Tag: Shanghai

  • ಚೀನಾದಲ್ಲಿ ಚಿನ್ನ ಕರಗಿಸಿ ಹಣ ನೀಡುತ್ತೆ ATM – ಭಾರತಕ್ಕೆ ಬರುತ್ತಾ?

    ಚೀನಾದಲ್ಲಿ ಚಿನ್ನ ಕರಗಿಸಿ ಹಣ ನೀಡುತ್ತೆ ATM – ಭಾರತಕ್ಕೆ ಬರುತ್ತಾ?

    ಮ್ಮ ಕಷ್ಟಕಾಲದಲ್ಲಿ ನೆರವಿಗೆ ದೊರೆಯುವ ಅಪತ್ಬಾಂಧವ ಅಂದರೆ ಅದು ಚಿನ್ನ. ಕಷ್ಟದ ಸಮಯದಲ್ಲಿ, ತುರ್ತು ಸಂದರ್ಭಗಳಲ್ಲಿ ಚಿನ್ನ (Gold) ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಸಾಲಕ್ಕಾಗಿ ಕೈ ಚಾಚುವ ಬದಲು ಬ್ಯಾಂಕ್‌ಗೆ ತೆರಳಿ ಅಡವಿಟ್ಟರೆ ಅಥವಾ ಚಿನ್ನದಂಗಡಿಗೆ ತೆರಳಿ ಮಾರಾಟ ಮಾಡಿದರೆ ಹಣವನ್ನು ಪಡೆಯಬಹುದು. ಹೀಗಾಗಿ, ಬಂಗಾರ ನಿಜಕ್ಕೂ ಕಷ್ಟಕಾಲದ ಬಂಧುವಿನಂತೆ ನೆರವಿಗೆ ಬರುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ ಸದ್ಯಕ್ಕಂತು ಚಿನ್ನದ ಬೆಲೆ ಗಗನಕ್ಕೇರಿದೆ.

    ಆದರೆ ಈ ಚಿನ್ನ ಮಾರಾಟ ಅಥವಾ ಅಡವಿಡುವುದು ಅಂದ್ರೆ ತಕ್ಷಣ ಆಗುವ ಕೆಲಸವಲ್ಲ. ಅದು ಬ್ಯಾಂಕ್ ಆದರೂ ಸರಿ ಚಿನ್ನದ ಮಳಿಗೆಯಾದರೂ ಸರಿ, ಅದರ ಶುದ್ದತೆ ಪರೀಕ್ಷಿಸಿ, ಪೇಪರ್ ವರ್ಕ್ ಮುಗಿಸಿ ಹಣ ಪಡೆಯಲು ದಿನಪೂರ್ತಿ ಓಡಾಟ ಮಾಡಬೇಕಾಗುತ್ತದೆ. ತಂತ್ರಜ್ಞಾನದಲ್ಲಿ ದಿನಾ ಹೊಸತೇನಾದರೂ ಆವಿಷ್ಕಾರ ಮಾಡುವ ಚೀನಾ (China) ಇದೀಗ ಶಾಂಘೈನಲ್ಲಿ (Shanghai) ಚಿನ್ನದ ಎಟಿಎಂ (Gold ATM) ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣವೇ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ ಏನಿದು ಚಿನ್ನ ಕರಗಿಸಿ ಹಣ ನೀಡುವ ಎಟಿಎಂ? ಇದರ ಕೆಲಸ ಏನು? ಭಾರತಕ್ಕೂ ಈ ಎಟಿಎಂ ಬರುತ್ತಾ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಗೋಲ್ಡ್‌ ಎಟಿಎಂಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
    ಶಾಂಘೈನ ಗೋಲ್ಡ್ ಎಟಿಎಂಗಳನ್ನು ಶೆನ್ಜೆನ್ ಮೂಲದ ಕಿಂಗ್‌ಹುಡ್ ಗ್ರೂಪ್ ತಯಾರಿಸಿದೆ. ಚೀನಾದ ರಾಜ್ಯ ಮಾಲೀಕತ್ವದ ಪ್ರಕಟಣೆಯಾದ ಸಿಕ್ಸ್ತ್ ಟೋನ್ ವರದಿಯ ಪ್ರಕಾರ, ಇವುಗಳನ್ನು ಚೀನಾದಾದ್ಯಂತ ಸುಮಾರು 100 ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಚಿನ್ನದ ಬೆಲೆ ಏರಿಕೆಯ ನಡುವೆವೇ ಈ ಎಟಿಎಂ ಅನ್ನು ಚೀನಾ ಪರಿಚಯಿಸಿದೆ.

    ಚಿನ್ನವನ್ನು 1,200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಿಸಲಾಗುತ್ತದೆ. ಇದು ನಿಮ್ಮನ್ನು ಸಾಂಪ್ರದಾಯಿಕ ಆಭರಣ ಅಂಗಡಿಗಳಿಗೆ ತೆರಳಿ, ಬಂಗಾರ ಕೊಟ್ಟು ಹಣ ತೆಗೆದುಕೊಳ್ಳುವುದಕ್ಕೆ ತ್ವರಿತ ಪರ್ಯಾಯ ಕೆಲಸ ಮಾಡುತ್ತದೆ. ಇದು ನೈಜ-ಸಮಯದ ಶುದ್ಧತೆಯ ಪರಿಶೀಲನೆಗಳು, ನೇರ ಬೆಲೆ ನಿಗದಿ ಮತ್ತು ಬ್ಯಾಂಕ್ ವರ್ಗಾವಣೆಗಳನ್ನು ಒದಗಿಸುತ್ತದೆ. ಇದು ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    ಗೋಲ್ಡ್‌ ಎಟಿಎಂ ವೈಶಿಷ್ಟ್ಯಗಳೇನು?
    ಈ ಎಟಿಎಂ ಮೂಲಕ ಚಿನ್ನದ ವಹಿವಾಟು ನಡೆಸುವುದು ತುಂಬಾ ಸುಲಭ. ಮೊದಲನೆಯದಾಗಿ, ಈ ಯಂತ್ರವು ಚಿನ್ನದ ತೂಕವನ್ನು ಹೊಂದಿರುತ್ತದೆ. ಇದು ಚಿನ್ನವು 99.99% ಶುದ್ಧವಾಗಿದೆಯೇ ಎಂದು ಪರಿಶೀಲಿಸುತ್ತದೆ. ನಂತರ ಯಂತ್ರವು ಶಾಂಘೈ ಚಿನ್ನದ ವಿನಿಮಯ ಕೇಂದ್ರದ ನೇರ ದರದ ಪ್ರಕಾರ ಹಣವನ್ನು ಲೆಕ್ಕಾಚಾರ ಮಾಡುತ್ತದೆ. ಬಳಿಕ ಚಿನ್ನದ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ಇದರಿಂದ ಒಂದು ಸಣ್ಣ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

    ಹಿಂದೆ, ಚಿನ್ನ ಮಾರಾಟ ಮಾಡಲು, ನೀವು ಆಭರಣ ಅಂಗಡಿಗೆ ಹೋಗಬೇಕಾಗಿತ್ತು. ಶುದ್ಧತೆ ಪರಿಶೀಲನೆಗಳು, ಬೆಲೆ ಚರ್ಚೆಗಳು ಇದೆಲ್ಲವೂ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಅದು ಅಗತ್ಯವಿಲ್ಲ. ಈ ಚಿನ್ನದ ಎಟಿಎಂಗಳು ನಿಮಗೆ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಚಿನ್ನವನ್ನು ಮಾರಾಟ ಮಾಡಲು ಅವಕಾಶ ನೀಡುತ್ತವೆ. ಇದು ರಾತ್ರಿಯೂ ಕೆಲಸ ಮಾಡುತ್ತದೆ. ಅಂದರೆ ತುರ್ತು ಸಂದರ್ಭಗಳಲ್ಲಿಯೂ ಸಹ ಈ ಯಂತ್ರ ತುಂಬಾ ಉಪಯುಕ್ತವಾಗಿದೆ.

    ಈ ಎಟಿಎಂನಲ್ಲಿ ಚಿನ್ನವನ್ನು ಸ್ವೀಕರಿಸಲು, ಅದು 99.99% ಶುದ್ಧವಾಗಿರಬೇಕು. ಶೀಘ್ರದಲ್ಲೇ ಶಾಂಘೈನಲ್ಲಿ ಮತ್ತೊಂದು ಚಿನ್ನದ ಎಟಿಎಂ ಅನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯ ಪ್ರಕಾರ, ಚಿನ್ನದ ಬೆಲೆಗಳು ಹೆಚ್ಚಾದಂತೆ, ಈ ಯಂತ್ರಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಭಾರತಕ್ಕೆ ಈ ಎಟಿಎಂ ಬರುತ್ತಾ?
    ಭಾರತದಲ್ಲಿಯೂ ಚಿನ್ನ ವಿಶೇಷ ಸ್ಥಾನಮಾನ ಹೊಂದಿದೆ. ಮದುವೆ, ಹಬ್ಬ, ಶುಭ ಸಂದರ್ಭಗಳಲ್ಲಿ ಚಿನ್ನಕ್ಕೆ ಬೇಡಿಕೆ ಇರುವುದು ಮಾತ್ರವಲ್ಲದೇ ಭದ್ರತೆ ಮತ್ತು ಭವಿಷ್ಯದಲ್ಲಿ ಹೂಡಿಕೆಯ ಪರಿಕಲ್ಪನೆಯೊಂದಿಗೆ ಸಹ ಇದನ್ನು ಖರೀದಿಸಲಾಗುತ್ತದೆ. ಆದ್ದರಿಂದ, ಅಂತಹ ಚಿನ್ನದ ಎಟಿಎಂಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆ ಬಲವಾಗಿ ಕಂಡುಬರುತ್ತಿದೆ.

    ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಚೀನಾದ ಶಾಂಘೈನಲ್ಲಿ ಪರಿಚಯಿಸಲಾದ ಗೋಲ್ಡ್ ಎಟಿಎಂಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಚಿನ್ನದ ಸಾಲ ನೀಡುವವರ ಸಹಾಯವಿಲ್ಲದೇ ಜನರು ತಕ್ಷಣವೇ ಚಿನ್ನವನ್ನು ಮಾರಾಟ ಮಾಡುವ ಒಂದು ಹೊಸ ವಿಧಾನವಾಗಿದೆ. ನಿಮ್ಮ ಆಭರಣಗಳನ್ನು ಹಾಕಿ, ಅದು ಶುದ್ಧತೆಯನ್ನು ಪರೀಕ್ಷಿಸುತ್ತದೆ, ಕರಗಿಸುತ್ತದೆ, ಮೌಲ್ಯವನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ತಕ್ಷಣವೇ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ ಎಂದು ಗೋಯೆಂಕಾ ಹೇಳಿದ್ದಾರೆ.

    ಚೀನಾದ ಗೋಲ್ಡ್‌ ಎಟಿಎಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಗೋಯೆಂಕಾ, ಈ ಎಟಿಎಂಗಳು ಪಾರದರ್ಶಕವಾಗಿವೆ ಮತ್ತು ಶೋಷಣೆ ರಹಿತವಾಗಿವೆ ಎಂದು ಹೇಳಿದ್ದಾರೆ. ಅಲ್ಲದೇ ಈ ತಂತ್ರಜ್ಞಾನವು ಭಾರತದಲ್ಲಿ ಚಿನ್ನದ ಸಾಲ ನೀಡುವವರಿಗೆ ಅಪಾಯವನ್ನುಂಟುಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಎಟಿಎಂ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಇದನ್ನು ಅನುಮತಿಸಿದರೆ, ಯಾರೂ ಬೀದಿಗಳಲ್ಲಿ ತೆರಳಬೇಕಾದರೆ ಆಭರಣಗಳನ್ನು ಧರಿಸುವುದಿಲ್ಲ. ಸರಗಳ್ಳತನವು ಹೆಚ್ಚಾಗುತ್ತದೆ. ಚೀನಾದಂತೆ, ನಮ್ಮ ನಗರಗಳಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ, ಇದು ದುಃಖಕರವಾದ ಸತ್ಯ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕಷ್ಟಕಾಲದಲ್ಲಿ ತಕ್ಷಣಕ್ಕೆ ಈ ಎಟಿಎಂಗಳು ಸಹಾಯಕವಾಗಬಹುದು ಎಂದಿದ್ದಾರೆ.

  • 100 ವರ್ಷ ಹಳೆಯ, 3,800 ಟನ್ ತೂಕದ ಕಟ್ಟಡ ಸ್ಥಳಾಂತರ – ಹೇಗೆ ನೋಡಿ

    100 ವರ್ಷ ಹಳೆಯ, 3,800 ಟನ್ ತೂಕದ ಕಟ್ಟಡ ಸ್ಥಳಾಂತರ – ಹೇಗೆ ನೋಡಿ

    ಬೀಜಿಂಗ್: ಇತ್ತೀಚೆಗೆ ಚೀನಾದ ಶಾಂಘೈನಲ್ಲಿ ಶತಮಾನದಷ್ಟು ಹಳೆಯದಾದ, ಸುಮಾರು 3,800 ಟನ್ ತೂಗುವ ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಈ ಕುತೂಹಲಕಾರಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ ಹಾಗೂ ನಡೆದಾಡುವ ಕಟ್ಟಡ ಎನ್ನಲಾಗುತ್ತಿದೆ.

    ನಿಖರವಾದ ಅಳತೆ, ಲೆಕ್ಕಾಚಾರದ ಬಳಿಕ ಶಾಂಘೈನಲ್ಲಿ 3,800 ಟನ್ ತೂಗುವ ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡವನ್ನು ಅದರ ಮೂಲ ಸ್ಥಾನಕ್ಕೆ ತಳ್ಳಲು ಸ್ಲೈಡಿಂಗ್ ಹಳಿಯನ್ನು ಬಳಸಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

    ವಾಕಿಂಗ್ ಮಷಿನ್ ಎಂದು ಕರೆಯಲಾಗುವ ತಂತ್ರಜ್ಞಾನದಿಂದ ಕಟ್ಟಡವನ್ನು ಮೇಲೆತ್ತಿ, ಸ್ಥಳಾಂತರಿಸಲಾಗಿದೆ. ಕಟ್ಟಡವನ್ನು ಸ್ಥಳಾಂತರಿಸುತ್ತಿರುವ ವೀಡಿಯೋದಲ್ಲಿ ಅದು ಚಲಿಸಿದಂತೆ ತೋರುತ್ತದೆ. ಇದಕ್ಕಾಗಿ ಕಟ್ಟಡವನ್ನು ಚಲಿಸುವ ಕಟ್ಟಡ ಎಂದು ಕರೆಯಲಾಗುತ್ತಿದೆ. ಈ ಕಟ್ಟಡ ನಗರದಲ್ಲೇ ಅತ್ಯಂತ ದೊಡ್ಡ ಹಾಗೂ ಭಾರವಾದ ಕಲ್ಲಿನ ರಚನೆಯಾಗಿದೆ. ಕುತೂಹಲ ಕೆರಳಿಸುವ ಇನ್ನೊಂದು ವಿಚಾರವೆಂದರೆ, ಕಟ್ಟಡವನ್ನು ಸ್ಥಳಾಂತರಿಸುವ ಸಂದರ್ಭ ಅದನ್ನು ಎಲ್ಲಿಯೂ ಭಾಗ ಮಾಡಲಾಗಿಲ್ಲ. ಸಂಪೂರ್ಣ ಒಂದೇ ತುಂಡನ್ನು ಸ್ಥಳಾಂತರಿಸಲಾಗಿದೆ.

    ಬೃಹತ್ ಕಟ್ಟಡಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಎಂಜಿನಿಯರ್‌ಗಳು ಸ್ಮಾರಕಗಳನ್ನು ಸಂರಕ್ಷಿಸಲು ಅಥವಾ ಇತರ ಯೋಜನೆಗಳಿಗೆ ಜಾಗ ಮಾಡಲು ಕಟ್ಟಡಗಳನ್ನು ಸ್ಥಳಾಂತರಿಸುವ ತಂತ್ರಜ್ಞಾನವನ್ನು ಬಳಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಇದನ್ನೂ ಓದಿ: ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್

    https://twitter.com/splattne/status/1373698826880614402?ref_src=twsrc%5Etfw%7Ctwcamp%5Etweetembed%7Ctwterm%5E1373698826880614402%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fcentury-old-building-shanghai-walks-to-its-new-location-1973911-2022-07-10

    ಸ್ಟ್ರಕ್ಚರಲ್ ಮೂವಿಂಗ್ ಎನ್ನುವುದು ಸಂಪುರ್ಣ ಕಟ್ಟಡವನ್ನು ಅಡಿಪಾಯದಿಂದಲೇ ಮೇಲಕ್ಕೆತ್ತಿ, ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ. ಇದು ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಲು ಉಪಯೋಗವಾಗುವ ಸಾಮಾನ್ಯ ಮಾರ್ಗ. ಪ್ರವಾಹದ ಅಪಾಯದಲ್ಲೂ ಕಟ್ಟಡಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಇದೊಂದು ಉತ್ತಮ ಮಾರ್ಗವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಂಘೈನಲ್ಲಿ ಕೋವಿಡ್‌ ಕಂಟ್ರೋಲ್‌- ಹಲವೆಡೆ ಲಾಕ್‌ಡೌನ್‌ ತೆರವು

    ಶಾಂಘೈನಲ್ಲಿ ಕೋವಿಡ್‌ ಕಂಟ್ರೋಲ್‌- ಹಲವೆಡೆ ಲಾಕ್‌ಡೌನ್‌ ತೆರವು

    ಬೀಜಿಂಗ್: ಚೀನಾದ ಶಾಂಘೈನಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆ ಆಗಿದ್ದು, ಇಂದಿನಿಂದ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳು ಮತ್ತು ರೆಸ್ಟೋರೆಂಟ್‍ಗಳನ್ನು ಪುನಃ ಆರಂಭಿಸಲು ಅನುಮತಿ ನೀಡಲಾಗಿದೆ.

    2 ತಿಂಗಳುಗಳ ಕಾಲ ಲಾಕ್ ಆಗಿದ್ದ ಶಾಂಘೈ ಪುನಃ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಮಂದಿಯಲ್ಲಿ 10 ಲಕ್ಷ ಮಂದಿ ಲಾಕ್‍ಡೌನ್‍ನಿಂದ ಹೊರ ಬಂದಿದ್ದಾರೆ. ಶಾಂಘೈನ 16 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ಲಾಕ್‍ಡೌನ್‍ ತೆಗೆದು ಹಾಕಿವೆ ಎಂದು ಉಪ ಮೇಯರ್ ಜೊಂಗ್ ಮಿಂಗ್ ಹೇಳಿದ್ದಾರೆ.

    ಇಂದಿನಿಂದ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳು ಮತ್ತು ರೆಸ್ಟೋರೆಂಟ್‍ಗಳನ್ನು ಜನರ ಸಂಖ್ಯೆಯ ಮಿತಿಗಳೊಂದಿಗೆ ಪುನಃ ತೆರೆಯಲು ಅನುಮತಿಸಲಾಗಿದೆ. ಆದರೆ ಬೇರೆ ಪ್ರದೇಶಕ್ಕೆ ಹೋಗುವ ಕುರಿತು ನಿರ್ಬಂಧಗಳು ಜಾರಿಯಲ್ಲಿವೆ. ಅಷ್ಟೇ ಅಲ್ಲದೇ ಸುರಂಗಮಾರ್ಗ ರೈಲು ವ್ಯವಸ್ಥೆಯನ್ನು ಸದ್ಯಕ್ಕೆ ಮುಚ್ಚಲಾಗಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    china-coronavirus covid

    ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ, ನಗರ ಮತ್ತು ರಾಷ್ಟ್ರೀಯ ಅಧಿಕಾರಿಗಳು ಶಾಂಘೈನ ಸ್ಥಿತಿಯ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ನಗರದ ಜನ ಜೀವನವು ಸಹಜ ಸ್ಥಿತಿಗೆ ಮರಳಬಹುದು. ಪೂರ್ಣ ಪುನಾರಂಭಕ್ಕಾಗಿ ಜೂನ್ 1ರಂದು ದಿನಾಂಕವನ್ನು ನಿಗದಿಗೊಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

  • ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಶಾಂಘೈ ಜನ – ಸಾಕು ಪ್ರಾಣಿಗಳ ಮಾರಣಹೋಮ

    ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಶಾಂಘೈ ಜನ – ಸಾಕು ಪ್ರಾಣಿಗಳ ಮಾರಣಹೋಮ

    ಬೀಜಿಂಗ್: ಚೀನಾದ ಶಾಂಘೈ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಜನರನ್ನು ಏಕಾಏಕಿ ಕಟ್ಟುನಿಟ್ಟಿನ ಲಾಕ್‌ಡೌನ್‌ಗೆ ತಳ್ಳಿತು. ಅಲ್ಲಿನ ಜನರು ತಮ್ಮ ಮನೆಗಳಲ್ಲೇ ಕಳೆದ 4 ವಾರಗಳಿಂದ ದೈನಂದಿನ ಆಹಾರ ಸರಬರಾಜಿಗೆ ಕಾಯುತ್ತಿದ್ದಾರೆ. ಆದರೆ ತಿನ್ನಲು ಕುಡಿಯಲು ಏನೂ ಇಲ್ಲದೆ ಹಸಿವಿನಿಂದ ಒದ್ದಾಡುತ್ತಿರುವ ಜನರು ಆತ್ಮಹತ್ಯೆಗೆ ಮುಂದಾಗಿದ್ದಾರೆ.

    ಸುಮಾರು ಎರಡುವರೆ ಕೋಟಿ ಜನರು ಶಾಂಘೈ ನಗರದ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಲಾಕ್‌ಡೌನ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೆಲವರು ಹಸಿವಿನಿಂದ ತಮ್ಮ ಮನೆಗಳಲ್ಲೇ ಪ್ರಾಣ ಬಿಡುವಂತಹ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವಾರು ವೈರಲ್ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಲ್ಲಿನ ಭಯಾನಕತೆಯ ನಿಜರೂಪವನ್ನು ತೋರಿಸಿದೆ.

    ಶಾಂಘೈನಲ್ಲಿ ವ್ಯಕ್ತಿಯೊಬ್ಬ ಕೋವಿಡ್ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿ ಪೊಲೀಸರನ್ನು ಸಂಪರ್ಕಿಸಲು ಮುಂದಾಗಿದ್ದಾನೆ. ತನ್ನನ್ನು ಬಂಧಿಸುವಂತೆ ಪೊಲೀಸರ ಬಳಿ ಬೇಡಿಕೊಂಡಿದ್ದಾನೆ. ಇದಕ್ಕೆ ಕಾರಣ ಕೇಳಿದರೆ ಕನಿಷ್ಟಪಕ್ಷ ಜೈಲಿನಲ್ಲಾದರೂ ಊಟ ಸಿಗುತ್ತದಲ್ಲಾ ಎಂದು ಉತ್ತರಿಸಿದ್ದಾನೆ. ಇದನ್ನೂ ಓದಿ: ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

    ಇತ್ತೀಚೆಗೆ ವೈರಲ್ ಆಗಿದ್ದ ವೀಡಿಯೋವೊಂದರಲ್ಲಿ ಶಾಂಘೈ ನಿವಾಸಿಗಳು ಆಹಾರಕ್ಕಾಗಿ ತಮ್ಮ ಮನೆಗಳಿಂದ ಹೊರಗೆ ಬರದೇ ಕಿಟಕಿಗಳಿಂದ ಕಿರುಚಾಡುತ್ತಿರುವ ದೃಶ್ಯ ಮನಕಲುಕುವಂತಿತ್ತು.

    ಇನ್ನೊಂದು ವೀಡಿಯೋದಲ್ಲಿ ಆರೋಗ್ಯ ಕಾರ್ಯಕರ್ತರು ಜನರ ಪ್ರತಿಭಟನೆಯನ್ನು ತಡೆಯಲು ಪ್ರಯತ್ನಿಸಿದಾಗ ನಾವು ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಚೀರುವುದನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

    ತಮ್ಮ ದಿನನಿತ್ಯ ಬಳಕೆಯ ವಸ್ತುಗಳು ಕೊರತೆಯಾದ ಕಾರಣ ಶ್ರೀಮಂತ ನಗರವಾಗಿದ್ದರೂ ಶಾಂಘೈ ಜನರು ಗುಂಪಿನಲ್ಲಿ ಸೂಪರ್ ಮಾರ್ಕೆಟ್ ಹಾಗೂ ದಿನಸಿ ಅಂಗಡಿಗಳಲ್ಲಿ ದರೋಡೆ ನಡೆಸಿದ್ದಾರೆ.

    ಇನ್ನೂ ಒಂದೆಡೆ ಮನೆಯಲ್ಲಿ ಆಹಾರ ಪದಾರ್ಥಗಳಿಲ್ಲ ಎಂದು ಮೌನವಾಗಿಯೇ ತಿಳಿಸಲು ತಮ್ಮ ಖಾಲಿಯಾಗಿರುವ ಫ್ರಿಜ್ ಅನ್ನು ಬಾಲ್ಕನಿಯಲ್ಲಿ ಇರಿಸಿರುವುದನ್ನು ನೋಡಬಹುದು.

    ಕೋವಿಡ್ ರೋಗಿಗಳ ಸಾಕು ಪ್ರಾಣಿಗಳನ್ನು ಆರೋಗ್ಯ ಅಧಿಕಾರಿಗಳು ಹೊಡೆದು ಸಾಯಿಸಿರುವುದಾಗಿ ಹಲವು ಪ್ರಕರಣಗಳು ವರದಿಯಾಗಿವೆ. ಸಾಕು ಪ್ರಾಣಿಗಳನ್ನು ಸಾಯಿಸುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

    ಶಾಂಘೈನಲ್ಲಿ ಹಸಿವಿನಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳೂ ವರದಿಯಾಗಿವೆ.

  • 3 ವಾರದಿಂದ ಮನೆಯಲ್ಲೇ ಬಂಧಿ- ಆಹಾರಕ್ಕಾಗಿ ಶಾಂಘೈ ನಿವಾಸಿಗಳ ಆಕ್ರಂದನ

    3 ವಾರದಿಂದ ಮನೆಯಲ್ಲೇ ಬಂಧಿ- ಆಹಾರಕ್ಕಾಗಿ ಶಾಂಘೈ ನಿವಾಸಿಗಳ ಆಕ್ರಂದನ

    ಬೀಜಿಂಗ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪ್ರಾರಂಭಿಸಿ 3 ವಾರಗಳು ಕಳೆದಿವೆ. ಇಂದಿಗೂ ಶಾಂಘೈ ನಗರದ ಜನರು ಕಳೆದ 3 ವಾರಗಳಿಂದ ತಮ್ಮ ಮನೆಗಳಿಂದ ಹೊರ ಇಣುಕಲೂ ಸಾಧ್ಯವಾಗುತ್ತಿಲ್ಲ. ಇದೀಗ ನಗರದ ಎರಡೂವರೆ ಕೋಟಿ ಜನರು ಆಹಾರ, ಔಷಧಗಳಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಶಾಂಘೈ ನಗದ ಕಟ್ಟುನಿಟ್ಟಿನ ಲಾಕ್‌ಡೌನ್ ನಡುವೆ ನಗರದ ನಿವಾಸಿಗಳು ತಮ್ಮ ಮನೆಗಳಿಂದ ಕಿರುಚಾಟ, ಅರಚಾಟಗಳನ್ನು ಪ್ರಾರಂಭಿಸಿದ್ದಾರೆ. ಜನರು ತಮ್ಮ ಕಿಟಕಿಗಳಿಂದ ಕಿರುಚುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜನರ ಆಕ್ರಂದನವೇ ಅವರ ಕಷ್ಟದ ಕ್ಷಣಗಳನ್ನು ಬಯಲುಮಾಡುತ್ತಿದೆ. ಇದನ್ನೂ ಓದಿ: ಒಟ್ಟು 34 ಕೇಸ್ – ಬೆಂಗ್ಳೂರು ಹೊರತು ಪಡಿಸಿ ಏಕೈಕ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್

    ಟ್ವಿಟ್ಟರ್ ಬಳಕೆದಾರ ಪ್ಯಾಟ್ರಿಕ್ ಮ್ಯಾಡ್ರಿಡ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಶಾಂಘೈ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್‌ಗಳಿಂದ ಕಿರುಚಾಡುವ ಸನ್ನಿವೇಶವನ್ನು ಕಾಣಬಹುದು. ವೀಡಿಯೋ ಬಗ್ಗೆ ವಿವರಿಸಿರುವ ಮ್ಯಾಡ್ರಿಡ್, ಇದು ನನ್ನ ಆತ್ಮೀಯ ಸ್ನೇಹಿತನ ತಂದೆ ತೆಗೆದಿರುವ ವೀಡಿಯೋ. ಶಾಂಘೈ ಜನರ ಕಷ್ಟದ ಸತ್ಯಾಸತ್ಯತೆಯನ್ನು ಅವರು ಸೆರೆಹಿಡಿದಿದ್ದಾರೆ. ಲಾಕ್‌ಡೌನ್ ಪ್ರಾರಂಭವಾಗಿ ವಾರಗಳ ಬಳಿಕ ಅಲ್ಲಿನ ಜನರು ತಮ್ಮ ಕಿಟಕಿಗಳ ಹೊರಗೆ ಕಿರುಚಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ತಮ್ಮ ಅಪಾರ್ಟ್ಮೆಂಟ್ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶಲ್ಲಿ ಜೆಸಿಬಿ ಘರ್ಜನೆ – ರಾಮನವಮಿ ಕಲ್ಲುತೂರಾಟ, 20 ಅಕ್ರಮ ಕಟ್ಟಡಗಳು ನೆಲಸಮ

    ಶಾಂಘೈ ನಗರದಲ್ಲಿ ಭಾನುವಾರ 25 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕೋವಿಡ್ ಪ್ರಕರಣಗಳು ಕಡಿಮೆಯಿರುವ ನಗರದ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ಬೀಜಿಂಗ್: ಕೋವಿಡ್‌-19 ಕಾರಣದಿಂದಾಗಿ ಶಾಂಘೈನಲ್ಲಿ ತೀವ್ರ ಲಾಕ್‌ಡೌನ್‌ನಲ್ಲಿರುವ ಸ್ಥಳೀಯರು ಕಠಿಣ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

    ಚೀನಾದಲ್ಲಿ ಮತ್ತೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು, ಶಾಂಘೈ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಲ್ಲಿ ದೈನಂದಿನ ಸೋಂಕಿನ ಪ್ರಮಾಣವು ಕುಸಿದಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಇದು ಇನ್ನೂ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ನಗರದ 26 ಮಿಲಿಯನ್ (2.6 ಕೋಟಿ) ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    ಕೋವಿಡ್‌ ನಿಯಮಗಳ ಪಾಲನೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮೆಗಾಫೋನ್‌ಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅನೌನ್ಸ್‌ ಮಾಡುತ್ತಿದ್ದಾರೆ. ʼಇಂದಿನಿಂದ ದಂಪತಿ ಪ್ರತ್ಯೇಕವಾಗಿ ಮಲಗಬೇಕು. ಪರಸ್ಪರರನ್ನು ಆಲಿಂಗನ ಮಾಡುವುದು, ಚುಂಬಿಸುವುದಕ್ಕೆ ಅವಕಾಶವಿಲ್ಲ. ಉಪಾಹಾರ, ಊಟ ಸೇವನೆಯೂ ಪ್ರತ್ಯೇಕವಾಗಿ ಆಗಬೇಕು. ನಿಮ್ಮ ಸಹಕಾರಕ್ಕೆ ಧನ್ಯವಾದಗಳುʼ ಎಂದು ಅನೌನ್ಸ್‌ ಮಾಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಕೊರೊನಾ ಹರಡುವುದನ್ನು ತಡೆಯಲು ನಗರವು ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ಚೀನಾದ ಆರ್ಥಿಕ ಕೇಂದ್ರಗಳು ಸ್ತಬ್ಧವಾಗಿವೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿತರಣಾ ಸಿಬ್ಬಂದಿ, ವಿಶೇಷ ಅನುಮತಿ ಹೊಂದಿರುವ ಜನರನ್ನು ಮಾತ್ರ ಬೀದಿಗಳಲ್ಲಿ ಓಡಾಡಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ಅಕ್ಕಿ, ಮಾಂಸ ದಾಸ್ತಾನಿದೆ. ಲಾಕ್‌ಡೌನ್‌ ವಿಧಿಸಿರುವ ವಲಯಗಳಲ್ಲಿ ಡೆಲಿವರಿ ಸಿಬ್ಬಂದಿ ಮೂಲಕ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಇನ್ನುಳಿದ ಕಡೆಗಳಲ್ಲಿ ಸಗಟು ಮಾರುಕಟ್ಟೆ, ಆಹಾರ ಮಳಿಗೆಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಶಾಂಘೈ ಉಪ ಮೇಯರ್‌ ಚೆನ್‌ ಕಾಂಗ್‌ ತಿಳಿಸಿದ್ದಾರೆ.

  • 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    ಬೀಜಿಂಗ್: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್‌ಗಳಿಂದಾಗಿ ಜನರ ಪರೀಕ್ಷೆ ನಡೆಸಲು ಸಾವಿರಾರು ಮಿಲಿಟರಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಶಾಂಘೈ ನಗರಕ್ಕೆ ಚೀನಾ ಕಳುಹಿಸಿದೆ.

    ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಚೀನಾ ಬರೋಬ್ಬರಿ 2.6 ಕೋಟಿ ನಿವಾಸಿಗಳನ್ನು ಪರೀಕ್ಷಿಸಲು ಕ್ರಮ ಕೈಗೊಂಡಿದೆ. ಚೀನಾ ಶಾಂಘೈ ನಗರಕ್ಕೆ ಸೇನೆ ಹಾಗೂ ಸಾವಿರಾರು ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿದೆ. ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ನನ್ನು ಮಿನಿ ಟ್ರಂಪ್ ಎಂದ ಮಾಜಿ ಪತ್ನಿ

    ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಭಾನುವಾರ ಸೇನೆ, ನೌಕಾಪಡೆ ಹಾಗೂ ಜಂಟಿ ಲಾಜಿಸ್ಟಿಕ್ಸ್ ಬೆಂಬಲ ಪಡೆಗಳಿಂದ 2,000 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಶಾಂಘೈಗೆ ಕಳುಹಿಸಿದೆ. ಜಿಯಾಂಗ್ಸು, ಝೆಜಿಯಾಂಗ್ ಹಾಗೂ ರಾಜಧಾನಿ ಬೀಜಿಂಗ್ ನಗರಗಳಿಂದ 10,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಶಾಂಘೈಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಪ್ರಧಾನಿ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ

    ಚೀನಾದ ಶಾಂಘೈ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆ ಮಾರ್ಚ್ 28ರಂದು ಲಾಕ್ ಡೌನ್ ಪ್ರಾರಂಭಿಸಲಾಯಿತು. ಚೀನಾದ ಕಠಿಣ ನಿಯಮದಿಂದಾಗಿ ಜನರು ತಮ್ಮ ಮನೆಗಳಿಂದ ಹೊರ ಬರಲೂ ಸಾಧ್ಯವಾಗದಂತಹ ಪರಿಸ್ಥಿತಿಗೆ ತೆರಳಿದ್ದಾರೆ.

  • ಶಾಂಘೈಯಲ್ಲಿ ಲಾಕ್‍ಡೌನ್ ಎಫೆಕ್ಟ್- 3ನೇ ಮಹಡಿಯಿಂದ ಹಗ್ಗದ ಮೂಲಕ ಶ್ವಾನ ಇಳಿಸಿದ ವ್ಯಕ್ತಿ!

    ಶಾಂಘೈಯಲ್ಲಿ ಲಾಕ್‍ಡೌನ್ ಎಫೆಕ್ಟ್- 3ನೇ ಮಹಡಿಯಿಂದ ಹಗ್ಗದ ಮೂಲಕ ಶ್ವಾನ ಇಳಿಸಿದ ವ್ಯಕ್ತಿ!

    ಬೀಜಿಂಗ್: ಈಗಾಗಲೇ ಚೀನಾದ ಶಾಂಘೈನಲ್ಲಿ ಕೊರೊನಾ ಸೋಂಕು ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಈ ಮಧ್ಯೆ ವ್ಯಕ್ತಿಯೊಬ್ಬ ಶ್ವಾನವನ್ನು 3ನೇ ಮಹಡಿಯಿಂದ ಇಳಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶ್ವಾನ ಪ್ರೇಮಿಗಳು ಇದರಿಂದ ಕೆರಳಿದ್ದಾರೆ.

    ಚೀನಾದ ಅತಿದೊಡ್ಡ ನಗರ ಶಾಂಘೈ ಲಾಕ್‍ಡೌನ್ ಆಗಿದ್ದು, 16 ಮಿಲಿಯನ್ ನಿವಾಸಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು 3ನೇ ಮಹಡಿಯ ಕಿಟಕಿಯಿಂದ ಕೆಳಗೆ ಇಳಿಸಿ ವಾಕ್ ಮಾಡಿಸಿದ್ದಾನೆ. ಇದನ್ನು ಪಕ್ಕದ ಮನೆಯವರು ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಕೊರೊನಾ ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಇದರಿಂದ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತನ್ನ ಅಪಾರ್ಟ್‍ಮೆಂಟ್‍ನ 3ನೇ ಮಹಡಿ ಕಿಟಕಿಯಿಂದ ತನ್ನ ಸಾಕುನಾಯಿಯನ್ನು ಉದ್ದವಾದ ಹಗ್ಗದಿಂದ ಕೆಳಕ್ಕೆ ಇಳಿಸುತ್ತಿದ್ದಾನೆ. ನಾಯಿಯನ್ನು ನಿಧಾನವಾಗಿ ನೆಲಕ್ಕೆ ಇಳಿಸುತ್ತಾನೆ. ನಂತರ ಅದು ಅಲ್ಲಿರುವ ಪಾರ್ಕ್ ಸುತ್ತಲೂ ಆ ನಾಯಿ ಸುತ್ತುತ್ತದೆ. ಅದಾದ ಬಳಿಕ ಅದನ್ನು ಪುನಃ ಹಗ್ಗದ ಸಹಾಯದಿಂದ ಮೇಲಕ್ಕೆತ್ತುತ್ತಾನೆ.

    ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿಗೆ ಕಟ್ಟಡದಿಂದ ಇಳಿಸುವಾಗ ಹಾಗೂ ಮೇಲಕ್ಕೆತ್ತುವಾಗ ಕಟ್ಟೆ ತಾಗಿ ಏನಾದರೂ ಗಾಯವಾಗವಹುದು. ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸಲು ಹೇಗೆ ಸಾಧ್ಯ. ನಾಯಿಯನ್ನು ನೀವೇ ಹೊರಗೆ ಕರೆದುಕೊಂಡು ಹೋಗಬೇಕಿತ್ತು ಎಂದು ಶ್ವಾನ ಪ್ರೇಮಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    ವ್ಯಕ್ತಿಯು ಕೋವಿಡ್ ಪಾಸಿಟಿವ್ ಆಗಿದ್ದಾನೆ ಮತ್ತು ಅವನ ಮನೆಯೊಳಗೆ ಬೀಗ ಹಾಕಲಾಗಿದೆಯೇ ಅಥವಾ ಅವನ ಕಾಂಪೌಂಡ್ ಅನ್ನು ಅಧಿಕಾರಿಗಳು ಹೊರಗಿನಿಂದ ಲಾಕ್ ಮಾಡಿದ್ದಾರೆಯೇ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

  • ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    ಬೀಜಿಂಗ್: ಚೀನಾದ ನಗರ ಶಾಂಘೈನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಸರಕು ಸಾಗಣೆಗೆ ಪ್ರಮುಖ ಬಂದರು ತಾಣವಾಗಿದ್ದ ಶಾಂಘೈನಲ್ಲಿ ಲಾಕ್‌ಡೌನ್ ಘೋಷಿಸಿರುವುದು ಭಾರತಕ್ಕೆ ದೊಡ್ಡ ಪೆಟ್ಟು ನೀಡಿದೆ. ಭಾರತದ ಔಷಧೀಯ ಉದ್ಯಮಕ್ಕೆ ಆತಂಕ ಎದುರಾಗಿದೆ.

    ಕೋವಿಡ್ ಏಕಾಏಕಿ ನಿಗ್ರಹಿಸಲು ಚೀನಾ ಹಂತಹಂತವಾಗಿ ಲಾಕ್‌ಡೌನ್ ಅನ್ನು ವಿಧಿಸಿದೆ. ಇದರಿಂದಾಗಿ ಅದರ ಎರಡು ಪ್ರಮುಖ ಬಂದರುಗಳಾದ ಶಾಂಘೈ ಮತ್ತು ಶೆನ್‌ಜೆನ್‌ನಲ್ಲಿ ಸರಕು ಸಾಗಣೆ ವಿಳಂಬವಾಗಿದೆ. ಶೆನ್‌ಜೆನ್‌ನಲ್ಲಿ ಕಾರ್ಗೋ ಕಾರ್ಯಾಚರಣೆಗಳು ಅಸ್ತವ್ಯಸ್ತಗೊಂಡಿವೆ. ವಿಶ್ವದ ಅತಿದೊಡ್ಡ ಕಂಟೈನರ್ ಶಿಪ್ಪಿಂಗ್ ಬಂದರಿಗೆ ನೆಲೆಯಾಗಿರುವ ಶಾಂಘೈನಲ್ಲಿ ಲಾಕ್‌ಡೌನ್ ವಿಧಿಸಿರುವುದು ಮುಂದಿನ ದಿನಗಳಲ್ಲಿ ಸರಕು ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ

    ಔಷಧ ಬೆಲೆಯಲ್ಲಿ ಹೆಚ್ಚಳ
    ಶಾಂಘೈನಲ್ಲಿ ಲಾಕ್‌ಡೌನ್ ವಿಧಿಸಿರುವುದು ಸರಕು ಸಾಗಣೆಗೆ ತಡೆಯಾಗಿದ್ದು, ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿದೆ ಎಂದು ಔಷಧಿ ಉದ್ಯಮದವರು ತಿಳಿಸಿದ್ದಾರೆ. ಔಷಧಿಗಳ ಬೆಲೆ ಮತ್ತು ಪ್ಯಾಕಿಂಗ್ ವೆಚ್ಚಗಳು ಈಗಾಗಲೇ ಹೆಚ್ಚಾಗಿವೆ ಎಂದು ಪ್ರಮುಖ ಫಾರ್ಮಾ ಕಂಪನಿಗಳಲ್ಲಿ ಒಂದಾದ ಮ್ಯಾನ್‌ಕೈಂಡ್ ಫಾರ್ಮಾದ ಕಾರ್ಯನಿರ್ವಾಹಕ ಅಧ್ಯಕ್ಷ ಆರ್‌ಸಿ ಜುನೇಜಾ ಹೇಳಿದ್ದಾರೆ.

    ಚೀನಾ ಮೇಲೆ ಭಾರತ ಅವಲಂಬನೆ
    ವಿಶ್ವದ ಮೂರನೇ ಅತಿ ದೊಡ್ಡ ಔಷಧ ಉತ್ಪಾದಕ ರಾಷ್ಟ್ರ ಭಾರತ. ಔಷಧ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳಲ್ಲಿ ಶೇ.70ನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಪ್ರಮುಖ ಆ್ಯಂಟಿಬಯೋಟಿಕ್, ಪ್ಯಾರಸಿಟಮಲ್, ಮಧುಮೇಹ ಮತ್ತು ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಔಷಧಗಳ ತಯಾರಿಕೆಯಲ್ಲಿ ಚೀನಾದ ಕಚ್ಚಾ ವಸ್ತುಗಳನ್ನು ಭಾರತದಲ್ಲಿ ಬಳಸಲಾಗುತ್ತದೆ. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    ದೇಶೀಯ ಕಂಪನಿಗಳಾದ ಲುಪಿನ್, ಸನ್ ಫಾರ್ಮಾಸ್ಯುಟಿಕಲ್ಸ್, ಗ್ಲೆನ್‌ಮಾರ್ಕ್, ಮ್ಯಾನ್‌ಕೈಂಡ್, ರೆಡ್ಡೀಸ್, ಟೊರೆಂಟ್, ಅರಬಿಂದೋ ಫಾರ್ಮಾ, ಅಬಾಟ್ ಮತ್ತು ಇತರ ಹಲವಾರು ಕಂಪನಿಗಳು ಚೀನಾದ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಭಾರತಕ್ಕೆ ಅಗತ್ಯವಿರುವ ಆ್ಯಂಟಿಬಯೋಟಿಕ್‌ಗಳ ಶೇ.90 ರಷ್ಟನ್ನು ಚೀನಾ ಪೂರೈಸುತ್ತದೆ. ಲಾಕ್‌ಡೌನ್ ಮುಂದುವರಿದರೆ ಉದ್ಯಮದ ಗಂಭೀರ ಪರಿಣಾಮ ಬೀರಲಿದೆ.

    ಶೇ.70 ಸರಕು ಜಲಸಾರಿಗೆಯಿಂದಲೇ ಆಮದು
    ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್‌ ಪ್ರಮೋಷನ್ ಕೌನ್ಸಿಲ್ (ಫಾರ್ಮೆಕ್ಸಿಲ್) ಮತ್ತು ಉತ್ತರ ಭಾರತದ ಸಿಐಐನ ನಿಯೋಜಿತ ಅಧ್ಯಕ್ಷರಾದ ದಿನೇಶ್ ದುವಾ, ಲಾಕ್‌ಡೌನ್ ಮುಂದುವರಿದರೆ ಪೂರೈಕೆ ನಿರ್ಬಂಧಗಳು ಎದುರಾಗಲಿವೆ. ಶೇ.20-30ರಷ್ಟು ಸರಕು ವಿಮಾನಗಳಿಂದ ಬರುತ್ತವೆ. ಶೇ.70ರಷ್ಟು ಸರಕು ಹಡಗಿನ ಮೂಲಕ ಬರುತ್ತವೆ. ವಿಮಾನದ ಮೂಲಕ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ತುಂಬಾ ದುಬಾರಿ. ಸರಕು ಸಾಗಣೆಯಲ್ಲಿ ವಾಯು ಮತ್ತು ಜಲಸಾರಿಗೆಯಲ್ಲಿ ಪ್ರತಿ ಕಿ.ಮೀ.ಗೆ 5 ರಿಂದ 10 ಡಾಲರ್ ವೆಚ್ಚದ ವ್ಯತ್ಯಾಸವಿರುತ್ತದೆ. ಕಂಟೇನರ್ ಲಭ್ಯತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಇದು ಔಷಧಿಗಳ ಕೊರತೆಗೆ ಕಾರಣವಾಗಬಹುದು. ಜೊತೆಗೆ ರಫ್ತಿನ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CRPF ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ

    ಶಾಂಘೈನಿಂದ ಬಹಳಷ್ಟು ಸರಕುಗಳು ಭಾರತಕ್ಕೆ ಬರುತ್ತವೆ. ಶೆನ್‌ಜೆನ್ ಈಗಾಗಲೇ ತೊಂದರೆಗೆ ಒಳಗಾಗಿದೆ. ಅದನ್ನು ವಿಂಗಡಿಸದಿದ್ದರೆ ಅದು ಔಷಧಿ ಉದ್ಯಮಕ್ಕೆ ತುಂಬಾ ಸಂಕಷ್ಟ ಎದುರಾಗಲಿದೆ. ಲಾಜಿಸ್ಟಿಕ್ಸ್ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಹಡಗುಗಳು, ಕಂಟೈನರ್‌ಗಳು ಲಭ್ಯವಾಗುತ್ತಿಲ್ಲ. ಇದು ಖಂಡಿತವಾಗಿಯೂ ಔಷಧಿ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಪ್ಯಾರಸಿಟಮಲ್, ಹೃದಯರಕ್ತನಾಳದ ಔಷಧಗಳು (ಸಾರ್ಟಾನ್ಸ್), ಮಧುಮೇಹ ವಿರೋಧಿ ಔಷಧಗಳು (ಮೆಟ್‌ಫಾರ್ಮಿನ್), ಆಂಟಿಬಯೋಟಿಕ್ (ಸಿಪ್ರೊಫ್ಲೋಕ್ಸಾಸಿನ್, ಆಫ್ಲೋಕ್ಸಾಸಿನ್), ವಿಟಮಿನ್ಸ್ (ಆಸ್ಕೋರ್ಬಿಕ್ ಆಮ್ಲ), ಅಸಿಟೈಲ್ಸಲಿಸಿಲಿಕ್ ಆಮ್ಲ (ಆಸ್ಪಿರಿನ್) ನಂತಹ ಎಲ್ಲಾ ಪ್ರಮುಖ ಅಗತ್ಯ ಔಷಧಿಗಳಿಗೆ ಭಾರತವು ಚೀನಾವನ್ನು ಅವಲಂಬಿಸಿದೆ.

    ಚೀನಾದ ಔಷಧೀಯ ಉದ್ಯಮದಲ್ಲಿ ಪರಿಚಿತವಾಗಿರುವ ಫಾರ್ಮಾ ತಜ್ಞ ಮೆಹುಲ್ ಶಾಹ್, ಸದ್ಯ ಯಾವುದೇ ಕೊರತೆ ಇಲ್ಲ. ನಾವು ಸಾಗಣೆಯನ್ನು ಪಡೆಯುವಲ್ಲಿ ಸ್ವಲ್ಪ ವಿಳಂಬವನ್ನು ಎದುರಿಸುತ್ತಿದ್ದೇವೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅನಿಶ್ಚಿತತೆ ಎದುರಾಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಜಲಸಾರಿಗೆ ಮಹತ್ವವೇನು?
    ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿ ನೋಡಿದರೆ ಹಡಗಿನ ಮುಖಾಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಾರಿ ಪ್ರಮಾಣದ ಸರಕುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದಾಗಿದೆ. ಹಾಗಾಗಿ ಬಂದರುಗಳು ಹಾಗೂ ಹಡಗು ಉದ್ಯಮಗಳು ದೇಶದ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

  • ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    ಬೀಜಿಂಗ್: ಚೀನಾದಲ್ಲಿ ಕೊರೊನಾ ಆರ್ಭಟ ಮುಂದುವರಿಯುತ್ತಿದ್ದು, 26 ಮಿಲಿಯನ್ ಜನರಿರುವ ಶಾಂಘೈ ನಗರಕ್ಕೆ ಲಾಕ್‌ಡೌನ್ ವಿಧಿಸಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ.

    ಶಾಂಘೈ ನಗರದಲ್ಲಿ ಭಾನುವಾರ ಒಂದೇ ದಿನ 3,450 ಮಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಚೀನಾದ ಒಟ್ಟು ಪ್ರಕರಣಗಳ ಶೇ.70 ರಷ್ಟಿದೆ. ಅಲ್ಲದೆ 50 ಮಂದಿಯಲ್ಲಿ ಲಕ್ಷಣ ಸಹಿತ ಪ್ರಕರಣಗಳು ವರದಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಶಾಂಘೈನ ಪುಡಾಂಗ್ ಜಿಲ್ಲೆ ಸೇರಿದಂತೆ ಹತ್ತಿರವಿರುವ ನಗರಗಳಲ್ಲೂ ಸೋಮವಾರದಿಂದ ಲಾಕ್‌ಡೌನ್ ಆರಂಭಿಸಿದ್ದು ಮುಂದಿನ ಶುಕ್ರವಾರದ ವರೆಗೆ ಮುಂದುವರಿಯಲಿದೆ ಎಂದು ಚೀನಾ ಸರ್ಕಾರ ಹೇಳಿದೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು

    covid

    ಈ ಬೆನ್ನಲ್ಲೇ ಹುವಾಂಗ್‌ಪು ನದಿಯ ಪಶ್ಚಿಮಕ್ಕೆ ಇರುವ ಡೌನ್‌ಟೌನ್ ಪ್ರದೇಶವೂ ಮುಂದಿನ ಶುಕ್ರವಾರದಿಂದ ತನ್ನದೇ ನಿಯಮಗಳಿಂದ 5 ದಿನಗಳ ಕಾಲ ಲಾಕ್‌ಡೌನ್ ವಿಧಿಸಲಿದೆ.

    ಲಸಿಕೆಯನ್ನೇ ಪಡೆದಿಲ್ಲ
    ಮಾರ್ಚ್ ತಿಂಗಳಲ್ಲಿ ಚೀನಾದಲ್ಲಿ 56 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಚೀನಾದಲ್ಲಿ ಇನ್ನೂ ಕೆಲವರು ಕೋವಿಡ್-19 ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಷ್ಟ್ರೀಯ ದತ್ತಾಂಶದ ಪ್ರಕಾರ 60 ವರ್ಷ ಮೇಲ್ಪಟ್ಟ 52 ಮಿಲಿಯನ್ ಜನರು ಇನ್ನೂ ಯಾವುದೇ ಕೋವಿಡ್ -19 ಲಸಿಕೆಯನ್ನೇ ಪಡೆದಿಲ್ಲ ಎಂದು ತೋರಿಸಿದೆ. ಇದನ್ನೂ ಓದಿ: 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ- ರಾಜ್ಯದಲ್ಲಿಂದು 92 ಮಂದಿಗೆ ಕೊರೊನಾ, ಇಬ್ಬರು ಸಾವು

    wuhan

    60-69ರ ವರ್ಷದೊಳಗಿನ ಶೇ.56.4 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ ಹಾಗೂ 70-79 ವರ್ಷದೊಳಗಿನ ಶೇ.48.4ರಷ್ಟು ಜನರು ಮೊದಲ ಡೋಸ್ ಅಷ್ಟೇ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.