`ಆರ್ಆರ್ಆರ್’ (RRR) ಚಿತ್ರದ ಸೂಪರ್ ಡೂಪರ್ ಸಕ್ಸಸ್ ನಂತರ ರಾಮ್ ಚರಣ್ (Ram Charan) ನಿರ್ದೇಶಕ ಶಂಕರ್ (Shankar) ಜೊತೆ ಕೈಜೋಡಿಸಿದ್ದಾರೆ. ರಾಮ್ ಚರಣ್ ಅವರ ಹುಟ್ಟುಹಬ್ಬದ (ಮಾ.27) ಸಂದರ್ಭದಲ್ಲಿ ತಮ್ಮ ಹೊಸ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.
ರಾಮ್ ಚರಣ್ ಕುಟುಂಬದಲ್ಲಿ ಇದೀಗ ಡಬಲ್ ಸಂಭ್ರಮ. ಒಂದ್‌ಕಡೆ `ನಾಟು ನಾಟು’ (Naatu Naatu) ಹಾಡಿಗೆ ಆಸ್ಕರ್ (Oscar) ಸಿಕ್ಕಿರೋದು. ಮತ್ತೊಂದು ಕಡೆ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರದ ಟೈಟಲ್ ಘೋಷಣೆ ಮಾಡಿರೋದು. ರಾಮ್ ಚರಣ್-ನಿರ್ದೇಶಕ ಶಂಕರ್ ಕಾಂಬಿನೇಷನ್ ಹೊಸ ಸಿನಿಮಾದ ಟೈಟಲ್ ಯಾವುದು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
View this post on Instagram
`ಗೇಮ್ ಚೇಂಜರ್’ ಎಂಬ ಪವರ್‌ಫುಲ್ ಟೈಟಲ್ ಅನ್ನ ರಾಮ್ ಚರಣ್ ನಟನೆಯ ಚಿತ್ರಕ್ಕೆ ಇಡಲಾಗಿದೆ. ಚರಣ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಚರಣ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತೆಲಂಗಾಣಕ್ಕೆ ತೆರಳಿ ಪತ್ನಿಗೆ ವಸಿಷ್ಠ ಸಿಂಹ ಸರ್ಪ್ರೈಸ್
ಇನ್ನೂ ಸೋಮವಾರ (ಮಾ.27) ರಾಮ್ ಚರಣ್ ಹುಟ್ಟುಹಬ್ಬವಿರುವ ಕಾರಣ ಒಂದು ದಿನ ಮುಂಚಿತವಾಗಿಯೇ `ಗೇಮ್ ಚೇಂಜರ್’ ಸಿನಿಮಾ ತಂಡ ಚರಣ್ ಬರ್ತ್ಡೇ ಮಾಡಿ ಸಂಭ್ರಮಿಸಿದ್ದಾರೆ.















ಕಮಲ್ ಮತ್ತು ಶಂಕರ್ ಕಾಂಬಿನೇಷನ್‌ನ `ಇಂಡಿಯನ್’ ಚಿತ್ರ 1996ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಬಳಿಕ ಇದರ ಸೀಕ್ವೇಲ್ 2019ರಿಂದ ಚಿತ್ರೀಕರಣ ಶುರುವಾಯಿತು. 2020ರಲ್ಲಿ ನಡೆದ ಅವಘಡದಲ್ಲಿ ಮೂರು ಕಾರ್ಮಿಕರು ಜೀವ ಕಳೆದುಕಂಡಿದ್ದರು. ಬಳಿಕ ಕೊರೊನಾ ಕಾಟದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ 60% ಶೂಟಿಂಗ್ ಆಗಿದ್ದ ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:
`ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಸ್ಥಗಿತಗೊಂಡಿದ್ದ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಕಮಲ್‌ಗೆ ನಿರ್ದೇಶಕ ಶಂಕರ್ ಸಾಥ್ ನೀಡಿದ್ದಾರೆ. ಆದರೆ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಬರುತ್ತಿದೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಮದುವೆಯಾಗಿ, ಮಗನ ಆರೈಕೆಯಲ್ಲಿರುವುದರಿಂದ ಮತ್ತೆ ಚಿತ್ರೀಕರಣದಿಂದ ಮುಂದುವರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರತಂಡ ಕಾಜಲ್‌ನ್ನ ಚಿತ್ರದಿಂದ ಕೈ ಬಿಡಲಾಗಿದೆ.
ಇನ್ನು ಕಮಲ್ ಹಾಸನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ನ `ಇಂಡಿಯನ್ 2’ಗೆ ಫೈನಲ್ ಮಾಡಲು ಯೋಚಿಸಿದೆಯಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬರಲಿದೆ.












