Tag: Shantadevi Kanavi

  • ಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ ವಿಯೋಗ

    ಹಿರಿಯ ಕವಿ ನಾಡೋಜ ಚನ್ನವೀರ ಕಣವಿಗೆ ಪತ್ನಿ ವಿಯೋಗ

    -ಲೇಖಕಿ, ಕಥೆಗಾರ್ತಿ ಶಾಂತಾದೇವಿ ಇನ್ನಿಲ್ಲ

    ಧಾರವಾಡ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಇಂದು ನಿಧನರಾಗಿದ್ದಾರೆ.

    ಲೇಖಕಿ ಮತ್ತು ಕಥೆಗಾರ್ತಿಯಾಗಿದ್ದ ಶಾಂತಾದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

    ಶನಿವಾರ ಧಾರವಾಡದಲ್ಲಿಯೇ ಶಾಂತಾದೇವಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಂತಾದೇವಿ ಅವರಿಗೆ 88 ವಯಸ್ಸಾಗಿತ್ತು.