Tag: Sharad Kumar

  • ಉಕ್ರೇನ್‍ನಲ್ಲಿ ನನ್ನ ಕೋಚ್ ಮನೆ ಮುಂದೆಯೇ ಬಾಂಬ್ ದಾಳಿ ನಡೆದಿದೆ ಆತಂಕ ವ್ಯಕ್ತಪಡಿಸಿದ ಶರದ್ ಕುಮಾರ್

    ಉಕ್ರೇನ್‍ನಲ್ಲಿ ನನ್ನ ಕೋಚ್ ಮನೆ ಮುಂದೆಯೇ ಬಾಂಬ್ ದಾಳಿ ನಡೆದಿದೆ ಆತಂಕ ವ್ಯಕ್ತಪಡಿಸಿದ ಶರದ್ ಕುಮಾರ್

    ನವದೆಹಲಿ: ಉಕ್ರೇನ್‍ನಲ್ಲಿ ನನ್ನ ಕೋಚ್ ನಿಕಿಟಿನ್ ಯೆವ್ಹೆನ್ ಮನೆ ಮುಂದೆಯೇ ಬಾಂಬ್ ದಾಳಿ ನಡೆದಿದೆ ಎಂದು ಟೋಕಿಯೋ ಪ್ಯಾರಾಲಂಪಿಕ್ಸ್‌ನ ಕಂಚಿನ ಪದಕ ಗೆದ್ದಿದ್ದ ಶರದ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿರುವ ಶರದ್ ಕುಮಾರ್, ನಾನು ನನ್ನ ಕೋಚ್ ಬಗ್ಗೆ ಚಿಂತೆ ಆಗುತ್ತಿದೆ. ಉಕ್ರೇನ್‍ನ ಖಾರ್ಕಿವ್‍ನಲ್ಲಿರುವ ಅವರ ಮನೆಯ ಮುಂದೆ ಬಂಬ್ ದಾಳಿ ನಡೆದಿದೆ. ಅವರೊಂದಿಗೆ ಮಾತನಾಡಿದ್ದೇನೆ ಮನೆಯ ನೆಲಮಹಡಿಯಲ್ಲಿ ಇದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಶರದ್ ಕುಮಾರ್‌ಗೆ ನಿಕಿಟಿನ್ ಯೆವ್ಹೆನ್ ಕೋಚ್ ಆಗಿದ್ದರು. ಉತ್ತರಪ್ರದೇಶ ಮೂಲದ ಶರದ್‍ಗೆ ನಿಕಿಟಿನ್ ಯೆವ್ಹೆನ್ ಮುಂದಿನ ಪ್ಯಾರಾಲಂಪಿಕ್ಸ್‌ ತಯಾರಿಗಾಗಿ ಹಲವು ಸಲಹೆಗಳನ್ನು ನೀಡುತ್ತಿದ್ದರು. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಷ್ಯಾದ ಭೂಸೇನಾ ಪಡೆಗಳು ನಾನಾ ಕಡೆಗಳಿಂದ ಉಕ್ರೇನ್‌ ಗಡಿ ಭಾಗಗಳನ್ನು ಪ್ರವೇಶಿಸಿವೆ. ಈ ವೇಳೆ ರಷ್ಯಾದ 50 ಆಕ್ರಮಣಕಾರರನ್ನು ಹತ್ಯೆಗೈದಿರುವುದಾಗಿ ಉಕ್ರೇನ್‌ ತಿಳಿಸಿದೆ.