದ ಕಾರ್ಯಕಾರಿ  ನಿರ್ಮಾಪಕರಾಗಿ ರಘು ಸಿಂಗಂ ಹಾಗೂ ದಿವ್ಯ ಶಶಿಧರ್ ಕಾರ್ಯನಿರ್ವಹಿಸಿದ್ದಾರೆ. ದಿಶಾ ಎಂಟರ್‌ಟೈನ್‌ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಶುಗರ್‌ಲೆಸ್ ಚಿತ್ರದ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್ ಕೆಲಸ ಮಾಡಿದ್ದು, ಡಾ|| ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಗುರು ಕಶ್ಯಪ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಈ ಚಿತ್ರಕ್ಕೆ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ. ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಕ್ಕರೆ ಖಾಯಿಲೆ ಹಿನನೆಲೆಯಲ್ಲಿ ನಡೆಯುವ ತುಂಬಾ ಹ್ಯೂಮರಸ್ ಆದ ನಿರೂಪಣೆ ಇರುವಂಥ ಚಿತ್ರ  ಇದಾಗಿದ್ದು,  ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿರುತ್ತದೆ.  ನಾನು ಸ್ಕಿಪ್ಟ್ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಡಿದ್ದೆನೋ, ಅದೇ ರೀತಿಯಲ್ಲಿ ನಾಯಕನಟ ಪೃಥ್ವಿ ಅಂಬರ್  ನಟಿಸಿದ್ದಾರೆ ಎಂದು ಶಶಿಧರ ಹೇಳಿದ್ದಾರೆ.