Tag: Shashi

  • ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದ ‘ಬಿಗ್‌ ಬಾಸ್‌’ ವಿನ್ನರ್‌ – ಶಶಿಗೆ ಪೆಟ್ಟು

    ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದ ‘ಬಿಗ್‌ ಬಾಸ್‌’ ವಿನ್ನರ್‌ – ಶಶಿಗೆ ಪೆಟ್ಟು

    ‘ಬಿಗ್ ಬಾಸ್’ ಸೀಸನ್ 6 (Bigg Boss Kannada 6) ವಿನ್ನರ್ ಶಶಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಮೆಹಬೂಬಾ’ ಚಿತ್ರೀಕರಣದ ವೇಳೆ ಶಶಿ ಪೆಟ್ಟು ಮಾಡಿಕೊಂಡಿದ್ದಾರೆ. ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಶಶಿ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ಆತಂಕಗೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಎಲ್ಲಿಯವರೆಗೆ ಬಂತು? ಸುದೀಪ್ ಕೊಟ್ರು ಗುಡ್ ನ್ಯೂಸ್

    ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ‘ಬಿಗ್ ಬಾಸ್’ ಶಶಿ ಅವರು ತಮ್ಮ ಮುಂಬರುವ ಸಿನಿಮಾ ‘ಮೆಹಬೂಬಾ’ (Mehabooba) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ರಿಸ್ಕಿ ಸೀನ್ಸ್ ಶೂಟ್ ಮಾಡುವಾಗ ಬಿದ್ದು ಶಶಿ ಏಟು ಮಾಡಿಕೊಂಡಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಶಶಿ ಇದೀಗ ಚೇತರಿಕೊಳ್ಳುತ್ತಿದ್ದಾರೆ.

    ಕಳೆದ ಸೀಸನ್ 6 ಬಿಗ್ ಬಾಸ್ ಶೋನಲ್ಲಿ ವಿಜೇತರಾಗಿದ್ದ ಶಶಿ ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • ಬಿಗ್ ಬಾಸ್ ವಿನ್ನರ್ ಶಶಿ ನಟನೆಯ ‘ಮೆಹಬೂಬ’ ಚಿತ್ರಕ್ಕೆ ಸಚಿವರ ಸಾಥ್

    ಬಿಗ್ ಬಾಸ್ ವಿನ್ನರ್ ಶಶಿ ನಟನೆಯ ‘ಮೆಹಬೂಬ’ ಚಿತ್ರಕ್ಕೆ ಸಚಿವರ ಸಾಥ್

    ಬಿಗ್ ಬಾಸ್ ( Bigg Boss) ಖ್ಯಾತಿಯ ಶಶಿ (Shashi) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ‘ಮೆಹಬೂಬ’ (Mehbooba) . ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿಂದು ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಬಳಿಕ ಸಚಿವ ಚಲುವನಾರಾಯಣಸ್ವಾಮಿ ಮಾತನಾಡಿ, ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್ – ಹೀರೋ ಅವರೇ..ಲಾಭ-ನಷ್ಟ ಹಾಗೂ ಹೆಸರು ಅವ್ರದ್ದೇ. ರಾಜ್ಯದ ಜನ ಆಶೀರ್ವಾದ ಮಾಡಬೇಕಾಗುತ್ತದೆ. ನಾಯಕಿ ನನ್ನ ಗೆಳೆಯನ ಮಗಳು. ಹೀಗಾಗಿ ಇಬ್ಬರಿಗೆ ಸಿನಿಮಾ ಸಕ್ಸಸ್ ತರಲಿ. ಇತ್ತೀಚೆಗೆ ಅನೇಕ ಚಿತ್ರಗಳು ಸಕ್ಸಸ್ ಆಗುತ್ತಿವೆ. ಜನರಿಗೆ ಯಾವ ರೀತಿ ಚಿತ್ರಗಳು ಇಷ್ಟಪಡುತ್ತಾರೆ. ಇಷ್ಟಪಡಲ್ಲ ಅನ್ನುವುದು ಊಹೆ ಮಾಡಲು ಆಗುವುದಿಲ್ಲ. ನಿಮ್ಮೆಲ್ಲ ಸಹಕಾರ ಇಡೀ ತಂಡ ಮೇಲೆ ಇರಲಿ ಎಂದರು.

    ನಾಯಕ ಶಶಿ ಮಾತನಾಡಿ, ಮೆಹಬೂಬ ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡವಾಗಿರುತ್ತದೆ. 200 ಸಿನಿಮಾಗಳು ಬಂದರು. ಹೆಸರುಮಾಡೋದು 10 ರಿಮದ 15 ಸಿನಿಮಾಗಳು. ಆ 10-15 ಸಿನಿಮಾಗಳಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸು. ಖುಷಿ ತಂದುಕೊಟ್ಟ ಸಿನಿಮಾ ಮೆಹಬೂಬಾ. ಶೂಟಿಂಗ್ ಕಂಪ್ಲೀಟ್ ಆಗಿದೆ. ಆ ಖುಷಿ ವಿಚಾರವನ್ನು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇವೆ. ಫೆಬ್ರವರಿಯಲ್ಲಿ ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ನಿರ್ದೇಶಕ ಅನೂಪ್ ಆಂಟೊನಿ ಮಾತನಾಡಿ, ಮೆಹಬೂಬ ನನ್ನ ಎರಡನೇ ಸಿನಿಮಾ. ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ ಹಂತದಲ್ಲಿದೆ. ಫೆಬ್ರವರಿಗೆ ರಿಲಿಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ. ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪವನ್ ಮೇಡಂ ಅದ್ಭುತ ನಟನೆ ಚಿತ್ರದಲ್ಲಿದೆ. ಒಟ್ಟು ಚಿತ್ರದಲ್ಲಿ 5 ಹಾಡುಗಳಿವೆ ಎಂದರು. ಮಾರ್ಡನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ ಮೆಹಬೂಬ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಾಯಕನನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ಮಾಪಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  • BMW ಕಾರು ಖರೀದಿಸಿದ ಬಿಗ್‌ ಬಾಸ್‌ ವಿನ್ನರ್‌ ಶಶಿ

    BMW ಕಾರು ಖರೀದಿಸಿದ ಬಿಗ್‌ ಬಾಸ್‌ ವಿನ್ನರ್‌ ಶಶಿ

    ಬಿಗ್ ಬಾಸ್ ವಿನ್ನರ್ (Bigg Boss Kannada) ಶಶಿ (Shashi) ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಾಡ್ರನ್ ರೈತ ಶಶಿ BMW ಕಾರು ಖರೀದಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯ ಜನಪ್ರಿಯ ಬಿಗ್ ಬಾಸ್ ಶೋ ಮೂಲಕ ಮನೆ ಮಾತಾದ ಶಶಿ (Shashi) ಅವರು ಸಿನಿಮಾಗಳನ್ನ ಮಾಡ್ತಿದ್ದಾರೆ. ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶಶಿ ಅವರು ವೈವಾಹಿಕ ಜೀವನ- ಸಿನಿಮಾ, ಅಗ್ರಿಕಲ್ಚರ್ ಕಡೆ ಕೂಡ ಗಮನ ವಹಿಸುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

     

    View this post on Instagram

     

    A post shared by S H A S H I ???? (@shashi.official)

    ನಟ ಶಶಿ ಹೊಸ ಕಾರು ಖರೀದಿಸಿದ್ದಾರೆ. ಕಾರಿನಲ್ಲಿ ಮೊದಲು ಹೆಂಡ್ತಿ ಜೊತೆ ರೈಡ್ ಹೋಗಿದ್ದಾರೆ. ನಮಸ್ಕಾರ ಆತ್ಮೀಯ ಹಿತೈಷಿಗಳೇ, ಈ ಬಾರಿ ನನ್ನ ಹೊಸ ಪಾಲುದಾರನನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಅದು BMW, ವರ್ಷಗಟ್ಟಲೆ ಒಂದೇ ಕಾರನ್ನು ಓಡಿಸಲು ಜೀವನವು ತುಂಬಾ ಚಿಕ್ಕದಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ನೆಚ್ಚಿನ ನಟನಿಗೆ ಫ್ಯಾನ್ಸ್‌ ಕೂಡ ಶುಭಕೋರಿದ್ದಾರೆ.

  • ಪ್ರೇಮಿಗಳ ಗಮನಕ್ಕೆ: ಬಿಗ್ ಬಾಸ್ ಶಶಿ ಹೇಳ್ತಾರೆ ಕೇಳಿ

    ಪ್ರೇಮಿಗಳ ಗಮನಕ್ಕೆ: ಬಿಗ್ ಬಾಸ್ ಶಶಿ ಹೇಳ್ತಾರೆ ಕೇಳಿ

    ತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ  ಯುವಜನತೆಯಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಅದರಲ್ಲೂ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆ ಮಾಡಿಕೊಳ್ಳದೆ ಒಂದೇ ಮನೆಯಲ್ಲಿ ಅನ್ಯೋನ್ಯತೆಯಿಂದ ವಾಸವಾಗಿರುವ ಸಂಬಂಧವನ್ನು ಈ ರೀತಿ ಕರೆಯಲಾಗುತ್ತದೆ. ಇಂಥದೇ ಸಂಬಂಧದ ಮೇಲೆ ಹೆಣೆಯಲಾದಂಥ ಕಥೆಯಿರುವ ಚಿತ್ರವೊಂದು ರೆಡಿಯಾಗಿದೆ. ಆ ಚಿತ್ರಕ್ಕೆ ‘ಪ್ರೇಮಿಗಳ ಗಮನಕ್ಕೆ’ (Premigala Gamanakke) ಎಂದು ಹೆಸರಿಡಲಾಗಿದೆ.

    ವಿನ್ಸೆಂಟ್ ಇನ್ಬರಾಜ್ (Vincent Inbaraj) ಅವರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರದ ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಸಿಟಾಡಿಲ್ ಫಿಲಂಸ್ ಮೂಲಕ ಸುಬ್ಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    ಕೊರೋನಾ ಸಂದರ್ಭದಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿ ಹೊರಗಡೆ ಎಲ್ಲೂ ಹೋಗದಂಥ ಸಂದರ್ಭದಲ್ಲಿ ಬೆಂಗಳೂರಿನ  ಎಲ್ಲಾ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟವು. ಅದರಂತೆ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಚಿತ್ರದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಅವರಿಗೆ  ಎದುರಾಗುವ ಸಂದರ್ಭಗಳನ್ನು ಹೇಗೆ ಫೇಸ್ ಮಾಡಿದರು ಎಂಬುದರ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ.

    ಈ ಚಿತ್ರದ 2 ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರಿನ ಉತ್ತರಹಳ್ಳಿಯ ಶೂಟಿಂಗ್ ಮನೆಯಲ್ಲಿ ನಡೆಸಲಾಗಿದೆ. ಉಳಿದ ಹಾಡಿನ ಚಿತ್ರೀಕರಣವನ್ನು ಮಂಗಳೂರಲ್ಲಿ ನಡೆಸೋ ಯೋಜನೆಯಿದೆ, ಕನ್ನಡ ಬಿಗ್ ಬಾಸ್ ಖ್ಯಾತಿಯ ಶಶಿ (Shashi) ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಕೆಲ ಚಿತ್ರಗಳಲ್ಲಿ ನಟಿಸಿರುವ ಚಿರಶ್ರೀ  (Chirashri) ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ, ಸುಬ್ಬು ಮುಂತಾದವರು ತಾರಾಗಣದಲ್ಲಿದ್ದಾರೆ.

  • ‘ಬಿಗ್ ಬಾಸ್’ ಶಶಿ ನಟನೆಯ ಮೆಹಬೂಬ ಸಿನಿಮಾದ ಉಸಿರೇ ಉಸಿರೇ ಸಾಂಗ್ ರಿಲೀಸ್

    ‘ಬಿಗ್ ಬಾಸ್’ ಶಶಿ ನಟನೆಯ ಮೆಹಬೂಬ ಸಿನಿಮಾದ ಉಸಿರೇ ಉಸಿರೇ ಸಾಂಗ್ ರಿಲೀಸ್

    ಬಿಗ್ ಬಾಸ್’ ಖ್ಯಾತಿಯ ಶಶಿ (Shashi) ನಾಯಕನಾಗಿ ನಟಿಸಿರುವ “ಮೆಹಬೂಬ” (Mehbooba) ಚಿತ್ರದ ಮತ್ತೊಂದು ಸುಮಧುರ ಹಾಡು (Song)  ಬಿಡುಗಡೆಯಾಗಿದೆ. ವಿ.ರಘುಶಾಸ್ತ್ರಿ ಅವರು ಈ ಹಾಡನ್ನು “ಎದೆ ತುಂಬಿ ಹಾಡುವೆನು” ಖ್ಯಾತಿಯ ನದಿರಾ ಭಾನು ಇಂಪಾಗಿ ಹಾಡಿದ್ದಾರೆ.  ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಶಶಿ ಹಾಗೂ ಪಾವನ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೇರಳದ ನಡೆದ ನೈಜಘಟನೆ ಆಧರಿಸಿರುವ ಈ ಚಿತ್ರವನ್ನು ಅನೂಪ್ ಆಂಟೋನಿ (Anoop Antony) ನಿರ್ದೇಶಿಸಿದ್ದಾರೆ. “ಮೆಹಬೂಬ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಹಾಗೂ ಸಂಭಾಷಣೆ ಯನ್ನು ರಘುಶಾಸ್ತ್ರಿ ಅವರೆ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಶಿ, ಪಾವನ ಗೌಡ (Pavana Gowda), ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ಮೆಚ್ಚುಗೆಗೆ ಪಾತ್ರವಾಯ್ತು ಬಿಗ್ ಬಾಸ್ ಶಶಿ ನಟನೆಯ ‘ಮೆಹಬೂಬ’ ಸಿನಿಮಾದ ಹಾಡು

    ಮೆಚ್ಚುಗೆಗೆ ಪಾತ್ರವಾಯ್ತು ಬಿಗ್ ಬಾಸ್ ಶಶಿ ನಟನೆಯ ‘ಮೆಹಬೂಬ’ ಸಿನಿಮಾದ ಹಾಡು

    ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಅವರು ಬರೆದಿರುವ “ದೇವರು ದೇವರು” ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. “ಸರಿಗಮಪ” ಖ್ಯಾತಿಯ ಮನೋಜವಂ ಆತ್ರೇಯ ಸುಮಧುರವಾಗಿ ಹಾಡಿರುವ ಈ ಗೀತೆಗೆ ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಈ ಹಾಡು ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ‌ ಹರಿದು ಬರುತ್ತಿದೆ.

    ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಬಿಗ್ ಬಾಸ್’ ಖ್ಯಾತಿಯ ಶಶಿ ಮದುವೆ ಡೇಟ್ ಫಿಕ್ಸ್: ಹುಡುಗಿ ಇವರೇ

    `ಬಿಗ್ ಬಾಸ್’ ಖ್ಯಾತಿಯ ಶಶಿ ಮದುವೆ ಡೇಟ್ ಫಿಕ್ಸ್: ಹುಡುಗಿ ಇವರೇ

    ನ್ನಡ ಕಿರುತೆರೆಯ ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ಈಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಶಶಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಿಗ್ ಬಾಸ್ ಮನೆಯ ಮಾಡರ್ನ್ ರೈತ ಎಂದೇ ಫೇಮಸ್ ಆಗಿರುವ ಶಶಿಕುಮಾರ್ ಇದೇ ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ. ದೊಡ್ಡಬಳ್ಳಾಪುರದ ವಧು ಸ್ವಾತಿ ಎಂಬುವವರ ಕೈ ಹಿಡಿಯಲಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಕೃಷಿ ಕುಟುಂಬದ ಸ್ವಾತಿ ಅವರ ಜೊತೆ ಶಶಿ ಅವರ ನಿಶ್ಚಿತಾರ್ಥ ನೆರವೇರಿದೆ.

    ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ನೂತನ ತಂತ್ರಜ್ಞಾನ ಉಪಯೋಗಿಸುವಲ್ಲಿ ಮುಂದು. ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾಗಿದ್ದು, ತಮ್ಮ ಮದುವೆಯ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶಶಿ ಈಗ `ಮೆಹಬೂಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಕಾರು ಖರೀದಿಸಿದ ಮಾಡರ್ನ್ ರೈತ ಶಶಿ

    ದುಬಾರಿ ಕಾರು ಖರೀದಿಸಿದ ಮಾಡರ್ನ್ ರೈತ ಶಶಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6ರ ವಿನ್ನರ್ ಶಶಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಸದ್ಯ ಶಶಿ ಪರ್ಚೆಸ್ ಮಾಡಿರುವ ಕಾರಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹೌದು ಬಿಗ್‍ಬಾಸ್ ಸೀಸನ್ 6ರಲ್ಲಿ ಜನಸಾಮಾನ್ಯರಲ್ಲಿ ಒಬ್ಬರಾಗಿ ಶಶಿ ಎಂಟ್ರಿ ಕೊಟ್ಟಿದ್ದರು. ಬಳಿಕ ದೊಡ್ಮನೆ ಮೂಲಕ ಮಾಡರ್ನ್ ರೈತ ಅಂತಾನೆ ಫೇಮಸ್ ಆದ್ರು. ಬಿಗ್‍ಬಾಸ್ ರಿಯಾಲಿಟಿ ಶೋ ನಂತರ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಶಿ ಇದೀಗ ಮಿನಿ ಕೂಪರ್ ಕೆಂಪು ಬಣ್ಣದ ಕಾರನ್ನು ಖರೀದಿಸುವ ಮೂಲಕ ಮತ್ತೆ ಸದ್ದು ಮಡುತ್ತಿದ್ದಾರೆ.

    ಈ ಕುರಿತಂತೆ ಶಶಿ ‘ನನ್ನ ಕನಸಿನ ಕಾರುಗಳಲ್ಲಿ ಒಂದಿರುವ ಮಿನಿ ಕೂಪರ್ ನನ್ನ ಪಾರ್ಕಿಂಗ್ ಸೇರಿದೆ. ನನ್ನ ಮೊದಲ ಕಾರು ಓಮ್ನಿ. ಆದರೀಗ ಕೇವಲ ಮಿನಿ’ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಕಾರಿನ ಮುಂದೆ ನಿಂತು ಫೋಸ್ ಕೊಟ್ಟಿರುವ ಶಶಿ ಸಖತ್ ಹ್ಯಾಂಡ್‍ಸಮ್ ಆಗಿ ಕಾಣಿಸುತ್ತಿದ್ದಾರೆ. ಜೊತೆಗೆ ಶಶಿ ಫೋಟೋಗೆ ಅನೇಕರು ಕಮೆಂಟ್ ಮಾಡುವ ಮೂಲಕ ಶುಭಕೋರಿದ್ದಾರೆ.

     

    View this post on Instagram

     

    A post shared by S H A S H I ???? (@shashi.official)

    ಈ ಮುನ್ನ ಮಾಡರ್ನ್ ರೈತ ಶಶಿ ಸ್ಯಾಂಡಲ್‍ವುಡ್‍ಗೆ ಕೂಡ ಪಾದಾರ್ಪಣೆ ಮಾಡಿದ್ದು, ಮೆಹಬೂಬಾ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಶಿಗೆ ನಾಯಕ ಆಗಿ ಪಾವನಾ ಗೌಡ ಮಿಂಚಿದ್ದಾರೆ. ನಿರ್ದೇಶ ಅನೂಪ್ ಆಂಟೋನಿ ಆ್ಯಕ್ಷನ್ ಕಟ್ ಹೇಳಿದ್ದು, ನಿರ್ಮಾಪಕ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.

  • ಆಧುನಿಕ ರೈತನಿಗೆ ಬಿಗ್‍ಬಾಸ್ ಕಿರೀಟ

    ಆಧುನಿಕ ರೈತನಿಗೆ ಬಿಗ್‍ಬಾಸ್ ಕಿರೀಟ

    ಬೆಂಗಳೂರು: ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನ ತಮ್ಮದಾಗಿಸಿಕೊಂಡರು.

    ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಬಳಿಕ ಮಾತನಾಡಿದ, ಶಶಿ ಇದು ನನ್ನೊಬ್ಬನ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದರು. ನನಗೆ ಬಂದ ಬಹುಮಾನದ ಹಣವನ್ನು ರೈತಾಪಿ ವರ್ಗದ ಕಲ್ಯಾಣಕ್ಕೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮತ್ತು ಬೇಸಾಯದತ್ತ ಯುವಕರನ್ನು ಸೆಳೆಯುವುದಕ್ಕೆ ಬಳಸವುದಾಗಿ ಬಿಗ್‍ಬಾಸ್ ವಿನ್ನರ್ ಘೋಷಿಸಿದರು. ರನ್ನರ್ ಅಪ್ ನವೀನ್ ಸಜ್ಜು ಅವರ ಕನಸನ್ನು ನನಸು ಮಾಡೋದಾಗಿ ಕಿಚ್ಚ ಸುದೀಪ್ ಘೋಷಿಸಿದರು. ನನ್ನ ಕಡೆಯಿಂದ ರನ್ನರ್ ಅಪ್‍ಗೆ ಸ್ಪೆಷಲ್ ಗಿಫ್ಟ್ ಇರೋದಾಗಿ ನಟ ಕಿಚ್ಚ ಸುದೀಪ್ ಭರವಸೆ ನೀಡಿದ್ರು.

    ಸೀಸನ್ -6ರ 12ನೇ ಕಂಟೆಸ್ಟೆಂಟ್ ಆಗಿ ಶಶಿ ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದರು. ಮಾಡರ್ನ್ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್‍ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೋ ಮಾತು ಕೇಳಿ ಬಂದಿತ್ತು. ಅದರಂತೆ ಶಶಿಕುಮಾರ್ ಬಿಗ್‍ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

    ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದ 20 ಮಂದಿಯಲ್ಲಿ ಕೊನೆಗೆ ಮೂವರು ಉಳಿದಿದ್ರು. ಕವಿತಾ ಮೊದಲು ಮನೆಯಿಂದ ಹೊರಬಂದರು. ಶಶಿ, ನವೀನ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಗಾಯಕ ನವೀನ್ ಸಜ್ಜು ಅವರೇ ವಿನ್ ಆಗುತ್ತಾರೆ ಅನ್ನೋ ಅಭಿಪ್ರಾಯ ಬಹುತೇಕರಲ್ಲಿತ್ತು. ಆದ್ರೆ ಅದು ಸುಳ್ಳಾಗಿದೆ. ಮಾಡರ್ನ್ ರೈತ ಶಶಿ ಬಿಗ್‍ಬಾಸ್ ವಿನ್ನರ್ ಆಗಿದ್ದಾರೆ. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಶಶಿ ಬಿಗ್‍ಬಾಸ್ ವಿನ್ನರ್.. ನವೀನ್ ಸಜ್ಜು ಜನರ ದಿಲ್‍ದಾರ್ ಎಂಬ ಡೈಲಾಗ್ ಹೊರಬೀಳುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾಂಡಲ್ ಲೈಟ್ ಡಿನ್ನರ್​ನಲ್ಲಿ ಶಶಿಯಿಂದ ಕವಿತಾಗೆ ಲವ್ ಪ್ರಪೋಸ್

    ಕ್ಯಾಂಡಲ್ ಲೈಟ್ ಡಿನ್ನರ್​ನಲ್ಲಿ ಶಶಿಯಿಂದ ಕವಿತಾಗೆ ಲವ್ ಪ್ರಪೋಸ್

    ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿ ಮುಗಿಯಲು ಇನ್ನೂ ಎರಡು ವಾರಗಳು ಬಾಕಿ ಇದೆ. ಆದರೆ ಈ ವೇಳೆ ಸ್ಪರ್ಧಿ ಕವಿತಾ ಅವರಿಗೆ ರೈತ ಶಶಿಕುಮಾರ್ ಪ್ರಪೋಸ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಈ ವಾರದಲ್ಲಿ ಅತಿಥಿಗಳಾಗಿ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ಮತ್ತು ಸಮೀರ್ ಆಚಾರ್ಯ ಅವರು ಆಗಮಿಸಿದ್ದಾರೆ. ಈ ಹಳೆಯ ಸ್ಪರ್ಧಿಗಳನ್ನು ವಿಶೇಷವಾದ ಕೋಣೆಯಲ್ಲಿರಿಸಿದ್ದು, ಟಿವಿ ಮೂಲಕ ಒಬ್ಬರೊಬ್ಬರನ್ನು ಮಾತಾಡುವ ವ್ಯವಸ್ಥೆ ಮಾಡಲಾಗಿತ್ತು. ಮನೆಗೆ ಆಗಮಿಸಿರುವ ಅತಿಥಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ.

    ಪಪ್ರೋಸ್ ಮಾಡಿದ್ರು:
    ಕವಿತಾ ಮತ್ತು ಶಶಿ ಕ್ಯಾಂಡಲ್ ಲೈಡ್ ಡಿನ್ನರ್ ನಲ್ಲಿದ್ದರು. ಈ ವೇಳೆ ಅತಿಥಿ ಪ್ರಥಮ್ ನಿರಂತರವಾಗಿ ಏನು ಮಾಡಬೇಕು ಎಂಬುದನ್ನು ಕವಿತಾ ಅವರಿಗೆ ಸೂಚನೆ ನೀಡುತ್ತಿದ್ದರು. ಯಾರಿಗೂ ತಿಳಿಯದಂತೆ ಕವಿತಾ ಬಿಗ್‍ಬಾಸ್ ನೀಡಿರುವ ರಹಸ್ಯ ಇಯರ್‍ಫೋನ್ ಧರಿಸಿ ಅದನ್ನು ತಮ್ಮ ಕೂದಲುಗಳಿಂದ ಮರೆಮಾಡಿಕೊಂಡಿದ್ದರು. ಈ ಟಾಸ್ಕ್ ಬಗ್ಗೆ ಶಶಿ ಸೇರಿದಂತೆ ಉಳಿದ ಯಾರಿಗೂ ತಿಳಿದಿರಲಿಲ್ಲ.

    ಡಿನ್ನರ್ ಪಾರ್ಟಿ ಶುರುವಾದ ನಂತರ ಪ್ರಥಮ್ ಹೇಳಿದ ರೀತಿಯೇ ಕವಿತಾ ಮಾತನಾಡತೊಡಗಿದರು. ಮೊದಲಿಗೆ ಚಮಚವನ್ನು ಕೆಳಗೆ ಬೀಳಿಸಿ ಅದನ್ನು ಶಶಿ ಎತ್ತಿಕೊಡುವಾಗ ನಿಮ್ಮಿಬ್ಬರ ಗ್ಲಾಸ್ ಬದಲಾಯಿಸಬೇಕು ಎಂದು ಹೇಳಿದ್ದರು. ಅದೇ ರೀತಿ ಕವಿತಾ ಶಶಿ ಚಮಚ ತೆಗೆದುಕೊಡುವಾಗ ಗ್ಲಾಸ್ ಬದಲಾಯಿಸುತ್ತಾರೆ. ಹೀಗೆ ಕೆಲವು ಸಮಯದವರೆಗೂ ಪ್ರಥಮ್ ಹೇಳಿದ ರೀತಿಯೇ ಕವಿತಾ ಟಾಸ್ಕ್ ಮಾಡಿದ್ದಾರೆ.

    ಪ್ರಥಮ್ ಎದ್ದು ನಿಂತು ಲವ್ ಪ್ರಪೋಸ್ ಮಾಡುವಂತೆ ಕೇಳು ಎಂದು ಕವಿತಾಗೆ ಹೇಳುತ್ತಾರೆ. ಕವಿತಾ ಕೂಡ ಶಶಿಗೆ ಐ ಲವ್ ಯು ಹೇಳುವಂತೆ ಹೇಳುತ್ತಾರೆ. ಆಗ ಶಶಿ ಎದ್ದು ನಿಂತು ಕಣ್ಣು ಮುಚ್ಚಿಕೊಂಡು ಕವಿತಾಗೆ ‘ಐ ಲವ್ ಯು’ ಎಂದು ಪ್ರಪೋಸ್ ಮಾಡುತ್ತಾರೆ. ಹೀಗೆ ಕವಿತಾ ಕೇಳುವ ಎಲ್ಲ ಪ್ರಶ್ನೆಗಳಿಗೂ ಶಶಿ ಉತ್ತರಿಸುತ್ತಾ ಹೋಗಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಶಶಿ ಮತ್ತು ಕವಿತಾ ಡಿನ್ನರ್ ನಲ್ಲಿ ತೊಡಗಿದ್ದರೆ, ಆ್ಯಂಡಿ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ್ಯಂಡಿ ಮಾತ್ರ ಬಾಗಿಲ ಬಳಿ ಬೆಡ್ ಶೀಟ್ ಹೊದ್ದುಕೊಂಡು ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಮನೆಗೆ ಆಗಮಿಸಿದ್ದ ವಿಶೇಷ ಅತಿಥಿಗಳು ಈ ವಾರ ಧನರಾಜ್ ಅವರನ್ನು ಸೇವ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv