Tag: Share Market

  • ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    – ಎರಡು ಕಂಪನಿಗಳಾಗಿ ಟಾಟಾ ಮೋಟಾರ್ಸ್‌ ವಿಭಜನೆ

    ಮುಂಬೈ: ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ವಿಭಾಗಗಳನ್ನು ಪ್ರತ್ಯೇಕಿಸಿದೆ. ಮಂಗಳವಾರ ಅಧಿಕೃತವಾಗಿ ವಿಭಜನೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್‌ ಷೇರಿನ ಮೌಲ್ಯ ಶೇ. 40 ರಷ್ಟು ಇಳಿಕೆಯಾಗಿದೆ.

    ಇನ್ನು ಮುಂದೆ  ಪ್ರಯಾಣಿಕ ವಾಹನ ವಿಭಾಗ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (TMPV) ಆಗಿ ಬದಲಾದರೆ ವಾಣಿಜ್ಯ ವಿಭಾಗ ಟಾಟಾ ಮೋಟಾರ್ಸ್‌ ಕಮರ್ಷಿಯಲ್ ವೆಹಿಕಲ್ಸ್ (TMLCV) ಆಗಿ ಕಾರ್ಯನಿರ್ವಹಿಸಲಿದೆ.

    ಇಂದಿನಿಂದ ಮಾತೃ ಕಂಪನಿಯು ವಾಣಿಜ್ಯ ವಾಹನಗಳ ವಿಭಾಗವನ್ನು ಪ್ರತಿಬಿಂಬಿಸದೇ ವ್ಯಾಪಾರ ಮಾಡಲಿದೆ. TMPV ಪ್ರಯಾಣಿಕ ವಾಹನಗಳು, ವಿದ್ಯುತ್ ವಾಹನಗಳು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ವಾಹನಗಳ ಕಾರ್ಯಾಚರಣೆ ನೋಡಿಕೊಳ್ಳಲಿದೆ.  ಇದನ್ನೂ ಓದಿ:  ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

     

    ತಾತ್ಕಾಲಿಕ ಕುಸಿತ
    ಷೇರಿನ ಮೌಲ್ಯ ನಿಜವಾಗಿ ಕುಸಿದಿಲ್ಲ. ವ್ಯವಹಾರ ವಿಭಜನೆಯಿಂದಾದ ಮೌಲ್ಯದ ಹೊಂದಾಣಿಕೆಯಿಂದ ಆಗಿರುವ ಕುಸಿತ ಇದಾಗಿದೆ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಒಂದು ಷೇರು 660.75 ರೂ.ನಲ್ಲಿ ದಿನದ ವ್ಯವಹಾರ ಮಗಿಸಿತ್ತು. ಇಂದು ಸುಮಾರು ಶೇ. 40.22 ರಷ್ಟು(265.75 ರೂ.) ಕುಸಿತಗೊಂಡು ದಿನದ ಕೊನೆಯಲ್ಲಿ 395 ರೂ. ನಲ್ಲಿ ವ್ಯವಹಾರ ಮುಗಿಸಿದೆ.

    ಟಾಟಾ ಮೋಟಾರ್ಸ್‌ ಕಂಪನಿಯು ಅಕ್ಟೋಬರ್ 14 ಅನ್ನು ವಿಭಜನೆಯ ದಿನಾಂಕವನ್ನಾಗಿ ನಿಗದಿಪಡಿಸಿತ್ತು. ಇದರ ಅನ್ವಯ ಈ ದಿನಾಂಕದಂದು ಟಾಟಾ ಮೋಟಾರ್ಸ್ ಷೇರುಗಳನ್ನು ಹೊಂದಿದ್ದ ಷೇರುದಾರರು ವಿಭಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ ಟಾಟಾ ಮೋಟಾರ್ಸ್ ಷೇರಿಗೆ ಬದಲಾಗಿ ಹೊಸದಾಗಿ ರಚನೆಯಾದ ವಾಣಿಜ್ಯ ವಾಹನ ಕಂಪನಿಯಾದ TMLCV ಒಂದು ಷೇರನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    TMLCV ಕಂಪನಿಯ ಷೇರುಗಳನ್ನು 30–45 ದಿನಗಳಲ್ಲಿ ಡಿಮ್ಯಾಟ್ ಖಾತೆಗಳಿಗೆ ಜಮೆಯಾಗಲಿದೆ. ಸೆಬಿಯ ಎಲ್ಲಾ ಅನುಮೋದನೆಗಳು ಪೂರ್ಣಗೊಂಡ ನಂತರ ಹೊಸ ಕಂಪನಿ ರಾಷ್ಟ್ರೀಯ ಷೇರುಪೇಟೆ(NSE) ಮತ್ತು ಬಾಂಬೆ ಷೇರುಪೇಟೆಯಲ್ಲಿ(BSE) ಪ್ರತ್ಯೇಕವಾಗಿ ಪಟ್ಟಿಯಾಗಲಿದೆ.

  • ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಸೆಬಿಯಿಂದ ಕ್ಲೀನ್‌ಚಿಟ್‌| ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿಗೆ ಏರಿಕೆ

    ಮುಂಬೈ: ಹಿಂಡನ್‌ಬರ್ಗ್‌ ಸಂಶೋಧನಾ ವರದಿಯಲ್ಲಿನ (Hindenburg Research Report) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಕ್ಲೀನ್‌ ಚಿಟ್‌ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ (Adani Group) ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.

    ಇಂದು ಒಂದೇ ದಿನ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 66 ಸಾವಿರ ಕೋಟಿ ರೂ. ಏರಿಕೆಯಾಗಿದ್ದು ಈಗ ಒಟ್ಟು ಕಂಪನಿಗಳ  ಮೌಲ್ಯ 13.96 ಲಕ್ಷ ಕೋಟಿ ರೂ.ಗೆ ತಲುಪಿದೆ.

    ಯಾವುದು ಎಷ್ಟು ಏರಿಕೆ?
    ಪವರ್‌ – 13.42% (84.75ರೂ.), ಟೋಟಲ್‌ ಗ್ಯಾಸ್‌ – 7.55% (45.85 ರೂ.), ಅದಾನಿ ಎಂಟರ್‌ಪ್ರೈಸಸ್‌ -5.25% (126 ರೂ.), ಗ್ರೀನ್‌ ಎನರ್ಜಿ -5.48% (53.60 ರೂ.), ಅದಾನಿ ಎನರ್ಜಿ ಸಲ್ಯೂಷನ್ಸ್‌ – 4.94% (41.35 ರೂ.), ಅದಾನಿ ಪೋರ್ಟ್ಸ್‌- 1.15% (16.20 ರೂ.) ಭಾರೀ ಏರಿಕೆ ಕಂಡಿದೆ. ಇದರ ಜೊತೆ ಎಸಿಸಿ, ಅಂಬುಜಾ ಸಿಮೆಂಟ್‌ಗಳ ಷೇರುಗಳ ಮೌಲ್ಯವೂ ಏರಿದೆ.

    ಹಿಂಡನ್‌ಬರ್ಗ್‌ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್‌ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ. ಇದನ್ನೂ ಓದಿ:  ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸುದೀರ್ಘ ಅವಧಿಗಳ ಕಾಲ ತನಿಖೆ ನಡೆಸಿದ ಸೆಬಿ ಅದಾನಿ ಗ್ರೂಪ್‌ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ, ಆರೋಪವನ್ನು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷಿಗಳು ಕಂಡುಬಂದಿಲ್ಲ ಎಂದು ತಿಳಿಸಿತ್ತು.

    2022 ರ ಸೆಪ್ಟೆಂಬರ್‌ನಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ರೂ. ಇತ್ತು. 2023 ರ ಜನವರಿಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಹೊಸ ಷೇರು ಬಿಡುಗಡೆ ಅಥವಾ ಎಫ್‌ಪಿಒ ಬಿಡುಗಡೆ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ತನ್ನ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು.

    ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ನೈಜ ಬೆಲೆಗಿಂತ ಕೃತಕ ಬೆಲೆಯಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಇದು ಅಕ್ರಮ ಎಂದು ಹಿಂಡನ್‌ಬರ್ಗ್‌ ಆರೋಪಿಸಿತ್ತು. ಈ ವರದಿ ಪ್ರಕಟವಾದ ನಂತರ ಅದಾನಿ ಸಂಪತ್ತು ಕರಗಲು ಆರಂಭವಾಗಿತ್ತು. ವರದಿ ಪ್ರಕಟಿಸಿದ ಬಳಿಕ 2023ರ ಫೆಬ್ರವರಿಯಲ್ಲಿ ಇದು 7 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ (Gautam Adani) ಅವರು 32ನೇ ಸ್ಥಾನಕ್ಕೆ ಜಾರಿದ್ದರು.

    ಹಿಂಡನ್‌ಬರ್ಗ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ತನಿಖೆ ನಡೆಸಿ ಅದಾನಿ ಕಂಪನಿ ಕ್ಲೀನ್‌ ಚಿಟ್‌ ನೀಡಿತ್ತು. ಮಾರಿಷಸ್‌ ಸರ್ಕಾರವೂ ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಮ್ಮ ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ನಮ್ಮ ಷರತ್ತನ್ನು ಒಪ್ಪಿದ ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಹೇಳಿತ್ತು.

  • 1990ರಲ್ಲಿ ಖರೀದಿಸಿದ 1 ಲಕ್ಷ ರೂ. JSW ಷೇರುಗಳ ಮೌಲ್ಯ ಈಗ 80 ಕೋಟಿ – ತಂದೆಯಿಂದ ಕೋಟ್ಯಧಿಪತಿಯಾದ ಪುತ್ರ

    1990ರಲ್ಲಿ ಖರೀದಿಸಿದ 1 ಲಕ್ಷ ರೂ. JSW ಷೇರುಗಳ ಮೌಲ್ಯ ಈಗ 80 ಕೋಟಿ – ತಂದೆಯಿಂದ ಕೋಟ್ಯಧಿಪತಿಯಾದ ಪುತ್ರ

    ನವದೆಹಲಿ: ಅದೃಷ್ಟ ಯಾವಾಗ ಬೇಕಾದರೂ ಸಿಗಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. 30 ವರ್ಷದ ಹಿಂದೆ ಜಿಂದಾಲ್‌ ಸ್ಟೀಲ್‌ (JSW) ಕಂಪನಿಯ ಷೇರು (Share) ದಿಢೀರ್‌ ಪತ್ತೆಯಾಗಿ ಪುತ್ರರೊಬ್ಬರು ಈಗ 80 ಕೋಟಿ ರೂ. ಆಸ್ತಿಯ ಮಾಲೀಕನಾಗಿ ಹೊರಹೊಮ್ಮಿದ್ದಾರೆ.

    1990 ರಲ್ಲಿ ವ್ಯಕ್ತಿಯೊಬ್ಬರು 1 ಲಕ್ಷ ರೂ. ಮೌಲ್ಯದ ಜಿಂದಾಲ್‌ ಕಂಪನಿಯ ಷೇರುಗಳನ್ನು ಖರೀದಿಸಿದ್ದರು. ಷೇರುಗಳ ದಾಖಲೆ ಪತ್ರ ದಿಢೀರ್‌ ಅಗಿ ಪುತ್ರನಿಗೆ ಸಿಕ್ಕಿದೆ. ಈಗ ಈ ಷೇರುಗಳ ಮೌಲ್ಯವನ್ನು ಲೆಕ್ಕ ಹಾಕಿದಾಗ 80 ಕೋಟಿ ರೂ. ಆಗುತ್ತದೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ತಂದೆಯ ಷೇರು ಪತ್ರದ ದಾಖಲೆಗಳನ್ನು ಪುತ್ರ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು ಈಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈಗ ಆ ರೆಡಿಟ್‌ ಬಳಕೆದಾರನಿಗೆ ಜನರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. ಷೇರುಗಳನ್ನು ಮಾರಾಟ ಮಾಡದೇ ದೀರ್ಘಾವಧಿಯವರೆಗೆ ಇಟ್ಟುಕೊಂಡರೆ ಯಾರೂ ಕೂಡ ಕೊಟ್ಯಾಧಿಪತಿಗಳಾಗಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

    1983 ರಲ್ಲಿ ಜಿಂದಾಲ್‌ ಸ್ಟೀಲ್‌ ಕಂಪನಿ ಆರಂಭಗೊಂಡಿದ್ದು 1990 ರ ವೇಳೆಗೆ 1 ಷೇರಿನ ಮೌಲ್ಯ 20 ರೂ.ಗಿಂತಲೂ ಕಡಿಮೆ ಇತ್ತು. ಈಗ ಒಂದು ಷೇರಿನ ಮೌಲ್ಯ 1,006 ರೂ.ಗೆ ಏರಿಕೆಯಾಗಿದ್ದು 2.37ಲಕ್ಷ ಕೋಟಿ ರೂ. ಕಂಪನಿಯಾಗಿ ಹೊರಹೊಮ್ಮಿದೆ.

  • ಏರ್‌ಸ್ಟ್ರೈಕ್‌ಗೆ ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ವ್ಯವಹಾರವೇ ಸ್ಥಗಿತ

    ಏರ್‌ಸ್ಟ್ರೈಕ್‌ಗೆ ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ವ್ಯವಹಾರವೇ ಸ್ಥಗಿತ

    ಇಸ್ಲಾಮಾಬಾದ್‌: ಭಾರತದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಪಾಕಿಸ್ತಾನದ (Pakistan) ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ.

    ಏರ್‌ಸ್ಟ್ರೈಕ್‌ ನಡೆಸಿದ ಸುದ್ದಿ ಮುಂಜಾನೆ ಪ್ರಕಟವಾಗುತ್ತಿದ್ದಂತೆ Pakistan Stock Exchange ಕುಸಿಯುವುದು ನಿಶ್ಚಯವಾಗಿತ್ತು. ವ್ಯವಹಾರ ಆರಂಭಿಸಿದ ಬೆನ್ನಲ್ಲೇ ಕುಸಿಯಲು ಆರಂಭವಾಯಿತು. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಸಾಕ್ಷಿ ಎಲ್ಲಿದೆ ಅಂದವರ ಬಾಯಿಯನ್ನೇ ಬಂದ್‌ ಮಾಡಿದ ಸೇನೆ!

    6,500 ಅಂಶ ಕುಸಿಯುತ್ತಿದ್ದಂತೆ ಪಾಕ್‌ ಹೂಡಿಕೆದಾರರಿಗೆ ಆತಂಕ ಎದುರಾಯಿತು. ಇಂದು ಬೆಳಗ್ಗೆ 1,113, 568 ಅಂಶದೊಂದಿಗೆ ವ್ಯವಹಾರ ಆರಂಭವಾಗಿತ್ತು. ಹೂಡಿಕೆದಾರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ 1,07,007 ಅಂಶಕ್ಕೆ ಕುಸಿಯಿತು. ಮತ್ತಷ್ಟು ಪತನವಾಗುವುದನ್ನು ತಡೆಯಲು ಕೆಲ ಕಾಲ ಷೇರು ಮಾರುಕಟ್ಟೆಯ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಇದನ್ನೂ ಓದಿ: ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ – ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ?

    ಪಾಕಿಸ್ತಾನ ಷೇರು ಮಾರುಕಟ್ಟೆ ಒಂದೇ ದಿನ ಇಷ್ಟೊಂದು ಅಂಶ ಕುಸಿತವಾಗಿದ್ದು ಇದು ಎರಡನೇ ಬಾರಿ. ಕಳೆದ ತಿಂಗಳು ಟ್ರಂಪ್‌ ತೆರಿಗೆ ಸಮರ ಆರಂಭಿಸಿದಾಗ ಒಂದೇ ದಿನ 8,700 ಅಂಶ ಇಳಿಕೆಯಾದಾಗಲೂ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು.

  • ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ

    ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್‌ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ

    ಇಸ್ಲಾಮಾಬಾದ್‌: ಭಾರತ (India) ತನ್ನ ಮೇಲೆ ದಾಳಿ ಮಾಡಲಿದೆ ಎಂದು ಪಾಕ್‌ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಷೇರು ಮಾರುಕಟ್ಟೆಯಲ್ಲಿ (Pakistan Stock Market) ರಕ್ತಪಾತವಾಗಿದೆ.

    ಕರಾಚಿ ಸ್ಟಾಕ್‌ ಎಕ್ಸ್‌ಚೆಂಜ್‌ (KSE) ಇಂದು ಒಂದೇ ದಿನ 3,519 ಅಂಶ ಅಥವಾ 3.06% ಪತನಗೊಂಡು 1,11,353 ರಲ್ಲಿ ವ್ಯವಹಾರ ಮುಗಿಸಿದೆ. ಪಹಲ್ಗಾಮ್‌ ದಾಳಿ ನಡೆದ ದಿನ KSE 1,18,455 ಅಂಶದಲ್ಲಿ ವ್ಯವಹಾರ ನಡೆಸುತ್ತಿತ್ತು. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್‌ ರದ್ದು!

    ಪಹಲ್ಗಾಮ್‌ ದಾಳಿ ನಡೆದ ಒಂದು ವಾರದಲ್ಲಿ ಕೆಎಸ್‌ಇ ಸೂಚ್ಯಂಕ 7,102 ಅಂಕ ಪತನಗೊಂಡಿದೆ. ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್‌!

    ಮಧ್ಯರಾತ್ರಿ 2:30ಕ್ಕೆ ತರಾತುರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ್ದ ಪಾಕ್ ಸಚಿವ ಅತಾವುಲ್ಲಾ ತರಾರ್, ಭಾರತವು ಮುಂದಿನ 24 ರಿಂದ 36 ಗಂಟೆಗಳಲ್ಲಿ ಸೇನಾ ಕಾರ್ಯಾಚರಣೆಗೆ ಮುಂದಾಗಲಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ( Pahalgam Terror Attack) ಪಾಕಿಸ್ತಾನ ಭಾಗಿಯಾಗಿದೆ ಎನ್ನುವುದು ಆಧಾರರಹಿತ, ಕಪೋಲಕಲ್ಪಿತ ಆರೋಪ. ಉಗ್ರ ದಾಳಿಯನ್ನೇ ಮಿಲಿಟರಿ ಕ್ರಮಕ್ಕೆ ನೆಪವಾಗಿ ಬಳಸಲು ಭಾರತ ಉದ್ದೇಶಿಸಿದೆ. ಈ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಇದೆ. ಭಾರತ ಸೇನಾ ಕಾರ್ಯಾಚರಣೆ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾದೀತು ಅಂತ ಭಂಡ ಮಾತುಗಳನ್ನಾಡಿದ್ದ.  ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

  • ಟ್ಯಾರಿಫ್‌ ವಾರ್‌ಗೆ ತಾತ್ಕಾಲಿಕ ಬ್ರೇಕ್‌ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ

    ಟ್ಯಾರಿಫ್‌ ವಾರ್‌ಗೆ ತಾತ್ಕಾಲಿಕ ಬ್ರೇಕ್‌ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ

    – ಸೆನೆಕ್ಸ್‌ನಲ್ಲಿ 1600, ನಿಫ್ಟಿಯಲ್ಲಿ 500 ಪಾಯಿಂಟ್‌ಗಳ ಏರಿಕೆ
    – ಆಟೋ ಸೆಕ್ಟರ್ ಷೇರುಗಳಲ್ಲಿ ಹೆಚ್ಚಿನ ಏರಿಕೆ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರತಿಸುಂಕ ವಾರ್‌ಗೆ ತಾತ್ಕಾಲಿಕ ಬ್ರೇಕ್‌ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share Market) ಚೇತರಿಕೆ ಕಂಡುಬಂದಿದೆ.

    ಇಂದು ಬೆಳಗ್ಗೆ ಭಾರತೀಯ ಷೇರುಪೇಟೆಗಳು ಶೇ. 2 ಕ್ಕಿಂತ ಹೆಚ್ಚು ಏರಿಕೆ ಕಂಡವು. ಸೆನೆಕ್ಸ್‌ನಲ್ಲಿ 1600 ಪಾಯಿಂಟ್, ನಿಫ್ಟಿಯಲ್ಲಿ 500 ಪಾಯಿಂಟ್‌ಗಳ ಏರಿಕೆ ಕಂಡುಬಂದಿದೆ. ಆಟೋ ಸೆಕ್ಟರ್ ಷೇರುಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್‌?

    ಮುಂಬೈ ಷೇರುಪೇಟೆಯ 30 ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,600 ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡರೆ, ನಿಫ್ಟಿ ಮತ್ತೆ 23,000 ಮಟ್ಟವನ್ನು ತಲುಪಿತು. ಆದಾಗ್ಯೂ, ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರಿಯಲಿದೆ ಎಂದು ತಜ್ಞರು ಸೂಚಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಟ್ರಂಪ್ ಆಟೋ ಆಮದಿನ ಮೇಲೆ ಶೇ. 25 ರಷ್ಟು ಸುಂಕ ವಿಧಿಸಿದ್ದರು. ಆಟೋ ಸುಂಕಗಳ ಕುರಿತು ಟ್ರಂಪ್ ಅವರ ಸಂಭಾವ್ಯ ರಾಜಿ ಏಷ್ಯಾದ ಷೇರುಗಳಿಗೂ ಉಸಿರು ನೀಡಿತು. ಇದನ್ನೂ ಓದಿ: ವಕ್ಫ್‌ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್‌ ಹಾಕುತ್ತಿರಲಿಲ್ಲ: ಮೋದಿ

    ಟೋಕಿಯೊ ಮತ್ತು ಸಿಯೋಲ್ ಮಾರುಕಟ್ಟೆಗಳು ಜಪಾನಿನ ವಾಹನ ತಯಾರಕರಾದ ಟೊಯೋಟಾ, ಮಜ್ದಾ ಮತ್ತು ನಿಸ್ಸಾನ್ ಭಾರಿ ಲಾಭವನ್ನು ಗಳಿಸಿವೆ. ತಾಂತ್ರಿಕ ಮತ್ತು ಔಷಧೀಯ ಉತ್ಪನ್ನಗಳ ಆಮದಿನ ಮೇಲೆ ಟ್ರಂಪ್ ಅವರ ಹೊಸ ತೆರಿಗೆಗಳು ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಉಳಿಸಿಕೊಂಡವು. ಆಟೋ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡಿದವು.

  • ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

    ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

    ಮುಂಬೈ: ಅಮೆರಿಕಾದ (America) ಹೊಸ ಟ್ಯಾರಿಫ್ (Tariff) ನೀತಿಯಿಂದ ನಲುಗಿ ಹೋಗಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian Share Market) ಇಂದು ಚೇತರಿಕೆ ಕಂಡು ಬಂದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕಂಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಭರ್ಜರಿಯಾಗಿ ಏರಿಕೆಯಾಗಿದೆ.

    ಬೆಳಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (BSE) 1,100 ಪಾಯಿಂಟ್ಸ್ ಏರಿಕೆಗೊಂಡಿದ್ದು, 74,300ರ ಗಡಿಯನ್ನು ದಾಟಿತು. ನಿಫ್ಟಿ ಸೂಚ್ಯಂಕವು 400 ಪಾಯಿಂಟ್ಸ್ ಹೆಚ್ಚಾಗಿದ್ದು, 22,550ರ ಗಡಿಯನ್ನು ಸಮೀಪಿಸಿತು. ಬಳಿಕ ಕೆಲವು ಪಾಯಿಂಟ್ ಕೆಳಕ್ಕೆ ಟ್ರೇಡ್ ಮಾಡಿತು.ಇದನ್ನೂ ಓದಿ: ಷೇರುಪೇಟೆ ಸ್ಥಿತಿಗೆ ಮೋದಿ ಕಾರಣ: ಕಾಂಗ್ರೆಸ್ ಆರೋಪ

    ಇಂದು ಆರಂಭಿಕ ವಹಿವಾಟಿನಲ್ಲಿ ಬಹುತೇಕ ಎಲ್ಲಾ ವಲಯಗಳು ಗ್ರೀನ್ ಮಾರ್ಕ್‌ನಲ್ಲಿ ವಹಿವಾಟು ನಡೆಸಿವೆ. 2,445 ಷೇರುಗಳು ಏರಿಕೆಗೊಂಡಿದ್ದು, 333 ಷೇರುಗಳು ಕುಸಿತ ಸಾಧಿಸಿವೆ ಮತ್ತು 96 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿ ಮಿಡ್‌ಕ್ಯಾಪ್‌ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ತಲಾ 2.3 ಪರ್ಸೆಂಟ್‌ನಷ್ಟು ಜಿಗಿದಿದ್ದು, ನಿಫ್ಟಿ ರಿಯಾಲ್ಟಿ, ಮೆಟಲ್ ಹಾಗೂ ಐಟಿ ಸೂಚ್ಯಂಕವು ತಲಾ 3 ಪರ್ಸೆಂಟ್ ಹೆಚ್ಚಾಗಿದೆ.

    ಇಂದಿನ ವಹಿವಾಟಿನಲ್ಲಿ ಕೆಲವು ಷೇರುಗಳು ಉತ್ತಮ ಪ್ರದರ್ಶನ ತೋರಿವೆ. ಎನ್‌ಟಿಪಿಸಿ, ಟೈಟನ್, ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ನಿಫ್ಟಿ 50ರಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಈ ಕಂಪನಿಗಳು ತಮ್ಮ ವಲಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೂಡಿಕೆದಾರರ ವಿಶ್ವಾಸವನ್ನು ಗಳಿಸಿವೆ. ವಿಶೇಷವಾಗಿ ಗ್ರಾಹಕ ಉತ್ಪನ್ನಗಳು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಇಂದು ಚೇತರಿಕೆಯ ಹಾದಿಯಲ್ಲಿ ಮುಂದುವರಿದಿವೆ.

    ಇದೇ ವೇಳೆ, ಕೆಲವು ಷೇರುಗಳು ಇಂದು ಕಳಪೆ ಪ್ರದರ್ಶನ ತೋರಿವೆ. ಬಿಪಿಸಿಎಲ್, ಕೋಲ್ ಇಂಡಿಯಾ, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಮತ್ತು ಶ್ರೀರಾಮ್ ಫೈನಾನ್ಸ್ ಇವುಗಳು ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಶಕ್ತಿ ವಲಯ ಮತ್ತು ಲಾಜಿಸ್ಟಿಕ್ಸ್ ವಲಯದ ಈ ಷೇರುಗಳು ಜಾಗತಿಕ ಒತ್ತಡಗಳಿಗೆ ಒಳಗಾಗಿ ಇಳಿಮುಖವಾಗಿವೆ. ಅದಾನಿ ಸಮೂಹದ ಷೇರುಗಳ ಮೇಲಿನ ಒತ್ತಡವು ಇನ್ನೂ ತಗ್ಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಜಾಗತಿಕ ಮಾರುಕಟ್ಟೆಗಳು ತತ್ತರಿಸಿದ ಒಂದು ದಿನದ ನಂತರ ಏಷ್ಯಾದ ಎಲ್ಲಾ ಮಾರುಕಟ್ಟೆಯು ಭರ್ಜರಿಯಾಗಿ ರಿಟರ್ನ್ ಆಗಿದೆ. ಜಪಾನ್ ಷೇರು ಮಾರುಕಟ್ಟೆ ನಿಕ್ಕಿ ಸೂಚ್ಯಂಕ ಸೋಮವಾರ ಶೇ.7.8ರಷ್ಟು ಕುಸಿದಿದ್ದರೆ, ಮಂಗಳವಾರ ಬೆಳಗ್ಗೆ ಅದು ಸುಮಾರು ಶೇ.6 ರಷ್ಟು ಲಾಭದೊಂದಿಗೆ ವಹಿವಾಟು ನಡೆಸಿತು. ನಿಕ್ಕಿ 225 ಸೂಚ್ಯಂಕವು 5.81% ಅಥವಾ 1,809.92 ಪಾಯಿಂಟ್‌ಗಳ ಏರಿಕೆಯಾಗಿ 32,946.50ಕ್ಕೆ ತಲುಪಿದೆ. ಮತ್ತೊಂದೆಡೆ, ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕವು ಸುಮಾರು 2 ಪ್ರತಿಶತಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು.

  • ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌  ದರ ಇಳಿಕೆಯಾಗುತ್ತಾ?

    ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುತ್ತಾ?

    ಲಂಡನ್‌/ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.

    ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ (159 ಲೀಟರ್) ಬೆಲೆ ಸುಮಾರು 10 ಡಾಲರ್(‌ಅಂದಾಜು 850 ರೂ.) ಇಳಿಕೆಯಾಗಿದೆ.

    ತೈಲ ಮತ್ತು ಅನಿಲ ವಲಯವನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದ್ದರೂ, ಹಣದುಬ್ಬರದ ಕಳವಳ, ಆರ್ಥಿಕ ಹಿಂಜರಿತ ಭೀತಿ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿವಾದಗಳು ತೀವ್ರಗೊಂಡಿರುವುದರಿಂದ ಬೆಲೆ ಇಳಿಕೆಯಾಗಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ.

    ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್‌ ದರ 7% ಇಳಿಕೆಯಾಗಿ 59.34 ಡಾಲರ್‌ (ಅಂದಾಜು 5,090ರೂ.)ತಲುಪಿದೆ.

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ ದಿನಕ್ಕೆ 4,11,000 ಬ್ಯಾರೆಲ್‌ಗಳನ್ನು (bpd) ತೈಲ ಉತ್ಪಾದನೆ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ಧರಿಸಲಾಗಿದ್ದ 1,35,000 ಬಿಪಿಡಿಯಿಂದ ಹೆಚ್ಚು ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದು ಇದು ತೈಲ ಬೆಲೆ ಕುಸಿಯಲು ಕಾರಣವಾಗಿದೆ. ಇದನ್ನೂ ಓದಿ: Black Monday ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ19 ಲಕ್ಷ ಕೋಟಿ

    ಭಾರತದಲ್ಲೂ ಇಳಿಕೆಯಾಗುತ್ತಾ?
    ಈ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತಿತ್ತು. ಆದರೆ ತೈಲ ಬೆಲೆ ಏರಿಕೆಯಾದರೆ ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುವ ಕಾರಣ ಕೇಂದ್ರ ಸರ್ಕಾರ ಈಗ ನಿತ್ಯ ದರ ಪರಿಷ್ಕರಣೆ ಮಾಡುವುದನ್ನು ನಿಲ್ಲಿಸಿದೆ.‌

    ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ 2024ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 99.83 ರೂ. ಆಗಿದ್ದರೆ ಡೀಸೆಲ್‌ ದರ 85.93 ರೂ. ಇತ್ತು. ಇದನ್ನೂ ಓದಿ: ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    2024ರ ಜೂನ್‌ ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 3.02 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳದಿಂದ ಪೆಟ್ರೋಲ್‌ ದರ 102.84 ರೂ. ಆಗಿದ್ದರೆ ಡೀಸೆಲ್‌ ದರ 89.79 ರೂ.ಗೆ ಏರಿಕೆಯಾಗಿತ್ತು.

    ಏಪ್ರಿಲ್‌ 1 ರಿಂದ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17% ಗೆ ಸರ್ಕಾರ ಏರಿಕೆ ಮಾಡಿದ್ದರಿಂದ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 2 ರೂ. ಏರಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್‌ ದರ 5 ರೂ. ಏರಿಕೆ ಮಾಡಿದೆ.

    ಈ ಹಿಂದೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ಹಾಕಿದ್ದರಿಂದ ದರ ಕಡಿತದ ಲಾಭ ಜನರಿಗೆ ಸಿಕ್ಕಿರಲಿಲ್ಲ.

     

  • Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    ಮುಂಬೈ/ ವಾಷಿಂಗ್ಟನ್‌:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ.

    ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ.

    ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು. ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀಳುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು  ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ  ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

    ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್‌ 2,677 ಅಂಕ ಕುಸಿದಿದೆ.

    ಶುಕ್ರವಾರದಿಂದಲೇ ಅಮೆರಿಕ ಮಾಧ್ಯಮಗಳು Black Monday ಹೆಸರಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿಗಳು ಬಿತ್ತರಿಸುತ್ತಿದ್ದವು. ನಿರೀಕ್ಷೆಯಂತೆ ಸೋಮವಾರ ವಿಶ್ವದ ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

  • ಟ್ರಂಪ್‌ ತೆರಿಗೆ ಸಮರ- ಇಂದು ಒಂದೇ ದಿನ ಕರಗಿತು ಹೂಡಿಕೆದಾರರ 11.19 ಲಕ್ಷ ಕೋಟಿ ಸಂಪತ್ತು

    ಟ್ರಂಪ್‌ ತೆರಿಗೆ ಸಮರ- ಇಂದು ಒಂದೇ ದಿನ ಕರಗಿತು ಹೂಡಿಕೆದಾರರ 11.19 ಲಕ್ಷ ಕೋಟಿ ಸಂಪತ್ತು

    ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಇಂದು ಒಂದೇ ದಿನ ಹೂಡಿಕೆದಾರರ 11.19 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ. ಇದನ್ನೂ ಓದಿ: ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

    ಒಂದು ಹಂತದಲ್ಲಿ ಸಾವಿರ ಅಂಕ ಪತನಗೊಂಡಿದ್ದ ಸೆನ್ಸೆಕ್ಸ್‌ ನಂತರ ಸ್ವಲ್ಪ ಚೇತರಿಕೆಯಾಗಿತ್ತು. ಕೊನೆಗೆ 930.67 ಅಂಕ ಪತನವಾಗಿ 75,364.69 ರಲ್ಲಿ ತನ್ನ ಇಂದಿನ ವ್ಯವಹಾರ ಮುಗಿಸಿತು. ನಿಫ್ಟಿ 345 ಅಂಕ ಕುಸಿದು 22,904.45 ರಲ್ಲಿ ವ್ಯವಹಾರವನ್ನು ಮುಕ್ತಾಯಗೊಳಿಸಿತು. ಇದನ್ನೂ ಓದಿ: ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್

    ಟಾಟಾ ಸ್ಟೀಲ್‌, ನ್ಯಾಷನಲ್‌ ಅಲ್ಯೂಮಿನಿಯಂ, ಹಿಂದೂಸ್ತಾನ್‌ ಕಾಪರ್‌, ವೇದಾಂತ, ಭಾರತ್‌ ಫೋರ್ಜ್‌ ಮದರ್‌ಸನ್‌ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿವೆ.