Tag: Shanghai Cooperation Organisation

  • ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    – ಪಾಕ್‌ ಪ್ರಧಾನಿಯೊಂದಿಗೆ ಭೋಜನಕೂಟದಲ್ಲಿ ಭಾಗಿ

    ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ( S Jaishankar) ಮಂಗಳವಾರ (ಅ.15) ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಕಳೆದ 9 ವರ್ಷಗಳಲ್ಲಿ ಅಂದ್ರೆ 2015ರಿಂದ ಇದೇ ಮೊದಲಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪಾಕ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

    ಚೀನಾದ ಪ್ರಧಾನಿ ಲಿ ಕ್ವಿಯಾಂಗ್, ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಮತ್ತು ಜೈಶಂಕರ್ ಭಾಗಿಯಾಗಲಿದ್ದಾರೆ. ಬುಧವಾರದ ಮುಖ್ಯ ಶೃಂಗಸಭೆಯ ಮೊದಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಆಯೋಜಿಸುವ ಸ್ವಾಗತ ಭೋಜನ ಕೂಟದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಮೂರನೇ ಆರೋಪಿ ಅರೆಸ್ಟ್‌

    ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಮಾತನಾಡಿ, ಜೈಶಂಕರ್ ಅವರ ಪಾಕಿಸ್ತಾನ ಭೇಟಿಯು ಮಹತ್ವ ಪಡೆದುಕೊಳ್ಳುತ್ತದೆ. ಏಕೆಂದರೆ ಇದು ನವದೆಹಲಿಯ ಕಡೆಯಿಂದ ಪ್ರಮುಖ ನಿರ್ಧಾರವಾಗಿದೆ. ಪುಲ್ವಾಮಾ ದಾಳಿ, ಬಾಲಾಕೋಟ್‌ ಏರ್‌ಸ್ಟ್ರೈಕ್‌ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟವು. ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುತ್ತದೆ ಎಂದು ಹೇಳುತ್ತಾ ಬಂದಿದೆ. ಆದ್ದರಿಂದ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಇಸ್ಲಾಮಾಬಾದ್‌ಗೆ ಇದೆ ಎಂದರು. ಇದನ್ನೂ ಓದಿ: ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ 23 ನೇ ಸಭೆಯು ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್ 15 ಮತ್ತು 16 ರಂದು ನಡೆಯಲಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಭಾರತದ ನಾಲ್ಕು ಸದಸ್ಯರ ಅಧಿಕೃತ ನಿಯೋಗವೂ ಪಾಕಿಸ್ತಾನಕ್ಕೆ ಆಗಮಿಸಿದೆ ಎಂದು ಮೂಲಗಳು ವರದಿ ಮಾಡಿದೆ. ಚೀನಾದ 15 ಸದಸ್ಯರು, ಕಿರ್ಗಿಸ್ತಾನದ 4 ಸದಸ್ಯರು ಮತ್ತು ಇರಾನ್‌ನ ಇಬ್ಬರು ಸದಸ್ಯರ ನಿಯೋಗವೂ ಇಸ್ಲಾಮಾಬಾದ್ ತಲುಪಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು

    ಇಸ್ಲಾಮಾಬಾದ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ನಾಸಿರ್ ಅಲಿ ರಿಜ್ವಿ ಅವರು ಮಾತನಾಡಿ, ಫೆಡರಲ್ ರಾಜಧಾನಿಯಲ್ಲಿ ಶೃಂಗ ಸಭೆಗಾಗಿ ಭಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಪಾಕಿಸ್ತಾನ ಸೇನೆ, ಗುಪ್ತಚರ ಸಂಸ್ಥೆಗಳು, ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಮತ್ತು ರೇಂಜರ್‌ಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರೊಂದಿಗೆ ಶೋಧ ಮತ್ತು ಮಾಹಿತಿ ಆಧಾರಿತ ಕಾರ್ಯಾಚರಣೆಗಳು ನಡೆಯುತ್ತಿವೆ. ಭದ್ರತೆಗಾಗಿ 9 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿ – ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ

    9 ವರ್ಷಗಳಲ್ಲಿ ಇದೇ ಮೊದಲು:
    ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಎಸ್‌ಸಿಒ ಶೃಂಗಸಭೆಗೆ ಆಹ್ವಾನಿಸಿತ್ತು. ಆದರೆ ಡಿಸೆಂಬರ್ 2015 ರಿಂದ ಯಾವುದೇ ಭಾರತೀಯ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2015 ರಲ್ಲಿ ಅಫ್ಘಾನಿಸ್ತಾನದ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಗುಜರಾತ್‌ನಲ್ಲಿ 5,000 ಕೋಟಿ ಮೌಲ್ಯದ ಕೊಕೇನ್ ಸೀಜ್

  • 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

    ನವದೆಹಲಿ: ಇದೇ ಅಕ್ಟೋಬರ್‌ ಮಧ್ಯದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಕಳೆದ 9 ವರ್ಷಗಳಲ್ಲಿ ಅಂದ್ರೆ 2015ರಿಂದ ಇದೇ ಮೊದಲಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

    ಇದೇ ಅಕ್ಟೋಬರ್‌ 15 ಮತ್ತು 16ರಂದು ಪಾಕಿಸ್ತಾನವು (Pakistan) ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಆಯೋಜಿಸುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್ ಪಾಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಒಳಗೊಂಡಿರುವ SCO, ಪ್ರಭಾವಿ ಆರ್ಥಿಕ ಮತ್ತು ಭದ್ರತಾ ಸಂಸ್ಥೆಯಾಗಿದೆ. ಈ ಪ್ರಮುಖ ಪ್ರಾದೇಶಿಕ ಗುಂಪಿನ ಭಾಗವಾಗಿ, ಪಾಕಿಸ್ತಾನ ಮತ್ತು ಭಾರತ ಎರಡೂ ಶೃಂಗಸಭೆ ಸಭೆಗಳನ್ನು ನಡೆಸಬಹುದು. ಭಾರತ ಕಳೆದ ವರ್ಷ SCO ಶೃಂಗಸಭೆಯನ್ನು ಆಯೋಜಿಸಿತ್ತು, ಈ ಶೃಂಗಸಭೆಯನ್ನು ವರ್ಚುವಲ್ ಮೋಡ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ಭಾಗವಹಿಸಿದ್ದರು.

    ಪಾಕಿಸ್ತಾನವು ಶಾಂಘೈ ಸಹಕಾರ ಸಂಸ್ಥೆ (SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ನ ರೊಟೇಟೆಡ್ ಅಧ್ಯಕ್ಷರನ್ನು ಹೊಂದಿದೆ. ಹೀಗಾಗಿ, ಅಕ್ಟೋಬರ್‌ನಲ್ಲಿ ಎರಡು ದಿನಗಳ SCO ಸರ್ಕಾರದ ಮುಖ್ಯಸ್ಥರ ಸಭೆಯನ್ನು ಆಯೋಜಿಸಲಿದೆ. ಇಸ್ಲಾಮಾಬಾದ್ ಶೃಂಗಸಭೆಯು ಸಚಿವರ ಸಭೆ ಮತ್ತು SCO ಸದಸ್ಯ ರಾಷ್ಟ್ರಗಳ ನಡುವೆ ಹಣಕಾಸು, ಆರ್ಥಿಕ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಮಾನವೀಯ ಸಹಕಾರದ ಮೇಲೆ ಕೇಂದ್ರೀಕರಿಸಿ ಚರ್ಚೆಗಳು ನಡೆಯಲಿದೆ. ಇದನ್ನೂ ಓದಿ: ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ, ದರ್ಶನ್ ಹೊಡೆದಿಲ್ಲ: ಕೋರ್ಟ್‌ನಲ್ಲಿ ವಕೀಲ ಸಿ.ವಿ ನಾಗೇಶ್ ವಾದ ಹೇಗಿತ್ತು?

    9 ವರ್ಷಗಳಲ್ಲೇ ಇದೇ ಮೊದಲು:
    ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಎಸ್‌ಸಿಒ ಶೃಂಗಸಭೆಗೆ ಆಹ್ವಾನಿಸಿತ್ತು. ಆದರೆ ಡಿಸೆಂಬರ್ 2015 ರಿಂದ ಯಾವುದೇ ಭಾರತೀಯ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2015 ರಲ್ಲಿ ಅಫ್ಘಾನಿಸ್ತಾನದ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

  • ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ನವದೆಹಲಿ: ಎಸ್‌ಸಿಒ (SCO) ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಯೋತ್ಪಾದನೆ (Terrorism) ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಉಪಸ್ಥಿತಿಯಲ್ಲೇ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್‌ ಕೊಟ್ಟಿದ್ದಾರೆ.

    ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಲು ಬಣ ಹಿಂಜರಿಯಬಾರದು ಎಂದು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವರ್ಚುವಲ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ಇಂತಹ ಗುಂಪುಗಳ ಬೆದರಿಕೆಯನ್ನು ಎದುರಿಸಲು ಪರಸ್ಪರ ಸಹಕಾರವನ್ನು ವಿಸ್ತರಿಸಬೇಕು ಎಂದು ಜಾಗತಿಕ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ. ಅದು ಯಾವುದೇ ಸ್ವರೂಪದಲ್ಲೇ ಇರಲಿ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ನಿಲುವು ಇರಬಾರದು ಎಂದು ಹೇಳಿದ್ದಾರೆ.

    ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಭಾಗವಹಿಸಿದ್ದರು. ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಮೋದಿ ಅವರು ವಿವಿಧ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ – 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರ 2ನೇ ದಾಳಿ

    ವಿವಾದಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ವಿಶ್ವದ ಎಲ್ಲಾ ದೇಶಗಳಿಗೆ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ದೊಡ್ಡ ಸವಾಲಾಗಿದೆ. ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನ ಇರಬೇಕು ಎಂದು ಮೋದಿ ಪ್ರತಿಪಾದಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ

    8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ

    ನವದೆಹಲಿ: ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭೂಟ್ಟೊ ಜರ್ದಾರಿ (Bilawal Bhutto Zardari) ಅವರು ಗೋವಾದಲ್ಲಿ (Goa) ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (Shanghai Cooperation Organisation) ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಮೇ ತಿಂಗಳಲ್ಲಿ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ.

    ಜರ್ದಾರಿ ಅವರು ಮೇ 4 ಹಾಗೂ 5 ರಂದು ಗೋವಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ನಿರ್ವಹಿಸಲಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ (Mumtaz Zahrah Baloch) ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ಹೊತ್ತಿನಲ್ಲೇ ಡಿಕೆಶಿಗೆ ಶಾಕ್ – CBI ತನಿಖೆಗೆ ಕೋರ್ಟ್ ಅಸ್ತು

    ಸಭೆಯಲ್ಲಿನ ನಮ್ಮ ಭಾಗವಹಿಸುವಿಕೆಯು ಎಸ್‍ಸಿಓ ಚಾರ್ಟರ್ ಹಾಗೂ ಅದರ ಪ್ರಕ್ರಿಯೆಗಳಿಗೆ ಪಾಕಿಸ್ತಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪಾಕಿಸ್ತಾನವು ತನ್ನ ವಿದೇಶಾಂಗ ನೀತಿಯ ಆದ್ಯತೆಗಳಲ್ಲಿ ಪ್ರಾದೇಶಿಕವಾಗಿ ನೀಡುವ ಪ್ರಾಮುಖ್ಯತೆಯನ್ನು ಅದು ಎತ್ತಿ ಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.

    2014ರಲ್ಲಿ ನವಾಜ್ ಷರೀಫ್ (Nawaz Sharif) ಭಾರತಕ್ಕೆ ಭೇಟಿ ನೀಡಿದ್ದರು. ಅವರ ನಂತರ ಪಾಕಿಸ್ತಾನದ ಯಾವ ನಾಯಕರೂ ಭೇಟಿ ನೀಡಿರಲಿಲ್ಲ. ಈಗ ಜರ್ದಾರಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

    ಪ್ರಸ್ತುತ ಶಾಂಘೈ ಸಹಕಾರ ಸಂಸ್ಥೆ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು, ಜನವರಿಯಲ್ಲಿ ಚೀನಾದ ನೂತನ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಸೇರಿದಂತೆ ಸದಸ್ಯ ರಾಷ್ಟ್ರಗಳಿಗೆ ಆಹ್ವಾನವನ್ನು ಕಳುಹಿಸಿತ್ತು.

    ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದೇವೆ. ನಾವು ಪಾಕಿಸ್ತಾನ ಸೇರಿದಂತೆ ಎಲ್ಲಾ ಸದಸ್ಯ ದೇಶಗಳಿಗೆ ಆಹ್ವಾನಗಳನ್ನು ನೀಡಿದ್ದೇವೆ. ಅವರೆಲ್ಲರೂ ಕಾರ್ಯಕ್ರಮಗಳಿಗೆ ಹಾಜರಾಗಬೇಕೆಂದು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಫೆಬ್ರವರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

    2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ್ದ ದಾಳಿ ಹಾಗೂ ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ತೀವ್ರ ಹದಗೆಟ್ಟಿತ್ತು. ನಂತರ 2019ರ ಆಗಸ್ಟ್‌ನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಸಂಬಂಧಗಳು ಮತ್ತಷ್ಟು ಹಾಳಾಗಿತ್ತು.

    ಎಂಟು ಸದಸ್ಯ ರಾಷ್ಟ್ರಗಳ ಶಾಂಘೈ ಸಹಕಾರ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಸ್ಥಾಪಿಸಲಾದ ಪ್ರಮುಖ ಪ್ರಾದೇಶಿಕ ಶಕ್ತಿ ಕೇಂದ್ರವಾಗಿದೆ. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ