Tag: Shashi Kumar

  • ಗನ್ಸ್ ಅಂಡ್ ರೋಸಸ್ ಸಂಗೀತ ಸಾರಥಿ ಶಶಿಕುಮಾರ್!

    ಗನ್ಸ್ ಅಂಡ್ ರೋಸಸ್ ಸಂಗೀತ ಸಾರಥಿ ಶಶಿಕುಮಾರ್!

    ಸಂಗೀತವನ್ನೇ ಜಗತ್ತಾಗಿಸಿಕೊಂಡ ಸಾಹಸಿ!

    ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟರ್ನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ ಜೀವಮಾನದ ಕನಸು ಇಂಥಾ ಸಿನಿಮಾ ಮೂಲಕವೇ ಸಾಕಾರಗೊಳ್ಳೋದೂ ಇದೆ. ಸದ್ಯ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಗನ್ಸ್ ಅಂಡ್ ರೋಸಸ್’ (Guns And Roses) ಚಿತ್ರದ ಮೂಲಕ ಶಶಿಕುಮಾರ್ (Shashi Kumar) ಅವರ ಮಹಾ ಕನಸು ಸಾಕಾರಗೊಂಡಿದೆ. ಸಂಗೀತವನ್ನೇ ಬದುಕಾಗಿಸಿಕೊಂಡು, ಆ ಕ್ಷೇತ್ರದಲ್ಲೇ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಹೊಂದಿದ್ದವರು ಶಶಿ ಕುಮಾರ್. ಈ ಹಾದಿಯಲ್ಲಿ ಬದುಕೆಂಬುದು ಆಗಾಗ ಬ್ಯಾಲೆನ್ಸು ತಪ್ಪಿಸಿದೆ. ಮತ್ತೆಲ್ಲೋ ಹೊಯ್ದಾಡಿಸಿದೆ. ಆದರೆ, ಸಂಗೀತ ಗುಂಗಿನಲ್ಲಿಯೇ ಸಾಗಿ ಬಂದಿರುವ ಶಶಿ ಗನ್ಸ್ ಅಂಡ್ ರೋಸಸ್ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ.

    ಎಂಬಿಎ ಮುಗಿಸಿಕೊಂಡು ಬದುಕಿಗಾಗಿ ಯಾವುದಾದರೊಂದು ಕೆಲಸ ಮಾಡುವ ಅನುವಾರ್ಯತೆ ಶಶಿಕುಮಾರ್ ಮುಂದಿತ್ತು. ಆದರೆ, ಸಂಗೀತವನ್ನು ಬಿಟ್ಟು ಬೇರೇನೇ ಮಾಡಿದರೂ ವ್ಯರ್ಥ ಎಂಬಂಥಾ ಮನಃಸ್ಥಿತಿ ಕೂಡ ಅವರನ್ನು ಆವರಿಸಿಕೊಂಡಿತ್ತು. ಒಂದು ವೇಳೆ ಬೇರೆ ಕಸುಬು ಮಾಡಿದರೂ ಅದು ತನ್ನ ಕನಸಿಗೆ ಮೆಟ್ಟಿಲಾಗುವಂತಿರಬೇಕು ಅನ್ನೋ ಆಕಾಂಕ್ಷೆಯೇ ಅನೇಕ ಸಾಹಸಗಳಿಗೂ ಪ್ರೇರೇಪಿಸಿತ್ತು. ಬಹುಶಃ ಬಂದ ಕಷ್ಟ ನಷ್ಟಗಳನ್ನೆಲ್ಲ ಅನುಭವಿಸಿ, ಅವುಡುಗಚ್ಚಿ ಮುಂದುವರೆಯದಿದ್ದರೆ, ಸಿಂಪೋನಿಯನ್ಸ್ ಎಂಬ ಕಂಪೆನಿ ಹುಟ್ಟುತ್ತಿರಲಿಲ್ಲ. ನಾನಾ ದಿಕ್ಕಿನಲ್ಲಿ ಪಳಗಿಕೊಂಡು, ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶಕರಾಗೋದೂ ಸಹ ಕನಸಿನ ಮಾತಾಗಿರುತ್ತಿತ್ತು.

    Guns and Roses Kannada Movie Team
    ಶಶಿಕುಮಾರ್ 2018ರಿಂದ ಸಿಂಫೋನಿಯನ್ಸ್ ಎಂಬ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ಇದರ ನೆರಳಿನಲ್ಲಿ ಆಡಿಯೋ ಮತ್ತು ಮ್ಯೂಸಿಕ್ ಸಂಬಂಧಿತ ಕೆಲಸ ಕಾರ್ಯಗಳು ನಡೆಯುತ್ತವೆ. ಲೈವ್ ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳೆಲ್ಲವೂ ಇಲ್ಲಿಯೇ ನಡೆಯುವಂಥಾ ವಾತಾವರಣ ಕಲ್ಪಿಸಲಾಗಿದೆ. ಹೀಗೆ ಸಂಗೀತದ ಅಪ್ಪುಗೆಯಲ್ಲಿಯೇ ಅನ್ನದ ಮೂಲ ಕಂಡುಕೊಂಡಿರುವ ಶಶಿಕುಮಾರ್ ಪಾಲಿಗೆ ಈ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲವಿತ್ತು. ಅದರ ಸಲುವಾಗಿಯೇ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದ ಫಲವಾಗಿಯೇ ‘ಗನ್ಸ್ ಅಂಡ್ ರೋಸಸ್’ ಚಿತ್ರದ ಸಂಗೀತ ನಿರ್ದೇಶನದ ಅವಕಾಶ ಒಲಿದು ಬಂದಿತ್ತು. ಇದನ್ನೂ ಓದಿ:ಗನ್ಸ್ ಅಂಡ್ ರೋಸಸ್ ಮೂಲಕ ಕಣ್ತೆರೆದ ಕಥೆಗಾರ ಶರತ್!

    ಇಲ್ಲಿರುವ 4 ಹಾಡುಗಳನ್ನು ಒಂದಕ್ಕೊಂದು ಭಿನ್ನವೆಂಬಂತೆ ರೂಪಿಸುವ ಜವಾಬ್ದಾರಿ ಶಶಿ ಮೇಲಿತ್ತು. ಒಂದು ಥೀಮ್ ಸಾಂಗ್, ಎಣ್ಣೆ ಕಂ ಪ್ಯಾಥೋ, ಈಗಿನ ಯುವ ಜನಾಂಗವನ್ನು ಪಟ್ಟಂಪೂರಾ ಆವರಿಸಿಕೊಳ್ಳಬಲ್ಲ ರ್ಯಾಪ್ ಸಾಂಗ್ ಅನ್ನು ಬಲು ಆಸ್ಥೆಯಿಂದ ಶಶಿ ರೂಪಿಸಿದ್ದಾರಂತೆ. ಇದುವರೆಗೂ ಶಾರ್ಟ್ ಮೂವಿಗಳಿಗೆ ಕೆಲಸ ಮಾಡಿದ್ದರು. ತಂಬೂರ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಶಶಿ ಕನಸು ನನಸಾಗಿತ್ತು. ಅದು ಅವರ ಮೊದಲ ಚಿತ್ರವಾಗಿ ದಾಖಲಾಗುತ್ತದೆ. ಖ್ಯಾತ ನಿರ್ದೇಶಕ ಪಿ.ಹೆಚ್ ವಿಶ್ವನಾಥ್ ಅವರ ಆಡೇ ನಮ್ ಗಾಡು ಚಿತ್ರಕ್ಕೂ ಹಿನ್ನೆಲೆ ಸಂಗೀತ ನೀಡಿದ್ದರು. ಇದೆಲ್ಲವೂ ಸಂಗೀತದ ಭಾಗವೇ ಆಗಿದ್ದರೂ ಕೂಡಾ, ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಬೇಂಬುದು ಶಶಿಕುಮಾರ್‌ರ ಇರಾದೆಯಾಗಿತ್ತು. ಅದು ‘ಗನ್ಸ್ ಅಂಡ್ ರೋಸಸ್’ ಮೂಲಕ ಸಾಕಾರಗೊಂಡಿದೆ. ಈ ಹಾಡುಗಳೆಲ್ಲವೂ ಕೇಳುಗರಿಗೆ ಹಿಡಿಸುವ ಮೂಲಕ ಮೊದಲ ಹೆಜ್ಜೆ ಸಾರ್ಥಕಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ.


    ಹಾಗೆ ನೋಡಿದರೆ, ಶಶಿಕುಮಾರ್ ಬಹುಮುಖ ಪ್ರತಿಭೆ. ಸಂಗೀತದ ಹಲವು ಆಯಾಮಗಳನ್ನು ಒಳಗಿಳಿಸಿಕೊಂಡು ಪಳಗಬೇಕೆಂಬ ತಪನೆಯೊಂದನ್ನು ಬೆಚ್ಚಗಿಟ್ಟುಕೊಂಡವರು ಶಶಿ. ತಾನು ಏನೇ ಮಾಡಿದರೂ ಅದು ಸಂಗೀತಕ್ಕೆ ಸಂಬಂಧಿಸಿದ್ದೇ ಆಗಿರಬೇಕೆಂಬುದು ಅವರ ಹಂಬಲ. ಅದರ ಭಾಗವಾಗಿಯೇ ಸಂಗೀತಕ್ಕೆ ಸಂಬಂಧಿಸಿದ ಟೀಚಿಂಗ್ ವೃತ್ತಿಯನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ಆರಂಭದಿಂದಲೂ ಮ್ಯೂಸಿಕ್ ಕಂಪೆನಿ ಒಂದನ್ನು ಕಟ್ಟಬೇಕೆಂಬ ಆಸೆ ಹೊಂದಿದ್ದ ಅವರು, ಅದಕ್ಕಾಗಿ ನಡೆಸಿದ್ದ ಸರ್ಕಸ್ಸುಗಳು ಒಂದೆರಡಲ್ಲ. ಕಾಸು ಹೊಂದಿಸುವ ಉದ್ದೇಶದಿಂದಲೇ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಶಶಿ, 2018ರಲ್ಲಿ ಸಿಂಪೋನಿಯನ್ಸ್ ಎಂಬ ಸಂಸ್ಥೆ ಕಟ್ಟುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದರು. ಇದೀಗ ಗನ್ಸ್ ಅಂಡ್ ರೋಸಸ್ ಮೂಲಕ ಅವರ ವೃತ್ತಿ ಬದುಕು ನಿರ್ಣಾಯಕ ಘಟ್ಟದತ್ತ ಹೊರಳಿಕೊಂಡಿದೆ. ಈಗಿರುವ ವಾತಾವರಣ ಗಮನಿಸಿದರೆ, ಅದು ಅಲ್ಲಿಯೇ ಹುಲುಸಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

    ಇಂಥಾ ಹಲವಾರು ಪ್ರತಿಭಾನ್ವಿತರು ‘ಗನ್ಸ್ ಅಂಡ್ ರೋಸಸ್’ ಮೂಲಕ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಎಚ್.ಆರ್ ನಟರಾಜ್ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashvika Nishkala) ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಇದೀಗ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿದೆ.

  • ಅಕ್ಷಿತ್ ಶಶಿಕುಮಾರ್‌ ಜೊತೆ ಅದಿತಿ ಪ್ರಭುದೇವ ಡ್ಯುಯೇಟ್

    ಅಕ್ಷಿತ್ ಶಶಿಕುಮಾರ್‌ ಜೊತೆ ಅದಿತಿ ಪ್ರಭುದೇವ ಡ್ಯುಯೇಟ್

    `ಓ ಮೈ ಲವ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಅಕ್ಷಿತ್ ಶಶಿಕುಮಾರ್‌ಗೆ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದ್ದಾರೆ.

    ತಮ್ಮ ಮೊದಲ ಸಿನಿಮಾದಲ್ಲೇ ಭರವಸೆಯ ನಟನಾಗಿ ಹೊರಹೊಮ್ಮಿದ ಅಕ್ಷಿತ್ ಇದೀಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ವೃತ್ತಿ ವೈದ್ಯರಾಗಿರುವ ಜಿ ವೆಂಕಟೇಶ್ ಪ್ರಸಾದ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಅಕ್ಷಿತ್ ನಾಯಕನಾಗಿದ್ದು, ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    ಇದೊಂದು ಸಸ್ಪೆನ್ಸ್ ಆ್ಯಕ್ಷನ್ ಥ್ರಿಲರ್ ಕಥೆಯಾಗಿದ್ದು, ಕಥೆಯು ವೈದ್ಯಕೀಯ ಕ್ಯಾಂಪಸ್ ಸುತ್ತಮುತ್ತ ನಡೆಯುವ ಕಥೆಯಾಗಿದೆ. ಸಿನಿಮಾಗೆ `Chaos’ ಎಂಬ ಟೈಟಲ್ ಇಡಲಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದ್ದು. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಇದೇ ಮೊದಲ ಅಕ್ಷಿತ್ ಮತ್ತು ಅದಿತಿ ಪ್ರಭುದೇವಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಿತ್ ತಂದೆ ಸುಪ್ರಿಮ್ ಹಿರೋ ಶಶಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್

    ಬಿಗ್ ಬಾಸ್ ಖ್ಯಾತಿಯ ಶಶಿ ಕುಮಾರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.‌ ಗುರುಹಿರಿಯರ ಸಮ್ಮುಖದಲ್ಲಿ ನಟ ಶಶಿ ಹಸಮಣೆ ಏರಿದ್ದಾರೆ.

    ಕಿರುತೆರೆ ದೊಡ್ಮನೆ ಆಟ ಬಿಗ್ ಬಾಸ್ ಕನ್ನಡ 6 ವಿನ್ನರ್ ಶಶಿ ಕುಮಾರ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಸ್ವಾತಿ ಎಂಬುವರನ್ನ ಶಶಿ ಕುಮಾರ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಮಹಾನಟಿ ಕೀರ್ತಿ ಸುರೇಶ್: ಹುಡುಗ ಯಾರು ಗೊತ್ತಾ?

    ಶಶಿ ಕುಮಾರ್ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಆಗಸ್ಟ್ 6 ಮತ್ತು 7 ರಂದು ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್‌ವೊಂದರಲ್ಲಿ ಶಶಿ ಕುಮಾರ್ ಹಾಗೂ ಸ್ವಾತಿ ಅವರ ಕಲ್ಯಾಣ ಜರುಗಿದೆ. ಆಗಸ್ಟ್ 7 ರಂದು ಬೆಳಗ್ಗೆ 9 ರಿಂದ 10:15 ವರೆಗೆ ಇದ್ದ ಶುಭ ಮುಹೂರ್ತದಲ್ಲಿ ಸ್ವಾತಿ ಮತ್ತು ಶಶಿಕುಮಾರ್ ಹೊಸ ಬಾಳಿಗೆ ನಾಂದಿ‌ ಹಾಡಿದ್ದಾರೆ.

    ಬಿಗ್ ಬಾಸ್ ಶಶಿ ಮತ್ತು ಸ್ವಾತಿ ಅವರ ಮದುವೆ, ಗುರು ಹಿರಿಯರು ನಿಶ್ಚಿಯಿಸಿದ ಮದುವೆಯಾಗಿದ್ದು, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು, ಹಿತೈಷಿಗಳು, ಶುಭಕೋರಿದ್ದಾರೆ. ಇದನ್ನೂ ಓದಿ: ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ತಲೈವಾ: ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರೋಕೆ ಸಜ್ಜಾದ ಬಿಗ್‌ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್

    ಹಸೆಮಣೆ ಏರೋಕೆ ಸಜ್ಜಾದ ಬಿಗ್‌ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್

    ನ್ನಡದ ಡೊಡ್ಮನೆ ಶೋ ʻಬಿಗ್ ಬಾಸ್ ಸೀಸನ್ 6ʼ ಮೂಲಕ ಬೆಳಕಿಗೆ ಬಂದ ಪ್ರತಿಭೆ ಶಶಿಕುಮಾರ್ ಈಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಬಿಗ್ ಬಾಸ್ ಮನೆಯ ಮಾಡರ್ನ್ ರೈತ ಎಂದೇ ಫೇಮಸ್ ಆಗಿರುವ ಶಶಿಕುಮಾರ್ ಇದೇ ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೊಡ್ಡ ಬಳ್ಳಾಪುರದ ವಧು ಸ್ವಾತಿ ಎಂಬುವವರ ಕೈ ಹಿಡಿಯಲಿದ್ದಾರೆ. ಕೃಷಿ ಕುಟುಂಬದ ಸ್ವಾತಿ ಇತ್ತೀಚೆಗಷ್ಟೇ ಯುಪಿಎಸ್‌ಸಿ ಪ್ರಿಲಿಮ್ಸ್ ಕೂಡ ಪಾಸ್ ಆಗಲಿದ್ದಾರೆ. ಇದನ್ನೂ ಓದಿ:‘ವಿಕಿಪೀಡಿಯ’ ಹೆಸರಿನಲ್ಲೊಂದು ಸಿನಿಮಾ: ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ

    ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ನೂತನ ತಂತ್ರಜ್ಞಾನ ಉಪಯೋಗಿಸುವಲ್ಲಿ ಮುಂದು. ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾಗಿದ್ದು, ಸದ್ದಿಲ್ಲದೇ ಮದುವೆಯ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶಶಿ ಈಗ `ಮೆಹಬೂಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಯತ್ನ -ಜೈಲಿನಲ್ಲೇ ಸಂಚು, ಐವರು ಅರೆಸ್ಟ್

    ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಯತ್ನ -ಜೈಲಿನಲ್ಲೇ ಸಂಚು, ಐವರು ಅರೆಸ್ಟ್

    ಬೆಂಗಳೂರು: ಖಾಸಗಿ ಶಾಲೆಗಳ ಒಕ್ಕೂಟ ಕಾರ್ಯದರ್ಶಿ (ಕ್ಯಾಮ್ಸ್) ಶಶಿಕುಮಾರ್ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣ ಭೇದಿಸಿರುವ ಜಾಲಹಳ್ಳಿ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

    ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಜಾಲಹಳ್ಳಿ ಇನ್ ಸ್ಪೆಕ್ಟರ್ ಗುರುಪ್ರಸಾದ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ದೀಲಿಪ್, ಅಭಿಷೇಕ್, ಕಾರ್ತಿಕ್, ಭರತ್ ಹಾಗೂ ಪವನ್ ಬಂಧಿಸಿ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರಗಳು, ಡ್ರ್ಯಾಗರ್, ಪೆಪ್ಪರ್ ಸ್ಪ್ರೆ ಬಾಟೆಲ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.

    ಕೃತ್ಯದಲ್ಲಿ ಪ್ರಮುಖ ಆರೋಪಿ ಲಗ್ಗೆರೆ ರವಿ ಸೇರಿದಂತೆ ಆರು ಮಂದಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

    ಅಂದು ನಡೆದಿದ್ದೇನು?
    ಕ್ಯಾಮ್ಸ್ ಕಾರ್ಯದರ್ಶಿಯಾಗಿರುವ ಶಶಿಕುಮಾರ್ ಕಳೆದ ತಿಂಗಳ 29ರ ರಾತ್ರಿ 9 ಗಂಟೆ ಸುಮಾರಿಗೆ ಜಾಲಹಳ್ಳಿ ನಿವಾಸ ಬಳಿ ಕಾರಿನಿಂದ ಇಳಿಯುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಶಶಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಕೂಡಲೇ ಕಾರಿನಲ್ಲಿ ಕುಳಿತಕೊಂಡ ಶಶಿಕುಮಾರ್ ಗೆ ಸಣ್ಣಪುಟ್ಟ ಗಾಯವಾಗಿತ್ತು. ಜೀವ ರಕ್ಷಣೆಗಾಗಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಎಸಿಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗುರುಪ್ರಸಾದ್ ಸಾರಥ್ಯದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಚುರುಕಿನಿಂದ ತನಿಖೆ ನಡೆಸಿ ಐದು ಮಂದಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದೆ.

     

    ಕಾರಣವೇನು?
    2014 ರಿಂದ ಕರ್ನಾಟಕ ವಿದ್ಯಾರ್ಥಿ ಪೋಷಕರ ಸಂಘದಲ್ಲಿ ಗುರುತಿಸಿಕೊಂಡಿದ್ದ ಲಗ್ಗೆರೆ ರವಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿ ಕುಖ್ಯಾತಿ ಪಡೆದುಕೊಂಡಿದ್ದ. 2019 ರಲ್ಲಿ ವಿಜಯನಗರ ಠಾಣಾ ವ್ಯಾಪ್ತಿಯ ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ವೀರಭದ್ರಪ್ಪ ಎಂಬುವರ ಅಪಹರಣ ಸೇರಿದಂತೆ ಏಳಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ.

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರವಿ ಜೈಲು ಸೇರಿದ್ದ. ಇನ್ನೊಂದಡೆ ಖಾಸಗಿ ಶಾಲೆಗಳ ಮಾಲೀಕರಿಂದ ಹಫ್ತಾ ವಸೂಲಿ ನಿಂತಿದ್ದರಿಂದ ಹಾಗೂ ಮರಳಿ ಹಣ ಪಡೆಯಲು ಯೋಜನೆ ರೂಪಿಸಿದ್ದ. ಅಲ್ಲದೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮುಗಿಸಿದರೆ ಇತರೆ ಖಾಸಗಿ ಶಾಲೆಗಳ ಮಾಲೀಕರು ಹಫ್ತಾ ನೀಡುತ್ತಾರೆ ಎಂದು ಭಾವಿಸಿದ್ದ. ಇದೇ ದುರುದ್ದೇಶದಿಂದ ಜೈಲಿನಲ್ಲಿದ್ದ ಎರಡನೇ ಆರೋಪಿ ದಿಲೀಪ್ ಪರಿಚಯಿಸಿಕೊಂಡು ಸಂಚು ರೂಪಿಸಿದ್ದ. ರವಿ ಅಣತಿಯಂತೆ ದೀಲಿಪ್ ಸಹಚರರಿಗೆ ವಿಷಯ ತಿಳಿಸಿದ್ದಾನೆ. ಜಾಮೀನು ಪಡೆದು ಹೊರ ಬಂದಿದ್ದ ಆರೋಪಿಗಳು ಶಶಿಕುಮಾರ್ ಕೊಲೆ ಸಂಚು ರೂಪಿಸಿದ್ದರು.

    6 ತಿಂಗಳ ಹಿಂದೆಯೇ ಪ್ಲ್ಯಾನ್
    ಶಶಿಕುಮಾರ್ ಹತ್ಯೆ ಮಾಡಲು ನಿರ್ಧರಿಸಿದ ಆರೋಪಿಗಳು ಜಾಲಹಳ್ಳಿಯ ಮುತ್ಯಾಲನಗರದಲ್ಲಿ ರವಿ ಮಾಡಿದ್ದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ನಿರಂತರವಾಗಿ ಶಶಿಕುಮಾರ್ ಚಲನವಲನಾ ಬಗ್ಗೆ ನಿಗಾ ವಹಿಸಿದ್ದರು. ಕಳೆದ ತಿಂಗಳು 29 ರಂದು ಜಾಲಹಳ್ಳಿ ಬಳಿ ಹತ್ಯೆ ಮಾಡಲು ಮುಂದಾಗಿದ್ದರು. ದಾಳಿಯಲ್ಲಿ ಶಶಿಕುಮಾರ್ ಬಳಿಯಿದ್ದ ಲೈಸೆನ್ಸ್ ಪಿಸ್ತೂಲ್ ಕಂಡು ಕ್ಷರ್ಣಾಧದಲ್ಲಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಂಧನ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೋಲಾರ, ಮಾಲೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.  ಇದನ್ನೂ ಓದಿ : ಪ್ರವಾಸಿಗರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ- 2 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು 

    ಶಶಿಕುಮಾರ್ ನನ್ನು ಮುಗಿಸಲೇ ಬೇಕೆಂಬ ತೀರ್ಮಾನಿಸಿದ್ದ ರವಿ ಅಂಡ್ ಗ್ಯಾಂಗ್ 29 ರಂದು ರಾತ್ರಿ ಕೊಲೆ ಮಾಡಲು ನಿರ್ಧರಿಸಿದ್ದರು. ಪ್ರತಿದಿನ ಸಾಕುನಾಯಿ ವಾಕ್ ಮಾಡಲು ಕರೆದುಕೊಂಡು ಬರುವಾಗ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಆ ದಿನ ರಾತ್ರಿ ಬೇಗನೇ ಜಾಲಹಳ್ಳಿಯಿಂದ ಗಾಂಧಿನಗರ ನಿವಾಸಕ್ಕೆ ಹೋಗಲು ಕಾರು ಹತ್ತಿದ್ದ ಶಶಿಕುಮಾರ್ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಅಲ್ಲದೆ ಆರೋಪಿ ದಿಲೀಪ್ ಉಳಿದುಕೊಂಡಿದ್ದ ಮನೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಮೂವರು ಸಜೀವ ಗುಂಡುಗಳಿದ್ದರೂ ಇದನ್ನು ಬಳಸಲು ಬರದ ಕಾರಣ ಮಾರಕಾಸ್ತ್ರ ಮೊರೆ ಹೋಗಿದ್ದರು. ಪತ್ತೆಯಾಗಿರುವ ಪಿಸ್ತೂಲ್ ಬಗ್ಗೆ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಬಳಿಕ ವಿಷಯ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಾಡಿ ಜನರನ್ನು ಮನರಂಜಿಸಿದ ಮಂಗಳೂರು ಕಮಿಷನರ್

    ಹಾಡಿ ಜನರನ್ನು ಮನರಂಜಿಸಿದ ಮಂಗಳೂರು ಕಮಿಷನರ್

    ಮಂಗಳೂರು: ಹಾಡಿಗೂ ಸೈ ಎನ್ನುವ ಮೂಲಕ ನಗರ ಪೊಲೀಸ್ ಕಮಿಷನರ್ ಇದೀಗ ಸುದ್ದಿಯಾಗಿದ್ದಾರೆ.

    ಹೌದು. ಕಮಿಷನರ್ ಶಶಿಕುಮಾರ್ ಅವರು ಮಂಗಳೂರಿನ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿಗೀತೆ ಹಾಡಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಕಮಿಷನರ್ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭಕ್ತಿಗೀತೆ ಹಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಖಡಕ್ ಆಫೀಸರ್ ಆಗಿ ಛಾಪು ಮೂಡಿಸಿರುವ ಶಶಿಕುಮಾರ್, ಸದಭಿರುಚಿಯ ಆಸಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಗರದಲ್ಲಿ ಎರಡು ದಿನಗಳ ಕಾಲ ಬೀಚ್, ಮೈದಾನ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವವರು, ಅನಾಮಿಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಕಮಿಷನರ್ ಕಾರ್ಯಾಚರಣೆಗೆ ಸಾರ್ವಜನಿಕರ ಶ್ಲಾಘನೆ ಕೂಡ ವ್ಯಕ್ತವಾಗಿತ್ತು.

  • 28 ಮಕ್ಕಳನ್ನು ದತ್ತು ಪಡೆದ ಆಧುನಿಕ ರೈತ ಶಶಿ: ವಿಡಿಯೋ ನೋಡಿ

    28 ಮಕ್ಕಳನ್ನು ದತ್ತು ಪಡೆದ ಆಧುನಿಕ ರೈತ ಶಶಿ: ವಿಡಿಯೋ ನೋಡಿ

    ಬೆಂಗಳೂರು: ಬಿಗ್ ಬಾಸ್ ಸೀಸನ್- 6 ವಿಜೇತ, ಆಧುನಿಕ ರೈತ 28 ಮಕ್ಕಳನ್ನು ದತ್ತು ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಶಶಿಕುಮಾರ್ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯಲ್ಲಿ ಓದಿದ್ದರು. ಈಗ ಈ ಶಾಲೆಯ 28 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ವಿದ್ಯಾಭ್ಯಾಸದ ಖರ್ಚುನ್ನು ನೋಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಅಲ್ಲದೆ ಈ ವಿಷಯವನ್ನು ಅವರು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವುದರ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ನಾನು ಈ ಶಾಲೆಯಲ್ಲಿ 28 ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದೇವೆ. ಇವರು ಇಲ್ಲಿ ಎಷ್ಟು ದಿನ ಎಷ್ಟು ವರ್ಷ ಇರುತ್ತಾರೋ ನಾನು ಅವರ ವಿದ್ಯಾಭ್ಯಾಸ ಮುಗಿಸೋವರೆಗೂ, ಅವರ ವಿದ್ಯಾಭ್ಯಾಸದ ಖರ್ಚು, ಯೂನಿಫಾರಂ, ಬುಕ್ಸ್, ಶೂ ಇಂತಹ ಖರ್ಚು ವೆಚ್ಚ ಏನೇ ಬಂದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಅವರಿಗೆ ಮಾತು ನೀಡಿದ್ದೇನೆ. ಈ ವಿವಿಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದೀನಿ.

    ಈ ಮಕ್ಕಳನ್ನು ದತ್ತು ಪಡೆದುಕೊಂಡಿದಕ್ಕೆ ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ನಾನು ಇದೇ ಊರಿನವನಾಗಿದ್ದು, ಈ ಶಾಲೆ ಮೈದಾನದಲ್ಲಿ ಆಟವಾಡುತ್ತಾ ಬೆಳೆದು ಬಂದಿರುವದರಿಂದ ನನಗೆ ಆ ಒಂದು ಋಣ ಇದೆ. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುತ್ತೆ ಎಂದುಕೊಂಡಿದ್ದೇನೆ. 28 ಸಂಖ್ಯೆ ಇನ್ನು ಜಾಸ್ತಿ ಆಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

    ಶಶಿಕುಮಾರ್ ಈಗ ತಮ್ಮ ಎರಡನೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಶಶಿಕುಮಾರ್ ಕೃಷಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

     

    View this post on Instagram

     

    Happy to adopt these 28 kids until they complete their schooling and listen to their dreams.

    A post shared by Shashi Kumar (@shashi.official) on

  • ‘ಕಂಟ್ರೋಲ್ ನಲ್ಲಿ ಇರಿ’ ಎಂದು ಸ್ಪರ್ಧಿಗೆ ಸುದೀಪ್ ವಾರ್ನ್

    ‘ಕಂಟ್ರೋಲ್ ನಲ್ಲಿ ಇರಿ’ ಎಂದು ಸ್ಪರ್ಧಿಗೆ ಸುದೀಪ್ ವಾರ್ನ್

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6ನಲ್ಲಿ ಪ್ರತಿದಿನ ಒಂದಲ್ಲ ಒಂದು ಗಲಾಟೆ-ವಿವಾದ ನಡೆಯುತ್ತಿದೆ. ನಟ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದಾರೆ. ಅದೇ ರೀತಿ ಇದೀಗ ಆಧುನಿಕ ರೈತ ಶಶಿಗೆ ಬುದ್ಧಿ ಹೇಳಿದ್ದಾರೆ.

    ಇತ್ತೀಚೆಗೆ ಬಿಗ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ವಿವಾದ ನಡೆದಿದ್ದು, ಇದರಿಂದ ಆಧುನಿಕ ರೈತ ಶಶಿ ಕುಮಾರ್ ಆವೇಶಕ್ಕೆ ಒಳಗಾಗಿ ತಮ್ಮ ಕೈ ಮೂಳೆಯನ್ನೇ ಮುರಿದು ಕೊಂಡಿದ್ದರು.

    ಈ ಗಲಾಟೆಯ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು, ಮನಸ್ಸು ಮಾತ್ರ ನಮ್ಮ ದೇಹದ ಭಾಗವಲ್ಲ. ಟಾಸ್ಕ್ ಮಾಡುವಾಗ ದೇಹದ ಎಲ್ಲ ಭಾಗವೂ ಮುಖ್ಯವಾದದ್ದು. ಆದ್ದರಿಂದ ಅವುಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಈ ರೀತಿ ಕೈಗೆ ಪೆಟ್ಟು ಮಾಡಿಕೊಂಡರೆ ಕಠಿಣವಾದ ಟಾಸ್ಕ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಚೆನ್ನಾಗಿ ಪರ್ಫಾಮ್ ಮಾಡದೆ, ನಾಮಿನೆಟ್ ಆಗಿ ಬಿಗ್ ಬಾಸ್ ಮನೆಯಿಂದ ಹೋಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

    ಮೊದಲ ಬಾರಿಗೆ ಕೈ ಹೊಡೆದುಕೊಂಡಾಗ ಮರದ ಗೋಡೆ ಆಗಿತ್ತು. ಆದ್ದರಿಂದ ಏನೂ ಆಗಿಲ್ಲ. ಆದರೆ ಎರಡನೇ ಬಾರಿ ಜೋರಾಗಿ ಕೋಪಗೊಂಡು ಹೊಡೆಯಲು ಹೋಗಿದ್ದೀರಿ. ದುರಾದೃಷ್ಟವಶಾತ್ ಕಾಂಕ್ರೀಟ್ ಗೋಡೆ ಆದ್ದರಿಂದ ಮೂಳೆಗಳು ಮುರಿದೆ. ನಮ್ಮ ಮನಸ್ಸು, ಆವೇಶ, ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಪೆಟ್ಟು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಕಂಟ್ರೋಲ್ ನಲ್ಲಿ ಇರಿ ಎಂದು ಸುದೀಪ್ ಅವರು ಶಶಿಗೆ ಬುದ್ಧಿ ಹೇಳಿದ್ದಾರೆ.

    ಬಿಸ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ಟಾಸ್ಕ್ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಇದರಿಂದ ಸ್ಪರ್ಧಿ ಕವಿತಾ ಬೇಸರದಿಂದ ಅಳುತ್ತಿದ್ದರು. ಆಗ ಶಶಿ ಕೋಪಗೊಂಡು ಜಯಶ್ರೀ ಜೊತೆ ಸೇರಿ ಆಂಡ್ರ್ಯೂ ಜೊತೆ ಮಾತುಕತೆ ನಡೆಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಪಗೊಂಡ ಶಶಿ ಗೋಡೆಗೆ ಕೈ ಗುದ್ದಿಕೊಂಡರು. ಪರಿಣಾಮ ಶಶಿ ಕೈಯ 2 ಮೂಳೆಗಳು ಮುರಿದು ಹೋಗಿವೆ. ಕೂಡಲೇ ವೈದ್ಯರ ಬಳಿಕ ಚಿಕಿತ್ಸೆ ಪಡೆದು ಕೊಂಡಿದ್ದು, ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv