Tag: sharukh khan

  • ಟಿಬಿ ಜಾಗೃತಿ ಕ್ರಿಕೆಟ್ ಆಡಲಿದ್ದಾರೆ ಬಿಗ್ ಬಿ, ಎಸ್‌ಆರ್‌ಕೆ, ಸಲ್ಮಾನ್ ಖಾನ್

    ಟಿಬಿ ಜಾಗೃತಿ ಕ್ರಿಕೆಟ್ ಆಡಲಿದ್ದಾರೆ ಬಿಗ್ ಬಿ, ಎಸ್‌ಆರ್‌ಕೆ, ಸಲ್ಮಾನ್ ಖಾನ್

    50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗಿ ನಿರೀಕ್ಷೆ

    ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಟಿಬಿ ಮುಕ್ತ ಜಾಗೃತಿ ಕ್ರಿಕೆಟ್ (TB Awareness Cricet Match) ಪಂದ್ಯವು ಮಾ.22ರಂದು ಮುಂಬೈನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬಿಗ್‌ಬಿ, ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ (Salman Khan), ರಣಬೀರ್ ಕಪೂರ್, ವಿಕ್ಕಿ ಕೌಶಲ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

    ಮಾ.22ರಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ತಂಡಗಳ ನಡುವೆ ಮ್ಯಾಚ್ ನಡೆಯಲಿದೆ. ಈ ಎರಡು ತಂಡಗಳ ಜುಗಲ್‌ಬಂದಿ ವೀಕ್ಷಿಸಲು 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ ನಡೆಯಲಿದೆ. 

    ಅಮೀರ್ ಖಾನ್, ಅಜಯ್ ದೇವಗನ್, ಸಂಜಯ್ ದತ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಹೃತಿಕ್ ರೋಷನ್, ಜಾಕಿ ಶ್ರಾಫ್, ಸೈಫ್ ಅಲಿ ಖಾನ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ, ಅಭಿಷೇಕ್ ಬಚ್ಚನ್, ಶಾಹಿದ್ ಕಪೂರ್, ರೋಹಿತ್ ಶೆಟ್ಟಿ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.

  • ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

    ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

    ಸೌತ್ ಡೈರೆಕ್ಟರ್ ಅಟ್ಲಿ (Atlee) ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್‌ಗೆ ಆ್ಯಕ್ಷನ್ ಕಟ್ ಹೇಳಿದ ಬಳಿಕ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೊಸ ಚಿತ್ರಕ್ಕಾಗಿ ಸಲ್ಮಾನ್ ಖಾನ್ (Salman Khan) ಜೊತೆ ಕೈಜೋಡಿಸಿದ್ದಾರೆ.

    ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಈಗ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಸಲ್ಮಾನ್ ಖಾನ್‌ಗೆ ಹೊಸ ಕಥೆ ಬರೆದಿದ್ದಾರೆ. ಸಿನಿಮಾ ಕಥೆಯ ಬಗ್ಗೆ ನಟನಿಗೂ ಅಟ್ಲಿ ವರದಿ ಒಪ್ಪಿಸಿದ್ದಾರೆ.

    ಸಾಲು ಸಾಲು ಸಿನಿಮಾಗಳ ಸೋಲಿನ ರುಚಿ ಕಂಡಿರುವ ಸಲ್ಮಾನ್ ಖಾನ್ ಈಗ ಸೌತ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಬ್ಬ ಸೌತ್‌ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 30ರಂದು ಈ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಸದ್ಯಕ್ಕಂತೂ ಈ ಬಗ್ಗೆ ನಟನ ಕಡೆಯಿಂದಾಗಲಿ, ಅಟ್ಲಿ ಕಡೆಯಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

    ಇನ್ನೂ ಅಟ್ಲಿ ಜೊತೆ ಸಿನಿಮಾ ಮಾಡಿದರೆ ಸಲ್ಮಾನ್ ಖಾನ್‌ಗೆ ಖಂಡಿತವಾಗಿ ಭರ್ಜರಿ ಗೆಲುವು ಸಿಗಲಿದೆ ಎಂಬ ಅಭಿಪ್ರಾಯ ಅಭಿಮಾನಿಗಳಿಗೆ ಇದೆ. ಸ್ವತಃ ಸಲ್ಲು ಕೂಡ ಇದೇ ಆಲೋಚನೆ ಮಾಡಿದಂತಿದೆ.

  • ಶಾರುಖ್ ಖಾನ್‌ಗೆ ವಿಲನ್ ಆದ ಅಭಿಷೇಕ್ ಬಚ್ಚನ್

    ಶಾರುಖ್ ಖಾನ್‌ಗೆ ವಿಲನ್ ಆದ ಅಭಿಷೇಕ್ ಬಚ್ಚನ್

    ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ (King) ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ಯಾವುದೇ ಕಳಂಕ ಇಲ್ಲದೆ ನಿರಪರಾಧಿಯಾಗಿ ದರ್ಶನ್ ಆಚೆ ಬರಲಿ: ಚಂದನ್ ಶೆಟ್ಟಿ

    ಅಮಿತಾಭ್ ಬಚ್ಚನ್‌ಗೆ ಬಾಲಿವುಡ್‌ನಲ್ಲಿ ಸಕ್ಸಸ್ ಸಿಕ್ಕಂತೆ. ಪುತ್ರ ಅಭಿಷೇಕ್‌ಗೆ ಯಶಸ್ಸು ಸಿಗಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಬಿಗ್ ಬಿ ಪುತ್ರ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಹೊಸ ಪಾತ್ರಗಳ ಪ್ರಯೋಗದಲ್ಲಿದ್ದಾರೆ. ಸಕ್ಸಸ್‌ಗಾಗಿ ಖಳನಟನಾಗಲು ಮುಂದಾಗಿದ್ದಾರೆ.

    ಶಾರುಖ್ ಖಾನ್ ನಿರ್ಮಿಸಿ, ನಟಿಸುತ್ತಿರುವ ‘ಕಿಂಗ್’ ಸಿನಿಮಾದಲ್ಲಿ ಮಗಳು ಸುಹಾನಾ ಖಾನ್‌ರನ್ನು ಲಾಂಚ್ ಮಾಡ್ತಿದ್ದಾರೆ. 200 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ಸಿನಿಮಾದಲ್ಲಿ ಅಭಿಷೇಕ್‌ಗೆ ಉತ್ತಮ ಪಾತ್ರವಿದೆಯಂತೆ. ವಿಲನ್ ಆದ್ರೂ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಸುಜಯ್ ಘೋಷ್ ನಿರ್ದೇಶನದ ‘ಕಿಂಗ್’ ಚಿತ್ರಕ್ಕೆ ಈ ವರ್ಷದ ಕೊನೆಯಲ್ಲಿ ಚಾಲನೆ ಸಿಗಲಿದೆ. ನಾಯಕಿಯಾಗಿ ಬರುತ್ತಿರುವ ಸುಹಾನಾ ಖಾನ್ (Suhana Khan) ತಮ್ಮ ಪಾತ್ರದ ತಯಾರಿಯಲ್ಲಿದ್ದಾರೆ. ಅದಕ್ಕಾಗಿ ಸೂಕ್ತ ತರಬೇತಿ ಕೂಡ ಪಡೆಯುತ್ತಿದ್ದಾರೆ. ಒಟ್ನಲ್ಲಿ ಶಾರುಖ್, ಸುಹಾನಾ, ಅಭಿಷೇಕ್‌ರನ್ನು ಬೆಳ್ಳಿಪರದೆಯಲ್ಲಿ ಒಟ್ಟಾಗಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

  • ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಅಂಬಾನಿ ಮನೆ ಮಗನ ಮದುವೆ ಅದ್ಧೂರಿಯಾಗಿ ಜು.12ರಂದು ನಡೆದಿದೆ. ಸಂಭ್ರಮದಿಂದ ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿದೆ. ಅನಂತ್‌ ಮದುವೆಗೆ ಬಂದ ಸ್ಟಾರ್ಸ್‌ಗೆ ಅಂಬಾನಿ ದುಬಾರಿ ವಾಚ್ ಅನ್ನು ರಿಟರ್ನ್ ಗಿಫ್ಟ್ ಮಾಡಿದ್ದಾರೆ.

    ಮದುವೆಗೆ ಬಂದವರು ನವಜೋಡಿಗೆ ಉಡುಗೊರೆ ಕೊಡುವುದು ಪದ್ಧತಿ. ಆದರೆ ತಮ್ಮ ಮನೆಯ ಮದುವೆಗೆ ಅತಿಥಿಗಳಾಗಿ ಬಂದಿದ್ದ ಸಿನಿಮಾ ತಾರೆಯರಿಗೆ ದುಬಾರಿ ಉಡುಗೊರೆ ಕೊಟ್ಟು ಕಳುಹಿಸಿದ್ದಾರೆ ಅಂಬಾನಿ ಕುಟುಂಬಸ್ಥರು. ಇದು ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

     

    View this post on Instagram

     

    A post shared by dia (@ltwt2497)


    ಈ ವಿವಾಹದಲ್ಲಿ ಭಾಗಿಯಾದ ಸಿನಿಮಾ ಮಂದಿಗೆ ಅನಂತ್ ಅಂಬಾನಿ ಐಷಾರಾಮಿ ವಾಚ್‌ಗಳನ್ನು ನೀಡಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್ (Sharukh Khan) ಮತ್ತು ರಣವೀರ್ ಸಿಂಗ್‌ಗೆ (Ranveer Singh) ಸೇರಿದಂತೆ ಅನೇಕರಿಗೆ ಈ ದುಬಾರಿ ವಾಚ್‌ಗಳು ಸಿಕ್ಕಿದೆ. ಈ ವಾಚ್‌ಗಳು ತಲಾ 2 ಕೋಟಿ ರೂ. ಮೌಲ್ಯದ್ದಾಗಿದೆ.

    ಅಂಬಾನಿಯಿಂದ ಉಡುಗೊರೆಯಾಗಿ ಪಡೆದ ವಾಚ್‌ಗಳು ಆಡೆಮರ್ಸ್ ಪಿಗುಯೆಟ್ ಕಂಪನಿಯದ್ದಾಗಿದೆ. 9.5 ಮಿಮೀ ದಪ್ಪವಿರುವ ಕೈಗಡಿಯಾರ ಇದಾಗಿದೆ. 41 ಎಂಎಂ 18 ಕ್ಯಾರಟ್‌ನ ಚಿನ್ನದ ವಾಚ್‌ಗಳಾಗಿವೆ. ವಾಚ್‌ನಲ್ಲಿ ವಾರ, ದಿನ, ದಿನಾಂಕ ಇನ್ನೀತರ ಮಾಹಿತಿಯನ್ನು ನೀಡುತ್ತದೆ.

  • ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್

    ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್

    ಠಾಣ್, ಜವಾನ್ ಸಕ್ಸಸ್ ಬಳಿಕ ಬಾಲಿವುಡ್‌ನಲ್ಲಿ (Bollywood) ಕಿಂಗ್ ಖಾನ್ ಶಾರುಖ್‌ಗೆ (Sharukh Khan) ಬೇಡಿಕೆ ಹೆಚ್ಚಾಗಿದೆ. ಇದೀಗ ನಯನತಾರಾ ಬಳಿಕ ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಲಾಯರ್ ಆಗಿ ಶಿವಣ್ಣ ಖಡಕ್ ಎಂಟ್ರಿ- ಮೇಕಿಂಗ್ ವಿಡಿಯೋ ಚಿಂದಿ ಎಂದ ಫ್ಯಾನ್ಸ್

    ‘ಡಂಕಿ’ ನಂತರ ಮತ್ತೊಮ್ಮೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜೊತೆ ಶಾರುಖ್ ಕೈಜೋಡಿಸಿದ್ದಾರೆ. ಈ ಸಿನಿಮಾದಲ್ಲೂ ಸೌತ್ ನಟಿಯನ್ನೇ ನಾಯಕಿಯನ್ನಾಗಿ ಮಾಡಲು ಚಿತ್ರತಂಡ ನಿರ್ಧರಿಸಿದೆ.

    ನಯನತಾರಾ ಜೊತೆ ‘ಜವಾನ್’ ಸಿನಿಮಾ ಕ್ಲಿಕ್ ಆದಂತೆ ಹೊಸ ಸಿನಿಮಾ ಕೂಡ ಗೆಲ್ಲಲಿ ಎಂದು ಸಮಂತಾರನ್ನು ರಾಜ್‌ಕುಮಾರ್ ಹಿರಾನಿ ಟೀಮ್ ಸಂಪರ್ಕಿಸಿದೆ. ಸಮಂತಾ (Samantha) ಕೂಡ ಕಥೆ ಕೇಳಿದ್ದಾರಂತೆ. ಆದರೆ ಎರಡು ಕಡೆ ಒಪ್ಪಿಗೆ ಆಯ್ತಾ? ಎಂಬುದರ ಬಗ್ಗೆ ಖಾತ್ರಿಯಾಗಿಲ್ಲ. ಚಿತ್ರತಂಡ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.

    ಬಾಲಿವುಡ್ ಸ್ಟಾರ್‌ಗೆ ಸಮಂತಾ ನಾಯಕಿಯಾಗ್ತಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಖುಷಿ’ (Kushi) ಸಿನಿಮಾದ ಬಳಿಕ ಯಾವುದೇ ಘೋಷಣೆ ಕೂಡ ಆಗಿಲ್ಲ. ಹಾಗಾಗಿ ನಟಿಯ ಕಡೆಯಿಂದ ಗುಡ್ ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

  • ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ಸ್

    ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ಸ್

    ರೇಂದ್ರ ಮೋದಿ (Narendra Modi) ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್‌ಗಳ ದಂಡೇ ಭಾಗಿಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ, ಅಕ್ಷಯ್ ಕುಮಾರ್ (Akshay Kumar), ರಜನಿಕಾಂತ್, ಶಾರುಖ್ ಖಾನ್ (Sharukh Khan) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಬಾಲಿವುಡ್ ಸ್ಟಾರ್‌ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್, ಅನುಪಮ್ ಖೇರ್, ವಿಕ್ರಾಂತ್, ಬಾಲಿವುಡ್‌ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ, ರಜನಿಕಾಂತ್, ಪವನ್ ಕಲ್ಯಾಣ್ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ.‌ ಇದನ್ನೂ ಓದಿ: ಚಂದನ್‌ಗೆ ನಿವೇದಿತಾ ಜೀವನಾಂಶ ಕೇಳಿದ್ರಾ? ಕೊನೆಗೂ ಹೊರಬಿತ್ತು ಅಸಲಿ ಸಂಗತಿ


    ಅದಷ್ಟೇ ಅಲ್ಲ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದ್ದಕ್ಕೆ ಶುಭಕೋರಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ.

  • ಶಾರುಖ್ ಫ್ಯಾನ್ಸ್ ಕಂಡರೆ ಭಯ: ಸ್ಫೋಟಕ ಹೇಳಿಕೆ ನೀಡಿದ ಬಾಲಿವುಡ್ ನಿರ್ದೇಶಕ

    ಶಾರುಖ್ ಫ್ಯಾನ್ಸ್ ಕಂಡರೆ ಭಯ: ಸ್ಫೋಟಕ ಹೇಳಿಕೆ ನೀಡಿದ ಬಾಲಿವುಡ್ ನಿರ್ದೇಶಕ

    ಬಾಲಿವುಡ್‌ನ ‘ಪಠಾಣ್’ (Paathan) ಸ್ಟಾರ್ ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಶಾರುಖ್ ಜೊತೆ ಸಿನಿಮಾ ಮಾಡಲ್ಲ, ಅವರ ಫ್ಯಾನ್ಸ್ ಕಂಡರೆ ಭಯ ಎಂದು ನಿರ್ದೇಶಕ ಅನುರಾಗ್ ಮಾತನಾಡಿದ್ದಾರೆ.

    ಶಾರುಖ್ ನಟಿಸಿರುವ ‘ಚಕ್ ದೇ ಇಂಡಿಯಾ’ ಚಿತ್ರ ಸೇರಿದಂತೆ ಹಲವು ಚಿತ್ರಗಳು ನನಗೆ ಇಷ್ಟ. ಇಂದು ಸಕ್ಸಸ್‌ಫುಲ್ ನಟನಾಗಿರುವ ಶಾರುಖ್ ಜೊತೆ ಕೆಲಸ ಮಾಡುವುದು ಕಷ್ಟ. ಒಬ್ಬ ನಿರ್ದೇಶಕನಾಗಿ ಶಾರುಖ್ ಅಂದರೆ ಇಷ್ಟ. ಆದರೆ ಅವರ ಅಭಿಮಾನಿಗಳನ್ನು ಕಂಡರೆ ಭಯ ಇದೆ ಎಂದಿದ್ದಾರೆ ಅನುರಾಗ್. ಇದನ್ನೂ ಓದಿ:ಬಿಟೌನ್ ಟಾಕ್: ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

    ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡುವಾಗ ಮುನ್ನಚರಿಕೆ ವಹಿಸಬೇಕು. ಒಂದು ವೇಳೆ, ಆ ಸಿನಿಮಾ ಸೋತರೆ ಅವರ ಅಭಿಮಾನಿಗಳಿಂದ ಬೈಗಳ ಎದುರಿಸಬೇಕಾಗುತ್ತದೆ. ಫ್ಯಾನ್ಸ್ ಕೂಡ ನೆಚ್ಚಿನ ನಟರ ಕಡೆಯಿಂದ ಒಂದೇ ರೀತಿಯ ಪಾತ್ರಗಳನ್ನು ಬಯಸುತ್ತಾರೆ. ಜೊತೆಗೆ ನಟರು ಕೂಡ ವಿಭಿನ್ನ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಅವರು ಹೊಸ ಕಥೆ ಪ್ರಯೋಗ ಮಾಡಲು ಹೆದರುತ್ತಾರೆ ಎಂದು ಅನುರಾಗ್‌ ಮಾತನಾಡಿದ್ದಾರೆ. ಇಂದು ಸ್ಟಾರ್ ಹೀರೋ ಜೊತೆ ಕೆಲಸ ಮಾಡುವುದು ದುಬಾರಿ ಆಗಬಹುದು. ಆದರೆ ಶಾರುಖ್ ಅಥವಾ ಬೇರೆ ಸ್ಟಾರ್ ಜೊತೆ ಸಿನಿಮಾ ಮಾಡುವ ಸಾಮಾರ್ಥ್ಯ ನನಗಿಲ್ಲ ಎಂದು ಓಪನ್ ಆಗಿ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.

    ಅಂದಹಾಗೆ, ಅನುರಾಗ್ ಕಶ್ಯಪ್ ನಟ ಕಮ್ ನಿರ್ದೇಶಕ, ನಿರ್ಮಾಪಕನಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡವರು. ನಟನೆಯ ಜೊತೆ ಡೈರೆಕ್ಟರ್ ಆಗಿ ಕೂಡ ಸೈ ಎನಿಸಿಕೊಂಡಿದ್ದಾರೆ.

  • ಶಾರುಖ್ ಖಾನ್ ಪುತ್ರಿ ಸುಹಾನಾ ಹುಟ್ಟುಹಬ್ಬಕ್ಕೆ ಬಿಟೌನ್ ಸ್ಟಾರ್ಸ್‌ಗಳ ವಿಶ್

    ಶಾರುಖ್ ಖಾನ್ ಪುತ್ರಿ ಸುಹಾನಾ ಹುಟ್ಟುಹಬ್ಬಕ್ಕೆ ಬಿಟೌನ್ ಸ್ಟಾರ್ಸ್‌ಗಳ ವಿಶ್

    ಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan)  ಪುತ್ರಿ ಸುಹಾನಾ ಖಾನ್ (Suhana Khan) ಇಂದು (ಮೇ 22) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸುಹಾನಾ 24ನೇ ವರ್ಷದ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ-ನಟಿಯರು ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

    ಸದ್ಯ ಬರ್ತ್‌ಡೇ ಖುಷಿಯಲ್ಲಿರುವ ನಟಿಗೆ ಅನನ್ಯಾ ಪಾಂಡೆ, ಬಿಗ್ ಬಿ ಮೊಮ್ಮಗಳು ನಂದಾ, ಸಾರಾ ಸೇರಿದಂತೆ ಅನೇಕರು ಪ್ರೀತಿಯಿಂದ ಶುಭಕೋರಿದ್ದಾರೆ.‌ ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಅದಷ್ಟೇ ಅಲ್ಲ, ಮೇ 21ರಂದು ಶಾರುಖ್ ಒಡೆತನದ ಕೋಲ್ಕತ್ತಾ ನೈಟ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಫೈನಲ್ ತಲುಪಿದೆ. ಈ ಮ್ಯಾಚ್ ನೋಡಲು ತಂದೆ ಜೊತೆ ಸುಹಾನಾ ಖಾನ್ ಕೂಡ ಇದ್ದರು. ಈ ಮೂಲಕ ಸುಹಾನಾ ಬರ್ತ್‌ಡೇ ಕೆಕೆಆರ್ ಗೆಲುವಿನ ಉಡುಗೊರೆ ಸಿಕ್ಕಂತೆ ಆಗಿದೆ.


    ಸುಹಾನಾ ಈ ವರ್ಷ ಬೆಳ್ಳಿತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಕಿಂಗ್ ಸಿನಿಮಾದಲ್ಲಿ ತಂದೆಯೇ ಜೊತೆ ಸುಹಾನಾ ಪರಿಚಿತರಾಗುತ್ತಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

  • ಮತ್ತೆ ಶಾರುಖ್ ಖಾನ್ ಜೊತೆ ಕೈಜೋಡಿಸಿದ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್

    ಮತ್ತೆ ಶಾರುಖ್ ಖಾನ್ ಜೊತೆ ಕೈಜೋಡಿಸಿದ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್

    ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದ ಸಕ್ಸಸ್ ನಂತರ ಇದೀಗ ‘ಕಿಂಗ್’ (King Film) ಚಿತ್ರದ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕಿಂಗ್ ಸಿನಿಮಾಗಾಗಿ ಶಾರುಖ್ ಖಾನ್ ಜೊತೆ ‘ಜವಾನ್’ ಖ್ಯಾತಿಯ ಅನಿರುದ್ಧ ರವಿಚಂದರ್ (Anirudh Ravichander) ಕೈಜೋಡಿಸಿದ್ದಾರೆ.

    ಸದ್ಯ ಸಂಗೀತ ಕ್ಷೇತ್ರದಲ್ಲಿ ಗಾಯನ ಮತ್ತು ಸಂಗೀತ ನಿರ್ದೇಶನದ ಮೂಲಕ ಮೋಡಿ ಮಾಡಿರುವ ಅನಿರುದ್ಧ ರವಿಚಂದರ್‌ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ‘ಜವಾನ್’ ಮತ್ತು ಜೈಲರ್ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದ್ಮೇಲೆ ಅನಿರುದ್ಧ ಸಂಭಾವನೆ ಕೂಡ ಹೆಚ್ಚಾಗಿದೆ. ಇದನ್ನೂ ಓದಿ:ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

    ಶಾರುಖ್ ಖಾನ್ ಕೆರಿಯರ್‌ನಲ್ಲಿ ‘ಜವಾನ್’ (Jawan)  ಸಿನಿಮಾ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು. ಆ ಯಶಸ್ಸಿನಲ್ಲಿ ಅನಿರುದ್ಧ ರವಿಚಂದರ್ ಪ್ರತಿಭೆ ಕೂಡ ಕ್ಲಿಕ್ ಆಗಿತ್ತು. ಜವಾನ್ ಚಿತ್ರಕ್ಕೆ ಕೊಟ್ಟಿರುವ ಹಿಟ್ ಹಾಡುಗಳಿಂದ ಸಿನಿಮಾ ಸಕ್ಸಸ್ ಆಗಲು ಕಾರಣವಾಗಿತ್ತು. ಹಾಗಾಗಿ ಶಾರುಖ್ ಮುಂದಿನ ಸಿನಿಮಾಗೂ ಅನಿರುದ್ಧ ರವಿಚಂದರ್ ಕೆಲಸ ಮಾಡಲು ಆಫರ್ ಸಿಕ್ಕಿದೆ.

    ಪುತ್ರಿ ಸುಹಾನಾ ಖಾನ್‌ರನ್ನು ಲಾಂಚ್ ಮಾಡುತ್ತಿರುವ ‘ಕಿಂಗ್’ ಸಿನಿಮಾಗೂ ಅನಿರುದ್ಧ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಶಾರುಖ್ ಖಾನ್ ನಟನೆಯ ಜೊತೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್

    Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಆರ್ಯನ್ ಬ್ಯುಸಿಯಾಗಿದ್ದಾರೆ. ಮಗನ ಚೊಚ್ಚಲ ಚಿತ್ರಕ್ಕೆ ಶಾರುಖ್ ಖಾನ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚನ ಪುತ್ರಿ ಸಾನ್ವಿ?

    ‘ಸ್ಟಾರ್ ಡಮ್’ (Stardom) ಎಂಬ ವೆಬ್ ಸಿರೀಸ್‌ಗೆ ಆರ್ಯನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ಈಗ ಕೊನೆಯ ಹಂತಕ್ಕೆ ತಲುಪಿದೆ. ಮುಂಬೈನ ಬಾಂದ್ರಾದಲ್ಲಿ ಲಾಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಆರ್ಯನ್ ಜೊತೆ ಶಾರುಖ್ ಖಾನ್ ಭಾಗಿಯಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ವೆಬ್‌ ಸಿರೀಸ್‌ ರಿಲೀಸ್‌ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ.

    ‘ಸ್ಟಾರ್ ಡಮ್’ ವೆಬ್ ಸಿರೀಸ್‌ನಲ್ಲಿ ಶಾರುಖ್ (Sharukh Khan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಶಾರುಖ್‌ಗೆ ಯಾವ ಪಾತ್ರ? ಆ ಪಾತ್ರದ ಲುಕ್ ಹೇಗಿರಲಿದೆ ಎಂಬುದನ್ನು ಫ್ಯಾನ್ಸ್ ಊಹಿಸಲು ಶುರು ಮಾಡಿದ್ದಾರೆ.

    ಇನ್ನೂ ಮಗಳು ಸುಹಾನಾಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಶಾರುಖ್ ಮುಂದಾಗಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ಎಂಟ್ರಿ ಅದ್ಧೂರಿಯಾಗಿರಬೇಕು ಎಂದು ಶಾರುಖ್ ತಯಾರಿ ಮಾಡಿಕೊಳ್ತಿದ್ದಾರೆ. ಆ ಚಿತ್ರಕ್ಕೆ ಕಿಂಗ್ ಎಂದು ಟೈಟಲ್ ಇಡಲಾಗಿದೆ.