ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಮತ್ತೆ ದರ್ಶನ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರು ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ‘ಡೆವಿಲ್’ (Devil Film) ಸಿನಿಮಾದಲ್ಲಿ ಪಾತ್ರ ಹೇಗಿರಲಿದೆ? ಎಂಬುದರ ಬಗ್ಗೆ ನಟಿ ವಿವರಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ
ನಿನ್ನೆ (ಮಾ.16) ‘ಅಪ್ಪು’ ಸಿನಿಮಾ ನೋಡಲು ವೀರೇಶ್ ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ‘ದಿ ಡೆವಿಲ್’ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹೌದು ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ನನ್ನ ಪಾತ್ರದ ಶೂಟಿಂಗ್ 20% ಆಗಿದೆ. ಇನ್ನೂ 80% ಬಾಕಿ ಉಳಿದಿದೆ ಎಂದಿದ್ದಾರೆ. ಈ ವೇಳೆ, ಸೆಟ್‌ನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ತಿಳಿಸಿದ್ದಾರೆ.
ಮಿಲನಾ ಪ್ರಕಾಶ್ (Milana Prakash) ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಶರ್ಮಿಳಾ ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿ ವಿನಯ್ ಗೌಡ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ‘ಡೆವಿಲ್’ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.
ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.
ಮಿಲನಾ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ‘ದಿ ಡೆವಿಲ್’ ಚಿತ್ರಕ್ಕೆ ಶರ್ಮಿಳಾ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ತಾವು ಇರುವ ಕ್ಯಾರವಾನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಹೇಗಿದೆ? ಎಂಬುದು ರಿವೀಲ್ ಆಗಿಲ್ಲ.
ಶರ್ಮಿಳಾ ಅಷ್ಟೇ ಅಲ್ಲ, ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ವಿನಯ್ ಗೌಡ (Vinay Gowda) ‘ಡೆವಿಲ್’ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಡೆವಿಲ್‌ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ದರ್ಶನ್ (Darshan), ಶರ್ಮಿಳಾ, ವಿನಯ್ ಇರುವ ಚಿತ್ರೀಕರಣದ ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಕೊಡಲಾಗಿದೆ. ಪೊಲೀಸ್ ಮತ್ತು ಬೌನ್ಸರ್ ಇಟ್ಟುಕೊಂಡು ನಿರ್ದೇಶಕ ಶೂಟಿಂಗ್ ಶುರು ಮಾಡಿದ್ದಾರೆ.
ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.
‘ಸಜನಿ’ (Sajani) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ ಇದೀಗ ತಮಿಳು ಸಿನಿಮಾವೊಂದಕ್ಕೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಕನ್ನಡದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ಶರ್ಮಿಳಾ ಸಾಥ್ ನೀಡಿದ್ದಾರೆ.
ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ (Sharmiela Mandre) ಹೊತ್ತಿದ್ದಾರೆ. ಕನ್ನಡದ ‘ಮುಂದಿನ ನಿಲ್ದಾಣ’ ಚಿತ್ರ ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ತಮಿಳಿನ ‘ಸಿಲ್ ನೋಡಿಗಳಿಲ್’ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ:‘ಸಲಾರ್’ ಚಿತ್ರದ ಹಾಟ್ ಹಾಡಿಗೆ ಕುಣಿದ ಸಿಮ್ರನ್ ಕೌರ್
ಲಂಡನ್‌ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. ‘ಸಿಲ್ ನೋಡಿಗಳಿಲ್’ ಎಂದರೆ ಕೆಲವೇ ಕ್ಷಣಗಳಲ್ಲಿ ಎಂದು ಅರ್ಥ.
ಸದ್ಯ ತಮಿಳಿನಲ್ಲಿ ಈ ಚಿತ್ರ ನವೆಂಬರ್ 24ರಂದು ರಿಲೀಸ್ ಆಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿ ನಿರ್ಮಿಸುವ ಯೋಜನೆ ಇದೆ ಎಂದು ನಟಿ ಶರ್ಮಿಳಾ ತಿಳಿಸಿದ್ದಾರೆ.
ದೂದ್ ಪೇಡ ದಿಗಂತ್ ಇದೀಗ ಹೊಸ ಸಿನಿಮಾಗಾಗಿ ‘ಗುಳ್ಟು'(Gultoo) ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ಮತ್ತು ‘ಗಾಳಿಪಟ 2’ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಜೊತೆ ಡ್ಯುಯೇಟ್ ಹಾಡಲು ದಿಗಂತ್ ಮಂಚಾಲೆ (Diganth Manchale) ರೆಡಿಯಾಗಿದ್ದಾರೆ.
ಈಗಾಗಲೇ ’ದಿ ಜಡ್ಜ್‌ಮೆಂಟ್’ ಸಿನಿಮಾದಲ್ಲಿ ದಿಗಂತ್- ಧನ್ಯಾ ಒಟ್ಟಿಗೆ ನಟಿಸಿದ್ದಾರೆ. ಮತ್ತೆ ಈ ಹೊಸ ಚಿತ್ರದ ಮೂಲಕ ದಿಗಂತ್‌ಗೆ ನಟಿ ಧನ್ಯಾ ರಾಮ್‌ಕುಮಾರ್ ಜೊತೆಯಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, 13 ವರ್ಷಗಳ ನಂತರ ಶರ್ಮಿಳಾ ಮಾಂಡ್ರೆ- ದಿಗಂತ್ ಈ ಚಿತ್ರದ ಮೂಲಕ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.
2010ರಲ್ಲಿ ‘ಸ್ವಯಂವರ’ ಸಿನಿಮಾದಲ್ಲಿ ದಿಗಂತ್-ಶರ್ಮಿಳಾ ಜೋಡಿಯಾಗಿ ನಟಿಸಿದ್ದರು. ಗುಳ್ಟು ನಿರ್ದೇಶಕನ ಹೆಸರಿಡದ ಹೊಸ ಸಿನಿಮಾದ ಮೂಲಕ ಧನ್ಯಾ(Dhanya Ramkumar), ಶರ್ಮಿಳಾ, ದಿಗಂತ್ ಜೊತೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟ್ರೈಯಾಂಗಲ್ ಲವ್ ಸ್ಟೋರಿ ಬೆಳ್ಳಿಪರದೆಯಲ್ಲಿ ಹೇಗೆ ಮೂಡಿ ಬರಲಿದೆ ಎಂದು ಕಾದುನೋಡಬೇಕಿದೆ.
‘ಗಾಳಿಪಟ 2′ (Galipata 2) ಬೆಡಗಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ಮೋಹಕತಾರೆ ರಮ್ಯಾ (Ramya) ಜೊತೆ ಲಂಡನ್ (London) ಹಾರಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಶರ್ಮಿಳಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
‘ಸಜನಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬೆಡಗಿ ಶರ್ಮಿಳಾ ಮಾಂಡ್ರೆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ‘ಗಾಳಿಪಟ 2’ ಸಿನಿಮಾದಲ್ಲಿ ನಾಯಕಿಯಾಗಿ ಶರ್ಮಿಳಾ ಗಮನ ಸೆಳೆದರು. ಇದೀಗ ತಮ್ಮದೇ ನಿರ್ಮಾಣ (Sharmiela Mandre Productions) ಸಂಸ್ಥೆ ಮೂಲಕ ಹೊಸ ಬಗೆಯ ಕಥೆಗಳನ್ನ ನಿರ್ಮಾಣ ಮಾಡ್ತಿದ್ದಾರೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿದ್ದಾರೆ.
ಸದ್ಯ ನಟಿ ಶರ್ಮಿಳಾ, ಮೋಹಕ ತಾರೆ ಜೊತೆ ಲಂಡನ್‌ಗೆ ಹಾರಿದ್ದಾರೆ. ಸಿನಿಮಾ ಕೆಲಸದ ನಡುವೆ ಸ್ನೇಹಿತೆ ರಮ್ಯಾ ಜೊತೆ ಒಂದೊಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಅಧಿಕೃತ ಮಾಹಿತಿಯನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:Exclusive: ‘ಭೀಮ’ ಚಿತ್ರೀಕರಣದ ವೇಳೆ ದುನಿಯಾ ವಿಜಯ್ ಕಾಲಿಗೆ ಪೆಟ್ಟು
ಲೂಸಿಯಾ ಹೀರೋ ಸತೀಶ್ ಜೊತೆ ‘ದಸರಾ’ ಎಂಬ ಸಿನಿಮಾದಲ್ಲಿ ಶರ್ಮಿಳಾ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನ ನಟಿ ಶರ್ಮಿಳಾ ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಹೊಸ ಸಿನಿಮಾಗೆ ನಟಿ ಕೈಹಾಕಿದ್ದಾರೆ. ಅದಕ್ಕಾಗಿಯೇ ಶೂಟಿಂಗ್‌ಗಾಗಿ ಲಂಡನ್‌ಗೆ ಹಾರಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಶರ್ಮಿಳಾಗೆ ರಮ್ಯಾ ಕೂಡ ಸಾಥ್ ನೀಡಿದ್ದಾರೆ. ಆದರೆ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ, ರಮ್ಯಾ ಅವರು ಚಿತ್ರೀಕರಣ ಭೇಟಿ ಕೊಟ್ಟಿರೋದಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯದಲ್ಲೇ ತಮ್ಮ ನಿರ್ಮಾಣದ ಹೊಸ ಸಿನಿಮಾ ಬಗ್ಗೆ ಶರ್ಮಿಳಾ, ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.
‘ಗಾಳಿಪಟ 2′ (Galipata 2) ನಾಯಕಿ ಶರ್ಮಿಳಾ ಮಾಂಡ್ರೆ (Sharmiela Mandre) ಸದ್ಯ ನಿರ್ಮಾಪಕಿಯಾಗಿ (Producer) ಗುರುತಿಸಿಕೊಳ್ತಿದ್ದಾರೆ. ಹೊಸ ಬಗೆಯ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿಯ ಮದುವೆ ಬಗ್ಗೆ ಕೇಳಲಾಗಿದೆ. ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನಟಿ ಬಿಚ್ಚಿಟ್ಟಿದ್ದಾರೆ.
‘ಸಜನಿ’ ಸಿನಿಮಾ ಮೂಲಕ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಎಂಟ್ರಿ ಕೊಟ್ಟರು. ಬಳಿಕ ನವಗ್ರಹ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನ ನಟಿ ಹೊತ್ತಿದ್ದಾರೆ. ಸದ್ಯ ಮದುವೆ ಬಗ್ಗೆ ಶರ್ಮಿಳಾ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್
ನನಗೆ ಯಾವುದೇ ಮದುವೆಗೆ ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ ಆಗುತ್ತಿಯಾ, ಮದುವೆಯ ಯೋಚನೆ ಇಲ್ವಾ ಅಂತ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಯಾವುದೇ ಫಂಕ್ಷನ್‌ಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತೇನೆ, ಮದುವೆ ಮನೆಗಳಿಗೆ ಹೋಗುವುದು ಎಂದರೆ ಭಯ ಎಂದಿದ್ದಾರೆ.
ಅಷ್ಟಕ್ಕೂ ತಮಗೆ ಮದುವೆ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಈಗ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಿಂಜರಿಯುತ್ತಾರೆ. ತಮಗೆ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ನಾನು ಅಂತವಳಲ್ಲ, ನಾನು ಮದುವೆಯಾಗುವುದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಮದುವೆಯಾಗುತ್ತೇನೆ ಎಂದಿದ್ದಾರೆ. ಎಂಥ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, ಚಿಕ್ಕವಳಿರುವಾಗ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದು ಅಂದುಕೊಂಡಿದ್ದೆ. ಈಗ ಅದ್ಯಾವುದೂ ಆಸೆ ಇಲ್ಲ. ಅವೆಲ್ಲಾ 23-24ನೇ ವಯಸ್ಸಿಗೆ ಮುಗಿದುಹೋದವು. ಈಗ ಸ್ವೀಟ್, ನೈಸ್ ಮತ್ತು ಒಳ್ಳೆಯ ಪರ್ಸನ್ಯಾಲಿಟಿ ಇರೋ ಹುಡುಗ ಬೇಕು ಅಷ್ಟೇ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹುಡುಗನೇ ಬೇಕೆಂದೇನೂ ಇಲ್ಲ, ಯಾವ ಕ್ಷೇತ್ರದವನಾದರೂ ಓಕೆ ಎಂದಿದ್ದಾರೆ.
– ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರಿಂದ ಚಾರ್ಜ್‍ಶೀಟ್ ಸಲ್ಲಿಕೆ
– ಎರಡು ದಿನ ಮೂರು ಆಸ್ಪತ್ರೆಗೆ ಜಿಗಿದಿದ್ದು ಯಾಕೆ?
ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ ಎಂದು ಉಲ್ಲೇಖವಾಗಿದೆ.
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಏಪ್ರಿಲ್ 4ರಂದು ಬೆಳಗಿನ ಜಾವ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ವಸಂತನಗರ ಫ್ಲೈ ಓವರ್‌ನ ಕಂಬಕ್ಕೆ ಗುದ್ದಿತ್ತು. ಅಪಘಾತವಾದ ಬಳಿಕ ಜಾಗ್ವಾರ್ ಕಾರ್ ಅಲ್ಲೇ ಬಿಟ್ಟು ಶರ್ಮಿಳಾ ಮತ್ತು ಅವರ ಸ್ನೇಹಿತರು ಆಸ್ಪತ್ರೆಗೆ ತೆರಳಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸರು 4ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.
32 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಆದರಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಡ್ರೈವಿಂಗ್ ಸರಿಯಾಗಿ ಬರದಿದ್ರೂ ಓವರ್ ಸ್ಪೀಡ್‍ನಲ್ಲಿ ಕಾರು ಓಡಿಸಿದ್ದೆ ಅಪಘಾತಕ್ಕೆ ಮುಖ್ಯ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.
ಪ್ರಕರಣದಲ್ಲಿ ಕಾರು ಚಾಲಾಯಿಸುತ್ತಿದ್ದ ಡಾನ್ ಥಾಮಸ್ ಆರೋಪಿ ಎಂದು ಗುರುತಿಸಿ, ಕಾರಿನಲ್ಲಿದ್ದ ಶಿಫಾ ಜೋಹರ್, ಲೋಕೇಶ್ ಕುಮಾರ್, ನಿಕಿಲ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಚಾರ್ಜ್‍ಶೀಟ್‍ನಲ್ಲಿ ಏನಿದೆ?
ಏಪ್ರಿಲ್ 4ರಂದು ನಡೆದ ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರಿಗೆ ಗಂಭೀರವಾಗಿ ಗಾಯವಾಗಿತ್ತು. ಈ ವೇಳೆ ಬೆಳಗಿನ ಜಾವ 3:45ಕ್ಕೆ ಪೋರ್ಟಿಸ್ ಆಸ್ಪತ್ರೆಗೆ ತೆರಳಿದ್ದ ಗಾಯಾಳುಗಳು ಕೇವಲ ಪ್ರಾಥಮಿಕ ಚಿಕಿತ್ಸೆ ಪಡೆದು ಎಸ್ಕೇಪ್ ಆಗಿದ್ದರು. ನಂತರ ಅದೇ ದಿನ ಮಧ್ಯಾಹ್ನ 1:30ರ ವೇಳೆಗೆ ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಈ ವೇಳೆ ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ಹೈಗ್ರೌಂಡ್ಸ್ ಟ್ರಾಫಿಕ್ ಮಾಹಿತಿ ಪಡೆಯಲು ಆಸ್ಪತ್ರೆಗೆ ಹೋಗಿದ್ದರು.
ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಶರ್ಮಿಳಾ ಮಾಂಡ್ರೆ ಪರಾರಿಯಾಗಿದ್ದರು. ವೈದ್ಯರ ಸಲಹೆ ಧಿಕ್ಕರಿಸಿ ಡಿಸ್ಚಾರ್ಜ್ ಆಗಿ ಹೋಗಿದ್ದರು. ನಂತರ ಏಪ್ರಿಲ್ 5ರಂದು ಸಂಜೆ 5:5ರಲ್ಲಿ ಹೆಬ್ಬಾಳದ ಆಸ್ಟ್ರಾ ಆಸ್ಪತ್ರೆಯಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದರು. ಈ ವೇಳೆ ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆದರೆ ಆಗ ಹೇಳಿಕೆ ಪಡೆಯದಂತೆ ಆಸ್ಪತ್ರೆಯ ವೈದ್ಯರು ತಡೆದಿದ್ದಾರೆ. ಬಳಿಕ ಏಪ್ರಿಲ್ 6ರಂದು ಪೊಲೀಸರಿಗೆ ಸಿಕ್ಕ ಶರ್ಮಿಳಾ ಮಾಂಡ್ರೆ ಮಾಹಿತಿ ನೀಡಿದ್ದಾರೆ.
ಈ ವೇಳೆ ನಾನು ಕಾರು ಚಾಲನೆ ಮಾಡಿಲ್ಲ. ನನ್ನ ಸ್ನೇಹಿತ ಡಾನ್ ಥಾಮಸ್ ಅವರು ಕಾರು ಚಾಲನೆ ಮಾಡಿದ್ದಾರೆ ಎಂದು ಮಾಂಡ್ರೆ ಹೇಳಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ.
ಪ್ರಶ್ನೆಗಳಿಗೆ ಬೇಕಿದೆ ಉತ್ತರ?
ಕೋವಿಡ್ ಪಾಸ್ ತೆಗೆದು ಶರ್ಮಿಳಾ ಜಾಲಿ ರೈಡ್ ಮಾಡಿದ್ರಾ? ಈ ನಡುವೆ ಘಟನೆ ನಡೆದು ಎರಡು ದಿನಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಶರ್ಮಿಳಾ ಮಾಂಡ್ರೆ ಹೋಗಿದ್ದು ಯಾಕೆ? ಫೋರ್ಟಿಸ್ ಆಸ್ಪತ್ರೆಯಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಲು ಮುಂದಾಗಿದ್ದಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ರಕ್ತದ ಮಾದರಿ ತೆಗೆದುಕೊಂಡರೆ ಸತ್ಯ ಹೊರಬುರುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ಅಂದು ಮಾಡಿದ ಪಾರ್ಟಿಯ ಕುರುಹುಗಳು ಸಿಗಬಾರದೆಂದು ಮೂರು ದಿನ ಕಣ್ಣ ಮುಚ್ಚಾಲೆ ಆಡಿದ್ರಾ? ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಿದೆ.
ಶರ್ಮಿಳಾ ಹೇಳಿದ್ದು ಏನು?
ಸ್ನೇಹಿತರೊಂದಿಗೆ ಶರ್ಮಿಳಾ ಪಾರ್ಟಿ ಮಾಡಲು ತೆರಳಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅವರು, ನಾನು ಔಷಧಿ ತರುವ ಸಲುವಾಗಿ ಹೊರಗೆ ಬಂದಿದ್ದೆ ಎಂದು ಹೇಳಿದ್ದರು. ಅಪಘಾತಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಿದ್ದ ಶರ್ಮಿಳಾ ನಂತರ ಮೌನಕ್ಕೆ ಜಾರಿದ್ದರು. ಮೌನಕ್ಕೆ ಜಾರಿದ್ದು ಯಾಕೆ? ಔಷಧಿ ತರಲು ಅಷ್ಟು ಸಂಖ್ಯೆಯ ಸ್ನೇಹಿತರ ಜೊತೆ ತೆರಳಿದ್ದು ಯಾಕೆ ಎಂಬ ಪ್ರಶ್ನೆ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.
ತನಿಖೆಯ ಬಗ್ಗೆ ಅನುಮಾನ:
ಅಪಘಾತ ನಡೆದ ಬಳಿಕ ಪೊಲೀಸರ ತನಿಖೆಯ ಬಗ್ಗೆ ಸಾಕಷ್ಟು ಅನುಮಾನ ಎದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಜನ ಪ್ರಶ್ನಿಸಿ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಲಾಕ್‍ಡೌನ್ ನಿಯಮಗಳು ತುಂಬ ಬಿಗಿಯಾಗಿತ್ತು. ಪಾಸ್ ಇಲ್ಲದೆ ಯಾವುದೇ ವಾಹನ ರಸ್ತೆಗೆ ಇಳಿಯುವಂತೆ ಇರಲಿಲ್ಲ. ಸೂಕ್ತ ಕಾರಣ ಇಲ್ಲದೆ ರಸ್ತೆಯಲ್ಲಿ ಕಾಣಿಸಿಕೊಂಡವರ ಮೇಲೆ ಪೊಲೀಸರು ಕ್ರಮ ಕೈಗೊಂಡು ವಾಹನಗಳನ್ನು ಜಪ್ತಿ ಮಾಡಿ ದಂಡ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಶರ್ಮಿಳಾ ಐಷಾರಾಮಿ ಕಾರಿನಲ್ಲಿ ಯಾಕೆ ಮತ್ತು ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಜನ ಖಾರವಾಗಿ ಪ್ರಶ್ನೆ ಮಾಡುತ್ತಿದ್ದರು.