Tag: Sharmila Mandre

  • ‘ದಸರಾ’ ಟೈಟಲ್ ವಿವಾದ: ತೆಲುಗು ಚಿತ್ರದ ವಿರುದ್ಧ ಚಲನಚಿತ್ರ ಮಂಡಳಿ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

    ‘ದಸರಾ’ ಟೈಟಲ್ ವಿವಾದ: ತೆಲುಗು ಚಿತ್ರದ ವಿರುದ್ಧ ಚಲನಚಿತ್ರ ಮಂಡಳಿ ಮೆಟ್ಟಿಲೇರಿದ ಶರ್ಮಿಳಾ ಮಾಂಡ್ರೆ

    ಚಂದನವನದ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಪ್ರೊಡಕ್ಷನ್ ಹೌಸ್‍ನಲ್ಲಿ ನಿರ್ಮಾಣ ಮಾಡುತ್ತಿರುವ ‘ದಸರಾ’ ಸಿನಿಮಾ ಟೈಟಲ್‍ನನ್ನು ತೆಲುಗು ಸಿನಿಮಾ ಸಹ ಇಟ್ಟುಕೊಂಡಿದೆ. ಇದರಿಂದ ನಮ್ಮ ಸಿನಿಮಾಗೆ ತೊಂದರೆಯಾಗುವುದೆಂದು ಬೇಸರಗೊಂಡ ಚಿತ್ರತಂಡ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.

    ‘ದಸರಾ’ ಸಿನಿಮಾ ಮುಖ್ಯಪಾತ್ರದಲ್ಲಿ ಸತೀಶ್ ನೀನಾಸಂ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಪ್ರಸ್ತುತ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನೆಡೆಯುತ್ತಿದೆ. ಈ ವೇಳೆ ತೆಲುಗು ಸಿನಿಮಾ ‘ದಸರ’ ಹೆಸರಿನಲ್ಲಿ ಕಳೆದ ವಾರವಷ್ಟೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿತ್ತು. ತನ್ನ ಮೊದಲ ನಿರ್ಮಾಣದಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಶರ್ಮಿಳಾ ಬೇಸರಗೊಂಡಿದ್ದು, ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಈ ಮನವಿ ಪತ್ರದಲ್ಲಿ ಶರ್ಮಿಳಾ, ನಾನು ನನ್ನ ನಿರ್ಮಾಣದ ಮೊದಲ ಸಿನಿಮಾ ‘ದಸರ’ ಟೈಟಲ್ 2020 ರ ಸೆಪ್ಟೆಂಬರ್ ತಿಂಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಮಾಡಿಸಿದ್ದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದೆ. ಈಗ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ನಡುವೆ ಸುಧಾಕರ್ ಚೆರುಕುರಿ ಎಸ್‍ಎಲ್‍ವಿ ಬ್ಯಾನರ್ ಅಡಿಯಲ್ಲಿ ‘ದಸರ’ ಹೆಸರಿನ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ನಮ್ಮ ಸಿನಿಮಾದ ಹೆಸರನ್ನು ನಾವು ಈಗಾಗಲೇ ಬಹಿರಂಗಗೊಳಿಸಿದ್ದೇವೆ. ಅದೇ ಹೆಸರಿನಿಂದ ಸಿನಿಮಾದ ಪ್ರಚಾರ ಸಹ ಮಾಡಿದ್ದೇವೆ. ಈಗ ಅದೇ ಹೆಸರಿನಲ್ಲಿ ತೆಲುಗು ನಿರ್ಮಾಪಕರು ತಮ್ಮ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ನಮ್ಮ ಸಿನಿಮಾಕ್ಕೆ ಸಮಸ್ಯೆ ಆಗುತ್ತದೆ. ನಮ್ಮ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ ಹೊಡೆತ ಬೀಳುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ತೆಲುಗಿನ ನಿರ್ಮಾಪಕರು ತಮ್ಮ ಸಿನಿಮಾದ ಹೆಸರನ್ನು ಕನಿಷ್ಟ ಪಕ್ಷ ಕನ್ನಡ ಡಬ್ಬಿಂಗ್ ವರ್ಷನ್‍ನಲ್ಲಿಯಾದರೂ ಬದಲಾಯಿಸುವಂತೆ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.

    ತೆಲುಗಿನ ‘ದಸರಾ’ ಸಿನಿಮಾದಲ್ಲಿ ನಟ ನಾನಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  • ಡ್ರಗ್ ದಂಧೆಕೋರರಿಗೆ ಬಿಜೆಪಿ ಲಿಂಕ್- 3 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಕಾರ್ತಿಕ್ ರಾಜ್

    ಡ್ರಗ್ ದಂಧೆಕೋರರಿಗೆ ಬಿಜೆಪಿ ಲಿಂಕ್- 3 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಕಾರ್ತಿಕ್ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಆಪ್ತ ರಾಹುಲ್ ಜೊತೆ ಸಂಪರ್ಕ ಹೊಂದಿದ್ದ ಕಾರ್ತಿಕ್ ರಾಜ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಿಸಿಬಿ ಪೊಲೀಸರ ವಶದಲ್ಲಿರುವ ಕಾರ್ತಿಕ್ ರಾಜ್ ಮೂರು ವರ್ಷಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದ ಎಂಬ ಮಾಹಿತಿ ಸದ್ಯ ಬಹಿರಂಗವಾಗಿದೆ. ಈತ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಕಾರ್ತಿಕ್ ರಾಜ್ ರಾಜಕೀಯ ಚಟುವಟಿಕೆಗಳೊಂದಿಗೆ ಡ್ರಗ್ ಪೆಡ್ಲರ್ ಗಳೊಂದಿಗೆ ಸಂಪರ್ಕ ಹೊಂದಿದ್ದ. ಅಲ್ಲದೇ ಡ್ರಗ್ಸ್ ರಿಸೀವ್ ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

    ರಾಜಕೀಯ ಚಟುವಟಿಕೆ ಮಾತ್ರವಲ್ಲದೇ ಸಾಕಷ್ಟು ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ಕಾರ್ತಿಕ್ ರಾಜ್, ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಬಗ್ಗೆ ಪೊಲೀಸರಿಗೆ ಸಾಕ್ಷಿಗಳು ಲಭ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಾಜಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದ. ಬಿಜೆಪಿ ಯುವ ಮೋರ್ಚಾದ ಸದಸ್ಯನಾಗಿರುವ ಈತನಿಗೆ ಬಿಜೆಪಿ ಪಕ್ಷದ ಅಧಿಕೃತ ಲೇಡರ್ ಹೆಡ್‍ನಲ್ಲಿ ಪ್ರಶಂಸೆಯ ಪತ್ರವನ್ನು ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಇತ್ತ ಬೆಂಗಳೂರಿನಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಲು ದೊಡ್ಡ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ. ತನಿಖೆಯಿಂದ ಹೊಸ ಹೊಸ ಸಾಕ್ಷಿ ಸಿಗುತ್ತಿದ್ದು, ಎಲ್ಲವೂ ತಿಳಿಯುತ್ತೆ. ಊಹಾಪೋಹದ ಮೇಲೆ ಯಾರ ಹೆಸರು ಹೇಳುವುದಿಲ್ಲ. ಸಾಕ್ಷಿ ಆಧಾರ ಇಟ್ಟುಕೊಂಡು ನೋಟಿಸ್ ಕೊಡುತ್ತೇವೆ. ಯಾವುದೇ ರಂಗದವರು ಇದ್ದರು ಯಾರನ್ನೂ ಬಿಡೋದಿಲ್ಲ. ಎಷ್ಟೇ ಪ್ರಭಾವಿಗಳು ಇದ್ದರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸದ್ಯ ಅವರದ್ದೇ ಪಕ್ಷದ ಸದಸ್ಯ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದು, ಯಾವ ಕ್ರಮಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ:  ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

  • ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾದ ತನಿಖೆಯನ್ನು ಪೊಲೀಸರು ಚುರುಕುಗೊಳಿಸುತ್ತಿದ್ದಂತೆ ನಟಿಯರು ಮಾತ್ರವಲ್ಲ ನಟರೂ ದಂಧೆಯಲ್ಲಿರುವ ವಿಚಾರ ಬೆಳಕಿಗೆ ಬರುತ್ತಿದೆ. ಅದರಲ್ಲೂ ಓರ್ವ ಖ್ಯಾತ ನಟ ಈ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಕೆಲ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದೆ.

    ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಬಂಧಿಸಿದ ಬಳಿಕ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಕಾರ್ತಿಕ್‌ ರಾಜು ಹೆಸರು ಕೇಳಿ ಬಂದಿದೆ.

    ಈಗ ಕಾರ್ತಿಕ್‌ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಬ್ಬೊಬ್ಬರ ವಿಚಾರಣೆಯ ವೇಳೆ ಹಲವು ಮಾಹಿತಿಗಳು ಲಭ್ಯವಾಗುತ್ತಿದೆ.

    ಮೂವರ ವಿಚಾರಣೆಯ ಸಂದರ್ಭದಲ್ಲಿ ಓರ್ವ ಖ್ಯಾತ ನಟನ ಬಗ್ಗೆ ಮಾಹಿತಿ ಸಿಕ್ಕಿರುವ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಕೆಲ ಚಿತ್ರಗಳಲ್ಲಿ ನಟಿಸಿದ್ದ ನಟ ಸೈ ಎನಿಸಿಕೊಂಡಿದ್ದು ಈಗ ನಟನಿಗೆ ಅವಕಾಶಗಳು ಸಿಗುತ್ತಿಲ್ಲ.

    ಈ ನಟನ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದರು. ಇಂದು ರಾಗಿಣಿ ವಿಚಾರಣೆಗೆ ಹಾಜರಾಗಿದ್ದರೆ ಈ ನಟನ ಪಾತ್ರದ ಕುರಿತು ಪಶ್ನಿಸಲು ಸಿದ್ಧತೆ ನಡೆಸಿದ್ದರು.

    ಇಂದಿನ ವಿಚಾರಣೆಗೆ ರಾಗಿಣಿ ಹಾಜರಾಗದೇ ವಕೀಲರನ್ನು ಕಳುಹಿಸಿಕೊಟ್ಟಿದ್ದರು. ಅಲ್ಲದೇ ಸೋಮವಾರದವರೆಗೆ ಸಮಯ ಕೇಳಿದ್ದರು. ಆದರೆ ಸಿಸಿಬಿ ಪೊಲೀಸರು ಸಮಯ ನೀಡದೇ ಶುಕ್ರವಾರವೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ನಾಳೆ ರಾಗಿಣಿ ವಿಚಾರಣೆಗೆ ಹಾಜರಾಗಬೇಕಿದೆ.
    ಇದನ್ನೂ ಓದಿ: ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

    ಪಬ್ಲಿಕ್‌ ಟಿವಿ ಜೊತೆ ಬೆಳಗ್ಗೆ ಮಾತನಾಡಿದ್ದ ಸಂಜನಾ, ಯಾಕೆ ನಟಿಯರನ್ನು ಮಾತ್ರ ಪ್ರಶ್ನಿಸಲಾಗುತ್ತಿದೆ. ನಟರನ್ನು ಪ್ರಶ್ನೆ ಮಾಡುವುದಿಲ್ಲ ಯಾಕೆ? ನಾವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಿ ಹಣವನ್ನು ಸಂಪಾದಿಸಿ ಕಾರುಗಳನ್ನು ಖರೀದಿಸಿದ್ದೇವೆ. ನಮ್ಮ ಆದಾಯದ ಮೇಲೆ ಯಾಕೆ ಅನುಮಾನ ಎಂದು ಕೇಳಿದ್ದರು.

  • ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

    ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ನಟಿ ಶರ್ಮಿಳಾ ಮಾಂಡ್ರೆಗೆ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ.

    ಈ ಸಂಬಂಧ ಸ್ವತಃ ನಟಿ ಟ್ವೀಟ್ ಮಾಡಿದ್ದು, ನನಗೆ ಹಾಗೂ ನನ್ನ ಕುಟುಂಬದ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಆದರೆ ನಮಗೆ ಹೆಚ್ಚಿನ ರೋಗ ಲಕ್ಷಣ ಇಲ್ಲದಿರುವುದುರಿಂದ ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇವೆ.

    ವೈದ್ಯರ ಸಲೆಹೆಯಂತೆ ನಾನು ಸೆಲ್ಫ್ ಕ್ವಾರಂಟೈನ್ ಆಗಿದ್ದೇನೆ. ಹಾಗೆಯೇ ಡಾಕ್ಟರ್ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಧೃವ ಸರ್ಜಾ ಹಾಗೂ ಅವರ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ಹೆಚ್ಚಿನ ರೋಗ ಲಕ್ಷಣ ಇಲ್ಲದಿರುವುದರಿಂದ ಆಸ್ಪತ್ರೆಗೆ ದಾಖಲಾಗಿ ಶೀಘ್ರವೇ ಡಿಸ್ಚಾರ್ಜ್ ಆಗಿದ್ದರು.

     

  • ಔಷಧಿಗಾಗಿ ಮನೆಯಿಂದ ಹೊರ ಬಂದಿದ್ದೆ – ಅಪಘಾತದ ಬಗ್ಗೆ ಶರ್ಮಿಳಾ ಮಾತು

    ಔಷಧಿಗಾಗಿ ಮನೆಯಿಂದ ಹೊರ ಬಂದಿದ್ದೆ – ಅಪಘಾತದ ಬಗ್ಗೆ ಶರ್ಮಿಳಾ ಮಾತು

    ಬೆಂಗಳೂರು: ನಾನು ಯಾವುದೇ ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ. ಔಷಧಿಗಾಗಿ ಮನೆಯಿಂದ ಹೊರಗೆ ಹೋಗಿದ್ದೆ ಎಂದು ನಟಿ ಶರ್ಮಿಳಾ ಮಾಂಡ್ರೆ ಅಪಘಾತ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ನಟಿ ಶರ್ಮಿಳಾ ಮಾಂಡ್ರೆ ರಾತ್ರೋರಾತ್ರಿ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್ ಹೋಗಿ ಅಪಘಾತ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸ್ವತಃ ಶರ್ಮಿಳಾ ಮಾಂಡ್ರೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಶರ್ಮಿಳಾ ಅಪಘಾತದಲ್ಲಿ ಗಾಯಗೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದು, ತಮ್ಮ ಅಪಘಾತದ ಸುದ್ದಿ ವೈರಲ್ ಆಗಿದೆ ಎಂದು ತಮಾಷೆಯಾಗಿ ಮಾತನಾಡಿದ್ದಾರೆ. ನಾನು ಔಷಧಿಯನ್ನು ಖರೀದಿಸಲು ಮಾತ್ರ ಮನೆಯಿಂದ ಹೊರ ಹೋಗಿದ್ದೆ. ಲಾಕ್‍ಡೌನ್ ಸಮಯದಲ್ಲಿ ಓಡಾಡಲು ಪಾಸ್ ಹೊಂದಿದ್ದ ಸ್ನೇಹಿತರ ಸಹಾಯವನ್ನು ಪಡೆದಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

    “ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಇಬ್ಬರ ಸಹಾಯವನ್ನು ಕೇಳಿದೆ. ಯಾಕೆಂದರೆ ಅವರ ಬಳಿ ಲಾಕ್‍ಡೌನ್ ವೇಳೆ ಓಡಾಡುವ ಪಾಸ್ ಇತ್ತು. ಹೀಗಾಗಿ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡೆ. ಈ ವೇಳೆ ಅಪಘಾತವಾಗಿದೆ. ಆದರೆ ನಾನು ಕಾರು ಓಡಿಸುತ್ತಿರಲಿಲ್ಲ. ಕಾರಿನ ಹಿಂಬದಿ ಸೀಟಿನಲ್ಲಿ ನಾನು ಕುಳಿತಿದ್ದೆ. ನನ್ನ ಸ್ನೇಹಿತ ಡಾನ್ ಕಾರು ಓಡಿಸುತ್ತಿದ್ದ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ” ಎಂದು ಅಪಘಾತದ ಬಗ್ಗೆ ತಿಳಿಸಿದ್ದಾರೆ.

    ಅಪಘಾತದ ನಂತರ ನನ್ನ ಬಗ್ಗೆ ಬಂದಿರುವ ಸುದ್ದಿಗಳ ಬಗ್ಗೆ ಕೇಳಿದ್ದೇನೆ ಎಂದು ಪಾರ್ಟಿಯಿಂದ ಹಿಂದಿರುಗುತ್ತಿದ್ದಾಗ ಅಪಘಾತ ಮಾಡಿರುವುದನ್ನು ತಳ್ಳಿ ಹಾಕಿದ್ದಾರೆ. ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂದು ನನಗೆ ಗೊತ್ತು. ಆದರೂ ನಾನು ಪಾರ್ಟಿಯಲ್ಲಿ ಪಾಲ್ಗೊಳ್ಳಲು ಯಾವುದೇ ಮಾರ್ಗವಿಲ್ಲ. ಕೊರೊನಾ ವೈರಸ್ ದಿನೇ ದಿನೇ ವ್ಯಾಪಿಸುತ್ತಿರುವ ಕಾರಣದಿಂದ ನಾನು ಮನೆಯಲ್ಲಿಯೇ ಕಟ್ಟುನಿಟ್ಟಾಗಿ ಇದ್ದೇನೆ. ಆದರೆ ನಡೆದ ಘಟನೆಯನ್ನು ತಿಳಿದುಕೊಳ್ಳದೆ, ಅಪಘಾತದ ಸುದ್ದಿ ಎಲ್ಲೆಡೆ ವೈರಲ್ ಆಗಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸದ್ಯಕ್ಕೆ ಶರ್ಮಿಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅವರಿಗೆ ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ.

    ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಸಂಚಾರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಶರ್ಮಿಳಾ, ಶಿಫಾ ಜೋಹರ್, ಲೋಕೇಶ್ ಮತ್ತು ಡಾನ್ ಥಾಮಸ್ ನಾಲ್ಕು ಮಂದಿ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.

  • ಲಾಕ್‍ಡೌನ್ ಇದ್ರೂ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ – ಪಿಲ್ಲರ್‌ಗೆ ಜಾಗ್ವಾರ್ ಕಾರು ಡಿಕ್ಕಿ

    ಲಾಕ್‍ಡೌನ್ ಇದ್ರೂ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ – ಪಿಲ್ಲರ್‌ಗೆ ಜಾಗ್ವಾರ್ ಕಾರು ಡಿಕ್ಕಿ

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ನಟ-ನಟಿಯರು ಮನೆಯಲ್ಲಿ ಇರಿ, ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಸ್ಯಾಂಡಲ್‍ವುಡ್ ನಟಿಯೊಬ್ಬರು ಲಾಕ್‍ಡೌನ್ ಇದ್ದರೂ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ.

    ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ಇಂದು ನಸುಕಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಎಂದು ತಿಳಿದು ಬಂದಿದೆ.

    ಶರ್ಮಿಳಾ ಮಾಂಡ್ರೆ ಜಾಗ್ವರ್ ಕಾರಿನಲ್ಲಿ ತನ್ನ ಸ್ನೇಹಿತರ ಜೊತೆ ರಾತ್ರಿ ಹೊತ್ತಲ್ಲಿ ಜಾಲಿ ರೈಡ್ ಹೋಗಿದ್ದರು. ಆದರೆ ವಸಂತನಗರ ಅಂಡರ್ ಪಾಸ್ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯವಾಗಿದೆ. ಇನ್ನೂ ಕಾರಿನಲ್ಲಿ ಒಬ್ಬ ಸ್ನೇಹಿತನಿಗೆ ಕೈ ಫ್ರಾಕ್ಚರ್ ಆಗಿದ್ದು, ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಷ್ಟೇ ಅಲ್ಲದೇ ಅಪಘಾತ ಮಾಡಿದ ಮೇಲೆ ನಟಿ ಶರ್ಮಿಳಾ ಮಾಂಡ್ರೆ ಸೀನ್ ಕ್ರಿಯೇಟ್ ಮಾಡಿದ್ದು, ಅಪಘಾತ ಆಗಿದ್ದು ಜಯನಗರ, ಜೆಪಿನಗರ ಎಂದು ಹೇಳಿದ್ದಾರೆ. ಆದರೆ ಜಾಗ್ವರ್ ಕಾರನ್ನು ಯಾರು ಡ್ರೈವ್ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ.

    ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಡರ್ ಪಾಸ್ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

  • ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಬೆಂಗಳೂರು: ಮಮ್ಮಿ ಚಿತ್ರದ ಯಶಸ್ಸಿನ ನಂತರ ಹೌರಾ ಬ್ರಿಡ್ಜ್ ಚಿತ್ರದಲ್ಲಿ ನಟಿಸುತ್ತಿರೋ ಪ್ರಿಯಾಂಕ ಉಪೇಂದ್ರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ ಹೊಂದಿರೋ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತಿಬ್ಬರು ಸ್ಯಾಂಡಲ್ ವುಡ್ ನಟಿಯರು ಪ್ರಿಯಾಂಕಗೆ ಜೊತೆಯಾಗಲಿದ್ದಾರೆ.

    ಭುವನ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇದರ ಜೊತೆಗೇ ಮತ್ತೆರಡು ಮುಖ್ಯ ಪಾತ್ರಗಳಿಗೂ ಇಬ್ಬರು ಆಯ್ಕೆಯಾಗಿದ್ದಾರೆ. ಭಾವನಾ ರಾವ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಪ್ರಿಯಾಂಕ ಸ್ನೇಹಿತೆಯರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಭುವನ್ ಇದೀಗ ಗಮ್ಯ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆಯೇ ಹೊಸಾ ಥ್ರಿಲ್ಲರ್ ಕಥೆ ಶುರುವಾಗಲಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಈ ಚಿತ್ರವನ್ನು ಪ್ರಿಯಾಂಕಾ ಕೂಡಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಒಂದಷ್ಟು ಕಾಲದಿಂದ ಮರೆಯಾದಂತಿದ್ದ ಶರ್ಮಿಳಾ ಮಾಂಡ್ರೆ ಮತ್ತು ಭಾವನಾ ರಾವ್ ಈ ಚಿತ್ರದ ಮುಖ್ಯ ಪಾತ್ರಗಳ ಮೂಲಕ ವಾಪಾಸಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಸ್ರೋ ವಿಜ್ಞಾನಿಯಾಗಲಿದ್ದಾರೆ ಶರ್ಮಿಳಾ ಮಾಂಡ್ರೆ – ಕನ್ನಡಕ್ಕೂ ಬರ್ತಾರಂತೆ..!

    ಇಸ್ರೋ ವಿಜ್ಞಾನಿಯಾಗಲಿದ್ದಾರೆ ಶರ್ಮಿಳಾ ಮಾಂಡ್ರೆ – ಕನ್ನಡಕ್ಕೂ ಬರ್ತಾರಂತೆ..!

    ಮುದ್ದು ಮುದ್ದಾದ ನಟನೆಯಿಂದಲೇ ಕನ್ನಡಿಗರ ಮನಸಲ್ಲುಳಿದಿರುವ ನಟಿ ಶರ್ಮಿಳಾ ಮಾಂಡ್ರೆ. ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರೋ ಶರ್ಮಿಳಾ ಈಗೊಂದಷ್ಟು ಕಾಲದಿಂದ ಚಿತ್ರರಂಗದಿಂದಲೇ ಮರೆಯಾದಂತಿದ್ದರು. ಅಭಿಮಾನಿಗಳೆಲ್ಲ ಮಿಸ್ ಮಾಡಿಕೊಳ್ಳುತ್ತಿರುವಾಗಲೇ ಶರ್ಮಿಳಾ ಮತ್ತೆ ಮರಳುವ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.

    ಒಂದಷ್ಟು ಸಮಯ ಶರ್ಮಿಳಾ ಬಿಡುವಿನಲ್ಲಿದ್ದದ್ದು ನಿಜ. ಆದರೆ ಈ ಅವಧಿಯಲ್ಲಿ ಅವರ ಮುಂದಿನ ನಡೆಗಳ ಬಗ್ಗೆ ಸ್ಪಷ್ಟವಾದ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ. ಇದೀಗ ಮತ್ತೆ ನಟನೆಗೆ ಎಂಟ್ರಿ ಕೊಡಲು ಉತ್ಸುಕರಾಗಿರುವ ಶರ್ಮಿಳಾ ತಮಿಳು ಚಿತ್ರವೊಂದರ ಮೂಲಕ ಸದ್ಯದಲ್ಲಿಯೇ ರೀ ಲಾಂಚ್ ಆಗಲಿದ್ದಾರಂತೆ.

    ಈ ಸುದ್ದಿ ಕೇಳಿದಾಕ್ಷಣ ಕನ್ನಡದ ಶರ್ಮಿಳಾ ಅಭಿಮಾನಿಗಳು ನಿರಾಸೆ ಹೊಂದುವ ಅಗತ್ಯವೇನಿಲ್ಲ. ಯಾಕೆಂದರೆ, ತಮಿಳು ಚಿತ್ರದ ಜೊತೆಯೇ ಎರಡೆರಡು ಕನ್ನಡ ಚಿತ್ರಗಳ ಅವಕಾಶವೂ ಅವರ ಮುಂದಿದೆ. ಈ ಎರಡೂ ಚಿತ್ರಗಳ ಕಥೆ, ತಾರಾಗಣ ಮುಂತಾದ ಆಯ್ಕೆ ಪ್ರಕ್ರಿಯೇ ಚಾಲ್ತಿಯಲ್ಲಿದೆಯಂತೆ.

    ಇದರಲ್ಲಿ ಒಂದು ಚಿತ್ರ ಇದೇ ಆಗಸ್ಟ್ ತಿಂಗಳಿಂದ ಆರಂಭವಾಗಲಿದೆ. ಆ ಚಿತ್ರದ ನಿರ್ದೇಶಕ ಯಾರು, ನಾಯಕನ್ಯಾರು ಮತ್ತು ಶೀರ್ಷಿಕೆ ಏನು ಎಂಬ ವಿಚಾರವನ್ನೆಲ್ಲ ಶರ್ಮಿಳಾ ನಿಗೂಢವಾಗಿಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ತಾನು ಇಸ್ರೋ ವಿಜ್ಞಾನಿಯಾಗಿ ನಟಿಸಲಿರೋದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಂತೂ ಒಂದಷ್ಟು ಕಾಲ ಮರೆಯಾಗಿದ್ದ ಶರ್ಮಿಳಾ ಭರ್ಜರಿಯಾಗಿಯೇ ರೀ ಎಂಟ್ರಿ ಕೊಡಲಿದ್ದಾರೆಂಬುದಂತೂ ಸತ್ಯ!