Tag: Sharing

  • ಉಚಿತ ಮಾಸ್ಕ್ ಹಂಚಿ ಮೆಚ್ಚುಗೆಗೆ ಪಾತ್ರರಾದ ದಂಪತಿ

    ಉಚಿತ ಮಾಸ್ಕ್ ಹಂಚಿ ಮೆಚ್ಚುಗೆಗೆ ಪಾತ್ರರಾದ ದಂಪತಿ

    ಚೆನ್ನೈ: ದಂಪತಿ ಬಟ್ಟೆ ಮಾಸ್ಕ್‍ಗಳನ್ನು ಹೊಲಿದು ಅವುಗಳನ್ನು ಉಚಿತವಾಗಿ ಚೆನ್ನೈನಲ್ಲಿ ಹಂಚುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಚಂದಿರಾ ಮತ್ತು ಕರುಣಕರನ್ ಇಬ್ಬರು ಸಾಮಾಜಿಕ ಕಳಕಳಿಯಿಂದ ಉತ್ತಮ ಕೆಲಸಕ್ಕೆ ಮುಂದಾಗಿದ್ದಾರೆ. ಚಂದಿರಾ ಬಟ್ಟೆಹೊಲೆಯುವ ಕಂಪನಿಯನ್ನು ಕೆಲಸಮಾಡುತ್ತರೆ. ತನ್ನ ಖಾಲಿ ಸಮಯದಲ್ಲಿ ಅಲ್ಲಿ ಉಪಯೋಗಿಸಿ ಬಿದ್ದಿರುವ ಸಣ್ಣ ಸಣ್ಣ ಬಟ್ಟೆ ತುಂಡುಗಳನ್ನು ಬಳಸಿ ಮಾಸ್ಕ್ ಹೊಲಿಯಲು ಪ್ರಾರಂಭಿಸಿದೆ. ನನ್ನ ಸ್ವಂತ ಹಣದಿಂದ ಇಲಾಸ್ಟಿಕ್ ಖರೀದಿಸುತ್ತೇನೆ.

    ಮಾಸ್ಕ್ ಹೊಲಿಯಲು ಪ್ರಾರಂಭಿಸಿದ ಮೇಲೆ ಮೊದಲಿಗೆ ನನ್ನ ಕುಟುಂಬ ಹಾಗೂ ನೆರೆ ಹೊರೆಯವರಿಗೆ ಕೊಟ್ಟಿದ್ದೇನು. ಮಾಸ್ಕ್‍ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತ್ತು. ಆಗ ನಾನು ನನ್ನ ಪತಿ ಸಹಾಯವನ್ನು ಪಡೆದುಕೊಂಡೆ. ನನ್ನ ಪತಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಆಗ ನನ್ನ ಮಾಸ್ಕ್‍ಗಳು ಅವರ ಮೂಲಕವಾಗಿ ಹೆಚ್ಚು ಜನರನ್ನು ತಲುಪಿದವು.

    ನಾನು ಮಾಸ್ಕ್ ತಯಾರಿಸಲು ಆರಿಸಿಕೊಳ್ಳುವ ಬಟ್ಟೆ ಮೆಟೀರಿಯಲ್ 100 ರಷ್ಟು ಹತ್ತಿಯದ್ದಾಗಿದೆ. ಪಾಲಿಸ್ಟರ್ ನಂತಹ ಬಟ್ಟೆಗಳು ಉಸಿರಾಡಲು ಕಷ್ಟವಾಗುತ್ತದೆ. ಅನೇಕರು ನನ್ನನ್ನು ಸಂಪರ್ಕಿಸಿ ಮಾಸ್ಕ್ ಮಾಡಿಕೊಡಲು ಹೇಳಿದ್ದಾರೆ ಎಂದು ಚಂದಿರ ಹೇಳಿದ್ದಾರೆ.

    ನಾವು ಸರಿಸುಮಾರು 500ಕ್ಕೂ ಹೆಚ್ಚು ಮಾಸ್ಕ್‍ಗಳನ್ನು ಇಲ್ಲಿಯವರೆಗೆ ಜನರಿಗೆ ನೀಡಿದ್ದೇವೆ. ಯಾರಾದರು ಮಾಸ್ಕ್ ಧರಿಸುವುದು ಮರೆತು ಬಂದರೆ ನನ್ನ ಪತ್ನಿ ಹೊಲೆದಿರುವ ಮಾಸ್ಕ್ ಎಂದು ಹೇಳಿ ಕೊಡುತ್ತೇನೆ ಎಂದು ಚಂದಿರಾ ಪತಿ ಹೇಳಿದ್ದಾರೆ.

  • ವ್ಯಾಕ್ಸಿನ್ ಭಯ ಬೇಡ, 1,38,656 ಜನರಿಗೆ ಲಸಿಕೆ ನೀಡಲಾಗಿದೆ: ಸುಧಾಕರ್

    ವ್ಯಾಕ್ಸಿನ್ ಭಯ ಬೇಡ, 1,38,656 ಜನರಿಗೆ ಲಸಿಕೆ ನೀಡಲಾಗಿದೆ: ಸುಧಾಕರ್

    ಬೆಂಗಳೂರು: ಕಳೆದ 5 ದಿನದಿಂದ ಕೊರೊನಾ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 1,38,656 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

    ಕೊರೊನಾ ಲಸಿಕೆ ನೀಡಿರುವ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆಯನ್ನು 1,36,882, ಜನರಿಗೆ ನೀಡಲಾಗಿದೆ. ಹಾಗೂ ಕೋವ್ಯಾಕ್ಸಿನ್ 1774 ಜನರಿಗೆ ನೀಡಲಾಗಿದೆ. ಇದರಲ್ಲಿ ಶೇ.2 ರಿಂದ 3.5ಜನರಿಗೆ ಸ್ವಲ್ಪ ಅಡ್ಡ ಪರಿಣಾಮ ಆಗಿದೆ. ಅರ್ಧ ದಿನದಲ್ಲಿ ಅದು ಸಹ ನಿವಾರಣೆಯಾಗಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಲಸಿಕೆ ಪಡೆದವರಲ್ಲಿ ಯಾರು ಕೂಡ ಮರಣ ಹೊಂದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆಯಲು ನೊಂದಣಿಯಾಗಿರುವವರು ಸಂಖ್ಯೆ 8,47,908. ಕೊವ್ಯಾಕ್ಸಿನ್ 1,46,240 ಡೋಸ್ ಇಂದು ರಾಜ್ಯಕ್ಕೆ ಬರಲಿದೆ. ಲಸಿಕೆ ಹಾಕಲು 909 ಸೈಟ್ ಗುರುತಿಸಲಾಗಿದೆ. ಇಂದು ಕೂಡ ಲಸಿಕೆ ಕೊಡಲಾಗುತ್ತಿದೆ ಎಂದಿದ್ದಾರೆ.

    ಲಸಿಕೆಗೆ ಹೆದರಬೇಡಿ, ಕೋವಿಡ್‍ಗೆ ಹೆದರಬೇಕು. ತಪ್ಪು ಮಾಹಿತಿಗೆ ಕಿವಿಗೊಡಬೇಡಿ. ವ್ಯಾಕ್ಸಿನ್ ಗೆ ಭಯ ಬೀಳಬೇಡಿ, ತಾವೆಲ್ಲ ಲಸಿಕೆ ಪಡೆಯಿರಿ. ಎರಡನೇ ಅಲೆ ಬರುವ ಮುನ್ನವೇ ಸುರಕ್ಷಿತವಾಗಿರಿ. ಎರಡನೇ ಹಂತದ ಲಸಿಕೆ ಕೂಡ ಆದಷ್ಟು ಬೇಗ ರಾಜ್ಯಕ್ಕೆ ಬರಲಿದೆ. ಹೀಗಾಗಿ ದೊಡ್ಡ ಸಿದ್ಧತೆಗಳು ಆಗಬೇಕಿದೆ. ಎರಡು ಕೋಟಿ ಜನರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

  • ಉಚಿತವಾಗಿ ಹಣ ಹಂಚಿಕೆ- ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ

    ಉಚಿತವಾಗಿ ಹಣ ಹಂಚಿಕೆ- ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಅಗ್ರಹಾರದಲ್ಲಿ ನಿವೃತ್ತ ಕೆಇಬಿ ಅಧಿಕಾರಿ ಜಾಫರ್ ಖಾನ್ ಹಾಗೂ ಅವರ ಮಗ ಮೌಲಾ ಇಂದು ಜನರಿಗೆ ಉಚಿತವಾಗಿ ಹಣ ಹಂಚಿದ್ದಾರೆ.

    ತಮ್ಮ ಏರಿಯಾದಲ್ಲಿನ ಬಡವರಿಗೆ ತಲಾ 100-200 ರೂಪಾಯಿ ವಿತರಿಸಿದ್ದಾರೆ. ದುಡ್ಡು ಕೊಡುತ್ತಿದ್ದಾರೆ ಎಂದು ತಿಳಿದ ಜನ ತಂಡೋಪತಂಡವಾಗಿ ಜಮಾಯಿಸಿ ಹಣ ಪಡೆದುಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಮರೆತು ನಾ ಮುಂದು ತಾ ಮುಂದು ಅಂತ ಹಣ ಪಡೆದುಕೊಳ್ಳೋಕೆ ಮುಗಿಬಿದ್ದಿದ್ದಾರೆ.

    ರಂಜಾನ್ ಹಬ್ಬದ ಅಂಗವಾಗಿ ಪ್ರತಿ ವರ್ಷ ಇದೇ ರೀತಿ ಜಾಫರ್ ಖಾನ್ ಹಣ ಹಂಚಿಕೆ ಮಾಡುತ್ತಿದ್ದರಂತೆ. ಈ ಬಾರಿ ಕೊರೊನಾ ಎಫೆಕ್ಟ್ ಹಿನ್ನೆಲೆ ಮೊದಲೇ ಹಣ ಹಂಚಿಕೆ ಮಾಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಇಲ್ಲದೆ ಜನ ಮುಗಿಬಿದ್ದಿರುವ ಮಾಹಿತಿ ಅರಿತ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಜನರನ್ನು ಚದುರಿಸಿದ್ದಾರೆ. ತದನಂತರ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡವರಿಗೆ ಹಣ ಹಂಚಿಕೆ ಮಾಡಿಸಿದ್ದಾರೆ. ಸರಿ ಸುಮಾರು 40000 ಹಣ ಹಂಚಿಕೆ ಮಾಡಿರುವುದಾಗಿ ಜಾಫರ್ ಖಾನ್ ಹೇಳಿದ್ದಾರೆ.

  • ಕ್ಯಾಬ್‍ಗಳಲ್ಲಿ ಇನ್ಮುಂದೆ ಶೇರಿಂಗ್ ಡೌಟು- ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

    ಕ್ಯಾಬ್‍ಗಳಲ್ಲಿ ಇನ್ಮುಂದೆ ಶೇರಿಂಗ್ ಡೌಟು- ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

    ಬೆಂಗಳೂರು: ಓಲಾ, ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ಡೌಟಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಸೀಟ್ ಶೇರಿಂಗ್ ಸೌಲಭ್ಯವನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.

    ಓಲಾ ಮತ್ತು ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ನಿಯಮಬಾಹಿರವಾಗಿದೆ. ಏನೇ ಹೊಸ ಸೌಲಭ್ಯ ನೀಡುವುದಾದರೂ ಕಾನೂನು ವ್ಯಾಪ್ತಿಯಲ್ಲೇ ನೀಡಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ. ಅಲ್ಲದೆ ಈ ಸೌಲಭ್ಯದ ವಿರುದ್ಧ ಓಲಾ ಮತ್ತು ಊಬರ್ ಕ್ಯಾಬ್ ಡ್ರೈವರ್ ಗಳು ಕೂಡ ದೂರು ನೀಡಿದ್ದರು.

    ಶೇರಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ ತೊಂದರೆ ಸೇರಿದಂತೆ ಅನೇಕು ಅನಾನುಕೂಲತೆ ಆಗಿದ್ದರಿಂದ ಶೇರಿಂಗ್ ಸೌಲಭ್ಯವನ್ನು ಬ್ಯಾನ್ ಮಾಡಲಾಗಿದೆ. 2017ರಲ್ಲಿ ಶೇರಿಂಗ್ ಸೌಲಭ್ಯ ನಿಷೇಧಕ್ಕೆ ಸಾರಿಗೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಶೇರಿಂಗ್ ಮಾಡಿಕೊಂಡು ಓಡಾಡುವುದರ ಬಗ್ಗೆ ಕಾರು ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.

    ಒಂದು ವೇಳೆ ಬ್ಯಾನ್ ಬಳಿಕವೂ ಕಂಪನಿಗಳು ಈ ಸೌಲಭ್ಯ ನಿಲ್ಲಿಸದಿದ್ದರೆ ಅವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸುತ್ತೇವೆ ಎಂದು ಕಾರು ಚಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ.

  • ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಯಾದಗಿರಿ: ನಿರ್ದಿಷ್ಟ ಸೂರಿಲ್ಲದೇ ಊರೂರು ಸುತ್ತಾಡುತ್ತ, ಯಾರಾದ್ದೋ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿ, ಚಾಪೆ ಬುಟ್ಟಿಗಳನ್ನು ಹೆಣೆಯುವ ಮೂಲಕ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ಕೆಲವು ಕುಟುಂಬಗಳು ಜೀವನ ನಡೆಸುತ್ತಿವೆ.

    ಹಂಚಿನಾಳ ಗ್ರಾಮದಲ್ಲಿ ಸುಮಾರು 66 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಮೂಲ ವೃತ್ತಿ ಈಚಲು ಮರದ ಗರಿಗಳಿಂದ ಬುಟ್ಟಿ ಚಾಪೆಗಳನ್ನು ಹೆಣೆಯುವುದು. ಹೀಗಾಗಿ ಅಲೆಮಾರಿ ಜೀವನ ನಡೆಸುತ್ತಿರುವ ಅವರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಾರೆ. ಅಲ್ಲಿ ಅಭ್ಯವಿರುವ ಖಾಲಿ ಜಾಗದಲ್ಲಿ ಒಂದಷ್ಟು ದಿನ ಶೇಡ್ ಹಾಕಿಕೊಂಡು ಚಾಪೆ, ಬುಟ್ಟಿ ತಯಾರಿಸುತ್ತಾರೆ.

    ಅಲೆಮಾರಿ ಜನಾಂಗದವರು ಸತತ ಮೂರು ವರ್ಷಗಳಿಂದ ಒಂದು ನಿರ್ದಿಷ್ಟ ಸೂರು ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಯಾದಗಿರಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿನಾಳ ಗ್ರಾಮದಲ್ಲಿ ಸರ್ವೆ ನಂಬರ್ 59ರಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಈಗ ಅಧಿಕಾರಿಗಳು ಕಾಯ್ದಿರಿಸಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

     

    ಹಂಚಿನಾಳ ಗ್ರಾಮದ ಅಲೆಮಾರಿ ಜನಾಂಗದವರು ನಿರ್ದಿಷ್ಟ ಸೂರಿನಲ್ಲಿ ವಾಸ ಮಾಡಲು ಹಪಪಿಸುತ್ತಿದ್ದಾರೆ. ನಿವೇಶನ ನಿರ್ಮಿಸಿ, ಹಕ್ಕು ಪತ್ರ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸರ್ಕರಕ್ಕೆ ಮನವಿ ಮಾಡಿದರು.

    https://youtu.be/nuAI9tfSQSQ

  • ಕೋಲಾರ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ-ವಿಡಿಯೋ ನೋಡಿ

    ಕೋಲಾರ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ-ವಿಡಿಯೋ ನೋಡಿ

    ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಸಮಾವೇಶದ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಕೈ ನಾಯಕರು ಹಣ ಹಂಚಿಕೆ ಮಾಡಿದ್ದಾರೆ.

    ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರಿಗೆ ತಲಾ 500 ರೂಪಾಯಿ ಹಣ ಹಂಚಿಕೆ ಮಾಡುತ್ತಿರುವ ಸ್ಥಳೀಯ ಕಾಂಗ್ರೆಸ್ ನಾಯಕರ ವಿಡಿಯೋ ಸೆರೆಯಾಗಿದೆ.

    ಸಿಎಂ ಸಿದ್ದರಾಮಯ್ಯ ಸರ್ಕಾರ ಪರ ಸಾಧನೆಗಳನ್ನು ಜನರಿಗೆ ತಿಳಿಸಲು ಸಾಧನಾ ಯಾತ್ರೆ ಕೈಗೊಂಡಿದ್ದಾರೆ. ಪಕ್ಷದ ಪರವಾಗಿ ಕಾಂಗ್ರೆಸ್ ಸೋತಿರುವ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ.

    ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ರಾಜ್ಯ ನೀರಾವರಿ ಯೋಜನೆ ನಿಜವಾಗಲೂ ಸಮಸ್ಯೆ ಬಗೆಹರಿಸಿದರೆ ನಮ್ಮದು ಏನು ಅಭ್ಯಂತರವಿಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಮಹದಾಯಿ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಹದಾಯಿ ವಿಚಾರದಲ್ಲಿ ಅನೇಕ ಹೋರಾಟ, ಬಂದ್ ಗಳನ್ನು ಮಾಡಿದರೂ ಮಧ್ಯಪ್ರವೇಶಿಸದೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಟಕವಾಡುತ್ತಿದೆ ಎಂದು ಆರೋಪಿಸಿದರು.

    ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ: ಮುಂದಿನ ಕಾರ್ಯಕ್ರಮಗಳಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಪಕ್ಷದಲ್ಲಿ ನನ್ನನ್ನು ಯಾರು ಕಡೆಗಣಿಸುತ್ತಿಲ್ಲ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

    ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ: ಎರಡನೇ ಹಂತದ ಪ್ರಚಾರವಾಗಿ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆ ಮುಂದಿಟ್ಟುಕೊಂಡು 2018 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆ ಇಲ್ಲ: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಇಂಧನ ಸಚಿವ ಡಿಕೆ ಶಿವಕುಮಾರ್, ಪಕ್ಷದಲ್ಲಿ ವ್ಯಕ್ತಿ ಪೂಜೆ ನಡೆಯುವುದಿಲ್ಲ, ಪಕ್ಷ ಪೂಜೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯವಾಗಿ ಚುನಾವಣೆ ಎದುರಿಸಿ ತನ್ನ ಕಾಲ ಮೇಲೆ ನಿಲ್ಲಲಿದೆ. ರಾಮನಗರದಲ್ಲೂ ಸಹ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇನ್ನು ಗುಜರಾತ್ ರಾಜ್ಯದಲ್ಲಿ ಬಿಜೆಪಿ ಪಕ್ಷ ಎಷ್ಟೇ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೂ ಸಹ ಕಾಂಗ್ರೆಸ್ ಪಕ್ಷ ಸುಮಾರು 80 ಸ್ಥಾನಗಳನ್ನು ಗೆದ್ದಿರುವುದು ಸಂತೋಷದ ವಿಷಯವಾಗಿದ್ದು, ಅಲ್ಲಿನ ಮತದಾರರಿಗೆ ಕಾಂಗ್ರೆಸ್ ಪಕ್ಷ ಚಿರಋಣಿಯಾಗಿದೆ ಎಂದರು.

    https://www.youtube.com/watch?v=R7u7aIQlbTE&feature=youtu.be