`ಕಾಂತಾರ’ (Kantara Film) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಸದ್ಯ ಮುಂಬೈಗೆ ಹಾರಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಮನೆ ಮುಂದೆ ಜಮಾಯಿಸಿದ ಜನಸಾಗರ ನೋಡಿ ರಿಷಬ್ ಅಚ್ಚರಿಪಟ್ಟಿದ್ದಾರೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಚಿತ್ರದ ಸಕ್ಸಸ್ ನಂತರ ಸಾಕಷ್ಟು ಕಡೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.

`ಕಾಂತಾರ’ ಚಿತ್ರದ ರಿಲೀಸ್ ಬಳಿಕ ಮುಂಬೈನಲ್ಲಿ ಸಾಕಷ್ಟು ಕಡೆ ಸಂದರ್ಶನ ನೀಡಿದ್ದು, ಈ ವೇಳೆ ಶಾರುಖ್ ಮನೆ ಮುಂದೆ ಜನಸಾಗರ ನೋಡಿ ಅಚ್ಚರಿಪಟ್ಟಿದ್ದೆ ಎಂದಿದ್ದಾರೆ. ಇಲ್ಲಿ ಯಾಕೆ ಇಷ್ಟು ಜನ ಸೇರಿದ್ದಾರೆ ಎಂದು ಸಂದರ್ಶಕನನ್ನು ಈ ಬಗ್ಗೆ ಕೇಳಿದಾಗ, ಇದು ಶಾರುಖ್ ಅವರ ಮನ್ನತ್ ಬಂಗಲೆ ಎಂದು ಉತ್ತರಿಸಿದ್ದಾರೆ. ಬಾದಷಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ದಂಡೇ ಜಮಾಯಿಸಿತ್ತು. ಶಾರುಖ್ ಅವರ ಅಭಿಮಾನಿಗಳ ಅಭಿಮಾನ ಕಂಡು ಅಚ್ಚರಿಪಟ್ಟಿದ್ದೆ ಎಂದು ರಿಷಬ್ ಮಾತನಾಡಿದ್ದಾರೆ.




















ಬಿಟೌನ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಕತ್ರಿನಾ ಕೈಫ್ ಕೈಯಲ್ಲಿ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ಹೊಸ ಪ್ರಾಜೆಕ್ಟ್‌ವೊಂದು ಕತ್ರಿನಾರನ್ನ ಅರಸಿ ಬಂದಿದೆ. ಬಾದಷಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪ್ರಾಜೆಕ್ಟ್‌ನಲ್ಲಿ ಕತ್ರಿನಾ ಕೈಫ್ ಮಿಂಚಲಿದ್ದಾರೆ. ಈ ಕುರಿತು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:
ಬಾದಶಾ ಶಾರುಖ್ ಖಾನ್ ಜತೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಮೋಡಿ ಮಾಡಿದ್ದಾರೆ. ಈಗ ಪಠಾಣ್ ಚಿತ್ರದಲ್ಲೂ ಶಾರುಖ್‌ಗೆ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಚಿತ್ರದಲ್ಲಿನ ದೀಪಿಕಾ ಫಸ್ಟ್ ಲುಕ್ ರಿವೀಲ್ ಆಗಿದ್ದು, ದೀಪಿಕಾ ಎಂದೂ ಕಾಣಿಸಿಕೊಂಡಿರದ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:

ಕಳೆದ ವರ್ಷ ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಅರೆಸ್ಟ್ ಆಗಿದ್ದರು. ಕಾನೂನು ಹೋರಾಟದ ನಂತರ ಎನ್‌ಸಿಬಿ ಕ್ಲಿನ್ ಚೀಟ್ ನೀಡಿತ್ತು. ಇಷ್ಟೇಲ್ಲಾ ಆರ್ಯನ್ ಖಾನ್‌ನ ಡ್ರಗ್ಸ್ ಕೇಸ್‌ನಲ್ಲಿ ಅವಾಂತರ ಆಗಿತ್ತು. ಈ ಕುರಿತು ಶಾರುಖ್ ದಂಪತಿ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆರ್ಯನ್ ಕೇಸ್‌ನ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ `ಕಾಫಿ ವಿತ್ ಕರಣ್’ ಶೋನಲ್ಲಿ ಈ ಕುರಿತು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರಂತೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಅಂತಾ ಶೋ ತೆರೆಯ ಮೇಲೆ ಬರುವವೆರೆಗೂ ಕಾದು ನೋಡಬೇಕಿದೆ.