Tag: Sharjah

  • ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟಿ ಕ್ರಿಸನ್ ಪಿರೇರಾ ರಿಲೀಸ್

    ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟಿ ಕ್ರಿಸನ್ ಪಿರೇರಾ ರಿಲೀಸ್

    ಳೆದ ವಾರವಷ್ಟೇ ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿದ್ದ ಬಾಲಿವುಡ್ ನಟಿ ಕ್ರಿಸನ್ ಪಿರೇರಾ (chrisann pereira) ಬಿಡುಗಡೆ ಆಗಿದ್ದಾರೆ. ಡ್ರಗ್ಸ್ ಕೇಸ್ (Drugs Case) ಗೆ ಸಂಬಂಧಿಸಿದಂತೆ ಈ ನಟಿಯನ್ನು ಯುಎಇ ಪೊಲೀಸರು ಬಂಧಿಸಿ ಶಾರ್ಜಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಏಪ್ರಿಲ್ 1 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಟ್ರೋಫಿ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದರು ಎನ್ನುವ ಕಾರಣದಿಂದಾಗಿ ಪೊಲೀಸರು ಅವರನ್ನು ಬಂಧಿಸಿದ್ದರು.

    ಈ ಡ್ರಗ್ಸ್ ಕೇಸ್ ಕುರಿತಂತೆ ಮುಂಬೈನಲ್ಲೂ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಅಚ್ಚರಿಯ ಮಾಹಿತಿಯನ್ನು ಹೊರ ಹಾಕಿದ್ದರು. ಇದೊಂದು ಷಡ್ಯಂತರ, ಆ ನಟಿಯ ನೆರೆಮನೆಯಾತನ ಕುತಂತ್ರದಿಂದಾಗಿ ಅವರು ಜೈಲು ಸೇರಿದ್ದಾರೆ ಎಂದು ತಿಳಿಸಿದ್ದರು. ಈ ಸಂಬಂಧ ಪಿರೇರಾ ನೆರೆಮನೆಯಾತ ಹಾಗೂ ಬೇಕರಿ ಮಾಲೀಕನೂ ಆಗಿರುವ ಆಂಟೋನಿ ಪಾಲ್ (Antony Paul) ಮತ್ತು ಬ್ಯಾಂಕ್ ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ರಾಜೇಶ್ ಬೋಭಟೆ (Rajesh Bobate) ಎನ್ನುವವರನ್ನು ಪೊಲೀಸರು ಬಂಧಿಸಿದ್ದರು.

    ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ ಕ್ರಿಸನ್ ಮತ್ತು ಬಂಧಿತ ಆಂಟೋನಿ ಮುಂಬೈನ ಒಂದೇ ಕಟ್ಟಡದ ನಿವಾಸಿಗಳು. ನಾಯಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ ನಡೆದಿದೆ. ಅಪಮಾನಗೊಂಡ ಆಂಟೋನಿ ಬುದ್ದಿ ಕಲಿಸಲೆಂದೇ ಕ್ರಿಸನ್ ಶಾರ್ಜಾ ಟಿಕೆಟ್ ಮಾಡಿಸಿ, ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟು, ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿತ್ತು. ಅಲ್ಲದೇ ವಾಪಸ್ಸು ಕ್ರಿಸನ್ ಭಾರತಕ್ಕೆ ಬರಲು ನಕಲಿ ಟಿಕೆಟ್ ಕೂಡ ಮಾಡಿಸಿದ್ದ ಎಂದು ಮಾಹಿತಿ ಲಭ್ಯವಾಗಿತ್ತು. ಅದೆಲ್ಲವೂ ನಿಜವಾದ ಹಿನ್ನೆಲೆಯಲ್ಲಿ ನಟಿಯನ್ನು ಶಾರ್ಜಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಕ್ರಿಸನ್ ಪಿರೇರಾ ಸಿನಿಮಾ ಹಾಗೂ ವೆಬ್ ಸಿರೀಸ್ ನ ನಟಿ. ಹಾಗಾಗಿ ಶಾರ್ಜಾದಲ್ಲಿ ವೆಬ್ ಸಿರೀಸ್ ಆಡಿಷನ್ ಇದೆ ಎಂದು ಬಂಧಿತರು ಸುಳ್ಳು ಹೇಳಿದ್ದರು. ಅಲ್ಲಿಗೆ ಟ್ರೋಫಿ ತಗೆದುಕೊಂಡು ಹೋಗಲು ತಿಳಿಸಿದ್ದರು. ಆ ಟ್ರೋಫಿಯಲ್ಲಿ ಡ್ರಗ್ಸ್ ಇಟ್ಟಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಶಾರ್ಜಾ ವಿಮಾನ ನಿಲ್ದಾಣಕ್ಕೆ ಕ್ರಿಸನ್ ಬರುತ್ತಿದ್ದಂತೆಯೇ ಪೊಲೀಸರು ನಟಿಯನ್ನು ಬಂಧಿಸಿದ್ದರು. ಈಗ ಪ್ರಕರಣ ಸುಖಾಂತ್ಯಗೊಂಡಿದೆ.

  • ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಇಸ್ಲಾಮಾಬಾದ್: ಶಾರ್ಜಾದಿಂದ ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಇಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

    ಇಂಡಿಗೋ ವಿಮಾನವು ಶಾರ್ಜಾದಿಂದ ಹೊರಟಿತ್ತು. ಈ ವೇಳೆ ಪೈಲಟ್ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಜಾರಿದ್ರಿಂದ ದುಡ್ಡು ಕೆಳಗೆ ಬಿತ್ತು- ಸಿದ್ದರಾಮಯ್ಯರ ಕ್ಷಮೆ ಕೋರಿದ ಮುಸ್ಲಿಂ ಮಹಿಳೆ

    ಕಳೆದ ಎರಡು ವಾರಗಳಲ್ಲಿ ಕರಾಚಿಯಲ್ಲಿ ತುರ್ತುಭೂಸ್ಪರ್ಶ ಮಾಡಿದ 2ನೇ ಭಾರತೀಯ ಸಂಸ್ಥೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನವು ತಾಂತ್ರಿಕ ಕಾರಣದಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. 138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದರು.ಇದನ್ನೂ ಓದಿ:  ಬೆಂಗಳೂರಲ್ಲಿ ಉಚಿತ ಬೈಕ್ ಅಂಬುಲೆನ್ಸ್ – 5 ತಿಂಗಳಿನಿಂದ ವ್ಯಕ್ತಿಯಿಂದ ಫ್ರೀ ಸರ್ವೀಸ್

    Live Tv
    [brid partner=56869869 player=32851 video=960834 autoplay=true]

  • ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 3 ವಿಕೆಟ್‍ಗಳ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 128 ರನ್‍ಗಳ ಗುರಿಯನ್ನು ಕೆಕೆಆರ್ 18.2 ಓವರ್‍ಗಳಲ್ಲಿ ಹೊಡೆದು ಜಯವನ್ನು ತನ್ನದಾಗಿಸಿಕೊಂಡಿದೆ. ಸೋತರೂ ಡೆಲ್ಲಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇದನ್ನೂ ಓದಿ: ಕೋಲ್ಕತ್ತಾಗೆ 7 ವಿಕೆಟ್‍ಗಳ ಭರ್ಜರಿ ಜಯ – 4ನೇ ಸ್ಥಾನಕ್ಕೆ ಜಿಗಿತ

    ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬಹೃತ್ ಮೊತ್ತ ದಾಖಲಿಸುವ ಸೂಚನೆ ನೀಡಿತು. ಸ್ಮಿತ್ 39 ರನ್ (34 ಎಸೆತ 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ 24ರನ್ (20 ಎಸೆತ 5 ಬೌಂಡರಿ) ಗಳಿಸಿದರು. ಕೆಕೆಆರ್ ಬೌಲರ್‍ಗಳ ದಾಳಿಗೆ ನಲುಗಿದ ಡೆಲ್ಲಿ ರನ್ ಗಳಿಸಲು ಪರಾದಡಿತು. ನಾಯಕ ರಿಷಭ್ ಪಂತ್ 39 ರನ್ (36 ಎಸೆತ 3 ಬೌಂಡರಿ) ಸಿಡಿಸಿ ರನ್ ಔಟ್‍ಗೆ ಬಲಿಯಾದರು. ಇನ್ನುಳಿದ ಯಾವೊಬ್ಬ ಡೆಲ್ಲಿ ಬ್ಯಾಟ್ಸ್‍ಮನ್ ಕೂಡ ಕೆಕೆಆರ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್ ಪರೆಡ್ ನಡೆಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೆ ಶಕ್ತವಾಯಿತು. ಕೆಕೆಆರ್ ಪರ ನರೈನ್ ಹಾಗೂ ಫರ್ಗುಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ಡೆಲ್ಲಿ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ್ತಾ ಉತ್ತಮ ಆರಂಭ ಪಡೆಯಿತು. ಶುಬ್‍ಮನ್ ಗಿಲ್ 30ರನ್ (33 ಎಸೆತ 1 ಬೌಂಡರಿ 2 ಸಿಕ್ಸರ್) ಸಿಡಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಡ್ಯಾಸಿಂಗ್ ಓಪನರ್ ವೆಂಕಟೇಶ್ ಅಯ್ಯರ್ 14ರನ್ (15 ಎಸೆತ 2 ಬೌಂಡರಿ) ಗಳಿಸಿ ಯಾದವ್‍ಗೆ ವಿಕೆಟ್ ಕೊಟ್ಟು ಹೊರ ನಡೆದರು. ಅಲ್ಪ ಮೊತ್ತವನ್ನು ಬೆನ್ನತ್ತಲು ತಿಣುಕಾಡಿದ ಕೆಕೆಆರ್‍ಗೆ ನಿತೀಶ್ ರಾಣಾ ಅಜೇಯ 36ರನ್ (27 ಎಸೆತ 2 ಬೌಂಡರಿ 2 ಸಿಕ್ಸರ್) ಸಿಡಿಸುವ ಮೂಲಕ ಜಯ ದೊರಕಿಸಿಕೊಟ್ಟರು. ಡೆಲ್ಲಿ ಪರ ಅವೇಶ್ ಖಾನ್ 3 ವಿಕೆಟ್ ಪಡೆದರೆ ಅಶ್ವಿನ್ 1 ಹಾಗೂ ಲಲಿತ್ ಯಾದವ್ 1 ವಿಕೆಟ್ ಪಡೆದರು.

  • ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

    ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

    ಶಾರ್ಜಾ: ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ರನ್‍ಗಳ ರೋಚಕ ಗೆಲುವು ದಾಖಲಿಸಿ ಯುಎಇ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 57 ವಿಕೆಟ್ ನಷ್ಟಕ್ಕೆ 127 ರನ್ ಹೊಡೆದರೆ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಪಂಜಾಬ್ 8 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ.

    ಟಾಸ್ ಗೆದ್ದ ಹೈದರಾಬಾದ್ ಸನ್ ರೈಸರ್ಸ್, ಮೊದಲು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತ್ತು. ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‍ಗೆ 26 ರನ್ ಗಳಿಸಿತು. ರಾಹುಲ್ 21 ರನ್ (21 ಎಸೆತ, 3 ಬೌಂಡರಿ) ಹಾಗೂ ಮಯಾಂಕ್ 5 ರನ್‍ಗಳಿಸಿ ಜೇಸನ್ ಹೋಲ್ಡರ್‍ಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

    ಆರಂಭಿಕ ಅಘಾತ ಅನುಭವಿಸಿದ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಮಾಕ್ರ್ರಮ್ ದೊಡ್ಡ ಜೊತೆಯಾಟವಾಡುವ ಭರವಸೆ ನೀಡಿದರು. ಗೇಲ್ 14 ರನ್ (17 ಎಸೆತ 1 ಬೌಂಡರಿ) ಮಾಕ್ರ್ರಮ್ 27 ರನ್ (32 ಎಸೆತ 2 ಬೌಂಡರಿ) ಗಳಿಸಿ ಪೆವಿಲಿಯನ್ ಕಡೆ ನಡೆದರು. ಹೈದರಾಬಾದ್ ಕರಾರುವಾಕ್ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್‍ಗಳಿಲಷ್ಟೆ ಶಕ್ತವಾಯಿತು. ಹೈದರಾಬಾದ್ ಪರ ಹೋಲ್ಡರ್ 3 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

    125 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ ಮಹಮದ್ ಶಮಿ ದಾಳಿಗೆ ಆರಂಭದಲ್ಲೇ ಡೇವಿಡ್ ವಾರ್ನರ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಳೆದುಕೊಂಡು ರನ್‍ಗಳಿಸಲು ತಿಣುಕಾಡಿತು. ವಾರ್ನರ್ 2 ರನ್ ವಿಲಿಯಮ್ಸನ್ 1 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಪಂಜಾಬ್ ತಂಡದ ಮಿಂಚಿನ ದಾಳಿಗೆ ತತ್ತರಿಸಿದ ಹೈದರಾಬಾದ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮುಂದುವರೆಸಿತು. ಸನ್ ರೈಸರ್ಸ್ ಪರ ಮನೀಶ್ ಪಾಂಡೆ 13 ರನ್ (23 ಎಸೆತ 1 ಬೌಂಡರಿ ) ಕೇದಾರ್ ಜಾದವ್ 12 ರನ್ ಗಳಿಸಿ ರವಿ ಬಿಶ್ನೋಯಿಗೆ ವಿಕೆಟ್ ಒಪ್ಪಿಸಿದರು. ವೃದ್ಧಿಮಾನ್ ಸಹಾ 31 ರನ್ (37 ಎಸೆತ 1 ಬೌಂಡರಿ) ಗಳಿಸಿ ರನ್‍ಗೆ ಬಲಿಯಾದರು.

    ಹೈದರಾಬಾದ್ ಗೆಲುವಿಗಾಗಿ ಏಕಾಂಗಿ ಹೋರಾಟ ಮಾಡಿದ ಜೇಸನ್ ಹೋಲ್ಡರ್, ಅಜೇಯ 47ರನ್ (29 ಎಸೆತ 5 ಸಿಕ್ಸರ್ ) ಸಿಡಿಸಿದರು. ಪಂದ್ಯದ ಕೊನೆಯ ಓವರ್‍ನಲ್ಲಿ ಹೈದರಾಬಾದ್ ಗೆಲುವಿಗೆ 6 ಬಾಲ್‍ಗಳಲ್ಲಿ 17 ರನ್‍ಗಳ ಅವಶ್ಯಕತೆಯಿತ್ತು. ನಾಥನ್ ಎಲ್ಲಿಸ್ ಕೊನೆಯ ಓವರ್‍ನಲ್ಲಿ ಕೇವಲ 11ರನ್ ನೀಡಿ ಪಂಜಾಬ್ ಗೆಲುವಿಗೆ ಕಾರಣದರು.

     

  • ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

    ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

    ಶಾರ್ಜಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಶಾರ್ಜಾದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಆರ್​ಸಿಬಿ ಚಾಲೆಂಜರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ 111 ರನ್ ಕಲೆ ಹಾಕಿದ ಈ ಜೋಡಿ, ಬೃಹತ್ ಮೊತ್ತ ಪೇರಿಸುವ ಆಸೆ ಹುಟ್ಟಿಸಿತು. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 53 ರನ್‍ಗಳಿಸಿದರೆ, ಪಡಿಕ್ಕಲ್ 50 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಔಟಾದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಇಬ್ಬರ ವಿಕೆಟ್ ಪತನದ ಬಳಿಕ ಆರ್​ಸಿಬಿಯ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಚೆನ್ನೈ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸದೇ, 20 ಓವರ್ ಗಳಲ್ಲಿ ಕೇವಲ 157 ರನ್‍ಗಳ ಟಾರ್ಗೆಟ್ ನೀಡಿತು. ಚೆನ್ನೈ ಪರ ಬ್ರಾವೊ 3 ವಿಕೆಟ್ ಪಡೆದರೆ ಠಾಕೂರ್ 2 ವಿಕೆಟ್ ಪಡೆದು ಮಿಂಚಿದರು. 156 ರನ್‍ಗಳ ಚೇಸ್ ಮಾಡಲು ಕ್ರೀಸ್‍ಗಿಳಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ಡು ಪ್ಲೇಸಿಸ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 71 ರನ್‍ಗಳ ಜೊತೆಯಾಟ ನೀಡಿತು. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?

    ಫ್ಲಾಫ್ ಡು ಪ್ಲೇಸಿಸ್ 31 ರನ್‍ಗಳಿಸಿದರೆ, ಗಾಯಕ್ವಾಡ್ 38 ರನ್‍ಗಳಿಸಿ ಔಟಾದರು. ಬಳಿಕ ಬಂದ ಮೊಯಿನ್ ಅಲಿ 18 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 23 ರನ್ ಗಳಿಸಿದರೆ, ಅಂಬಟಿ ರಾಯುಡು 32 ರನ್‍ಗಳಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‍ನಲ್ಲಿ ಒಂದಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಚೆನ್ನೈ ತಂಡವನ್ನು ಇನ್ನೂ 11 ಎಸೆತಗಳು ಬಾಕಿಯಿರುವಾಗಲೇ ಗೆಲುವಿನ ದಡ ಸೇರಿಸಿದರು. ಧೋನಿ 9 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 11 ರನ್ ಗಳಿಸಿದರೆ, ರೈನಾ 10 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್‌ ನೆರವಿನಿಂದ ಅಜೇಯ 17 ರನ್ ಗಳಿಸಿದರು.

  • ಆರ್​ಸಿಬಿ-ಚೆನ್ನೈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕಿಚ್ಚ

    ಆರ್​ಸಿಬಿ-ಚೆನ್ನೈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುತ್ತಿರುವ ಕಿಚ್ಚ

    ಶಾರ್ಜಾ: ಐಪಿಎಲ್ ಪಂದ್ಯಗಳನ್ನು ನೋಡುತ್ತ ಎಂಜಾಯ್ ಮಾಡುತ್ತಿರುವ ಕಿಚ್ಚ ಸುದೀಪ್, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಯನ್ನು ವೀಕ್ಷಿಸುತ್ತಿದ್ದು, ಯುಎಇನ ಶಾರ್ಜಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಹಿಳೆಯೊಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಅಭಿಮಾನಿಗಳು ಕಮೆಂಟ್, ಲೈಕ್ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಯುಎಇಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸುದೀಪ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಆಗಮಿಸಿದ ಕುರಿತು ಫೋಟೋ, ವೀಡಿಯೋಗಳು ವೈರಲ್ ಆಗುತ್ತಿವೆ.

    ಇತ್ತೀಚೆಗೆ ಆರ್​ಸಿಬಿ ಹಾಗೂ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆರ್​ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೀನಾಯ ಸೋಲು ಕಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ತಂಡಗಳ ಆಟವನ್ನು ಸಹ ಕಿಚ್ಚ ವೀಕ್ಷಿಸಿದ್ದರು. ಈ ಕುರಿತು ರಾಜಸ್ಥಾನ್ ರಾಯಲ್ಸ್ ತಂಡದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಹಲೋ ಕಿಚ್ಚ ವಿಯ್ ಸಿ ಯು ಎಂದು ಬರೆಯಲಾಗಿತ್ತು. ಇದಕ್ಕೆ ಸುದೀಪ್ ಸಹ ಪ್ರತಿಕ್ರಿಯಿಸಿ, ಎಂತಹ ಕಾಕತಾಳೀಯ, ನಾನೂ ಸಹ ನಿಮ್ಮನ್ನು ಇಡೀ ಸಮಯ ನೋಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದರು. ಹೀಗೆ ಬಹುತೇಕ ಐಪಿಎಲ್ ಪಂದ್ಯಗಳನ್ನು ಕಿಚ್ಚ ವೀಕ್ಷಿಸಿದ್ದಾರೆ.

  • ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಶಾರ್ಜಾ: ಇಂದು ಶಾರ್ಜಾದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದೆ.

    ದುಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈ, ಬೆಂಗಳೂರು ತಂಡವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ವಿರುದ್ಧ ಹೀನಾಯವಾಗಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ತಂಡವನ್ನು ಸೋಲಿಸಿ ಶುಭಾರಾಂಭ ಮಾಡಲು ಸಿದ್ಧವಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?

    ಐಪಿಎಲ್ ಇತಿಹಾಸದಲ್ಲಿ ಒಟ್ಟು 17 ಬಾರಿ ಸಿಎಸ್‍ಕೆ, ಆರ್​ಸಿಬಿ  ವಿರುದ್ಧ ಗೆದ್ದು ಬೀಗಿದ್ದು, 9 ಬಾರಿ ಆರ್​ಸಿಬಿ  ಚೆನ್ನೈ ವಿರುದ್ಧ ಗೆಲುವು ಸಾಧಿಸಿದೆ. ಕಳೆದ 11 ಪಂದ್ಯಗಳಲ್ಲಿ 9 ಬಾರಿ ಚೆನ್ನೈ ಆರ್​ಸಿಬಿ  ಮೇಲೆ ಗೆಲವು ಸಾಧಿಸಿರುವುದು ವಿಶೇಷವಾಗಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆರ್​ಸಿಬಿ  ಕೂಡ ಚೊಚ್ಚಲ ಐಪಿಎಲ್ ಕಿರೀಟವನ್ನು ಗೆಲ್ಲುವ ಹಂಬಲದಲ್ಲಿದೆ. ಅಲ್ಲದೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‍ನಲ್ಲಿ ಮೇಲೇರುವ ತವಕದಲ್ಲಿದೆ. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ತಂಡದ ಬಲಾಬಲ ನೋಡುವದಾದರೇ, ಫಾಫ್ ಡು ಪ್ಲೆಸಿಸ್, ಗಾಯಕ್‍ವಾಡ್, ಸುರೇಶ್ ರೈನಾ, ನಾಯಕ ಎಂ.ಎಸ್ ಧೋನಿ, ಜಡೇಜಾ, ರಾಯುಡು ಅಂತಾ ಸ್ಟಾರ್ ಆಟಗಾರರು ಬ್ಯಾಟಿಂಗ್‍ನಲ್ಲಿ ಚೆನ್ನೈಗೆ ಬಲ ತುಂಬಾಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್. ದೀಪಕ್ ಚಾಹರ್‍ರಂತ ಆಟಗಾರರಿದ್ದಾರೆ. ಸಾಂಘಿಕ ಹೋರಾಟ ಚೆನ್ನೈ ತಂಡದ ಗೆಲುವಿನ ಗುಟ್ಟು ಎಂದು ಹೇಳಬಹುದು. ಆರ್​ಸಿಬಿ  ತಂಡವು ಚೆನ್ನೈ ತಂಡದಷ್ಟೆ ಬಲಿಷ್ಟವಾಗಿದೆ. ಎಬಿ ಡಿವಿಲಿಯರ್ಸ್, ಮ್ಯಾಕ್ಸ್‍ವೆಲ್, ದೇವದತ್ತ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು. ಬೌಲಿಂಗ್ ವಿಭಾಗದಲ್ಲಿ ಸಿರಾಜ್, ಚಾಹಲ್, ಹರ್ಷಲ್ ಪಾಟೇಲ್, ಕೈಲ್ ಜೇಮೀಸನ್ ಎದುರಾಳಿ ತಂಡವನ್ನು ಕಡಿಮೆ ರನ್‍ಗಳಿಗೆ ಕಟ್ಟಿಹಾಕಬಲ್ಲರು.

    ಚೆನ್ನೈ ತಂಡದ ಆಟಗಾರರು ಉತ್ತಮ ಫಾರ್ಮ್‍ನಲ್ಲಿದ್ದು, ಅಲ್ಲದೆ ಬೌಲಿಂಗ್ ವಿಭಾಗ ಆರ್​ಸಿಬಿ  ತಂಡಕ್ಕಿಂತಲೂ ಕೊಂಚ ಬಲಿಷ್ಟವಾಗಿದೆ. ಆರ್​ಸಿಬಿ  ತಂಡ ಬ್ಯಾಟಿಂಗ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ, ಮ್ಯಾಕ್ಸ್‍ವೆಲ್ ಮೇಲೆ ಹೆಚ್ಚು ಅವಲಂಬಿತವಾಗಿರುವುದು ತಂಡದ ಮೈನಸ್ ಪಾಯಿಂಟ್ ಎಂದು ಹೇಳಬಹುದು. ಚೆನ್ನೈ ತಂಡಕ್ಕೆ ಎಂ.ಎಸ್ ಧೋನಿಯ ಅವರ ಚಾಣಕ್ಷ್ಯ ನಾಯಕತ್ವ ಪ್ಲಸ್ ಆಗಲಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು ಉಭಯ ತಂಡಗಳ ಕಾದಾಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಕ್ರಿಕೆಟ್ ಡಿಪಿಎಲ್ 2021: ಸಿಂಧನೂರಿನ ಸಣ್ಣ ಮಾರೇಶ್ ಆಯ್ಕೆ

    ಕ್ರಿಕೆಟ್ ಡಿಪಿಎಲ್ 2021: ಸಿಂಧನೂರಿನ ಸಣ್ಣ ಮಾರೇಶ್ ಆಯ್ಕೆ

    – ಫೆ.13 ರಿಂದ ಶಾರ್ಜಾದಲ್ಲಿ ಕ್ರಿಕೆಟ್ ಪಂದ್ಯಾವಳಿ

    ರಾಯಚೂರು: ಶಾರ್ಜಾ ಕ್ರೀಡಾಂಗಣದಲ್ಲಿ ಫೆಬ್ರವರಿ 13 ರಿಂದ ನಡೆಯಲಿರುವ ದಿವ್ಯಾಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲೆಯ ಸಿಂಧನೂರಿನ ಕ್ರಿಕೆಟ್ ಪ್ರತಿಭೆ ಸಣ್ಣಮಾರೇಶ್ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಸಣ್ಣಮಾರೇಶ್ ಮುಂಬೈ ಐಡಿಯಲ್ಸ್ ತಂಡದಲ್ಲಿ ಬೌಲರ್ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ಒಟ್ಟು ನಾಲ್ಕು ಜನ ಆಯ್ಕೆಯಾಗಿದ್ದು ನಾಲ್ಕು ಜನ ಮುಂಬೈ ಐಡಿಯಲ್ಸ್ ಪರ ಆಡಲಿದ್ದಾರೆ.

    ಚೆನ್ನೈ ಸೂಪರ್ ಸ್ಟಾರ್ ,ಮುಂಬೈ ಐಡಿಯಲ್ಸ್, ಕೊಲ್ಕತ್ತಾ ನೈಟ್ ಫೈಟರ್ಸ್ ,ಡೆಲ್ಲಿ ಚಾಲೆಂಜರ್ಸ್, ರಾಜಸ್ಥಾನ್ ರಾಜವಾಡೆ, ಗುಜರಾತ್ ಹಿಟ್ಟರ್ಸ್ ಒಟ್ಟು ಆರು ತಂಡಗಳು ಯುಎಇ ನ ಶಾರ್ಜಾದಲ್ಲಿ ನಡೆಯಲಿರುವ ದಿವ್ಯಾಂಗ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಲಿವೆ. ಮಹಿಳೆಯರ ಐಪಿಎಲ್ ಬಳಿಕ ದಿವ್ಯಾಂಗ ಕ್ರಿಕೆಟ್ ಪಟುಗಳಿಗಾಗಿ ಡಿಪಿಎಲ್ ಆಯೋಜಿಸಲಾಗಿದೆ. 2019 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರಾಷ್ಟ್ರೀಯ 20-20 ಪಂದ್ಯಾವಳಿಯಲ್ಲಿ ಸಣ್ಣಮಾರೇಶ್ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ಎರಡು ಅಂತರರಾಷ್ಟ್ರೀಯ ಪಂದ್ಯಾವಳಿಯಿಂದ ದೂರ ಉಳಿದಿದ್ದರು. 37 ರಣಜಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಆಲ್ ರೌಂಡರ್ ಸಣ್ಣಮಾರೇಶ್ ಉತ್ತಮ ಪ್ರದರ್ಶನ ನೀಡಿದ್ದಾರೆ.

    ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದ ಸಣ್ಣಮಾರೇಶ್ ಚಿಕ್ಕವಯಸ್ಸಿನಲ್ಲಿ ಹಿಟ್ಟಿನ ಗಿರಣಿಯಲ್ಲಿ ನಡೆದ ಆಕಸ್ಮಿಕ ಅವಘಡದಲ್ಲಿ ತಮ್ಮ ಎಡಗೈ ಕಳೆದುಕೊಂಡಿದ್ದಾರೆ. ವಿಕಲಚೇತನರಾದರೂ ಅಚಲವಾದ ಛಲದಿಂದ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಕಲಚೇತನರಿಗಾಗಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಿಟ್ಟಿಸಿಕೊಂಡ ಮಾರೇಶ್ ಓಟ ಸ್ಪರ್ಧೆಯಲ್ಲಿ ಸಾಕಷ್ಟು ನಿಪುಣರಾಗಿದ್ದರು. ಓಟದ ಜೊತೆ ಕ್ರಿಕೆಟ್ ಸಹ ಆಡುತ್ತಿದ್ದ ಸಣ್ಣಮಾರೇಶ್ 2013ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರ್ ರಾಜ್ಯ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾದರು, ಅಲ್ಲಿ ಒಂಟಿ ಕೈಯಲ್ಲೇ ಬ್ಯಾಟ್ ಹಿಡಿದು ತಮ್ಮ ಚಮತ್ಕಾರ ತೋರಿಸಿದರು. ಬಳಿಕ ಕ್ರಿಕೆಟಿನಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಬಂದಿದ್ದಾರೆ.

    ವಿಕಲಚೇತನರ ವಿವಿಧ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆಲ್ ರೌಂಡರ್ ಆಗಿ ತಂಡವನ್ನು ವಿಜಯದತ್ತ ಕೊಂಡೊಯ್ದಿದ್ದಾರೆ. ಮಂಗಳೂರಿನ ಎಂಆರ್ ಪಿಎಲ್ ಕಂಪನಿಯ ಉದ್ಯೋಗಿಯಾಗಿರುವ ಸಣ್ಣಮಾರೇಶ್ ಈಗ ಡಿಪಿಎಲ್‍ಗೆ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಫೆ.13 ರಿಂದ ಶಾರ್ಜಾದಲ್ಲಿ 8 ದಿನ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

  • ಮಹಿಳಾ ಐಪಿಎಲ್: ಮೊದಲನೇ ಪಂದ್ಯದಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿದ ಮಿಥಾಲಿ ಪಡೆ

    ಮಹಿಳಾ ಐಪಿಎಲ್: ಮೊದಲನೇ ಪಂದ್ಯದಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿದ ಮಿಥಾಲಿ ಪಡೆ

    – ಕುಸಿದ ವೆಲಾಸಿಟಿಗೆ ಆಸರೆಯಾದ ಸುಷ್ಮಾ, ಲೂಸೆ

    ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್-2020ಯ ಮೊದಲನೇ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಹರ್ಮನ್‍ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ತಂಡವನ್ನು ಐದು ವಿಕೆಟ್‍ಗಳಿಂದ ಮಣಿಸಿದೆ.

    ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೂಪರ್ನೋವಾಸ್ ತಂಡ ಚಮರಿ ಅಥಾಪತ್ತು ಮತ್ತು ನಾಯಕಿ ಹರ್ಮನ್‍ಪ್ರೀತ್ ಕೌರ್ ಅವರ ಭರ್ಜರಿ ಬ್ಯಾಟಿಂಗ್ ಸಲುವಾಗಿ ನಿಗದಿತ 20 ಓವರಿನಲ್ಲಿ 126 ರನ್‍ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ವೆಲಾಸಿಟಿ ತಂಡ ಆರಂಭಿಕ ಆಘಾತ ಅನುಭವಿಸಿದರೂ ನಂತರ ಮಧ್ಯಮ ಕ್ರಮಾಂಕದಲ್ಲಿ ಸುಷ್ಮಾ ವರ್ಮಾ ಮತ್ತು ಸುನೆ ಲೂಸ್ ಸ್ಫೋಟಕ ಬ್ಯಾಟಿಂಗ್‍ನಿಂದ ಒಂದು ಬಾಲ್ ಉಳಿದಂತೆ 129 ರನ್‍ಗಳಿಸಿ ಐದು ವಿಕೆಟ್‍ಗಳಿಂದ ಗೆದ್ದು ಬೀಗಿತು.

    ಸುಷ್ಮಾ, ಲೂಸೆ ಭರ್ಜರಿ ಜೊತೆಯಾಟ
    ಇಂದಿನ ಪಂದ್ಯದಲ್ಲಿ ವೆಲಾಸಿಟಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ತಂಡ ಟಾಪ್ ಆರ್ಡರ್ ಬ್ಯಾಟ್ಸ್ ಮನ್‍ಗಳಾದ ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್ ಮತ್ತು ಮಿಥಾಲಿ ರಾಜ್ ಬೇಗ ಔಟ್ ಆದರು. ಆದರೆ ನಂತರ ಜೊತೆಯಾದ ಸುಷ್ಮಾ ವರ್ಮಾ (34 ರನ್, 33 ಎಸೆತ, 02 ಸಿಕ್ಸ್) ಮತ್ತು ಸುನೆ ಲೂಸ್ (37 ರನ್, 21 ಎಸೆತ 4 ಫೋರ್ 1 ಸಿಕ್ಸ್) ಸಮೇತ 36 ಎಸೆತದಲ್ಲಿ 51 ರನ್‍ಗಳ ಜೊತೆಯಾಟವಾಡಿ ವೆಲಾಸಿಟಿ ತಂಡಕ್ಕೆ ಗೆಲುವು ತಂದಿತ್ತರು.

    ಸೂಪರ್ನೋವಾಸ್ ನೀಡಿದ 127 ರನ್‍ಗಳ ಗುರಿ ಬೆನ್ನಟ್ಟಿದ ವೆಲಾಸಿಟಿ ತಂಡಕ್ಕೆ ಸೂಪರ್ನೋವಾಸ್ ತಂಡದ ವೇಗಿ ಅಯಾಬೊಂಗಾ ಖಾಕ ಶಾಕ್ ನೀಡಿದರು. ಇನ್ನಿಂಗ್ಸ್ ನ ಮೊದಲೇ ಓವರಿನಲ್ಲೇ ಡೇನಿಯಲ್ ವ್ಯಾಟ್ ಔಟ್ ಆದರು. ಇದಾದ ನಂತರ ಅಬ್ಬರದ ಬ್ಯಾಟಿಂಗ್ ಮುಂದಾದ ಶಫಾಲಿ ವರ್ಮಾ ಹ್ಯಾಟ್ರಿಕ್ ಬೌಂಡರಿಗಳನ್ನು ಸಿಡಿಸಿದರು. ಆದರೆ ಮೂರನೇ ಓವರ್ ಕೊನೆಯ ಬಾಲಿನಲ್ಲಿ 11 ಬಾಲಿಗೆ 17 ರನ್ ಸಿಡಿಸಿದ್ದ ಶಫಾಲಿ ವರ್ಮಾ ಅಯಾಬೊಂಗಾ ಖಾಕಗೆ ಔಟ್ ಆದರು.

    ನಂತರ ಜೊತೆಯಾದ ನಾಯಕಿ ಮಿಥಾಲಿ ರಾಜ್ ಮತ್ತು ಕನ್ನಡತಿ ವೇದ ಕೃಷ್ಣಮೂರ್ತಿ ತಾಳ್ಮೆಯಿಂದ ಜೊತೆಯಾಟವಾಡಿದರು. ಆದರೆ ಎಂಟನೇ ಓವರಿನ ಮೂರನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಿಥಾಲಿ 7 ರನ್ ಗಳಿಸಿ ಶಶಿಕಲಾ ಸಿರಿವರ್ಧನೆ ಅವರಿಗೆ ಔಟ್ ಆದರು. ಇದಾದ ಬಳಿಕ 28 ಬಾಲಿಗೆ 29 ರನ್ ಸಿಡಿಸಿ ವೆಲಾಸಿಟಿ ಭರವಸೆ ಮೂಡಿಸಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿ 12ನೇ ಓವರ್ ಕೊನೆಯ ಬಾಲಿನಲ್ಲಿ ರಾಧಾ ಯಾದವ್ ಅವರಿಗೆ ಔಟ್ ಆದರು.

    ವೇದಾ ಔಟ್ ಆದ ನಂತರ ಜೊತೆಯಾದ ಸುಷ್ಮಾ ವರ್ಮಾ ಮತ್ತು ಸುನೆ ಲೂಸ್ ಸ್ಫೋಟಕ ಆಟಕ್ಕೆ ಮುಂದಾದರು. ಈ ಜೋಡಿ ಐದನೇ ವಿಕೆಟ್‍ಗೆ 35 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 19ನೇ ಓವರಿನ ಐದನೇ ಬಾಲಿನಲ್ಲಿ 33 ಬಾಲಿಗೆ 34 ರನ್ ಸಿಡಿಸಿ ಆಡುತ್ತಿದ್ದ ಸುಷ್ಮಾ ವರ್ಮಾ ಅವರು ಬೌಂಡರಿ ಗೆರೆಯ ಬಳಿ ಕ್ಯಾಚ್ ಕೊಟ್ಟು ಪೂನಂ ಯಾದವ್‍ಗೆ ಔಟ್ ಆದರು. ಆದರೆ ಶಿಖಾ ಪಾಂಡೆ ಮತ್ತು ಸುನೆ ಲೂಸ್ ಸೇರಿಕೊಂಡು ಕೊನೆಯ ಓವರಿನಲ್ಲಿ 9 ರನ್ ಭಾರಿಸಿ ವೆಲಾಸಿಟಿ ತಂಡಕ್ಕೆ ಗೆಲುವು ತಂದಿತ್ತರು.

  • ಜಹೀರ್ ಖಾನ್ ಹಿಂದಿಕ್ಕಿ ಐಪಿಎಲ್‍ನಲ್ಲಿ ದಾಖಲೆ ಬರೆದ ಸಂದೀಪ್ ಶರ್ಮಾ

    ಜಹೀರ್ ಖಾನ್ ಹಿಂದಿಕ್ಕಿ ಐಪಿಎಲ್‍ನಲ್ಲಿ ದಾಖಲೆ ಬರೆದ ಸಂದೀಪ್ ಶರ್ಮಾ

    ಶಾರ್ಜಾ: ಅನುಭವಿ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಹಿಂದಿಕ್ಕಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಫಾಸ್ಟ್ ಬೌಲರ್ ಸಂದೀಪ್ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಇಂದು ನಡೆಯುತ್ತಿರುವ ಐಪಿಎಲ್-2020 56ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ದಾಳಿಗೆ ತತ್ತರಿಸಿ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಗುರಿ ನೀಡಿದೆ.

    ಸಂದೀಪ್ ಶರ್ಮಾ ದಾಖಲೆ
    ಇಂದು ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಸಂದೀಪ್ ಶರ್ಮಾ 34 ರನ್ ನೀಡಿ 3 ವಿಕೆಟ್ ಕಿತ್ತು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಪವರ್ ಪ್ಲೇ ಸಮಯದಲ್ಲೇ ಸಂದೀಪ್ ಶರ್ಮಾ ತನ್ನ ಸ್ವಿಂಗ್ ಮೂಲಕ ಬರೋಬ್ಬರಿ 55 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ 52 ವಿಕೆಟ್ ಕಿತ್ತಿರುವ ಜಹೀರ್ ಖಾನ್ ಮತ್ತು 48 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದ್ದಾರೆ.

    ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇಷ್ಟು ದಿನ ವಿಶ್ರಾಂತಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಇಂದು ಮೈದಾನದಲ್ಲಿ ಕಮಾಲ್ ಮಾಡಲಿಲ್ಲ. ಕೇವಲ 4 ರನ್‍ಗಳಿಸಿ ಔಟ್ ಆದರು. ನಂತರ 25 ರನ್ ಗಳಿಸಿ ಕ್ವಿಂಟನ್ ಡಿ ಕಾಕ್ ಸಂದೀಪ್ ಶರ್ಮಾ ಅವರಿಗೆ ಬೌಲ್ಡ್ ಆದರು. 29 ಬಾಲಿಗೆ 36 ರನ್ ಸಿಡಿಸಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ನದೀಮ್‍ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಬಂದ ಕ್ರುನಾಲ್ ಪಾಂಡ್ಯ ಶೂನ್ಯ ಸುತ್ತಿದರೆ, ಸೌರಭ್ ತಿವಾರಿ ಒಂದು ರನ್ ಹೊಡೆದು ವಿಕೆಟ್ ಒಪ್ಪಿಸಿದರು. 33 ರನ್ ಗಳಿಸಿದ್ದ ಇಶಾನ್ ಕಿಶನ್ ಅವರು ಔಟ್ ಆದರು. ಅವರ ಬೆನ್ನಲ್ಲೇ ನಾಥನ್ ಕೌಲ್ಟರ್-ನೈಲ್ ಅವರು ನಿರ್ಗಮಿಸಿದರು. ನಂತರ ಕೊನೆಯ ಓವರಿನಲ್ಲಿ 41 ರನ್ ಗಳಸಿದ್ದ ಕೀರನ್ ಪೊಲಾರ್ಡ್ ಔಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಟಾರ್ಗೆಟ್ ನೀಡಿದೆ.