Tag: Shankar Ashwath

  • ಚಾಲೆಂಜಿಂಗ್ ಸ್ಟಾರ್ ರಾಜ್, ವಿಷ್ಣು ಅವರಿಗೆ ಸಮ ಎಂದ್ರು ಶಂಕರ್ ಅಶ್ವಥ್!

    ಚಾಲೆಂಜಿಂಗ್ ಸ್ಟಾರ್ ರಾಜ್, ವಿಷ್ಣು ಅವರಿಗೆ ಸಮ ಎಂದ್ರು ಶಂಕರ್ ಅಶ್ವಥ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಾ.ರಾಜ್‍ಕುಮಾರ್ ಹಾಗೂ ವಿಷ್ಣುವರ್ಧನ್‍ಗೆ ಸಮ ಎಂದು ಹಿರಿಯ ನಟ ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಜೀವನೋಪಯಕ್ಕಾಗಿ ಉಬರ್ ಕ್ಯಾಬ್ ಡ್ರೈವರ್ ಆಗಿದ್ದ ಶಂಕರ್ ಅಶ್ವಥ್ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ಕಮ್‍ಬ್ಯಾಕ್ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್‍ಕುಮಾರ್, ವಿಷ್ಣುವರ್ಧನ್‍ಗೆ ಸಮ ಎನ್ನುವುದ್ದನ್ನು ಫೇಸ್‍ಬುಕ್ ಪೇಜ್‍ವೊಂದರಲ್ಲಿ ರಾಜ್‍ಕುಮಾರ್, ವಿಷ್ಣುವರ್ಧನ್, ದರ್ಶನ್‍ರ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಎಲ್ಲರಲ್ಲೂ ಪರಮಾತ್ಮ ಇರುತ್ತಾನೆ. ಆತನನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು ಎಂದು ನನ್ನ ತಂದೆ ಹೇಳುತ್ತಿದ್ದರು. ಆ ಮೂರು ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ ಎಂದು ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಅಂದು ಡಾ. ರಾಜ್‍ಕುಮಾರ್ ತಮ್ಮ ಜತೆಯಲ್ಲಿ ನಟಿಸುತ್ತಿದ್ದ ಕಲಾವಿದರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ನಂತರ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಕಲಾವಿದರಿಗೆ ಮಾತ್ರವಲ್ಲ ಕಷ್ಟದಲ್ಲಿರುವ ಅದೆಷ್ಟೊ ಕುಟುಂಬಗಳಿಗೆ ಬೆಳಕಾಗಿದ್ದರು. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಈ ಹಿಂದೆ ಶಂಕರ್ ಅಶ್ವಥ್ ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯ ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು ಎಂದು ಚಾಲೆಂಜಿಂಗ್ ಸ್ಟಾರ್ ಬಗ್ಗೆ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.

  • ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಶಂಕರ್ ಅಶ್ವಥ್ ಹೊಗಳಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಸಿನಿಮಾದಲ್ಲಿ ಅವಕಾಶ ಸಿಗದೇ ಕ್ಯಾಬ್ ಓಡಿಸುತ್ತಿದ್ದ ಶಂಕರ್ ಅಶ್ವಥ್ ಅವರಿಗೆ ದರ್ಶನ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ದರ್ಶನ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ದರ್ಶನ್ ಜೊತೆ ಕಾಲ ಕಳೆದ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ನನ್ನು ಹೊಗಳಿದ್ದಾರೆ. ಸದ್ಯ ಅವರು ದರ್ಶನ್ ಹಾಗೂ ಚಿತ್ರತಂಡದ ಜೊತೆ ಇರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯ ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು ಎಂದು ಶಂಕರ್ ಅಶ್ವಥ್ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ನಿಜಕ್ಕೂ ನಾನು ಊಬರ್ ಕ್ಯಾಬ್ ಚಾಲಕನಾಗಿದ್ದು, ಬಹಳ ಹೆಮ್ಮೆಯನ್ನು ತಂದಿದೆ. ಕಾರಣ ನೀವೆಲ್ಲಾ ಸ್ಪಂದಿಸಿದ್ದು. ಜನ ನನ್ನನ್ನು ಈಗ ಕಾಣುವ ರೀತಿ, ಗೌರವಿಸುತ್ತಿರುವುದನ್ನು ಕಂಡರೆ ಯಾವ ಜನ್ಮದ ಪುಣ್ಯವೋ? ಎಲ್ಲರಿಗೂ ಧನ್ಯವಾದಗಳು ಎಂದು ಶಂಕರ್ ಫೇಸ್‍ಬುಕ್ ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಈ ಚಿತ್ರದ ನಂತರ ಶಂಕರ್ ಅಶ್ವಥ್ ಅವರಿಗೆ ಬೇರೆ ಬೇರೆ ಸಿನಿಮಾದ ಅವಕಾಶಗಳು ಸಿಕ್ಕಿದ್ದು, ದರ್ಶನ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ. ಅಲ್ಲದೇ ದರ್ಶನ್ ಜೊತೆಯಿರುವ 3 ಫೋಟೋವನ್ನು ಫೇಸ್‍ಬುಕ್ ಪೋಸ್ಟ್ ಮಾಡುವ ಮೂಲಕ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಸದ್ಯ ದರ್ಶನ್ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಬಿ ಸುರೇಶ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ಪಿ. ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

  • ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಬೆಂಗಳೂರು: ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು.

    ಒಬ್ಬ ದೊಡ್ಡ ನಟನ ಮಗನ ಇಂದಿನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಆಗ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದರು.

    ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಬೇಸರಗೊಂಡಿದ್ದ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ದರ್ಶನ್ ತಮ್ಮ ಮಾತಿನಂತೆ ನಡೆದುಕೊಂಡಿದ್ದು, ಶಂಕರ್ ಅಶ್ವಥ್ ಮುಖದಲ್ಲಿ ನಗುವನ್ನು ಮೂಡಿಸಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ದರ್ಶನ್ ತಾವು ನಟಿಸುತ್ತಿರುವ `ಯಜಮಾನ’ ಸಿನಿಮಾದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಶಂಕರ್ ಅಶ್ವಥ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಶೂಟಿಂಗ್ ನಲ್ಲಿ ಇದೀಗ ಶಂಕರ್ ಅಶ್ವಥ್ ಭಾಗಿಯಾಗಿದ್ದು, ಈ ವೇಳೆ ದರ್ಶನ್ ಜತೆಗೆ ಫೋಟೋ ತೆಗೆದುಕೊಂಡಿದ್ದಾರೆ.

    `ಯಜಮಾನ’ ಸಿನಿಮಾ ಬಿ. ಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. `ವಿಷ್ಣುವರ್ಧನ’ ಸಿನಿಮಾದ ಖ್ಯಾತಿಯ ಪಿ.ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. `ಕುರುಕ್ಷೇತ್ರ’ ನಂತರ `ಯಜಮಾನ’ ಚಿತ್ರ ಬಿಡುಗಡೆಯಾಗಲಿದೆ.

  • ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಬೆಂಗಳೂರು: ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್ ಅಶ್ವಥ್ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ದರ್ಶನ್ ಚಿತ್ರತಂಡದ ಹತ್ತಿರ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಶಂಕರ್ ಅಶ್ವಥ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಯಜಮಾನ ಚಿತ್ರದಲ್ಲಿ ನನಗೂ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನೂ ಓದಿ: ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

  • ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಮೈಸೂರು: ಸ್ವಾಭಿಮಾನದ ಬದುಕು ಕಟ್ಟುಕೊಂಡಿದ್ದೇನೆ. ಆದ್ದರಿಂದ ಊಬರ್ ಕ್ಯಾಬ್ ಚಾಲಕನಾಗಿದ್ದೇನೆ ಎಂದು ಶಂಕರ್ ಅಶ್ವಥ್ ಹೇಳಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾಡನಾಡಿದ ಅವರು, ಇದರ ಬಗ್ಗೆ ನನಗೆ ಯಾವುದೇ ನೋವಾಗಿಲ್ಲ. ಚಿತ್ರರಂಗ ನನ್ನನ್ನು ನಿರ್ಲಕ್ಷಿಸಿದೆ ಅಂತಲ್ಲ. ನನ್ನ ನಟನೆಗೆ ಬೇಕಾದ ಪಾತ್ರ ಸೃಷ್ಟಿಯಾಗಿಲ್ಲ ಅಷ್ಟೇ. ನಾನು ಚಿತ್ರರಂಗವನ್ನು ಟೀಕಿಸುವುದಿಲ್ಲ. ಇದುವರೆಗೂ ನಾನು ಚಾಲಕನಾಗಿ ಕೆಲಸ ಮಾಡುತ್ತಿರುವ ಸಂಗತಿ ಸಿನಿಮಾರಂಗದವರಿಗೆ ತಿಳಿದಿಲ್ಲ. ಹೆತ್ತ ಮಕ್ಕಳೇ ತಂದೆ ತಾಯಿಯನ್ನು ದೂರು ಮಾಡುತ್ತಾರೆ. ಹಾಗೇ ಚಿತ್ರರಂಗ ಕೂಡ. ನನಗೆ ಅದೃಷ್ಟ ಇಲ್ಲ, ಹೀಗಾಗಿ ಅವಕಾಶ ಸಿಕ್ಕಿಲ್ಲ. ಅದಕ್ಕೆ ಯಾರನ್ನೂ ದೂರಿ ಏನು ಪ್ರಯೋಜನ ಹೇಳಿ? ಎಂದ್ರು.

    ನಾನು ಕಾರ್ ಡ್ರೈವರ್ ಆಗಿದ್ದೇನೆ ಅಂತಾ ಕೇಳಿ ನನ್ನ ತಾಯಿ ನೊಂದುಕೊಂಡು ಕಣ್ಣೀರಿಟ್ಟರು. ಅದು ನನಗೆ ನೋವುಂಟು ಮಾಡಿದೆ. ಆದರೆ ನನ್ನ ಹೆಂಡತಿ ಇಡೀ ಸಂಸಾರದ ಹೊರೆ ಹೊತ್ತಿದ್ದರೂ ನನಗೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ನಾನು ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಂದೆ ಹೇಳಿಕೊಟ್ಟಿದ್ದ ಮಾತು ಹಾಗೂ ಆತ್ಮಸ್ಥೈರ್ಯ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ ಅಂತ ಹೇಳಿದ್ರು.

    ನನಗೆ ಊಬರ್ ಚಾಲಕನಾಗಿರುವುದಕ್ಕೆ ಬೇಸರವಿಲ್ಲ. ನಾನು ಡ್ರಾಪ್ ಮಾಡುವ ಪ್ರಯಾಣಿಕರು ನನ್ನನ್ನು ಚಾಮಯ್ಯ ಮೇಷ್ಟ್ರು ಮಗ ಎಂದೇ ಗುರುತಿಸುತ್ತಾರೆ. ಕೆಲವರು ನನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಕೆಲವರು ನಾನು ಕಾರು ಓಡಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ನನಗೆ ನಾನು ಕಾರು ಓಡಿಸುತ್ತಿರುವುದರಿಂದ ಅಪಮಾನವಾಗಿಲ್ಲ. ತುಂಬಾ ನೆಮ್ಮದಿಯಾಗಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದೇನೆ ಎಂದು ಆನಂದವಾಗಿದೆ ಅಂದ್ರು.

    https://www.youtube.com/watch?v=OvvigGkBTdM

    https://www.youtube.com/watch?v=vT5k63FzhD8

     

  • ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಹಿರಿಯ ನಟ ಕೆ.ಎಸ್. ಅಶ್ವಥ್ ಅವರ ಪುತ್ರ ಈಗ ಜೀವನ ನಿರ್ವಹಣೆಗೆ ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಿದ್ದಾರೆ.

    ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನೆ-ಮನ ಗೆದ್ದವರು ಕೆ.ಎಸ್ ಅಶ್ವಥ್. ಇಂತಹ ಮೇರು ನಟನ ಮಗನಾಗಿ ಎರಡೂವರೆ ದಶಕಗಳಿಂದ ಪುತ್ರ ಶಂಕರ್ ಅಶ್ವಥ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಿದ್ದರು.

    ಶಂಕರ್ ಅಶ್ವಥ್ ಹೊಟ್ಟೆಪಾಡಿಗಾಗಿ ಇದೀಗ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದಕ್ಕೆ ಜೀವನ ನಿರ್ವಹಣೆಗಾಗಿ ಊಬರ್ ಕ್ಯಾಬ್ ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಂಕರ್ ಪತ್ನಿ ಸುಧಾ, ಅವರು ಬದುಕುವ ದಾರಿ ನೋಡಿಕೊಂಡಿದ್ದಾರೆ. ನಾವು ಯಾರ ಹಂಗು ಇಲ್ಲದೆ ಬದುಕುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟಿಲ್ಲ. ಸಣ್ಣ ಪುಟ್ಟ ಸಿನಿಮಾ ಮಾಡುತ್ತಿದ್ದಾರೆ. ಏಪ್ರಿಲ್ ನಿಂದ ಧಾರಾವಾಹಿ ಅವಕಾಶ ಸಿಕ್ಕಿಲ್ಲ. ಬಿಡುವಿನ ವೇಳೆ ಮನೆಯಲ್ಲಿ ಕುಳಿತುಕೊಳ್ಳೊವುದು ಬೇಡ. ಸ್ವಾಭಿಮಾನಿಗೆಯಾಗಿ ಬದುಕಬೇಕು ಎಂದು ಈ ಕೆಲಸ ಮಾಡುತ್ತಿದ್ದಾರೆ ಅಂದ್ರು.

    ನಮ್ಮ ಅತ್ತೆ, ಮಗನಿಗೆ ಸ್ವಲ್ಪ ಬೇಸರವಾಗಿದೆ. ಆದರೆ ಸಿನಿಮಾ ಧಾರಾವಾಹಿ ಇಲ್ಲದೇ ಇದ್ದಾಗ ಈ ಕೆಲವಸವನ್ನು ಮಾಡುತ್ತಿದ್ದಾರೆ. ಸಿನಿಮಾ ವೃತ್ತಿಯನ್ನೇ ಅವಲಂಭಿತರಾಗುವುದು ಬೇಡ ಎಂದು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.