Tag: ShanMasood

  • ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ

    ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ

    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ (T20 WorldCup) ಪಾಕಿಸ್ತಾನದ ಪಯಣ ಬಹುತೇಕ ಖೇಲ್ ಕತಂ ಆದಂತೆ ಕಾಣ್ತಿದೆ. ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ (Team India) ಎದುರು ಸೋಲಿನ ರುಚಿ ಕಂಡ ಪಾಕಿಸ್ತಾನ (Pakistan) ತನ್ನ 2ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಹೀನಾಯ ಸೋಲು ಅನುಭವಿಸಿತ್ತು.

    ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬಾಬರ್ ಸೇನೆ ಕೇವಲ 1 ರನ್ ಅಂತರದಲ್ಲಿ ಸೋಲು ಕಂಡಿತು. ಇದೀಗ ಬಾಬರ್ (BabarAzam) ಪಡೆಗೆ ಸೆಮಿಸ್‌ಗೆ ತೆರಳಲು ಕಠಿಣ ಪರಿಸ್ಥಿತಿ ಎದುರಾಗಿದೆ. ಪಾಕ್ ಉಳಿದ 3 ಪಂದ್ಯಗಳಲ್ಲೂ ಗೆಲ್ಲುವುದು ನಿರ್ಣಾಯಕವಾಗಿದೆ. ಅಲ್ಲದೇ ಕೆಲ ತಂಡಗಳ ಸೋಲು ಗೆಲುವಿನ ಮೇಲೂ ಪಾಕ್ ಅವಲಂಬಿತವಾಗಿದೆ. ಇದನ್ನೂ ಓದಿ: ಸೆಮಿಫೈನಲ್ ನಂತರ ಭಾರತ ಕೂಡ ಮನೆಗೆ – ಶೋಯೆಬ್ ಅಖ್ತರ್

    2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಸ್ಥಿತಿಯೂ ಹೀಗೆ ಇತ್ತು. ಆಗ ಕೊಹ್ಲಿ (Virat Kohli) ಪಡೆಯ ಸ್ಥಿತಿ ನೋಡಿ ನಗೆ ಬೀರಿದ ಪಾಕ್ ತಂಡ ಇದೀಗ ಹಿಟ್‌ಮ್ಯಾನ್ ರೋಹಿತ್ (Rohit Sharma) ಪಡೆಯ ಸತತ ಗೆಲುವಿಗಾಗಿ ದೇವರಿಗೆ ಮೊರೆ ಇಡುತ್ತಿದ್ದಾರೆ.

    ಸೂಪರ್-12 ಗುಂಪು-2ರಲ್ಲಿರುವ 6 ತಂಡಗಳ ಪೈಕಿ ಸತತ ಗೆಲುವು ಸಾಧಿಸಿರುವ ಭಾರತ ಅಗ್ರಸ್ಥಾನದಲ್ಲಿದ್ದರೆ, 2 ಪಂದ್ಯಗಳಲ್ಲೂ ಸೋಲು ಕಂಡಿರುವ ಪಾಕಿಸ್ತಾನ (Pakistan) 5ನೇ ಸ್ಥಾನದಲ್ಲಿದೆ. ನೆದರ್‌ಲ್ಯಾಂಡ್ (Netherlands) 6ನೇ ಸ್ಥಾನದಲ್ಲಿದೆ. ಪಾಕ್ ಈಗಾಗಲೇ 2 ಪಂದ್ಯಗಳಲ್ಲಿ ಸೋತಿದ್ದು, ಉಳಿದ 3 ಪಂದ್ಯಗಳಲ್ಲಿ ಗೆಲುವು ನಿರ್ಣಾಯಕವಾಗಿ ಬೇಕಿದೆ. ಜೊತೆಗೆ ರನ್‌ರೇಟ್‌ನತ್ತಲೂ ಗಮನಿಸಬೇಕಿದೆ. ಇದನ್ನೂ ಓದಿ: `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    ಭಾರತದ ಸತತ ಗೆಲುವಿಗಾಗಿ ಪ್ರಾರ್ಥನೆ:
    ಪಾಕಿಸ್ತಾನ ಸೆಮಿಫೈನಲ್‌ಗೆ ಬರಬೇಕಾದ್ರೆ ಮೂರು ಪಂದ್ಯಗಳ ಗೆಲುವು ಮಾತ್ರವಲ್ಲ. ನಾಳೆ ನಡೆಯುವ ಸೂಪರ್ ಸಂಡೇ ಮ್ಯಾಚ್‌ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಸೋಲಬೇಕಿದೆ. ಅದೇ ಸಮಯದಲ್ಲಿ ಬಾಂಗ್ಲಾದೇಶ (Bangladesh) ಇನ್ನೊಂದು ಪಂದ್ಯದಲ್ಲಿ ಸೋಲಬೇಕು. ಭಾರತ ದಕ್ಷಿಣ ಆಫ್ರಿಕಾ (South Africa), ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಈ ಮೂರು ತಂಡಗಳನ್ನು ಸೋಲಿಸಬೇಕು. ಅಂದುಕೊಂಡಂತೆ ಎಲ್ಲವೂ ಆದ್ರೆ ಪಾಕಿಸ್ತಾನ ಸೆಮಿಸ್‌ಗೆ ತಲುಪುವ ಸಾಧ್ಯತೆಯಿದೆ. ಎದುರಾಳಿ ತಂಡಗಳು ಬಲಿಷ್ಠವಾಗಿರುವುದರಿಂದ ಇದು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಹಾಗಾಗಿ ಪಾಕಿಸ್ತಾನ ತಂಡ ಈಗ ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿದೆ.

    ಒಂದು ವೇಳೆ ಸೂಪರ್ 12 ಸುತ್ತಿನಲ್ಲಿ ಭಾರತ ಸೋತರೆ, ಪಾಕಿಸ್ತಾನ ಸೆಮಿಸ್ ರೇಸ್‌ನಿಂದ ಹೊರಗುಳಿಯುತ್ತದೆ. ಅದಕ್ಕಾಗಿಯೇ ಪಾಕಿಸ್ತಾನದ ಅಭಿಮಾನಿಗಳು ಈಗ ಭಾರತದ ಗೆಲುವಿಗಾಗಿ ಕಾದುಕುಳಿತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

    ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

    ಕ್ಯಾನ್ಬೆರಾ: ನೆದರ್‌ಲ್ಯಾಂಡ್ (Netherland) ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸಿದ ಟೀಂ ಇಂಡಿಯಾ (Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕಿಸ್ತಾನದ (Pakistan) ಓಪನರ್ ಮೊಹಮ್ಮದ್ ರಿಜ್ವಾನ್ (Mohammad Rizwan) ದಾಖಲೆಯನ್ನು ಸರಿಗಟ್ಟಿದ್ದು, ಈ ವರ್ಷದಲ್ಲಿ ಅತಿಹೆಚ್ಚು ರನ್‌ಗಳಿದ ಮೊದಲ ಆಟಗಾರ ಎನ್ನಿಸಿಕೊಂಡಿದ್ದಾರೆ.

    ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧದ T20 ಸರಣಿಯಲ್ಲೂ ಅಬ್ಬರಿಸಿದ ಸೂರ್ಯಕುಮಾರ್ ಐಸಿಸಿ ಟಿ20 (ICC T20) ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದರು. ಅಲ್ಲದೇ 573 ಎಸೆತಗಳಲ್ಲಿ ವೇಗದ 1 ಸಾವಿರ ರನ್ ಪೂರೈಸಿದ ಖ್ಯಾತಿ ಗಳಿಸಿದ್ದರು. ಇದೀಗ ಮತ್ತೊಮ್ಮೆ ಸ್ಪೋಟಕ ಅರ್ಧ ಶತಕ (25 ಎಸೆತಗಳಲ್ಲಿ 50 ರನ್) ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ನನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಇದನ್ನೂ ಓದಿ: T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ

    ಪ್ರಸ್ತುತ ವರ್ಷದಲ್ಲಿ 19 ಇನ್ನಿಂಗ್ಸ್‌ಗಳನ್ನಾಡಿರುವ ಮೊಹಮ್ಮದ್ ರಿಜ್ವಾನ್ 124 ಸ್ಟ್ರೈಕ್‌ರೇಟ್‌ ನಲ್ಲಿ 662 ಎಸೆತಗಳಿಗೆ 825 ರನ್‌ಗಳಿಸಿ ಈ ವರ್ಷದ ಟಿ20 ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಮೊದಲ ಸ್ಥಾನದಲ್ಲಿದ್ದರು. ಆದರೆ ಸತತ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಸೂರ್ಯಕುಮಾರ್ 25 ಇನ್ನಿಂಗ್ಸ್‌ಗಳನ್ನು ಎದುರಿಸಿದರೂ 184.86 ಸ್ಟ್ರೈಕ್‌ರೇಟ್‌ನಲ್ಲಿ 469 ಎಸೆತಗಳಲ್ಲೇ 867 ರನ್ ಬಾರಿಸಿ ರಿಜ್ವಾನ್ ಅವರನ್ನು ಹಿಂದಿಕ್ಕಿದ್ದರು. ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

    ಸೂರ್ಯನ ಈ ದಾಖಲೆಯಲ್ಲಿ 1 ಶತಕ, 7 ಅರ್ಧಶತಕ, 77 ಬೌಂಡರಿ ಹಾಗೂ 52 ಸಿಕ್ಸರ್‌ಗಳು ಸೇರಿವೆ. ಇದರಿಂದಾಗಿ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಸುವ ಸೂರ್ಯ ಓಪನರ್ ರಿಜ್ವಾನ್‌ಗಿಂತಲೂ ಉತ್ತಮವಾಗಿ ಆಡಿದ್ದಾರೆ ಎಂಬುದನ್ನು ತೋರಿಸಿದೆ.

    ಗುರುವಾರ ನೆದರ್‌ಲ್ಯಾಂಡ್ (Netherland) ವಿರುದ್ಧ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. 180 ರನ್‌ಗಳ ಗುರಿ ಬೆನ್ನತ್ತಿದ್ದ ನೆದರ್‌ಲ್ಯಾಂಡ್ ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ಮೆಲ್ಬರ್ನ್: ವಿಶ್ವಕಪ್ (T20 WorldCup) ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (Pakistan) ಹುಟ್ಟಡಗಿಸಿರುವ ಟೀಂ ಇಂಡಿಯಾ (Team India) ಗೆಲುವಿನ ನಗೆ ಬೀರಿದೆ.

    ಅಲ್ಲದೇ ಇಂದು ನೆದರ್‌ಲೆಂಡ್‌ನೊಂದಿಗೆ (Netherlands) ಕಣಕ್ಕಿಳಿಯಲಿದೆ. ಆದರೆ ವಿಶ್ವಕಪ್‌ನಲ್ಲಿರುವ ಆಟಗಾರರಿಗೆ ಸರಿಯಾದ ಊಟ ಸಿಗುತ್ತಿಲ್ಲ ಎಂದು ಟೀಂ ಇಂಡಿಯಾ ಬೇಸರ ವ್ಯಕ್ತಪಡಿಸಿದೆ. ಅತೀ ತಣ್ಣಗಿನ ಹಾಗೂ ಗ್ರಿಲ್ ಮಾಡದ ಸ್ಯಾಂಡ್‌ವಿಚ್ ಹಾಗೂ ಬಟರ್‌ಫ್ರೂಟ್ ಅನ್ನೇ ನೀಡುತ್ತಿದ್ದಾರೆ. ಅದನ್ನು ಹೇಗೆ ತಿನ್ನುವುದು ಎಂದು ಬೇಸರ ಹೊರಹಾಕಿದೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯದಲ್ಲಿ ಕಾಂಟ್ರವರ್ಸಿ – ಗೆಲುವಿನ ಬಳಿಕ ಅಗ್ರೇಸ್ಸಿವ್ ಮೂಡ್‍ನಲ್ಲಿ ದ್ರಾವಿಡ್

    ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag), ಸಿಡ್ನಿಯಲ್ಲಿ ನಡೆದ ತರಬೇತಿಯ ಅವಧಿಯ ನಂತರ ಟೀಂ ಇಂಡಿಯಾಕ್ಕೆ ತಣ್ಣಗಿನ ಆಹಾರ ಮತ್ತು ಸ್ಯಾಂಡ್‌ವಿಚ್‌ಗಳನ್ನ, ಫಲಾಫೆಲ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಪಾಶ್ಚಿಮಾತ್ಯ ದೇಶಗಳು ಎಷ್ಟು ಒಳ್ಳೆಯ ಆತಿಥ್ಯ ನೀಡುತ್ತವೆ ಎಂದು ಭಾವಿಸುವ ದಿನಗಳು ಈಗ ಹೊರಟುಹೋಗಿವೆ. ಅತ್ಯುನ್ನತ ಗುಣಮಟ್ಟದ ಆತಿಥ್ಯ ನೀಡುವ ವಿಷಯದಲ್ಲಿ ಭಾರತ ಮಾತ್ರ ಪಾಶ್ಚಿಮಾತ್ಯ ದೇಶಗಳಿಗಿಂತ ಮುಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ ಇಂದು ನೆದರ್‌ಲೆಂಡ್‌ನೊಂದಿಗೆ ಕಣಕ್ಕಿಳಿಯಲಿದೆ. ಮಧ್ಯಾಹ್ನ 12.30ರ ವೇಳೆ ಆಸ್ಟ್ರೇಲಿಯಾದ ಎಸ್‌ಸಿಜೆ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಮೆಲ್ಬರ್ನ್: ಟಿ20 ವಿಶ್ವಕಪ್ (T20 WorldCup) ಆರಂಭಿಕ ಪಂದ್ಯದಲ್ಲೇ ಬದ್ಧವೈರಿಗಳ ಹುಟ್ಟಡಗಿಸಿದ ಟೀಂ ಇಂಡಿಯಾ (Team India) ಭಾರತೀಯರಿಗೆ ದೀಪಾವಳಿ (Diwali) ಉಡುಗೊರೆ ನೀಡಿದೆ.

    ಸಾಂಪ್ರದಾಯಿಕ ಎದುರಾಳಿಯೊಂದಿಗಿನ ಕಾಳಗದಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಅವರಿಗೆ ಸಾಥ್ ನೀಡಿದ ಪಾಂಡ್ಯ (Hardik Pandya) 37 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿಯೊಂದಿಗೆ 108.10 ಸ್ಟ್ರೈಕ್‌ರೇಟ್‌ನಲ್ಲಿ 40 ರನ್ ಸಿಡಿಸಿದರು. ಅಲ್ಲದೇ ಬೌಲಿಂಗ್‌ನಲ್ಲೂ ಪರಾಕ್ರಮ ತೋರಿದ ಪಾಂಡ್ಯ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪಾಂಡ್ಯ ಆಲ್‌ರೌಂಡರ್ ಆಟಕ್ಕೆ ನಾಯಕ ರೋಹಿತ್ ಶರ್ಮಾ (RohitSharma) ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ರೋಚಕ ಜಯ – ಇದು ಕೊಹ್ಲಿ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್

    ಬಳಿಕ ಮಾತನಾಡಿದ ಪಾಂಡ್ಯ, ತನ್ನ ತಂದೆಯನ್ನು ನೆನೆದು ಕಣ್ಣೀರಿಟ್ಟರು. ನಾನು ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ನಾನು ಅಳುತ್ತಿರುವುದು ತಂದೆ ಇಲ್ಲ ಎಂಬ ಕಾರಣಕ್ಕೆ ಅಲ್ಲ. ನಾನು ನನ್ನ ಮಗನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೆ ನನ್ನ ತಂದೆ ಏನೆಲ್ಲ ಮಾಡಿದ್ರೋ ಅದನ್ನು ನಾನು ನನ್ನ ಮಗನಿಗೆ ಮಾಡುತ್ತೇನೋ ಇಲ್ಲವೋ ಎಂದು ಗೊತ್ತಿಲ್ಲ. ಆರೂವರೆ ವರ್ಷದ ಹುಡುಗನ ಕನಸಿಗೋಸ್ಕರ ನನ್ನ ತಂದೆ ಅಂದು ನಗರವನ್ನೇ ಬಿಟ್ಟುಹೋದರು. ಆದರೆ ನಾನು ಇಂದು ಏನು ಮಾಡುತ್ತಿದ್ದೇನೆ ಎಂಬುದೂ ಅವರಿಗೆ ತಿಳಿದಿಲ್ಲ. ಇಂದಿನ ಈ ಆಟ, ಗೆಲುವು ನನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಭಾವುಕರಾದರು. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    ಹಾರ್ದಿಕ್ ಪಾಂಡ್ಯ ದಾಖಲೆ:
    ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಕೂಡ ಮಾಡಿದ್ದಾರೆ. ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಭಾರತ ಪರ 1,000 ರನ್ ಗಳಿಸಿದ ಹಾಗೂ 50 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ 7ನೇ ಆಟಗಾರನಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • OTTಯಲ್ಲೂ ದಾಖಲೆ ಬರೆದ ಇಂಡೋ-ಪಾಕ್ ಕದನ

    OTTಯಲ್ಲೂ ದಾಖಲೆ ಬರೆದ ಇಂಡೋ-ಪಾಕ್ ಕದನ

    ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 WorldCup) ರಣರೋಚಕ ಇಂಡೋ-ಪಾಕ್ ಕದನ ಒಟಿಟಿಯಲ್ಲೂ (OTT) ಹೊಸ ದಾಖಲೆ ಬರೆದಿದೆ. ಏಕಕಾಲಕ್ಕೆ 1.8 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.

    ಭಾನುವಾರ ಸೂಪರ್‌ಸಂಡೇನಲ್ಲಿ ನಡೆದ ಭಾರತ-ಪಾಕಿಸ್ತಾನ (India – Pakistan) ವಿಶ್ವಕಪ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 20 ನಿಮಿಷ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಅಬ್ಬರ ಮೈ ಜುಮ್ಮೆನ್ನಿಸುವಂತಿತ್ತು. ನೋಬಾಲ್ ಗಿಫ್ಟ್‌ನಿಂದಾಗಿ ಕೊಹ್ಲಿ ಕ್ಲೀನ್‌ಬೌಲ್ಡ್ ಆದರೂ ಫ್ರೀ ಹಿಟ್‌ನಲ್ಲಿ 3 ರನ್ ಕದ್ದರು. ಈ ವೇಳೆ ಅತ್ಯಂತ ಹೆಚ್ಚಿನ ಜನರು ವೀಕ್ಷಣೆ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ (HotStar) ಆರಂಭದಲ್ಲಿ 1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಕೊನೆಯ ಓವರ್ ತಲುಪುವಷ್ಟರಲ್ಲಿ 1.8 ಕೋಟಿಗೆ ದಾಟಿತ್ತು. ಇದಕ್ಕೂ ಮುನ್ನ ಕಳೆದ ಆಗಸ್ಟ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ 1.3 ಕೋಟಿ ಜನ ವೀಕ್ಷಣೆ ಮಾಡಿದ್ದು, ದಾಖಲೆಯಾಗಿತ್ತು. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರೋದು ಕೆಲವರಿಗೆ ಬೇಸರ ತರಿಸಿದೆ – ಕಲ್ಲಡ್ಕ ಪ್ರಭಾಕರ್ ಭಟ್

    ಕ್ರೀಡಾಂಗಣದಲ್ಲಿ 90 ಸಾವಿರ ಮಂದಿ ವೀಕ್ಷಣೆ:
    1 ಲಕ್ಷ ಆಸನದ ಸಾಮರ್ಥ್ಯ ಹೊಂದಿರುವ ವಿಶ್ವದ 2ನೇ ಅತಿದೊಡ್ಡ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನದ ವೇಳೆ 90,923 ಮಂದಿ ವೀಕ್ಷಕರು ಉಪಸ್ಥಿತರಿದ್ದರು. 2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ (Australia -NewZealand) ನಡುವಿನ ಪಂದ್ಯವನ್ನು 90,013 ಮಂದಿ ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಬಾರಿ ಭಾರತ ಮತ್ತು ಪಾಕಿಸ್ತಾನದ ವೀಕ್ಷರ ಸಂಖ್ಯೆ ಹೊಸ ದಾಖಲೆ ಬರೆದಿದೆ.

    ಮೆಲ್ಬರ್ನ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಇಂಡೋ ಪಾಕ್ ಕದನದಲ್ಲಿ 20 ಓವರ್‌ಗಳಲ್ಲಿ ಪಾಕ್ 159 ರನ್ ಗಳಿಸಿದ ಪಾಕಿಸ್ತಾನ, ಭಾರತಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ

    ಮೆಲ್ಬರ್ನ್: ಟಿ20 ಕ್ರಿಕೆಟ್ ವಿಶ್ವಕಪ್ (T20 WorldCup) ಟೂರ್ನಿಯ ಸೂಪರ್ 12ರ ಹಂತದ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ (Virat Kohli), ಪಾಕಿಸ್ತಾನ (Pakistan) ವಿರುದ್ಧ ಭಾರತಕ್ಕೆ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು.

     

    View this post on Instagram

     

    A post shared by AnushkaSharma1588 (@anushkasharma)

    ಈ ಇನಿಂಗ್ಸ್ ಬಗ್ಗೆ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ, ನೀನು ಈ ರಾತ್ರಿ ಜನರಲ್ಲಿ ಸಾಕಷ್ಟು ಸಂತಸವನ್ನು ತಂದಿರುವೆ. ಅದೂ ದೀಪಾವಳಿ ಮುನ್ನಾದಿನ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!

    `ನೀನು ನನ್ನ ಅದ್ಭುತ. ನಿನ್ನ ಸ್ಥೈರ್ಯ, ತ್ಯಾಗ ಮತ್ತು ವಿಶ್ವಾಸ ಎಂತಹವರನ್ನೂ ಚಕಿತಗೊಳಿಸುತ್ತದೆ. ನಾನು ನನ್ನ ಜೀವನದಲ್ಲೇ ಅತ್ಯುತ್ತಮ ಪಂದ್ಯವನ್ನು ನೋಡಿದೆ ಎಂದು ಹೇಳಬಲ್ಲೆ. ತನ್ನ ತಾಯಿ ಏಕೆ ರೂಮಿನಲ್ಲಿ ಕುಣಿದಾಡುತ್ತಿದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಗಳು ಇನ್ನೂ ಚಿಕ್ಕವಳು. ಆದರೆ ಆ ರಾತ್ರಿ ಅವಳ ಅಪ್ಪ ಅತ್ಯಂತ ಕಠಿಣ ಸಂದರ್ಭದಲ್ಲಿ, ತನ್ನ ಮೇಲೆ ಅಪಾರ ಹೊರೆ ಇದ್ದಾಗಲೂ ಇಂದೆಂದಿಗಿಂತ ಹೆಚ್ಚು ಪ್ರಬಲವಾಗಿ ಮತ್ತು ಪ್ರಬುದ್ಧವಾಗಿ ಸವಾಲನ್ನು ಮೀರಿ ಹೊರ ಬಂದಿದ್ದರು. ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದ್ದರು ಎಂಬುದನ್ನು ಮುಂದೊಂದು ದಿನ ಅರ್ಥ ಮಾಡಿಕೊಳ್ಳುತ್ತಾಳೆ. ನಾನು ತುಂಬಾ ಹೆಮ್ಮೆ ಪಡುತ್ತಿದ್ದೇನೆ’ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ಪ್ರತಿಯೊಂದು ಕ್ಷಣದಲ್ಲೂ ನನ್ನ ಜೊತೆಗೆ ಇದ್ದುದ್ದಕ್ಕಾಗಿ ನನ್ನ ಪ್ರೀತಿಗೆ ಧನ್ಯವಾದಗಳು. ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    ಮೆಲ್ಬರ್ನ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಇಂಡೋ ಪಾಕ್ ಕದನದಲ್ಲಿ 20 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿ, ಭಾರತಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ವಿರುದ್ಧ ರೋಚಕ ಜಯ – ಇದು ಕೊಹ್ಲಿ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್

    ಪಾಕ್ ವಿರುದ್ಧ ರೋಚಕ ಜಯ – ಇದು ಕೊಹ್ಲಿ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್

    ಮೆಲ್ಬರ್ನ್: ಟಿ20 ವಿಶ್ವಕಪ್ (T20 WorldCup 2022) ಚುಟುಕು ಪಂದ್ಯಾವಳಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಭಾರತ (Team India) ಪಾಕಿಸ್ತಾನದ (Pakistan) ವಿರುದ್ಧ ರೋಚಕ ಜಯ ಸಾಧಿಸಿದೆ.

    https://twitter.com/dazzlers_ss/status/1584159515574145025?ref_src=twsrc%5Etfw%7Ctwcamp%5Etweetembed%7Ctwterm%5E1584159515574145025%7Ctwgr%5E119503e145b4951ba5c60991a291e0af8b8614b1%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Ft20-world-cup-2022-virat-kohli-breaks-into-tears-after-ind-beat-pak-at-mcg-zp-au50-459467.html

    ಈ ರೋಚಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಸಂಭ್ರಮಿಸುತ್ತಲೇ ಭಾವುಕರಾದರು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಖುಷಿಯಲ್ಲೇ ಕಣ್ಣೀರು ಹಾಕಿದರು. ಇತ್ತ ಕಿಂಗ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಮೈದಾನಕ್ಕೆ ಓಡಿ ಬಂದು ಕೊಹ್ಲಿ ಭಾವುಕತೆಯಲ್ಲಿ ಪಾಲುದಾರರಾದರು. ಇದನ್ನೂ ಓದಿ: ದೀಪಾವಳಿ ಶುರು – ಪಾಕ್ ವಿರುದ್ಧ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೊಂಬಾಳೆ ಫಿಲ್ಮ್ಸ್, ಅಮಿತ್ ಶಾ ಮೆಚ್ಚುಗೆ

    ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಅಚ್ಚರಿ ಹೇಳಿಕೆಗಳನ್ನೂ ನೀಡಿದ್ದಾರೆ. ಈ ಗೆಲವು ಹೇಗೆ ಸಂಭವಿಸಿತು ಅನ್ನೋದೆ ನನಗೆ ಅಚ್ಚರಿಯಾಗಿದೆ. ಹಾರ್ದಿಕ್ ಪಾಂಡ್ಯ ಗೇಮ್ ಮಧ್ಯದಲ್ಲಿ ನನ್ನನ್ನು ನಂಬಿ, ಕೊನೆಯವರೆಗೂ ಇರಿ ಎಂದು ಹೇಳುತ್ತಲೇ ಇದ್ದರು. ಅದನ್ನು ನಾನೆಂದಿಗೂ ಮರೆಯೋದಿಲ್ಲ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

    ನನ್ನ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್:
    ಮುಂದುವರಿದು ಮಾತನಾಡಿದ ಕಿಂಗ್ ಕೊಹ್ಲಿ, ಇಲ್ಲಿವರೆಗೆ ನಾನು 2016ರ ಟಿ20 ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಇನ್ನಿಂಗ್ಸ್ ಕೆರಿಯರ್ ಬೆಸ್ಟ್ ಇನ್ನಿಂಗ್ಸ್ ಆಗಿತ್ತು. ಆ ಪಂದ್ಯದಲ್ಲಿ ನಾನು 52 ಎಸೆತಗಳಲ್ಲಿ 82 ರನ್ ಗಳಿಸಿದ್ದೆ. ಇಂದು ನಾನು 53 ಎಸೆತಗಳಲ್ಲಿ 82 ರನ್ ಗಳಿಸಿದ್ದೇನೆ. ಇದು ನನ್ನ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್ ಆಗಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಸೂಪರ್; `ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಕೊಹ್ಲಿನ ಹೊತ್ಕೊಂಡು ಕುಣಿದ ಹಿಟ್‌ಮ್ಯಾನ್:
    ಕೊನೆಯ ಎಸೆತದಲ್ಲಿ ಅಶ್ವಿನ್ ಸಿಂಗಲ್ ಕದಿಯುವಲ್ಲಿ ಯಶಸ್ವಿಯಾದ ಬಳಿಕ ಅಕ್ಷರಶಃ ಗದ್ಗದಿತರಾದ ಕೊಹ್ಲಿ ಭಾವುಕರಾದರು. ಅದೇ ಸಮಯಕ್ಕೆ ಮೈದಾನಕ್ಕಿಳಿದ ರೋಹಿತ್ ಶರ್ಮಾ (Rohit Sharma), ಕೊಹ್ಲಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದರು. ಇಷ್ಟಕ್ಕೆ ಸುಮ್ಮನಾಗದ ಹಿಟ್‌ಮ್ಯಾನ್, ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು.

    ಟಿ20 ವಿಶ್ವಕಪ್ ಆರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಪಾಕ್ ತಂಡ ಟೀಂ ಇಂಡಿಯಾಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]