Tag: Sharjah

  • ಹೈದರಾಬಾದ್ ದಾಳಿಗೆ ಮಂಕಾದ ಆರ್‌ಸಿಬಿ – ವಾರ್ನರ್ ಪಡೆಗೆ 121 ರನ್‍ಗಳ ಟಾರ್ಗೆಟ್

    ಹೈದರಾಬಾದ್ ದಾಳಿಗೆ ಮಂಕಾದ ಆರ್‌ಸಿಬಿ – ವಾರ್ನರ್ ಪಡೆಗೆ 121 ರನ್‍ಗಳ ಟಾರ್ಗೆಟ್

    – 7 ಬಾರಿ ಕೊಹ್ಲಿ ವಿಕೆಟ್ ತೆಗೆದು ದಾಖಲೆ ಬರೆದ ಸಂದೀಪ್ ಶರ್ಮಾ

    ಶಾರ್ಜಾ: ಇಂದು ಸಖತ್ ಶನಿವಾರದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಹೈದರಾಬಾದ್ ತಂಡಕ್ಕೆ ಕೇವಲ 121 ರನ್‍ಗಳ ಗುರಿ ನೀಡಿದೆ.

    ಇಂದು ಶಾರ್ಜಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 52ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಯ್ತು. ಪರಿಣಾಮ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿ 20 ಓವರಿನಲ್ಲಿ ಕೇವಲ 120 ರನ್‍ಗಳನ್ನು ಪೇರಿಸಿತು.

    ಸಂದೀಪ್ ಶರ್ಮಾ ಬೌಲಿಂಗ್ ದಾಳಿ
    ಇಂದು ಆರಂಭದಿಂದಲೇ ಹೈದರಾಬಾದ್ ಬೌಲರ್‍ಗಳು ಕೊಹ್ಲಿ ಪಡೆಯ ಮೇಲೆ ಸವಾರಿ ಮಾಡಿದರು. ಇದರಲ್ಲಿ ಉತ್ತಮವಾಗಿ ಬೌಲ್ ಮಾಡಿದ ಸಂದೀಪ್ ಶರ್ಮಾ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಅದರಲ್ಲಿ ಕೊಹ್ಲಿಯನ್ನು ಔಟ್ ಮಾಡಿ ಐಪಿಎಲ್ ಇತಿಹಾಸದಲ್ಲಿ ಕೊಹ್ಲಿಯನ್ನು ಏಳು ಬಾರಿ ಔಟ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಜೊತೆಗೆ ಐಪಿಎಲ್‍ನಲ್ಲಿ ಪವರ್ ಪ್ಲೇ ಹಂತದಲ್ಲಿ 51 ವಿಕೆಟ್ ಪಡೆಯುವ ಮೂಲಕ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ. 52 ವಿಕೆಟ್ ಪಡೆದ ಜಹೀರ್ ಖಾನ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್‍ರೈಸರ್ಸ್ ಹೈದರಾಬಾದ್ ತಂಡ ಬೌಲರ್ ಸಂದೀಪ್ ಶರ್ಮಾ ಆರಂಭಿಕ ಆಘಾತ ನೀಡಿದರು. ಎರಡನೇ ಓವರ್ 5ನೇ ಬಾಲಿನಲ್ಲಿ ಐದು ರನ್‍ಗಳಿಸಿ ಆಡುತ್ತಿದ್ದ ಇನ್ ಫಾರ್ಮ್ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಶರ್ಮಾ ಬೌಲ್ಡ್ ಮಾಡಿದರು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 7 ಬಾಲಿಗೆ ಏಳು ರನ್ ಸಿಡಿಸಿ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು.

    ಪವರ್ ಪ್ಲೇ ಹಂತದಲ್ಲಿ ಎರಡು ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡ ಆರನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 30 ರನ್ ಪೇರಿಸಿತು. ನಂತರ ಜೊತೆಯಾದ ಜೋಶ್ ಫಿಲಿಪ್ ಮತ್ತು ಎಬಿ ಡಿವಿಲಿಯರ್ಸ್ 38 ಬಾಲಿನಲ್ಲಿ 43 ರನ್‍ಗಳ ಜೊತೆಯಾಟವಾಡಿದರು. ಆದರೆ 24 ಬಾಲಿಗೆ 24 ರನ್ ಗಳಿಸಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಅವರು ಶಹಬಾಜ್ ನದೀಮ್‍ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ವಿಲಿಯರ್ಸ್ ನಂತರ ಆರಂಭದಿಂಲೂ ತಾಳ್ಮೆಯಿಂದ ಆಡಿಕೊಂಡು ಬಂದಿದ್ದ ಜೋಶ್ ಫಿಲಿಪ್ ಅವರು 32 ರನ್ ಹೊಡೆದು ರಶೀದ್ ಖಾನ್ ಅವರ ಬೌಲಿಂಗ್ ಮೋಡಿಗೆ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಗುರ್ಕೀರತ್ ಸಿಂಗ್ ಮನ್ ಮತ್ತು ವಾಷಿಂಗ್ಟನ್ ಸುಂದರ್ ತಾಳ್ಮೆಯಿಂದ ರನ್ ಕಲೆಹಾಕಿ 16ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ ವಾಷಿಂಗ್ಟನ್ ಸುಂದರ್ ಅವರು ಔಟ್ ಆದರು.

    ಇದಾದ ನಂತರ ಮೂರು ರನ್‍ಗಳಿಸಿದ್ದ ಕ್ರಿಸ್ ಮೋರಿಸ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನೆಡೆದರು. ನಂತರ ಬಂದ ಇಸುರು ಉದಾನಾ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಡೆಲ್ಲಿ ಮಿಂಚಿಂಗ್ – ರಬಾಡಾ ದಾಳಿಗೆ ರಾಜಸ್ಥಾನ್ ಆಲೌಟ್

    ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಡೆಲ್ಲಿ ಮಿಂಚಿಂಗ್ – ರಬಾಡಾ ದಾಳಿಗೆ ರಾಜಸ್ಥಾನ್ ಆಲೌಟ್

    – ಪೆವಿಲಿಯನ್ ಪೆರೇಡ್ ನಡೆಸಿದ ರಾಯಲ್ಸ್ ಆಟಗಾರರು
    – 10 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಡೆಲ್ಲಿ

    ಶಾರ್ಜಾ: ಐಪಿಎಲ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 46 ರನ್‍ಗಳ ಭರ್ಜರಿ ಜಯ ಸಾಧಿಸಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಇಂದು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಡೆಲ್ಲಿ ತಂಡ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 184 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಪರಿಣಾಮ 19.4 ಓವರಿನಲ್ಲಿ ಆಲೌಟ್ ಆಯ್ತು. 46 ರನ್‍ಗಳ ಅಂತರದಲ್ಲಿ ಗೆದ್ದ ಡೆಲ್ಲಿ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, 8 ಅಂಕಗಳಿಸಿದ ಮುಂಬೈ 2ನೇ ಸ್ಥಾನಕ್ಕೆ ಜಾರಿತು.

    ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಡೆಲ್ಲಿ ಕಮಾಲ್
    ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ಡೆಲ್ಲಿ ಕೊನೆಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆಹಾಕಿತು. ಅಂತೆಯೇ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ ಡೆಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಉತ್ತಮವಾಗಿ ಬೌಲ್ ಮಾಡಿದ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಆಕ್ಸರ್ ಪಟೇಲ್, ಹರ್ಷಲ್ ಪಟೇಲ್ ಮತ್ತು ಅನ್ರಿಕ್ ನಾಟ್ರ್ಜೆ ಒಂದು ವಿಕೆಟ್ ಕಿತ್ತರು. ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡಿದ ಹೆಟ್ಮೆಯರ್ ಉತ್ತಮ ಎರಡು ಕ್ಯಾಚ್ ಹಿಡಿದರು.

    ಡೆಲ್ಲಿ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಆದರೆ ಮೂರನೇ ಓವರಿಗೆ ಬೌಲಿಂಗ್ ಬಂದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಎಂಟು ಬಾಲಿಗೆ 13 ರನ್ ಸಿಡಿಸಿದ್ದ ಬಟ್ಲರ್ ಅವರನ್ನು ಔಟ್ ಮಾಡಿದರು. ನಂತರ ಒಂದಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಯಶಸ್ವಿ ಜೈಸ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ರಾಜಸ್ಥಾನ್ ತಂಡ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 41 ರನ್ ಸೇರಿಸಿತು.

    ನಂತರ ಜೈಸ್ವಾಲ್ ಮತ್ತು ಸ್ಮಿತ್ 34 ಬಾಲಿನಲ್ಲಿ 42 ರನ್‍ಗಳ ಜೊತೆಯಾಟವಾಡಿದರು. ಆದರೆ 8ನೇ ಓವರಿನ ಮೊದಲ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸ್ಮಿತ್ ಅನ್ರಿಕ್ ನಾಟ್ರ್ಜೆ ಅವರಿಗೆ ವಿಕೆಟ್ ಒಪ್ಪಿಸಿದರು. 17 ಬಾಲಿಗೆ 24 ರನ್ ಸಿಡಿಸಿ ಬೌಂಡರಿ ಬಳಿ ಶಿಮ್ರಾನ್ ಹೆಟ್ಮಿಯರ್ ಹಿಡಿದು ಸೂಪರ್ ಕ್ಯಾಚಿಗೆ ಸ್ಮಿತ್ ಬಲಿಯಾದರು. ನಂತರ 10ನೇ ಓವರಿನ 3ನೇ ಬಾಲಿನಲ್ಲಿ ಐದು ರನ್ ಗಳಿಸಿ ಸಂಜು ಸ್ಯಾಮ್ಸನ್ ಅವರು ಪೆವಿಲಿಯನ್ ಸೇರಿದರು.

    ನಂತರ ಬಂದ ಮಹಿಪಾಲ್ ಲೋಮರ್ ಅವರು ಕೇವಲ ಒಂದು ರನ್ ಗಳಿಸಿ ಬಂದ ದಾರಿಯಲ್ಲೇ ಪೆವಿಲಯನ್ ಸೇರಿದರು. ಈ ಮೂಲಕ 12 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 82 ರನ್ ಸೇರಿಸತು. ಆದರೆ 12ನೇ ಓವರಿನ ಮೊದಲ ಬಾಲಿನಲ್ಲೇ 36 ಬಾಲಿಗೆ 34 ರನ್ ಸಿಡಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಎಸೆತಕ್ಕೆ ಬೌಲ್ಡ್ ಆದರು.

    ಜೈಸ್ವಾಲ್ ಔಟ್ ಆದ ನಂತರ ಕಣಕ್ಕಿಳಿದ ಆಂಡ್ರ್ಯೂ ಟೈ ಅವರು ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈಹಾಕಿ ಕಗಿಸೊ ರಬಾಡಾ ಹಿಡಿದ ಡೇಯ್ ಕ್ಯಾಚಿಗೆ ಬಲಿಯಾದರು. ನಂತರ 14ನೇ ಓವರಿನ 5ನೇ ಬಾಲಿನಲ್ಲಿ ಎರಡು ರನ್ ಹೊಡೆದು ಜೋಫ್ರಾ ಆರ್ಚರ್ ಅವರು ಔಟ್ ಆಗಿ ಡಗೌಟ್ ಸೇರಿದರು. ನಂತರ 17ನೇ ಓವರ್ ಎರಡನೇ ಬಾಲಿನಲ್ಲಿ ಶ್ರೇಯಾಸ್ ಗೋಪಾಲ್ ಅವರು ಔಟ್ ಆದರು. ನಂತರ ಬಮದ ಯಾವ ಬ್ಯಾಟ್ಸ್ ಮ್ಯಾನ್ ಕೂಡ ಕ್ರೀಸಿನಲ್ಲಿ ನಿಲ್ಲಲಿಲ್ಲ.

  • 2 ರನೌಟ್, ಹೆಟ್ಮಿಯರ್, ಸ್ಟೋಯಿನಿಸ್ ಅಬ್ಬರ – ರಾಜಸ್ಥಾನಕ್ಕೆ 185 ರನ್‍ಗಳ ಟಾರ್ಗೆಟ್

    2 ರನೌಟ್, ಹೆಟ್ಮಿಯರ್, ಸ್ಟೋಯಿನಿಸ್ ಅಬ್ಬರ – ರಾಜಸ್ಥಾನಕ್ಕೆ 185 ರನ್‍ಗಳ ಟಾರ್ಗೆಟ್

    ಶಾರ್ಜಾ: ಇಂದು ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 23ನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185 ರನ್‍ಗಳ ಟಾರ್ಗೆಟ್ ನೀಡಿದೆ.

    ಆರಂಭದಲ್ಲೇ ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಔಟ್ ಆಗಿ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಟಾಪ್ ಆರ್ಡರ್ ಬ್ಯಾಟ್ಸ್‍ಮ್ಯಾನ್‍ಗಳನ್ನು ಕಳೆದುಕೊಂಡ ಡೆಲ್ಲಿ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್‍ಗಳು ಕೈ ಹಿಡಿದರು. ಅಬ್ಬರದ ಬ್ಯಾಟಿಂಗ್ ಮುಂದಾದ ಮಾರ್ಕಸ್ ಸ್ಟೋಯಿನಿಸ್ 39 ಮತ್ತು ಶಿಮ್ರಾನ್ ಹೆಟ್ಮಿಯರ್ ಅವರು 45 ರನ್ ಹೊಡೆದು ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

    ಟಾಸ್ ಸೋತು ಬ್ಯಾಟ್ ಮಾಡಲು ಬಂದ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ, ಜೋಫ್ರಾ ಆರ್ಚರ್ ಅವರು ಆರಂಭಿಕ ಆಘಾತ ನೀಡಿದರು. ಓಪನರ್ ಆಗಿ ಕಾಣಕ್ಕೆ ಬಂದ ಅನುಭವಿ ಆಟಗಾರ ಶಿಖರ್ ಧವನ್ ಕೇವಲ 5 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಅವರು ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ ಮತ್ತು ಪೃಥ್ವಿ ಶಾ ಅಬ್ಬರದ ಆಟಕ್ಕೆ ಮುಂದಾದರು. ಆದರೆ ಜೋಫ್ರಾ ಆರ್ಚರ್ ಬೌನ್ಸರ್ ಗೆ 19 ರನ್ ಗಳಿಸಿ ಆಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಕೊಟ್ಟು ಹೊರನಡೆದರು.

    ಇದಾದ ನಂತರ 5ನೇ ಓವರಿನ 5ನೇ ಬಾಲಿನಲ್ಲಿ 18 ಬಾಲಿಗೆ 22 ರನ್ ಗಳಿಸಿದ ನಾಯಕ ಶ್ರೇಯಸ್ ಐಯ್ಯರ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು 51 ರನ್ ಸೇರಿಸಿತು. ನಂತರ ತಾಳ್ಮೆಯ ಆಟಕ್ಕೆ ಮುಂದಾದ ರಿಷಭ್ ಪಂತ್ ಅವರು 9 ಬಾಲಿಗೆ ಐದು ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಹೊಂದಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 13 ಓವರ್ ಮುಕ್ತಾಯಕ್ಕೆ ಡೆಲ್ಲಿ ಕ್ಯಾಪಿಟಲ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 107 ರನ್ ಸೇರಿಸಿತ್ತು. ಆದರೆ 13ನೇ ಓವರಿನ ಮೂರನೇ ಬಾಲಿನಲ್ಲಿ 30 ಎಸೆತಕ್ಕೆ 39 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ ಅವರನ್ನು ರಾಹುಲ್ ತೇವಟಿಯಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ನಂತರ 24 ಬಾಲಿಗೆ 45 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಶಿಮ್ರಾನ್ ಹೆಟ್ಮಿಯರ್ 16ನೇ ಓವರಿನ ಕೊನೆಯ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರಯ ಬಳಿ ರಾಹುಲ್ ತೇವಟಿಯಾ ಅವರಿಗೆ ಕ್ಯಾಚ್ ನೀಡಿದರು. ನಂತರ 18ನೇ ಓವರಿನ ಕೊನೆಯ ಬಾಲಿನಲ್ಲಿ ಅಕ್ಷರ್ ಪಟೇಲ್ ಅವರು ಎಂಟು ಬಾಲಿಗೆ 17 ರನ್ ಸಿಡಿಸಿ ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಕೊನೆ ಓವರಿನಲ್ಲಿ ಹರ್ಷಲ್ ಪಟೇಲ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನಡೆದರು.

  • ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

    ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

    ಶಾರ್ಜಾ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅಪರೂಪದ ದಾಖಲೆ ಬರೆದಿದ್ದಾರೆ.

    ಮುಂಬೈ ಇನ್ನಿಂಗ್ಸ್ ನ ಅಂತ್ಯದಲ್ಲಿ ಕೇವಲ 4 ಎಸೆತಗಳನಷ್ಟೇ ಎದುರಿಸಿದ ಕೃನಾಲ್, 500ರ ಸ್ಟ್ರೈಕ್ ರೇಟ್‍ನೊಂದಿಗೆ 20 ರನ್ ಸಿಡಿಸಿದ್ದಾರೆ. ಐಪಿಎಲ್‍ನಲ್ಲಿ ಕನಿಷ್ಠ 10 ರನ್ ಗಳಿಸಿದ ಆಟಗಾರರಲ್ಲಿ 500 ಸ್ಟ್ರೈಕ್ ರೇಟ್‍ ಹೊಂದಿರುವ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಅಂತಿಮ ಓವರಿನ 2ನೇ ಎಸೆತದಲ್ಲಿ ಔಟಾಗಿದ್ದರು. ಆ ಬಳಿಕ ಕ್ರಿಸ್‍ಗೆ ಬಂದ ಕೃನಾಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸಿದ್ಧಾರ್ಥ್ ಕೌಲ್ ಓವರಿನ ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದ ಕೃನಾಲ್, ಮುಂದಿನ 2 ಎಸೆತಗಳಲ್ಲಿ 2 ಬೌಂಡರಿ ಸಿಡಿದ್ದರು. ಅಂತಿಮ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ 4 ಎಸೆತಗಳಲ್ಲಿ 20 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಕೃನಾಲ್ ಸ್ಫೋಟಕ ಬ್ಯಾಟಿಂಗ್‍ನಿಂದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.

    ಮುಂಬೈ ಪರ ಮಾಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬೌಲರ್ ಗಳ ಬೆವರು ಹರಿಸಿದ ಪೋರ್ಲಾಡ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅಂತಿಮ 5 ಓವರ್ ಗಳಲ್ಲಿ 61 ರನ್ ಗಳಿಸಿದ್ದರು. ಆ ಬಳಿಕ ಭಾರೀ ರನ್ ಮೊತ್ತವನ್ನು ಬೆನ್ನಟ್ಟಿದ್ದ ಹೈದರಾಬಾದ್ ತಂಡ ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ಗಳಲ್ಲಿ 174 ರನ್ ಗಳಿಸಲಷ್ಟೇ ಶಕ್ತವಾಯಿತು. 34 ರನ್ ಗಳ ಗೆಲುವು ಪಡೆದ ಮುಂಬೈ ತಂಡ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.

  • ಮುಂಬೈ ವೇಗದ ಬೌಲಿಂಗ್ ದಾಳಿಗೆ ಹೈದರಾಬಾದ್ ಉಡೀಸ್ – ಮುಂಬೈಗೆ 34 ರನ್‍ಗಳ ಜಯ

    ಮುಂಬೈ ವೇಗದ ಬೌಲಿಂಗ್ ದಾಳಿಗೆ ಹೈದರಾಬಾದ್ ಉಡೀಸ್ – ಮುಂಬೈಗೆ 34 ರನ್‍ಗಳ ಜಯ

    – ವಾರ್ನರ್ ಹೋರಾಟ ವಿಫಲ

    ಶಾರ್ಜಾ: ಮುಂಬೈ ತಂಡದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆದ 17ನೇ ಪಂದ್ಯದಲ್ಲಿ ಸೋತಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಸೋಲಿನ ಪಯಣವನ್ನು ಮುಂದುವರಿಸಿದೆ.

    ಇಂದು ಶಾರ್ಜಾದಲ್ಲಿ ನಡೆದ ಮೊದಲ ಮ್ಯಾಚಿನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು, ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಅಬ್ಬರದಿಂದ 20 ಓವರಿನಲ್ಲಿ 208 ರನ್ ಸೇರಿಸಿದರು. ಇದನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ನಾಯಕ ವಾರ್ನರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರಿನಲ್ಲಿ 174 ರನ್ ಸಿಡಿಸಿ 34 ರನ್‍ಗಳ ಅಂತರದಲ್ಲಿ ಸೋತಿತು.

    ಫಾಸ್ಟ್ ಬೌಲಿಂಗ್ ದಾಳಿ
    ಇಂದು ಆರಂಭದಿಂದಲೇ ಮುಂಬೈ ವೇಗದ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ ಅವರು ಕೇವಲ 28 ರನ್ ನೀಡಿ ಎರಡು ವಿಕೆಟ್ ಗಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜೇಮ್ಸ್ ಪ್ಯಾಟಿನ್ಸನ್ ಅವರು ನಾಲ್ಕು ಓವರ್ ಬೌಲ್ ಮಾಡಿ 29 ರನ್ ಕೊಟ್ಟು ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್‍ಪ್ರೀತ್ ಬುಮ್ರಾ ಅವರು ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.

    ಹೈದರಾಬಾದ್ ತಂಡಕ್ಕೆ ಉತ್ತಮವಾದ ಆರಂಭ ದೊರೆಯಿತು. ತಂಡ ನಾಲ್ಕು ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಸೇರಿಸಿತ್ತು. ಆದರೆ 4ನೇ ಓವರಿನ ಮೊದಲ ಬಾಲಿನಲ್ಲೆ ಉತ್ತಮವಾಗಿ ಆಡುತ್ತಿದ್ದ 15 ಬಾಲಿಗೆ 25 ರನ್ ಸಿಡಿಸಿ ಜಾನಿ ಬೈರ್‍ಸ್ಟೋವ್ ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಮನೀಶ್ ಪಾಂಡೆ ಮತ್ತು ಡೇವಿಡ್ ವಾರ್ನರ್ ಸೇರಿಕೊಂಡು ಪವರ್ ಪ್ಲೇನ ಕೊನೆಯ ಓವರಿನಲ್ಲಿ 14 ರನ್ ಚಚ್ಚಿ ಆರು ಓವರ್ ಅಂತ್ಯದ ವೇಳೆಗೆ 56 ರನ್ ಸೇರಿಸಿದರು.

    ಪವರ್ ಪ್ಲೇ ಬಳಿಕ ಭರ್ಜರಿ ಬ್ಯಾಟಿಂಗ್ ಮಾಡಿದ ವಾರ್ನರ್ ಪಾಂಡೆ ಜೋಡಿ ಕೇವಲ 27 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ 19 ಬಾಲಿಗೆ 30 ರನ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡೆ, ಜೇಮ್ಸ್ ಪ್ಯಾಟಿನ್ಸನ್ ಬಾಲಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ನಾಯಕ ಡೇವಿಡ್ ವಾರ್ನರ್ ಅವರು 35 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.

    ಈ ವೇಳೆ ಇಲ್ಲದ ಹೊಡೆತಕ್ಕೆ ಕೈ ಹಾಕಿದ ಕೇನ್ ವಿಲಿಯಮ್ಸನ್ ಅವರು ಕ್ವಿಂಟನ್ ಡಿ ಕಾಕ್ ಅವರಿಗೆ ಸುಲಭ ಕ್ಯಾಚ್ ಕೊಟ್ಟು ವಾಪಸ್ ಹೋದರು. ನಂತರ ಪ್ರಿಯಮ್ ಗಾರ್ಗ್ ಅವರು ಕ್ರುನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ನಂತರ ಅಬ್ಬರಿಸುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು ಇಶಾನ್ ಕಿಶನ್ ಅವರು ಹಿಡಿದ ಅದ್ಭುತ ಡೈವಿಂಗ್ ಕ್ಯಾಚಿಗೆ ಬಲಿಯಾದರು. ಈ ಮೂಲಕ 44 ಬಾಲಿಗೆ ಐದು ಫೋರ್ ಎರಡು ಸಿಕ್ಸರ್ ಸಮೇತ 60 ರನ್ ಸಿಡಿಸಿ ಜೇಮ್ಸ್ ಪ್ಯಾಟಿನ್ಸನ್ ಬೌಲಿಂಗ್‍ಗೆ ಔಟ್ ಆದರು.

    ನಂತರ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುತ್ತಿದ್ದ ಅಬ್ದುಲ್ ಸಮದ್ ಅವರು ದೊಡ್ಡ ಹೊಡೆತಕ್ಕೆ ಕೈ ಹಾಕಿ 9 ಬಾಲಿಗೆ 20 ರನ್ ಕಲೆ ಹಾಕಿ ಔಟ್ ಆದರು. ನಂತರ ಅಭಿಷೇಕ್ ಶರ್ಮಾ ಅವರನ್ನು ಅದೇ ಓವರಿನಲ್ಲಿ ಜಸ್‍ಪ್ರೀತ್ ಬುಮ್ರಾ ಅವರು ಬೌಲ್ಡ್ ಮಾಡಿದರು. ಈ ಮೂಲಕ ಹೈದರಾಬಾದ್ ತಂಡ ಸೋಲನ್ನು ಒಪ್ಪಿಕೊಂಡಿತು.

  • ಕಾಕ್ ಫಿಪ್ಟಿ, ಕೊನೆಯಲ್ಲಿ ಪಾಂಡ್ಯ ಸಹೋದರರ ಅಬ್ಬರ – ಹೈದರಾಬಾದಿಗೆ 209 ರನ್‍ಗಳ ಗುರಿ

    ಕಾಕ್ ಫಿಪ್ಟಿ, ಕೊನೆಯಲ್ಲಿ ಪಾಂಡ್ಯ ಸಹೋದರರ ಅಬ್ಬರ – ಹೈದರಾಬಾದಿಗೆ 209 ರನ್‍ಗಳ ಗುರಿ

    – 4 ಬಾಲಿಗೆ 20 ರನ್ ಚಚ್ಚಿದ ಕ್ರುನಾಲ್

    ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ ಎದುರಾಳಿ ಟೀಂಗೆ 209 ರನ್‍ಗಳ ಟಾರ್ಗೆಟ್ ನೀಡಿದೆ.

    ಇಂದು ಶಾರ್ಜ್ ಮೈದಾನದಲ್ಲಿ ನಡೆಯುತ್ತಿರುವ 17ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‍ಗೆ ಬಂದ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳವುಂತೆ ಬ್ಯಾಟ್ ಮಾಡಿದೆ. ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಅಬ್ಬರದಿಂದ ಹೈದರಾಬಾದ್ ತಂಡಕ್ಕೆ ದೊಡ್ಡ ಮೊತ್ತವನ್ನು ಟಾರ್ಗೆಟ್ ನೀಡಿದೆ. ಕೊನೆಯ ನಾಲ್ಕು ಬಾಲಿಗೆ ಕ್ರುನಾಲ್ ಪಾಂಡ್ಯ 20 ರನ್ ಸಿಡಿಸಿ ಮಿಂಚಿದರು.

    ಆರಂಭಿಕರಾಗಿ ಅಂಗಳಕ್ಕಿಳಿದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೊದಲ ಓವರ್ ನಲ್ಲಿ ಸಂದೀಪ್ ಶರ್ಮಾ ಎಸೆತದಲ್ಲಿ ಕೀಪರ್ ಜಾನಿ ಬೈರ್‍ಸ್ಪೋವ್ ಗೆ ಕ್ಯಾಚ್ ನೀಡಿದರು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ 5ನೇ ಓವರಿನ 4ನೇ ಬಾಲಿನಲ್ಲಿ ಸಿದ್ದಾರ್ಥ್ ಕೌಲ್ ಎಸೆದ ಎಸೆತವನ್ನು ಬೌಂಡರಿಗಟ್ಟುವ ತವಕದಲ್ಲಿ 27 ರನ್ ಗಳಿಸಿ ಸೂರ್ಯಕುಮಾರ್ ಯಾದವ್ ಔಟ್ ಆದರು.

    ಆರು ಓವರ್ ಮುಕ್ತಾಯಕ್ಕೆ ಮುಂಬೈ ತಂಡ ಎರಡು ವಿಕೆಟ್ ಕಳೆದುಕೊಂಡು 48 ರನ್ ಸೇರಿಸಿತು. 6 ಓವರ್ ನಂತರ ಸ್ಫೋಟಕ ಆಟಕ್ಕೆ ಮುಂದಾದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ 10 ಓವರ್ ಮುಕ್ತಾಯದ ವೇಳೆಗೆ ತಂಡವನ್ನು 90ರ ಗಡಿ ಮುಟ್ಟಿಸಿದರು. ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ 44 ಬಾಲಿಗೆ 78 ರನ್‍ಗಳ ಜೊತೆಯಾಟವಾಡಿತು. ನಂತರ 13ನೇ ಓವರಿನಲ್ಲಿ 39 ಬಾಲಿಗೆ 67 ರನ್ ಸಿಡಿಸಿದ್ದ ಕ್ವಿಂಟನ್ ಡಿ ಕಾಕ್ (4 ಫೋರ್, 4 ಸಿಕ್ಸ್) ಸಿಡಿಸಿ ರಶೀದ್ ಖಾನ್ ಅವರಿಗೆ ಔಟ್ ಆದರು.

    ಇದಾದ ಬಳಿಕ ಇಶಾನ್ ಕಿಶಾನ್ ಅವರು 31 ರನ್ ಗಳಿಸಿ ಮನೀಶ್ ಪಾಂಡೆ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ಇದಾದ ನಂತರ ಒಂದಾದ ಕಿರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರ ಬ್ಯಾಟಿಂಗ್‍ಗೆ ಮುಂದಾದರು. ರೈಸರ್ಸ್ ಬೌಲರ್ ಗಳನ್ನು ದಂಡಿಸಿದ ಈ ಜೋಡಿ 25 ಬಾಲಿಗೆ 41 ರನ್‍ಗಳ ಜೊತೆಯಾಟವಾಡಿತು. ಆದರೆ ಇನ್ನಿಂಗ್ಸ್ ನ ಕೊನೆಯ ಓವರಿನ ಎರಡನೇ ಬಾಲಿನಲ್ಲಿ ಹಾರ್ದಿಕ್ ಪಾಂಡ್ಯ ಅವರು 28 ರನ್ ಗಳಿಸಿ ಔಟ್ ಆದರು.

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    – ಡೆಲ್ಲಿಗೆ 18 ರನ್ ಗಳ ಜಯ
    – ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ

    ಶಾರ್ಜಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 18 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.

    ಗೆಲ್ಲಲು 229 ರನ್ ಗಳ ಕಠಿಣ ಗುರಿಯನ್ನು ಪಡೆದ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಈ ಪಂದ್ಯದಲ್ಲಿ ಕೋಲ್ಕತ್ತಾ ಪರ 14 ಸಿಕ್ಸ್, 12 ಬೌಂಡರಿ ಬಂದರೆ ಡೆಲ್ಲಿ ಪರ14 ಸಿಕ್ಸ್, 18 ಬೌಂಡರಿ ಸಿಡಿಯಲ್ಪಟ್ಟಿತ್ತು.

    ತಂಡದ ಮೊತ್ತ 117 ರನ್ ಆಗಿದ್ದಾಗ ಬೌಲರ್ ಹರ್ಷಲ್ ಪಟೇಲ್ ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಕೊನೆಯಲ್ಲಿ ಮಾರ್ಗನ್ ಮತ್ತು ತ್ರಿಪಾಠಿ ಸಿಕ್ಸ್ ಬೌಂಡರಿಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ತಂಡದ ಮೊತ್ತ 200 ಆಗಿದ್ದಾಗ ಮಾರ್ಗನ್ 44 ರನ್ (18 ಎಸೆತ, 1 ಬೌಂಡರಿ, 5 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ಔಟಾದರೆ 207 ರನ್ ಆಗಿದ್ದಾಗ 36ರನ್ (16 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ತ್ರಿಪಾಠಿ ಔಟದರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ 229 ರನ್‍ಗಳ ಭರ್ಜರಿ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಓವರಿನಲ್ಲೇ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಪವರ್ ಪ್ಲೇ ಹಂತ ಮುಕ್ತಾಯವಾಗುವಷ್ಟರಲ್ಲಿ 59 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು.

    ನಿತೀಶ್ ರಾಣಾ (35 ಬಾಲ್‍ಗೆ 58 ರನ್) ಅರ್ಧ ಶತಕ ಬಾರಿಸಿ ಭರವಸೆ ಮೂಡಿಸಿದರು. 58 ರನ್‍ಗಳ ಪೈಕಿ 4 ಸಿಕ್ಸ್ ಹಾಗೂ 4 ಬೌಂಡರಿ ಚೆಚ್ಚಿದ್ದರು. 12.4ನೇ ಓವರಿನಲ್ಲಿ ರಾಣಾ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಸೋಲಿನ ಸುಳಿಗೆ ದೂಡಿದರು. ರಾಣಾ ಔಟಾಗುತ್ತಿದ್ದಂತೆ ಮುಂದಿನ ಬಾಲ್‍ಗೆ ದಿನೇಶ್ ಕಾರ್ತಿಕ್ ಸಹ ವಿಕೆಟ್ ಒಪ್ಪಿಸಿದರು.

    ಭರ್ಜರಿ 229 ಟಾರ್ಗೆಟ್ ನೀಡಿದ್ದರೂ, ಬೌಲಿಂಗ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಡವಿತು. ಎನ್ರಿಚ್ ನಾಟ್ರ್ಜ್ ಮೂರು ವಿಕೆಟ್ ಕಬಳಿಸುವ ಮೂಲಕ ಮಿಂಚಿದರೆ, ಹರ್ಷಲ್ ಪಟೇಲ್ 2, ಅಮಿತ್ ಮಿಶ್ರಾ, ಕಗಿಸೊ ರಬಾಡ, ಮಾರ್ಕಸ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಕಬಳಿಸಿದರು.

    ಮಾರ್ಗನ್ ಅಬ್ಬರದ ಆಟ:
    ತಂಡ ಸಂಕಷ್ಟದಲ್ಲಿದ್ದಾಗ 13.5ನೇ ಓವರಿಗೆ ಆಗಮಿಸಿದ ಇಯಾನ್ ಮಾರ್ಗನ್ ತಂಡವನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಸ್ಟ್ರೈಕ್‍ಗೆ ಬರುತ್ತಿದ್ದಂತೆ ಮೊದಲ ಬಾಲ್ ಸಿಕ್ಸ್ ಚೆಚ್ಚಿದರು. ಆದರೆ ಕೊನೆಯ ಹಂತದಲ್ಲಿ 18.3ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಮಾರ್ಗನ್ ಕೇವಲ 18 ಬಾಲ್‍ಗೆ 44 ರನ್ ಸಿಡಿಸಿದ್ದರು. 5 ಸಿಕ್ಸ್ 1 ಬೌಂಡರಿ ಚಚ್ಚುವ ಮೂಲಕ ಗೆಲುವಿನ ಆಸೆ ಮೂಡಿಸಿದರು.

    ರಾಣಾ ಪವರ್ಫುಲ್ ಬ್ಯಾಟಿಂಗ್:
    ಶುಭಮನ್ ಗಿಲ್ ಔಟಾಗುತ್ತಿದ್ದಂತೆ 8.2 ಓವರಿಗೆ ಆಗಮಿಸಿದ ರಾಣಾ 35 ಬಾಲ್‍ಗೆ 58 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಣಾ ತಂಡ 117 ರನ್ ಗಳಿಸಿದ ಸಂದರ್ಭದಲ್ಲಿ 12 ಓವರಿನ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.

    ಮಾರ್ಗನ್, ತ್ರಿಪಾಠಿ ಜೊತೆಯಾಟ:
    ಮಾರ್ಗನ್ ಹಾಗೂ ತ್ರಿಪಾಠಿ ಇಬ್ಬರೂ ಭರ್ಜರಿ ಜೊತೆಯಾಟ ಆರಂಭಿಸಿದ್ದರು. ಕೇವಲ 31 ಬಾಲ್‍ಗೆ 78 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದ್ದರು. 13ನೇ ಓವರಿಗೆ ಕಮ್ಮಿನ್ಸ್ ಔಟಾದ ಬಳಿಕ ಆಗಮಿಸಿದ್ದ ತ್ರಿಪಾಠಿ, ಮಾರ್ಗನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದರು. ಇಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 8 ಸಿಕ್ಸ್ 4 ಬೌಂಡರಿ ಚೆಚ್ಚಿದ್ದರು.

    ನಿತೀಶ್ ರಾಣಾ, ಶುಭಮನ್ ಗಿಲ್ ಜೊತೆಯಾಟ:
    ರಾಣಾ ಹಾಗೂ ಗಿಲ್ ತಮ್ಮ ಜೊತೆಯಾಟದಲ್ಲಿ 41 ಬಾಲ್‍ಗೆ 64 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ 6 ಬೌಂಡರಿ ಚಚ್ಚಿದ್ದರು. 8ನೆ ಓವರ್ ಆರಂಭವಾಗುತ್ತಿದ್ದಂತೆ ಗಿಲ್ ವಿಕೆಟ್ ಒಪ್ಪಿಸಿದರು.

    ಶುಭಮನ್ ಗಿಲ್ 22 ಬಾಲ್‍ಗೆ 28 ರನ್ ಗಳಿಸಿ ಔಟಾಗುತ್ತಿದ್ದಂತೆ 9.5ನೇ ಓವರ್ನಲ್ಲಿ ಆಂಡ್ರೆ ರಸೆಲ್ ಸಹ 8 ಬಾಲ್‍ಗೆ 13 ಹೊಡೆದು ವಿಕೆಟ್ ಒಪ್ಪಿಸಿದರು. ಹೀಗೆ ಡೆಲ್ಲಿ ತಂಡ ವೇಗವಾಗಿ ವಿಕೆಟ್ ಕಳೆದುಕೊಂಡಿತು. 13.3ನೇ ಓವರಿಗೆ ಪ್ಯಾಟ್ ಕಮ್ಮಿನ್ಸ್ ಸಹ 4 ಬಾಲ್‍ಗೆ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

  • ಭರ್ಜರಿ ಸಿಕ್ಸರ್‌ಗಳ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಂಜು ಸ್ಯಾಮ್ಸನ್

    ಭರ್ಜರಿ ಸಿಕ್ಸರ್‌ಗಳ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಂಜು ಸ್ಯಾಮ್ಸನ್

    ಶಾರ್ಜಾ: ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಆಗ ನನ್ನನ್ನು ನಾನೇ ಪ್ರಶ್ನಿಸಿಕೊಂಡು ಆತ್ಮ ವಿಮರ್ಶೆ ಮಾಡಿಕೊಂಡಿದ್ದೇ ನನ್ನ ಪ್ರದರ್ಶನದಲ್ಲಿ ಬದಲಾವಣೆಯಾಗಲು ಕಾರಣ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಯುವ ಆಟಗಾರ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

    2020ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿಯೂ ಅರ್ಧ ಶತಕ ಸಿಡಿಸಿ ಮಿಂಚಿರುವ ಸಂಜು ಸ್ಯಾಮ್ಸನ್ ಎಲ್ಲರ ಗಮನ ಸೆಳೆದಿದ್ದಾರೆ. ಚೆನ್ನೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 32 ಎಸೆಗಳಲ್ಲಿ 9 ಸಿಕ್ಸರ್, ಬೌಂಡರಿ ನೆರವಿನಿಂದ ತಂಡ 216 ರನ್‍ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2ನೇ ಪಂದ್ಯದಲ್ಲಿ 4 ಬೌಂಡರಿ, 7 ಸಿಕ್ಸರ್ ಗಳ ನೆರವಿನಿಂದ 42 ಎಸೆತಗಳಲ್ಲಿ 85 ರನ್ ಗಳಿಸಿ ಸತತ ಎರಡು ಪಂದ್ಯಗಳಲ್ಲಿ ಭಾರೀ ಸ್ಕೋರ್ ಗಳಿಸಿ ತಂಡ ಗೆಲುವಿಗೆ ತಮ್ಮ ಕಾಣಿಕೆ ನೀಡಿದ್ದರು. ಅಲ್ಲದೇ ಎರಡು ಬಾರಿಯೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಪಂಜಾಬ್ ವಿರುದ್ಧ ಪಂದ್ಯದ ಬಳಿಕ ಮಾತನಾಡಿದ ಸ್ಯಾಮ್ಸನ್, ಕಳೆದ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದೇನೆ. ನನ್ನ ಆಟದಲ್ಲಿ ಸ್ಪಷ್ಟ ಬದಲಾವಣೆಗಳನ್ನು ಕಂಡುಕೊಂಡಿದ್ದೇನೆ. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಜೀವನದಲ್ಲಿ ಏನು ಸಾಧನೆ ಮಾಡಬೇಕು? ನನ್ನ ವೃತ್ತಿ ಜೀವನ ಅಂತ್ಯವಾಗುವ ವೇಳೆಗೆ ಎಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿಕೊಂಡಿದ್ದೆ.

    ಆ ಬಳಿಕ ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ ಆಡಬೇಕು ಎಂದು ನಿರ್ಧರಿಸಿ ನನ್ನ ಪೂರ್ತಿ ಸಮಯವನ್ನು ಇದಕ್ಕೆ ನೀಡಿದ್ದೆ. ನನ್ನ ಕುಟುಂಬ ಸದಸ್ಯರು, ಸ್ನೇಹಿತರು ನನಗೆ ಬೆಂಬಲವಾಗಿ ನಿಂತಿದ್ದರು. ನನ್ನ ಪೂರ್ತಿ ಸಾಮರ್ಥ್ಯವನ್ನು ಆಟದ ಕಡೆ ಗಮನಹರಿಸಿ ಆಡುತ್ತಿದ್ದು, ಫಲಿತಾಂಶ ಅದೇ ಬರುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸರಳವಾಗಿ ವಿವಾಹವಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್.ಕೆ ಉತ್ತಪ್ಪ

    ನನ್ನ ಸ್ಫೋಟಕ ಪವರ್ ಫುಲ್ ಸಿಕ್ಸರ್ ಗಳಿಗೆ ನನ್ನ ಜಿನ್ಸ್ ಕಾರಣ. ಏಕೆಂದರೆ ನಮ್ಮ ತಂದೆ ತುಂಬ ಪವರ್ ಫುಲ್ ವ್ಯಕ್ತಿ. ಉತ್ತಮ ಪ್ರದರ್ಶನ ನೀಡಲು ಫಿಟ್ ಆಗಿರುವುದು ಮುಖ್ಯವಾಗುತ್ತದೆ. ಆದ್ದರಿಂದಲೇ ಹೆಚ್ಚು ಫಿಟ್ನೆಸ್ ಕಡೆ ಗಮನಹರಿಸಿದ್ದೇನೆ ಎಂದು ಹೇಳಿದರು.

    ರಾಜಸ್ಥಾನ ರಾಯಲ್ಸ್ ತಂಡ ಶಾರ್ಜಾ ಕ್ರೀಡಾಂಗಣದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಪಡೆದು 4 ಅಂಕ ಹಾಗೂ 0.615 ನೆಟ್ ರನ್ ರೇಟ್‍ನೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ಗೆಲುವಿನ ಓಟ ಮುಂದುವರಿಸುವ ಭರವಸೆ ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡದ ಸೆ.30 ರಂದು ದುಬೈ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ರನ್ನು ಎದುರಿಸಲಿದೆ.

    ಲಾಕ್‍ಡೌನ್ ಸಮಯವನ್ನು ಉತ್ತಮವಾಗಿ ಬಳಸಿಕೊಂಡಿರುವ ಸಂಜು ಸ್ಯಾಮ್ಸನ್, ಈ ಅವಧಿಯಲ್ಲಿ ಸುಮಾರು 20 ಸಾವಿರ ಅಧಿಕ ಎಸೆತಗಳನ್ನು ಎದುರಿಸಿದ್ದಾರೆ. ಮನೆಯ ಬಳಿ ನೆಟ್ಸ್ ನಲ್ಲಿ ಬೆವರಿಳಿಸಿದ್ದ ಸ್ಯಾಮ್ಸನ್, ಥ್ರೋ ಡೌನ್ ಮೂಲಕ ಎಸೆತಗಳನ್ನು ಎದುರಿಸಿ ಅಭ್ಯಾಸ ನಡೆಸಿದ್ದರು. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಬಳಿಕ ಅವರ ಸ್ಥಾನವನ್ನು ಪಡೆಯಲು ಭಾರೀ ಪೈಪೋಟಿ ನಡೆಯುತ್ತಿದ್ದು, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಬ್ ಪಂತ್ ಈ ಸ್ಥಾನದಲ್ಲಿ ಮುಂದಿದ್ದಾರೆ.

  • 9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    ಶಾರ್ಜಾ: ಇಂದು ನಡೆದ ಐಪಿಎಲ್ 9ನೇ ಮ್ಯಾಚಿನಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್‍ಗಳಿಂದ ರೋಚಕ ಗೆಲುವು ಸಾಧಿಸಿದೆ.

    ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮಯಾಂಕ್ ಅಗರ್ವಾಲ್ ಅವರ ಸೂಪರ್ ಸೆಂಚ್ಯೂರಿ ಮತ್ತು ನಾಯಕ ರಾಹುಲ್ ಅವರ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 223 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿಯನ್ನು ತಲುಪಿತು.

    ತೆವಾಟಿಯಾ ಸ್ಫೋಟಕ ಆಟ
    ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಯಲ್ಸ್ ಕೈಜಾರುವ ಹಂತದಲ್ಲಿ ಇತ್ತು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ತೆವಾಟಿಯಾ 17ನೇ ಓವರಿನಲ್ಲಿ ಕಮಾಲ್ ಮಾಡಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಮೊದಲ 23 ಎಸೆತದಲ್ಲಿ 17 ರನ್‌ ನಂತರದ 8 ಎಸೆತದಲ್ಲಿ ತೆವಾಟಿಯಾ 36 ರನ್‌ ಚಚ್ಚಿದ್ದರು. ಜೊತೆಗೆ 31 ಬಾಲಿಗೆ 51 ರನ್ ಸಿಡಿಸಿ ಔಟ್ ಆದರು. ಈ ಗೆಲುವಿನ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಚೇಸ್‌ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ಪಾತ್ರವಾಗಿದೆ.

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.

    ನಂತರ ಭರ್ಜರಿ ಬ್ಯಾಟಿಂಗ್ ಆಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸ್‍ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು.

    ಸ್ಯಾಮ್ಸನ್ ಸ್ಫೋಟಕ ಆಟ:
    ಇದೇ ವೇಳೆ ರಾಹುಲ್ ತೆವಾಟಿಯಾ ರನ್ ಗಳಿಸಲು ಕಷ್ಟಪಟ್ಟರು. ಆದರೆ ಇನ್ನೊದಡೆ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಮಾಡಿದ 15ನೇ ಓವರಿನಲ್ಲಿ ಅವರು ಭರ್ಜರಿ 21 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿಯವರ ಬೌಲಿಂಗ್ ಔಟ್ ಆದರು.

    17ನೇ ಓವರಿನಲ್ಲಿ ತೆವಾಟಿಯಾ ಕಮಾಲ್ ನಾಲ್ಕು ಬಾಲಿಗೆ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಜೊತೆ ಅದೇ ಓವರಿನ ಕೊನೆ ಬಾಲಿನಲ್ಲಿ ಇನ್ನೊಂದು ಸಿಕ್ಸ್ ಸಿಡಿಸಿ ಒಟ್ಟು ಒಂದೇ ಈವರಿನಲ್ಲಿ 5 ಸಿಕ್ಸರ್ ಸಿಡಿಸಿ ರಾಯಲ್ಸ್ ಅನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಬಂದರು. ಆದರೆ ರಾಬಿನ್ ಉತ್ತಪ್ಪ ಅವರು 18ನೇ ಓವರಿನ ಮೊದಲ ಬಾಲಿನಲ್ಲೇ ಔಟ್ ಆದರು. ಆಗ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿದರು.

    ಈ ಹಿಂದೆ 2012ರಲ್ಲಿಆರ್‌ಸಿಬಿ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ತಂಡ ಸ್ಪಿನ್ನರ್ ರಾಹುಲ್ ಶರ್ಮಾ ಅವರ 5 ಎಸೆತಗಳನ್ನು ಸಿಕ್ಸರ್‍ ಗೆ ಅಟ್ಟಿದ್ದರು.

  • ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    – ಕನ್ನಡಿಗರ ಕೆಚ್ಚೆದೆಯ ಆಟಕ್ಕೆ ಸ್ಮಿತ್ ಬೌಲಿಂಗ್ ಪಡೆ ಉಡೀಸ್

    ಶಾರ್ಜಾ: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಲ್ ರಾಹುಲ್ ಅವರ ಭರ್ಜರಿ ಶತಕದ ಜೊತೆಯಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 224 ರನ್‍ಗಳ ಟಾರ್ಗೆಟ್ ನೀಡಿದೆ.

    ಮೊದಲ ವಿಕೆಟ್‍ಗೆ ಮಯಾಂಕ್ ಮತ್ತು ರಾಹುಲ್ ಅವರು 183 ರನ್‍ಗಳ ಆರಂಭಿಕ ಜೊತೆಯಾಟವಾಡಿದರು. ಇದರಲ್ಲಿ ಮಯಾಂಕ್ ಶತಕ ಸಿಡಿಸಿ ಮಿಂಚಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ರಾಹುಲ್ 69 ರನ್ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ಆರಂಭಿಕ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು. 2019ರಲ್ಲಿ ಆರ್‌ಸಿಬಿ ವಿರುದ್ಧ 185 ರನ್ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಮೊದಲ ಸ್ಥಾನದಲ್ಲಿದ್ದರೆ, 2017ರಲ್ಲಿ 184 ರನ್‍ಗಳ ಜೊತೆಯಾಟವಾಡಿದ ಕೋಲ್ಕತ್ತಾದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲೀನ್ ಜೋಡಿ ಎರಡನೇ ಸ್ಥಾನದಲ್ಲಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಭರ್ಜರಿ ಓಪನಿಂಗ್ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ನಾಯಕ ಕೆ.ಎಲ್ ರಾಹುಲ್ ಮೊದಲ ನಾಲ್ಕು ಓವರಿನಲ್ಲೇ 41 ರನ್ ಚಚ್ಚಿದರು. ಜೊತೆಗೆ ಕೇವಲ 28 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟವಾಡಿದರು. ಇದೇ ವೇಳೆ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಮಯಾಂಕ್ ಅಗರ್ವಾಲ್ ಕೇವಲ 26 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮಯಾಂಕ್ ಇನ್ನಿಂಗ್ಸ್‍ನಲ್ಲಿ 4 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.

    ರಾಹುಲ್ ಮತ್ತು ಮಯಾಂಕ್ ಅವರ ಸೂಪರ್ ಬ್ಯಾಟಿಂಗ್ ನಿಂದ ಕೇವಲ 8.4 ಓವರಿನಲ್ಲೇ ಪಂಜಾಬ್ ತಂಡ ನೂರರ ಗಡಿ ದಾಟಿತು. ಈ ಮೂಲಕ ಐಪಿಎಲ್-2020ಯಲ್ಲಿ ಆರಂಭಿಕ ಜೋಡಿಯಾಗಿ ಮೊದಲ ಶತಕದ ಜೊತೆಯಾಟವಾಡಿದರು. ಕ್ರೀಸಿಗೆ ಕಚ್ಚಿಕೊಂಡಂತೆ ಬ್ಯಾಟ್ ಬೀಸಿದ ಮಯಾಂಕ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ಮಿಂಚಿದರು. ಇದಕ್ಕೆ ಉತ್ತಮ ಸಾಥ್ ಕೊಟ್ಟ ರಾಹುಲ್ 35 ಬಾಲಿಗೆ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ 17ನೇ ಅರ್ಧಶತಕವನ್ನು ದಾಖಲಿಸಿದರು.

    ಆರಂಭದಿಂದ ಭರ್ಜರಿಯಾಗಿ ಆಡಿದ ಮಯಾಂಕ್ 7 ಭರ್ಜರಿ ಸಿಕ್ಸರ್ ಮತ್ತು 9 ಫೋರ್ ಗಳ ಸಹಾಯದಿಂದ 45 ಬಾಲಿಗೆ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮಯಾಂಕ್ ಅಗರ್ವಾಲ್ 50 ಎಸೆತಗಳಲ್ಲಿ 106 ರನ್ ಸಿಡಿಸಿ ಔಟ್ ಆದರು. ನಂತರ 54 ಎಸೆತಗಳಲ್ಲಿ 69 ರನ್ ಸಿಡಿಸಿದ್ದ ರಾಹುಲ್ ಅವರು ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ನಿಕೋಲಸ್ ಪೂರನ್ 8 ಎಸೆತಗಳಲ್ಲಿ ಮೂರು ಸಿಕ್ಸ್ ಒಂದು ಫೋರ್ ಮೂಲಕ 25 ರನ್ ಸಿಡಿಸಿ ಪಂಜಾಬ್ ತಂಡವನ್ನು 200ರ ಗಡಿ ದಾಟಿಸಿದರು.