Tag: Sharath Bache Gowda

  • ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ – ಶರತ್ ಬಚ್ಚೇಗೌಡ

    ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ – ಶರತ್ ಬಚ್ಚೇಗೌಡ

    ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಿಯೋನಿಕ್ಸ್ (Karnataka State Electronics Development Corporation Limited) ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ (Sharath Bachegowda) ಹೇಳಿದರು.

    ನಗರದಲ್ಲಿ ಕಿಯೋನಿಕ್ಸ್ ವೆಂಡರ್ಸ್ ದಯಾಮರಣಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕೌಂಟೆಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿದೆ. ಮಹೇಶ್ವರ್ ರಾವ್ ಕಮಿಟಿ ವರದಿ ಪಡೆದು ಬಿಲ್ ಕ್ಲಿಯರ್ ಮಾಡುತ್ತೇವೆ. ಸಾರ್ವಜನಿಕರ ಹಣ ಬಳಸಿ ಅನುದಾನ ನೀಡ್ತಿದ್ದೇವೆ. ಬೆಲೆ ನಿಗದಿ ವಿಚಾರದಲ್ಲೂ ಮಾರ್ಕೆಟ್ ಬೆಲೆಗಿಂದ ಹೆಚ್ಚಿನ ಬೆಲೆಗೆ ಸಪ್ಲೈ ಮಾಡಿರುವ ಆರೋಪ ಇದೆ. ಶೀಘ್ರವಾಗಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು. ಇನ್ನೂ ಕಿಯೋನಿಕ್ಸ್ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. 2021, 22, 23ನೇ ಸಾಲಿನ ಮೂರು ವರ್ಷದ ಖರ್ಚು ವೆಚ್ಚಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ

    ಇದೇ ವೇಳೆ ಐಟಿ,ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ (Priyank Kharge)  ಮಾತನಾಡಿ, ಅಕೌಂಟೆಂಟ್ ಜನರಲ್ ಅವರು ಯಾವುದೇ ಮಾನದಂಡ ಪಾಲಿಸದೇ ಪರ್ಚೆಸಿಂಗ್ ಬಿಲ್ಲಿಂಗ್ ಟೆಂಡರ್ ಮಾಡಿದ್ದಾರೆ ಮತ್ತು ಡೂಪ್ಲಿಕೇಟ್ ಬಿಲ್, ಮಾರ್ಕೆಟ್ ರೇಟ್‌ಗಿಂತ ಹೆಚ್ಚಿನ ದರಕ್ಕೆ ಮಟಿರಿಯಲ್ ಸಪ್ಲೈ ಆರೋಪ ಇದೆ. ಅಂದಾಜು 500 ಕೋಟಿ ರೂ. ಅವ್ಯವಹಾರ ಕಂಡು ಬಂದಿದೆ. ಆಡಿಟ್ ರಿಪೋರ್ಟ್ನಲ್ಲಿ 300 ಕೋಟಿ ರೂ. ಆಡಿಟ್ ಅಬ್‌ಜಕ್ಷನ್ ಇದೆ. ನಾಲ್ಕು ವರ್ಷದ ಆಡಿಟ್ ರಿಪೋರ್ಟ್ ಮಾಡಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ರಿಪೋರ್ಟ್ ಆಧಾರದ ಮೇಲೆ ಕೊಡಲಾಗುತ್ತದೆ ಎಂದಿದ್ದಾರೆ.

    ಬ್ಲಾö್ಯಕ್ ಮೇಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಎಲ್ಲೂ ಆರೋಪ ಇಲ್ಲ. ನಿಯಮಾವಳಿ ಪಾಲನೆ ಮಾಡಬೇಕಿದೆ. ಶರತ್ ಬಚ್ಚೇಗೌಡ ಚೇರ್ಮನ್ ಆದ ಬಳಿಕ ಪರಿಶೀಲನೆ ಮಾಡ್ತಿದ್ದಾರೆ. 5ಜಿ ಎಗ್ಸೆಮ್ಷನ್ ನಾನೇ ವಿತ್ ಡ್ರಾ ಮಾಡಿದ್ದೇನೆ. ಕೆಲವರಿಗೆ ತೊಂದರೆ ಆದರೂ ನಿಯಮ ಪಾಲಿಸಲೇಬೇಕಿದೆ ಎಂದು ಹೇಳಿದರು.ಇದನ್ನೂ ಓದಿ: ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ

  • ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ

    ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ

    ಬೆಂಗಳೂರು: ದಯಾಮರಣಕ್ಕೆ ಕೋರಿ ಕಿಯೋನಿಕ್ಸ್ (Karnataka State Electronics Development Corporation Limited ) ವೆಂಡರ್ಸ್ ಅಸೋಸಿಯೇಶನ್‌ನವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.ಇದನ್ನೂ ಓದಿ: ಗವಿಗಂಗಾಧರೇಶ್ವರನ ಸೂರ್ಯಾಭಿಷೇಕಕ್ಕೆ ಅಡ್ಡಿಯಾದ ಮೋಡ

    ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ, ವೆಂಡರ್ಸ್‌ಗಳ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. 400 ರಿಂದ 500 ವೆಂಡರ್ಸ್‌ಗಳಿಗೆ ಬಿಲ್ ಪಾವತಿ ಬಾಕಿ ಇಡಲಾಗಿದೆ. ನಮ್ಮ ಕಷ್ಟವನ್ನು ಐಟಿ, ಬಿಟಿ ಮತ್ತು  ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಆಲಿಸುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಯಾರಾದರೂ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನಾಲ್ವರು ಕಾರಣ ಎಂದು ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ,  ಕಿಯೋನಿಕ್ಸ್ ಸಿಇಓ ಪವನ್ ಕುಮಾರ್, ಕಿಯೋನಿಕ್ಸ್ ಹಣಕಾಸು ವಿಭಾಗದ ನಿಶ್ಚಿತ್ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲದಿದ್ದರೆ ಸಾವಿರಾರು ಮಂದಿ ವೆಂಡರ್ಸ್‌ಗಳಿಗೆ ದಯಾಮರಣ ನೀಡಿ ಎಂದು ಪತ್ರ ಬರೆಯಲಾಗಿದೆ.ಇದನ್ನೂ ಓದಿ: ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

  • 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ

    6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ

    ಬೆಂಗಳೂರು: ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ಹೊಸಕೋಟೆ (Hoskote) ಶಾಸಕ ಶರತ್ ಬಚ್ಚೇಗೌಡ (Sharath Bache Gowda) ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತೀ ಹೆಚ್ಚು ಮತಗಳನ್ನು ಹೊಂದಿರುವ ಸಮುದಾಯವೆಂದರೆ ಅದು ಒಕ್ಕಲಿಗ (Vokkaliga) ಸಮುದಾಯ. ಈ ಸಮುದಾಯ 45 ಸಾವಿರ ಮತಗಳನ್ನು ಹೊಂದಿದೆ. ಹೀಗಾಗಿ ಈ ಮತಗಳನ್ನು ಗಟ್ಟಿಗೊಳಿಸುವ ಸಲುವಾಗಿ ಶಾಸಕ ಶರತ್ ಒಕ್ಕಲಿಗರ ಸಂಘಕ್ಕೆ 6 ಕೋಟಿ ರೂ. ಮೌಲ್ಯದ ಜಮೀನನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಇದನ್ನೂ ಓದಿ ಸಾವರ್ಕರ್, ಅಂಬೇಡ್ಕರ್ ಸಿದ್ಧಾಂತದ ನಡುವೆ ಚುನಾವಣೆ: ಬಿ.ಕೆ ಹರಿಪ್ರಸಾದ್

    ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶಾಸಕ ಶರತ್ ಭರವಸೆ ನೀಡಿದ್ದರು. ಇದೀಗ ನುಡಿದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯ ಸಂಘದ ಹೆಸರಿಗೆ ಬರೆದು ಕೊಟ್ಟಿದ್ದಾರೆ.

    ದಾನ ಮಾಡಿರುವ ಜಮೀನಿನಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.ಇದನ್ನೂ ಓದಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ- ಸುನಿಲ್‌ಗೆ ಮುತಾಲಿಕ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನರ್ಹರ ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಯಲ್ಲಿ ಮೊದಲ ಬಂಡಾಯ

    ಅನರ್ಹರ ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಯಲ್ಲಿ ಮೊದಲ ಬಂಡಾಯ

    – ಆರ್.ಅಶೋಕ್ ಎಚ್ಚರಿಕೆಯ ನಡುವೆ ಶರತ್ ಬಚ್ಚೇಗೌಡ ಸಂಘಟನೆ
    – ಸ್ವಾಭಿಮಾನಿ ಕಾರ್ಯಕರ್ತರ ಸಭೆ
    – ಗುರುವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ

    ಬೆಂಗಳೂರು: ಅನರ್ಹ ಶಾಸಕರ  ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಗೆ ಮೊದಲ ಬಂಡಾಯ ಎದ್ದಿದೆ. ಕಂದಾಯ ಸಚಿವ ಆರ್.ಅಶೋಕ್ ಖಡಕ್ ಎಚ್ಚರಿಕೆ ನಡುವೆಯೂ ಹೊಸಕೋಟೆಯ ಬಿಜೆಪಿ ಯುವ ನಾಯಕ ಶರತ್ ಬಚ್ಚೇಗೌಡ ಸಂಘಟನೆ ನಡೆಸಿದ್ದಾರೆ.

    ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಅವರ ಅಸಮಾಧಾನ ಸ್ಫೋಟಗೊಂಡಿದ್ದು, ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಶರತ್ ಬಚ್ಚೇಗೌಡ ಸ್ಪರ್ಧೆಗೆ ನಿಲ್ಲಲಿ: ಎಂಟಿಬಿ ಸವಾಲು

    ಹೊಸಕೋಟೆ ಬಳಿಯ ಉಪ್ಪಾರಹಳ್ಳಿ ಕರಗದಮ್ಮ ಪಾರ್ಟಿಹಾಲ್‍ನಲ್ಲಿ ಶರತ್ ಬಚ್ಚೇಗೌಡ ಅವರು ಇಂದು ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಭಾಗವಿಸಿ, ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ನಾಮಪತ್ರ ಸಲ್ಲಿಸಲು ಶರತ್ ಬಚ್ಚೇಗೌಡ ಸಕಲ ಸಿದ್ಧತೆ ನಡೆಸಿದ್ದಾರೆ.

    ಶರತ್ ಬಚ್ಚೇಗೌಡ ಅವರು ಈಗಾಗಲೇ ಕರಪತ್ರಗಳನ್ನು ಮುದ್ರಿಸಿ, ಸ್ವಾಭಿಮಾನಿ ಸಭೆಯಲ್ಲಿ ಹಂಚಿದ್ದಾರೆ. ‘ನನ್ನ ಪ್ರೀತಿಯ ಹೊಸಕೋಟೆ ಜನತೆಯ ನಿರ್ಧಾರದಂತೆ ಈ ಬಾರಿ ವಿಧಾನಸಭಾ ಚುನವಣೆಗೆ, ಹೊಸಕೋಟೆ ಸ್ವಾಭಿಮಾನದ ಉಳಿವಿಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನವೆಂಬರ್ 14ರಂದು ತಾಲೂಕಿನ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರ ಬಂಧುಗಳು ಆಗಮಿಸಿ ಆಶೀರ್ವದಿಸಬೇಕಾಗಿ ಕೋರುತ್ತಿದ್ದೇನೆ’ ಎಂದು ಶರತ್ ಕರಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಎಂಟಿಬಿ ನಾಗರಾಜ್ ಅವರು ಶರತ್ ಬಚ್ಚೇಗೌಡ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧನಾಗಿರುವೆ. ಬಿಜೆಪಿ ಟಿಕೆಟ್ ನನಗೆ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಫೈಟ್ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.