ಮುಂಬೈ: ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವೂ (LIC) 2024ರ ಮಾರ್ಚ್ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 13,762 ಕೋಟಿ ರೂ. ನಿವ್ವಳ ಲಾಭ (Net Profit) ಗಳಿಸಿದೆ.
ಕಳೆದ ಹಣಕಾಸು ವರ್ಷದ ಈ ಅವಧಿಯಲ್ಲಿ ಎಲ್‌ಐಸಿ 13,191 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದ ಪ್ರಮಾಣದಲ್ಲಿ 4.5% ಏರಿಕೆ ಕಂಡಿದೆ. ಲಾಭ ಬಂದ ಹಿನ್ನೆಲೆಯಲ್ಲಿ ಒಂದು ಷೇರಿಗೆ (Share) 6 ರೂ. ಮಧ್ಯಂತರ ಡಿವಿಡೆಂಡ್ (Dividend) ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಹೆಸರ‍್ಹೇಳಿ ಲಕ್ಷಾಂತರ ರೂ. ದೋಖಾ
ಮಾರ್ಚ್ 31, 2023 ಕ್ಕೆ ಕೊನೆಗೊಂಡ ವರ್ಷದಲ್ಲಿ ವೈಯಕ್ತಿಕ ವಿಭಾಗದಲ್ಲಿ ಒಟ್ಟು 2,04,28,937 ಪಾಲಿಸಿಗಳು ಮಾರಾಟವಾದರೆ ಮಾರ್ಚ್ 31,2024ಕ್ಕೆ ಕೊನೆಗೊಂಡ ವರ್ಷದಲ್ಲಿ ಒಟ್ಟು 2,03,92,973 ಪಾಲಿಸಿಗಳನ್ನು ಮಾರಾಟ ಮಾಡಿದೆ.
ನವದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea Ltd) ಕಂಪನಿಯಲ್ಲಿ ಈಗ ಭಾರತ ಸರ್ಕಾರ (Indian Government) ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.
ಹೌದು. ಭಾರತ ಸರ್ಕಾರ ಷೇರುಗಳನ್ನು (Share) ಖರೀದಿಸಿಲ್ಲ. ಬದಲಾಗಿ ವಿಐಎಲ್ (VIL) ಕಂಪನಿಯೇ ಶೇ.33.14 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದೆ.
ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (Adjusted Gross Revenue -AGR) ಪಾವತಿಸಬೇಕಿದೆ. ಅಂದಾಜಿನ ಪ್ರಕಾರ ಕಂಪನಿ ಬಡ್ಡಿಯ ಮೊತ್ತವಾಗಿ ಸುಮಾರು 16,133 ಕೋಟಿ ರೂ. ಪಾವತಿಸಬೇಕಿದೆ. ಇಷ್ಟೊಂದು ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಬಳಿ ಇರುವ ಷೇರನ್ನೇ ಮಾರಾಟ ಮಾಡಲು ಆಡಳಿತ ಮಂಡಳಿ ಕಳೆದ ವರ್ಷದ ಜನವರಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಇದನ್ನೂ ಓದಿ: ಮೇಡ್ ಇನ್ ಇಂಡಿಯಾ BharOS ಬಿಡುಗಡೆ – ಆಂಡ್ರಾಯ್ಡ್‌ಗಿಂತ ಭಿನ್ನ ಹೇಗೆ?
ವೊಡಾಫೋನ್ ಕಂಪನಿಯ ನಿರ್ಧಾರವನ್ನು ಈಗ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಸ್ಪೆಕ್ಟ್ರಂ ಹ೦ಚಿಕೆ ಮತ್ತು ಇತರ ಬಾಕಿಗಳ ಮೇಲಿನ ಬಡ್ಡಿಯನ್ನು ಕೇಂದ್ರ ಸರ್ಕಾರ ಷೇರಾಗಿ ಪರಿವರ್ತಿಸಿದೆ. ಈ ಮೂಲಕ ಸರ್ಕಾರ ಶೇ.33.14ರಷ್ಟು ಪಾಲನ್ನು ತನ್ನದಾಗಿಸಿಕೊಂಡು ಈ ಟೆಲಿಕಾಂ ಸಂಸ್ಥೆಯಲ್ಲಿ ಅತಿದೊಡ್ಡ ಷೇರುದಾರನಾಗಿ ಹೊರಹೊಮ್ಮಿದೆ.
16,000 ಕೋಟಿ ರೂ. ಬಡ್ಡಿ ಮೊತ್ತ ಪಾವತಿ ಸಂಬಂಧ ಸರ್ಕಾರಕ್ಕೆ 10 ರೂ. ಮುಖಬೆಲೆಗೆ ಪ್ರತಿ ಷೇರನ್ನು ಮಾರಾಟ ವಿಐಎಲ್ ಕಂಪನಿ ಮಾರಾಟ ಮಾಡಿದೆ. ಶುಕ್ರವಾರದ ಮಾರುಕಟ್ಟೆಯಲ್ಲಿ ವೊಡಾಫೋನ್ ಐಡಿಯಾ 1 ಷೇರಿನ ಬೆಲೆ 7 ರೂ.ಗೆ ಅಂತ್ಯವಾಗಿತ್ತು.
ಈ ಹಿಂದೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ (Kumar Mangalam Birla) ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಬಿರ್ಲಾ ಅವರು ಕಂಪನಿಯಲ್ಲಿ ಶೇ. 27ರಷ್ಟು ಷೇರು ಹೊಂದಿದ್ದಾರೆ.
ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ 2021ರ ಜೂನ್ 7ರಂದು ಪತ್ರ ಬರೆದಿದ್ದರು. ಸರ್ಕಾರ ಮಾತ್ರ ಅಲ್ಲದೇ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ಪ್ರಕಟಿಸಿದ್ದರು.
ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್‌ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ವಿಶ್ವದ ಪ್ರಮುಖ ಒಟಿಟಿ ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್ ದಶಕದಲ್ಲೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ತನ್ನ ಚಂದಾದಾರರನ್ನು ಕಳೆದುಕೊಂಡಿದೆ.
ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದಾಗಿ ನೆಟ್‌ಫ್ಲಿಕ್ಸ್ ಬರೋಬ್ಬರಿ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಈ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ನೆಟ್‌ಫ್ಲಿಕ್ಸ್ 22.06 ಕೋಟಿ ಚಂದಾದಾರರನ್ನು ಹೊಂದಿರುವುದಾಗಿ ತಿಳಿಸಿದೆ. ಇದು ಕಳೆದ ವರ್ಷದ ವರದಿಗಿಂತಲೂ ಕಡಿಮೆಯಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್
ನೆಟ್‌ಫ್ಲಿಕ್ಸ್‌ನ ಕಳೆದ ವರ್ಷದ ನಿವ್ವಳ ಆದಾಯ 1.7 ಶತಕೋಟಿ ಡಾಲರ್(12.98 ಸಾವಿರ ಕೋಟಿ ರೂ.) ಇತ್ತು. ಈ ವರ್ಷ 1.6 ಶತಕೋಟಿ ಡಾಲರ್(12.22 ಸಾವಿರ ಕೋಟಿ ರೂ.)ಗೆ ಇಳಿಕೆಯಾಗಿದೆ ಎಂದು ಸಿಲಿಕಾನ್ ವ್ಯಾಲಿ ಟೆಕ್ ಸಂಸ್ಥೆ ವರದಿ ಮಾಡಿದೆ. ಈ ಅಂಕಿ ಅಂಶ ಬಿಡುಗಡೆಯ ಬಳಿಕ ನೆಟ್‌ಫ್ಲಿಕ್ಸ್ ಷೇರು ಸುಮಾರು ಶೇ.25 ರಷ್ಟು ಕುಸಿದಿದೆ. ಇದನ್ನೂ ಓದಿ: ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ
ನಾವು ಬಯಸಿದಷ್ಟು ವೇಗವಾಗಿ ನಮ್ಮ ಆದಾಯ ಹೆಚ್ಚುತ್ತಿಲ್ಲ. 2020ರಲ್ಲಿ ಕೋವಿಡ್ ಕಾರಣದಿಂದ ನಮ್ಮ ಕಂಪನಿಯ ಆದಾಯ ಗಣನೀಯವಾಗಿ ಏರಿಕೆ ಕಂಡಿತ್ತು. 2021ರಲ್ಲಿ ಕೋವಿಡ್ ಇಳಿಕೆಯಿಂದಾಗಿ ನಿಧಾನಗತಿಯಲ್ಲಿ ಆದಾಯವೂ ಇಳಿಯತೊಡಗಿತು ಎಂದು ನೆಟ್‌ಫ್ಲಿಕ್ಸ್ ಇತ್ತೀಚೆಗೆ ತಿಳಿಸಿದೆ.
ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನ ಶೇ.9.2 ಷೇರನ್ನು ಖರೀದಿಸಿದ್ದರು. ಬಳಿಕವೂ ಟ್ವಿಟ್ಟರ್‌ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಮಸ್ಕ್ ಇದೀಗ ಸಂಪೂರ್ಣವಾಗಿ ಕಂಪನಿಯನ್ನೇ ಖರೀದಿಸಲು ಮುಂದಾಗಿದ್ದಾರೆ.
ಹೌದು, ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್‌ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಕೆಲವೇ ದಿಗಳಲ್ಲಿ 41 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರೂ.)ಗೆ ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುವಂತೆ ಕಂಪನಿಗೆ ಆಫರ್ ನೀಡಿದ್ದಾರೆ. ತನ್ನ ಖರೀದಿ ನಿರ್ಧಾರವನ್ನು ಅಮೆರಿಕದ ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್‌ಗೆ ಮಸ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್
ಟ್ವಿಟ್ಟರ್ ಜಗತ್ತಿನಾದ್ಯಂತ ಒಂದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ್ಯದ ವೇದಿಕೆಯಾಗಬಹುದು ಎಂಬ ಕಾರಣಕ್ಕೆ ಹೂಡಿಕೆ ಮಾಡಿದ್ದೇನೆ. ನಾನು ಹೂಡಿಕೆ ಮಾಡಿದ ಬಳಿಕ ಕಂಪನಿ ಅಭಿವೃದ್ಧಿ ಹೊಂದುವುದಿಲ್ಲ ಅಥವಾ ಸದ್ಯ ಸಾಮಾಜಿಕ ಅಗತ್ಯಗಳು ಪೂರೈಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಟ್ವಿಟ್ಟರ್ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: 10 ಕೋಟಿ ಭಾರತೀಯ ಬಳಕೆದಾರರಿಗೆ ಯುಪಿಐ ಸೇವೆ ನೀಡಲಿದೆ ವಾಟ್ಸಪ್
ನಾನೀಗ ಟ್ವಿಟ್ಟರ್‌ನ ಶೇ.100 ಪಾಲನ್ನು ಪ್ರತಿ ಷೇರಿಗೆ 54.20(4,126 ರೂ.) ಡಾಲರ್ ನಗದು ರೂಪದಲ್ಲಿ ಖರೀದಿಸಲು ಆಫರ್ ನೀಡುತ್ತಿದ್ದೇನೆ. ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಹಿಂದಿನ ದಿನ ಶೇ.54 ಪ್ರೀಮಿಯಂ ಹಾಗೂ ನನ್ನ ಹೂಡಿಕೆಯನ್ನು ಸಾರ್ವಜನಿಕವಾಗಿ ಘೋಷಿಸುವ ಹಿಂದಿನ ದಿನ ಶೇ.38 ಪ್ರೀಮಿಯಂ ಖರೀದಿಸಲು ಇಚ್ಛಿಸುತ್ತೇನೆ. ಈ ನನ್ನ ಆಫರ್ ಅತ್ಯುತ್ತಮ ಹಾಗೂ ಅಂತಿಮ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಈ ಆಫರ್ ಅನ್ನು ನಿರಾಕರಿಸಿದ್ದಲ್ಲಿ, ನಾನು ಟ್ವಿಟ್ಟರ್‌ನ ಷೇರುದಾರ ಸ್ಥಾನವನ್ನು ಬದಲಿಸುತ್ತೇನೆ ಎಂದು ತಿಳಿಸಿದ್ದಾರೆ.
– ಸರ್ಕಾರಕ್ಕೆ ಶೇ.36ರಷ್ಟು ಷೇರನ್ನು ಮಾರಾಟ ಮಾಡಲು ಮುಂದಾದ ವಿಐಎಲ್ – ಎಜಿಆರ್ ಸುಳಿಯಲ್ಲಿ ಸಿಲುಕಿ ಷೇರು ಮಾರಾಟ
ನವದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ಈಗ ಭಾರತ ಸರ್ಕಾರ ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.
ಹೌದು. ಭಾರತ ಸರ್ಕಾರವೇ ಷೇರುಗಳನ್ನು ಖರೀದಿಸಿಲ್ಲ ಬದಲಾಗಿ ವಿಐಎಲ್ ಕಂಪನಿಯೇ ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿದೆ.
ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿಸಬೇಕಿದೆ. ಅಂದಾಜಿನ ಪ್ರಕಾರ ಕಂಪನಿ ಬಡ್ಡಿಯ ಮೊತ್ತವಾಗಿ ಸುಮಾರು 16,000 ಕೋಟಿ ರೂ.ವನ್ನು ಪಾವತಿಸಬೇಕಿದೆ. ಇಷ್ಟೊಂದು ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಬಳಿ ಇರುವ ಷೇರನ್ನೇ ಮಾರಾಟ ಮಾಡಲು ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ 16,000 ಕೋಟಿ ರೂ. ಬಡ್ಡಿ ಮೊತ್ತ ಪಾವತಿ ಸಂಬಂಧ ಸರ್ಕಾರಕ್ಕೆ 10 ರೂ. ಮುಖಬೆಲೆಗೆ 1 ಷೇರನ್ನು ಮಾರಾಟ ಮಾಡಲು ಆಡಳಿತ ಮಂಡಳಿಯ ನಿರ್ದೇಶಕರು ಅನುಮೋದಿಸಿದ್ದಾರೆ ಎಂದು ವಿಐಎಲ್ ತಿಳಿಸಿದೆ. ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದ ಬಳಿಕ ವಿಐಎಲ್‌ನಲ್ಲಿ ವೊಡಾಫೋನ್ ಗ್ರೂಪ್ ಶೇ.28.5 ಆದಿತ್ಯ ಬಿರ್ಲಾ ಗ್ರೂಪ್ ಶೇ.17.8 ರಷ್ಟು ಷೇರನ್ನು ಉಳಿಸಿಕೊಳ್ಳಲಿದೆ.
ಬಾಕಿ ಎಷ್ಟಿದೆ?
ಎಜಿಆರ್ ಪ್ರಕರಣದಲ್ಲಿ ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿ ಒಟ್ಟು 58,254 ಕೋಟಿ ರೂ.ವನ್ನು ಪಾವತಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಕಂಪನಿ ಕೇವಲ 7,584 ಕೋಟಿ ರೂ. ಪಾವತಿಸಿದ್ದು ಇನ್ನೂ 50,399 ಕೋಟಿ ರೂ. ಪಾವತಿಸಬೇಕಿದೆ. ಸುಪ್ರೀಂ ಕೋರ್ಟ್ 2031ರ ಒಳಗಡೆ ಈ ಹಣವನ್ನು ಪಾವತಿಸಬೇಕು ಎಂದು ಕಂಪನಿಗಳಿಗೆ ಗಡುವು ನೀಡಿದೆ.
ಏರ್‌ಟೆಲ್ ಕಂಪನಿಯೂ ಎಜಿಆರ್ ಮೊತ್ತವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿದೆ. ಆದರೆ ನಾನು ಸರ್ಕಾರಕ್ಕೆ ತನ್ನ ಷೇರನ್ನು ಮಾರಾಟ ಮಾಡುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?
ನುಡಿದಂತೆ ನಡೆದ ಬಿರ್ಲಾ
ಈ ಹಿಂದೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಬಿರ್ಲಾ ಅವರು ಕಂಪನಿಯಲ್ಲಿ ಶೇ. 27ರಷ್ಟು ಷೇರು ಹೊಂದಿದ್ದಾರೆ.
ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಜೂನ್ 7ರಂದು ಪತ್ರ ಬರೆದಿದ್ದರು. ಸರ್ಕಾರ ಮಾತ್ರ ಅಲ್ಲದೆ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು.
ಸರ್ಕಾರ ಹಾಕಿರುವ ಎಜಿಆರ್ ಲೆಕ್ಕ ಸರಿಯಿಲ್ಲ ಎಂದು ಎಂದು ವಿಐಎಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ತಿರಸ್ಕರಿಸಿ 10 ವರ್ಷದ ಒಳಗಡೆ ಪಾವತಿಸಬೇಕು ಎಂದು ಗಡುವು ನೀಡಿತ್ತು.
ವಿಐಎಲ್ ಕಂಪನಿಗೆ 25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ 2020ರ ಸೆಪ್ಟೆಂಬರ್ ನಲ್ಲಿ ಅನುಮತಿ ನೀಡಿತ್ತು. ಆದರೆ ಅಷ್ಟು ಮೊತ್ತವನ್ನು ಸಂಗ್ರಹಿಸಲು ಕಂಪನಿ ವಿಫಲವಾಗಿತ್ತು.
ನವದೆಹಲಿ: ಸಿಗರೇಟ್ ತಯಾರಿಕಾ ಕ್ಷೇತ್ರದಲ್ಲಿ ತನ್ನದೇ ಆದಂತಃ ಹೆಸರು ಗಳಿಸಿರುವ ದೇಶದ ಅತಿ ದೊಡ್ಡ ಸಿಗರೆಟ್ ತಯಾರಕ ಕಂಪನಿ ಐಟಿಸಿ ಲಿಮಿಟೆಡ್, ಈಗ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‍ನಲ್ಲಿ(ಸಿಡಿಇಎಲ್) ಭಾಗವಾಗಿರುವ ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
ಆದರೆ ಕೆಫೆ ಕಾಫಿ ಡೇ ಐಟಿಸಿಯ ನಿರ್ಧರನ್ನು ನಿರಾಕರಿಸಿದೆ ಎನ್ನಲಾಗುತ್ತಿದೆ. ಐಟಿಸಿ ಕಂಪನಿ ತನ್ನ ಉದ್ಯಮವನ್ನು ಮತ್ತಷ್ಟು ಬೆಳೆಸುವ ಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಈಗ ಕಾಫಿ ಡೇಯಲ್ಲಿನ ಶೇರುಗಳನ್ನು ಖರೀದಿಸಲು ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಕೆಫೆ ಕಾಫಿ ಡೇ(ಸಿಸಿಡಿ) ಕಾಫಿ ಹೌಸ್‍ನ ಭಾಗವಾಗಿದ್ದು, ಇದನ್ನು ಸಿಡಿಇಎಲ್ ನೋಡಿಕೊಳ್ಳುತ್ತದೆ. ಭಾರತದಲ್ಲಿ ಕಾಫಿ ಡೇ ಸುಮಾರು 1,700 ಮಳಿಗೆಗಳನ್ನು ಹೊಂದಿದೆ. ಆದರೆ ಸಿಸಿಡಿ ಸ್ಥಾಪಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಕಂಪನಿ ಸಂಕಷ್ಟದಲ್ಲಿ ಸಿಲುಕಿದೆ.
ಸಿದ್ಧಾರ್ಥ್ ಅವರ ಸಾವಿನ ಬಳಿಕ ಕಾಫಿ ಡೇ ಎಂಟರ್‌ಪ್ರೈಸಸ್ ಸಿಸಿಡಿಯ ಶೇರ್ ಅನ್ನು ಮಾರುವ ಮೂಲಕ ಅದರ ಸಾಲವನ್ನು ತೀರಿಸಲು ಯೋಚಿಸುತ್ತಿದೆ. ಜೂನ್ ವರದಿಯ ಪ್ರಕಾರ, ಕೊಕೊ ಕೋಲಾ ಕಂಪನಿಯು ಸಿಡಿಇಎಲ್ ಜೊತೆ ಮಾತನಾಡಿ ಸಿಸಿಡಿಯಲ್ಲಿ ಗಣನೀಯ ಪಾಲನ್ನು ನೀಡುವಂತೆ ಹೇಳಿತ್ತು.
ಇತ್ತೀಚಿಗಷ್ಟೇ, ಸಿಡಿಇಎಲ್ ಮಂಡಳಿಯು ತನ್ನ ಸಾಲಗಳನ್ನು ತಗ್ಗಿಸಲು ಸಹಾಯ ಮಾಡಲು ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಬ್ಲ್ಯಾಕ್ಸ್ಟೋನ್‍ಗೆ ಮಾರಾಟ ಮಾಡಲು ಅನುಮೋದಿಸಿತು. ಈ ಒಪ್ಪಂದದಿಂದ ಸಿಡಿಇಎಲ್ 3,000 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಈ ಒಪ್ಪಂದವು ಬ್ಲಾಕ್‍ಸ್ಟೋನ್‍ನ ಸರಿಯಾದ ಪರಿಶ್ರಮ ಮತ್ತು ಇತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿದೆ.
ಭಾರತವು ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧಿಸಲಾಗಿದೆ. ಹೀಗಾಗಿ ಈಗ ಐಟಿಸಿ ಕಂಪನಿ ಸಿಗರೇಟ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ತನ್ನ ವ್ಯವಹಾರವನ್ನು ಇತರೆ ಕ್ಷೇತ್ರದಲ್ಲಿ ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳು ಹೇಳುವಂತೆ, ಸಿಡಿಇಎಲ್ ಶೇರ್ ಖರೀದಿಗೆ ಐಟಿಸಿ ಮುಂದಾಗಿದ್ದು, ಈ ವಿಚಾರದ ಚರ್ಚೆಯು ಸದ್ಯ ಪ್ರಾಥಮಿಕ ಹಂತದಲ್ಲಿದೆ.
ಈ ವಿಚಾರದ ಬಗ್ಗೆ ಐಟಿಸಿ ಪ್ರತಿಕ್ರಿಯಿಸಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದೆ.
ರಾಮನಗರ: ನರೇಂದ್ರ ಮೋದಿ ಸೇನೆ ರಾಮನಗರ ವಾಟ್ಸಪ್ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಹಾಗೂ ನರೇಂದ್ರ ಮೋದಿಯವರ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸುವ ಹಾಗೂ ಸಂಘಟನೆ ದೃಷ್ಟಿಯಿಂದ ವಾಟ್ಸಪ್ ಗ್ರೂಪ್‍ಗಳನ್ನು ಮಾಡಲಾಗಿದೆ. ಆದರೆ ಸೋಮವಾರ ನಮೋ ಸೇನೆ ರಾಮನಗರ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ.
ಅಶ್ಲೀಲ ವಿಡಿಯೋ ನೋಡಿದ ಗ್ರೂಪಿನ ಸದಸ್ಯರು ವಿಡಿಯೋ ಶೇರ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಆತನನ್ನು ಗ್ರೂಪಿನಿಂದ ಹೊರಹಾಕುವಂತೆ ತಿಳಿಸ್ತಿದ್ದಂತೆ ಗ್ರೂಪ್ ಅಡ್ಮಿನ್ ಆತನನ್ನು ಗ್ರೂಪಿನಿಂದ ತೆಗೆದಿದ್ದಾರೆ. ಈ ನಮೋ ಸೇನೆ ರಾಮನಗರ ವಾಟ್ಸಪ್ ಗ್ರೂಪಿನಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಸಹ ಇದ್ದು, ಅಶ್ಲೀಲ ವಿಡಿಯೋ ಶೇರ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೂಪ್‍ನ ಅಡ್ಮಿನ್ ಬ್ಯಾಡರಹಳ್ಳಿ ಕುಮಾರ್ ಈ ಬಗ್ಗೆ ಮಾತನಾಡಿ ಆತ ಅನ್ಯ ಕೋಮಿನವನು ಸೋಮವಾರ ಗ್ರೂಪ್‍ಗೆ ಬಂದಿದ್ದು ರಾತ್ರಿ ಈ ರೀತಿಯ ವಿಡಿಯೋಗಳನ್ನು ಹಾಕಿದ್ದಾನೆ. ಈ ರೀತಿ ವಿಡಿಯೋ ಶೇರ್ ಮಾಡೋದಕ್ಕೆ ಬೇರೆ ಗ್ರೂಪ್‍ಗಳಿವೆ ಅದರಲ್ಲಿ ಶೇರ್ ಮಾಡ್ಕೊ ಎಂದೇಳಿ ಗ್ರೂಪ್‍ನಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.
ಹೈದರಾಬಾದ್: ಅಕ್ಟೋಬರ್ 23ರಂದು ವಿಶೇಷವಾದ ಒಂದು ವಿಷಯವನ್ನು ಶೇರ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟಾಲಿವುಡ್ ನಟ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಪ್ರೀತಿಯ ಅಭಿಮಾನಿಗಳೇ, ಈ ತಿಂಗಳ 23ರಂದು ನಿಮ್ಮ ಜೊತೆ ವಿಶೇಷವಾದ ಒಂದು ವಿಷಯವನ್ನು ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Dear fans, excited to share something special with you all on 23rd of this month 😉
Wishing everyone a Happy Dussehra !! – #Prabhas via fb
ಅಕ್ಟೋಬರ್ 23 ಪ್ರಭಾಸ್ ಅವರ ಹುಟ್ಟುಹಬ್ಬ ದಿನವಾಗಿದ್ದು, ಕಳೆದ ವರ್ಷ ಅವರು ತಮ್ಮ ಹುಟ್ಟುಹಬ್ಬದಂದು ‘ಸಾಹೋ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಈ ವರ್ಷವೂ ಕೂಡ ಪ್ರಭಾಸ್ ತಮ್ಮ ಹುಟ್ಟುಹಬ್ಬದಂದು ಒಂದು ವಿಷಯವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ.
ಪ್ರಭಾಸ್ 2016ರಲ್ಲೂ ತಮ್ಮ ಹುಟ್ಟುಹಬ್ಬದ ದಿನ ‘ಬಾಹುಬಲಿ- 2’ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದರು. ಈ ಚಿತ್ರ ವಿಶ್ವಾದ್ಯಂತ ಯಶಸ್ವಿಯಾಗಿತ್ತು. ಈ ಚಿತ್ರದಿಂದ ಪ್ರಭಾಸ್ ಇನ್ನಷ್ಟು ಜನಪ್ರಿಯವಾದರು, ಅಲ್ಲದೇ ಅವರಿಗೆ ಅಭಿಮಾನಿಗಳು ಹೆಚ್ಚಾದ್ದರು. ಈಗ ಪ್ರಭಾಸ್ ಅಭಿಮಾನಿಗಳು ಅ. 23ಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಪ್ರಭಾಸ್ ಅವರ ಮುಂದಿನ ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಾಹೋ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಚಿತ್ರ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.
ಯುವಕನೊಬ್ಬ ತನ್ನ ಒಡೆದ ಫೋನಿನಲ್ಲಿ ಮರ್ಮಾಂಗದ ಫೋಟೋ ಕ್ಲಿಕಿಸಿ ಅದು ಮಿಸ್ಸಾಗಿ ಕ್ಲಾಸ್ ಗ್ರೂಪ್‍ನಲ್ಲಿ ಶೇರ್ ಆಗಿದ್ದು ಹೇಗೆ ಎಂಬುದರ ಬಗ್ಗೆ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾನೆ.
ಟ್ವಿಟ್ಟರಿನಲ್ಲಿ ಯುವಕ, ಹೌದು ನನ್ನ ಮರ್ಮಾಂಗದ ಫೋಟೋವನ್ನು ನಾನು ಕ್ಲಿಕ್ಕಿಸಿದೆ. ಆದರೆ ನಾನು ಬೇಕೆಂದು ಆ ಫೋಟೋವನ್ನು ಕ್ಲಾಸ್ ಗ್ರೂಪಿಗೆ ಶೇರ್ ಮಾಡಲಿಲ್ಲ. ಅದು ತಪ್ಪಾಗಿ ಗ್ರೂಪ್‍ನಲ್ಲಿ ಆ ಫೋಟೋ ಶೇರ್ ಆಗಿದೆ. ನನ್ನ ಫೋನ್ ಒಡೆದು ಹೋಗಿತ್ತು. ಹೊಸ ಫೋನ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ ಹಾಗೂ ಫೋನಿನ ಇನ್ಯೂರೆನ್ಸ್ ಸಹ ಇರಲಿಲ್ಲ ಎಂದು ವಿವರಿಸಿದ್ದಾನೆ.
ನಾನು ನನ್ನ ಮರ್ಮಾಂಗದ ಫೋಟೋ ಕ್ಲಿಕಿಸಿ ನಂತರ ಮಲಗಿದೆ. ಮರುದಿನ ಎದ್ದ ತಕ್ಷಣ ನನ್ನ ಕ್ಲಾಸ್ ಸ್ನೇಹಿತರು ಮೆಸೆಜ್ ಮಾಡಲು ಶುರು ಮಾಡಿದ್ದರು. ಮೊದಲಿಗೆ ಏನು ಆಗುತ್ತಿದೆ, ಏಕೆ ಹೀಗೆ ಮೆಸೆಜ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗಲಿಲ್ಲ. ರಾತ್ರಿ ನಾನು ನನ್ನ ಗುಪ್ತಾಂಗದ ಫೋಟೋ ಕ್ಲಿಕಿಸಿದ್ದು, ನಾನು ಮರೆತು ಹೋಗಿದ್ದೆ. ನಂತರ ಪರಿಶೀಲಿಸಿದ್ದಾಗ ನಾನು ಮಲಗಿದ ವೇಳೆ ಆ ಫೋಟೋ ಮಿಸ್ಸಾಗಿ ಕ್ಲಾಸ್ ಗೂಪ್‍ಗೆ ಶೇರ್ ಆಗಿತ್ತು ಎಂದು ಹೇಳಿಕೊಂಡಿದ್ದಾನೆ.
ನಾನು ನನ್ನ ಕ್ಲಾಸ್ ಗ್ರೂಪಿನಲ್ಲಿ ಈ ಘಟನೆ ಬಗ್ಗೆ ವಿವರಿಸಲು ಯತ್ನಿಸಿದೆ. ಆದರೆ ಯಾರೂ ನನ್ನ ಮಾತು ಕೇಳಲು ಒಪ್ಪಲಿಲ್ಲ. ನಾನು ಈ ಫೋಟೋವನ್ನು ಬೇಕೆಂದು ಕ್ಲಾಸ್ ಗ್ರೂಪಿಗೆ ಕಳುಹಿಸಿದೆ ಎಂದು ಅಂದುಕೊಂಡರು. ಈ ಘಟನೆಯಿಂದ ನನಗೆ ಬಹಳ ಮುಜುಗರ ಹಾಗೂ ನಾಚಿಕೆ ಆಯ್ತು. ಹಾಗಾಗಿ ನಾನು ಈ ಘಟನೆಯನ್ನು ಟ್ವಿಟ್ಟರಿನಲ್ಲಿ ಹೇಳಿಕೊಳ್ಳುತ್ತಿದ್ದೇನೆ ಎಂದು ಯುವಕ ಹೇಳಿದ್ದಾನೆ.
ನವದೆಹಲಿ: ಮೋದಿ ಸರ್ಕಾರದ 4ನೇ ಸಂಭ್ರಮಾಚರಣೆಯ ದಿನವಾದ ಮೇ 26ರಂದು ಕಾಂಗ್ರೆಸ್ ವಿಶ್ವಾಸಘಾತ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸುರ್ಜೆವಾಲ, ಮೋದಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಜನರು ಇಟ್ಟಿದ್ದ ವಿಶ್ವಾಸ ಕೇಂದ್ರ ಸರ್ಕಾರ ಉಳಿಸಿಕೊಂಡಿಲ್ಲ. ಹೀಗಾಗಿ ಮೇ 26ರಂದು ವಿಶ್ವಾಸಘಾತ ದಿನವನ್ನಾಗಿ ದೇಶಾದ್ಯಂತ ಆಚರಿಸುವುದಾಗಿ ಹೇಳಿದ್ದಾರೆ.
ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಅಧಿಕಾರಕ್ಕೆ ಬರುವಾಗ ಎಲ್ಲಾ ವಸ್ತುಗಳ ಬೆಲೆ ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ನಾಲ್ಕು ವರ್ಷ ತುಂಬಿದರೂ ಬೆಲೆ ಗಗನಕ್ಕೆ ಏರುತ್ತಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಶ್ವಾಸಘಾತ್ ದಿನಾಚರಣೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಯುವಕರಿಗೆ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಭ್ರಷ್ಟಾಚಾರ ವಿಚಾರ ಇಟ್ಟುಕೊಂಡು ಸರ್ಕಾರ ರಚನೆ ಮಾಡಿದರು. ಆದರೆ ಕೇಂದ್ರ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಪಿಯೂಷ್ ಗೊಯೆಲ್ 10 ರೂಪಾಯಿ ಷೇರು 10 ಸಾವಿರಕ್ಕೆ ವ್ಯಾಪಾರ ಆಗುತ್ತದೆ. ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ವಿದೇಶಕ್ಕೆ ಹೋಗುತ್ತಿದ್ದಾರೆ. ಪ್ರತಿ ನಾಗರಿಕನ ಅಕೌಂಟಿಗೆ 15 ಲಕ್ಷ ಹಣ ಬರಲಿಲ್ಲ. ಐಟಿ ಮತ್ತು ಇಡಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ ವಿಶ್ವಾಸಘಾತ ಹೆಸರಿನಲ್ಲಿ ಮೇ 26ರಂದು ಎಲ್ಲಾ ರಾಜ್ಯಗಳಲ್ಲಿ ಆಚರಣೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ತಿಳಿಸಿದರು.