Tag: Shantanagouda

  • ನಿಮ್ಮ ಮನೆಯಲ್ಲಿ ಅಕ್ಕ,ತಂಗಿಯರು ಇಲ್ವಾ?- ಶಾಂತನಗೌಡರ ವಿರುದ್ಧ ಮಹಿಳೆಯರು ಕಿಡಿ

    ನಿಮ್ಮ ಮನೆಯಲ್ಲಿ ಅಕ್ಕ,ತಂಗಿಯರು ಇಲ್ವಾ?- ಶಾಂತನಗೌಡರ ವಿರುದ್ಧ ಮಹಿಳೆಯರು ಕಿಡಿ

    ದಾವಣಗೆರೆ: ನಿಮ್ಮ ಮನೆಯಲ್ಲಿ ಅಕ್ಕ, ತಂಗಿಯರು ಇಲ್ವಾ ಎಂದು ಮಾಜಿ ಶಾಸಕ ಶಾಂತನಗೌಡರ ವಿರುದ್ಧ ದಾವಣಗೆರೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಮಹಿಳೆಯರು ಕಿಡಿಕಾರಿದ್ದಾರೆ.

    ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಶಾಸಕ ರೇಣುಕಾಚಾರ್ಯ ಅವರ ವಾಸ್ತವ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ, ಮಾಜಿ ಶಾಸಕ ಶಾಂತನಗೌಡರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೊನ್ನಾಳಿಯ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಹಣ್ಣುಗಳನ್ನು ನೀಡಲು ಕಾರ್ಯಕರ್ತರ ಜೊತೆ ಬರುತ್ತಿದ್ದಂತೆ ಮಹಿಳೆಯರು ಕ್ಷಮೆ ಯಾಚಿಸುವಂತೆ ಪಟ್ಟುಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಿಂದ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಆ ಸಂದರ್ಭದಲ್ಲಿ ಮಾಜಿ ಶಾಸಕ ಶಾಂತನಗೌಡ ಶಾಸಕ ರೇಣುಕಾಚಾರ್ಯ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ.

    “ರೇಣುಕಾಚಾರ್ಯ ಎಲ್ಲಿ ಮಲಗಿರ್ತಾನೆ ಯಾರ್ ಜೊತೆ ಮಲಗಿರ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ತೆರೆದ ಬಾಗಿಲು ಎಂದು” ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಇಂದು ಕೋವಿಡ್ ಕೇರ್ ಸೆಂಟರ್ ಗೆ ಬರುತ್ತಿದ್ದಂತೆ ಮಹಿಳೆಯರು ಶಾಂತನಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಅಕ್ಕ ತಂಗಿಯರು ಇಲ್ವಾ ಈ ರೀತಿಯಾಗಿ ಹೇಳಿಕೆ ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ಮಾಜಿ ಶಾಸಕ ಶಾಂತನಗೌಡ ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ, ನಾನು ಹೇಳಿದ್ದು ಬೇರೆ, ಆದರೆ ಅದನ್ನು ನಿಮಗೆ ಅರ್ಥ ಮಾಡಿಸಿರುವುದೇ ಬೇರೆ ಏನಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಮಹಿಳೆಯರ ಮುಂದೆ ಕ್ಷಮೆ ಕೇಳಿದರು. ಅಲ್ಲದೇ ಸೋಂಕಿತರಿಗೆ ಹಣ್ಣು ನೀಡಲು ಮುಂದಾದ ಮಾಜಿ ಶಾಸಕರಿಂದ ಸೋಂಕಿತರು ಹಣ್ಣು ಸ್ವೀಕರಿಸಲು ನಿರಾಕರಿಸಿದ್ದಾರೆ. ಜೊತೆಗೆ ಬಲವಂತವಾಗಿ ಮಾಜಿ ಶಾಸಕ ಶಾಂತನ ಗೌಡರವರು ಸೋಂಕಿತರಿಗೆ ಹಣ್ಣು ನೀಡಲು ಹೋದಾಗ ಹಣ್ಣುಗಳನ್ನು ಸ್ವೀಕರಿಸಲು ಮಹಿಳೆಯರು ಹಿಂದೇಟು ಹಾಕಿದರು. ಇದನ್ನೂ ಓದಿ:ಪಕ್ಷದಲ್ಲಿ ಯಾವುದೇ ಗೊಂದಲಗಳು ಬೇಡ: ಸಿ.ಟಿ ರವಿ