`ಪಠಾಣ್’ (Pathaan) ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ಶಾರುಖ್‌ಗೆ(Sharukh Khan) ಇದೀಗ ಗೆಲುವಿನ ಸರದಾರ ಶಿವರಾಜ್‌ಕುಮಾರ್ (Shivarajkumar) ಸಾಥ್ ನೀಡುತ್ತಿದ್ದಾರೆ. ಬಾಲಿವುಡ್ (Bollywood) ಎಸ್‌ಆರ್‌ಕೆ ಜೊತೆ ಸ್ಯಾಂಡಲ್‌ವುಡ್ ಎಸ್‌ಆರ್‌ಕೆ ಜೊತೆಯಾಗುತ್ತಿದ್ದಾರೆ. ಇಂತಹದೊಂದು ಸುದ್ದಿ ಸಿನಿನಗರಿಯಲ್ಲಿ ಹರಿದಾಡುತ್ತಿದೆ.

ಶಾರುಖ್ ಖಾನ್ ಸದ್ಯ `ಜವಾನ್’ (Jawan) ಪ್ರಾಜೆಕ್ಟ್ ಕಡೆ ಗಮನ ಕೊಡುತ್ತಿದ್ದಾರೆ. `ಪಠಾಣ್’ ಚಿತ್ರದ ಸಕ್ಸಸ್ ನಂತರ ಜವಾನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಜವಾನ್ ಚಿತ್ರದ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. `ಜವಾನ್’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂಟ್ರಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

ಗೌರಿ ಖಾನ್ (Gowri Khan Productions) ನಿರ್ಮಾಣದ ಈ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರನ್ನ ಈ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿ ಇರಲಿದೆ. ಜವಾನ್‌ಗೆ ನಾಯಕಿಯಾಗಿ ನಯನತಾರಾ (Nayanatara) ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದಿಂದ ಸೆಂಚುರಿ ಸ್ಟಾರ್ ಶಿವಣ್ಣಗೆ (Shivanna) ಚಿತ್ರದಲ್ಲಿ ನಟಿಸಲು ಶಾರುಖ್ ಟೀಂ ಅಪ್ರೋಚ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಶಿವಣ್ಣ ರಜನೀಕಾಂತ್ (Rajanikanth) ಜೊತೆ `ಜೈಲರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಶಿವಣ್ಣ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಶಾರುಖ್ ಖಾನ್ ಚಿತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಧಿಕೃತ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.






`ಪಠಾಣ್’ (Pathan) ಸಿನಿಮಾದ ಗೆಲುವಿನಿಂದ ಬಾಲಿವುಡ್‌ಗೆ ಹೊಸ ಶಕ್ತಿ ನೀಡಿತ್ತು. ಪಠಾಣ್‌ಗೆ ಸಲ್ಮಾನ್ ಎಂಟ್ರಿಯಿಂದ ಚಿತ್ರಕ್ಕೆ ತೂಕ ಹೆಚ್ಚಿಸಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾದಲ್ಲಿ ಕಮಾಲ್ ಮಾಡಿತ್ತು. ಇದೀಗ ಮತ್ತೆ ಈ ಖಿಲಾಡಿ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ:
ಸಲ್ಮಾನ್ ಖಾನ್-ಕತ್ರಿನಾ ಕೈಫ್ (Katrina Kaif) ನಟನೆಯ ಬಹುನಿರೀಕ್ಷಿತ ಸಿನಿಮಾ `ಟೈಗರ್ 3′ ಸಿನಿಮಾದಲ್ಲಿ `ಪಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಮೇಜರ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. `ಟೈಗರ್ 3′ (Tiger-3)ಅಡ್ಡಾಗೆ ಶಾರುಖ್ ಎಂಟ್ರಿಯಾಗುತ್ತಿದೆ. ಸಿನಿಮಾದಲ್ಲಿ ಶಾರುಖ್ ಎಂಟ್ರಿಯಿಂದ ಬಿಗ್ ಟ್ವಿಸ್ಟ್ ಸಿಗಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.



ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ (Sharukh Khan) ಅವರು ಈಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಾವು ಬಾಕ್ಸಾಫೀಸ್ ಸುಲ್ತಾನ ಎಂಬುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾಗೆ ಮೊದಲ ದಿನ ನಿರೀಕ್ಷೆಗೂ ಮೀರಿ ಕಲೆಕ್ಷನ್ ಆಗಿದೆ. ಮೊದಲ ದಿನ ಯಶ್ ನಟನೆಯ `ಕೆಜಿಎಫ್ 2′ (Kgf 2) ಚಿತ್ರದ ಹಿಂದಿ ವರ್ಷನ್ ಮೊದಲ ದಿನ ಮಾಡಿದ್ದ ದಾಖಲೆಯನ್ನು ಈಗ `ಪಠಾಣ್’ ಸಿನಿಮಾ ಮುರಿದಿದೆ. `ಪಠಾಣ್’ ಚಿತ್ರದ ಫಸ್ಟ್ ಡೇ ಮತ್ತು ಎರಡನೇ ದಿನ ಕಲೆಕ್ಷನ್ ಸೇರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.




