Tag: Shanubhogara magalu

  • ರಾಗಿಣಿ ಪ್ರಜ್ವಲ್ ಅಭಿನಯದ ‘ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ

    ರಾಗಿಣಿ ಪ್ರಜ್ವಲ್ ಅಭಿನಯದ ‘ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ

    ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ‘ಶಾನುಭೋಗರ ಮಗಳು’ (Shanubhogara Magalu) ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ (Ragini Prajwal) ‘ಶಾನುಭೋಗರ ಮಗಳ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ:‘ಟೋಬಿ’ ನಟಿಗೆ ಸಿಕ್ತು ಬಿಗ್‌ ಚಾನ್ಸ್‌- ತಮಿಳು ನಟ ಸಿದ್ಧಾರ್ಥ್‌ಗೆ ಚೈತ್ರಾ ಆಚಾರ್‌ ನಾಯಕಿ

    ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಿಸಿರುವ ಈ ಚಿತ್ರ ಹಲವು ವಿಶೇಷಗಳನ್ನೊಳಗೊಂಡಿದೆ. ಜೈ ಆನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಿ.ಎಸ್ ಕೆಂಪರಾಜ್ ಅವರ ಸಂಕಲನವಿದೆ. ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್ (ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ ‘ಶಾನುಭೋಗರ ಮಗಳು’ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.

    ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಖ್ಯಾತ ನಟ ಕಿಶೋರ್ (Kishore) ಅಭಿನಯಿಸಿದ್ದಾರೆ.

  • ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶಾನುಭೋಗರ ಮಗಳು” (Shanubhogara magalu) ಚಿತ್ರದ ವಿಶೇಷ ಪಾತ್ರದಲ್ಲಿ ಬಹುಬಾಷಾ ನಟ ಕಿಶೋರ್ (Kishore) ಅಭಿನಯಿಸಲಿದ್ದಾರೆ. ರಾಗಿಣಿ ಪ್ರಜ್ವಲ್ (Ragini Prajwal) “ಶಾನುಭೋಗರ ಮಗಳಾ”ಗಿ ಕಾಣಿಸಿಕೊಳ್ಳುತ್ತಿದ್ದು, ಮೇಘಶ್ರೀ, ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ಭಾಗ್ಯಶ್ರೀ,ಟಿ.ಎನ್.ಶ್ರೀನಿವಾಸಮೂರ್ತಿ, ಟೆನ್ನಿಸ್ ಕೃಷ್ಣ  (Tennis Krishna)  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ 5ರ ವಿಜಯದಶಮಿ ಶುಭದಿನದಂದು ಚನ್ನಪಟ್ಟಣದ ಅರಳಾಳು ಸಂದ್ರದಲ್ಲಿ ಆರಂಭವಾಗಲಿದೆ.  ಆನಂತರ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟ, ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ನಾರಾಯಣ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದು ಕೋಡ್ಲು ರಾಮಕೃಷ್ಣ ನಿರ್ದೇಶನದ ಹದಿನಾಲ್ಕನೇ ಕಾದಂಬರಿ ಆಧಾರಿತ ಚಿತ್ರ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

    Live Tv
    [brid partner=56869869 player=32851 video=960834 autoplay=true]

  • ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಗಾಗಲೇ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಲಾ ಸಿನಿಮಾದಲ್ಲಿ ನಟಿಸಿದ್ದು, ಇವರು ಈ ಬಾರಿ ಅವರು ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಶ್ಯಾನುಭೋಗರ ಮಗಳ ಪಾತ್ರವಂತೆ.

    ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಸ್ವತಂತ್ರ ಪೂರ್ವದ ಕಥೆಯನ್ನು ಇದು ಒಳಗೊಂಡಿದೆ. ಇಡೀ ಸಿನಿಮಾ ಶ್ಯಾನುಭೋಗರ ಮಗಳ ಸುತ್ತಲೇ ಸುತ್ತುವುದು ಕಥೆಯ ವಿಶೇಷ. ಸ್ವತಂತ್ರ ಪೂರ್ವದಲ್ಲಿ ಶ್ಯಾನಭೋಗರ ಮನೆತನಗಳನ್ನೂ ಈ ಸಿನಿಮಾ ಪ್ರತಿನಿಧಿಸಲಿದೆಯಂತೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು.  ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

    “ಶ್ಯಾನುಭೋಗರ ಮಗಳು” ಚಿತ್ರದ ಪ್ರಮುಖಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ. ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ‌ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕಾಗಿ  ಆಯ್ಕೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]