Tag: shankaracharya

  • ಮುಂದಿನ 50 ದಿನ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಶ್ರೀ ವಿಧುಶೇಖರ ಭಾರತಿ ಸ್ವಾಮಿ

    ಮುಂದಿನ 50 ದಿನ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಶ್ರೀ ವಿಧುಶೇಖರ ಭಾರತಿ ಸ್ವಾಮಿ

    ಬೆಂಗಳೂರು: ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರ ವಿಜಯಯಾತ್ರೆ 2022 ಪ್ರಯುಕ್ತ ನಿನ್ನೆಯಿಂದ ಬೆಂಗಳೂರಿನ ಶೃಂಗೇರಿ ಶಂಕರಮಠ ಶಂಕರಪುರಂನಲ್ಲಿ ಮುಂದಿನ 50 ದಿನಗಳ ಕಾಲ ವಾಸ್ತವ್ಯ ಹೂಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲು ಆರಂಭಿಸಿದ್ದಾರೆ. ಶ್ರೀಗಳ ವಿಜಯಯಾತ್ರೆ ಶುಕ್ರವಾರ ಬೆಂಗಳೂರಿಗೆ ಆಗಮಿಸಿದಾಗ ಭಕ್ತಾದಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.

    ಬೆಂಗಳೂರಿನ ಬಸವನಗುಡಿಯ ನಾರ್ಥ್ ರೋಡ್ ವೇದ ಮಾಗಡಿ ಕನಿಕರ ಪಾಠಶಾಲಾ ಮುಂಭಾಗದಿಂದ ಶೃಂಗೇರಿ ಶಂಕರಮಠ ಶಂಕರಪುರಂ ವರೆಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಅದ್ದೂರಿಯ ಮೆರವಣಿಗೆ, ವೇದ ಮಂತ್ರ ಘೋಷ ಹಾಗೂ ವಿವಿಧ ಜಾನಪದ ಕಲೆಗಳೊಂದಿಗೆ ನಡೆಯಿತು.

    ಇಂದಿನಿಂದ ಐವತ್ತು ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ಶ್ರೀಗಳು ಬೆಂಗಳೂರಿನ ಶೃಂಗೇರಿ ಶಂಕರಮಠದಲ್ಲಿ ಭಕ್ತಾದಿಗಳಿಗೆ ದರ್ಶನ ಹಾಗೂ ಆಶೀರ್ವಚನ ನೀಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

  • ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ ಕುರಿತು ಮೋದಿಗೆ ಪತ್ರ ಬರೆದ ದೇವೇಗೌಡರು

    ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ ಕುರಿತು ಮೋದಿಗೆ ಪತ್ರ ಬರೆದ ದೇವೇಗೌಡರು

    ಬೆಂಗಳೂರು: ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿರುವುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದು ಸಂತಸ ಹಂಚಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೇದಾರನಾಥದಲ್ಲಿ ನವೆಂಬರ್ 5 ರಂದು ನೀವು ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕಂಡು ತುಂಬಾ ಸಂತೋಷವಾಗಿದೆ. ನಿಮಗೆ ಇದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಕರ್ನಾಟಕದ ಚಿಕ್ಕಮಗಳೂರಿನ ಸೃಂಗೇರಿಯ ಶಾರದಾ ಪೀಠದ ಅನುಯಾಯಿ ನಾನು. ನಿಮಗೆ ತಿಳಿದಿರುವಂತೆ ಮಹಾನ್ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿಕೇಂದ್ರಗಳಲ್ಲಿ ಇದೂ ಕೂಡ ಒಂದು. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ. ಇದನ್ನೂ ಓದಿ: ನಾಲ್ವರು ಮಹಿಳಾ ಹೋರಾಟಗಾರ್ತಿಯರ ಹತ್ಯೆಯಾಗಿದೆ ಎಂದ ತಾಲಿಬಾನ್

    ಶೃಂಗೇರಿ ಮಠ ನನ್ನನ್ನು ಆಕರ್ಷಿಸಿದ್ದು, ಅವರ ಸಾಮರಸ್ಯದಿಂದ. ಇಲ್ಲಿ ಅನೇಕ ಶತಮಾನಗಳಿಂದ ರಾಜರು, ಆಡಳಿತಗಾರರಿಗೆ ಆಧ್ಯಾತ್ಮಿಕದ ಅರಿವನ್ನು ಮೂಡಿಸಿದ್ದಾರೆ. ಒಡೆಯರು, ಪೇಶ್ವೆಗಳು, ಕೆಳದಿ ಹಾಗೂ ತಿರೂವಾಂಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರಿನಲ್ಲಿ ಆಡಳಿತ ನಡೆಸಿದ ರಾಜರುಗಳಾದ ಹೈದರಿ ಅಲಿ, ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದ್‍ನ ನಿಜಾಮರು ಮಠಕ್ಕೆ ಆಗಮಿಸಿ ಭಕ್ತಿಯನ್ನು ಸಲ್ಲಿಸುತ್ತಿದ್ದರು ಜೊತೆಗೆ ಇಲ್ಲಿಂದ ಮಾರ್ಗದರ್ಶನವನ್ನು ಪಡೆದಿದ್ದಾರೆ. ಇದನ್ನೂ ಓದಿ: ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಇಲ್ಲಿರುವ ಮಠದ ಮಾರ್ಗದರ್ಶನ ಶ್ರೀಮಂತ ಪರಂಪರೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿರುವುದರಿಂದ ನನಗೆ ವೈಯಕ್ತಿಕವಾಗಿ ಹೆಚ್ಚು ಭಕ್ತಿ ಇದೆ. ನಾನು ಪವಿತ್ರವಾದ ಪೀಠದಿಂದ ಪಡೆದಂತಹ ಆಶೀರ್ವಾದಗಳಿಗೆ ಸದಾ ಚಿರಋಣಿಯಾಗಿದ್ದೇನೆ.

    ಶಂಕರಾಚಾರ್ಯರ ಪ್ರತಿಮೆಯನ್ನು ನೋಡಲು ನಾನು ಶೀಘ್ರದಲ್ಲಿ ಕೇದಾರನಾಥಕ್ಕೆ ತೆರಲುತ್ತೇನೆ. ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದರೊಂದಿಗೆ ಕರ್ನಾಟಕದ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಿಂದ ಕಪ್ಪುಶಿಲೆಯನ್ನು ಪ್ರತಿಮೆಗಾಗಿ ಬಳಸಲಾಗಿದೆ ಎಂಬುದು ಗೊತ್ತಾಗಿದೆ. ಶಂಕರಾಚಾರ್ಯರ ಪ್ರತಿಮೆ ರೂಪುಗೊಳ್ಳಲು ಕರ್ನಾಟಕದ ಪಾತ್ರ ದೊಡ್ಡದಿದೆ. ಎಲ್ಲವೂ ದೇವರ ಕೃಪೆ. ಪರಮಾತ್ಮನ ಕೃಪೆ ನಿಮ್ಮ ಮೇಲಿರಲಿ. ಇದನ್ನೂ ಓದಿ: ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ: ಸುಧಾಕರ್ ಪ್ರಶ್ನೆ

  • ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕರಾಚಾರ್ಯ ಪ್ರತಿಮೆಯನ್ನು ಅನಾವರಣಗೊಳಿಸಿದರು.

    MODI

    ಮೊದಲಿಗೆ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ ಮೋದಿ ಬಳಿಕ, ದೇಗುಲದ ಹಿಂದೆ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಆದಿಗುರು ಶಂಕರಾಚಾರ್ಯ ಅವರ ಪುತ್ಥಳಿ ಅನಾವರಣಗೊಳಿಸಿದರು. ಇದನ್ನೂ ಓದಿ: ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    MODI

    2013ರ ಜಲಪ್ರಳಯದಲ್ಲಿ ಹಾನಿಗೀಡಾದ ಶಂಕರಾಚಾರ್ಯ ಸಮಾಧಿಯನ್ನು ಇದೀಗ ಪುನರ್ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಕಾರ್ಯಾಲಯದ ಸೂಚನೆಯ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಈ ಪ್ರತಿಮೆಯನ್ನು ನಿರ್ಮಿಸಿದ್ದು, ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‍ನ ಕೃಷ್ಣಶಿಲೆ ಬಳಸಲಾಗಿದೆ. ಇದನ್ನೂ ಓದಿ: ಬಿಹಾರ್‌: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!

    ಜೊತೆಗೆ ರೂ.400 ಕೋಟಿ ಮೌಲ್ಯದ ಕೇದಾರಪುರಿ ಮರು ನಿರ್ಮಾಣ ಯೋಜನಗಳು ಸೇರಿ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಪುತ್ಥಳಿ ಅನಾವರಣದ ಕಾರ್ಯಕ್ರಮ 12 ಜ್ಯೋತಿರ್ಲಿಂಗಗಳು, 4 ಶಂಕರಾಚಾರ್ಯರ ಮಠಗಳು, ದೇಶದ ಇತರ ದೇವಾಲಯಗಳಲ್ಲಿ ನೇರ ಪ್ರಸಾರವಾಗಲಿದೆ. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ಕೇದಾರನಾಥದಲ್ಲಿಯೇ ಶಂಕರಾಚಾರ್ಯರು ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಇದೆ. ಹೀಗಾಗಿ ಪ್ರಧಾನಿ ಮೋದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಈ ವೇಳೆ ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.