Tag: Shane Warne

  • ಕೊಹ್ಲಿ 3 ಮಾದರಿ ಕ್ರಿಕೆಟ್‍ನಲ್ಲೂ ಅತ್ಯುತ್ತಮ ಆಟಗಾರ: ಶೇನ್ ವಾರ್ನ್

    ಕೊಹ್ಲಿ 3 ಮಾದರಿ ಕ್ರಿಕೆಟ್‍ನಲ್ಲೂ ಅತ್ಯುತ್ತಮ ಆಟಗಾರ: ಶೇನ್ ವಾರ್ನ್

    ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟಿನ ಎಲ್ಲಾ ಮಾದರಿಗಳಲ್ಲಿಯೂ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅವರಿಗಿಂತ ಉತ್ತಮ ಆಟಗಾರ ಎಂದು ಆಸೀಸ್ ಮಾಜಿ ದಿಗ್ಗಜ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ಪಟ್ಟಿದ್ದಾರೆ.

    ಇತ್ತೀಚೆಗೆ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದ ಸ್ಮಿತ್ ಕುರಿತು ವಾರ್ನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಕೇವಲ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್ ಅಷ್ಟೇ. ಆದರೆ ಕೊಹ್ಲಿ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ ಉತ್ತಮ ರನ್ ಗಳಿಸಿದ್ದಾರೆ ಎಂದು ವಾರ್ನ್ ಹೇಳಿದ್ದಾರೆ. ಇದನ್ನು ಓದಿ: ರೂಮಿನ ಕಿಟಕಿ ತೆರೆದು ಸೆಕ್ಸ್ ಪಾರ್ಟಿ – ಪ್ರೇಯಸಿ, ವೇಶ್ಯೆಯರ ಜೊತೆ ವಾರ್ನ್ ಸಲ್ಲಾಪ

    ವಿಶ್ವ ಕ್ರಿಕೆಟಿನಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಕ್ರಿಕೆಟಿನ ಮೂರು ಮಾದರಿಗಳಲ್ಲಿ ಈಗಾಗಲೇ ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಸ್ಮಿತ್ ಟೆಸ್ಟ್ ಕ್ರಿಕೆಟಿನಲ್ಲಿ ಮಾತ್ರ ಉತ್ತಮ ಬ್ಯಾಟ್ಸ್ ಮನ್. ಕೊಹ್ಲಿರನ್ನು ಲೆಜೆಂಡ್ ಕ್ರಿಕೆಟ್ ಎಂದು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

    ಇದೇ ವೇಳೆ ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆ ಎಂಬ ವಿಶ್ವಾಸ ಇದೆ. ಸಿಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಕೊಹ್ಲಿಗಿಂತ ಉತ್ತಮ ಆಟಗಾರರನ್ನು ನೋಡಿಲ್ಲ. ನನಗೆ ವಿವಿ ರಿಚರ್ಡ್ ಸನ್ ಅತ್ಯುತ್ತಮ ಆಟಗಾರರಾಗಿದ್ದು, ಆ ಬಳಿಕ ತಾವು ಕಂಡ ಅತ್ಯುತ್ತಮ ಆಟಗಾರ ಕೊಹ್ಲಿ. ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಹ್ಲಿ ನಿವೃತ್ತಿ ಹೇಳುವ ವೇಳೆಗೆ ವಿಶ್ವದಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಪಡೆದಿರುತ್ತಾರೆ ಎಂದು ವಾರ್ನ್ ಭವಿಷ್ಯ ನೀಡಿದಿದ್ದಾರೆ. ಇದನ್ನು ಓದಿ: ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು

    ಸದ್ಯ ನಡೆಯುತ್ತಿರುವ ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡಿರುವ ಸ್ಮಿತ್, 147.25ರ ಸರಾಸರಿಯಲ್ಲಿ 589 ರನ್ ಸಿಡಿಸಿದ್ದಾರೆ. ಗುರುವಾರವಷ್ಟೇ ದ್ವಿಶತಕ ಕೂಡ ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಶ್ರೇಯಾಂಕಪಟ್ಟಿಯಲ್ಲಿ ನಂ.1 ಸ್ಥಾನ ಪಡೆದರು. ಇದುವರೆಗೂ 79 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 135 ಇನ್ನಿಂಗ್ಸ್ ಗಳಿಂದ 53.14 ಸರಾಸರಿಯಲ್ಲಿ 25 ಶತಕ, 22 ಅರ್ಧ ಶತಕಗಳೊಂದಿಗೆ 6,749 ರನ್ ಗಳಿಸಿದ್ದಾರೆ. 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮಿತ್ 121 ಇನ್ನಿಂಗ್ಸ್ ಗಳಿಂದ 64.64ರ ಸರಾಸರಿಯಲ್ಲಿ 26 ಶತಕ, 25 ಅರ್ಧ ಶತಕಗಳೊಂದಿಗೆ 6,788 ರನ್ ಗಳಿಸಿದ್ದಾರೆ.

  • ರೂಮಿನ ಕಿಟಕಿ ತೆರೆದು ಸೆಕ್ಸ್ ಪಾರ್ಟಿ – ಪ್ರೇಯಸಿ, ವೇಶ್ಯೆಯರ ಜೊತೆ ವಾರ್ನ್ ಸಲ್ಲಾಪ

    ರೂಮಿನ ಕಿಟಕಿ ತೆರೆದು ಸೆಕ್ಸ್ ಪಾರ್ಟಿ – ಪ್ರೇಯಸಿ, ವೇಶ್ಯೆಯರ ಜೊತೆ ವಾರ್ನ್ ಸಲ್ಲಾಪ

    ಲಂಡನ್: ಆಸ್ಟ್ರೇಲಿಯಾ ಮಾಜಿ ಸ್ಪಿನ್ ಬೌಲರ್ ಶೇನ್ ವಾರ್ನ್ ಮತ್ತೊಮ್ಮೆ ತಮ್ಮ ಸೆಕ್ಸ್ ಸ್ಕ್ಯಾಂಡಲ್ ಮೂಲಕ ಸುದ್ದಿಯಾಗಿದ್ದಾರೆ. ಕಳೆದ 2 ದಿನಗಳ ಹಿಂದೆ 19 ಹಾಗೂ 27 ವರ್ಷದ ವೇಶ್ಯೆಯರನ್ನು ಮನೆಗೆ ಕರೆತಂದು ತಮ್ಮ ಪ್ರೇಯಸಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಶೇನ್ ವಾರ್ನ್ ಲಂಡನಿನಲ್ಲಿ 30 ಕೋಟಿ ರೂ. ಮೌಲ್ಯದ ಮನೆಯನ್ನು ಹೊಂದಿದ್ದು, ತನ್ನ ರೂಮಿನ ಕಿಟಕಿಗಳನ್ನು ತೆರೆದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ವಾರ್ನ್ ನಡೆಯಿಂದ ಸಮಸ್ಯೆ ಎದುರಿಸಿದ ನೆರೆ ಮನೆಯ ನಿವಾಸಿಗಳು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ವರದಿ ಮಾಡಿರುವ ಮಾಧ್ಯಮ, ಇಬ್ಬರು ವೇಶ್ಯೆಯರಿಗೆ ವಾರ್ನ್ 1 ಗಂಟೆಗೆ 40 ರಿಂದ 50 ಸಾವಿರ ರೂ. ಪಾವತಿ ಮಾಡಿರುವುದಾಗಿ ಉಲ್ಲೇಖಿಸಿದೆ.

    ಕ್ರಿಕೆಟ್ ವೃತ್ತಿ ಜೀವನದ ಸಮಯದಲ್ಲೇ ಹಲವು ಯುವತಿಯರನ್ನು ಪ್ರೀತಿ ಮಾಡಿ ಮದುವೆ ಮಾಡಿಕೊಂಡು ವಿಚ್ಛೇದನ ನೀಡುವ ಮೂಲಕ ವಾರ್ನ್ ಸುದ್ದಿಯಾಗಿದ್ದರು. ಅಲ್ಲದೇ ಹಲವರೊಂದಿಗೆ ಸುತ್ತಾಡಿ ಆ ಬಳಿಕ ಸಂಬಂಧ ಕಡಿದುಕೊಂಡಿದ್ದರು. ಈ ಹಿಂದೆ ಇದೇ ಕಾರಣಕ್ಕಾಗಿಯೇ ವಾರ್ನ್ ಕೆಲ ಕ್ರಿಕೆಟ್ ಪಂದ್ಯಗಳಿಂದಲೂ ದೂರವಾಗಿದ್ದರು. ಎಷ್ಟೋ ಬಾರಿ ನಿದ್ದೆ ಮಂಪರಿನಲ್ಲೇ ಕ್ರಿಕೆಟ್ ಮೈದಾನಕ್ಕೆ ಬಂದಿದ್ದರು ಎಂದು ಕೆಲ ಸಹ ಆಟಗಾರರು ಕೂಡ ಹೇಳಿಕೆ ನೀಡಿದ್ದರು.

    ತನ್ನ ಈ ಲೈಂಗಿಕತೆಯ ಬಗ್ಗೆ ಹಲವು ಬಾರಿ ನೇರ ನೇರ ಮಾತನಾಡಿರುವ ವಾರ್ನ್, ನಾನು ಯಾವುದೇ ಅಪರಾಧವನ್ನು ಮಾಡುತ್ತಿಲ್ಲ. ನನಗೆ ಸುಂದರ ಯುವತಿಯರು ಎಂದರೇ ಇಷ್ಟ. ಯುವತಿಯ ಅನುಮತಿಯೊಂದಿಗೆ ನಾನು ಆಕೆಯ ಜೊತೆ ಸಮಯ ಕಳೆಯುತ್ತೇನೆ ಎಂದಿದರು. ತನ್ನ ಮಗಳಿಗಿಂತ ಕಿರಿಯ ಯುವತಿಯರೊಂದಿಗೆ ವಾರ್ನ್ ಸುತ್ತಾಟ ನಡೆಸಿದ್ದ ಕುರಿತು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. 2000 ರಲ್ಲಿ ವಾರ್ನ್ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕಾಮಪ್ರಚೋದಕ ಮೇಸೆಜ್ ಕಳುಹಿಸಿದ ಕಾರಣದಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕನ ಸ್ಥಾನವನ್ನು ಕಳೆದುಕೊಂಡಿದ್ದರು.

    ಉಳಿದಂತೆ 1993 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರಮುಖ ಬೌಲರ್ ಆಗಿ ಮಿಂಚಿದ್ದ ವಾರ್ನ್ 1995 ರಲ್ಲಿ ಮೊದಲ ಬಾರಿಗೆ ವಿವಾಹವಾಗಿದ್ದರು. 2003 ರಲ್ಲಿ ನಿಷೇಧಿತ ಔಷಧಿ ಸೇವಿಸಿ ಕ್ರಿಕೆಟ್‍ನಿಂದ ದೂರವಾಗಿದ್ದರು. ಪರಿಣಾಮ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದಲೂ ಹೊರಗುಳಿದಿದ್ದರು. 2005 ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ರು. 2006 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. 2011 ರಲ್ಲಿ 2ನೇ ಮದುವೆಯಾದ ವಾರ್ನ್ ಸದ್ಯ ಆಕೆಗೂ ಗುಡ್ ಬಾಯ್ ಹೇಳಿದ್ದಾರೆ ಎನ್ನಲಾಗಿದೆ.

  • ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ  ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಒಬ್ಬ ಭಯಂಕರ ಆಟಗಾರ, ಅವರು ತನಗೆ ಬೇಕಾದಾಗ ನಿವೃತ್ತಿ ಹೊಂದುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಧೋನಿ ಅವರು ಉತ್ತಮ ಆಟಗಾರ. ಆದರೆ ಜನರು ಯಾವಾಗಲೂ ಯಾಕೆ ಅವರ ನಿವೃತ್ತಿಯ ಬಗ್ಗೆ ಮಾತನಾಡುತ್ತಾರೆ? ಭಾರತದ ಕ್ರಿಕೆಟ್ ತಂಡಕ್ಕೆ ಧೋನಿ ಅವರ ಕೊಡುಗೆ ಬಹಳ ಇದೆ. ಈ ರೀತಿ ಇರುವಾಗ ಅವರ ನಿವೃತ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ತಿಳಿಸಿದರು.

    ಧೋನಿ ಅವರು ಒಬ್ಬ ಒಳ್ಳೆಯ ಬ್ಯಾಟ್ಸ್‍ಮ್ಯಾನ್ ಮತ್ತು ಚಾಣಾಕ್ಷ ವಿಕೆಟ್ ಕೀಪರ್ ಇಂತಹ ಆಟಗಾರ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೆ ಕೆಲವರು ಪ್ರಶ್ನೆ ಮಾಡುತ್ತಾರೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಅವರು ಈ ವಿಶ್ವಕಪ್ ಮುಗಿದ ನಂತರ ಇಲ್ಲವೇ ಇನ್ನೂ 5 ವರ್ಷ ಕಳೆದ ನಂತರವೋ ನಿವೃತ್ತಿ ಪಡೆಯಬಹುದು. ಈ ನಿವೃತ್ತಿ ವಿಷಯದ ಬಗ್ಗೆ ಧೋನಿಗೆ ಚೆನ್ನಾಗಿ ಗೊತ್ತು. ಯಾವ ಸಮಯದಲ್ಲಿ ನಿವೃತ್ತಿ ಹೊಂದಬೇಕು ಎಂದು ಗೊತ್ತಿರುವ ಏಕೈಕ ಆಟಗಾರ ಎಂದರೆ ಆದು ಧೋನಿ ಎಂದು ಶೇನ್ ವಾರ್ನ್ ಹೇಳಿದ್ದಾರೆ.

    2018ರ ನಂತರ 9 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 81.75ರ ಸರಾಸರಿಯಲ್ಲಿ ಭರ್ಜರಿ 327 ರನ್ ಹೊಡೆದಿದ್ದಾರೆ. ಐಪಿಎಲ್ 12 ರ ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಧೋನಿ ಅವರು ಆಡಿದ 15 ಪಂದ್ಯಗಳಲ್ಲಿ 12 ಇನ್ನಿಂಗ್ಸ್‍ಗಳಲ್ಲಿ 83.20ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಧೋನಿ 134.62ರ ಸ್ಟ್ರೈಕ್ ರೇಟ್‍ನಲ್ಲಿ 416 ರನ್ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ.

    ಪ್ರಸಕ್ತ ಸಂದರ್ಭದಲ್ಲಿ ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್ ಆಗಿರುವ ಧೋನಿ ಅವರು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ತಂಡದಲ್ಲಿ ಇರುವುದು ನಮಗೆ ವರದಾನವಾಗಲಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

  • ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಚೆನ್ನೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡದಲ್ಲಿ ಅನುಭವಿ ಆಟಗಾರ ಎಂಎಸ್ ಧೋನಿ ಇರಲೇ ಬೇಕು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತಂಡ ಕಠಿಣ, ಒತ್ತಡದ ಸನ್ನಿವೇಶಗಳನ್ನು ಎದುರಿಸಲು ಅನುಭವಿ ಆಟಗಾರ ಧೋನಿ ಅವರ ಅಗತ್ಯವಿದೆ. ನನ್ನ ಪ್ರಕಾರ ಧೋನಿ ಅದ್ಭುತ ಆಟಗಾರ. ಧೋನಿ ತಂಡದಲ್ಲಿ ಇರುವುದು ಅಷ್ಟೇ ಉತ್ತಮ ಎಂದು ವಾರ್ನ್ ಹೇಳಿದ್ದಾರೆ.

    ಇದೇ ವೇಳೆ ಧೋನಿ ಅವರನ್ನು ಟೀಕೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶೇನ್ ವಾರ್ನ್, ಧೋನಿ ಅವರನ್ನು ಟೀಕೆ ಮಾಡುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುವುದೇ ತಿಳಿದಿರುವುದಿಲ್ಲ. ವಿಶ್ವಕಪ್ ಎದುರಿಸಲಿರುವ ಟೀಂ ಇಂಡಿಯಾ ತಂಡಕ್ಕೆ ಧೋನಿ ಅವರ ಅನುಭವ, ನಾಯಕತ್ವದ ತಂತ್ರಗಾರಿಕೆ ಅಗತ್ಯವಿದೆ ಎಂದರು.

    ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ನಿರೀಕ್ಷೆಯ ತಂಡಗಳಾಗಿವೆ. ಏಕೆಂದರೆ ಇತ್ತಂಡಗಳು ಕಳೆದ ಒಂದು ವರ್ಷದಲ್ಲಿ ಅಂತಹ ಉತ್ತಮ ಪ್ರದರ್ಶನಗಳನ್ನು ನೀಡಿದೆ. ಆದರೆ ಆಸೀಸ್ ತಂಡವೂ ಕೂಡ ವಿಶ್ವಕಪ್ ವಿನ್ನಿಂಗ್ ರೆಸ್‍ನಲ್ಲಿದೆ ಎಂದು ತಿಳಿಸಿದರು.

    ಬಹು ನಿರೀಕ್ಷೆಯ ವಿಶ್ವಕಪ್ ಟೂರ್ನಿ ಮೇ 30 ರಿಂದ ಜುಲೈ 14ರ ವರೆಗೂ ನಡೆಯಲಿದೆ. ಟೀಂ ಇಂಡಿಯಾ ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಮುಂಬೈ: ಚೊಚ್ಚಲ ಐಪಿಎಲ್ ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾಗ ನಾನು ಮೊಹಮ್ಮದ್ ಕೈಫ್ ಅವರ ಅಹಂಕಾರವನ್ನು ಇಳಿಸಿದ್ದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಶೇನ್ ವಾರ್ನ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ `ನೋ ಸ್ಪಿನ್’ ಹೆಸರಿನಲ್ಲಿ ಆತ್ಮ ಚರಿತ್ರೆ ಬರೆದಿದ್ದು ಇದರಲ್ಲಿ ಐಪಿಎಲ್ ಪಂದ್ಯಗಳ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ವಾರ್ನ್ ಪುಸ್ತಕದಲ್ಲಿ ಏನಿದೆ?
    ನನ್ನ ತಂಡದಲ್ಲಿ ಕೈಫ್ ಆಡುತ್ತಿದ್ದರು. ಒಂದು ದಿನ ರಾಜಸ್ಥಾನ ತಂಡ ಹೋಟೆಲ್‍ಗೆ ಹೋದ ಸಂದರ್ಭದಲ್ಲಿ ಆಟಗಾರರೆಲ್ಲರೂ ತಮ್ಮ ರೂಮ್ ಕೀ ತೆಗೆದುಕೊಂಡು ಅವರ ಕೊಠಡಿಗೆ ತೆರಳಿದರು. ಈ ಸಮಯದಲ್ಲಿ ಕೈಫ್ ರಿಸೆಪ್ಷನಿಸ್ಟ್ ಬಳಿ ತೆರಳಿ “ನಾನು ಕೈಫ್” ಎಂದು ಹೇಳಿದರು.

    ಈ ಸಮಯದಲ್ಲಿ ಹೋಟೆಲ್ ಸಿಬ್ಬಂದಿ,”ನಮ್ಮಿಂದ ಏನು ಸಹಾಯ ಬೇಕು” ಎಂದು ಕೇಳಿದ್ದರು. ಇದಕ್ಕೆ ಕೈಫ್,”ನಾನು ಕೈಫ್” ಎಂದು ಮತ್ತೊಮ್ಮೆ ಹೇಳಿದರು. ಕೈಫ್ ಸಿಬ್ಬಂದಿ ಜೊತೆ ಮಾತನಾಡುವುದನ್ನು ಕಂಡು ನಾನು ಅಲ್ಲಿಗೆ ತೆರಳಿ,”ಏನಾದ್ರೂ ಸಮಸ್ಯೆ ಇದ್ಯಾ?” ಎಂದು ಪ್ರಶ್ನಿಸಿದೆ. ಈ ಸಮಯದಲ್ಲೂ ಕೈಫ್,”ನಾನು ಕೈಫ್” ಎಂದು ಉತ್ತರಿಸಿದರು.

    “ನಾನು ಟೀಂ ಇಂಡಿಯಾದ ಹಿರಿಯ ಆಟಗಾರ, ಹೀಗಾಗಿ ನನಗೆ ದೊಡ್ಡ ಕೊಠಡಿ ನೀಡಬೇಕು” ಎನ್ನುವ ಅರ್ಥದಲ್ಲಿ ಕೈಫ್ ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು. ಇದಕ್ಕೆ ನಾನು,”ನನ್ನನ್ನು ಬಿಟ್ಟು ಉಳಿದ ಎಲ್ಲರಿಗೂ ಸಣ್ಣ ರೂಮ್ ನೀಡಲಾಗಿದೆ. ನನ್ನ ಕೊಠಡಿಯಲ್ಲಿ ಆಗಾಗ ಸಭೆ ನಡೆಯಲಿರುವ ಕಾರಣ ದೊಡ್ಡ ರೂಮ್ ನೀಡಲಾಗಿದೆ” ಎಂದಾಗ ಕೈಫ್ ಅಲ್ಲಿಂದ ತೆರಳಿದರು ಎಂದು ವಾರ್ನ್ ಬರೆದುಕೊಂಡಿದ್ದಾರೆ.

    ತಮ್ಮ ಪುಸ್ತಕದಲ್ಲಿ ವಾರ್ನ್,”ಕೆಲ ಭಾರತೀಯ ಹಿರಿಯ ಆಟಗಾರರು ಕಿರಿಯ ಆಟಗಾರಲ್ಲಿ ಬ್ಯಾಗ್ ತರಲು ಹೇಳುತ್ತಾರೆ. ನನಗೆ ಇದು ಸರಿ ಕಾಣುವುದಿಲ್ಲ. ಮೈದಾನದಲ್ಲಿ ಎಲ್ಲರೂ ಸಮಾನರು. ಹಿರಿಯರು, ಕಿರಿಯರು ಎಂಬುದಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು” ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv