Tag: sharanappa darshanapura

  • ಮೂವರು DCM ಸೃಷ್ಠಿ- ರಾಜಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ ಅಂದ್ರು ಶರಣಪ್ಪ

    ಮೂವರು DCM ಸೃಷ್ಠಿ- ರಾಜಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ ಅಂದ್ರು ಶರಣಪ್ಪ

    ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ (Congress Govt) 3 ಡಿಸಿಎಂ ಸ್ಥಾನದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

    ರಾಜ್ಯದಲ್ಲಿ 3 ಡಿಸಿಎಂ ಹುದ್ದೆ ಸೃಷ್ಠಿ ಮಾಡಿದ್ರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha Election) ಗೆಲುವು ಸುಲಭವಾಗುತ್ತದೆ ಎನ್ನುವುದು ಸಚಿವ ಕೆ. ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ (Yadagiri) ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದ್ದಾರೆ. ಯಾರನ್ನು ಡಿಸಿಎಂ ಮಾಡಬೇಕು ಎನ್ನುವ ಕುರಿತು ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

    ಎಲ್ಲಾ ಸಮಾಜದಲ್ಲಿ ಕೇಳೋರು ಇರ್ತಾರೆ ಅದು ತಪ್ಪಲ್ಲ. ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದೆ. ಎಲ್ಲಾ ಸಮಾಜದಮರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುತ್ತೆ. ಆದರೆ ಸಿಎಂ ಸ್ಥಾನ ಒಂದು ಮಾತ್ರ ಇರೋದು ಅದು ಭರ್ತಿಯಾಗಿದೆ. ಒಂದು ಸಮಾಜಕ್ಕೆ ಡಿಸಿಎಂ ಸ್ಥಾನ ಕೊಟ್ರೆ ನಾವು ಲೋಕ ಸಭೆ ಚುನಾವಣೆ ಗೆಲ್ಲೋಕಾಗಲ್ಲ, ಎಲ್ಲ ಸಮಾಜದವರು ಮನಸ್ಸು ಮಾಡಿದ್ರೆ ಮಾತ್ರ ಗೆಲ್ಲುಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹರಿಪ್ರಸಾದ್ ಹೇಳಿಕೆಯಿಂದ ಪಕ್ಷಕ್ಕೆ ಇರಿಸು ಮುರಿಸು: ಟಿ.ಬಿ ಜಯಚಂದ್ರ

    ಕೆ. ರಾಜಣ್ಣ ಹೇಳಿದ್ದರಲ್ಲಿ ತಪ್ಪೇನಿಲ್ಲ, ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಮೊದಲೆಲ್ಲ ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಠಿಯಾಗಿದ್ದು, ಕಣ್ಣಮುಂದೆ ಇದೆ. ಎಲ್ಲಾ ಶಾಸಕರ ಅಭಿಪ್ರಾಯ ಪಡೆದು, ಈಗಾಗಲೇ ನಮ್ಮ ನಾಯಕರು ಡಿಸಿಎಂ ಹುದ್ದೆಯನ್ನು ಸೃಷ್ಠಿ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಮೇಲೆ ರಾಜ್ಯಕ್ಕೆ ಎಲ್ಲ ಒಳ್ಳೆಯದು ಆಗಿದೆ ಎಂದು ಸಿಎಂ ಪರ ಸಚಿವ ದರ್ಶನಾಪುರ ಬ್ಯಾಟ್ ಬೀಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಯಾದಗಿರಿ: ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ತ್ರಿಪುರ ಸುಂದರ ಅಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ (Sharanappa Darshanapura) ಲೇವಡಿ ಮಾಡಿದ್ದಾರೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮೈ ಬಣ್ಣದ ಬಗ್ಗೆ ಟೀಕೆ ಮಾಡಿರುವ ವಿಚಾರಕ್ಕೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಆರಗ ಜ್ಞಾನೇಂದ್ರ ಅವನೇನು ಪರಿಪೂರ್ಣ, ತ್ರಿಪುರ ಸುಂದರ ಅಲ್ಲ ಅಂತಾ ಏಕವಚನದಲ್ಲಿಯೇ ಲೇವಡಿ ಮಾಡಿದ್ರು.

    ಬೇರೆ ದೇಶದಲ್ಲಿ ಇಂತಹ ವರ್ಣಬೇಧ ನೀತಿ ನಡಿಯುತ್ತೆ. ಆದರೆ ಭಾರತ ದೇಶದಲ್ಲಿ ನಾವು ಹೆಂಗೆ ಇರುತ್ತೀವಿ ಹಂಗೆ ಇರುತ್ತೇವೆ ಅಂತಾ ತಿರುಗೇಟು ನೀಡಿದ ಅವರು, ನಾವು ಇದೇ ಕಲರ್ ಬೇಕು ಅಂತಾ ಅರ್ಜಿ ಹಾಕಿ ಹುಟ್ಟಿ ಬಂದಿರೋದಿಲ್ಲ. ಅವರ ಬಗ್ಗೆ ಮಾತಾಡಿದ್ರೆ ಜಾಸ್ತಿನೇ ಆಗುತ್ತೆ ಅಂತಾ ಕೌಂಟರ್ ಕೊಟ್ರು. ಇದನ್ನೂ ಓದಿ: ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು – ಪ್ರಿಯಾಂಕ್‌ ಖರ್ಗೆ ತಿರುಗೇಟು

    ಇದೇ ವೇಳೆ ಬಿಜೆಪಿ (BJP) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ಬಿಜೆಪಿ ಅವರಿಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ನಾವು ಕೇವಲ 15 ದಿನಗಳಲ್ಲಿ ಮಂತ್ರಿ ಮಂಡಲ ರಚನೆ ಮಾಡಿ, ನೀಡಿದ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದೇವೆ. ಹಾಗಾಗಿ ಬಿಜೆಪಿಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗದೇ ಹತಾಶಾರಾಗಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂತಾ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]