ಬೆಂಗಳೂರು: ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ(NIA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಕದ್ರಿ ದೇವಸ್ಥಾನ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ರು ಎಂದು ಎನ್‍ಐಎ ಅಧಿಕೃತವಾಗಿ ದೋಷಾರೋಪ ಪಟ್ಟಿಯಲ್ಲಿ ಹೇಳಿಕೊಂಡಿದೆ.
ಶಾರೀಖ್ (Shariq) ಮುಖಾಂತರ ಬ್ಲಾಸ್ಟ್ ಮಾಡಲು ಯತ್ನಿಸಿರೋದು ಬೆಳಕಿಗೆ ಬಂದಿದೆ. ಮಾಝ್, ಯಾಸಿನ್ ಮತ್ತು ಶಾರೀಖ್ ಸೇರಿದಂತೆ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಮೂವರು ಸೇರಿ ಆಗುಂಬೆ ಮತ್ತು ವರಾಹಿ ನದಿ ಬಳಿ ಟ್ರಯಲ್ ಬ್ಲಾಸ್ಟ್ ಮಾಡಿದ್ರು, ಟ್ರಯಲ್ ಬ್ಲಾಸ್ಟ್ ಮಾಡಿ ಜನ ಸಾಮಾನ್ಯರ ಸಾವು ನೋವಿನ ಬಗ್ಗೆ ಲೆಕ್ಕಾಚಾರ ಹಾಕಿದ್ರು, ಅಲ್ಲದೇ 25ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಿದ್ರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಗಳನ್ನ ಏರ್‌ಪೋರ್ಟ್‌ಗೆ ಬಿಟ್ಟು ಬರುವಾಗ ಕಾರು ಪಲ್ಟಿ- ಇಬ್ಬರು ಸಾವು
ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡೋದು ಉದ್ದೇಶ ಆಗಿತ್ತು, ಮೂವರು ಕೂಡ ಕ್ರಿಪ್ಟೋ ಕರೆನ್ಸಿ ಮೂಲಕ ವ್ಯವಹಾರ ನಡೆಸಿದ್ದಾರೆ, ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ವಿದೇಶದಿಂದ ಹಣ ರವಾನೆ ಮಾಡುತ್ತಾ ಇದ್ದದ್ದು, ಅಲ್ಲದೇ ಆರೋಪಿ ಮಾಝ್ ಅಕೌಂಟ್‍ಗೆ 1 ಲಕ್ಷ 20 ಸಾವಿರ ಹಣ ಸಂದಾಯ ಮಾಡಲಾಗಿದೆ ಮತ್ತೋರ್ವ ಆರೋಪಿ ಸೈಯದ್ ಯಾಸಿನ್ ಅಕೌಂಟ್ 62 ಸಾವಿರ ಹಣ ಸಂದಾಯ ಮಾಡಲಾಗಿದೆ. ಸದ್ಯ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರೋ ಎನ್ ಐ ಎ ದೋಷಾರೋಪ ಪಟ್ಟಿಯಲ್ಲಿ ಎಲ್ಲಾ ಮಾಹಿತಿ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು: ಕದ್ರಿ ದೇವಸ್ಥಾನವೇ (Kadri Temple) ಮಂಗಳೂರು (Mangaluru) ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‍ನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಮಂಗಳೂರಿನ ಪಂಪ್‍ವೆಲ್, ರೈಲ್ವೇ ನಿಲ್ದಾಣ, ಆರ್‌ಎಸ್‌ಎಸ್ ಕಚೇರಿ ಶಾರೀಕ್‍ನ (Shariq) ಟಾರ್ಗೆಟ್ ಆಗಿರಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಈಗ ಕದ್ರಿ ದೇವಸ್ಥಾನವೇ ಆತನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಎರಡೂವರೆ ತಿಂಗಳ ಚಿಕಿತ್ಸೆಯ ಬಳಿಕ ಶಾರೀಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾರ್ಚ್ 6 ರಂದು ಬಿಡುಗಡೆಯಾಗಿದ್ದ. ಸದ್ಯ ಎನ್‍ಐಎ ಕಸ್ಟಡಿಯಲ್ಲಿರುವ ಶಾರೀಕ್‍ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‍ನಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದೆ ಎಂಬ ವಿಚಾರವನ್ನು ಶಾರೀಕ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈಗ ಎನ್‍ಐಎ (NIA) ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಲು ಸಿದ್ದತೆ ನಡೆಸಿದ್ದಾರೆ. ಅದರ ಜೊತೆಯಲ್ಲಿ ಜೈಲಿನಲ್ಲಿರೋ ಮತ್ತಿಬ್ಬರು ಶಂಕಿತ ಉಗ್ರ ಮಾಜ್ ಹಾಗೂ ಯಾಸಿರ್‍ನನ್ನು ಕಸ್ಟಡಿಗೆ ಪಡೆಯುವ ನಿರ್ಧಾರ ಮಾಡಿದ್ದಾರೆ.
ಮಂಗಳೂರು ಪ್ರಕರಣದ ವಿಚಾರಣೆಯ ಬಳಿಕ ಶಾರೀಖ್‍ನನ್ನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಸಲಿದೆ. ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಇದುವರೆಗೂ ಎಂಟು ಜನರನ್ನು ಬಂಧಿಸಿರೋ ಎನ್‍ಐಎ ತಂಡ ವಿಚಾರಣೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಶಾರೀಖ್ ಕೈವಾಡದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರೀಖ್‍ಗೂ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಯಲಿದೆ. ನಂತರ ಮಾಜ್ ಹಾಗೂ ಯಾಸಿರ್‍ನನ್ನು ಭೇಟಿ ಮಾಡಿಸಲು ನಿರ್ಧರಿಸಿದೆ.
ತನಿಖೆಯಲ್ಲಿ ಬೇರೆ ಬೇರೆ ಸ್ನೇಹಿತರ ಹೆಸರು, ವಿಳಾಸ ಬಳಸಿ ಅಮೆಜಾನ್ ಮೂಲಕ ಸ್ಪೋಟಕ ಕಚ್ಚ ವಸ್ತು ಖರೀದಿಸಿದ್ದಾಗಿ ತಿಳಿದು ಬಂದಿದೆ. ಆರೋಪಿ ಬಳಿ ಸಿಕ್ಕ ಪ್ರೇಮ್ ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ವಿಳಾಸ ಸಹ ಸ್ಪೋಟಕ ಸಾಮಗ್ರಿ ಖರೀದಿಗೆ ಬಳಕೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Bomb Blast) ಪ್ರಕರಣದ ಪ್ರಮುಖ ಆರೋಪಿ ಉಗ್ರ ಶಾರೀಕ್ (Mohammed Shariq) ಎರಡೂವರೆ ತಿಂಗಳ ಸತತ ಚಿಕಿತ್ಸೆ ನಂತರ ಸೋಮವಾರ ಬಿಡುಗಡೆಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಉಗ್ರ ಶಾರೀಕ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಸ್ಫೋಟದ ವೇಳೆ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ
ಸತತ ಎರಡೂವರೆ ತಿಂಗಳು ಚಿಕಿತ್ಸೆ ಪಡೆದ ಶಾರೀಕ್, ಇಂದು ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖವಾಗಿ ಡಿಸಾರ್ಜ್ ಆಗಿದ್ದಾನೆ. ಆಸ್ಪತ್ರೆಯಿಂದ ನೇರವಾಗಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹತ್ತು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ್ದಾರೆ.
ಮಂಗಳವಾರದಿಂದ ಅಧಿಕೃತವಾಗಿ ಸ್ಫೋಟದ ಬಗ್ಗೆ ಎನ್‌ಐಎ ಅಧಿಕಾರಿಗಳು ವಿಚಾರಣೆ ಶುರು ಮಾಡಲಿದ್ದಾರೆ. ವಿಚಾರಣೆ ನಂತರ ಮಂಗಳೂರು ಸೇರಿದಂತೆ ವಿವಿಧ ಜಾಗಗಳಲ್ಲಿ ಸ್ಥಳ ಮಹಜರು ಮಾಡಿ ಮತ್ತಷ್ಟು ತನಿಖೆ ಚುರುಕುಗೊಳಿಸಲು ಸಿದ್ಧತೆ ನಡೆದಿದೆ.
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರಕುಕೊಂಡಿದ್ದು, ಎನ್‍ಎಐ (NIA) ಅಧಿಕಾರಿಗಳು ಗುರುವಾರ ಮಂಗಳೂರು (Mangaluru) ಹೊರವಲಯದ ಕೊಣಾಜೆ ಬಳಿಯಿರುವ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PA Engineering College) ಮೇಲೆ ದಾಳಿ ನಡೆಸಿದ್ದಾರೆ.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಶಂಕಿತ ಉಗ್ರ ಶಾರೀಕ್‍ನನ್ನು (Shariq) ವಿಚಾರಣೆಗೆ ಒಳಪಡಿಸಿದ್ದ ವೇಳೆ ಸಾಕಷ್ಟು ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪಿಎ ಎಂಜಿನಿಯರಿಂಗ್ ಕಾಲೇಜ್ ಮೇಲೆ 7 ಮಂದಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿಯ ಬಳಿಕ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಎನ್‍ಐಎ ವಶಕ್ಕೆ ಪಡೆದುಕೊಂಡಿದೆ. ಈ ವೇಳೆ ವಶಕ್ಕೆ ಪಡೆದ ವಿದ್ಯಾರ್ಥಿಯನ್ನು ಉಡುಪಿ ಮೂಲದ ರಿಹಾನ್ ಶೇಖ್ ಎಂದು ಗುರುತಿಸಲಾಗಿದೆ.
ದಾಳಿ ಯಾಕೆ?: ಈ ಕಾಲೇಜಿನಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನ ಆರೋಪಿ ಮಾಝ್ ಮುನೀರ್ ಶಿಕ್ಷಣ ಪಡೆದಿದ್ದು, ಈ ವೇಳೆ ಕಾಲೇಜಿನಲ್ಲಿ ಉಗ್ರ ಚಟುವಟಿಕೆಯ ಪ್ಲಾನ್ ನಡೆಸಿರುವ ಮಾಹಿತಿ ದೊರೆತಿದೆ. ಶಂಕಿತ ಉಗ್ರ ಮಾಝ್ ಮುನೀರ್ ಮಂಗಳೂರು ನಗರದ ಬಲ್ಮಠದಲ್ಲಿ ವಾಸವಾಗಿದ್ದುಕೊಂಡು ಪಿ.ಎ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ. ಇದನ್ನೂ ಓದಿ: ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ
ಮಾಝ್ ಜೊತೆ ಉಗ್ರ ಚಟುವಟಿಕೆಯಲ್ಲಿ ರಿಹಾನ್ ಶೇಖ್ ಕೂಡ ಭಾಗಿಯಾಗಿದ್ದರ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟು ಸಾಧ್ಯತೆಯಿದ್ದು, ಸದ್ಯ ಶಿವಮೊಗ್ಗ ಕೇಸ್ ಸಂಬಂಧಿಸಿದಂತೆ ಪಿ.ಎ ಕಾಲೇಜಿನಲ್ಲಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು
Live Tv
[brid partner=56869869 player=32851 video=960834 autoplay=true]
ಬಾಂಬ್ ಸ್ಫೋಟದ ತೀವ್ರತೆಗೆ ಶಾರೀಕ್‌ನ ಎರಡು ಕೈ ಮತ್ತು ಎದೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಸರ್ಜನ್ ಕೆ.ಟಿ ರಮೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲು ಎನ್‌ಐಎ ಮುಂದಾಗಿದೆ.
ಚಿಕಿತ್ಸೆ ನಡೆದು 7 ದಿನದ ಬಳಿಕ ಶಾರೀಕ್ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು, ನಂತರ ಹೆಚ್ಚಿನ ವಿಚಾರಣೆಯನ್ನು ಎನ್‌ಐಎ ತಂಡ ನಡೆಸಲಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ(Mangaluru Cooker Blast) ಉಗ್ರ ಶಾರೀಕ್(shariq) ಮಂಗಳೂರಿನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ಒಂದೊಂದೇ ಕೃತ್ಯಗಳು ರಾಷ್ಟ್ರೀಯ ತನಿಖಾ ದಳ(NIA) ತನಿಖೆಯಿಂದ ಹೊರ ಬೀಳುತ್ತಿದ್ದು ಈಗ ಈತ ಬಾಂಬ್ ತಯಾರಿಕೆ ಬೇಕಾದ ಸಾಮಾಗ್ರಿಗಳನ್ನು ಕೇರಳದ ಲಾಡ್ಜ್‌ಗಳಿಗೆ(Kerala Lodge) ತರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ 19 ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ಚೇತರಿಸಿಕೊಳ್ಳುತ್ತಿದ್ದಾನೆ. ಅಂದಿನಿಂದ ಇಂದಿನವರೆಗೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಈಗ ಶೇ.80 ರಷ್ಟು ಗುಣಮುಖನಾಗಿದ್ದಾನೆ.
ಎನ್‌ಐಎ ಅಧಿಕಾರಿಗಳು ಮಂಗಳೂರಿನಲ್ಲೇ ಬೀಡುಬಿಟ್ಟು ಶಾರೀಕ್‌ನ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಮಯದಲ್ಲಿ ಕೇರಳದ ಕೊಚ್ಚಿಯ ಆಲುವಾದ ಕೆಲವು ಲಾಡ್ಜ್‌ಗಳಲ್ಲಿ ಬಾಂಬ್ ತಯಾರಿಸುತ್ತಿದ್ದ ವಿಚಾರವನ್ನು ಈತ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್‌ಗೆ ತಡೆಯಾಜ್ಞೆ
ಆಲುವಾದ ರೈಲು ನಿಲ್ದಾಣ, ಬಸ್ಸು ನಿಲ್ದಾಣದ ಸಮೀಪದ ಹಲವು ಲಾಡ್ಜ್‌ಗಳಲ್ಲಿ ತಂಗಿದ್ದ ಶಾರೀಕ್ ಅಲ್ಲಿಗೆ ಕೊರಿಯರ್ ಮೂಲಕ ಬಾಂಬ್ ತಯಾರಿ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ. ಆತ ಲಾಡ್ಜ್ ಬಿಟ್ಟು ಬಂದ ಬಳಿಕವೂ ಪಾರ್ಸೆಲ್ ಬರುತ್ತಿದ್ದು ಅದನ್ನು ಲಾಡ್ಜ್ ನವರು ಅವನಿಗೆ ತಲುಪಿಸುತ್ತಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಎಲ್ಲಾ ಲಾಡ್ಜ್‌ಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಧಾರವಾಡ: ದೇಶಕ್ಕೆ ಸುರಕ್ಷತೆ ಮುಖ್ಯ, ನಿಮ್ಮ ರಾಜಕಾರಣವಲ್ಲ. ನಿಮ್ಮ ತುಷ್ಟಿಕರಣದಿಂದಲೇ ಕಾಂಗ್ರೆಸ್ (Congress) ಇವತ್ತು ಈ ಸ್ಥಿತಿಗೆ ಬಂದಿದೆ. ಇನ್ನೂ ಅರ್ಥ ಮಾಡಿಕೊಂಡಿಲ್ಲ ಅಂದ್ರೆ, ನೀವು ಸರ್ವನಾಶ ಆಗಿ ಹೋಗ್ತಿರಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿ ಕಾರಿದ್ದಾರೆ.
ಡಿಕೆಶಿ ಟೆರರಿಸ್ಟ್‌ಗಳಿಗೆ (Terrorist) ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧ. ಮುಸ್ಲಿಂ ವೋಟಿಗಾಗಿ (Muslims Vote) ಕಾಂಗ್ರೆಸ್ ತುಷ್ಟೀಕರಣ ಮಾಡಿದ ಪರಿಣಾಮ ಇಡೀ ದೇಶದಲ್ಲಿ ಕಾಂಗ್ರೆಸ್ ಕಸದ ಬುಟ್ಟಿಗೆ ಸೇರಿದೆ. ಆದ್ರೂ ಅವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೋಡೊದು ಸರಿಯಲ್ಲ. ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ
ಟೆರರಿಸ್ಟ್‌ಗಳ ಬಗ್ಗೆ ಒಲವು ತೋರುವಂತೆ ಡಿಕೆಶಿ ಮಾತನಾಡಿದ್ದಾರೆ. ದೇಶದಲ್ಲಿ ಮತ್ತೆ ಮುಂಬೈ ಹಾಗೂ ಪುಲ್ವಾಮಾ ದಾಳಿಯಂತೆ ರಕ್ತ ಹರಿಯಬೇಕಿತ್ತಾ? ಹೆಣಗಳು ಬಿಳಬೇಕಾ? ಪೊಲೀಸ್ ಇಲಾಖೆ ಆರೋಪಿಯನ್ನ ಪತ್ತೆಹಚ್ಚಿ ಅನಾಹುತ ತಪ್ಪಿಸಿದ್ದಾರೆ. ಆದ್ರೆ ಕೇವಲ ವೋಟಿಗಾಗಿ ಟೆರರಿಸ್ಟ್ಗಳ ಪರ ಮಾತನಾಡುವುದು ದೇಶಕ್ಕೆ ಅಪಾಯಕಾರಿ. ಡಿಕೆಶಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯದೇ ಇದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಾಂಗ್ರೆಸ್ (Congress) ಭಯೋತ್ಪಾದಕರ ಪರವೋ ಅಥವಾ ದೇಶವನ್ನ ಉಳಿಸೋ ದೇಶಭಕ್ತರ ಪರವಾಗಿ ಇದ್ದಾರೋ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಖಾರವಾಗಿ ಪ್ರಶ್ನಿಸಿದರು.
ವಿಜಯ್ ದಿವಸ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಸಿಎಂ ಗೌರವ ಸಲ್ಲಿಸಿದರು. ಬಳಿಕ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರಬಲ್ ಶೂಟರ್‌ಗೆ ಈಗ ಟ್ರಬಲ್ – `ಕುಕ್ಕರ್ ಬ್ಲಾಸ್ಟ್’ ವಿವಾದದಲ್ಲಿ ಡಿಕೆಶಿ ಏಕಾಂಗಿ?
ಭ್ರಷ್ಟಾಚಾರ ಪ್ರಾರಂಭ ಆಗಿದ್ದೇ ಕಾಂಗ್ರೆಸ್‌ನಿಂದ. ಶಾರಿಕ್‌ಗೆ (Shariq) ಮಂಗಳೂರಿನಲ್ಲಿ ಬ್ಲಾಸ್ಟ್ ಮಾಡೋ ಉದ್ದೇಶ ಪಕ್ಕಾ ಇತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿದ್ರು. ಡಿ.ಕೆ.ಶಿವಕುಮಾರ್ ಆಕಸ್ಮಿಕ ಅಂತಾರೆ. ಇದು ಅವರಿಗೆ ಶೋಭೆ ತರೋದಿಲ್ಲ. ಚುನಾವಣೆಯ ತುಷ್ಠೀಕರಣದ ತಂತ್ರ ಇದು. ಇದು ಕಾಂಗ್ರೆಸ್‌ನ ಹಳೆಯ ತಂತ್ರ. ಈಗ ಇದೆಲ್ಲ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸೋನಿಯಾ, ರಾಹುಲ್, ಖರ್ಗೆ ಅವರು ಉತ್ತರ ಕೊಡಬೇಕು. ಕಾಂಗ್ರೆಸ್ ಯಾರ ಪರ ಅಂತ ಮೊದಲು ಹೇಳಲಿ. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಆ ಪ್ರಕ್ರಿಯೆಯನ್ನ ಪ್ರಶ್ನೆ ಮಾಡೋದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಸೋನಿಯಾ ಗಾಂಧಿ, ರಾಹುಲ್, ಖರ್ಗೆ ಮಾತಾಡಲಿ. ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಪರವೇ ಎಂಬುದಕ್ಕೆ ಮೊದಲು ಅವರು ಉತ್ತರ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ʼನಮ್ಮ ಬ್ರದರ್ಸ್ʼ ಎನ್ನಬೇಕಿತ್ತೇ – ಬಿಜೆಪಿ
ಒಬ್ಬ ವ್ಯಕ್ತಿ ಬಾಂಬ್‌ಗೆ ಬೇಕಾದ ವಸ್ತುಗಳನ್ನು ಕುಕ್ಕರ್‌ನಲ್ಲಿ ಹಾಕಿಕೊಂಡು ಹೋಗುವಾಗ ಸ್ಪೋಟವಾಗಿದೆ. ಮಂಗಳೂರಿನಲ್ಲಿ ಸ್ಪೋಟ ಮಾಡೋ ಉದ್ದೇಶ ಸ್ಪಷ್ಟವಾಗಿದೆ. ಅವನು ಹತ್ತು ಹಲವು ಹೆಸರು ಬದಲಾವಣೆ ಮಾಡಿದ್ದ. ಹಿಂದೆ 2-3 ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅವನು ಭಯೋತ್ಪಾದಕ ಸಂಪರ್ಕ ಇರೋದು ಸಾಬೀತಾಗಿದೆ. ಭಯೋತ್ಪಾದಕರ ಜೊತೆ ಲಿಂಕ್ ಇರೋದು ಸ್ಪಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷರು ಆಕಸ್ಮಿಕ, ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕಲು ಹೀಗೆ ಮಾಡಿದ್ದಾರೆ ಅನ್ನೋದು ಸರಿಯಲ್ಲ. ಇದು ಅವರಿಗೆ ಶೋಭೆ ತರಲ್ಲ. ಇದು ಕಾಂಗ್ರೆಸ್‌ನ ನೀತಿ ಆಗಿದೆ. ಭಯೋತ್ಪಾದಕ ಪ್ರಕರಣಗಳನ್ನು ಕ್ಷುಲ್ಲಕವಾಗಿ ನೋಡೋದು, ಅದಕ್ಕೆ ಬೆಂಬಲ ಕೊಡೋದು ಕಾಂಗ್ರೆಸ್ ಪ್ರವೃತ್ತಿ. ಚುನಾವಣೆಯ ತುಷ್ಠೀಕರಣ ತಂತ್ರ ಇದು. ಹೀಗೆ ಮಾತನಾಡಿದರೆ ಅವರಿಗೆ ಅಲ್ಪಸಂಖ್ಯಾತರ ಮತ ಬರುತ್ತೆ ಅನ್ನೋ ಹಳೆ ತಂತ್ರ ಇದು. ಅದನ್ನ ಬಳಕೆ ಮಾಡಿದ್ದಾರೆ. ಆದರೆ ಜನ ಜಾಗೃತರಾಗಿದ್ದಾರೆ, ಇದನ್ನ ನಂಬೋದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ದೇಶದ ನೈತಿಕತೆ ಕಡಿಮೆ ಮಾಡೋದು, ಪೊಲೀಸರ ನೈತಿಕತೆ ಕಡಿಮೆ ಮಾಡೋದು, ಹೀಗೆ ಮಾತಾಡೋದು ದೇಶಭಕ್ತನ ಕೆಲಸ ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ನಿಲುವು ಸ್ಪಷ್ಟವಾಗಿ ಹೇಳಲಿ. ಜನರು ಅವರ ಬಗ್ಗೆ ತೀರ್ಮಾನ ಮಾಡ್ತಾರೆ. ಒಂದು ಸಮುದಾಯವನ್ನ ಒಲೈಕೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಾಕ್ಷಿ ಸಮೇತ ಸಿಕ್ಕಾಗ ತನಿಖೆಯನ್ನ ಪ್ರಶ್ನೆ ಮಾಡೋದು, ಭಯೋತ್ಪಾದಕ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಹಾಗೆ ಆಗುತ್ತೆ. ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವು ಹೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ
Live Tv
[brid partner=56869869 player=32851 video=960834 autoplay=true]
ವಿವಾದ ಆದ ಕೂಡಲೇ ಡಿಕೆಶಿ ಪರ ಬ್ಯಾಟಿಂಗ್ ಮಾಡಬೇಕಿದ್ದ ಕಾಂಗ್ರೆಸ್ ನಾಯಕರು (Congress Leader) ಸೈಲೆಂಟ್ ಆಗಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್‌ನಲ್ಲೂ ಉತ್ತರಿಸಿಲ್ಲ. ಜಮೀರ್ ಅಹಮದ್ ಖಾನ್ ನೋ ಕಾಮೆಂಟ್ಸ್ ಎಂದು ಸೈಲೆಂಟ್ ಆಗಿದ್ದಾರೆ. ಡಿಕೆಶಿ ಬಣದ ಸ್ನೇಹಿತರಂತೂ ಏನೂ ಮಾತನಾಡದೇ ಸುಮ್ಮನಿದ್ದಾರೆ. ಇದನ್ನೂ ಓದಿ: ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ʼನಮ್ಮ ಬ್ರದರ್ಸ್ʼ ಎನ್ನಬೇಕಿತ್ತೇ – ಬಿಜೆಪಿ
ಡಿಕೆಶಿ ಏಕಾಂಗಿ ಆಗಿದ್ದೇಕೆ?
ಚುನಾವಣೆ (Election) ಹತ್ತಿರ ಇರೋದ್ರಿಂದ ಉಗ್ರ ಶಾರಿಕ್ ವಿಚಾರದಲ್ಲಿ ಡಿಕೆಶಿ ಪರ ಮಾತನಾಡಿದ್ರೆ ನಮಗೆ ಡ್ಯಾಮೇಜ್ ಆಗುತ್ತೆ ಎಂಬ ಆತಂಕ ಶುರುವಾಗಿದೆ. ಅಲ್ಪಸಂಖ್ಯಾತ ಪರ ಇದ್ದಾರೆ ಎಂಬ ಹಣೆಪಟ್ಟಿ ಸಿಗಬಹುದು ಎಂಬ ಭಯ ಕಾಡುತ್ತಿದೆ. ಆದ್ರೆ ಸಿದ್ದರಾಮಯ್ಯ ಬಣಕ್ಕೆ ಡಿಕೆಶಿ ಇಕ್ಕಟ್ಟಿಗೆ ಸಿಲುಕೋದು ಕೊಂಚ ಸಮಾಧಾನವೇ ತರಿಸಿದೆ. ಹೀಗಾಗಿ ಅವರ ವಿವಾದ ಅವರಿಗೆ ಇರಲಿ ಅಂತ ಸುಮ್ಮನಾಗಿದೆ.
ಡಿಕೆಶಿ ಪರ ಮಾತಾಡಿದ್ರೆ ಕ್ಷೇತ್ರದಲ್ಲಿ ನಮಗೂ ಡ್ಯಾಮೇಜ್ ಆಗಬಹುದು ಎಂಬ ಆತಂಕವಾಗಿದೆ. ಡಿಕೆಶಿ ಹೇಳಿಕೆ ರಾಷ್ಟ್ರಮಟ್ಟದ ವಿವಾದವಾಗಿದ್ದರಿಂದ ಆ ವಿಷಯದಲ್ಲಿ ತಲೆ ಹಾಕೋದು ಬೇಡವೆಂದು ನಾಯಕರು ತಟಸ್ಥತೆ ಕಾಯ್ದುಕೊಂಡಿರುವುದಾಗಿ ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ
ಡಿಕೆಶಿ ಹೇಳಿದ್ದೇನು?
ನಿನ್ನೆ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‌ನನ್ನು ಟೆರರಿಸ್ಟ್ ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ? ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ಆಟ್ಯಾಕ್ (Mumbai Attack) ಅಥವಾ ಪುಲ್ವಾಮಾ (Polwama), ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಅಂದುಕೊಂಡು ವೋಟರ್ ಐಡಿ ಹಗರಣವನ್ನು (Voter Id Scam) ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು (ADGP) ಅಷ್ಟು ಸ್ಪೀಡ್ ಆಗಿ ಹೇಗೆ ಹೇಳಿದರು ಎಂದು ಪ್ರಶ್ನಿಸಿದ್ದರು.
ಬೆಂಗಳೂರಿನ ವೋಟರ್ ಐಡಿ ಹಗರಣ (Voter ID Scam) ವಿಷಯವನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಆಟ ಆಡುತ್ತಿದೆ. ಬಿಜೆಪಿ ಸರ್ಕಾರದ ಕೊನೆ ದಿನಗಳು ಬಂದಿದೆ ಇನ್ನೇನು 100 ದಿನ ಇದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡುತ್ತೀರಿ. ಶಿವಮೊಗ್ಗ, ಮಂಗಳೂರು, ಉಡುಪಿ ಕಡೆ ಯಾಕೆ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕಮಲದ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಯಾಕೆ ಆ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ? ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಕೆಶಿ ಸರ್ಕಾರಕ್ಕೆ ಸವಾಲು ಎಸೆದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಸ್ಫೋಟ (Cooker Blast) ಪ್ರಕರಣದ ಆರೋಪಿ ಶಾರೀಕ್‌ನನ್ನು (Shariq) ಟೆರರಿಸ್ಟ್ (Terrorist) ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ದಾಳಿ ಅಥವಾ ಪುಲ್ವಾಮಾ, ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಎಂದುಕೊಂಡು ವೋಟರ್ ಐಡಿ ಹಗರಣವನ್ನು ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟು ಸ್ಪೀಡ್ ಆಗಿ ಹೇಗೆ ಟ್ವೀಟ್ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ವೋಟರ್ ಐಡಿ ಹಗರಣದ ವಿಷಯನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಸರ್ಕಾರ ಆಟ ಆಡುತ್ತಿದೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ
ಬಿಜೆಪಿ ಸರ್ಕಾರದ ಕೊನೆ ದಿನಗಳು ಬಂದಿದೆ. ಇನ್ನೇನು 100 ದಿನ ಇದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡುತ್ತೀರಿ. ಶಿವಮೊಗ್ಗ, ಮಂಗಳೂರು, ಉಡುಪಿ ಕಡೆ ಯಾಕೆ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕಮಲದ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಯಾಕೆ ಆ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ? ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಕೆಶಿ ಸರ್ಕಾರಕ್ಕೆ ಸವಾಲು ಎಸೆದರು. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್ ಸಮೀಕ್ಷೆ ರಿಸಲ್ಟ್ ಔಟ್
Live Tv
[brid partner=56869869 player=32851 video=960834 autoplay=true]