Tag: sharath madivala

  • ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಕ್ರಿಯೆಗೂ ಮುನ್ನ ದಕ್ಷಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತವಾಗಿರೋ ಘಟನೆ ನಡೆದಿದೆ.

    ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ರಿಯಾಜ್(26) ಎಂದು ಗುರುತಿಸಲಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಇರ್ವತ್ತೂರು ಪದವು ನಿವಾಸಿ. ಶರತ್ ಮಡಿವಾಳ ಪಾರ್ಥಿವ ಶರೀರ ಹೋದ ಬಳಿಕ ಬಂಟ್ವಾಳದ ಬಿ.ಸಿ ರೋಡಿನ ಕೈಕಂಬದ ಬಳಿ ಈ ಘಟನೆ ನಡೆದಿದೆ.

    ಶರತ್ ಅಂತ್ಯಕ್ರಿಯೆಗೆಂದು ಮಂಗಳೂರಿನಿಂದ ಬಂಟ್ವಾಳದಲ್ಲರೋ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಲ್ಲು ತೂರಾಟ, ಲಾಠಿಪ್ರಹಾರ ನಡೆದಿದ್ದು, ಇದೇ ವೇಳೆ 7 ರಿಂದ 8 ಮಂದಿ ದುಷ್ಕರ್ಮಿಗಳು ರಿಯಾಜ್ ಕುತ್ತಿಗೆ ಹಾಗೂ ಹೆಗಲ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

    ಸದ್ಯ ರಿಯಾಜ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ರಕ್ತದ ಮಡುವಲ್ಲಿ ಬಿದ್ದಿದ್ದ ಶರತ್‍ನನ್ನ ಆಸ್ಪತ್ರೆಗೆ ಸೇರಿಸಿದ್ದು ಮುಸ್ಲಿಂ ಯುವಕ

    ಇದನ್ನೂ ಓದಿ: ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    https://www.youtube.com/watch?v=o40hIeKFh8E

    https://www.youtube.com/watch?v=bHr6olvlgmU

  • ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಶಿವಮೊಗ್ಗ: ಮಂಗಳೂರು ಕೋಮು ಗಲಭೆ ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ದೂರಿದ್ದಾರೆ.

    ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮುಗಲಭೆ ನಡೆಯಲಿ ಎಂಬ ಹಿತಾಸಕ್ತಿ ಸರ್ಕಾರಕ್ಕೆ ಇದೆ ಎಂಬ ಅನುಮಾನ ಮೂಡಿದೆ. ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಇದರಿಂದಾಗಿ ಕೋಮುಗಲಭೆ ಮಾಡುವವರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ ಎಂದರು.

    ರಾಜ್ಯದಲ್ಲಿ ಕೋಮುಗಲಭೆ, ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ರಾಷ್ಟ್ರ ಭಕ್ತರಿಗೆ ಬೆದರಿಕೆಗಳು ಬರುತ್ತಿವೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬೆದರಿಕೆ ಹಾಕಿರೋದು ಯಾರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಲಿ. ಇಂಥ ವಿಷಯಗಳ ಬಗ್ಗೆ ಸಿಎಂಗೆ ಗಂಭೀರತೆ ಇಲ್ಲ. ಉಡಾಫೆಯಾಗಿ ಮಾತಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.

    ಮಂಗಳೂರಿನ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಫರಂಗಿ ಪೇಟೆಯಲ್ಲಿ 300 ಪೊಲೀಸರ ನಿಯೋಜನೆ ಮಾಡಲಾಗಿದೆ. ಲಾರಿಗಳಲ್ಲಿ ಪೊಲೀಸರನ್ನ ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಚಿಕ್ಕಮಗಳೂರು, ಹಾಸನ, ಕಾರವಾರ, ಶಿವಮೊಗ್ಗದ 1000ಕ್ಕೂ ಹೆಚ್ಚು ಪೊಲೀಸರ ರವಾನೆ ಮಾಡಲಾಗಿದೆ. ಮಸೀದಿಗಳಿಗೆ ಸಿಆರ್‍ಫಿಎಫ್ ಪೊಲೀಸರ ಭದ್ರತೆ ಹಾಗೂ ದೇವಸ್ಥಾನಗಳ ಮುಂಭಾಗದಲ್ಲೂ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಅಂತಾ ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಮಂಗಳೂರು: 4 ದಿನಗಳ ಹಿಂದೆ ಹಲ್ಲೆಗೆ ಒಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪಾರ್ಥಿವ ಶರೀರದ ಮೆರವಣಿಗೆ ಬಳಿಕ ಇಂದು ಅಂತ್ಯಕ್ರಿಯೆ ನಡೆಯಲಿದೆ.

    ಮಳೆ ನಡುವೆಯೂ ಶವಯಾತ್ರೆಗೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಸಿದ್ಧತೆ ನಡೆಸಿದೆ. ಬಿಜೆಪಿ ಹಿರಿಯ ನಾಯಕರು ಹಾಗೂ ಆರ್‍ಎಸ್‍ಎಸ್ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಂಗಳೂರಿನಿಂದ ಶರತ್ ಮನೆಯಿರುವ ಬಂಟ್ವಾಳದ ಸಜಿಪ ಗ್ರಾಮದವರೆಗೂ ಅಂತಿಮ ಶವಯಾತ್ರೆ ನಡೆಯಲಿದೆ. 9.30ರ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಮೆರವಣಿಗೆ ಆರಂಭವಾಗಲಿದೆ. ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ

    ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಪಾರ್ಥಿವ ಶರೀರದ ಮೆರವಣಿಗೆ ಹಿನ್ನೆಲೆಯಲ್ಲಿ ಮಂಗಳೂರು ತುಂಬೆಲ್ಲಾ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕ್ಷಣಗಳಲ್ಲಿ ಗಲಾಟೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

    ಜಿಲ್ಲೆಯಾದ್ಯಂತ ಒಟ್ಟು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿ.ಸಿ ರೋಡಿನಲ್ಲಿ ಸಿಆರ್‍ಪಿಎಫ್ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ಪಡೆ ನಿಯೋಜನೆ, 4 ಕೆಎಸ್‍ಆರ್‍ಪಿ, 2 ಸಿಆರ್‍ಪಿಎಫ್, 2 ಆರ್‍ಎಎಫ್ ತಂಡ ನಿಯೋಜನೆ ಮಾಡಲಾಗಿದೆ. ಉಡುಪಿ, ಚಿಕ್ಕಮಗಳೂರಿನಿಂದ ಅಧಿಕಾರಿಗಳು ಹೆಚ್ಚುವರಿ ಪೊಲೀಸರನ್ನ ಕರೆಸಿಕೊಂಡಿಸಿದ್ದಾರೆ.

    ಇದನ್ನೂ ಓದಿ: ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು