Tag: sharukh khan

  • ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಅವರು ಪಠಾಣ್ (Pathaan) ಸಿನಿಮಾದ ಸೂಪರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ‘ಪಠಾಣ್’ ಹೀರೋ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರೀಕರಣವೊಂದರಲ್ಲಿ ಶಾರುಖ್ ಖಾನ್‌ಗೆ ಏಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ‘ಪಠಾಣ್’ ಸಿನಿಮಾದ ಸಕ್ಸಸ್ ನಂತರ ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ಸಿನಿಮಾದ ರಿಲೀಸ್‌ಗೆ ಎದುರು ನೋಡ್ತಿರೋ ಅಭಿಮಾನಿಗಳಿಗೆ ಇದೀಗ ಶಾರುಖ್ ಬಗ್ಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಶೂಟಿಂಗ್ ಸಂದರ್ಭದಲ್ಲಿ ಶಾರುಖ್ ಖಾನ್ ಮೂಗಿದೆ (Injury) ಏಟಾಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು, ಹೇಗೆ.? ಇದನ್ನೂ ಓದಿ:ನಟಿ ಅನು ಗೌಡ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

    ಶಾರುಖ್ ಖಾನ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ವೊಂದಕ್ಕಾಗಿ ನಟ ಭಾಗಿಯಾಗಿದ್ದರು. ಲಾಸ್ ಏಂಜಲೀಸ್‌ನಲ್ಲಿ ಶಾರುಖ್ ಚಿತ್ರೀಕರಣದಲ್ಲಿದ್ದಾಗ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ. ಕೂಡಲೇ ನಟನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತಚಿಕಿತ್ಸೆಯನ್ನು ಮಾಡಿದ್ದಾರೆ. ಯಾವುದೇ ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಬ್ಯಾಂಡೇಜ್‌ವೊಂದನ್ನ ಮೂಗಿಗೆ ಸುತ್ತಿ ಕಳುಹಿಸಿದ್ದಾರೆ. ಸದ್ಯ ಶಾರುಖ್ ಖಾನ್ ತಮ್ಮ ಮುಂಬೈ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

    ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

    ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಮತ್ತೆ ಶಾರುಖ್ ಖಾನ್ (Sharukh Khan) ಜೊತೆ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಹಿಂದೆ ʻಚೆನ್ನೈ ಎಕ್ಸಪ್ರೆಸ್’ (Chennai Express) ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದ ನಟಿ ಮತ್ತೆ ಶಾರುಖ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ.

    ಪ್ಯಾನ್ ಇಂಡಿಯಾ ನಟಿಯಾಗಿ ಪ್ರಿಯಾಮಣಿ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ನಟನೆಯ ‘ಜವಾನ್’ (Jawan) ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಬಗ್ಗೆ ನಟಿ ಕೂಡ ಖುಷಿಯಿಂದ ರಿಯಾಕ್ಟ್ ಮಾಡಿದ್ದಾರೆ.‌ ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮಲ್ಟಿ ಸ್ಟಾರ್ಸ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈಗ ಪ್ರಿಯಾಮಣಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ 1,2,3,4 ಎಂಬ ಹಾಡಿಗೆ ಶಾರುಖ್ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈಗ ಮತ್ತೆ ಶಾರುಖ್- ಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ‘ಜವಾನ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದೇನೆ ಎಂಬ ಬಗ್ಗೆ ಖುಷಿಯಿದೆ. ಈ ಚಿತ್ರವನ್ನು ಜನ ಯಾವಾಗ ನೋಡ್ತಾರೋ ಅಂತಾ ನಾನು ಕಾಯ್ತಿದ್ದೀನಿ. ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡುವುದು ಮ್ಯಾಜಿಕಲ್ ಅನುಭವ. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಖುಷಿಯ ವಿಚಾರ ಎಂದು ಮಾತನಾಡಿದ್ದಾರೆ.

    ನಾನು ಸೆಟ್‌ಗೆ ಬರುವಾಗ ಅವರಿಗೆ ನಾನು ನೆನಪಿರುತ್ತೇನಾ ಎಂಬ ಗೊಂದಲವಿತ್ತು. ಅವರು ನೆನಪಿಟ್ಟುಕೊಂಡು ಮಾತನಾಡಿದ ರೀತಿ ಖುಷಿಯಾಯ್ತು. ಈ ಹಿಂದೆ ಸಿನಿಮಾವೊಂದಕ್ಕಾಗಿ ಕೇವಲ ಒಂದು ಸಾಂಗ್‌ನಲ್ಲಿ ಶಾರುಖ್ ಜೊತೆ ನಟಿಸಿದ್ದೇ. ಈಗ ಮತ್ತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ. ಜವಾನ್‌ನಲ್ಲಿ ಪ್ರಿಯಾಮಣಿ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ನಟಿ ಗುಟ್ಟು ಬಿಟ್ಟು ಕೊಟ್ಟಿಲ್ಲ.

  • ಕನ್ನಡ ವರ್ಷನ್‌ನಲ್ಲಿ ರಿಲೀಸ್ ಮಾಡಲು ನಿರ್ಲಕ್ಷಿಸಿದ ‘ಜವಾನ್’ ಸಿನಿಮಾ ವಿರುದ್ಧ ಕನ್ನಡಿಗರು ಗರಂ

    ಕನ್ನಡ ವರ್ಷನ್‌ನಲ್ಲಿ ರಿಲೀಸ್ ಮಾಡಲು ನಿರ್ಲಕ್ಷಿಸಿದ ‘ಜವಾನ್’ ಸಿನಿಮಾ ವಿರುದ್ಧ ಕನ್ನಡಿಗರು ಗರಂ

    ‘ಪಠಾಣ್’ (Pathaan) ಸೂಪರ್ ಸಕ್ಸಸ್ ಬಳಿಕ ‘ಜವಾನ್’ (Jawan) ಆಗಿ ಶಾರುಖ್ ಖಾನ್ ಬರುತ್ತಿದ್ದಾರೆ. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಜವಾನ್ ಚಿತ್ರ ಕನ್ನಡದಲ್ಲಿ (Kannada) ಮಾತ್ರ ರಿಲೀಸ್ ಆಗುತ್ತಿಲ್ಲ. ಇದೀಗ ಈ  ಬಗ್ಗೆ ಫ್ಯಾನ್ಸ್ (Fans) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಜವಾನ್‌ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕತ್ರಿನಾ ದಂಪತಿ? ನಟಿ ಸ್ಪಷ್ಟನೆ

    ಶಾರುಖ್, ನಯನತಾರಾ (Nayanatara) ನಟನೆಯ ‘ಜವಾನ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ‘ಜವಾನ್’ ಸಿನಿಮಾವು ಸೆಪ್ಟೆಂಬರ್ ಏಳನೇ 7ರಂದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮಲಯಾಳಂ- ಕನ್ನಡ ಭಾಷೆಗಳಲ್ಲಿ ಜವಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

    ಸಿನಿಮಾ ಮತ್ತೆ ಮುಂದಕ್ಕೆ ಹೋಗಿದ್ದಕ್ಕೆ ಶಾರುಖ್ ಖಾನ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. 100-200 ರೂ. ಹೆಚ್ಚು ಹಣ ತೆಗೆದುಕೊಳ್ಳಿ ಆದರೆ ಸಿನಿಮಾವನ್ನು ನಾಳೆಯೇ ಬಿಡುಗಡೆ ಮಾಡಿ ಎಂದು ಶಾರುಖ್ ಖಾನ್‌ಗೆ ಟ್ವೀಟ್ ಮಾಡಿರುವ ಅಭಿಮಾನಿ ಒಬ್ಬರಿಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, 100-200 ರುಪಾಯಿಗೆ ಒಟಿಟಿ ಸಬ್‌ಸ್ಕ್ರಿಪ್ಷನ್ ಬರುವುದಿಲ್ಲ, ಇನ್ನು ನಿನಗೆ ಪೂರ್ತಿ ಸಿನಿಮಾ ನೀಡಬೇಕಾ ಎಂದು ಅಭಿಮಾನಿಯ ಕಾಲೆಳೆದಿದ್ದಾರೆ. ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಡಬ್ ಮಾಡದೇ ಇರುವ ಬಗ್ಗೆಯೂ ನೆಟ್ಟಿಗರು ಕಿಡಿಕಾರಿದ್ದಾರೆ. ಎರಡೂ ಭಾಷೆಗಳನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಕನ್ನಡದಲ್ಲಿಯೂ(Kannada) ಸಿನಿಮಾವನ್ನು ಡಬ್ (Dub)ಮಾಡುವಂತೆ ಕೆಲವರು ಮನವಿ ಮಾಡಿದ್ದಾರೆ. ಫ್ಯಾನ್ಸ್ ಮನವಿಗೆ ಚಿತ್ರತಂಡ ಓಕೆ ಹೇಳ್ತಾರಾ ಎಂದು ಕಾದುನೋಡಬೇಕಿದೆ.

    ಅಟ್ಲಿ ನಿರ್ದೇಶನದ ಜವಾನ್‌ನಲ್ಲಿ ಶಾರುಖ್ ಖಾನ್, ನಯನತಾರಾ, ಹಾಸ್ಯ ನಟ ಯೋಗಿ ಬಾಬು ನಟಿಸಿದ್ದಾರೆ. ತಮಿಳಿನ ಸ್ಟಾರ್ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  • ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್- ನಟನ ವರ್ತನೆಗೆ ಫ್ಯಾನ್ಸ್ ಕಿಡಿ

    ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್- ನಟನ ವರ್ತನೆಗೆ ಫ್ಯಾನ್ಸ್ ಕಿಡಿ

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಈ ವರ್ಷದ ಆರಂಭದಲ್ಲಿಯೇ ‘ಪಠಾಣ್’ (Pathaan) ಸಿನಿಮಾಗೆ ಬಿಗ್ ಓಪನಿಂಗ್ಸ್ ಸಿಕ್ತು. ಚಿತ್ರದ ಸಕ್ಸಸ್ ಖುಷಿಯಲ್ಲಿ ಶಾರುಖ್ ತೇಲುತ್ತಿದ್ದಾರೆ. ಹೀಗಿರುವಾಗ ‘ಪಠಾಣ್’ ಸ್ಟಾರ್ ಶಾರುಖ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ತಳ್ಳಿದ ಶಾರುಖ್ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ.

    ಸಿದ್ಧಾರ್ಥ್ ಆನಂದ್ (Siddarth Anand) ನಿರ್ದೇಶನದ ‘ಪಠಾಣ್’ ಚಿತ್ರ ಈ ವರ್ಷ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗೆದ್ದು ಬೀಗಿದೆ. ಶಾರುಖ್- ದೀಪಿಕಾ ಪಡುಕೋಣೆ (Deepika Padukone) ಜೋಡಿ, ಸಿನಿಮಾ ಕಥೆ, ಆ್ಯಕ್ಷನ್ ಎಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಈ ಚಿತ್ರದ ಸಕ್ಸಸ್‌ ಶಾರುಖ್‌ ವರ್ತನೆಗೆ ಫ್ಯಾನ್ಸ್‌ ಕಿಡಿಕಾರಿದ್ದಾರೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ‘ಡುಂಕಿ'(Dunki) ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ತೆರಳಿದ್ದ ಶಾರುಖ್ ಮುಂಬೈಗೆ (Mumbai) ವಾಪಸ್ ಆಗಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮ್ಯಾನೆಜರ್ ಪೂಜಾ (Pooja)  ಶಾರುಖ್ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಶಾರುಖ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಶಾರುಖ್‌ಗೆ ಕೋಪ ಬಂದಿದೆ. ಮೊಬೈಲ್ ಹಿಡಿದು ತಮ್ಮ ಕಡೆ ಬಂದ ಅಭಿಮಾನಿಯನ್ನು ಶಾರುಖ್ ತಳ್ಳಿದ್ದಾರೆ. ಅಲ್ಲದೇ ಒಂದು ಕ್ಷಣ ಹಿಂದಕ್ಕೆ ತಿರುಗಿ ನೋಡಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಈ ವೀಡಿಯೋ ಸೆರೆಯಾಗಿದೆ.

     

    View this post on Instagram

     

    A post shared by @varindertchawla

    ಅಭಿಮಾನಿಯನ್ನು ತಳ್ಳಿರೋದ್ದಕ್ಕೆ ಶಾರುಖ್ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ. ‘ಪಠಾಣ್’ ಸಕ್ಸಸ್ ಆಗಿದ್ದಕ್ಕೆ ಶಾರುಖ್‌ಗೆ ಸೊಕ್ಕು ಬಂದಿದೆ. ಸಿನಿಮಾ ಮಾಡುವಾಗ ಫ್ಯಾನ್ಸ್ ಬೇಕು, ಸಿನಿಮಾ ಗೆದ್ದರೆ ಫ್ಯಾನ್ಸ್ ಬೇಡ ಎಂದರೆ ಹೇಗೆ ಎಂದು ಶಾರುಖ್‌ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

    ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿರುವಾಗಲೇ ಶಾರುಖ್ ಖಾನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಿನಿಮಾ ಸಕ್ಸಸ್ ಕಾಣದೇ ಬೆಸತ್ತ ಶಾರುಖ್‌ಗೆ ‘ಪಠಾಣ್’ ಸಿನಿಮಾದಿಂದ ಮರುಜೀವ ಸಿಕ್ಕಿದೆ. ಇದೀಗ ‘ಜವಾನ್’ (Jawan) ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

    ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು ಪ್ರಚಾರ ಕಾರ್ಯ ಮಾಡಲಿದ್ದಾರೆ.

    ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ (Nayanatara) ನಟಿಸಿದ್ದಾರೆ. ಹಾಸ್ಯ ನಟ ಯೋಗಿ ಬಾಬು ಕೂಡ ಸಿನಿಮಾದ ಭಾಗವಾಗಿದ್ದಾರೆ. ತಮಿಳಿನ ಸ್ಟಾರ್ ವಿಜಯ್ (Vijay) ಕೂಡ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇಬ್ಬರ ಜುಗಲ್‌ಬಂದಿ ನೋಡಲು ಜೂನ್ 2ರವರೆಗೂ ಕಾದುನೋಡಬೇಕಿದೆ.

  • ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ಮೆರಿಕದ ಟೈಮ್ಸ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮತ್ತು ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಸೇರಿಕೊಂಡಿದ್ದಾರೆ. ಇದನ್ನೂ ಓದಿ:Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

    ರಾಜಮೌಳಿ- ಶಾರುಖ್ ಖಾನ್ ತಮ್ಮ ಕ್ಷೇತ್ರದಲ್ಲಿ ಸಕ್ಸಸ್ ಕಂಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ RRR ಚಿತ್ರದಿಂದ ರಾಜಮೌಳಿ ಗೆದ್ದು ಬೀಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ (Times Magazine) 2023ನೇ ಸಾಲಿನ ಪ್ರಭಾವಿಗಳ ಪಟ್ಟಿಯಲ್ಲಿ ರಾಜಮೌಳಿ- ಶಾರುಖ್ ಖಾನ್ ಹೆಸರು ಇದೆ. ಇದರಿಂದ ಭಾರತ ಹೆಮ್ಮೆ ಪಡುವಂತೆ ಆಗಿದೆ.

    RRR ಸಿನಿಮಾ ರಿಲೀಸ್ ಆಗಿ ಸುಮಾರು ಒಂದು ವರ್ಷದ ಬಳಿಕ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಸಿಕ್ಕಿತು. ಈ ಮೂಲಕ ರಾಜಮೌಳಿ ಹೆಸರು ವಿಶ್ವಾದ್ಯಂತ ಹಬ್ಬಿತು. ಶಾರುಖ್ ಖಾನ್ ಅವರ ‘ಪಠಾಣ್’ (Pathaan) ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡಿತು. ಸತತ ಸೋಲು ಕಂಡಿದ್ದ ಶಾರುಖ್ ಅವರು ಈ ಚಿತ್ರದಿಂದ ಗೆದ್ದರು. ಶಾರುಖ್ ಖ್ಯಾತಿ ಹೆಚ್ಚಿತು. ಈಗ ಅವರ ಮುಂದಿನ ಚಿತ್ರ ಜವಾನ್, ಡಂಕಿ ಬಗ್ಗೆಯೂ ನಿರೀಕ್ಷೆ ಇದೆ. ಈ ಎಲ್ಲಾ ಕಾರಣದಿಂದ ಪ್ರಭಾವಿಗಳ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದಾರೆ.

    ಸೋಷಿಯಲ್ ಮೀಡಿಯಾ ಖ್ಯಾತಿ, ಚಿತ್ರರಂಗಕ್ಕೆ ಅವರ ಕೊಡುಗೆ, ಅವರ ಟ್ಯಾಲೆಂಟ್, ಕಠಿಣ ಪರಿಶ್ರಮ ಮೊದಲಾದ ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಸದ್ಯ ರಾಜಮೌಳಿ- ಶಾರುಖ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  • ʻಪಠಾಣ್‌ʼ ಸಕ್ಸಸ್‌ ನಂತರ ದುಬಾರಿ ಕಾರು ಖರೀದಿಸಿದ ಶಾರುಖ್‌ ಖಾನ್‌

    ʻಪಠಾಣ್‌ʼ ಸಕ್ಸಸ್‌ ನಂತರ ದುಬಾರಿ ಕಾರು ಖರೀದಿಸಿದ ಶಾರುಖ್‌ ಖಾನ್‌

    ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ `ಪಠಾಣ್’ (Pathaan)  ಚಿತ್ರದ ಸೂಪರ್ ಸಕ್ಸಸ್ ನಂತರ ಇದೀಗ ದುಬಾರಿ ಕಾರೊಂದನ್ನ ಖರೀದಿಸಿದ್ದಾರೆ. ಈ ಮೂಲಕ ಬಾದಶಾ ಸುದ್ದಿಯಲ್ಲಿದ್ದಾರೆ. ಸದ್ಯ ಕಾರ್ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ನಟನೆಯ `ಪಠಾಣ್’ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸಿನಿಮಾ ಕಥೆ ಮತ್ತು ಆ್ಯಕ್ಷನ್ ಸೀಕ್ವೆನ್ಸ್‌ ಫ್ಯಾನ್ಸ್ ಫಿದಾ ಆಗಿದ್ದಾರೆ. `ಪಠಾಣ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ. ಬಾಚಿದೆ.

    ಈ ಸಕ್ಸಸ್ ಬೆನ್ನಲ್ಲೇ ಶಾರುಖ್ ಖಾನ್ ಹೊಸ ಕಾರು ಖರೀದಿಸಿದ್ದಾರೆ. ಶಾರುಖ್ ಮನೆ ಮನ್ನತ್‌ನಲ್ಲಿ ಕಳೆದೆರಡು ದಿನಗಳಿಂದ ಹೊಸ ಕಾರು ರೌಂಡ್ ಹೊಡಿತಿದೆ. ಶಾರುಖ್ ಬಿಳಿ ಬಣ್ಣದ Rolls Royce Cullinan Black Badge ಕಾರಿನ ಒಡೆಯನಾಗಿದ್ಧಾರೆ. ಈ ಕಾರಿನ ಬೆಲೆ ಅಂದಾಜು 10 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಭಾನುವಾರ ಕಿಂಗ್ ಖಾನ್ ಹೊಸ ಕಾರಿನಲ್ಲಿ ಸುತ್ತಾಡಲು ತೆರಳಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗ್ತಿದೆ. ಕೆಲ ದಿನಗಳ ಹಿಂದೆ ಬಾಲಿವುಡ್ ಬಾದಶಾ 5 ಕೋಟಿ ರೂ. ಬೆಲೆ ವಾಚ್ ಧರಿಸಿ ಗಮನ ಸೆಳೆದಿದ್ದರು.

    `ಪಠಾಣ್’ ಸಿನಿಮಾ ಸಕ್ಸಸ್ ನಂತರ `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ (Sharukh Khan) ಬ್ಯುಸಿಯಾಗಿದ್ದಾರೆ. ನಯನತಾರಾ (Nayanatara) ಜೊತೆ ಶಾರುಖ್ ರೊಮ್ಯಾನ್ಸ್ ಮಾಡಲಿದ್ದಾರೆ.

  • ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಫ್ಯಾಮಿಲಿ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ ಗೌರಿ ಖಾನ್

    ಬಾಲಿವುಡ್ (Bollywood) ಬಾದಷಾ ಶಾರುಖ್ ಖಾನ್ (Sharukh Khan) ಸದ್ಯ ‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಪತ್ನಿ ಬಿಟೌನ್ ನಿರ್ಮಾಪಕಿ- ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಗೌರಿ ಖಾನ್ (Gauri Khan) ತಮ್ಮ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

    ಶಾರುಖ್‌ಗೆ ಶಕ್ತಿಯಾಗಿ ಪತ್ನಿ ಗೌರಿ ಖಾನ್ ಕೂಡ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ‘ಮೈ ಲೈಫ್ ಇಸ್ ಡಿಸೈನ್’ ಎಂಬ ಪುಸ್ತಕವನ್ನು ಗೌರಿ ಘೋಷಿಸಿದ್ದರು. ಈಗ ಕುಟುಂಬದ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Gauri Khan (@gaurikhan)

    ಶಾರುಖ್- ಪತ್ನಿ ಗೌರಿ ಖಾನ್ ಮೂವರು ಮಕ್ಕಳು ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಐವರು ಕ್ಯಾಮೆರಾ ಕಣ್ಣಿಗೆ ಚೆಂದದ ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಆಗ್ತಿದಂತೆ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿಪಟ್ಟಿದ್ದಾರೆ.

    ಇನ್ನೂ ‘ಪಠಾಣ್’ ಸಕ್ಸಸ್ ನಂತರ ಶಾರುಖ್ ‘ಜವಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  • ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಪುತ್ರಿ ಸುಹಾನಾ

    ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಪುತ್ರಿ ಸುಹಾನಾ

    ಬಾಲಿವುಡ್ (Bollywood) ನಟ ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ (Suhana Khan) ನಟನಾ ಕ್ಷೇತ್ರಕ್ಕೆ ಕಾಲಿಟ್ಟಾಗಿದೆ. ಶಾರುಖ್ ಪುತ್ರಿ ಎಂಬ ಕಾರಣಕ್ಕೆ ಸುಹಾನಾರನ್ನ ಫಾಲೋ ಮಾಡುವ ಹಿಂಬಾಲಕರಿದ್ದಾರೆ. ಸಿನಿಮಾ ಜೊತೆಗೆ ಆಗಾಗ ಹಾಟ್ ಫೋಟೋಶೂಟ್ ಮೂಲಕ ಮಿಂಚ್ತಿರುತ್ತಾರೆ. ಇದೀಗ ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

    ಜೋಯಾ ಅಖ್ತರ್ ನಿರ್ದೇಶನದ `ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದೆ.  ಬಾಲಿವುಡ್‌ನಲ್ಲಿ ನಾಯಕಿಯಾಗಿ ನೆಲೆಗಿಟ್ಟಿಸಿಕೊಳ್ಳಲು ಸುಹಾನಾ ಸಖತ್ ತಯಾರಿ ಮಾಡ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಸಹಾಯ ನೆನೆದ ಡೇನಿಯಲ್ ಬಾಲಾಜಿ

     

    View this post on Instagram

     

    A post shared by Suhana Khan (@suhanakhan2)

    ಬಿಳಿ ಬಣ್ಣದ ಟಾಪ್‌ನಲ್ಲಿ ಸುಹಾನಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮೂಲಕ ನಟಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶಾರುಖ್ ಪುತ್ರಿ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Suhana Khan (@suhanakhan2)

    ಸುಹಾನಾಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ 32 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಮೊದಲ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಮೆರಿಕಾದಲ್ಲೇ ನಟಿ ಸೆಟಲ್ ಆಗಿದ್ದಾರೆ. ಹೀಗಿರುವಾಗ ಹಾಲಿವುಡ್ (Hollywood) ಎಂಟ್ರಿಯ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

    ಪ್ರಿಯಾಂಕಾ ನಟನೆಯ ಹಾಲಿವುಡ್‌ನ `ಸಿಟಾಡೆಲ್’ (Citadel) ಸಿನಿಮಾ ಮುಂದಿನ ಏಪ್ರಿಲ್ 28ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇದೀಗ ತಮ್ಮ ಸಿಟಾಡೆಲ್ ವೆಬ್ ಸರಣಿ ಬಗ್ಗೆ ಮಾತನಾಡಿದ್ದಾರೆ.  ಶಾರುಖ್ ಖಾನ್‌ (Sharukh Khan) ಹಾಲಿವುಡ್‌ ಎಂಟ್ರಿ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಾಯಿತು. ಶಾರುಖ್ ಈ ಹಿಂದೆ ತಾನು ಯಾಕೆ ಹಾಲಿವುಡ್‌ಗೆ ಹೋಗಲ್ಲ ಎಂದು ಬಹಿರಂಗಪಡಿಸಿದ್ದರು. ಹಾಲಿವುಡ್‌ಗೆ ಹೋಗುವ ಪ್ರಶ್ನೆ ಮಾಡಿದ್ದಕ್ಕೆ ಶಾರುಖ್, ನಾನೇಕೆ ಅಲ್ಲಿಗೆ ಹೋಗಬೇಕು. ನಾನು ಇಲ್ಲೇ ಆರಾಮಾಗಿ ಇದ್ದೀನಿ ಎಂದು ಹೇಳಿದರು. ಶಾರುಖ್ ಮಾತನ್ನು ಉಲ್ಲೇಖಿಸಿ ಪ್ರಿಯಾಂಕಾ ಅವರಿಗೆ ಪ್ರಶ್ನೆ ಮಾಡಲಾಯಿತು. ಉತ್ತರ ನೀಡಿದ ಪ್ರಿಯಾಂಕಾ ತನಗೆ ಆರಾಮಾಗಿ ಇರುವುದು ಬೋರಿಂಗ್ ಎಂದು ಹೇಳಿದ್ದಾರೆ.

    ಆರಾಮಾಗಿ ಇರುವುದು ನನಗೆ ಬೋರ್ ಆಗಿದೆ. ಹಾಗಂತ ನಾನು ಅಹಂಕಾರಿಯಲ್ಲ. ನಾನು ಸೆಟ್‌ಗೆ ಕಾಲಿಟ್ಟಾಗ ಏನು ಮಾಡುತ್ತೇನೆ ಎಂದು ಅರಿವಿದೆ. ನನಗೆ ಆತ್ಮವಿಶ್ವಾಸವಿದೆ. ನಾನು ಈಗಲೂ ಆಡಿಶನ್ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ಧ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಶಾರುಖ್ ಖಾನ್ ಅವರಿಗೆ ಕೊಟ್ಟ ತಿರುಗೇಟು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.