Tag: sharukh khan

  • ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ಬಾಲಿವುಡ್ (Bollywood) ಬಾದಶಾ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್, ಡ್ರಗ್ಸ್ ಕೇಸ್ ನಂತರ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟಿ ನೋರಾ ಫತೇಹಿ ಜೊತೆಗಿನ ಡೇಟಿಂಗ್ ವಿಷ್ಯವಾಗಿ ಆರ್ಯನ್ ಸುದ್ದಿಯಲ್ಲಿದ್ದರು. ಈಗ ಪಾಕಿಸ್ತಾನ ನಟಿ ಜೊತೆಗಿನ ಫೋಟೋ ವಿಚಾರವಾಗಿ ಆರ್ಯನ್ ಖಾನ್ (Aryan Khan) ಸುದ್ದಿಯಲ್ಲಿದ್ದಾರೆ.

    2023 ಈ ಹೊಸ ವರ್ಷವನ್ನ ಅದ್ದೂರಿಯಾಗಿ ಸ್ವಾಗತಿಸಲು ಆರ್ಯನ್ ಖಾನ್ ಹಾಗೂ ಅವರ ಸಹೋದರಿ ಸುಹಾನಾ ಖಾನ್ (Suhana Khan) ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಕೂಡ ಇದ್ದರು. ಹಾಗಾಗಿ ನೋರಾ ಜೊತೆಗಿನ ಡೇಟಿಂಗ್ ವಿಷ್ಯವಾಗಿ ಆರ್ಯನ್ ಸುದ್ದಿಯಲ್ಲಿದ್ದರು. ಇದೇ ಪಾರ್ಟಿಯಲ್ಲಿ ಪಾಕಿಸ್ತಾನದ ನಟಿ ಸಾದಿಯಾ ಖಾನ್ (Sadia Khan) ಕೂಡ ಭಾಗಿ ಆಗಿದ್ದರು. ಪಾರ್ಟಿಯಲ್ಲಿ ತೆಗೆದ ಆರ್ಯನ್ ಜೊತೆಗಿನ ಫೋಟೋವನ್ನ ಸಾದಿಯಾ ಹಂಚಿಕೊಂಡಿದ್ದಾರೆ.

    ಸಾದಿಯಾ ಅವರು ಇತ್ತೀಚೆಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆರ್ಯನ್ ಖಾನ್ ಜತೆಗಿನ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ಹೊಸವರ್ಷದ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಅಡಿಬರಹ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವರು ಭಾಗಿ ಆಗಿದ್ದರು. ಕರಣ್ ಜೋಹರ್, ನೋರಾ ಮೊದಲಾದವರು ಇದ್ದರು. ನಟಿ ಸಾದಿಯಾ ಅವರು ಹಲವು ಟಿವಿ ಶೋಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಈಗ 35 ವರ್ಷ ವಯಸ್ಸು. ಅವರು 2019ರ ಸೀರಿಯಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವುದೇ ಧಾರಾವಾಹಿಗಳಲ್ಲಿ ನಟಿಸಿಲ್ಲ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಆರ್ಯನ್ ಖಾನ್ ಅವರು ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಶಾರುಖ್ ಖಾನ್ ಒಡೆತನದ `ರೆಡ್ ಚಿಲ್ಲೀಸ್’ ನಿರ್ಮಾಣ ಸಂಸ್ಥೆಯ ಅಡಿ ವೆಬ್ ಸಿರೀಸ್‌ಗೆ ನಿರ್ದೇಶನ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆ ಇಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಿ ಮೊಮ್ಮಗನ ಜೊತೆ ಶಾರುಖ್ ಖಾನ್ ಪುತ್ರಿ ಡೇಟಿಂಗ್

    ಬಿಗ್ ಬಿ ಮೊಮ್ಮಗನ ಜೊತೆ ಶಾರುಖ್ ಖಾನ್ ಪುತ್ರಿ ಡೇಟಿಂಗ್

    ಬಾಲಿವುಡ್ (Bollywood)  ಅಂಗಳದ ಬಿಗ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಜೊತೆ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ (Suhana Khan) ಡೇಟಿಂಗ್ ಮಾಡ್ತಿದ್ದಾರೆ. ಕಳೆದ ಕೆಲ ಸಮಯದಿಂದ ಈ ಸುದ್ದಿ, ಅನೇಕರ ಚರ್ಚೆಗೆ ಗ್ರಾಸವಾಗಿದೆ.

    ಶಾರುಖ್ ಖಾನ್ (Sharukh Khan) ಅವರ ಪುತ್ರಿ ಸುಹಾನಾ ಜೊತೆ ಅಮಿತಾಭ್ ಅವರ ಮೊಮ್ಮಗ ಅಗಸ್ತ್ಯಗೆ ಲವ್ ಆಗಿದೆಯಂತೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಭಾರಿ ಸುದ್ದಿ ಮಾಡ್ತಿದೆ.

    ಇತ್ತೀಚೆಗಷ್ಟೇ ರಣ್‌ಬೀರ್ ಕಪೂರ್ ಅವರ ನ್ಯೂ ಇಯರ್ ಪಾರ್ಟಿಯಲ್ಲಿ ಅಗಸ್ತ್ಯ ನಂದಾ ಸುಹಾನಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುಹಾನಾರನ್ನು ತನ್ನ ಇಡೀ ಕುಟುಂಬಕ್ಕೆ ಅಗಸ್ತ್ಯ ಪರಿಚಯಿಸಿದ್ದರು. ಇದನ್ನೂ ಓದಿ: ಅನಾರೋಗ್ಯದ ನಂತರ ಫಸ್ಟ್ ಟೈಮ್ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಮಂತಾ

    ಇನ್ನೂ `ದಿ ಆರ್ಚೀಸ್’ ಚಿತ್ರದ ಸೆಟ್‌ನಲ್ಲಿ ಸಿನಿಮಾ ಜರ್ನಿ ಜೊತೆ ಲವ್ ಶುರುವಾಗಿದೆ. ಚಿತ್ರೀಕರಣದ ವೇಳೆ ಅಗಸ್ತ್ಯ ಮತ್ತು ಸುಹಾನಾ ನಡುವೆ ಪ್ರೇಮಾಂಕುರವಾಗಿದೆ. ಮಗನ ಪ್ರೀತಿಗೆ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಪಠಾಣ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್

    `ಪಠಾಣ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್

    ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathan) ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸಂಕಷ್ಟ ಎದುರಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ `ಬೇಷರಂ ರಂಗ್’ ಹಾಡಿಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬೆನ್ನಲ್ಲೇ `ಬೇಷರಂ ರಂಗ್’ (Beshramrang) ಹಾಡಿನ ಜೊತೆ ಚಿತ್ರದಲ್ಲಿನ ಅನೇಕ ದೃಶ್ಯಗಳನ್ನ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

    ಶಾರುಖ್, ದೀಪಿಕಾ ಪಡುಕೋಣೆ(Deepika Padukone) ನಟನೆಯ `ಪಠಾಣ್’ (Pathan) ಚಿತ್ರ ರಿಲೀಸ್‌ಗೂ ಮುನ್ನವೇ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದಲ್ಲಿನ ದೀಪಿಕಾ ಕೇಸರಿ ಬಿಕಿನಿ ವಿಚಾರಕ್ಕೆ ಅನೇಕರು ವಿರೋಧಿಸಿದ್ದಾರೆ. ದೀಪಿಕಾ ಅವರ ಬೋಲ್ಡ್ ಲುಕ್ ನೋಡಿದವರೆಲ್ಲಾ, ಇಷ್ಟೊಂದು ಎಕ್ಸ್ಪೋಸ್ ಬೇಕಿರಲಿಲ್ಲ ಎಂದು ತಕರಾರು ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಪಠಾಣ್ ಚಿತ್ರತಂಡಕ್ಕೆ ಶಾಕ್ ಕೊಟ್ಟಿದೆ. `ಬೇಷರಂ ರಂಗ್’ ಹಾಡಿನ ಜೊತೆ ಚಿತ್ರದಲ್ಲಿನ ಹಲವು ದೃಶ್ಯಗಳನ್ನ ತೆಗೆಯಲು ಸೆನ್ಸಾರ್ ಮಂಡಳಿಯ ಅಧ್ಯಕ್ಷರು ಪ್ರಸೂನ್ ಜೋಶಿ ಹೇಳಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಕಟ್ಟುನಿಟ್ಟಾಗಿ ಚಿತ್ರತಂಡಕ್ಕೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಸಿದ್ಧಾರ್ಥ್ ಆನಂದ್ (Siddarth) ನಿರ್ದೇಶನದ `ಪಠಾಣ್’ ಜನವರಿ 25ರಂದು ತೆರೆಗೆ ಬರಲಿದೆ. ರಿಲೀಸ್‌ಗೂ ಮುನ್ನ ಚಿತ್ರದಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಸಿನಿಮಾಗೆ ಸೆನ್ಸಾರ್ ಪತ್ರ ಕೂಡ ಸಿಗುವುದು ತಡವಾಗಲಿದೆ.

    ಇನ್ನೂ ಶಾರುಖ್ ಖಾನ್ ಅವರ ಕಮ್‌ಬ್ಯಾಕ್ ಚಿತ್ರವಾಗಿರುವ ಕಾರಣ, ಚಿತ್ರದ ಬಗ್ಗೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಬಾದಷಾ ಶಾರುಖ್ ನಟನೆಯ `ಪಠಾಣ್’ (Pathan) ಮುಂದಿನ ಜನವರಿಗೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹುಟ್ಟು ಹಾಕಿದೆ. ಇನ್ನೂ ದೀಪಿಕಾ (Deepika Padukone) ಕೇಸರಿ ಬಿಕಿನಿ ವಿವಾದ, ಸಿನಿಮಾ ಬ್ಯಾನ್ (Ban) ವಿಷ್ಯವಾಗಿ ದಾದಾ ಫಾಲ್ಕೆ ಪುರಸ್ಕೃತ ನಟಿ ಆಶಾ ಪರೇಖ್ ಮಾತನಾಡಿದ್ದಾರೆ.

    ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಕೇಸರಿ ಬಿಕಿನಿ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. `ಪಠಾಣ್’ (Pathan) ಚಿತ್ರದ ಹಾಡಿನಲ್ಲಿ ನಟಿ ದೀಪಿಕಾ ಸಖತ್ ಹಾಟ್ ಆಗಿ ಮೈಚಳಿ ಬಿಟ್ಟು ಶಾರುಖ್‌ ಜೊತೆ ಸೊಂಟ ಬಳುಕಿಸಿದ್ದಾರೆ. ʻಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಕುರಿತಾಗಿ ಈ ಚಿತ್ರವನ್ನೇ ನಿಷೇಧಿಸಬೇಕು ಎಂಬ ಕೆಲ ಮಾತುಗಳು ಸಹ ಕೇಳಿ ಬಂದಿದ್ದವು. ಸದ್ಯ ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ (Asha Parekh) ಮಾತನಾಡಿದ್ದಾರೆ. ಪಠಾಣ್‌ ಪರ ಹಿರಿಯ ನಟಿ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಆಶಾ ಪರೇಖ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ `ಬೇಷರಂ ರಂಗ್’ ಹಾಡಿನ ಕುರಿತಾಗಿ ಕೇಳಲಾಗಿದೆ. ಈ ಬಗ್ಗೆ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಮೂಲ ಉದ್ದೇಶ ಮನರಂಜನೆ ನೀಡುವುದಾಗಿದೆ. ದೀಪಿಕಾ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ. ದೀಪಿಕಾ ಬಿಕಿನಿ ಧರಿಸಿರೋದು ಅವರ ಸಮಸ್ಯೆಯಲ್ಲ. ಕೇಸರಿ ಬಣ್ಣ ಇರೋದು ಹಲವರ ಸಮಸ್ಯೆ. ನಮ್ಮ ಯೋಚನೆ ಸಂಕುಚಿತ ಸ್ವಭಾವದಿಂದ ಇದೆ. ನಾವು ಯೋಚಿಸುವ ರೀತಿ ಬದಲಾಗಬೇಕಿದೆ. ಈ ಮೂಲಕ ಬಾಲಿವುಡ್‌ನ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ನಟಿ ಆಶಾ ಮಾತನಾಡಿದ್ದಾರೆ. ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಹಿಂದಿ ಚಿತ್ರರಂಗ ಸೋಲುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

    ಸದ್ಯ ಚಿತ್ರರಂಗದಲ್ಲಿ ಪರಿಸ್ಥಿತಿ ಈಗಾಗಲೇ ತುಂಬಾ ಕೆಟ್ಟಿದೆ. ಸಿನಿಮಾ ನಿಷೇಧ ಮಾಡಿದ್ದರೆ ಉದ್ಯಮವೇ ಕೊನೆಗೊಳ್ಳುತ್ತದೆ. ಮುಂದೆ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದಿಲ್ಲ. ಸಿನಿಮಾಗಳು ವಿಫಲವಾಗುತ್ತಲೇ ಇದ್ದರೆ, ಇನ್ನೊಂದು ಚಿತ್ರ ಹೇಗೆ ನಿರ್ಮಾಣವಾಗುತ್ತದೆ ಎಂದು ಹಿರಿಯ ನಟಿ ಆಶಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಯಶ್ ಇಸ್ ವಾವ್’ ಎಂದ ಶಾರುಖ್ ಖಾನ್ ರಿಯಾಕ್ಷನ್‌ಗೆ ಯಶ್ ಫ್ಯಾನ್ಸ್ ಫಿದಾ

    `ಯಶ್ ಇಸ್ ವಾವ್’ ಎಂದ ಶಾರುಖ್ ಖಾನ್ ರಿಯಾಕ್ಷನ್‌ಗೆ ಯಶ್ ಫ್ಯಾನ್ಸ್ ಫಿದಾ

    ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ಸೌಂಡ್ ಮಾಡುತ್ತಿರುವ ವಿಚಾರ ಅಂದರೆ ದೀಪಿಕಾ (Deepika Padukone) ಬಿಕಿನಿ ವಿವಾದ. ಇದರ ಮಧ್ಯೆ ಕಿಂಗ್ ಖಾನ್ ಶಾರುಖ್ (Sharukh Khan), ಅಭಿಮಾನಿಗಳ ಜೊತೆ ಟ್ವಿಟರ್ ಸಂವಾದ ನಡೆಸಿದ್ದಾರೆ. ಈ ವೇಳೆ `ಕೆಜಿಎಫ್ 2′ ಸ್ಟಾರ್ ಯಶ್ ಬಗ್ಗೆ ಶಾರುಖ್‌ಗೆ ಪ್ರಶ್ನೆ ಕೇಳಿದ್ದಾರೆ. ಕಿಂಗ್ ಖಾನ್ ಕಡೆಯಿಂದ ಬಂದ ರಿಯಾಕ್ಷನ್ ಕೇಳಿ, ಯಶ್ (Yash) ಫುಲ್ ಖುಷಿಪಟ್ಟಿದ್ದಾರೆ.

    `ಕೆಜಿಎಫ್ 2′ (Kgf 2) ನಂತರ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚ್ತಿರುವ ಯಶ್‌ಗೆ ಇದೀಗ ಶಾರುಖ್ ಖಾನ್ (Sharukh Khan) ಬಹುಪರಾಕ್ ಎಂದಿದ್ದಾರೆ. `ಪಠಾಣ್’ (Pathan) ಚಿತ್ರದ ವಿವಾದ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಅಭಿಮಾನಿಗಳ ಜೊತೆ ʻಆಸ್ಕ್ ಮಿ ಎನಿಥಿಂಗ್ʼ ಅಂತಾ ಸಂವಾದ ನಡೆಸಿದ್ದಾರೆ. ಅಭಿಮಾನಿಗಳ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಅಭಿಮಾನಿಯೊಬ್ಬ `ಕೆಜಿಎಫ್ 2′ ಸಿನಿಮಾ ನೋಡಿದ್ದೀರಾ. ಯಶ್ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ಕಿಂಗ್ ಖಾನ್ `ಯಶ್’ ಈಸ್ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ: ಜನವರಿ 8ಕ್ಕೆ ಯಶ್ ಹೊಸ ಯೋಜನೆ ಘೋಷಣೆ

    ಇನ್ನೂ ಸಾಕಷ್ಟು ಕಡೆ ಯಶ್‌ಗೆ ನಿಮಗೆ, ಸಿನಿಮಾಗೆ ಪ್ರೇರಣೆ ಯಾರು ಎಂದಾಗ ,ಶಾರುಖ್ ಖಾನ್ ಎಂದು ಹಲವು ಸಂದರ್ಶನಗಳಲ್ಲಿ ಯಶ್‌ ಹೇಳಿದ್ದರು. ತನ್ನ ಆರಾಧ್ಯ ನಟನಿಂದಲೇ ಮೆಚ್ಚುಗೆ ಪಡೆದಿರುವ ಯಶ್‌ಗೆ, ಇದಕ್ಕಿಂತ ಇನ್ನೇನು ಬೇಕು ಎಂದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ದೀಪಿಕಾ ಕೇಸರಿ ವಿವಾದ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ(Deepika Padukone) ಪರ ರಮ್ಯಾ (Ramya)  ಬೆಂಬಲಕ್ಕೆ ನಿಂತಿದ್ದರು. ಇದೀಗ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ (Nusrat Jahan) ಕೂಡ ದೀಪಿಕಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಹಿಜಬ್ ಧರಿಸಿದ್ರು ಸಮಸ್ಯೆ, ಬಿಕಿನಿ ಧರಿಸಿದ್ರು ಸಹಿಸಲ್ಲ ಎಂದು ಹೇಳುವ ಮೂಲಕ ಪಠಾಣ್‌ಗೆ (Pathan) ನುಸ್ರತ್ ಬೆಂಬಲ ಸೂಚಿಸಿದ್ದಾರೆ.

    ‌ʻಪಠಾಣ್ʼ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಕೇಸರಿ ಬಣ್ಣ ಬಿಕಿನಿ ಧರಿಸಿ, ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಕುರಿತು ಕಳೆದ ನಾಲ್ಕೈದು ದಿನಗಳಿಂದ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೀಪಿಕಾ ಕೇಸರಿ ಬಿಕಿನಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ನುಸ್ರತ್ ಕೂಡ ಚಿತ್ರತಂಡದ ಪರ ನಿಂತಿದ್ದಾರೆ. ಇದನ್ನೂ ಓದಿ: ಐಶ್ವರ್ಯ ರೈ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿದ ವಿದೇಶಿಗರು ಅಂದರ್

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದು ಯಾರ ಸಿದ್ಧಾಂತದ ಬಗ್ಗೆ ಅಲ್ಲ. ಇದು ಅಧಿಕಾರದಲ್ಲಿರುವ ಒಂದು ಪಕ್ಷದ ಜನರ ಗುಂಪಿನವರು ಮಾಡುತ್ತಿರುವ ಯೋಜಿತ ಪಿತ್ತೂರಿ. ಇಲ್ಲಿ ಅವರು ಏನು ಮಾಡಲು ಹೋರಟಿದ್ದಾರೆ, ಈ ವಿಚಾರದಲ್ಲಿ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ತರುತ್ತಿದ್ದಾರೆ. ಇದಕ್ಕೆ ಬಿಜೆಪಿ (Bjp) ಸರ್ಕಾರದ ಬೆಂಬಲ ಇದೆ. ಇಲ್ಲಿ ಮಹಿಳೆಯರು ಬಿಕಿನಿ ಧರಿಸಿದರು ಸಮಸ್ಯೆ, ಹಿಜಬ್ ಧರಿಸಿದರು ಸಮಸ್ಯೆ, ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

    ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರು. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ಮಹಿಳೆಯರ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ನುಸ್ರತ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ

    ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ

    ಮೋಹಕತಾರೆ ರಮ್ಯಾ (Ramya) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಅಭಿಪ್ರಾಯ, ಫೋಟೋಗಳನ್ನ ಶೇರ್ ಮಾಡುವ ಮೂಲಕ ಆಕ್ಟೀವ್ ಆಗಿದ್ದಾರೆ. ಇನ್ನೂ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿರುವ ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ, ದೀಪಿಕಾ(Deepika Padukone) ಪರ ನಟಿ ರಮ್ಯಾ ಧ್ವನಿ ಎತ್ತಿದ್ದಾರೆ. ಈ ಮೂಲಕ ದೀಪಿಕಾ ಪಡುಕೋಣೆ ಪರ ರಮ್ಯಾ ಬ್ಯಾಟಿಂಗ್ ಮಾಡಿದ್ದಾರೆ. ದೀಪಿಕಾ ಕೇಸರಿ ಬಿಕಿನಿ ವಿವಾದಕ್ಕೆ ರಮ್ಯಾ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ವಿಚಾರ `ಪಠಾಣ್’ (Pathan) ಸಿನಿಮಾದ `ಬೇಷರಂ ರಂಗ್’ ಹಾಡಿನ ಕಾಂಟ್ರವರ್ಸಿಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಈ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದಾರೆ ಎಂದು ಹಲವರ ವಿರೋಧದಕ್ಕೆ ಕಾರಣವಾಗಿತ್ತು. ನಾಲ್ಕೈದು ದಿನಗಳಿಂದ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದೀಗ ಈ ವಿಚಾರವಾಗಿ ದೀಪಿಕಾ ಪರ ರಮ್ಯಾ ನಿಂತಿದ್ದಾರೆ. ʻಪಠಾಣ್ʼ ನಟಿಯ ಪರವಾಗಿ ರಮ್ಯಾ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ:ದೀಪಿಕಾ ಕೇಸರಿ ಬಿಕಿನಿ ವಿವಾದ : ಅಖಾಡಕ್ಕಿಳಿದ ನಟ ಚೇತನ್

    ಡಿವೋರ್ಸ್ ವಿಚಾರಕ್ಕೆ ಸಮಂತಾ ಟ್ರೋಲ್, ತಮ್ಮ ಅಭಿಪ್ರಾಯ ಹೇಳಿದ್ದಕ್ಕೆ ಸಾಯಿಪಲ್ಲವಿ, ಪ್ರೀತಿಸಿ ಬೇರೆಯಾಗಿದ್ದಕ್ಕೆ ರಶ್ಮಿಕಾ, ಬಟ್ಟೆ ವಿಚಾರಕ್ಕೆ ದೀಪಿಕಾರನ್ನು ಟ್ರೋಲ್ ಮಾಡಲಾಗಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ದೀಪಿಕಾ ಪರ ರಮ್ಯಾ ಬ್ಯಾಟಿಂಗ್‌ ಮಾಡಿದ್ದಾರೆ.

    ಆಯ್ಕೆಯ ಸ್ವಾತಂತ್ರ‍್ಯ ನಮ್ಮ ಮೂಲಭೂತ ಹಕ್ಕಾಗಿದೆ. ಮಹಿಳೆಯರು ತಾಯಿ ದುರ್ಗೆಯ ಮೂರ್ತರೂಪವಾಗಿದ್ದಾರೆ. ಸ್ತ್ರೀದ್ವೇಷವು ನಾವು ಹೋರಾಡಬೇಕಾದ ದುಷ್ಟತನವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಸ್ತ್ರೀ ದ್ವೇಷಿಗಳ ವಿರುದ್ಧ ನಟಿ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಉದ್ಯಮ ಕ್ಷೇತ್ರದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ಹೊಸ ಉದ್ಯಮ ಕ್ಷೇತ್ರದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ಬಾಲಿವುಡ್‌ನ (Bollywood) ಕಿಂಗ್ ಖಾನ್ ಶಾರುಖ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಹೊಸ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶನ ಮಾಡುವುದಾಗಿ ಆರ್ಯನ್ ಗುಡ್ ನ್ಯೂಸ್ ಕೊಟ್ಟಿದ್ದರು. ಈ ಬೆನ್ನಲ್ಲೇ ಗೆಳೆಯರೊಟ್ಟಿಗೆ ಸೇರಿ ಹೊಸ ಉದ್ಯಮದತ್ತ ಆರ್ಯನ್ ಮುಖ ಮಾಡಿದ್ದಾರೆ.

    ಡ್ರಗ್ಸ್ ಪ್ರಕರಣದ ನಂತರ ಬಹುತೇಕ ಸೈಲೆಂಟ್ ಆಗಿದ್ದ ಆರ್ಯನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ನಿರ್ದೇಶನ (Direction) ಕ್ಷೇತ್ರದಲ್ಲಿ ಕಾಲಿಟ್ಟ ಬೆನ್ನಲ್ಲೇ ವೋಡ್ಕಾ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಆರ್ಯನ್ ಖಾನ್ ಹಾಗೂ ಇನ್ನು ಕೆಲವರು ಸೇರಿಕೊಂಡು ಐಶಾರಾಮಿ ಫ್ಯಾಷನ್ ಬ್ರ‍್ಯಾಂಡ್ ಮತ್ತು ವೋಡ್ಕಾ ಬ್ರ‍್ಯಾಂಡ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ. ‘ಡಿ’ಯಾವೋಲ್’ ಹೆಸರಿನ ಬ್ರ‍್ಯಾಂಡ್ ಅನ್ನು ಆರ್ಯನ್ ಖಾನ್ ಹಾಗೂ ಗೆಳೆಯರು ಹೊರತಂದಿದ್ದು, ಈ ಬ್ರ‍್ಯಾಂಡ್ ಮೂಲಕ ಉತ್ತಮ ಗುಣಮಟ್ಟದ ಮದ್ಯ ವೋಡ್ಕಾ ಸೇರಿದಂತೆ ಇನ್ನೂ ಹಲವು ಫ್ಯಾಷನ್ ಸಾಮಗ್ರಿಗಳನ್ನು ಆರ್ಯನ್ ಮಾರಾಟ ಮಾಡಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಜೊತೆ ಡೇಟ್‌ಗೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದ ನಟ ವಿಶಾಲ್

     

    View this post on Instagram

     

    A post shared by Aryan Khan (@___aryan___)

    ಆರ್ಯನ್ ಮದ್ಯ ಮಾರಾಟ ಮಾಡುತ್ತಿರೋದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಆಗಿ ಮದ್ಯ ಮಾರಾಟ ಮಾಡೋದು ತಪ್ಪು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರ್ದೇಶನದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ನಿರ್ದೇಶನದತ್ತ ಶಾರುಖ್ ಪುತ್ರ ಆರ್ಯನ್ ಖಾನ್

    ಬಾಲಿವುಡ್ ಬಾದಷಾ ಶಾರುಖ್ ಖಾನ್ ಪುತ್ರ ಚಿತ್ರರಂಗಕ್ಕೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಆದರೆ ನಟನಾಗಿ ಅಲ್ಲ, ನಿರ್ದೇಶಕನಾಗಿ ಎಂಬುದು ವಿಶೇಷ. ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿರುವ ಆರ್ಯನ್ , ತಮ್ಮ ಸಿನಿಮಾ ಕುರಿತ ಅಪ್‌ಡೇಟ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಶಾರುಖ್ ಖಾನ್ ಸಾಧನೆ ಅಪಾರ. ಸಾಕಷ್ಟು ಸಿನಿಮಾಗಳ ಮೂಲಕ ನಟ ಶಾರುಖ್ ಖಾನ್ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗೆ ಶಾರುಖ್ ಪುತ್ರಿ ಸುಹಾನಾ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಗ ಆರ್ಯನ್ ಕೂಡ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ನಿರ್ದೇಶಕನಾಗಿ ಆರ್ಯನ್ ಖಾನ್ ಬರುತ್ತಿದ್ದಾರೆ. ಇದನ್ನೂ ಓದಿ: ಬೆಚ್ಚಿ ಬೀಳುವಂತಿದೆ ನಟ ಪ್ರೇಮ್‌ ಪುತ್ರಿಯ ಮೊದಲ ಚಿತ್ರದ ಸಂಭಾವನೆ

    ರೆಡ್ ಚಿಲ್ಲರ್ಸ್‌ ಎಂಟರ್‌ರ್ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಣದ ಹೊಸ ಚಿತ್ರಕ್ಕೆ ಆರ್ಯನ್ ಖಾನ್ ಡೈರೆಕ್ಷನ್ ಮಾಡ್ತಿದ್ದಾರೆ. ಮಗನ ಮೊದಲ ಹೆಜ್ಜೆಗೆ ಶಾರುಖ್ ದಂಪತಿ ಕೂಡ ಶುಭ ಹಾರೈಸಿದ್ದಾರೆ. ಆ್ಯಕ್ಷನ್ ಕಟ್ ಹೇಳಲು ಕಾಯ್ತಿದ್ದೇನೆ ಎಂದು ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಚೊಚ್ಚಲ ಸಿನಿಮಾ, ಯಾವ ನಟನಿಗೆ ನಿರ್ದೇಶನ ಮಾಡ್ತಿದ್ದಾರೆ ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲ.

     

    View this post on Instagram

     

    A post shared by Aryan Khan (@___aryan___)

    ನಿರ್ದೇಶಕನಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿರುವ ಶಾರುಖ್ ಪುತ್ರನಿಗೆ ಫ್ಯಾನ್ಸ್, ಚಿತ್ರರಂಗದ ಸ್ನೇಹಿತರು ಶುಭಹಾರೈಸಿದ್ದಾರೆ. ನಿರ್ದೇಶಕನಾಗಿ ಅದೆಷ್ಟರ ಮಟ್ಟಿಗೆ ಆರ್ಯನ್ ಕಮಾಲ್‌ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಾದಷಾ ಶಾರುಖ್ ಖಾನ್ ನಿವಾಸದ ಗೇಟ್‌ಗೆ ವಜ್ರದ ಅಲಂಕಾರ

    ಬಾದಷಾ ಶಾರುಖ್ ಖಾನ್ ನಿವಾಸದ ಗೇಟ್‌ಗೆ ವಜ್ರದ ಅಲಂಕಾರ

    ಬಾಲಿವುಡ್ ಬಾದಷಾ ಶಾರುಖ್ ಖಾನ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ನೆಚ್ಚಿನ ನಟ ಹುಟ್ಟುಹಬ್ಬವನ್ನ ಮನೆಯ ಹಬ್ಬ ಎಂಬಂತೆ ಅಪಾರ ಅಭಿಮಾನಿಗಳು ಜಮಾಯಿಸುತ್ತಾರೆ. ಇದೀಗ ಶಾರುಖ್ ಮುಂಬೈನ ಮನ್ನತ್ ಮನೆಗೆ ವಜ್ರದ ಅಲಂಕಾರ ಮಾಡಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.

    ಬಿಟೌನ್‌ನ ಎವರ್‌ಗ್ರೀನ್ ನಟ ಶಾರುಖ್ ನಟನೆಯ ಸಿನಿಮಾಗಳನ್ನ ಕಾದು ನೋಡುವ ಅಭಿಮಾನಿಗಳಿದ್ದಾರೆ. ಇನ್ನೂ ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ಮನೆ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಕಿಂಗ್ ಖಾನ್ ಅವರ ಮನ್ನತ್ ನಿವಾಸಕ್ಕೆ ವಿಶೇಷ ಆಕರ್ಷಣೆ ಇದೆ. ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲದ ಶಾರುಖ್ ಮನೆಗೆ ಆಗಾಗ ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿ ಮಾಡುತ್ತಾರೆ. ಈಗ ಶಾರುಖ್ ಖಾನ್ ಮನೆ ಬಗ್ಗೆ ಹೊಸ ಅಪ್‌ಡೇಟ್ ಕೇಳಿಬಂದಿದೆ. ಮನ್ನತ್ ನಿವಾಸದ ಗೇಟಿಗೆ ವಜ್ರದ ಅಲಂಕಾರ ಮಾಡಲಾಗಿದೆ. ಅದರ ಫೋಟೋಗಳು ಕೂಡ ವೈರಲ್ ಆಗಿವೆ. ಇದನ್ನೂ ಓದಿ:ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಶಾರುಖ್ ಖಾನ್ ಅವರ ಫ್ಯಾನ್ ಪೇಜ್‌ಗಳಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಕಿಂಗ್ ಖಾನ್ ನಿವಾಸದ ಮುಖ್ಯ ದ್ವಾರದಲ್ಲಿ ಮನ್ನತ್ ಎಂದು ನೇಮ್ ಪ್ಲೇಟ್ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ. ವಜ್ರದ ನೇಮ್‌ಪ್ಲೇಟ್ ಹೊಂದಿರುವ ಕಾರಣದಿಂದ ಮನ್ನತ್ ಈಗ ಮತ್ತಷ್ಟು ಹೈಲೈಟ್ ಆಗಿ ಕಾಣುತ್ತಿದೆ.

    Live Tv
    [brid partner=56869869 player=32851 video=960834 autoplay=true]