Tag: Shani

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಕರ ರಾಶಿಗೆ ಶನಿ ಪ್ರವೇಶ – ಜನರಲ್ಲಿ ಆತಂಕ

    ಮಕರ ರಾಶಿಗೆ ಶನಿ ಪ್ರವೇಶ – ಜನರಲ್ಲಿ ಆತಂಕ

    ಬೆಂಗಳೂರು: ಇಂದಿನಿಂದ ಶನಿ ತನ್ನ ಸ್ಥಾನವನ್ನು ಬದಲಾಯಿಸಿದ್ದಾನೆ. ಸರಿಯಾಗಿ ಇಂದು 12.05ಕ್ಕೆ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಶನಿಯ ಆಗಮನ ಕೆಲ ರಾಶಿಯ ಮೇಲೆ ಗಾಢ ಪರಿಣಾಮ ಬೀರಲಿದೆ. ಮುಖ್ಯವಾಗಿ ಧನಸ್ಸು, ಕುಂಬ, ಮಕರ ರಾಶಿಗಳಿಗೆ ಸಂಕಟ ಎದುರಾಗಲಿದೆ ಎಂದು ಜ್ಯೋತಿಷ್ಯಗಳು ಅಭಿಪ್ರಾಯಪಟ್ಟಿದ್ದಾರೆ.

    ನಗರದ ಬಹುತೇಕ ಶನೈಶ್ವರ ದೇಗುಲಗಳಲ್ಲಿ ಸಂಜೆವರೆಗೂ ವಿಶೇಷ ಪೂಜೆ, ಹೋಮ, ಕುಂಬಾಭಿಷೇಕ ನಡೆಯಿತು. ಇನ್ನೂ ಮೈಸೂರು ರಸ್ತೆಯಲ್ಲಿರುವ ದೀಪಾಂಜಲಿ ನಗರದ ಶನೈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ದ್ವಾದಶ ರಾಶಿಗಳ ಬದಲಾವಣೆ ಮೇಲೆ ಹೋಮ, ಕುಂಬಾಭಿಷೇಕ, ಪೂಜೆ ನಡೆಸಲಾಯಿತು.

    ದೋಷ ಪರಿಹಾರಕ್ಕಾಗಿ 108 ಮಹಿಳೆಯರು ಕಳಸ ಹೊತ್ತುಕೊಂಡು ಶನೈಶ್ವರನ ದರ್ಶನ ಪಡೆದು, ಪೂಜೆ ಮಾಡಿಸಿದರು. ಸಹಜವಾಗಿ ಪ್ರತಿನಿತ್ಯ ಎರಡು ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತಿತ್ತು. ಆದರೆ ಇಂದು ಶನಿಮೌನಿ ಅಮವಾಸ್ಯೆ ಹಾಗೂ ಶನಿ ಪ್ರವೇಶ ಹಿನ್ನೆಲೆ ರಾತ್ರಿ 11 ಗಂಟೆವರೆಗೂ ದೇವಸ್ಥಾನದ ಬಾಗಿಲು ಓಪನ್ ಇರಲಿದೆ.

    ಸಂಜೆಯ ನಂತರ ದೇಗುಲಕ್ಕೆ ಅಲಂಕಾರ ಮಾಡಿ, ಮತ್ತೆ ಪೂಜೆ, ಹೋಮ ಕಾರ್ಯಕ್ರಮಗಳು ನಡೆಯಲಿವೆ. ನಾಳೆಯೂ ಮತ್ತೆ ಶನಿದೋಷ ಪರಿಹಾರಕ್ಕಾಗಿ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆಯಲಿವೆ.

  • ದೇವರು, ಭಕ್ತರಿಗೂ ತಡೆಗೋಡೆಯೇ ಇಲ್ಲ- 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ನೇರ ಎಳ್ಳೆಣ್ಣೆ ಅಭಿಷೇಕ

    ದೇವರು, ಭಕ್ತರಿಗೂ ತಡೆಗೋಡೆಯೇ ಇಲ್ಲ- 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ನೇರ ಎಳ್ಳೆಣ್ಣೆ ಅಭಿಷೇಕ

    ಉಡುಪಿ: ಶನಿ ಇಂದು ಧನುಸ್ಸು ರಾಶಿಯಿಂದ ಮಕರ ರಾಶಿಗೆ  ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ಬಳಿಕ ಈ ವಿದ್ಯಮಾನ ನಡೆಯುತ್ತಿದೆ. ಶನಿ ತನ್ನ ಸ್ವಂತ ಮನೆ ಮಕರಕ್ಕೆ ಪ್ರವೇಶ ಮಾಡುತ್ತಿದ್ದು ಎಲ್ಲೆಡೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ.

    ಉಡುಪಿ ಜಿಲ್ಲೆ ಬನ್ನಂಜೆಯ ಶನೀಶ್ವರ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಶನಿ ಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಬನ್ನಂಜೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. 23 ಅಡಿ ಎತ್ತರದ ಶನಿ ದೇವರ ವಿಗ್ರಹವನು ಬನ್ನಂಜೆಯಲ್ಲಿ ಸ್ಥಾಪಿಸಲಾಗಿದ್ದು, ವಿಶ್ವದ ಏಕೈಕ ಅತೀ ಎತ್ತರದ ವಿಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ.

    ಭಕ್ತರು ಎಳ್ಳೆಣ್ಣೆ ಅಭಿಷೇಕ, ಎಳ್ಳು ಗಂಟು ಆರತಿ ಮತ್ತಿತರ ಸೇವೆಯನ್ನು ಭಕ್ತರೇ ದೇವರಿಗೆ ಅರ್ಪಿಸುವ ವಿಶೇಷ ಅವಕಾಶ ಬನ್ನಂಜೆ ಕ್ಷೇತ್ರದಲ್ಲಿದೆ. ಕ್ಷೇತ್ರದ ಪೂಜೆಯ ಅರ್ಚಕ ಸತ್ಯನಾರಾಯಣ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಭಕ್ತರಾಧಿಗಳಿಗಳ ಶನಿದೋಷ ಪರಿಹಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ ಎಂದರು.

    ಎಳ್ಳೆಣ್ಣೆಯ ಅಭಿಷೇಕ ಅರ್ಚಕರಿಂದ ಆಗುವುದಿಲ್ಲ. ಬಂದ ಭಕ್ತರು ಎಣ್ಣೆ ಖರೀದಿ ಮಾಡಿ ಅಭಿಷೇಕ ಮಾಡುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು 10 ವರ್ಷದ ಹಿಂದೆ ವಾರಂಗಲ್ ನಿಂದ ಬೃಹತ್ ಕರಿಕಲ್ಲನ್ನು ಉಡುಪಿಗೆ ತಂದಿದ್ದರು. ಎರಡು ವರ್ಷಗಳ ಕಾಲ ಕಲ್ಲನ್ನು ಇಲ್ಲೇ ಕೆತ್ತನೆ ಮಾಡಲಾಯಿತು. ಇದೀಗ 10 ವರ್ಷಗಳ ಹಿಂದೆ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿ ಶನಿವಾರ ಸಾವಿರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

    ಇಂದು ವಿಶೇಷ ದಿನವಾಗಿರುವುದರಿಂದ ಹೋಮ ಹವನಾದಿಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಉಡುಪಿ ನಗರದಿಂದ ಎರಡು ಕಿ.ಮೀ ದೂರವಿರುವ ಬನ್ನಂಜೆ ಶನೀಶ್ವರ ಕ್ಷೇತ್ರ ದೇಶದಲ್ಲೇ ವಿಶಿಷ್ಟವಾದ ದೇವಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.

  • ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಶನಿಪಥ ಬದಲಾವಣೆ – ರಾಜಕೀಯ ನಾಯಕರ ಮೇಲೆ ಶನಿಕಾಟ ಶುರು

    ಬೆಂಗಳೂರು: ಮೂವತ್ತು ವರ್ಷದ ಬಳಿಕ ಶನಿ ತನ್ನ ಪಥವನ್ನ ಬದಲಾವಣೆ ಮಾಡುತ್ತಿದ್ದಾನೆ. ಧನಸ್ಸು ರಾಶಿಯಿಂದ ಮಕರ ರಾಶಿಗೆ ಬದಲಾವಣೆ ಮಾಡುತ್ತಿದ್ದು, ಧನಸ್ಸು, ಮಕರ ಮತ್ತು ಕುಂಭ ರಾಶಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ.

    ಜೊತೆಗೆ ರಾಜಕೀಯ ನಾಯಕರಾದ ನರೇಂದ್ರ ಮೋದಿ, ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಸೇರಿದಂತೆ ಈ ನಾಯಕರ ಶನಿಪಥ ಬದಲಾವಣೆ ಸಂದರ್ಭದಲ್ಲಿ ಇವರ ರಾಶಿಗಳಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ರೇಣುಕಾರಾಧ್ಯ ಅವರು ರಾಶಿ ಫಲಾಫಲವನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ

    ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ರಾಶಿಗಳ ಮೇಲೆ ಶನಿಕಾಟ ಯಾವ ರೀತಿ ಇದೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

    * ದೇವೇಗೌಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಏಳೂವರೆ ವರ್ಷಗಳ ಕಾಲ ಶನಿ ಕಾಟ ಇರಲಿದೆ. ದೇವೇಗೌಡರದ್ದು ಕುಂಭ ರಾಶಿ. ಈ ಹಿನ್ನೆಲೆಯಲ್ಲಿ ಕುಂಭ ರಾಶಿಯ ಮೇಲೆ ಶನಿ ಕಾಟ ಗಾಢವಾಗಿ ಬೀರಲಿದೆ. ಶನಿಕಾಟದಿಂದ ಪ್ರಮುಖ, ಮುಖ್ಯವಾದದನ್ನ ದೇವೇಗೌಡರು ಕಳೆದುಕೊಳ್ಳಲಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ಜನವಿರೋಧಿ ಆಗಲಿದೆ. ಪಕ್ಷದಲ್ಲಿ ಸಮಸ್ಯೆ, ಹೊಂದಾಣಿಕೆ ಇರಲ್ಲ. ವೈಯಕ್ತಿಕ ಜಾತಕ ಚೆನ್ನಾಗಿದ್ದರೆ ಶನಿಕಾಟದಿಂದ ಪಾರಾಗಬಹುದು. ಪರಿಹಾರಕ್ಕಾಗಿ ಕಾಲ ಭೈರವೇಶ್ವರ, ಶನೇಶ್ವರ ಆರಾಧನೆ ಮತ್ತು ಹನುಮನ ಆರಾಧನೆ ಮಾಡಬೇಕು. ವೃದ್ಧರಿಗೆ ಮತ್ತು ಅನಾಥರಿಗೆ ಸಹಾಯ ಮಾಡಬೇಕು.

    * ಪ್ರಧಾನಿ ನರೇಂದ್ರ ಮೋದಿ ಭವಿಷ್ಯ: ಮೋದಿ ಅವರದ್ದು ವೃಶ್ಚಿಕ ರಾಶಿ. ಶನಿಬಲ ಚೆನ್ನಾಗಿದ್ದು, ಗ್ರಹಗತಿಗಳು ಚೆನ್ನಾಗಿವೆ. ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯ. ಯಾವುದೇ ಹಿನ್ನಡೆ ಇಲ್ಲ.

    * ಸಿಎಂ ಯಡಿಯೂರಪ್ಪ: ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಶನಿ ಬಲ ಇದೆ, ಸುಭದ್ರವಾದ ಸರ್ಕಾರ ಕೊಡುತ್ತಾರೆ. ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಆಗಲ್ಲ.

    * ಕುಮಾರಸ್ವಾಮಿ: ಮಿಥುನ ರಾಶಿ ಇರುವುದರಿಂದ ಕುಮಾರಸ್ವಾಮಿಗೆ ಅಷ್ಟಮ ಶನಿ ಕಾಟ ಇದೆ. ಅಷ್ಟಮ ಶನಿಕಾಟದಿಂದ ಆರೋಗ್ಯದ ಸಮಸ್ಯೆ, ಸೋಲು, ನಷ್ಟ, ನಿರಾಸೆ, ಅನಗತ್ಯ ಮಾತುಗಳಿಂದ ಹಿನ್ನಡೆ. ಶನಿಕಾಟದಿಂದ ಜನವಿರೋಧಿ ಇದೆ. ಪರಿಹಾರಕ್ಕಾಗಿ ಮಾತನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಬೇಕು ಹಾಗೂ ಗಣಪತಿ ಹೋಮ ಮಾಡಬೇಕು.

    * ಡಿ.ಕೆ ಶಿವಕುಮಾರ್: ಡಿಕೆ ಶಿವಕುಮಾರ್ ಅವರದ್ದು ಮೇಷ ರಾಶಿ, ಅವರಿಗೆ ದಶಮ ಶನಿ ಇದೆ. ಅನುಕೂಲಕರ ವಾತಾವರಣ ಇರಲಿದೆ. ಮೂಲಜಾತಕದ ಸಮಸ್ಯೆ, ಮೂಲನಜಾತಕದಲ್ಲಿ ವಿಘ್ನ, ಕಾನೂನು ಸಮಸ್ಯೆಗಳು ತೊಡಕುಗಳು ಎದುರಾಗಲಿದೆ. ಹಿತ ಶತ್ರುಕಾಟವಾಗಲಿದೆ. ಪರಿಹಾರಕ್ಕಾಗಿ ಮೂಲ ಜಾತಕದ ಪರಿಣಾಮ ಸರಿ ಮಾಡಿಕೋಬೇಕು.

    * ಸಿದ್ದರಾಮಯ್ಯನ ಭವಿಷ್ಯ: ತುಲಾ ರಾಶಿ ಮೂಲ ಜಾತಕದ ಬಲ ಇದೆ. ನಂಬಿದವರು ಕೈ ಬಿಟ್ಟು ಹೋಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಎದುರಾಗಲಿವೆ. ಪರಿಹಾರಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿದರೆ ಉತ್ತಮ.

  • ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ

    ಮಕರ, ಕುಂಭ, ಧನಸ್ಸು ರಾಶಿ ಮೇಲೆ ಶನಿಯ ಗಾಢ ಪ್ರಭಾವ- ರೇಣುಕಾರಾಧ್ಯ ಗುರೂಜಿ ಭವಿಷ್ಯ

    – ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸ್ಥಿರ

    ಬೆಂಗಳೂರು: ಮೂವತ್ತು ವರ್ಷಗಳ ಬಳಿಕ ಶನಿ ಮಕರ ರಾಶಿಯಿಂದ ಧನಸ್ಸು ರಾಶಿಗೆ ಪಥ ಬದಲಾವಣೆ ಮಾಡುತ್ತಾ ಇದ್ದಾನೆ. ಶನಿಪಥ ಬದಲಾವಣೆಯಿಂದ ಧನಸ್ಸು, ಮಕರ ಮತ್ತು ಕುಂಭ ರಾಶಿಯವರ ಮೇಲೆ ಗಾಢ ಪ್ರಭಾವ ಬೀಳಲಿದೆ. ಈ ಮೂರು ರಾಶಿಯವರಿಗೆ ಏಳೂವರೆ ವರ್ಷ ಶನಿ ಕಾಟ ಇರಲಿದೆ ಅಂತ ಖ್ಯಾತ ರೇಣುಕಾರಾಧ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಈ ಶನಿಕಾಟ ನಿವಾರಣೆಗೆ ಶನಿ ದೇವರನ್ನ ಪೂಜೆ ಮಾಡಬೇಕು ಮತ್ತು ಮಾಡಿರುವ ಕರ್ಮ ಹೋಗಲು ಸೇವಾ ಕಾರ್ಯಗಳನ್ನ ಮಾಡಬೇಕು. ಇಷ್ಟೇ ಅಲ್ಲದೆ ಮಕರ, ಕುಂಭ ಮತ್ತು ಧನಸ್ಸು ರಾಶಿ ಅವರು ಕಾಲ ಭೈರೇಶ್ವರ ಮತ್ತು ಹನುಮನ ಮಂತ್ರ ಪಠಣೆ ಮಾಡಬೇಕು ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

    ಮೀನ, ತುಲಾ, ವೃಶ್ಚಿಕ ರಾಶಿಯವರಿಗೆ ಶುಭ ಆಗಲಿದೆ ಜೊತೆಗೆ ಮೇಷ ರಾಶಿ ಅವರಿಗೆ ಶನಿ ಪ್ರವೇಶ ಆದ ಎರಡು ವರ್ಷದ ಬಳಿಕ ಶನಿ ಕಾಟ ಇರಲಿದ್ದು ಅಪಘಾತ ಮತ್ತು ಇನ್ನಿತರ ಸಮಸ್ಯೆಗಳು ಎದುರಾಗಲಿವೆ. ಮತ್ತೆ ಶನಿ ಪಥ ಬದಲಾವಣೆ ಪ್ರಕೃತಿ ಮತ್ತು ರಾಜಕೀಯದ ಮೇಲೂ ಗಾಢ ಪ್ರಭಾವ ಬೀರಲಿದೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?

    ಶನಿ ಪಥ ಬದಲಾವಣೆಯಿಂದ ಪ್ರಕೃತಿಯಲ್ಲಿ ಭೂಕಂಪ ಮತ್ತು ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೆ, ರಾಜಕೀಯದಲ್ಲಿ ಗಾಢ ಪ್ರಭಾವ ಬೀರಲಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಯಡ್ಡಿ ಸರ್ಕಾರ ಸ್ಥಿರವಾಗಿರಲಿದೆ. ಆದರೆ ಸರ್ಕಾರ ನಡೆಸಬೇಕಾದರೆ ಜಂಜಾಟ ಮನಸ್ತಾಪ, ಗೊಂದಲಗಳು ಎದುರಾಗುತ್ತವೆ. ಮುರೂವರೆ ವರ್ಷ ಅಭಿವೃದ್ಧಿ ಕಾರ್ಯ ಆಗಲ್ಲ ಎಂದು ರೇಣುಕಾರಾಧ್ಯ ಗುರುಗಳು ತಿಳಿಸಿದ್ದಾರೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

  • ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

    ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

    ಬೆಂಗಳೂರು: ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮಧ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

    ಅದರಲ್ಲೂ ಧನಸ್ಸು, ಮಕರ ಹಾಗೂ ಕುಂಭ ರಾಶಿಗೆ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

    ಪರಿಹಾರ: ಶನೇಶ್ಚರನ ಈ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಶನಿಕಾಟದಿಂದ ಮುಕ್ತಿ ಪಡೆಯಬಹುದು. ಶನಿಕಾಟದಿಂದ ಸಂಪೂರ್ಣ ಮುಕ್ತಿ ಹೊಂದುವುದು ಕಷ್ಟ. ಆದರೆ ಬೆಟ್ಟದಷ್ಟು ಬರುವ ಕಷ್ಟವನ್ನು ಕೊಂಚ ನಿವಾರಿಸಲು ಶಿವಸ್ಮರಣೆ, ಶಿವನ ಪೂಜೆ ಮಾಡಬೇಕು. ಬಡ ಬಗ್ಗರಿಗೆ, ದಾನ-ಧರ್ಮ ಮಾಡಿದರೆ ಶನಿಯನ್ನು ಸಂತೃಪ್ತಿಗೊಳಿಸಬಹುದು. ಶನಿವಾರ ಆಂಜನೇಯ ದರ್ಶನ, ಭಜರಂಗಿಗೆ ವಿಶೇಷ ಪೂಜೆ ಮಾಡಿದರೆ ಸಮಸ್ಯೆ ನೀಗಲಿದೆ. ಆಯಾಯ ನಕ್ಷತ್ರ ರಾಶಿಯವರಿಗೆ ಜ್ಯೋತಿಷಿಗಳ ಸಲಹೆ ಮೇರೆಗೆ ಶನಿದೋಷ ನಿವಾರಣೆಯ ಹೋಮ-ಹವನ ನಡೆಸಬೇಕಾಗುತ್ತೆ.

    ದೋಷವಿರುವ ರಾಶಿಗಳು ಮತ್ತು ಪರಿಹಾರ

    1. ವೃಶ್ಚಿಕ: ಸಾಡೇಸಾತಿ ಸಂಪೂರ್ಣ ಬಿಡುಗಡೆಯಾಗುವುದರಿಂದ ವಿಶೇಷವಾಗಿ ಶನೇಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಸಂಕಲ್ಪ ಹೋಮ, ಇತ್ಯಾದಿಗಳನ್ನು ಮಾಡಿಸುವುದರಿಂದ ಇನ್ನು 30 ವರ್ಷಕಾಲ ಶನೇಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

    2. ಧನಸ್ಸು: ಸಾಡೇಸಾತಿ ಕೊನೆಯ ಹಂತವಾದ್ದರಿಂದ (ಎರಡೂವರೆ ವರ್ಷ) ಈ ದೋಷವಿರೋ ರಾಶಿಯವರು ಶನೇಶ್ಚರ ಸ್ವಾಮಿಗೆ ತೈಲಾಭಿಷೇಕ, ಸಂಕಲ್ಪ ಹೋಮ ಇತ್ಯಾದಿಗಳನ್ನು ಮಾಡಿಸಿದರೆ ಶತ್ರುಭಯ, ವಿದ್ಯಾಹೀನತೆ, ಗೃಹ ಕಲಹ, ದುಷ್ಟ ಮಿತ್ರರ ಸಹವಾಸ ಇತ್ಯಾದಿಗಳು ಪರಿಹಾರವಾಗುತ್ತೆ.

    3. ಮಕರ: ಜನ್ಮದಲ್ಲಿ ಎರಡೂವರೆ ವರ್ಷ ಶನಿ ನೆಲೆಸುವುದರಿಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಜನ್ಮ ಶನಿ ಕಾಡುವಾಗ ಸುಳ್ಳು ಹೇಳುವಿಕೆ, ಮೋಸ, ವಂಚನೆ ಮಾಡುವ ಬುದ್ಧಿ, ಒರಟುತನ, ಚಂಚಲ ಬುದ್ಧಿ, ಅತಿಕೋಪ, ಕೆಟ್ಟ ಜನರ ಸಹವಾಸ ಮಾಡುವಂತಹ ಬುದ್ಧಿಯನ್ನು ಕೊಡುವುದರಿಂದ ತೈಲಾಭಿಷೇಕ ಮಾಡಿಸಿದರೆ ದೋಷಗಳಿಂದ ಮುಕ್ತರಾಗಬಹುದು.

    4. ಕುಂಭ: ಸಾಡೇಸಾತಿ ಪ್ರಾರಂಭವಾಗುವುದರಿಂದ ತೈಲಾಭಿಷೇಕ, ಸಂಕಲ್ಪ ಹೋಮ, ಪಂಚಾಮೃತ ಅಭಿಷೇಕ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಂಡು ಶನಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

    ಶನಿಯ ವಕ್ರದೃಷ್ಟಿ ಇದ್ದ ನಕ್ಷತ್ರ ರಾಶಿಯವರಿಗೆ ಈ ಶನಿಪಥ ಬದಲಾವಣೆ ದೊಡ್ಡ ಕಂಟಕವಾಗಲಿದೆ. ಯಾಕೆಂದರೆ ಶನಿಯ ಕಾಟ ಮಾತ್ರವಲ್ಲ ಶನಿಯ ತಂದೆ ಸೂರ್ಯನ ವಕ್ರದೃಷ್ಟಿಯೂ ಇರಲಿದೆ. ರಾಜಕೀಯಕ್ಕೆ ಅಧಿಪತಿಯಾದ ಸೂರ್ಯನ ವಕ್ರದೃಷ್ಟಿಯಿಂದ ಮಕರ, ಧನಸ್ಸು, ಕುಂಭ ರಾಶಿಯ ರಾಜಕೀಯದವರಿಗೆ ಈ ಬಾರಿ ಸಾಕಷ್ಟು ತೊಂದರೆ ಹಿನ್ನೆಡೆಯಾಗಲಿದೆ ಎಂದು ಜ್ಯೋತಿಷಿಗಳಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

  • 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?

    30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?

    ಬೆಂಗಳೂರು: ನವಗ್ರಹಗಳಲ್ಲಿ ಒಂದಾಗಿರುವ ಶನಿಗ್ರಹವು ಮಕರ ರಾಶಿಯು ಶನಿಯ ಆಡಳಿತಕ್ಕೊಳಪಟ್ಟ ರಾಶಿಯಾಗಿದ್ದು, ಈ ರಾಶಿಯ ಅಧಿಪತಿ ಶನಿ. ಜಗತ್ತಿಗೆ ಕರ್ಮಕಾರಕನೂ, ನ್ಯಾಯದ ಬಗ್ಗೆ ಬೋಧಿಸುವವನೂ ಆದ ಶನಿಯು 30 ವರ್ಷಗಳ ನಂತರ ತನ್ನದೇ ಮನೆಯಾದ ಮಕರ ರಾಶಿಗೆ ಸಂಚರಿಸುವುದು ಅತ್ಯಂತ ಪ್ರಮುಖವಾದ ಸಂಗತಿಯೆಂದು ಪರಿಗಣಿಸಲಾಗುತ್ತದೆ.

    ಕರ್ಮ, ನ್ಯಾಯ ಹಾಗೂ ಏಳು ಪರಿಶ್ರಮಗಳ ಬಗ್ಗೆ ಬೋಧಿಸುವ ಶನಿಯು ಪ್ರತಿಯೊಂದು ರಾಶಿಯ ಮೇಲೂ ಪರಿಣಾಮಗಳನ್ನು ಬೀರಲಿದ್ದಾನೆ.

    ವೈದಿಕ, ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?
    ತಂದೆ ಸೂರ್ಯ, ಮಗ ಶನಿಯ ಸಮಾಗಮ ಆಗಲಿದ್ದು ಜ.15 ರಂದು ಮಕರ ರಾಶಿಗೆ ಸೂರ್ಯನ ಪ್ರವೇಶವಾಗಿತ್ತು. ಇವತ್ತು ಶನಿ ಕೂಡ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. 30 ವರ್ಷಗಳಿಂದ ಈ ರೀತಿಯ ಸಂಯೋಜನೆ ಸಂಭವಿಸಿಲ್ಲ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಘಟನೆ ಮಹತ್ವದ ಸಂಗತಿ ಎಂದು ಪರಿಗಣಿಸಲಾಗುತ್ತದೆ.

    ಪೌರಾಣಿಕವಾಗಿ ತಂದೆ ಮಗನಾದರೂ ಸೂರ್ಯ ಮತ್ತು ಶನಿ ಶತ್ರುಗಳು. ಇಬ್ಬರ ನಡವಳಿಕೆಗಳೂ ಭಿನ್ನವಾಗಿದ್ದು, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಇಬ್ಬರು ಶತ್ರುಗಳೆಂದೇ ಪರಿಗಣನೆ ಮಾಡಲಾಗುತ್ತದೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

    ಆಧ್ಯಾತ್ಮಿಕ ದೃಷ್ಟಿಯಲ್ಲಿ ಸೂರ್ಯ-ಶನಿ ಸಮ್ಮಿಲನ ವಿಶಿಷ್ಟ ಸಂಯೋಜನೆ ಎಂದು ಭಾವಿಸಲಾಗುತ್ತದೆ. ಶನಿ ರಾತ್ರಿಯನ್ನು ಪ್ರತಿನಿಧಿಸಿದರೆ, ಸೂರ್ಯ ಹಗಲನ್ನು ಪ್ರತಿನಿಧಿಸುತ್ತಾನೆ. ಶನಿಯು ಕರ್ಮ, ನ್ಯಾಯದ ಅಧಿಪತಿ ಆಗಿದ್ದಾನೆ. ಸೂರ್ಯನು ಆರೋಗ್ಯ ದೇವರು ಮತ್ತು ಆತ್ಮಕ್ಕೆ ಉಪಕಾರಿ.

  • 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

    30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

    ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿರುವಾಗಲೇ ಗ್ರಹಣ ಜನರ ನಿದ್ದೆಗೆಡಿಸಿತ್ತು. ಈಗ ಶನಿಯ ಸರದಿ, ಇಂದು ಶನಿಮೌನಿ ಅಮಾವಾಸ್ಯೆ. ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮದ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಇದನ್ನು ಶನಿಮೌನಿ ಅಮಾವಾಸ್ಯೆ ಅಂತಲೇ ಕರೆಯಲಾಗುತ್ತದೆ.

    ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

    ಧನಸ್ಸು, ಮಕರ ರಾಶಿಗೆ ಹಾಗೂ ಕುಂಭ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ.

    ಯಾವೆಲ್ಲ ರಾಶಿಗೆ ಶನಿಪಥ ಬದಲಾವಣೆ ಯಾವ ರೀತಿ ತೊಂದರೆ ತರಲಿದೆ, ಯಾವ ರಾಶಿಗೆ ಶುಭವಾಗಲಿದೆ, ಶನಿ ಅವಕೃಪೆಯಿಂದ ಪಾರಾಗುವ ವಿಧಾನ ಯಾವುದು ಅಂತಾ ನೋಡೋದಾದರೆ:

    1. ಮೇಷ: ಉದ್ಯೋಗದಲ್ಲಿ ಸಮಸ್ಯೆ, ಖರ್ಚು-ವೆಚ್ಚ ಹೆಚ್ಚಳ, ಶತ್ರು ಕಾಟದ ಸಮಸ್ಯೆ, ಅನ್ಯರೊಂದಿಗೆ ಸಹವಾಸ ಬೆಳೆಸುವ ಮೊದಲು ಎಚ್ಚರಿಕೆ ಅಗತ್ಯ.

    2. ವೃಷಭ: ಶನಿ ಪಥ ಬದಲಾವಣೆಯಿಂದ ಮಿಶ್ರಫಲ, ಕುಟುಂಬದಲ್ಲಿ ಕಲಹ, ಮಾನಸಿಕ ಚಿಂತೆ, ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ಬಂಧು-ಮಿತ್ರರಿಂದ ಉತ್ತಮ ಸಹಕಾರ.

    3. ಮಿಥುನ: ಅಷ್ಟಮ ಶನಿಯ ಪ್ರಭಾವದಿಂದ ಕೆಲಸ ಕಾರ್ಯಕ್ಕೆ ಅಡೆತಡೆ, ಮಾನಹಾನಿ, ಧನಹಾನಿಯಾಗುವ ಸಾಧ್ಯತೆ, ಆತ್ಮೀಯರೇ ಶತ್ರುವಾಗಬಹುದು, ಯಾರಿಂದಲೂ ಸಾಲ ಪಡೆಯುವುದು- ಕೊಡುವುದು ಬೇಡ.

    4. ಕಟಕ: ವೈಯಕ್ತಿಕ ಸಮಸ್ಯೆ ಹೆಚ್ಚಾಗಲಿದೆ, ಕುಟುಂಬದ ಹಿರಿಯರೊಂದಿಗೆ, ಆಪ್ತರೊಂದಿಗೆ ಕಲಹ ಸಾಧ್ಯತೆ, ವೃತ್ತಿಯಲ್ಲಿ ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆಯಾಗುವ ಸಾಧ್ಯತೆ

    5. ಸಿಂಹ: ಶನಿಪಥ ಬದಲಾವಣೆ ಶುಭ ಫಲ ತರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದಾರೆ, ಕೋಟು ಕಚೇರಿಯ ಕೆಲಸದಲ್ಲಿ ಜಯ, ಆರೋಗ್ಯ ಚೆನ್ನಾಗಿರುತ್ತೆ, ಆರ್ಥಿಕ ಅಭಿವೃದ್ಧಿ, ಹೊಸ ಯೋಜನೆ ಆರಂಭಿಸೋದಾದ್ರೇ ಈ ವರ್ಷವೇ ಉತ್ತಮ.

    6. ಕನ್ಯಾ: ಶನಿಪಥ ಬದಲಾವಣೆಯಿಂದಾಗಿ ಸ್ವಲ್ಪ ಕಷ್ಟ ಎದುರಿಸಬೇಕಾಗುತ್ತದೆ. ಹಣದ ಕೊರತೆ ಎದುರಿಸಬೇಕಾಗುತ್ತೆ. ಅಪಘಾತದ ಸಾಧ್ಯತೆ ಇದ್ದು ವಾಹನದಲ್ಲಿ ಹೋಗುವಾಗ ಎಚ್ಚರವಿರಲಿ, ಸಾಲ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು.

    7. ತುಲಾ: ಅದೆಷ್ಟೇ ಕೆಲಸ ಮಾಡಿದರೂ ಯಶಸ್ಸು ಸಿಗಲಾರದು, ಆರೋಗ್ಯ ಸಮಸ್ಯೆಯಿಂದಾಗಿ ಮಾನಸಿಕ ಕಿರಿಕಿರಿ, ವ್ಯರ್ಥ ಆರೋಪ ನಿಂದನೆಗೆ ಗುರಿಯಾಗಬೇಕಾಗುತ್ತೆ.

    8. ವೃಶ್ಚಿಕ: ಶನಿಪಥ ಬದಲಾವಣೆ ಉತ್ತಮ ಫಲಾಫಲ ತರಲಿದೆ. ಶತ್ರುಗಳ ಜೊತೆ ವಿಜಯ ಸಾಧಿಸಲಿದ್ದೀರಿ, ಸರ್ವ ಕಾರ್ಯದಲ್ಲೂ ವಿಜಯ ಸಿಗಲಿದೆ, ವೃತ್ತಿಯಲ್ಲಿ ಉನ್ನತ ಸ್ಥಾನ, ಅಭಿವೃದ್ಧಿ ಸಿಗಲಿದೆ, ಕುಟುಂಬದಲ್ಲಿ ಶುಭಕಾರ್ಯ ನಡೆಯಲಿದೆ.

    9. ಧನಸ್ಸು: ಆರೋಗ್ಯ ಸಮಸ್ಯೆ ಕಾಡಲಿದೆ, ಕೆಲಸದಲ್ಲಿ ನಿರಾಸಕ್ತಿ ಸಾಧ್ಯತೆ, ಮಾತಿನಲ್ಲಿ ಎಚ್ಚರ ವಹಿಸಿದರೆ ಕಲಹವನ್ನು ತಡೆಯಬಹುದು, ಶುಭ ಕಾರ್ಯಗಳಿಗೆ ವಿಘ್ನ ಶುರುವಾಗಲಿದೆ.

    10. ಮಕರ: ಮಕರಕ್ಕೆ ಶನಿ ಅಧಿಪತಿ. ಇದು ಕಠಿಣ ಸಮಯವಾಗುತ್ತದೆ. ಮಾನಹಾನಿ, ಅಪಕೀರ್ತಿ ನಿಂದನೆಗೆ ಒಳಗಾಗುವಿರಿ, ಯಾವುದೇ ಕೆಲಸ ಕಾರ್ಯ ಕೈಹಿಡಿಯಲಾರದು, ಹೊಸಯೋಜನೆಯ ಚಿಂತನೆಯೇ ಬೇಡ, ಬಂಧುಗಳೊಂದಿಗೆ ಕಲಹ, ಆತ್ಮೀಯರು ಶತ್ರುಗಳಾಗಿ ಬದಲಾಗುವ ಸಾಧ್ಯತೆ ಇದೆ.

    11. ಕುಂಭ: ಕೆಲಸಕ್ಕೆ ವಿಘ್ನವಾಗಲಿದೆ. ಶನಿಕಾಟದಿಂದ ಯಾವ ಶುಭಕಾರ್ಯವೂ ನಡೆಯಲ್ಲ. ಕಲಹ ಗಲಾಟೆಯಿಂದ ಸಾಧ್ಯವಾದಷ್ಟು ದೂರ ಉಳಿಯಿರಿ. ಯಾವ ಉತ್ತಮ ಕೆಲಸವನ್ನು ನಿರೀಕ್ಷೆ ಮಾಡುವುದು ಬೇಡ.

    12. ಮೀನ: ಶನಿಪಥ ಬದಲಾವಣೆ ಶುಭಫಲ ಸಿಗಲಿದೆ. ಉನ್ನತ ಪದವಿ ಪ್ರಾಪ್ತಿಯಾಗಲಿದೆ, ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ, ಹಣಕಾಸಿನ ವಿಚಾರದಲ್ಲಿ ಯಾವ ತೊಂದರೆಯೂ ಆಗಲಾರದು.

  • ಇನ್ಮುಂದೆ ಶನಿ ಧಾರಾವಾಹಿಯಲ್ಲಿ ‘ಲವ್ ಸ್ಟೋರಿ’ ಶುರು!

    ಇನ್ಮುಂದೆ ಶನಿ ಧಾರಾವಾಹಿಯಲ್ಲಿ ‘ಲವ್ ಸ್ಟೋರಿ’ ಶುರು!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ಬಾಲಕರ ಪಾತ್ರ ಮುಗಿದು ಈಗ ಯವ್ವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಯುವಕನಾಗಿರುವ ಶನಿಗೆ ಇದೀಗ ದೇವಲೋಕದ ಅಪ್ಸರೆ ಮೇಲೆ ಪ್ರೀತಿಯುಂಟಾಗಿದೆ.

    ಇಷ್ಟು ದಿನ ಬಾಲಕನಾಗಿದ್ದ ಶನಿ ಈಗ ಬೆಳೆದು ದೊಡ್ಡವನಾಗಿ ಸೂರ್ಯಲೋಕಕ್ಕೆ ವಾಪಸ್ಸಾಗಿ ಎರಡು ಎಪಿಸೋಡ್‍ಗಳಾಗಿವೆ. ಶನಿಯ ಜೊತೆಗಿದ್ದ ಬಾಲಕರ ಪಾತ್ರಗಳೂ ಬದಲಾಗಿವೆ. 10 ವರ್ಷಗಳಿಂದ ಸೂರ್ಯಲೋಕ ಬಿಟ್ಟಿದ್ದ ಶನಿ ಯುವಕನಾಗಿ ತನ್ನ ಸ್ವಂತ ಲೋಕಕ್ಕೆ ಮರಳಿದ್ದಾನೆ.

    ಈಗ ಶನಿ ಧಾರಾವಹಿಯಲ್ಲಿ ಈಗ ಅಪ್ಸರೆಯ ಎಂಟ್ರಿಯಾಗಲಿದೆ. ತೆಳ್ಳಗೆ ಬೆಳ್ಳಗಿನ ಮೈಕಾಂತಿಯ ದೇವಲೋಕದ ಅಪ್ಸರೆ ದಾಮಿನಿ ಅಂದಕ್ಕೆ ಶನಿ ಮನ ಸೋಲಲಿದ್ದಾನೆ. ಆಕೆಯನ್ನೇ ಶನಿದೇವ ಧರ್ಮಪತ್ನಿಯಾಗಿ ಸ್ವೀಕರಿಸಲಿದ್ದಾನೆ. ತಿಳಿಗುಲಾಬಿ ಬಣ್ಣದ ಉಡುಗೆಯಲ್ಲಿ ದಾಮಿನಿ ಶನಿ ಧಾರಾವಾಹಿಯಲ್ಲಿ ಎಂಟ್ರಿ ನೀಡಲಿದ್ದಾರೆ. ಧಾರಾವಾಹಿಯಲ್ಲಿ ದಾಮಿನಿಯನ್ನು ಕಂಡು ಶನಿಗೆ ಪ್ರೇಮಾಂಕುರವಾಗುತ್ತೆ.

    ಶನಿಯ ಪಾತ್ರವನ್ನು ಎಂಜಿನಿಯರಿಂಗ್ ಮುಗಿಸಿರುವ ಹೊಸ ಪ್ರತಿಭೆ ಪ್ರಣವ್ ಶ್ರೀಧರ್ ಮಾಡುತ್ತಿದ್ದಾರೆ. ಶನಿಯ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿರುವ ದಾಮಿನಿ ಪಾತ್ರಧಾರಿಯ ಹೆಸರು ಬೃಂದಾ ಆಚಾರ್ಯ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದು, ಹುಟ್ಟೂರಿನಿಂದ ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಬೃಂದಾ ಅವರು ಈಗಾಗಲೇ ‘ಮಹಾದೇವಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಬೃಂದಾ ಮಹಾದೇವಿ ಧಾರಾವಾಹಿಯಲ್ಲಿ ರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಶನಿ ಧಾರಾವಾಹಿ ನಡೆಸಿದ್ದ ಆಡಿಶನ್‍ನಲ್ಲಿ ಆಯ್ಕೆಯಾಗಿ ಇದೀಗ ಶನಿ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದ್ದಕ್ಕೆ ಸಜ್ಜಾಗಿದ್ದಾರೆ. ಮುಂಬೈ ಬಳಿ ಶನಿ ಸೆಟ್‍ನಲ್ಲಿ ಈಗ ಬೃಂದಾ ಅಭಿನಯ ಭಾಗದ ಶೂಟಿಂಗ್ ನಡೆಯುತ್ತಿದೆ.

    ಶನಿ ಧಾರಾವಾಹಿಯಲ್ಲಿ ಇಡೀ ಗ್ರಹಗಳ ಜೊತೆ ದಾಮಿನಿ ಯಾವ ಗ್ರಹ ಎನ್ನುವ ಯೋಚನೆ ಎಲ್ಲರಿಗೂ ಬರುತ್ತದೆ. ಶನಿ ಒಂದು ಗ್ರಹ. ಆದರೆ ಶನಿದೇವನ ಪತ್ನಿ ದಾಮಿನಿ ಗ್ರಹವಾಗಿರುವುದಿಲ್ಲ. ದಾಮಿನಿ ಒಬ್ಬಳು ಅಪ್ಸರೆಯಾಗಿರುತ್ತಾರೆ. ಕಾರಣಾಂತರಗಳಿಂದ ಶನಿ ಆಕೆಯನ್ನು ಸೂರ್ಯಲೋಕದಲ್ಲಿ ಸಂಧಿಸುವ ಸಮಯ ಬರುತ್ತದೆ. ಅಲ್ಲಿಂದ ಶನಿ ಮತ್ತು ಧಾಮಿನಿ ನಡುವೆ ಪ್ರೀತಿಯಾಗಿ ನಂತರ ಈ ಜೋಡಿಯ ವಿವಾಹ ನಡೆಯುತ್ತೆ. ಹೀಗಾಗಿ ಇನ್ಮುಂದೆ ತೆರೆಯಲ್ಲಿ ರೌದ್ರರೂಪಿ ಶನಿಯ ಸಂಸಾರ ಪ್ರೀತಿಯನ್ನೂ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸೀರಿಯಲ್ ಪ್ರೇಕ್ಷಕರಿಗೆ ಮತ್ತೊಂದು ಶಾಕ್- ಶನಿ ಪಾತ್ರಧಾರಿಯ ಬದಲಾವಣೆ

    ಸೀರಿಯಲ್ ಪ್ರೇಕ್ಷಕರಿಗೆ ಮತ್ತೊಂದು ಶಾಕ್- ಶನಿ ಪಾತ್ರಧಾರಿಯ ಬದಲಾವಣೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶನಿ’ ಧಾರಾವಾಹಿ ವೀಕ್ಷಕರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಈಗಾಗಲೇ ಈ ಧಾರಾವಾಹಿಯಲ್ಲಿ ಸೂರ್ಯನ ಪಾತ್ರಧಾರಿಯನ್ನು ಬದಲಿಸಲಾಗಿದೆ. ಆದರೆ ಈಗ ಶನಿ ಪಾತ್ರಧಾರಿಯನ್ನು ಕೂಡ ಬದಲಾಯಿಸುತ್ತಿದ್ದಾರೆ.

    ಚಾಮರಾಜನಗರದ ದೀನಬಂಧು ಅನಾಥಾಶ್ರಮದಲ್ಲಿ ಸುನೀಲ್ ಕುಮಾರ್ ಓದಿ ಬೆಳೆದಿದ್ದರು. ಕಲೆಯಲ್ಲಿ ಆಸಕ್ತನಾಗಿದ್ದ ಸುನೀಲ್ ಆಶ್ರಮದ ಗುರುಗಳ ಸಹಾಯದಿಂದ ಶನಿ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ದಿನನಿತ್ಯ ಶನಿಯನ್ನು ನೋಡುವುದ್ದಕ್ಕೆ ಪಾರಂಭಿಸಿ ವರ್ಷಗಳೇ ಕಳೆದಿತ್ತು. ಆದರೆ ಈಗ ಸುನೀಲ್‍ನನ್ನ ಶನಿ ಪಾತ್ರದಲ್ಲಿ ನೋಡುವ ಕೊನೆಯ ಘಳಿಗೆಗೆ ಕೌಂಟ್‍ಡೌನ್ ಶುರುವಾಗಿದೆ.

    ಮೂಲಗಳ ಪ್ರಕಾರ ನವೆಂಬರ್ 15 ರಿಂದ ಶನಿಯ ಪಾತ್ರಧಾರಿ ಬದಲಾಗ್ತಾರೆ. ಈಗ ಇರುವ ಸುನಿಲ್ ಕುಮಾರ್ ಪಾತ್ರ ನೋಡುವುದಕ್ಕೆ ಕೊನೆಯ ದಿನಗಳ ಎಣಿಕೆ ಶುರುವಾಗಿದೆ. ಚಿಕ್ಕ ಹುಡುಗನ ಪಾತ್ರವನ್ನು ಧಾರಾವಾಹಿ ತಂಡ ಅತೀ ಶೀಘ್ರದಲ್ಲೇ ಮುಕ್ತಾಯ ಮಾಡಲಿದೆ. ಮಕ್ಕಳು ಬೆಳೆದು ದೊಡ್ಡವರಾಗುವ ಕಥೆ ಶುರುವಾಗುತ್ತೆ. ಒಂದು ವರ್ಷಗಳಿಂದ ಶನಿ ರೂಪದಲ್ಲಿ ಸುನಿಲ್ ಅವರನ್ನು ನೋಡುತ್ತಿದ್ದ ಸೀರಿಯಲ್ ಪ್ರೇಮಿಗಳು ನವೆಂಬರ್ 15ರಿಂದ ಬೇರೆ ಶನಿಯನ್ನು ನೋಡಬೇಕಾಗುತ್ತದೆ.

    ಸುನೀಲ್ ಸದ್ಯಕ್ಕೆ ತಮ್ಮ ಓದನ್ನೂ ಡಿಸ್‍ಕಂಟಿನ್ಯೂ ಮಾಡಿದ್ದಾರೆ. ಆದರೆ ಸುನೀಲ್‍ಗೆ ಅಭಿನಯದಲ್ಲೇ ಹೆಚ್ಚಿನ ಆಸಕ್ತಿ ಇದೆ. ಹೀಗಾಗಿ ಸುನೀಲ್ ಶನಿ ಧಾರಾವಾಹಿಯಿಂದ ಗೇಟ್‍ಪಾಸ್ ಸಿಕ್ಕಿದ ಮೇಲೆ ಬೇರೆ ಕೆಲಸ ಹುಡುಕಿಕೊಳ್ಳಬೇಕು. ಡ್ಯಾನ್ಸ್ ನಲ್ಲಿ ಹೆಚ್ಚಿನ ಆಸಕ್ತಿ ಇರುವ ಸುನಿಲ್ ಸದ್ಯಕ್ಕೆ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿಲ್ಲ. ಮತ್ತೆ ಅನಾಥಾಶ್ರಮದಲ್ಲೇ ಬದುಕು ನಡೆಸುತ್ತಾರಾ ಇಲ್ಲ ಸುನೀಲ್ ಪ್ರತಿಭೆಗೆ ಮತ್ತೆ ಅವಕಾಶ ಸಿಗುತ್ತಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

    ಮನೆಗಳಲ್ಲಿ ದಿನನಿತ್ಯ ನೋಡುವ ಶನಿ ಧಾರಾವಾಹಿಯ ಪಾತ್ರಧಾರಿಗಳದ್ದೇ ಹೊಸ ಕಥೆ ಶುರುವಾಗಿದೆ. ಶನಿ ಪಾತ್ರವನ್ನು ಕಥೆಯ ಬದಲಾವಣೆಯಿಂದ ಬದಲಾಯಿಸೋಕೆ ಧಾರಾವಾಹಿ ತಂಡ ತೀರ್ಮಾನಿಸಿದೆ. ಶನಿ ಪಾತ್ರಧಾರಿಯಿಂದ ಹಿಡಿದು ಕಾಕರಾಜ, ಯಮಿ, ಹನುಮಂತ, ಗಣೇಶ ಎಲ್ಲಾ ಪಾತ್ರಗಳೂ ಬದಲಾಗುತ್ತವೆ. ಮಕ್ಕಳ ಭಾಗದ ಪೋರ್ಷನ್ ಇನ್ಮುಂದೆ ಕೆಲವು ದಿನಗಳು ಮಾತ್ರ ನೋಡಲು ಸಿಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv