Tag: shark

  • ಈಜುತ್ತಿದ್ದಾಗ ಶಾರ್ಕ್ ದಾಳಿ – ಅಪ್ರಾಪ್ತೆಯ ಕಾಲು ಕಟ್

    ಈಜುತ್ತಿದ್ದಾಗ ಶಾರ್ಕ್ ದಾಳಿ – ಅಪ್ರಾಪ್ತೆಯ ಕಾಲು ಕಟ್

    ವಾಷಿಂಗ್ಟನ್: ಶಾರ್ಕ್ ದಾಳಿಯಿಂದಾಗಿ ಅಪ್ರಾಪ್ತೆ ತನ್ನ ಕಾಲನ್ನು ಕಳೆದುಕೊಂಡ ಘಟನೆ ಅಮೆರಿಕದ ಸೌತ್‍ಈಸ್ಟ್ರನ್‍ನಲ್ಲಿ ನಡೆದಿದೆ.

    ಪೈಗೆ ವಿಂಟರ್(17) ಉತ್ತರ ಕ್ಯಾರೋಲಿನಾದಲ್ಲಿರುವ ಫೋರ್ಟ್ ಮೆಕಾನ್ ಸಮುದ್ರದಲ್ಲಿ ಕಾಲ ಕಳೆಯುತ್ತಿದ್ದಳು. ಈ ವೇಳೆ ಶಾರ್ಕ್ ಆಕೆಯ ಮೇಲೆ ದಾಳಿ ಮಾಡಿದೆ. ಪೈಗೆ ತಂದೆ ವೈದ್ಯರಾಗಿದ್ದು, ತಕ್ಷಣ ಸಮುದ್ರಕ್ಕೆ ಇಳಿದು ಶಾರ್ಕ್ ಮುಖಕ್ಕೆ 5 ಬಾರಿ ಪಂಚ್ ಮಾಡಿ ಮಗಳನ್ನು ರಕ್ಷಿಸಿದ್ದಾರೆ.

    ಶಾರ್ಕ್ ದಾಳಿಯಿಂದ ಪೈಗೆಯ ಎಡಗೈ ಹಾಗೂ ಎಡಗಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಬಳಿಕ ಆಕೆಯನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿಯ ತೀವ್ರತೆಯಿಂದಾಗಿ ಪೈಗೆಯ ಎಡಗಾಲಿನ ಅರ್ಧ ಭಾಗವನ್ನು ಕತ್ತರಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸದ ಪೈಗೆ, ನನಗೆ ಗೊತ್ತು, ನಾನು ಚೇತರಿಸಿಕೊಳ್ಳಲು ಸಾಕಷ್ಟು ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ನಾನು ಪಾಸಿಟಿವ್ ಆಗಿರುವುದನ್ನು ಮುಂದುವರಿಸುತ್ತೇನೆ. ಸದ್ಯ ನನಗೆ ಹೆಚ್ಚು ಅಪಾಯ ಆಗಿಲ್ಲ ಎಂದು ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾಳೆ.

  • ಆಹಾರ ಹಾಕುತ್ತಿದ್ದ ಮಹಿಳೆಯನ್ನೇ ತಿನ್ನಲು ಮುಂದಾದ ಶಾರ್ಕ್: ವೈರಲ್ ವಿಡಿಯೋ ನೋಡಿ

    ಆಹಾರ ಹಾಕುತ್ತಿದ್ದ ಮಹಿಳೆಯನ್ನೇ ತಿನ್ನಲು ಮುಂದಾದ ಶಾರ್ಕ್: ವೈರಲ್ ವಿಡಿಯೋ ನೋಡಿ

    ಕ್ಯಾನ್ಬೆರಾ: ಶಾರ್ಕ್‍ಗೆ ಆಹಾರ ಹಾಕುವಾಗ ಅದು ಮಹಿಳೆಯನ್ನು ಎಳೆಯಲು ಪ್ರಯತ್ನಿಸಿದ್ದು, ಮಹಿಳೆ ಸ್ವಲ್ಪದರಲ್ಲೇ ಪಾರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಮೆಲ್ಸಿನಾ(34) ಶಾರ್ಕ್ ದಾಳಿಯಿಂದ ಪಾರಾದ ಮಹಿಳೆ. ಮೆಲ್ಸಿನಾ ರಜೆ ಕಳೆಯಲು ದುಗಾಂಗ್ ಬೇಗೆ ಬಂದಿದ್ದಳು. ಆಗ ಅಲ್ಲಿ ಟ್ವಾನಿ ನರ್ಸ್ ಶಾರ್ಕ್‍ಗೆ ಮೆಲ್ಸಿನಾ ತನ್ನ ನಾಲ್ಕು ಜನ ಸ್ನೇಹಿತರ ಜೊತೆ ಸೇರಿ ತನ್ನ ಕೈಯಾರೆ ಆಹಾರ ಹಾಕುತ್ತಿದ್ದಳು.

    ಮಲ್ಸಿನಾ ಹಾಗೂ ಆಕೆಯ ಸ್ನೇಹಿತರು ಆಹಾರ ನೀಡುವಾಗ ಶಾರ್ಕ್‍ಗಳು ಅವರ ವಿಹಾರ ನೌಕೆ ಹತ್ತಿರ ಬಂದಿದೆ. ಆ ವೇಳೆ ಮಲ್ಸಿನಾ ತನ್ನ ಕೈಯಾರೇ ಆಹಾರ ಹಾಕುವಾಗ ಶಾರ್ಕ್‍ವೊಂದು ತಕ್ಷಣ ಆಕೆ ಕೈ ಬೆರಳನ್ನು ಹಿಡಿದು ನೀರಿನೊಳಗೆ ಎಳೆಯಲು ಪ್ರಯತ್ನಿಸಿತ್ತು. ಆಗ ಸ್ನೇಹಿತರು ಆಕೆಯನ್ನು ಮೇಲೆಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಶಾರ್ಕ್ ನನ್ನ ಬೆರಳನ್ನು ಹಿಡಿದಾಗ ಆ ಅಪಾರ ಒತ್ತಡದಿಂದ ಬೆರಳಿನ ಮೂಳೆ ಚೂರು ಚೂರು ಆಯ್ತು ಎಂದುಕೊಂಡೆ. ಆದರೆ ಯಾವುದೇ ಹಾನಿ ಆಗಿಲ್ಲ ಎಂದು ಮೆಲ್ಸಿನಾ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾಳೆ.

    ಸದ್ಯ ಮಲ್ಸಿನಾಗೆ ಫ್ರಾಕ್ಚರ್ ಹಾಗೂ ಟೋರ್ನ್ ಲಿಗಾಮೆಂಟ್ ಆಗಿದ್ದು, ತನ್ನ ರಜೆಯನ್ನು ಪೂರ್ಣಗೊಳಿಸಿ ಪರ್ತ್ ಹಿಂತಿರುಗುವುದಾಗಿ ಹೇಳಿದ್ದಾಳೆ. ಅಲ್ಲದೇ ತನ್ನ ಬೆರಳು ಶೀಘ್ರದಲ್ಲೇ ಸರಿ ಹೋಗುವುದಾಗಿ ಹೇಳಿಕೊಂಡಿದ್ದಾಳೆ.

    ಶಾರ್ಕ್ ನನ್ನ ಮೇಲೆ ದಾಳಿ ನಡೆಸಿಲ್ಲ. ನನ್ನ ಚಿಕ್ಕ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಮೆಲ್ಸಿನಾ ತಿಳಿಸಿದ್ದಾಳೆ. ಸದ್ಯ ಶಾರ್ಕ್ ಮೆಲ್ಸಿನಾ ಮೇಲೆ ದಾಳಿ ಮಾಡಿರುವ ವಿಡಿಯೋವನ್ನು ಆಕೆಯ ಸ್ನೇಹಿತರು ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

  • ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ, ಶಾರ್ಕ್ ಹಿಂಬಾಲಿಸ್ತು! ಮುಂದೇನಾಯ್ತು ಅಂತ ಕೇಳಿದ್ರೆ ಅಚ್ಚರಿಪಡ್ತೀರ

    ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ, ಶಾರ್ಕ್ ಹಿಂಬಾಲಿಸ್ತು! ಮುಂದೇನಾಯ್ತು ಅಂತ ಕೇಳಿದ್ರೆ ಅಚ್ಚರಿಪಡ್ತೀರ

    ವಾಷಿಂಗ್ಟನ್: ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು, ಶಾರ್ಕ್‍ವೊಂದು ಆತನನ್ನು ಹಿಂಬಾಲಿಸಿ ಕೊನೆಗೆ ಪೊಲೀಸರೇ ಆತನನ್ನು ಕಾಪಾಡಿದ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬುಧವಾರದಂದು ನಾರ್ತ್ ಕ್ಯಾರೊಲಿನಾದ ಸರ್ಫ್ ಸಿಟಿಯಲ್ಲಿ 20 ವರ್ಷದ ಝಚಾರಿ ಕಿಂಗ್ಸ್ ಬರಿನನ್ನು ಟ್ರಾಫಿಕ್ ಪೊಲೀಸರು ತಡೆದಿದ್ರು. ಕಿಂಗ್ಸ್ ಬರಿ ಕಾರಿನಲ್ಲಿ ನಿಷೇಧಿತ ವಸ್ತುವೊಂದನ್ನ ಅಕ್ರಮವಾಗಿ ಇಟ್ಟುಕೊಂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಕಿಂಗ್ಸ್ ಬರಿಗೆ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದರು. ಆದ್ರೆ ಆತ ಆಶ್ಚರ್ಯಕರ ರೀತಿಯಲ್ಲಿ ಕಾರನ್ನ ಬೀಚ್ ಕಡೆಗೆ ತಿರುಗಿಸಿ, ನಂತರ ಸಮುದ್ರಕ್ಕೆ ಹಾರಿ ಈಜಲು ಶುರು ಮಾಡಿದ್ದ.

    ಸರ್ಫ್ ಸಿಟಿ ಪೊಲೀಸರು ಕಿಂಗ್ಸ್ ಬರಿನನ್ನು ಪತ್ತೆಹಚ್ಚಿ ಬಂಧಿಸಲು ಸುಮಾರು ಮೂರು ಗಂಟೆಯೇ ಬೇಕಾಯ್ತು. ಪೊಲೀಸರು ಆತನ ಪತ್ತೆಗೆ ಡ್ರೋನ್ ಕೂಡ ಹಾರಿಬಿಡಬೇಕಾಯ್ತು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಶಾರ್ಕ್‍ವೊಂದು ಕಿಂಗ್ಸ್ ಬರಿ ಸಮೀಪದಲ್ಲೇ ಈಜುತ್ತಿದ್ದುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಕಿಂಗ್ಸ್ ಬರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯ ರಕ್ಷಣಾ ಕಾರ್ಯವಾಗಿ ಮಾರ್ಪಾಡಾಗಿತ್ತು.

    ಡ್ರೋನ್ ಆಪರೇಟ್ ಮಾಡುತ್ತಿದ್ದ ಪೊಲೀಸರಿಗೆ ಶಾರ್ಕ್ ಕಾಣಿಸುವ ವೇಳೆಗೆ ಕಿಂಗ್ಸ್ ಬರಿ ಸುಮಾರು 1 ಗಂಟೆಯಷ್ಟು ಕಾಲ ಈಜಾಡಿ ಸಮುದ್ರ ತೀರದಿಂದ 4 ಸಾವಿರ ಅಡಿಗಳಷ್ಟು ದೂರಕ್ಕೆ ಹೋಗಿದ್ದ.

    ಕೊನೆಗೆ ಪೊಲೀಸರಿಂದ ದೂರ ಹೋಗಬಯಸಿದ್ದ ಕಿಂಗ್ಸ್ ಬರಿನನ್ನು ಪೊಲೀಸರೇ ಕಾಪಾಡಿ ಬಂಧಿಸಿದ್ದಾರೆ. ಕಿಂಗ್ಸ್‍ಬರಿ ವಿರುದ್ಧ ಹಲವಾರು ಡ್ರಗ್ಸ್ ಸಂಬಂಧಿತ ಆರೋಪಗಳಿವೆ ಎಂದು ವರದಿಯಾಗಿದೆ.