ಕಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ನಯನತಾರಾ ಮತ್ತು ವಿಘ್ವೇಶ್ ಶಿವನ್ ಇದೀಗ ಮದುವೆ ಒಂದು ತಿಂಗಳು ಕಳೆದಿದೆ. ಇದೇ ಖುಷಿಯಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಕೂಡ ತಮ್ಮ ಮದುವೆ ಆಲ್ಬಂ ರಿವೀಲ್ ಮಾಡಿದ್ದಾರೆ. ಈ ಜೋಡಿಯ ಮದುವೆಗೆ ಸೂಪರ್ ಸ್ಟಾರ್ಸ್ ದಂಡೇ ಹರಿದು ಬಂದಿತ್ತು. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ವರ್ಷಗಳ ಡೇಟಿಂಗ್ ನಂತರ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 9ರಂದು ಹಸೆಮಣೆ ಏರಿದ್ದರು. ಈ ಮದುವೆಗೆ ಸೌತ್ ಮತ್ತು ಬಾಲಿವುಡ್‌ನ ಸ್ಟಾರ್ಸ್ ಸಾಕ್ಷಿಯಾಗಿದ್ದರು.

ಸೂಪರ್ ಸ್ಟಾರ್ ರಜನೀಕಾಂತ್, ಬಿಟೌನ್ ಬಿಗ್ ಸ್ಟಾರ್ ಶಾರುಖ್ ಖಾನ್, ಮತ್ತು ನಿರ್ದೇಶಕ ಅಟ್ಲೀ ಜತೆಗೆ ಸೌತ್‌ನ ಸ್ಟಾರ್ ಸೂರ್ಯ ದಂಪತಿ, ವಿಜಯ್ ಸೇತುಪತಿ, ಇಳಯರಾಜ ಮದುವೆಗೆ ಹಾಜರಿ ಇದ್ದರು. ಜತೆಗೆ ನವದಂಪತಿಗೆ ರಜನೀಕಾಂತ್ ಸ್ಪೆಷಲ್ ಗಿಫ್ಟ್ ಕೂಡ ನೀಡಿದ್ದರು. ಸದ್ಯ ನಯನತಾರಾ ಮದುವೆಯಲ್ಲಿ ಈ ಎಲ್ಲಾ ಸ್ಟಾರ್‌ಗಳಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಮೊದಲ ತಿಂಗಳ ವಿವಾಹ ಸಂಭ್ರಮ ಆಚರಿಸಿಕೊಂಡ ನಯನತಾರಾ ಮತ್ತು ವಿಘ್ನೇಶ್ ಶಿವನ್
View this post on Instagram
ಇನ್ನು ಮದುವೆ ಆಗಿ ಕೆಲವೇ ದಿನಗಳಲ್ಲಿ ನಯನತಾರಾ ಶಾರುಖ್ ನಟನೆಯ `ಜವಾನ್’ ಶೂಟಿಂಗ್‌ನಲ್ಲಿ ಹಾಜರ್ ಇದ್ದರು. ಹನಿಮೂನ್‌ನಿಂದ ಸೀದಾ `ಜವಾನ್’ ಚಿತ್ರೀಕರಣಕ್ಕೆ ನಯನತಾರಾ ಹಾಜರ್ ಆಗಿದ್ದರು. ಸದ್ಯ ಮದುವೆ ಆಗಿ ಒಂದು ತಿಂಗಳು ಪೂರೈಸಿರುವ ಖುಷಿಯಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]


ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಿರ್ಮಾಣದ `ಡುಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ನೆರವೇರಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದನ್ನೂ ಓದಿ:

ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಜೂನ್ ೯ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಹನಿಮೂನ್‌ಗಾಗಿ ಈ ಜೋಡಿ ವಿದೇಶಕ್ಕೆ ಹಾರಿತ್ತು. ಈಗ ಮತ್ತೆ ಮನೆಗೆ ವಾಪಸ್ ಆಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.







ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.







`ಚಿರು’, `ಪ್ರೇಮ್ ಅಡ್ಡಾ’, `ಗೂಗ್ಲಿ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಕೃತಿ ಈಗ ಬಾಲಿವುಡ್ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜತೆಗೆ ಇದೀಗ ಮಾಲಿವುಡ್ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗೆ `ಗೂಗ್ಲಿ’ ನಟಿ ಕೃತಿ ನೀಡಿದ ಸಂದರ್ಶನವೊಂದರಲ್ಲಿ ನಾನು ಶಾರುಖ್ ಖಾನ್ ಅಭಿಮಾನಿ, ಅವರ ಜತೆ ಚಿತ್ರದಲ್ಲಿ ನಟಿಸಬೇಕು ಎಂಬ ತಮ್ಮ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.




