Tag: Shark Fish

  • ಗಾಳಕ್ಕೆ ಬಿದ್ದ ಅಪರೂಪದ ಶಾರ್ಕ್ ಜೊತೆ ಅರಬ್ಬೀ ಸಮುದ್ರದಲ್ಲಿ ಮೀನುಗಾರ ಸೆಣಸಾಟ

    ಗಾಳಕ್ಕೆ ಬಿದ್ದ ಅಪರೂಪದ ಶಾರ್ಕ್ ಜೊತೆ ಅರಬ್ಬೀ ಸಮುದ್ರದಲ್ಲಿ ಮೀನುಗಾರ ಸೆಣಸಾಟ

    ಉಡುಪಿ: ಮುಂಗಾರು ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬೀ ಸಮುದ್ರದಲ್ಲಿ ಹವ್ಯಾಸಿ ಮೀನುಗಾರಿಕೆ ಶುರುವಾಗಿದೆ. ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿರುವ ಯುವಕರು ದೋಣಿಗಳ ಜೊತೆ ಅರಬ್ಬೀ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಗಾಳಕ್ಕೆ ಬಿದ್ದ ಅಪರೂಪರದ ಶಾರ್ಕ್ ಜೊತೆ ಮೀನುಗಾರರು ಅರಬ್ಬೀ ಸಮುದ್ರದಲ್ಲಿ ಮೀನುಗಾರ ಸೆಣಸಾಡಿಸಿದ್ದಾರೆ.

    ಉಡುಪಿಯ ಪಡುಕೆರೆ ಕಡಲ ತೀರದಿಂದ ಸುಮಾರು 8-10 ಕಿಲೋಮೀಟರ್ ದೂರದಲ್ಲಿ ಗಾಳಹಾಕಿ ಮೀನುಗಾರಿಕೆ ಮಾಡುವ ಹವ್ಯಾಸಿ ಉದ್ಯಾವರ ನಾಗೇಶ್ ಕುಮಾರ್ ಅವರ ಗಾಳಕ್ಕೆ ಅಪರೂಪದ ಮೀನೊಂದು ಸಿಲುಕಿದೆ. ಭಾರೀ ಶಕ್ತಿಯುತ ಶಾರ್ಕ್ ಮೀನು ಗಾಳಕ್ಕೆ ಸಿಕ್ಕ ಹರಸಾಹಸ ಪಟ್ಟ ಘಟನೆ ನಡೆದಿದೆ.

    ಕಳೆದ ಹಲವಾರು ವರ್ಷಗಳಿಂದ ಉದ್ಯಾವರ ನಾಗೇಶ್ ಗಾಲದ ಜೊತೆ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದಾರೆ. ಒಂದು ಬಾರಿಯೂ ಬರಿಗೈಯಲ್ಲಿ ನಾಗೇಶ್ ವಾಪಸ್ ಬಂದ ಉದಾಹರಣೆಯಿಲ್ಲ. ಈ ಬಾರಿ ಸಮುದ್ರಕ್ಕೆ ತೆರಳಿದ ನಾಗೇಶ್ ಗಾಳಕ್ಕೆ ಬಾರಿ ಅಪರೂಪದ ಶಾರ್ಕ್ ಮೀನು ಸಿಲುಕಿದೆ. ತುಳು ಭಾಷೆಯಲ್ಲಿ ಈ ಮೀನಿಗೆ ತಾಟೆ ಎಂದು ಕರೆಯುತ್ತಾರೆ. ಬಹಳ ಶಕ್ತಿಶಾಲಿಯಾಗಿರುವ ಈ ಮೀನು ನಾಗೇಶ್ ಕುಮಾರ್ ಅವರನ್ನು ಸತಾಯಿಸಿ ಸತಾಯಿಸಿ ದೋಣಿ ಕೈಸೇರಿದೆ.

    ಉದ್ಯೋಗದಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ನಾಗೇಶ್ ಕುಮಾರ್ ಗಾಳ ಹಾಕಿ ಮೀನು ಹಿಡಿಯುವುದರಲ್ಲಿ ಬಹಳ ನಿಸ್ಸೀಮ. ಇಬ್ಬರು ಜೊತೆಯಾಗಿ ಆಗಾಗ ಸಮುದ್ರಕ್ಕೆ ಹೋಗುತ್ತೇವೆ. ಸಿಕ್ಕ ಮೀನನ್ನು ಹಂಚಿಕೊಳ್ಳುತ್ತೇವೆ. ಆದರೆ ಈ ಶಾರ್ಕ್ ಮೀನು ಗಾಳಕ್ಕೆ ಬಿದ್ದ ನಂತರ ಎತ್ತಿಗೆ ಹಾಕಲು ಬಹಳಷ್ಟು ಕಷ್ಟವಾಯಿತು. ಎಲ್ಲ ಮೀನುಗಳು ಗಾಳಕ್ಕೆ ಸಿಕ್ಕ ನಂತರ ಸಲೀಸಾಗಿ ಎಳೆಯಲು ಬರುತ್ತದೆ. ಆದರೆ ಇದು ಬಹಳ ಸತಾಯಿಸಿದ್ದು ಎಂದು ಮೊಗವೀರ ಯುವಕ ಯತೀಶ್ ತಿಂಗಳಾಯ ಮಾಹಿತಿ ನೀಡಿದರು. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

  • ಮುಕ್ಕ ಬೀಚ್‍ನಲ್ಲಿ ಸತ್ತ ಶಾರ್ಕ್ ಮೀನು ಪತ್ತೆ

    ಮುಕ್ಕ ಬೀಚ್‍ನಲ್ಲಿ ಸತ್ತ ಶಾರ್ಕ್ ಮೀನು ಪತ್ತೆ

    ಮಂಗಳೂರು: ಸತ್ತ ಶಾರ್ಕ್ ಮೀನೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕ ಬೀಚ್‍ನಲ್ಲಿ ಪತ್ತೆಯಾಗಿದೆ.

    ಸಮುದ್ರ ದಡದಲ್ಲಿ ಶಾರ್ಕ್ ಮೀನು ಬಂದು ಬಿದ್ದಿತ್ತು. ಇಂದು ಬೆಳಗ್ಗೆ ಶಾರ್ಕ್ ಮೀನನ್ನು ಕಂಡ ಕಡಲವಾಸಿಗಳು ದಡದಿಂದ ಮೇಲಕೆತ್ತಲು ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಅಲೆಗಳ ಅಬ್ಬರಿಂದ ಸುರತ್ಕಲ್ ಮುಕ್ಕ ಬೀಚ್ ಬಳಿ ಡಾಲ್ಫಿನ್ ಮೀನುಗಳು ಬರುತ್ತಿದ್ದವು. ಆದರೆ ಅಪರೂಪ ಎಂಬಂತೆ ಶನಿವಾರ ರಾತ್ರಿಯೇ ಸತ್ತ ಶಾರ್ಕ್ ಮೀನೊಂದು ದಡದ ಬಳಿ ಬಂದು ಬಿದ್ದಿದೆ.

    ಇಂದು ಬೀಚ್‍ನ ಬಳಿ ಕಡಲವಾಸಿಗಳು ಹೋದಾಗ ಈ ಶಾರ್ಕ್ ಮೀನು ಪತ್ತೆಯಾಗಿದೆ. ಬಳಿಕ ಅವರೆಲ್ಲರೂ ಸೇರಿ ಸತ್ತ ಶಾರ್ಕ್ ಮೀನನ್ನು ದಡದಿಂದ ಮೇಲೆತ್ತಿದ್ದಾರೆ. ಈ ರೀತಿಯ ಸತ್ತ ಮೀನುಗಳು ಪತ್ತೆಯಾದ ದಡದ ಪಕ್ಕದಲ್ಲೇ ಮೀನುಗಳನ್ನು ಹೂಳುತ್ತಾರೆ. ಈ ಹಿಂದೆ ಡಾಲ್ಫಿನ್ ಮೀನುಗಳೂ ಸತ್ತು ದಡ ಸೇರಿತ್ತು. ಅವುಗಳನ್ನು ಸಹ ಕಡಲ ಬಳಿಯೇ ಹೂಳಲಾಗಿತ್ತು.

    ಇತ್ತೀಚೆಗೆ ವಾಯು ಚಂಡಮಾರುತದ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ರಕ್ಕಸ ಗಾತ್ರದ ಅಲೆಗಳು ಎದ್ದಿದ್ದು, ಉಳ್ಳಾಲದ ರೆಸಾರ್ಟ್ ಶೌಚಾಲಯದ ಕಟ್ಟಡ ನೋಡ ನೋಡುತ್ತಿದ್ದಂತೆಯೇ ನೆಲಸಮವಾಗಿತ್ತು.