Tag: Sharan Prakash Patil

  • ಆಟ ಆಡೋ ಮಕ್ಕಳೆಲ್ಲ ಮದ್ಯ ವ್ಯಸನಿಗಳಾಗಿದ್ದಾರೆ, ಬಾರ್ ಬಂದ್ ಮಾಡ್ಸಿ – ಸಚಿವರ ಬಳಿ ಮಹಿಳೆಯ ಅಳಲು

    ಆಟ ಆಡೋ ಮಕ್ಕಳೆಲ್ಲ ಮದ್ಯ ವ್ಯಸನಿಗಳಾಗಿದ್ದಾರೆ, ಬಾರ್ ಬಂದ್ ಮಾಡ್ಸಿ – ಸಚಿವರ ಬಳಿ ಮಹಿಳೆಯ ಅಳಲು

    ಚಿಕ್ಕಮಗಳೂರು: ಆಟ ಆಡೋ ಮಕ್ಕಳೆಲ್ಲ ಬಾರ್‌ಗೆ ಹೋಗ್ತಿದ್ದಾರೆ ಸರ್. ಬದುಕಿ-ಬಾಳಬೇಕಾದ ಮಕ್ಕಳೆಲ್ಲಾ ಕುಡಿದು ಸಾಯ್ತಿದ್ದಾರೆ. ದಯವಿಟ್ಟು ನಮ್ಮೂರಲ್ಲಿರೋ ಬಾರ್ ಬಂದ್ ಮಾಡ್ಸಿ ಸರ್ ಎಂದು ಮಹಿಳೆಯೊಬ್ಬರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಅವರಿಗೆ ಮನವಿ ಮಾಡಿದ್ದಾರೆ.

    ನಗರದ ಹೊರಹೊಲಯದಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿಗೆ ಸಚಿವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಮರ್ಲೆ ಗ್ರಾಮದ ಮೂಲಕ ಮರಳಿ ಹೋಗುವ ವೇಳೆ ಮಹಿಳೆಯೊಬ್ಬರು ಅವರ ಬಳಿ ಈ ಮನವಿ ಮಾಡಿದ್ದಾರೆ. ನಮ್ಮೂರಲ್ಲಿ ಕದ್ದು- ಮುಚ್ಚಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತುಂಬಾ ಕಷ್ಟವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕುಡಿದು ಸತ್ತು ಹೋಗ್ತಿದ್ದಾರೆ ಎಂದು ಮಹಿಳೆ ಕೈ ಮುಗಿದು ಸಚಿವರ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿ ಬಂದ ಜನ!

    ಊರಲ್ಲಿ ಮಕ್ಕಳೆಲ್ಲಾ ಮದ್ಯ ವ್ಯಸನಿಗಳಾಗಿದ್ದಾರೆ. ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವೈನ್ ಶಾಪ್ ಬಂದ್ ಮಾಡಿಸಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಎದುರು ಹೇಳಿಕೊಂಡಿದ್ದೇವೆ. ನಮ್ಮ ಊರಿಗೆ ಬಾರ್ & ರೆಸ್ಟೋರೆಂಟ್ ಬೇಡ ಎಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದೆ. ಇಷ್ಟಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರ ಮುಂದೆ ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ – ಇಬ್ಬರು ಯೋಧರು ಹುತಾತ್ಮ

  • ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್

    ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್

    -ವೈದ್ಯಕೀಯ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಉಪಕರಣ ಖರೀದಿಗೆ ಅನುದಾನ

    ಬೆಂಗಳೂರು: ಹಲವು ದಿನಗಳ ಬೇಡಿಕೆಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇನ್ನಷ್ಟು ದಕ್ಷತೆ ತರುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು (Directorate of Medical Education) ಆಯುಕ್ತಾಲಯವನ್ನಾಗಿ ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿರುವುದಕ್ಕೆ ವೈದ್ಯಕೀಯ ಶಿಕ್ಷಣ ಜೀವನೋಪಾಯ ಹಾಗೂ ಕೌಶಲ್ಯಾಭಿವೃಧಿ ಮತ್ತು ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharan Prakash Patil) ಅಭಿನಂದನೆ ಸಲ್ಲಿಸಿದ್ದಾರೆ.

    ವೈದ್ಯಕೀಯ ಶಿಕ್ಷಣ ಕ್ಷೇತ್ರವು ಸರ್ಕಾರಿ ವಲಯವೆಂದು ವ್ಯಾಪಕ ಬೆಳವಣಿಗೆ ಹೊಂದಿದ್ದು, ಇಲಾಖೆ ಕಾರ್ಯ ನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ ತರುವ ಕಾರಣಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಪ್ರಥಮ- ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ: ಸಿಎಂ ಘೋಷಣೆ

    ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗಾಗಿ 400 ಕೋಟಿ ರೂ. ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 350 ಕೋಟಿ ರೂ, ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ ನೆಪ್ರೊ ಯೂರಾಲಜಿ ಆಸ್ಪತ್ರೆ, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಪಾಟೀಲ್ ಹೇಳಿದ್ದಾರೆ.

    ಕಲಬುರಗಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು ಇವರ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ. ಗದಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ 150 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

    ಬೆಂಗಳೂರಿನ ನೆಪ್ರೊ ಯೂರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ರೋಬೊಟಿಕ್ ಯಂತ್ರದ ಮೂಲಕ ಉತ್ತಮ ಚಿಕಿತ್ಸೆ ನೀಡಲು ಕ್ರಮ. ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡೂಲರ್ ಓಟಿಗಳನ್ನು 177 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.

    ಗದಗ ವೈದ್ಯಕೀಯ ಸಂಸ್ಥೆಯಲ್ಲಿ ಕ್ಯಾಥ್ಲಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯೂನಿಟ್ ಪ್ರಾರಂಭ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ 64 ಅನೇಸ್ತೇಷಿಯಾ ವರ್ಕ್ ಸ್ಟೇಷನ್‍ಗಳನ್ನು 34 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಅಳವಡಿಕೆ, ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್‍ಗಳನ್ನು ಇನ್ನು ಮುಂದೆ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ ಎಂದು ಪಾಟೀಲ್ ಹೇಳಿದ್ದಾರೆ.

    ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗ, ಸೋಂಕುಗಳನ್ನು ಪತ್ತೆ ಹಚ್ಚಲು ವೈರಲ್ ರಿಸರ್ಚ್ ಮತ್ತು ಡಯಾಗ್ನಸ್ಟಿಕ್ ಲ್ಯಾಬರೋಟರಿ ನಿರ್ಮಾಣ, ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಹೊಸ ವೈದ್ಯಕೀಯ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ, ವಸತಿ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.

    ಇನ್ನು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಶತಮಾನೋತ್ಸವದ ನೆನಪಿಗಾಗಿ ಕೆ.ಆರ್ ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ  ದೇವನಹಳ್ಳಿಗೆ ಮೆಟ್ರೋ ರೈಲು!

  • ಜ.12 ಕ್ಕೆ ಯುವ‌ನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್

    ಜ.12 ಕ್ಕೆ ಯುವ‌ನಿಧಿ ಹಣ ವರ್ಗಾವಣೆ; ಡಿ.26 ರಿಂದ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್

    ಬೆಂಗಳೂರು: ಡಿ.26 ರಂದು ಯುವನಿಧಿ (Yuvanidhi) ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharan Prakash Patil) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಸೆಂಬರ್ 26 ರಂದು ಸಿಎಂ ಸಿದ್ದರಾಮಯ್ಯ ಯುವನಿಧಿ ಗ್ಯಾರಂಟಿ ಕಾರ್ಯಕ್ರಮದ ಲೋಗೋ ಅನಾವರಣ ಮಾಡಲಿದ್ದಾರೆ. ಪದವಿ ಮುಗಿಸಿದವರಿಗೆ 3,000 ರೂ., ಡಿಪ್ಲೊಮಾ ಮಾಡಿದವರಿಗೆ 2,000 ರೂ. ನಿರುದ್ಯೋಗ ಭತ್ಯೆ ನೀಡಲಿದ್ದೇವೆ. ಯುವನಿಧಿ ಕಾರ್ಯಕ್ರಮ ವಿಳಂಬ ಆಗಿಲ್ಲ. ಪದವಿ ಮುಗಿಸಿ ಆರು ತಿಂಗಳ ನಂತರ ಈ ಯೋಜನೆಯನ್ನು ಪಲಾನುಭವಿಗಳಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀರಶೈವ ಸಮಾವೇಶಕ್ಕೆ ಸಚಿವ ಎಂ.ಬಿ. ಪಾಟೀಲ್ ಸಿಡಿಮಿಡಿ

    ಅಂದಹಾಗೆ ರಾಜ್ಯದಲ್ಲಿ ಯುವನಿಧಿ ಯೋಜನೆಗೆ ಅಂದಾಜು 5,29,153 ಫಲಾನುಭವಿಗಳನ್ನ ಗುರುತಿಸಲಾಗಿದ್ದು, 4,81,000 ಪದವೀಧರರು, 48,153 ಡಿಪ್ಲೊಮಾ ತೇರ್ಗಡೆಯಾದವರು ಇದ್ದಾರೆ. 2023-24 ರಲ್ಲಿ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಲ್ಲದೆ ಈ ಯೋಜನೆಯ ಫಲಾನುಭವಿಗಳಾಗಲು ಕನ್ನಡಿಗರಾಗಿರಬೇಕು. ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಮಾಹಿತಿ ನೀಡಿದ್ದಾರೆ.

    ಸೇವಾಸಿಂಧು ಪೋರ್ಟಲ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗಿ ಸ್ಥಿತಿಯ ಬಗ್ಗೆ ಮಾಹಿತಿಯನ್ನ ಆಧಾರ್ ಓಟಿಪಿ ಮೂಲಕ ಸ್ವಯಂ ಘೋಷಣೆ ಮಾಡಬೇಕು. ಅರ್ಹ ಅಭ್ಯರ್ಥಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ‌ ಸುರೇಶ್

    ಅಭ್ಯರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್ ಬಾಪೂಜಿ ಸೇವಾ ಕೇಂದ್ರಗಳು. ಗ್ರಾಮ ಒನ್ ಕೇಂದ್ರಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದು. ಪೋರ್ಟಲ್‌ನಲ್ಲಿ ಸಂಬಂಧಿಸಿದ ಎಲ್ಲಾ ದಾಖಲೆ ಸಲ್ಲಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಸಿಇಟಿ ಸಂಖ್ಯೆ, ರೇಷನ್ ಕಾರ್ಡ್, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.

  • ಅಕ್ರಮವಾಗಿ ಹಣ ಸಂಪಾದಿಸಲು ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಸೂಚನೆ: ಶರಣಪ್ರಕಾಶ್‌

    ಅಕ್ರಮವಾಗಿ ಹಣ ಸಂಪಾದಿಸಲು ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಸೂಚನೆ: ಶರಣಪ್ರಕಾಶ್‌

    ಕಲಬುರಗಿ: ಅಕ್ರಮ ದಾರಿ ಮೂಲಕ ಹಣ ಸಂಪಾದಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರಿಗೆ ಸ್ವತಃ ಸರ್ಕಾರ ಹೇಳಿಕೊಟ್ಟಿದೆ ಎಂದು ಮಾಜಿ ಸಚಿವರಾದ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಶರಣಪ್ರಕಾಶ್‌ ಪಾಟೀಲ್ ಆರೋಪ ಮಾಡಿದರು.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು. ದಿವ್ಯಾ ಹಾಗರಗಿ ಬಿಜೆಪಿ ಮಾಜಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. ದಿಶಾ ಸಮಿತಿ ಸದಸ್ಯರಿದ್ದಾರೆ. ಜೊತೆಗೆ ಕರ್ನಾಟಕ ನಸಿರ್ಂಗ್ ಕೌನ್ಸಿಲ್ ಸದಸ್ಯರಿದ್ದಾರೆ. ಇಷ್ಟಿದ್ದರೂ ಸಹ ಹಗರಣ ಹೊರಬರುತ್ತಿದ್ದಂತೆ ದಿವ್ಯಾಗೂ ಬಿಜೆಪಿಗೂ ಸಂಬಂಧವಿಲ್ಲ ಅಂತಿದ್ದಾರೆ. ದಿವ್ಯಾ ಹಾಗರಗಿ ಮಾತ್ರವಲ್ಲ ಹಗರಣದಲ್ಲಿ ಇನ್ನೂ ಹಲವು ಬಿಜೆಪಿ ನಾಯಕರಿದ್ದಾರೆ ಎಂದು ದೂರಿದರು.

    ದಿವ್ಯಾ ಹಾಗರಗಿ ಅವರಿಗೆ ಸೇರಿದ ಜ್ಞಾನಜ್ಯೋತಿ ಶಾಲೆಗೆ ಯಾವ ಮಾನದಂಡದ ಮೇಲೆ ಪರೀಕ್ಷಾ ಕೇಂದ್ರವಾಗಿಸಲಾಗಿತ್ತು. ಕೆಲ ನಾಯಕರು ಒತ್ತಡ ಹಾಕುವ ಮುಖಾಂತರ ಪರೀಕ್ಷಾ ಕೇಂದ್ರ ಮಾಡಲಾಗಿದೆ. ಈ ಕೇಂದ್ರದ ಎಲ್ಲಾ ಅಭ್ಯರ್ಥಿಗಳ ಒಎಮ್‍ಆರ್ ಶೀಟ್ ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿಯನ್ನು ಬೈದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವುದು ಮುರ್ಖತನ: ಬಿಸಿ ಪಾಟೀಲ್

    ಪಿಎಸ್‍ಐ ನೇಮಕಾತಿ ಹಗಣರವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕುವ ಯತ್ನ ಮಾಡುತ್ತಿದೆ. ಪ್ರಕರಣವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮೂಲಕ ಸೂಕ್ತ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ

  • ಬೇರೊಬ್ಬರ ಬಿಡಿಎ ಸೈಟ್ ಮೇಲೆ ಸಚಿವರ ಕಣ್ಣು – ಅಧಿಕಾರ ಬಳಸಿ ಶರಣ್‍ಪ್ರಕಾಶ್ ಪಾಟೀಲ್ ದರ್ಪ

    ಬೇರೊಬ್ಬರ ಬಿಡಿಎ ಸೈಟ್ ಮೇಲೆ ಸಚಿವರ ಕಣ್ಣು – ಅಧಿಕಾರ ಬಳಸಿ ಶರಣ್‍ಪ್ರಕಾಶ್ ಪಾಟೀಲ್ ದರ್ಪ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಯಾರದ್ದೋ ಬಿಡಿಎ ಸೈಟನ್ನ ನನಗೆ ಕೊಡಿ ಅಂತಿದ್ದಾರೆ. 30/40 ಬೇಡ 50/80 ಸೈಟು ಕೊಡಿ ಅಂತ ದುಂಬಾಲು ಬಿದ್ದಿದ್ದಾರೆ.

    ಬೆಂಗಳೂರಿನ ಹೆಚ್‍ಬಿಆರ್ ಲೇಔಟ್‍ನ 1ನೇ ಹಂತದಲ್ಲಿ ಸಚಿವರಿಗೆ 40/60 ಸೈಟ್ ಹಂಚಿಕೆಯಾಗಿತ್ತು. ಅದನ್ನ ರಿಜಿಸ್ಟರ್ ಕೂಡ ಮಾಡಿಕೊಂಡ್ರು. ಆದ್ರೆ ಸಚಿವರು ಈಗ ನನಗೆ ಆ ಸೈಟ್ ಬೇಡ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರೋ ಸರ್ವೇ ನಂಬರ್ 1089ಎ ನಲ್ಲಿರುವ ಕುಮಾರ್ ಅನ್ನೋರ 50/80 ಸೈಟನ್ನು ಬದಲಿ ನಿವೇಶನವಾಗಿ ಕೊಡಿ ಅಂತ ಬಿಡಿಎಗೆ ಒತ್ತಡ ಹಾಕ್ತಿದ್ದಾರೆ. ಮಿನಿಸ್ಟರ್ ಪವರ್ ಬಳಸಿಕೊಂಡು ಮಾಲೀಕನೇ ತನ್ನ ಸೈಟ್ ಬಳಿ ಹೋಗದಂತೆ ಪೊಲೀಸರನ್ನೇ ನಿಯೋಜಿಸಿದ್ದಾರೆ.

    ಕೆಲ ಅಧಿಕಾರಿಗಳು ಒಂದು ಬಾರಿ ಹಂಚಿಕೆಯಾಗಿರೋ ಸೈಟ್ ಕ್ಯಾನ್ಸಲ್ ಮಾಡಿ ಬೇರೆ ಕಡೆ ಕೊಡೋದಕ್ಕೆ ಆಗಲ್ಲ ಎಂದು ವರದಿ ನೀಡಿದ್ದಾರೆ. ಈ ವರದಿಯಿಂದ ಕೆಂಡಾಮಂಡಲರಾಗಿರೋ ಸಚಿವರು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರಿಗೆ ಫೋನ್ ಮಾಡಿ ನನಗೆ ಆ ಸೈಟ್ ಬೇಕೆ ಬೇಕು ಅಂತ ಆವಾಜ್ ಹಾಕಿದ್ದಾರಂತೆ. ಆದ್ರೆ ಬಿಡಿಎ ಕಾಯ್ದೆ ಪ್ರಕಾರ ಈ ರೀತಿ ಸೈಟ್‍ಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ.

    ಸಚಿವರ ಆವಾಜ್‍ಗೆ ಬೆದರಿರೋ ಸೈಟ್ ಮಾಲೀಕ ಕುಮಾರ್ ಮಾಧ್ಯಮಗಳ ಮುಂದೆಯೂ ಬರ್ತಿಲ್ಲ.