ಬಾಲಿವುಡ್ ಬಾದಷಾ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ಸಿನಿಮಾ ಮಾಡತ್ತಾರಂತೆ ಅನ್ನೋ ಸುದ್ದಿ ಚಾಲ್ತಿಯಲ್ಲಿತ್ತು. ಆದರೆ ಅಧಿಕೃತ ಮಾಹಿತಿ ಇರಲಿಲ್ಲ, ಇದೀಗ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ನಟಿಸಲಿದ್ದಾರೆ ಅಂತಾ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.
ಸೋಲಿಲ್ಲದ ಸರದಾರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಚಿತ್ರದಲ್ಲಿ ಶಾರುಖ್ ಖಾನ್ ನಟಿಸೋದು ಖಚಿತ ಅಂತಾ ತಮ್ಮ ಟ್ವಿಟರ್ ಖಾತೆಯ ಮೂಲಕ ಶಾರುಖ್ ಖಾನ್ ತಿಳಿಸಿದ್ದಾರೆ. ಮತ್ತೊಂದು ದೊಡ್ಡ ಸಿನಿಮಾ ಘೋಷಣೆಯಾಗುತ್ತಿದೆ, ಕೊನೆಗೂ ರಾಜ್‌ಕುಮಾರ್ ಹಿರಾನಿ ಜತೆ ಕೆಲಸ ಮಾಡ್ತಿದ್ದೇನೆ ಅಂತಾ ಖುಷಿಯಿಂದ ಟ್ವಿಟ್ ಶಾರುಖ್ ಖಾನ್ ಮಾಡಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್
Dear @RajkumarHirani sir, Aap toh Mere Santa Claus nikle. Aap shuru karo main time pe pahunch jaunga. actually main toh set par hi rehne lagunga. Feeling humbled & excited to finally work with you.Bringing to you all #Dunki in cinemas on 22nd December 2023https://t.co/KIqj8LfJEg
ರಾಜ್‌ಕುಮಾರ್ ಹಿರಾನಿ ನಿರ್ದೇಶನದ `ಡುಂಕಿ’ ಚಿತ್ರದಲ್ಲಿ ಶಾರುಖ್‌ಗೆ ಜೋಡಿಯಾಗಿ ತಾಪ್ಸಿ ಪನ್ನು ನಟಿಸಲಿದ್ದಾರೆ. ಭಿನ್ನ ಕಥೆಯ ಮೂಲಕ ಶಾರುಖ್ ಮತ್ತು ತಾಪ್ಸಿ ಕಮಾಲ್ ಮಾಡಲಿದ್ದು, ಮುಂದಿನ ವರ್ಷ ಡಿಸೆಂಬರ್ 22ಕ್ಕೆ ತೆರೆಗೆ ಅಪ್ಪಳಿಸಲಿದೆ. ಒಟ್ನಲ್ಲಿ ಶಾರುಖ್ ಅಭಿಮಾನಿಗಳು ಈ ಸಿಹಿ ಸುದ್ದಿ ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಉಪನಾಯಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನೂತನವಾಗಿ ಸೇರ್ಪಡೆಗೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಅಲ್ಲದೇ, ಸುಮಾರು ಮೂರು ವರ್ಷ ಕಿಂಗ್ಸ್ ಪಂಜಾಬ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದಾ ಬ್ಯೂಸಿ ಶೆಡ್ಯೂಲ್‌ನಲ್ಲಿರುವ ಕೆ.ಎಲ್.ರಾಹುಲ್ ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್ ಎಂಬ ಟಾಕ್ ಶೋ ನಲ್ಲಿ ತಮ್ಮ ಜೀವನದ ಸಿಹಿ-ಕಹಿ ಅನುಭವಗಳನ್ನು ಹಂಚಿಕೊAಡಿದ್ದಾರೆ. ಕ್ರಿಕೆಟ್ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಜೀನವದಲ್ಲಿ ನಡೆದ ಇಂಟರೆಸ್ಟಿಂಗ್ ಸಂಗತಿಗಳನ್ನು ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಮಾತನಾಡುತ್ತಾ, ಒಂದೊಮ್ಮೆ ನಾನು ನನ್ನ ಅಮ್ಮನನ್ನು ಕೇಳಿದೆ ನನಗೇಕೆ ರಾಹುಲ್ ಎಂದು ಹೆಸರಿಟ್ಟಿದ್ದು? ಅಂತ, ಅದಕ್ಕೆ ನನ್ನಮ್ಮ ಒಂದು ಕಥೆಯನ್ನೇ ಹೇಳಿಬಿಟ್ಟರು. ಅವರು ಶಾರುಖ್ ಖಾನ್‌ಗೆ ದೊಡ್ಡ ಅಭಿಮಾನಿಯಾಗಿದ್ದರಂತೆ, 90ರ ದಶಕದಲ್ಲಿ ಶಾರುಖ್ ಅವರು ನಟಿಸುವ ಸಿನಿಮಾದ ಪಾತ್ರಗಳಿಗೆಲ್ಲ ರಾಹುಲ್ ಹೆಸರೇ ಬಹುತೇಕವಾಗಿ ಇರುತ್ತಿತ್ತಂತೆ. ಹಾಗಾಗಿ ನನಗೂ ಅದೇ ಹೆಸರು ಇಟ್ಟೆವು ಎಂದು ಹೇಳಿದ್ದರು. ನಾನು ಇದು ವಾಸ್ತವವೇ ಇರಬೇಕೆಂದು ನಂಬಿಕೊಂಡಿದ್ದೆ. ಈ ನಡುವೆ ನನ್ನ ಗೆಳೆಯನೊಬ್ಬ ನನ್ನ ಹೆಸರಿನ ಬಗ್ಗೆ ಕೇಳಿದಾಗ ನಾನೂ ಹೀಗೆ ಹೇಳಿದ್ದೆ. ಅವನು ಸ್ವಲ್ಪ ಶಾರುಖ್ ಖಾನ್ ಸಿನಿಮಾಗಳನ್ನೆಲ್ಲ ನೋಡಿಕೊಂಡಿದ್ದಂತೆ ಕಾಣುತ್ತದೆ. ಇದನ್ನೂ ಓದಿ: ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು
ತಕ್ಷಣ ರಾಹುಲ್ ಹೆಸರಿನಲ್ಲಿ ಶಾರೂಖ್ ಪಾತ್ರ ಮಾಡಿದ್ದು 1994ರಲ್ಲಿ, ನೀನು ಹುಟ್ಟಿದ್ದು 1992ರಲ್ಲಿ. ಹೀಗಿದ್ದ ಮೇಲೆ ರಾಹುಲ್ ಹೆಸರನ್ನು ನಿನಗೆ ಇಡಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದ. ನನಗೂ ಅದು ಹೌದೆಂದು ಖಾತ್ರಿಯಾಯಿತು. ಮತ್ತೆ ಅಮ್ಮನಿಗೊಮ್ಮೆ ಕೇಳಿದೆ. ಅದಕ್ಕವರು ಏನೋ ಇರಬಹುದು, ಅದಕ್ಕೆಲ್ಲ ಈಗ ಯಾರು ತಲೆಕೆಡಿಸಿಕೊಳ್ಳುತ್ತಾರೆ? ಎಂದುಬಿಟ್ಟರು. ಇನ್ನು ನಮ್ಮಪ್ಪನಿಗೆ ಕೇಳಿದ್ದಕ್ಕೆ ಅವರು ಇನ್ನೊಂದು ಬ್ರಹ್ಮಾಂಡ ಕಥೆಯನ್ನೇ ಹೇಳಿದರು. ಅವರು ಸುನಿಲ್ ಗಾವಸ್ಕರ್ ಅಭಿಮಾನಿಯಾಗಿದ್ದರಂತೆ. ಗಾವಸ್ಕರ್ ತಮ್ಮ ಪುತ್ರನಿಗೆ ರೋಹನ್ ಎಂದು ಹೆಸರಿಟ್ಟಿದ್ದರು. ಆದ್ದರಿಂದ ನನಗೂ ಅದೇ ಹೆಸರನ್ನಿಡಲು ಅಪ್ಪ ಬಯಸಿದ್ದರಂತೆ. ಆದರೆ ಅವರು ರೋಹನ್ ಹೆಸರನ್ನು ರಾಹುಲ್ ಎಂದು ತಪ್ಪುತಿಳಿದು ಹಾಗೆಯೇ ಇಟ್ಟುಬಿಟ್ಟರಂತೆ ಎಂದು ಮುಗುಳ್ನಕ್ಕರು.
ವಿಜ್ಞಾನ ತೆಗೆದುಕೊಂಡರೆ ಕ್ರಿಕೆಟ್ ಆಡಲು ಕಷ್ಟ
ನನ್ನ ತಂದೆ-ತಾಯಿ ವೃತ್ತಿಯಲ್ಲಿ ಪ್ರೊಫೆಸರ್. ಸಾಲದ್ದಕ್ಕೆ ಕುಟುಂಬದಲ್ಲಿ ಯಾರನ್ನೇ ನೋಡಿದರೂ ಒಂದು ವೈದ್ಯರು, ಇಲ್ಲವೇ ಎಂಜಿನಿಯರ್‌ಗಳಾಗಿದ್ದರು ಅಥವಾ ದೊಡ್ಡದೊಡ್ಡ ಉದ್ಯೋಗದಲ್ಲಿದ್ದರು. ನಾನು ಸಹ 10ನೇ ತರಗತಿಯವರೆಗೆ ಉತ್ತಮ ವಿದ್ಯಾರ್ಥಿಯೇ ಆಗಿದ್ದೆ. ಅದು ಮುಗಿದ ಕೂಡಲೇ ಮುಂದಿನ ಶಿಕ್ಷಣಕ್ಕೆ ವಿಜ್ಞಾನವೋ, ವಾಣಿಜ್ಯವೋ ಎಂಬ ಗೊಂದಲ ಶುರುವಾಗಿತ್ತು. ನನ್ನ ಕುಟುಂಬದಲ್ಲಿ ಯಾರೂ, ಎಂದೂ ವಾಣಿಜ್ಯಶಾಸ್ತ್ರ ತೆಗೆದು ಕೊಂಡಿರಲಿಲ್ಲ. ಆ ವಿಷಯ ತೆಗೆದುಕೊಂಡರೆ ಅವಮಾನವೆಂಬಂತೆ ಅವರು ಭಾವಿಸಿದ್ದರು. ಆದರೆ ನಾನು ಮಾತ್ರ ವಿಜ್ಞಾನ ತೆಗೆದುಕೊಂಡು ಜೊತೆಜೊತೆಗೇ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅವರು ಅದನ್ನು ಅರ್ಥ ಮಾಡಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: IPL ಮೊದಲ ಪಂದ್ಯದಲ್ಲೇ ವಿಲಿಯಮ್ಸನ್‌ಗೆ 12 ಲಕ್ಷ ದಂಡ: ಕಾರಣ ಇಷ್ಟೇ…
ಅಮ್ಮ ಈಗಲೂ ಬೈಯುತ್ತಾರೆ
ನನ್ನಮ್ಮ ಈಗಲೂ ನೀನು ಪದವಿ ಪೂರೈಸಿಲ್ಲ ಎಂದು ಬೈಯ್ಯುತ್ತಾರೆ. ಲಾಕ್‌ಡೌನ್ ಆಗಿದ್ದಾಗಲೂ ನಿನೇಕೆ ಪಟ್ಟು ಹಿಡಿದು ಓದಬಾರದು? 30 ವಿಷಯ ಓದು ಮುಗಿಸಲು ಏನು ಕಷ್ಟ? ಎಂದು ಗರಿದ್ದರು. ಅದಕ್ಕೆ ನಾನು, ಅಮ್ಮ ನಾನು ಕ್ರಿಕೆಟ್ ಆಡುತ್ತಿದ್ದೇನೆ, ಪ್ರದರ್ಶನ ಚೆನ್ನಾಗಿಯೇ ಇದೆ. ಈಗ ನಾನು 30 ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೀಬೇಕಾ? ವಿದ್ಯೆ ನನಗೆ ಅತ್ತುತ್ತಿಲ್ಲ ಏನು ಮಾಡಲಿ ಹೇಳು? ಎಂದು ಪ್ರಶ್ನಿಸಿದ್ದೆ. ಸಹಜವಾಗಿಯೇ ಹೌದೆಂದುಬಿಟ್ಟರು ಅಮ್ಮ. ನಾನು ಭಾರತ ಕ್ರಿಕೆಟ್ ತಂಡಕ್ಕೆ ಸೇರಿದಾಗಲೂ ಅಮ್ಮನಿಗೆ ಹೆಚ್ಚೆನು ಖುಷಿಯಿರಲಿಲ್ಲ. ಅದಾದ 4 ವರ್ಷ ನಾನು ಕ್ರಿಕೆಟ್ ಆಡಿ ಹೆಸರು ಮಾಡಿದ್ದೆ. ಆಮೇಲೆ ನನಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಕೆಲಸ ಸಿಕ್ಕಿತು. ನನಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕಿದ್ದಾಗ ಅವರು ಬಹಳ ಖುಷಿಪಟ್ಟಿದ್ದರು. ಪರ್ವಾಗಿಲ್ಲ ಇನ್ನು ನಿನಗೆ ಒಳ್ಳೆಯ ಸಂಬಳ ಸಿಗುತ್ತದೆ, ಜೀವನದಲ್ಲಿ ಒಂದು ನೆಲೆ ಕಂಡುಕೊಂಡೆ ಎಂಬಂತಿತ್ತು ಅವರ ಭಾವ ಎಂದು ಭಾವುಕರಾದರು.
ಮುಂಬೈ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಶಾರೂಖ್ ಖಾನ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಬಾಲಿವುಡ್ ಬಾದ್‌ಶಾ ಮತ್ತೆ ಸಾಮಾಜಿಕ ಮಾಧ್ಯಮಗಳಿಗೆ ಮರಳಿದ್ದಾರೆ.
ಶಾರೂಖ್ ಖಾನ್ ಬುಧವಾರ ಮಧ್ಯಾಹ್ನ ದೀರ್ಘ ವಿರಾಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೂರದರ್ಶನ ಬ್ರ್ಯಾಂಡ್ ಒಂದರ ಜಾಹೀರಾತು ವೀಡಿಯೋವನ್ನು ಶಾರೂಖ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ
ಟಿವಿ ಜಾಹೀರಾತಿನಲ್ಲಿ ಶಾರೂಖ್ ರೊಂದಿಗೆ ಅವರ ಪತ್ನಿ ಗೌರಿ ಕೂಡಾ ಕಾಣಿಸಿಕೊಂಡಿದ್ದಾರೆ. ನಟ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಮರಳಿ ಬಂದಿರುವುದರಿಂದ ಅವರ ಅಭಿಮಾನಿಗಳು ಶಾರೂಖ್‌ಗೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅವರ ಅಭಿಮಾನಿಗಳು ಹೃದಯ ಎಮೋಜಿಗಳ ಸುರಿಮಳೆ ಹರಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡು ಹಾಲಿಡೇ ಮೂಡಿನಲ್ಲಿ ಜಾನ್ವಿ
ಮುಂಬೈ: ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ (NCB) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಡುಗೆ ಸಿಬ್ಬಂದಿಗೆ ತಾಯಿ ಗೌರಿ ಖಾನ್ ಸೂಚನೆ ನೀಡಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮನ್ನತ್ ನಿವಾಸದಲ್ಲಿ ಖೀರ್ ಮಾಡಲಾಗುತ್ತಿತ್ತು. ಇದನ್ನು ಶಾರೂಖ್ ಖಾನ್ ಪತ್ನಿ ಗೌರಿ ಗಮನಿಸಿದ್ದಾರೆ. ಅಲ್ಲದೆ ಅಡುಗೆ ಸಿಬ್ಬಂದಿಗೆ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಸಿಹಿ ತಿನಿಸು ಮಾಡದಂತೆ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್
ಆರ್ಯನ್ ಖಾನ್ ಜೈಲು ಸೇರಿದ ಮೇಲೆ ಮನ್ನತ್ ನಲ್ಲಿ ಖುಷಿಯ ವಾತಾವರಣ ಇಲ್ಲ. ಅವರು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಗೌರಿ ಹಬ್ಬದ ದಿನಗಳಲ್ಲೂ ಸಿಹಿ ತಿನಿಸು ಮಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್
ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶ ಅಕ್ಟೋಬರ್ 20 ರಂದು ಪ್ರಕಟವಾಗಲಿದೆ.
ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಜೈಲುವಾಸಿಯಾಗಿರುವ ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಎನ್‍ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಕಿಂಗ್ ಖಾನ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದಾರೆ.
ಹೌದು. ಆರ್ಯನ್ ಜೈಲು ಸೇರಿದಾಗಿನಿಂದ ಶಾರೂಖ್ ಮನಸ್ಸಲ್ಲಿ ತಳಮಳ ಶುರುವಾಗಿದೆ. ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರಿಗೆ ಶುರುವಾಗಿದೆ. ಹೀಗಾಗಿ ದಂಪತಿ ಮಗನ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಊಟ- ತಿಂಡಿಯೂ ಇಲ್ಲದಾಗಿದೆ. ಅಲ್ಲದೆ ಪದೇ ಪದೇ ಎನ್‍ಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದು ಎಸ್‍ಆರ್ ಕೆ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ
ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣ ಸಂಬಂಧ ಆರ್ಯನ್ ಖಾನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆರ್ಯನ್ ಖಾನ್ ಬಂಧನದ ಬಳಿಕ ಶಾರುಖ್ ಖಾನ್ ಮತ್ತು ಗೌರಿ ಖಾನ್ ತುಂಬಾ ಬೇಸರಗೊಂಡಿದ್ದಾರೆ. ಈ ಪ್ರಕರಣ ಇಷ್ಟೊಂದು ದೊಡ್ಡದಾಗುತ್ತೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ. ಅಲ್ಲದೆ ಇದೀಗ ಹೇಗಾದರೂ ಮಾಡಿ ಮಗನನ್ನು ಹೊಗಡೆ ಕರೆತರಬೇಕೆಂದು ಶಾರೂಖ್ ದಂಪತಿ ಒದ್ದಾಡುತ್ತಿದ್ದಾರೆ. ಒಟ್ಟಿನಲ್ಲಿ ಪೋಷಕರು ತಮ್ಮ ಮಗನಿಗಾಗಿ ಹಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್
ನಿನ್ನೆ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ನಿನ್ನೆ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ವಿ ಪಾಟೀಲ್ ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ(NCB) ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ.
ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ವಿ ಪಾಟೀಲ್ ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ(NCB) ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ವಾದ ಆರಂಭಿಸಿದ ಎನ್‍ಸಿಬಿ(NCB) ಪರ ವಕೀಲರು, ತನಿಖಾ ವರದಿ ಸಲ್ಲಿಸಲು ಒಂದು ವಾರದ ಸಮಯ ಬೇಕು ಈ ಹಿನ್ನೆಲೆ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆದರೆ ಎನ್‍ಸಿಬಿ(NCB) ವಾದಕ್ಕೆ ಆರ್ಯನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ ಮತ್ತು ವಕೀಲ ಸತೀಶ್ ಮನೇಶಿಂಧೆ ಆಕ್ಷೇಪ ವ್ಯಕ್ತಪಡಿಸಿ, ಒಂದು ವಾರದ ಸಮಯ ಸಾಧ್ಯವಿಲ್ಲ ಕೂಡಲೇ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್
ಆರ್ಯನ್ ಖಾನ್ ಪರ ವಕೀಲರ ಆಕ್ಷೇಪ ಹಿನ್ನೆಲೆ ಕನಿಷ್ಠ ಎರಡು ದಿನಗಳ ಕಾಲಾವಕಾಶ ಬೇಕು .ವಿಚಾರಣೆ ಗುರುವಾರ ನಡೆಸುವಂತೆ ಎನ್‍ಸಿಬಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಎಮ್ ಚಿಮಲ್ಕರ್ ಮನವಿ ಮಾಡಿದರು. ಬಳಿಕ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು ಬುಧವಾರ ಮಧ್ಯಾಹ್ನ ಬಳಿಕ ವಿಚಾರಣೆ ನಡೆಸೋಣ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ಪುತ್ರ ಆರ್ಯನ್ ಜೈಲುಪಾಲು
ವಿಚಾರಣೆ ವೇಳೆ ವಾದ ಮಂಡಿಸಿದ ಆರ್ಯನ್ ಖಾನ್ ಪರ ವಕೀಲರಾದ ಮನೇಶಿಂಧೆ ಮತ್ತು ದೇಸಾಯಿ, ಆರ್ಯನ್ ಖಾನ್ ನಿಂದ ಯಾವುದೇ ಕಾನೂನು ಬಾಹಿರ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಜಾಮೀನು ನೀಡುವುದರಿಂದ ತನಿಖೆಗೆ ತೊಂದರೆಯಾಗುವುದಿಲ್ಲ ಎಂದರು. ಇನ್ನು ಕಳೆದ ಭಾನುವಾರದಿಂದ ಶುಕ್ರವಾರದವರೆಗೂ ಎನ್‍ಸಿಬಿ ಕಡ್ಡಿಯಲ್ಲಿ ಆರ್ಯನ್ ಇದ್ದು ಒಂದೇ ದಿನ ಮಾತ್ರ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು
Drugs-on-cruise case: Special NDPS court in Mumbai to hear accused Aryan Khan and others' bail pleas on Wednesday
ಇದಕ್ಕೆ ಉತ್ತರಿಸಿದ ಎನ್‍ಸಿಬಿ ವಕೀಲರು, ಆರ್ಯನ್ ಖಾನ್ ಪರ ವಕೀಲರ ವಾದವನ್ನು ತಿರಸ್ಕರಿಸಿದರು. ಆರ್ಯನ್ ಖಾನ್ ಸೇರಿ ಇತರೆ ಆರೋಪಿಗಳಿಗೆ ಪ್ರಕರಣದೊಂದಿಗ ನಂಟಿದೆ. ಈ ಹಿನ್ನೆಲೆ ಅವರು ಜಾಮೀನು ನೀಡಬಾರದು. ಅಲ್ಲದೆ ಇದಕ್ಕೂ ಮುನ್ನ ಎಲ್ಲ ಅರ್ಜಿಗಳನ್ನು ಪ್ರತ್ಯೇಕ ವಿಚಾರಣೆ ನಡೆಸಬೇಕು ಎಂದಿದ್ದು ಮತ್ತೊರ್ವ ಆರೋಪಿಯ ಮನವಿಗೂ ಎನ್‍ಸಿಬಿ ವಿರೋಧ ವ್ಯಕ್ತಪಡಿಸಿತು.
ಮುಂಬೈ: ಟ್ರೋಲ್ ಗಳಿಂದ ಬೇಸತ್ತ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್, ಕೆಲ ದಿನಗಳ ಹಿಂದೆ ಅಪ್ಲೋಡ್ ಮಾಡಿಕೊಂಡಿದ್ದ ಫೋಟೋಗಳನ್ನ ಡಿಲೀಟ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಹಾನಾ ಯಾವುದೇ ಸಿನಿಮಾಗಳಲ್ಲಿ ನಟಿಸದಿದ್ರೂ ತಮ್ಮದೇ ಆದ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಹಂಚಿಕೊಳ್ಳುವ ಫೋಟೋಗಳು ಮಿಂಚು ಹರಿಸುತ್ತಿರುತ್ತವೆ. ಇದರ ಜೊತೆಗೆ ಕೆಲವೊಮ್ಮೆ ಫೋಟೋಗಳನ್ನ ಟ್ರೋಲ್‍ಗೆ ಒಳಗಾಗುತ್ತವೆ.
ಸುಹಾನ ಖಾನ್ ಡಿಲೀಟ್ ಮಾಡಿಕೊಂಡಿರುವ ಫೋಟೋಗಳು ಫ್ಯಾನ್ಸ್ ಪೇಜಿನಲ್ಲಿ ನೋಡಬಹುದು. ಕಪ್ಪು ಬಣ್ಣದ ಶಾರ್ಟ್ ಸ್ಕರ್ಟ್ ತೊಟ್ಟು ಸುಹಾನ ಮಿಂಚಿದ್ದಾರೆ. ಅಭಿಮಾನಿಗಳಿಗೆ ಫೋಟೋಗಳು ಇಷ್ಟವಾಗಿದ್ದು, ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲ ಫ್ಯಾನ್ಸ್ ಆದಷ್ಟು ಬೇಗ ಸಿನಿಮಾಗೆ ಬನ್ನಿ ಅಂತ ರಿಕ್ವೆಸ್ಟ್ ಸಹ ಮಾಡಿಕೊಂಡಿದ್ದಾರೆ.
ಈ ಫೋಟೋಗಳನ್ನ ಕೆಲವರು ಅಸಹ್ಯವಾಗಿ ಟ್ರೋಲ್ ಮಾಡಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡು ಫೋಟೋ ಡಿಲೀಟ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ತಮ್ಮ ಬಣ್ಣ, ಬಟ್ಟೆ ಹಾಗೂ ಎತ್ತರದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ನೆಟ್ಟಿಗರ ಚಳಿ ಬಿಡಿಸಿದ್ದರು.
ಮುಂಬೈ: ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ‘ದಿಲ್‍ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ 25 ವರ್ಷವನ್ನ ಪೂರ್ಣಗೊಳಿಸಿದೆ. ಚಿತ್ರದಲ್ಲಿ ನಟಿಸಿದ ಕಲಾವಿದರು ಸೇರಿದಂತೆ ತಂತ್ರಜ್ಞರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಡಿಡಿಎಲ್‍ಜೆ ಇಂದಿಗೂ ಎವರ್ ಗ್ರೀನ್.
ಆರಂಭದಲ್ಲಿ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಿದ್ದ ಶಾರೂಖ್ ಖಾನ್‍ಗೆ ಡಿಡಿಎಲ್‍ಜೆ ಲವರ್ ಬಾಯ್ ಇಮೇಜ್ ನೀಡಿತ್ತು. 90ರ ದಶಕದಲ್ಲಿ ಅದಾಗಲೇ ಸ್ಟಾರ್ ಪಟ್ಟಕ್ಕೇರಿದ್ದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ನಡುವೆ ಶಾರೂಖ್ ಖಾನ್ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದರು. ಡಿಡಿಎಲ್‍ಜೆ ಶಾರೂಖ್ ಕಲ್ಪನೆಗೂ ಊಹಿಸಲಾಗದ ಯಶಸ್ಸನ್ನು ಕಿಂಗ್‍ಖಾನ್‍ಗೆ ನೀಡಿತ್ತು. ಅದರ ಜೊತೆಗೆ ಕಾಜೋಲ್ ತಾವು ಏನು ಎಂಬುದನ್ನ ಡಿಡಿಎಲ್‍ಜೆ ಮೂಲಕ ಸಾಬೀತು ಮಾಡುವ ಮೂಲಕ ಬಾಲಿವುಡ್ ಅಂಗಳದ ಟಾಪ್ ನಟಿಯರ ಪಟ್ಟಕ್ಕೇರಿದರು.
ಇಂದಿನ ಯುವಕರಿಗೆ ಡಿಡಿಎಲ್‍ಜೆ ಪ್ರೇಮಕಥೆ ಇಷ್ಟವಾಗುತ್ತೆ. ಸಿನಿಮಾ ನೋಡುತ್ತಾ ಅವರೊಳಗಿರುವ ಪ್ರೇಮದ ಅಲೆ ಅಪ್ಪಳಿಸುತ್ತೆ. ರಾಜ್ ಮತ್ತು ಸಿಮ್ರನ್ ಪಾತ್ರಗಳಿಗೆ ಜೀವ ತುಂಬಿದ್ದ ಶಾರೂಖ್ ಮತ್ತು ಕಾಜೋಲ್ ನೋಡುಗರಿಗೆ ಹತ್ತಿರವಾಗಿದ್ದರು. ಇಂದಿಗೂ ಚಿತ್ರದ ಹಾಡುಗಳು ಹಚ್ಚ ಹಸಿರಾಗಿವೆ. ಸಿನಿಮಾದಲ್ಲಿ ಶಾರೂಖ್ ಹೇಳುವ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಸದ್ದು ಮಾಡುತ್ತಿವೆ.
ಮೊದಲಿಗೆ ನಿರ್ದೇಶಕ ಆದಿತ್ಯ ಚೋಪ್ರಾ ಕಥೆ ಹೇಳಿದಾಗ ಸಿನಿಮಾದಲ್ಲಿ ನಟಿಸಲು ಶಾರೂಖ್ ಖಾನ್ ಒಪ್ಪಿರಲಿಲ್ಲವಂತೆ. ಪ್ರೀತಿಸಿದ ಯುವತಿಯನ್ನ ಓಡಿಸಿ ಹೋಗಿಕೊಂಡು ಹೋಗುವದರಿಂದ ಮತ್ತೆ ನೆಗೆಟಿವ್ ಶೇಡ್ ಆಗಬಹುದು ಎಂದು ಶಾರೂಖ್ ಸಿನಿಮಾದಲ್ಲಿ ನಟಿಸಲು ಹಿಂಜರಿದ್ದರು. ಶಾರೂಖ್ ಖಾನ್ ಇದಕ್ಕೆ ಸೂಕ್ತ ಎಂದು ನಟ ನಿರ್ಧರಿಸಿದ ಆದಿತ್ಯ ಚೋಪ್ರಾ ಪದೇ ಪದೇ ಕಥೆ ಹೇಳಿದ್ದರು. ಕೊನೆಗೆ ಶಾರೂಖ್ ಒಪ್ಪದಿದ್ರೆ ಸೈಫ್ ಅಲಿ ಖಾನ್ ಆ ಪಾತ್ರಕ್ಕೆ ತರಲು ಆದಿತ್ಯ ಚೋಪ್ರಾ ಮುಂದಾಗಿದ್ದರು ಎಂದು ವರದಿಯಾಗಿದೆ. ಕೊನೆಗೆ ಶಾರೂಖ್ ಪಾತ್ರ ಒಪ್ಪಿ ನಟಿಸಿದ್ದು ಸಿನಿ ಇತಿಹಾಸದ ಪುಟಗಳಲ್ಲಿ ಸೇರಿದೆ.
ಈ ಹಿಂದೆ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದ ಕಾಜೋಲ್, ಕಥೆ ಕೇಳಿದಾಗ ಸಿಮ್ರನ್ ಬೋರಿಂಗ್ ಹುಡುಗಿ ಅನ್ನಿಸಿದಳು. ನಂತರ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಿಮ್ರನ್ ಇರುತ್ತಾಳೆ. ಸಿಮ್ರನ್ ಹೃದಯದ ಮಾತು ಕೇಳುವ ಹುಡಗಿಯಾಗಿದ್ದು, ಸದಾ ಸತ್ಯ ಹೇಳುತ್ತಿದ್ದರಿಂದ ಆಕೆ ನನಗೆ ಇಷ್ಟವಾದಳು ಎಂದು ಹೇಳಿದ್ದರು.
ಕೋಲ್ಕತ್ತಾ: ಬಾಲಿವುಡ್ ಕಿಂಗ್ ಖಾನ್ ಶಾರೂಖ್‍ಗೆ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಸಣ್ಣಮಕ್ಕಳಿಂದ ಹಿಡಿದು ವೃದ್ಧರವರೆಗೂ ಇವರಿಗೆ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟರನ್ನು ಅಭಿಮಾನಿಗಳು ಯಾವತ್ತೂ ತಮ್ಮ ಹೃದಯದಲ್ಲಿಟ್ಟಿರುತ್ತಾರೆ. ಇದಕ್ಕೆ ಶಾರೂಖ್ ಅವರು ಇತ್ತೀಚೆಗೆ ತಮ್ಮ ವಿಶೇಷ ಅಭಿಮಾನಿಯ ಭೇಟಿಯಾದ ಕ್ಷಣ ಪೂರಕವಾಗಿದೆ.
ಹೌದು ಶಾರೂಖ್, ಈಡನ್ ಗಾರ್ಡನ್ ನಲ್ಲಿ ವಿಕಲಚೇತನ ಅಭಿಮಾನಿ ಹರ್ಷಲ್ ಗೋಯೆಂಕಾರನ್ನು ಅಪ್ಪಿಕೊಂಡು ಮುದ್ದಾಡುವ ಮೂಲಕ ನೆರೆದವರ ಗಮನ ಸೆಳೆದಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಹೈದರಾಬಾದ್ ತಂಡದೊಂದಿಗೆ ಶಾರೂಖ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾಚ್ ನಡೆಯುತ್ತಿತ್ತು. ಈ ಮ್ಯಾಚ್ ನೋಡಲು ವಿಶೇಷ ಅಭಿಮಾನಿ ಬಂದಿದ್ದರು. ಅಲ್ಲದೆ ಸ್ಟೇಡಿಯಂ ನಲ್ಲಿ ಶಾರೂಖ್ ನೋಡಲು ವಿಶೇಷ ಅಭಿಮಾನಿ ಕಾದುಕುಳಿತಿದ್ದರು. ಹೀಗಾಗಿ ಆ ಅಭಿಮಾನಿಯ ಆಸೆ ಈಡೇರಿಸಲು ಶಾರೂಖ್ ಭೇಟಿ ಮಾಡಿದ್ದಾರೆ. ಅಲ್ಲದೆ ಅವರನ್ನು ಅಪ್ಪಿಕೊಂಡಿದ್ದಾರೆ. ಅಭಿಮಾನಿಯೂ ಕೂಡ ತನ್ನ ನೆಚ್ಚಿನ ನಟನನ್ನು ಕಂಡು ಖುಷಿಯಲ್ಲಿ ತೇಲಾಡಿದ್ದಾರೆ. ಮಾತ್ರವಲ್ಲದೆ `ಐ ಲವ್ ಯೂ, ಐ ಲವ್ ಯೂ’ ಎಂದು ಮತ್ತೆ ಮತ್ತೆ ಹೇಳಿದ್ದಾರೆ.
ಶಾರೂಖ್ ತನ್ನ ಅಭಿಮಾನಿಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದಂತೆಯೇ ಅಭಿಮಾನಿ ಒಂದು ಬಾರಿ ಏನೂ ಮಾಡಲು ತೋಚದೇ ತಟಸ್ಥರಾದ್ರು. ಶಾರೂಖ್ ಕೆಲಹೊತ್ತು ಅಭಿಮಾನಿ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ತನ್ನ ತಂಡಕ್ಕೆ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.
ಶಾರೂಖ್ ಈ ಹಿಂದೆಯೂ ಇಂತಹ ಹಲವು ಅಭಿಮಾನಿಗಳನ್ನು ಭೇಟಿಯಾಗುವ ಮೂಲಕ ಅವರ ಆಸೆ ಈಡೇರಿಸಿದ್ದರು. ಒಟ್ಟಿನಲ್ಲಿ ಇತ್ತೀಚೆಗೆ ವಿಶೇಷ ಅಭಿಮಾನಿಯನ್ನು ಭೇಟಿ ಮಾಡುವ ಮೂಲಕ ಶಾರೂಖ್ ಇತರ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಅವಘಡವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಹೌದು. ಆನಂದ್ ಎಲ್ ರಾಯ್ ಅವರ ಮುಂದಿನ ಚಿತ್ರವೊಂದರ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಯಾವುದೇ ಗಾಯಗಳಿಲ್ಲದೆ ಶಾರೂಖ್ ಖಾನ್ ಪಾರಾಗಿದ್ದಾರೆ. ಇದರಿಂದ ಶಾರುಖ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಏನಿದು ಘಟನೆ?: ಶಾರೂಖ್ ಖಾನ್ ಅವರು ಶೂಟಿಂಗ್ ಗೆ ಸಿದ್ಧರಾಗಿ ಕುಳಿತಿದ್ದ ವೇಳೆ ಶೂಟಿಂಗ್ ಸೆಟ್‍ನ ಛಾವಣಿ ಅವರ ಬಲಬದಿಯಲ್ಲಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಶಾರುಖ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಇಬ್ಬರು ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸದ್ಯ ಗಾಯಾಳುಗಳು ಸ್ಥಳೀಂiÀi ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಕ್ಷಣವೇ ಡಿಸ್ಚಾರ್ಜ್ ಆಗಿದ್ದಾರೆ.
ಅವಘಡದ ಹಿನ್ನೆಲೆಯಲ್ಲಿ ಶೂಟಿಂಗನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿದ್ದು, ಈ ವಾರಾಂತ್ಯದಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ವರದಿಯಾಗಿದೆ.
ಶಾರೂಖ್ ನಟಿಸುತ್ತಿರುವ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಅಭಿನಯಿಸುತ್ತಿದ್ದಾರೆ. ಶಾರೂಖ್ ಈ ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ನಟಿಸುತ್ತಿದ್ದರೆ, ಅನುಷ್ಕಾ ಬುದ್ಧಿಮಾಂದ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯಶ್ ಚೋಪ್ರಾ ಅವರ `ಜಬ್ ತಕ್ ಹೈ ಜಾನ್’ ಚಿತ್ರದ ಬಳಿಕ ಇದೀಗ ಎರಡನೇ ಬಾರಿ ಶಾರೂಖ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿದ್ದಾರೆ.