Tag: Sharanu Salagar

  • ಶರಣು ಸಲಗರ್ ದಾಳಿ – ಬಲಿಗೆ ಸಿದ್ಧವಾಗಿದ್ದ 40  ಗೋವುಗಳ ರಕ್ಷಣೆ

    ಶರಣು ಸಲಗರ್ ದಾಳಿ – ಬಲಿಗೆ ಸಿದ್ಧವಾಗಿದ್ದ 40 ಗೋವುಗಳ ರಕ್ಷಣೆ

    ಬೀದರ್: ಬಕ್ರೀದ್ ಹಬ್ಬ(Bakrid) ಹಿನ್ನೆಲೆಯಲ್ಲಿ ಬಲಿಗೆ ಸಿದ್ಧವಾಗಿದ್ದ 40ಕ್ಕೂ ಅಧಿಕ ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ್ (BJP MLA Sharanu Salagar) ರಕ್ಷಿಸಿದ್ದಾರೆ.

    ಬಸವಕಲ್ಯಾಣ ಪಟ್ಟಣದ ಮಹಿಬೂಬ್ ಗಲ್ಲಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶರಣು ಸಲಗರ್ ಇಂದು ಬೆಳಗ್ಗೆ ಶೆಡ್‌ ಮೇಲೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

    ದಾಳಿಯ ವೇಳೆ ಗೋಮಾಂಸ ಪತ್ತೆಯಾಗಿದೆ. ನಿಮ್ಮ ಕುಮ್ಮಕ್ಕಿನಿಂದಲೇ ಗೋವುಗಳ ಹತ್ಯೆ ನಡೆಯುತ್ತಿದೆ. ಧಮ್‌ ಇದ್ದರೆ ಇಲ್ಲಿಗೆ ಬಾರೋ ಎಂದು ಕಾಂಗ್ರೆಸ್‌ ಮುಖಂಡ ವಿಜಯ್ ಸಿಂಗ್‌ಗೆ ಸಲಗಾರ್‌ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್‌ ಸವಾರರು ಸಾವು

    ನಾನು ಇರುವವರೆಗೂ ಗೋವುಗಳ ಬಲಿ ಕೊಡಲು ಬಿಡಲ್ಲ. ಯಾರು ಯಾವುದಕ್ಕೆ ಭಯ ಪಡುವ ಅಗತ್ಯವಿಲ್ಲ. ಯಾರಿಗೂ ಹೆದರಿ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ.

  • ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್

    ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್

    ಬೀದರ್: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನ, ಮರ್ಯಾದೆ ಇದ್ರೆ ಕೂಡಲೇ ಮಂಜುನಾಥರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಶಾಸಕ ಶರಣು ಸಲಗರ್(Sharanu Salagar) ಕಿಡಿಕಾರಿದರು.

    ಬೀದರ್‌ನಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ರೈತರು, ಕೂಲಿ ಕಾರ್ಮಿಕರು ಎಲ್ಲರಿಗೂ ಸಂತೋಷವಿದೆ. ಉಗ್ರವಾದವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಆಪರೇಷನ್ ಸಿಂಧೂರ ಮಾಡಿದೆ ಎಂದರು. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅಬ್‌ನಾರ್ಮಲ್ ಪರ್ಸನ್, ಕಾಂಗ್ರೆಸ್ ಸಸ್ಪೆಂಡ್ ಮಾಡ್ಬೇಕು: ಎನ್.ಮಹೇಶ್ ಆಗ್ರಹ

    ಕಾಂಗ್ರೆಸ್ ಶಾಸಕರು ಮೂರ್ಖತನದ ಹೇಳಿಕೆ ಕೊಡುತ್ತಿದ್ದು, ಕಾಂಗ್ರೆಸ್‌ನ(Congress) ಮುಖವಾಡ ಕಳಚುತ್ತಿದೆ. ಇದು ಕೇವಲ ಶಾಸಕನ ಮಾತಲ್ಲ, ಇಡೀ ಕಾಂಗ್ರೆಸ್ ಪಕ್ಷದ ಹೇಳಿಕೆ. ಯಾಕಂದ್ರೆ, ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

    ಮುರ್ಖತನ, ದೇಶದ್ರೋಹದ ಹೇಳಿಕೆ ಕೊಟ್ಟಿರುವ ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಂತಹ ದೇಶದ್ರೋಹಿ ಶಾಸಕರನ್ನ ಅಧಿವೇಶನದೊಳಗೆ ಕಾಲಿಡಲು ಬಿಡಲ್ಲ ಎಂದು ಆಕ್ರೋಶ ಹೊರಹಾಕಿದರು.

    ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಚಾರವಾಗಿ ಮಾತನಾಡಿ, ಯುದ್ಧ ಮಾಡಬೇಕಾದ್ರೆ ಇವರೆಲ್ಲರಿಗೂ ಲೈವ್ ತೋರಿಸಿ ಯುದ್ಧ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆಯವರ ಹೇಳಿಕೆಯಲ್ಲ ಇಡೀ ಕಾಂಗ್ರೆಸ್ ಹೇಳಿಕೆಯಾಗಿದೆ. ಪ್ರಿಯಾಂಕ್ ಖರ್ಗೆಯವರಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಕೂಗೋ ಮನಸ್ಥಿತಿ ಇರೋರನ್ನ ಸಂಸತ್ ನಿಯೋಗದಲ್ಲಿ ಸೇರಿಸಬೇಕಾ: ಕರಂದ್ಲಾಜೆ

    ಇದು ಸಿಂಧೂರ ಅಷ್ಟೇ, ಕೆಲವೇ ದಿನಗಳಲ್ಲಿ ಆಪರೇಷನ್ ಸಂಹಾರ ಮಾಡಲಾಗುತ್ತದೆ. ನನಗೂ ಆದೇಶ ಬಂದ್ರೆ ಗನ್ ಹಿಡಿದು ಯುದ್ಧಕ್ಕೆ ಹೋಗ್ತೀನಿ. ನನಗೆ ಯಾವುದೇ ತರಬೇತಿ ಬೇಡ. ಅನುಮತಿ ಕೊಟ್ರೆ ಪಾಕಿಸ್ತಾನ ವಿರುದ್ಧ ಮುಗಿ ಬೀಳುತ್ತೇವೆ ಎಂದು ಹೇಳಿದರು.

  • ಯತ್ನಾಳ್ ನಡೆ ಜನರ ದಾರಿ ತಪ್ಪಿಸ್ತಿದೆ, ಅದಕ್ಕೆ ನಮಗೆ ಸೋಲಾಗಿದೆ: ಶರಣು ಸಲಗರ್

    ಯತ್ನಾಳ್ ನಡೆ ಜನರ ದಾರಿ ತಪ್ಪಿಸ್ತಿದೆ, ಅದಕ್ಕೆ ನಮಗೆ ಸೋಲಾಗಿದೆ: ಶರಣು ಸಲಗರ್

    – ಗ್ಯಾರಂಟಿ ನಿಲ್ಲಿಸ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್‍ಗೆ ಮತ!

    ಬೀದರ್: ಯತ್ನಾಳ್ ಅವರೇ ನಿಮ್ಮ ನಡೆ ಜನರ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿ ಉಪಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal ) ವಿರುದ್ಧ ಶಾಸಕ ಶರಣು ಸಲಗರ್ (Sharanu Salagar) ಕಿಡಿಕಾರಿದ್ದಾರೆ.

    ಬಸವ ಕಲ್ಯಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿವೈ ವಿಜಯೇಂದ್ರ ಟೀಂಗೆ ಅಪ್ಪ ಅಮ್ಮ ಇಲ್ಲಾ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ವಕ್ಫ್ ವಿರುದ್ಧದ ಹೋರಾಟ ಮಾಡುತ್ತಿರುವ ಯತ್ನಾಳ್ ಟೀಂ ಅನಾಥವಾಗಿದೆ. ಮಾಜಿ ಎಂಎಲ್ಸಿಗಳು, ಮಾಜಿ ಎಂಪಿಗಳು ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಟೀಂಗೆ ಸೇರಿಸಿಕೊಂಡಿದ್ದೀರಿ. ಈ ಟೀಂಗೆ ತಂದೆ, ತಾಯಿ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಟೀಂಗೆ ಒರಿಜಿನಲ್ ತಂದೆ ತಾಯಿ ಇದ್ದಾರೆ. ನಾವು ಮಾಡಿದ ಹೋರಾಟವನ್ನು ಅವರು ಮಾಡುತ್ತಿದ್ದಾರೆ. ಆ ಹೋರಾಟಕ್ಕೆ ನಾನು ಹೋಗಬೇಕಾ? ಬೇಡವೇ? ಎಂದು ನಮ್ಮ ಪಕ್ಷದ ಅಧ್ಯಕ್ಷರು ನಿರ್ಧರಿಸಬೇಕು ಎಂದು ವಿಜಯೇಂದ್ರ (B,Y Vijayendra) ಪರ ಬ್ಯಾಟ್ ಬೀಸಿದ್ದಾರೆ.

    ಇನ್ನೂ, ವಾಲ್ಮೀಕಿ ಹಗರಣ, ಮುಡಾ ಹಗರಣ ಆಗಿದ್ದೇ ಉಪ ಚುನಾವಣೆಯಲ್ಲಿ ಹಣ ಹಂಚಲು. ಹಗರಣದ ನೂರಾರು ಕೋಟಿ ರೂ. ಹಣವನ್ನು ಹೊಳೆಯಂತೆ ಹರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮೂರು ಕಡೆ ಗೆದ್ದಿದೆ. ಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಇದು ನಮ್ಮ ನಿಜವಾದ ಸೋಲಲ್ಲ ಹಗರಣಗಳು ಮಾಡಿ ಜನರಿಗೆ ಆಮಿಷ ತೋರಿಸಿದ್ದರಿಂದ ಸೋಲಾಗಿದೆ. ಮತ ಹಾಕದೇ ಇದ್ರೆ ಗ್ಯಾರಂಟಿ ಬಂದ್ ಮಾಡುತ್ತೇವೆ ಎಂದು ಹೇಳಿದ ಪರಿಣಾಮ ಜನ ಮತ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದೇ ವೇಳೆ, ಮೂರು ಕ್ಷೇತ್ರದ ಮತದಾರರಿಗೆ ನಾವು ಕಾಂಗ್ರೆಸ್ ಸರ್ಕಾರ ಮಾಡಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿಸಲು ವಿಫಲರಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

  • ಲಂಚಕ್ಕೆ ಶಾಸಕರ ಪ್ರೋತ್ಸಾಹ? – ಶರಣು ಸಲಗರ್ ಆಡಿಯೋ ವೈರಲ್

    ಲಂಚಕ್ಕೆ ಶಾಸಕರ ಪ್ರೋತ್ಸಾಹ? – ಶರಣು ಸಲಗರ್ ಆಡಿಯೋ ವೈರಲ್

    ಬೀದರ್: ಲೋಕೋಪಯೋಗಿ ಇಲಾಖೆ ಎಫ್‍ಡಿಎಗೆ ಕರೆ ಮಾಡಿ ಹತ್ತು ಸಾವಿರ ರೂ. ಲಂಚ ಪಡೆದು ನಮ್ಮವರ ಕೆಲಸ ಮಾಡಿಕೊಡಿ ಎಂದ ಶಾಸಕ ಶರಣು ಸಲಗರ್‌ (Sharanu Salagar) ಫೋನ್ ಕರೆಯ ಆಡಿಯೋ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಶಾಸಕ ಸಲಗರ್ ಲೋಕೋಪಯೋಗಿ ಇಲಾಖೆ ಎಫ್‍ಡಿಎ ವೆಂಕಟರಾವ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಲೆಕ್ಕಪತ್ರ ಶಾಖೆಯ ವೆಂಕಟರಾವ್ ಎಂದು ಎಫ್‍ಡಿಎ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಶಾಸಕರು, 10 ಸಾವಿರ ರೂ. ತೆಗೆದುಕೊಂಡು ಕೆಲಸ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಪ್ಪ-ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ

    ಹೆಚ್ಚಿಗೆ ತೆಗೆದುಕೊಳ್ಳುವುದು ಬೇಡ, ಕಡಿಮೆ ತೆಗೆದುಕೊಳ್ಳುವುದು ಬೇಡ. ಅವರಿಗೆ ತೊಂದರೆ ಕೊಡುವುದೂ ಬೇಡ ಎಂದಿದ್ದಾರೆ. ಅಲ್ಲದೇ ಇದು ನಡೆಯದಿದ್ದರೆ ನಾನೇ ಅಲ್ಲಿಗೆ ಬರಬೇಕಾಗುತ್ತದೆ ಎಂದು ಅಧಿಕಾರಿಗೆ ಶಾಸಕ ಎಚ್ಚರಿಕೆ ನೀಡಿದ್ದಾರೆ. ಇದಿಷ್ಟು ವೈರಲ್ ಆಗಿರುವ ಆಡಿಯೋದಲ್ಲಿ ಇದೆ.

    ಶಾಸಕರ ಕರೆಯ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಫುಡ್ ಇಂಡಸ್ಟ್ರಿಗಳ ಮೇಲೆ ಐಟಿ ದಾಳಿ

  • ಗೋಹತ್ಯೆ ತಡೆಯಲು ಹೋಗಿದ್ದ ಶಾಸಕರ ವಿರುದ್ಧ FIR ದಾಖಲು

    ಗೋಹತ್ಯೆ ತಡೆಯಲು ಹೋಗಿದ್ದ ಶಾಸಕರ ವಿರುದ್ಧ FIR ದಾಖಲು

    ಬೀದರ್: ಗೋ ಹತ್ಯೆ ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಗುರುವಾರ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್ ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ (Basavakalyan Police Station) ಎಫ್‌ಐಆರ್ ದಾಖಲಾಗಿದೆ.

    ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಜುಲೈ 1 ರಂದು ಮನೆಯಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಕರೆ ಬಂದಾಗ ಅದನ್ನು ತಡೆಲು ಶಾಸಕರು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಮನೆಯ ಮಾಲೀಕ ಶಾಸಕರನ್ನು ಒಳಗಡೆ ಬಿಡದಿದ್ದಕ್ಕೆ ಇಬ್ಬರ ಮಧ್ಯೆ ಕಿರಿಕ್ ಆಗಿತ್ತು. ಅಂದು ಶಾಸಕ ಶರಣು ಸಲಗರ್ ನೀಡಿದ ದೂರಿನ್ವಯ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಶಾಸಕ ಸಲಗರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಮನೆಯ ಮಾಲೀಕನ ಮಗ ದೂರು ನೀಡಿದ್ದಾರೆ. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    – ಸೋಶಿಯಲ್ ಮೀಡಿಯಾದಲ್ಲಿ ಭುಗಿಲೆದ್ದ ಆಕ್ರೋಶ

    ಬೀದರ್: ಬಿಜೆಪಿ ಶಾಸಕ (BJP MLA) ರೊಬ್ಬರು ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಶ್ರೀರಾಮನ ನವಮಿಯಂದು ಬಿಜೆಪಿ ಶಾಸಕ ಮಾಡಿಕೊಂಡಿರುವ ಎಡವಟ್ಟಿನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಶಾಸಕರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮ(Shri Rama) ನಿಗೆ ಅವಮಾನ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟಿದೆ.

    ಬಸವಕಲ್ಯಾಣದಲ್ಲಿ ನಡೆದ ಶ್ರೀರಾಮನ ಶೋಭಾಯಾತ್ರೆ ವೇಳೆ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಅವರು ಶ್ರೀರಾಮನ ಎಡಗಡೆಯ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯವನ್ನು ನೆರೆದಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಶಾಸಕರ ನಡೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

    ಒಟ್ಟಿನಲ್ಲಿ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಎಡವಟ್ಟು ಮಾಡಿಕೊಂಡ ಶಾಸಕರ ವಿರುದ್ಧ ಶ್ರೀರಾಮನ ಭಕ್ತ ಅಸಮಾಧಾನ ಹೊರಹಾಕಿದ್ದು, ಬಸವಕಲ್ಯಾಣವನ್ನು ಬಿಡದ ಶಾಸಕರು ಶ್ರೀರಾಮನನ್ನು ಬಿಟ್ಟಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

  • ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

    ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

    ಬೀದರ್: ಕಾಂಗ್ರೆಸ್ (Congress) ನಾಯಕ ಬಾಬು ಹೊನ್ನಾ (Babu Honna Naik) ಮಾತಿಗೆ ತೀವ್ರ ಅಸಮಾಧಾನಗೊಂಡು ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಸಭೆ ಮಧ್ಯದಿಂದಲೇ ಹೊರಟು ಹೋದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾಮೂನಾಯಕ್ ತಾಂಡದಲ್ಲಿ ನಡೆದಿದೆ.

    ನೀವು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ನಿಮ್ಮ ಸಲುವಾಗಿ ನಾವು ಸಹೋದರರು ಜಗಳವಾಡುತ್ತಿದ್ದೇವೆ. ಇಂತಹ ಸಂಸ್ಕೃತಿಯನ್ನು ಯಾವ ಶಾಸಕರೂ ಮಾಡಿಲ್ಲ. ಈ ರೀತಿ ಮಾಡುವುದು ತಪ್ಪು ಶಾಸಕರೇ ಎಂದು ಬಾಬು ಹೊನ್ನಾ ನಾಯಕ ಕಿಡಿಕಾರಿದ್ದರು. ಇದನ್ನೂ ಓದಿ: ಡಿಕೆಶಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಹಿಂದಿದೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್!

    ನಾಯಕನ ಮಾತಿನಿಂದ ಅಸಮಾಧಾನಗೊಂಡ ಶಾಸಕರು ವೇದಿಕೆಯಿಂದ ಇಳಿದು ಹೊರಟು ಹೋದರು. ಈ ವೇಳೆ ಈ ಬಾರಿ ಶಾಸಕರು ಹೋಗುವವರಿದ್ದಾರೆ. ಹೋಗಲಿ ಬಿಡಿ, ಇಂತಹವರು ಏನು ಮಾಡುತ್ತಾರೆ ಎಂದು ಬಾಬು ಹೊನ್ನಾ ನಾಯಕ ಶಾಸಕರಿಗೆ ಟಾಂಗ್ ನೀಡಿದರು.

    ಹಾಮೂ ನಾಯಕ ತಾಂಡದಲ್ಲಿ ನಡೆದ ಹಾಮೂಲಾಲ್ ಜಾತ್ರಾ ಮಹೋತ್ಸವ ಧರ್ಮ ಸಭೆಯಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾಂಗ್ರೆಸ್ ನಾಯಕಿ ಮಾಲಾ ಬಿ ನಾರಾಯಣರಾವ್ ಸೇರಿದಂತೆ ವಿವಿಧ ಸ್ವಾಮೀಜಿಗಳು ಹಾಗೂ ಸಾವಿರಾರು ಜನರು ಭಾಗಿಯಾಗಿದ್ದರು. ಇದನ್ನೂ ಓದಿ: ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಾಸಕ ಶರಣು ಸಲಗಾರ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

    ಶಾಸಕ ಶರಣು ಸಲಗಾರ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

    ಬೀದರ್: ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ವೇಳೆ ನೃತ್ಯಗಾರರ ಜೊತೆ ಸೇರಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಭರ್ಜರಿ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಶುಕ್ರವಾರದಂದು ನಗರದ ಬಸವಕಲ್ಯಾಣ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಯಾದ ಡ್ಯಾನ್ಸ್ ಕ್ರೇಜಿ ಅಕಾಡೆಮಿ ಉದ್ಘಾಟನೆಯಲ್ಲಿ ಡಾನ್ಸ್ ಮಾಡಿದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್‌ನ ಟ್ರಂಕ್‌ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್

    ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾದ ಬಸವಕಲ್ಯಾಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನಾರಾಯಣ ರಾವ್ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸಿದ್ದ ನಾರಾಯಣ ರಾವ್ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟರು. ಈ ಹಿನ್ನಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಾಲಾ ಅವರ ವಿರುದ್ಧ ಬಿಜೆಪಿ ಪರ ನಿಂತು ಭರ್ಜರಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

  • ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಶರಣು ಸಲಗಾರ್, ಬಸವನಗೌಡ ತುರುವಿಹಾಳ್

    ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಶರಣು ಸಲಗಾರ್, ಬಸವನಗೌಡ ತುರುವಿಹಾಳ್

    ಬೆಂಗಳೂರು: ಕಳೆದ ಏಪ್ರಿಲ್ 17 ರಂದು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮಕ್ಷದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಬಸವಕಲ್ಯಾಣ ಕ್ಷೇತ್ರದಿಂದ ಚುನಾಯಿತರಾದ ಬಿಜೆಪಿಯ ಶರಣು ಸಲಗಾರ್ ಹಾಗೂ ಮಸ್ಕಿ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಬಸವನಗೌಡ ತುರುವಿಹಾಳ್ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

    ಬಸವಕಲ್ಯಾಣದಿಂದ ಆಯ್ಕೆಯಾದ ಶರಣು ಸಲಗಾರ್, ಬಸವಣ್ಣ ಹಾಗೂ ಕ್ಷೇತ್ರದ ಪ್ರಜೆಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಮಸ್ಕಿಯಿಂದ ಆಯ್ಕೆಯಾದ ಬಸವನಗೌಡ ತುರುವಿಹಾಳ್ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

    ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವಕುಮಾರ್, ಸಚಿವ ಪ್ರಭು ಚೌಹಾಣ್, ಕಾಂಗ್ರೆಸ್ ಸಚೇತಕ ಡಾ.ಅಜಯ ಸಿಂಗ್, ಬೀದರ್ ಸಂಸದ ಭಗವಂತ ಕೂಬಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಮಾಣವಚನ ಸಮಾರಂಭಕ್ಕೆ ಸ್ಪೀಕರ್, ಡಿಸಿಎಂ ಸೇರಿದಂತೆ ಹಲವು ಗಣ್ಯರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ್ದರೂ, ಪ್ರಮಾಣವಚನ ಸ್ವೀಕರಿಸಬೇಕಾದ ಅಭ್ಯರ್ಥಿಗಳೇ ತಡವಾಗಿ ಆಗಮಿಸಿದರು. ಇಬ್ಬರು ಶಾಸಕರು 10 ನಿಮಿಷ ತಡವಾಗಿ ಆಗಮಿಸಿದ ಹಿನ್ವೆಲೆಯಲ್ಲಿ ಸಮಾರಂಭ ಸ್ವಲ್ಪ ತಡವಾಯಿತು.

  • ಕಾಂಗ್ರೆಸ್‍ಗೆ ಮುಖಭಂಗ – ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಕಾಂಗ್ರೆಸ್‍ಗೆ ಮುಖಭಂಗ – ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಬೀದರ್: ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಅವರು ಬಸವಕಲ್ಯಾಣದಿಂದ 20,629 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದು, ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ

    ಬಿಜೆಪಿ 71,012 ಮತಗಳನ್ನು ಪಡೆದರೆ ಕಾಂಗ್ರೆಸ್ 50,383 ಮತ, ಜೆಡಿಎಸ್ 11,402 ಮತಗಳನ್ನು ಪಡೆದಿದೆ. ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ವಿಸೋಮಣ್ಣ ಹಾಗೂ ಸಂಸದ ಭಗವಂತ್ ಖೂಬಾ ಈ ಚುನಾವಣೆಗೆ ರಣತಂತ್ರ ಹೆಣೆದಿದ್ದರು.

    2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಿ ನಾರಾಯಣ ರಾವ್ ಈ ಕ್ಷೇತ್ರದಿಂದ ಗೆದ್ದಿದ್ದರು. ಕಾಂಗ್ರೆಸ್ 61,425 ಮತಗಳನ್ನು ಪಡೆದರೆ ಬಿಜೆಪಿ 44,153 ಮತಗಳನ್ನು ಪಡೆದಿತ್ತು.

    ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಬಸವಕಲ್ಯಾಣ ಉಪಚುನಾವಣೆಯಲ್ಲಿ ಸುಸ್ಪಷ್ಟ ಜನಾದೇಶದೊಂದಿಗೆ ಗೆಲುವು ಸಾಧಿಸಿರುವ ಶರಣು ಸಲಗಾರ ಅವರಿಗೆ ಅಭಿನಂದನೆಗಳು. ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಶ್ರೀ ನಳೀನ್ ಕುಮಾರ್ ಕಟೀಲ್ ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.