Tag: shanthinagar

  • ಬರ್ತ್ ಡೇ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಸಕರಿಂದ ಮತ್ತೊಂದು ಎಡವಟ್ಟು

    ಬರ್ತ್ ಡೇ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಸಕರಿಂದ ಮತ್ತೊಂದು ಎಡವಟ್ಟು

    ಬೆಂಗಳೂರು: ಯೋಧರನ್ನು ಕಳೆದುಕೊಂಡು ಇಡೀ ದೇಶ ಮರುಗುತ್ತಿದ್ದ ವೇಳೆಯಲ್ಲೇ ಶಾಂತಿನಗರ ಶಾಸಕ ಹ್ಯಾರಿಸ್ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿಬಂದಿದೆ.

    ಹೌದು. ಶಾಸಕ ಎನ್ ಎ ಹ್ಯಾರಿಸ್ ಈಗ ತಮ್ಮ ಜನ್ಮದಿನಕ್ಕಾಗಿ ಸರ್ಕಾರಿ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡ ಆರೋಪಕ್ಕೆ ಸಿಲುಕಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಶಾಸಕರು ತಮ್ಮ ಹುಟ್ಟುಹಬ್ಬಕ್ಕಾಗಿ ಕ್ಷೇತ್ರದ ಮತದಾರರಿಗೆ ರಾತ್ರೋರಾತ್ರಿ ಕಂಬಳಿಗಳನ್ನು ವಿತರಣೆ ಮಾಡಿದ್ರು. ಆದರೆ ಈ ಕಂಬಳಿಗಳನ್ನು ಅವರ ಕ್ಷೇತ್ರದಲ್ಲಿ ಬರುವ ಜೋಗುಪಾಳ್ಯದಲ್ಲಿರುವ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶೇಖರಣೆ ಮಾಡಿಟ್ಟಿದ್ದರು.

    ಶಾಲೆಯ ಎರಡು ಕೊಠಡಿಗಳಲ್ಲಿ ಈ ಕಂಬಳಿಗಳ ರಾಶಿ ಇಡಲಾಗಿತ್ತು. ಇದರಿಂದ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೊಠಡಿಯಿಲ್ಲದೆ ಪಾಠಕ್ಕೆ ತೊಂದರೆಯಾಗಿದೆ. ಸಾಲದ್ದಕ್ಕೆ ರಾತ್ರಿ ವೇಳೆಯಲ್ಲೂ ಕ್ಷೇತ್ರದ ಮತದಾರರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಶಾಲೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಇದೇ ಶಾಲೆಗೆ ಅಂಟಿಕೊಂಡಿರುವ ರಸ್ತೆಗೆ ಫುಟ್ ಪಾತ್ ಇಲ್ಲ. ಮಕ್ಕಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಜೊತೆಗೆ ಶಾಲೆಯ ಎದುರೇ ಕಸದ ರಾಶಿ ಸದಾ ಬಿದ್ದಿರುತ್ತದೆ. ಇವೆಲ್ಲ ಸರಿ ಮಾಡದ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಶಾಲೆಯನ್ನೆ ದುರ್ಬಳಕೆ ಮಾಡಿಕೊಳ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪ್ರೇಮಿಗಳ ದಿನದಂದೇ ಉಗ್ರನ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಇಡೀ ದೇಶ ದುಃಖದಲ್ಲಿ ಮುಳುಗಿದ್ದಾಗ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಶಾಂತಿನಗರದ ಬಸ್ ನಿಲ್ದಾಣದಲ್ಲಿ ಅಬ್ಬರದ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿ ವಿವಾದಕ್ಕೆ ಗುರಿಯಾಗಿದ್ರು. ಈ ವಿವಾದ ಮರೆಯಾಗುವ ಮುನ್ನವೇ ಇದೀಗ ಮತ್ತೊಂದು ವಿವಾದ ಶಾಸಕರನ್ನು ಸುತ್ತಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ನಲಪಾಡ್ ಜಾಮೀನು ವಿಚಾರಣೆ – ಜೈಲಿನಿಂದ ಬಿಡಿಸುವಂತೆ ಅಪ್ಪನಿಗೆ ಫೋನ್

    ಇಂದು ನಲಪಾಡ್ ಜಾಮೀನು ವಿಚಾರಣೆ – ಜೈಲಿನಿಂದ ಬಿಡಿಸುವಂತೆ ಅಪ್ಪನಿಗೆ ಫೋನ್

    ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಎನ್‍ಎ ಹ್ಯಾರಿಸ್ ಮಗ, ರೌಡಿ ಮಹಮ್ಮದ್ ನಲಪಾಡ್ ಜೈಲಿಂದ ರಿಲೀಸ್ ಆಗ್ತಾನೋ ಇಲ್ವೋ ಅನ್ನೋದು ಇಂದು ಗೊತ್ತಾಗುತ್ತೆ.

    ಆರೋಪಿ ನಲಪಾಡ್ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಇಂದೂ ಕೂಡ ಮುಂದುವರಿಯಲಿದೆ. ನಾನು ಅಮಾಯಕ, ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಮೇಲೆ ಇಲ್ಲ-ಸಲ್ಲದ ಕೇಸೆಲ್ಲಾ ಹಾಕಿದ್ದಾರೆ. ಹೀಗಾಗಿ ಜಾಮೀನು ನೀಡಿ ಅನ್ನೋದು ನಲಪಾಡ್ ವಾದವಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ನಲಪಾಡ್ ರಂಪಾಟ- ಜಾಮೀನು ಸಿಗದ್ದಕ್ಕೆ ಪೋಷಕರಿಗೆ ಕರೆ ಮಾಡಿ ಕೂಗಾಟ

    ಜೈಲಿನಲ್ಲಿದ್ರೂ ನಲಪಾಡ್ ಫೆಸಿಲಿಟಿ ಏನೂ ಕಡಿಮೆ ಆಗಿಲ್ಲ. ಭಾನುವಾರ ರಾತ್ರಿ ಮೂರ್ನಾಲ್ಕು ಬಾರಿ ಅಪ್ಪ, ಶಾಸಕ ಹ್ಯಾರಿಸ್‍ಗೆ ಫೋನ್ ಮಾಡಿದ್ದ ನಲಪಾಡ್ ಇಂದಾದ್ರೂ ನನ್ನನ್ನು ಜೈಲಿಂದ ರಿಲೀಸ್ ಮಾಡಿಸಿ ಅಂತ ದುಂಬಾಲು ಬಿದ್ದಿದ್ದಾನೆ. ನನಗೆ ಜೈಲಲ್ಲಿ ಇರೋಕೆ ಆಗ್ತಿಲ್ಲ ಅಂತ ಗೋಗರೆಯುತ್ತಿದ್ದಾನೆ ಎನ್ನಲಾಗಿದೆ.

    ಇತ್ತ ಭಾನುವಾರವಾದ್ರೂ ನಿನ್ನೆ ಜೈಲು ಸಿಬ್ಬಂದಿ ನಲಪಾಡ್‍ಗೆ ಹೊರಗಡೆ ಊಟದ ವ್ಯವಸ್ಥೆ ಮಾಡಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಮಂಜುನಾಥ್ ಗೆ ಮನೆಯಿಂದ ಊಟದ ವ್ಯವಸ್ಥೆ ಆಗಿತ್ತು ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    https://www.youtube.com/watch?v=CYsc3iZ73N4

  • ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!

    ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಚಕ ತಿರುವೊಂದು ಸಿಕ್ಕಿದೆ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಸುದ್ದಿ ಹರಡುತ್ತಿದ್ದಂತೆಯೇ, ಇತ್ತ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಪ್ಲಾನ್ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

    ಘಟನೆ ನಡೆದ ಬಳಿಕ ಫರ್ಜಿ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳನ್ನೇ ಡಿಲೀಟ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಪಾರ್ಟಿ ಹಾಲ್ ನ ಒಂದೇ ಒಂದು ತುಣುಕು ಇರುವ ದೃಶ್ಯ ರಿಲೀಸ್ ಆಗಿಲ್ಲ. ಅಷ್ಟೇ ಅಲ್ಲದೇ ಪಾರ್ಕಿಂಗ್ ನಲ್ಲಿ ಇದ್ದ ಸಿಸಿಟಿವಿ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ವಿಡಿಯೋದಲ್ಲೇನಿದೆ?: ಘಟನೆ ನಡೆದ ಬಳಿಕ ಒಂದು ವಿಡಿಯೋ ಲಭ್ಯವಾಗಿದ್ದು, ಪಾರ್ಟಿ ಹಾಲ್ ನಲ್ಲಿ ಗಲಾಟೆಯ ನಂತ ವಿದ್ವತ್ ಲಿಫ್ಟ್ ನಲ್ಲಿ ಇಳಿದು ಹೋಗಿದ್ದಾರೆ. ಫಸ್ಟ್ ಫ್ಲೋರ್ ನಲ್ಲಿ ಲಿಫ್ಟ್ ಇಳಿದ ವಿದ್ವತ್ ನನ್ನು ಮೆಟ್ಟಿಲುಗಳ ಮೇಲೆ ಹೊಡೆದು ಮತ್ತೆ ಪಾರ್ಟಿ ಹಾಲ್ ಗೆ ಎಳೆದುಕೊಂಡು ಹೋಗಿದ್ರು. ಮೆಟ್ಟಿಲುಗಳ ಮೇಲೆ ಎಳೆದುಕೊಂಡು ಹೋಗುವ ದೃಶ್ಯಾವಳಿ ಅದರಲ್ಲಿದೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

    ಆ ಸಂದರ್ಭದಲ್ಲಿ ಪೊಲೀಸರು ಬಂದು ನಲಪಾಡ್ ನನ್ನು ಹಿಡಿಯೋದಾಗ್ಲಿ ಅಥವಾ ಹೊಡೆಯೋದನ್ನ ನಿಲ್ಲಿಸೋದಾಗ್ಲಿ ಮಾಡಿಲ್ಲ. ನಂತರ ವಿದ್ವತ್ ನನ್ನು ಪಾರ್ಕಿಂಗ್ ಗೆ ಕರೆದುಕೊಂಡು ಹೋದಾಗ ಪಿಎಸ್‍ಐ ಗಿರೀಶ್ ಎಂಟ್ರಿ ಕೊಟ್ಟಿದ್ದಾರೆ. ಗಿರೀಶ್ ಅವರು ಬರುತ್ತಿದ್ದಂತೆಯೇ ಪಾರ್ಕಿಂಗ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಯುತ್ತಾ ಇತ್ತು. ಈ ಬಗ್ಗೆ ಗೊತ್ತಿದ್ದರೂ ಗಿರೀಶ್ ಅವರು ಪಾರ್ಕಿಂಗ್ ಲಾಟ್ ಗೆ ಹೋಗದೇ ಪಾರ್ಟಿ ಹಾಲ್ ಗೆ ಹೋಗಿದ್ದಾರೆ. ನಂತರಪಾರ್ಟಿ ಹಾಲ್‍ನಿಂದ ಕೆಳಗೆ ಬಂದಾಗ ಆರೋಪಿ ನಲಪಾಡ್ ಫರ್ಜಿ ಕೆಫೆ ಮುಂದೆ ನಿಂತಿದ್ದನು. ಈ ವೇಳೆ ಗಿರೀಶ್ ನಲಪಾಡ್ ನನ್ನು ನೋಡಿಯೂ ಸುಮ್ಮನೇ ನಿಂತಿದ್ದಾರೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಶಾಸಕರ ಪುತ್ರ ಎನ್ನುವ ಕಾರಣಕ್ಕೆ ಪ್ರಕರಣದ ಆರಂಭದಲ್ಲೇ ಬೆಂಗಳೂರು ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪ, ಅನುಮಾನಗಳಿಗೆ ಪುಷ್ಠಿ ಎನ್ನುವಂತೆ ಸಿಸಿ ಕ್ಯಾಮೆರಾದ ದೃಶ್ಯವಾಳಿಗಳನ್ನು ದಿನ ಕಳೆದರೂ ಪೊಲೀಸರು ರಿಲೀಸ್ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ನಲಪಾಡ್ ಒಂದೊಂದೆ ಅಕ್ರಮಗಳು ಬಯಲಾಗುತ್ತಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಬೇಕಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಲೀಸ್ ಮಾಡಿದ್ದರೆ ಆ ಪಾರ್ಟಿಯಲ್ಲಿ ಯಾರೆಲ್ಲ ಭಾಗವಹಿಸಿದ್ದರು? ಘಟನೆ ಹೇಗಾಯ್ತು ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    https://www.youtube.com/watch?v=B-erXK9nl1M

    https://www.youtube.com/watch?v=TIPtfcxi6O4

    https://www.youtube.com/watch?v=vgXGeYC-QqU

    https://www.youtube.com/watch?v=ETcXE9RXvXE

    https://www.youtube.com/watch?v=bLWKOszy0uc

  • ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಅಪ್ಪ ಹೇಳಿದ 1ಗಂಟೆಯಲ್ಲೇ ಮಗ ಸರೆಂಡರ್ – ನಲಪಾಡ್‍ಗೆ ಜ್ಯೂಸ್ ನೀಡಿ ರಾಜಮರ್ಯಾದೆ ಕೊಟ್ಟ ಪೊಲೀಸರು!

    ಬೆಂಗಳೂರು: ಪ್ರಭಾವಿ ಶಾಸಕ ಹ್ಯಾರಿಸ್ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ನ ಗೂಂಡಾಗಿರಿ ಪ್ರಕರಣ ಸಂಬಂಧ ಕಳೆದ 36 ಗಂಟೆಗಳಿಂದ ತಲೆ ಮರೆಸಿಕೊಂಡಿದ್ದ ನಲಪಾಡ್‍ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಹ್ಯಾರಿಸ್‍ರ ಶಾಂತಿನಗರ ನಿವಾಸಕ್ಕೆ ಅಶೋಕನಗರ ಪೊಲೀಸರು ಭೇಟಿ ಹುಟುಕಾಟ ನಡೆಸಿದ್ರು. ಈ ವೇಳೆ ನನ್ನ ಮಗನಿಗೆ ಶರಣಾಗಲು ಹೇಳಿದ್ದೇನೆ ಅಂತ ಶಾಸಕರು ಹೇಳಿದ್ದರು. ಶಾಸಕರು ಮಾತನಾಡಿದ ಕೇವಲ 1 ಗಂಟೆಯಲ್ಲಿ ವಿವಿಐಪಿ ಗೂಂಡಾ ಮಗ ನಲಪಾಡ್‍ನನ್ನು ಕಬ್ಬನ್‍ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ರಾಜ ಮರ್ಯಾದೆ ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಬಳಿಕ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಎದುರೇ ಕುಳ್ಳಿರಿಸಿ ನೋಡಲು ಟಿವಿ, ಕುಡಿಯಲು ಜ್ಯೂಸ್ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

    ಹ್ಯಾರಿಸ್ ಮನೆಯಿಂದ ಹೊರಬಂದ ಕಾರಿನಲ್ಲೇ ನಲಪಾಡ್ ಠಾಣೆ ಕಡೆ ತೆರಳಿದ್ದ ಎನ್ನಲಾಗಿದೆ. ಹಾಗಾದ್ರೆ ಬೆಳಗ್ಗೆ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದ್ದು ಸುಳ್ಳಾ..? ಮಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಬೆಳಗ್ಗೆ ಕಥೆ ಕಟ್ಟಿದ್ದ ಹ್ಯಾರಿಸ್ ಗುಟ್ಟಾಗಿ ಮಗನನ್ನು ಠಾಣೆಗೆ ಕಳಿಸಿ ಶರಣಾಗುವಂತೆ ಸೂಚಿಸಿದ್ರಾ..? ಎಂಬ ಅನುಮಾನ ಕಾಡ್ತಿದೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

    ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇಂದು ಬೆಳಗ್ಗೆ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿರುವುದಾಗಿ ತಿಳಿಸಿದ್ದರು.

    https://www.youtube.com/watch?v=aQxY3U–B2g

  • ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

    ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

    ಬೆಂಗಳೂರು: ಯುವಕನೊಬ್ಬನ ಮೇಲೆ ನಡೆಸಿ ಪರಾರಿಯಾಗಿದ್ದ ಶಾಸಕ ಹ್ಯಾರಿಸ್ ಪುತ್ರ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾನೆ.

    ಶನಿವಾರ ರಾತ್ರಿ ಯುವಕನೊಬ್ಬನ ಜೊತೆ ಜಗಳವಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ನಲಪಾಡ್ ಪಾರಾರಿಯಾಗಿದ್ದನು. ಆದ್ರೆ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.

    ಸದ್ಯ ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವಕ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.

    ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.

    ವಿದ್ವತ್- ಹಲ್ಲೆಗೊಳಗಾದ ಯುವಕ.
  • ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

    ಬೆಂಗಳೂರು: ನನ್ನ ಮಗನನ್ನು ನಾನೇ ಪೊಲೀಸರಿಗೆ ಸರೆಂಡರ್ ಮಾಡಿಸ್ತೇನೆ. ನಿನ್ನೆ ರಾತ್ರಿ ಮಗ ಆತನ ಅಮ್ಮನಿಗೆ ಕರೆ ಮಾಡಿದ್ದನು. ಈ ವೇಳೆ ನಾನೇ ಸರೆಂಡರ್ ಆಗುವಂತೆ ಹೇಳಿದ್ದಾಗಿ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಹೇಳಿದ್ದಾರೆ.

    ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇದೀಗ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿದ್ದೇನೆ ಅಂದಿದ್ದಾರೆ.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಗೂಂಡಾಗಿರಿ ನಡೆಸಿ ಹಲವು ಗಂಟೆಗಳೇ ಕಳೆದ್ರೂ ಅರೆಸ್ಟ್ ಆಗದ ಮಹಮ್ಮದ್ ನಲಪಾಡ್ ಇದೀಗ ಅಶೋಕ ನಗರ ಸ್ಟೇಷನ್ ಪೊಲೀಸರು ಮನೆಗೆ ಬರ್ತಿದ್ದಂತೆ ಶಾಸಕರು ಕಥೆ ಕಟ್ಟಿದ್ದಾರೆ. ಶಾಸಕನ ರೌಡಿ ಮಗನ ಚೇಲಾಗಳನ್ನಷ್ಟೇ ಅರೆಸ್ಟ್ ಮಾಡಿ ಬೆಂಗಳೂರು ಪೊಲೀಸ್ರ ನಾಟಕಾವಾಡ್ತಿದ್ದಾರಾ?. ಅಲ್ಲದೇ ಶಾಸಕರಿಗೆ ಮಗ ಎಲ್ಲಿದ್ದಾನೆ ಅನ್ನೋದು ಗೊತ್ತಿದೆ ಅದ್ಮೇಲೆ ಅರೆಸ್ಟ್ ಮಾಡೋಕೆ ಪೊಲೀಸರಿಗೇನು? ಸರೆಂಡರ್ ಮೂಲಕ ಮಹಮ್ಮದ್ ನಲಪಾಡ್ ಬಚಾವ್ ಮಾಡೋಕೆ ಪೊಲೀಸ್ರ ಕುತಂತ್ರ ಹೂಡ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿವೆ. ಇದನ್ನೂ ಓದಿ: ನಲಪಾಡ್ ಹಲ್ಲೆ ಕೇಸ್ ಸಿಸಿಬಿಗೆ- ದಿನ ಕಳೆದ್ರೂ ಹ್ಯಾರಿಸ್ ಪುತ್ರನ ಬಂಧಿಸದ ಖಾಕಿ

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.

    ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.

  • ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ವೇಳೆ ಯುವತಿಯರು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.

    ಇಲ್ಲಿನ ರಮಣಶ್ರೀ ಹೋಟೆಲ್ ಮುಂಭಾಗ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ನಾಲ್ವರು ಯುವತಿಯರು ಅವಾಜ್ ಹಾಕಿದ್ದಾರೆ. ಅಷ್ಟೆ ಅಲ್ಲದೆ ತಾನೊಬ್ಬ ರಾಷ್ಟ್ರೀಯ ವಾಹಿನಿಯ ವರದಿಗಾರ್ತಿ ಅಂತಾ ಪೊಲೀಸರನ್ನ ನಿಂದಿಸಿದ್ದಾರೆ.

    ಮತ್ತೊಂದೆಡೆ ಕುಡಿದು ಗಾಡಿ ಓಡಿಸ್ತಿದ್ದ ಇರಾನಿ ಪ್ರಜೆಯನ್ನ ಚೆಕ್ ಮಾಡೋಕೆ ಹೋದಾಗ ಹೈಡ್ರಾಮ ನಡೆಸಿದ ಘಟನೆ ತಡರಾತ್ರಿ ಶಾಂತಿನಗರದ ಕೆಎಸ್‍ಆರ್‍ಟಿಸಿ ಬಸ್ ಸ್ಟಾಪ್ ಮುಂದೆ ನಡೆದಿದೆ. ಎಂಜಿ ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬರ್ತಿದ್ದ ಇರಾನಿ ಯುವಕ ಯುವತಿಯರ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸೋಕೆ ಮುಂದಾಗಿದ್ದಾರೆ. ಆದ್ರೆ ಕುಡಿದ ಅಮಲಿನಲ್ಲಿದ್ದ ಯುವಕ ಮತ್ತು ಯುವತಿಯನ್ನ ಆಲ್ಕೋಮಿಟರ್ ಊದುವಂತೆ ಪೊಲೀಸರು ಅದೆಷ್ಟು ಪರಿ ಪರಿಯಾಗಿ ಕೇಳಿಕೊಂಡರು ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು.

    ನಂತರ ಪೊಲೀಸರು ಅಲ್ಕೋಮೀಟರ್ ಊದುವಂತೆ ಉತ್ತಾಯ ಮಾಡಿದ್ದಕ್ಕೆ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗೋಕೆ ನೋಡಿದ್ದಾರೆ. ತಕ್ಷಣ ನೈಟ್ ರೌಂಡ್ಸ್ ನಲ್ಲಿದ್ದ ಹೊಯ್ಸಳ ವಾಹನ ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕ ಯುವತಿಯರನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸೋಕೆ ಕರೆದುಕೊಂಡು ಹೋಗಿದ್ದಾರೆ.