ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.
23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.
ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್ಗೆ ಥಾಯ್ಲೆಂಡ್ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.
ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
ಬ್ಯಾಂಕಾಕ್: ಆಸ್ಟ್ರೇಲಿಯಾದ ನಿವೃತ್ತ ಲೆಗ್‍ಸ್ಪಿನ್ನರ್ ಶೇನ್ ವಾರ್ನ್ ಥಾಯ್ಲೆಂಡ್‍ನ ಕೋ ಸೆಮೈನಲ್ಲಿನ ಬಂಗಲೆಯಲ್ಲಿ ಶುಕ್ರವಾರ ನಿಶ್ತೇಜರಾಗಿ ಪತ್ತೆಯಾಗಿದ್ದರು. ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂತು. ಆದರೆ ಇವರ ಸಾವಿನ ನಂತರ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತಾ ಥಾಯ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.
ವಾರ್ನ್ ಮೃತದೇಹದ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಸ್ವಾಭಾವಿಕ ಕಾರಣಗಳಿಂದ ಉಂಟಾಗಿರುವ ಸಾವು ಎಂದು ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರಿಗೆ ವರದಿ ಸಲ್ಲಿಸಿದ್ದಾರೆ. ಥಾಯ್ಲೆಂಡ್‍ನ ವಿಲ್ಲಾಗೆ ರಜಾದಿನಗಳನ್ನು ಕಳೆಯಲು ಗೆಳೆಯರೊಂದಿಗೆ ತೆರಳಿದ್ದ 52 ವರ್ಷದ ವಾರ್ನ್ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಕೂಡ ಒಪ್ಪಿಕೊಂಡಿದೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್ಸಿಬಿಗೆ ಪಂಜಾಬ್ ಮೊದಲ ಎದುರಾಳಿ
ವಾರ್ನ್‍ಗೆ ಆಸ್ತಮಾವಿತ್ತು, ಹೀಗಾಗಿ ಅವರು ಇತ್ತೀಚೆಗೆ ಎದೆನೋವಿಗಾಗಿ ವೈದ್ಯರನ್ನೂ ಸಂಪರ್ಕಿಸಿದ್ದರು ಎಂದು ಥಾಯ್ಲೆಂಡ್ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರ ಸರ್ಕಾರಿ ಗೌರವಗಳೋಂದಿಗೆ ನಡೆಯಲಿದೆ. ಸರಿಸುಮಾರು 1 ಲಕ್ಷ ಜನರು ಸೇರುವ ನೀರಿಕ್ಷೆ ಇದೆ. ಅಂತ್ಯಸಂಸ್ಕಾರಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.
ಬ್ಯಾಂಕಾಕ್: ಥಾಯ್ಲೆಂಡ್‍ನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ತಂಗಿದ್ದ ಥಾಯ್ಲೆಂಡ್‍ನ ವಿಲ್ಲಾದ ಕೋಣೆಯಲ್ಲಿ ಮತ್ತು ಟವೆಲ್‍ನಲ್ಲಿ ರಕ್ತದ ಕಣ ಪತ್ತೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್‍ನ ವಿಲ್ಲಾದಲ್ಲಿದ್ದ ವಾರ್ನ್‍ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್ಸಿಬಿಗೆ ಪಂಜಾಬ್ ಮೊದಲ ಎದುರಾಳಿ
ಈ ಬಗ್ಗೆ ಸ್ಥಳೀಯ ಮಾಧ್ಯವೊಂದರ ವರದಿ ಪ್ರಕಾರ, ವಾರ್ನ್ ಇದ್ದ ಕೋಣೆಯಲ್ಲಿ ರಕ್ತದ ಕಣಗಳು ಪತ್ತೆಯಾಗಿದ್ದು, ಸಿಪಿಆರ್ ಪರೀಕ್ಷೆ ನಡೆಸುವ ಸಂದರ್ಭ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಮೊಟ್ಟ ಮೊದಲ ಐಪಿಎಲ್‍ನಲ್ಲಿ ರಾಜಸ್ಥಾನ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು.
ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ ದಾಖಲೆಯ ಶತಕ ಸಿಡಿಸಿ ಮೆರೆದಿದ್ದಾರೆ.
ಎರಡನೇ ದಿನದಾಟದ ಆರಂಭದಿಂದಲು ಬೌಂಡರಿ ಸಿಕ್ಸರ್‌ಗಳ ಮೂಲಕ ಅದ್ಭುತ ಇನ್ನಿಂಗ್ಸ್ ಕಟ್ಟಿದ ಜಡೇಜಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತೆ ರನ್ ವೇಗ ಹೆಚ್ಚಿಸಿಕೊಂಡ ಜಡ್ಡು ಅಜೇಯ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಹೊಡೆಯುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ಜಡ್ಡು 7ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮ್ಯಾನ್ ಒಬ್ಬ ಸಿಡಿಸಿದ ಅತೀ ಹೆಚ್ಚು ರನ್‍ಗಳ ಸರದಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?
ಈ ಮೊದಲು 7ನೇ ಕ್ರಮಾಂಕದಲ್ಲಿ ಕಪಿಲ್ ದೇವ್ 163 ರನ್ ಸಿಡಿಸಿದ ದಾಖಲೆ ಇತ್ತು. ಈ ದಾಖಲೆಯನ್ನು ಜಡೇಜಾ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 7ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, ಆ ಬಳಿಕ ಕಪಿಲ್ ದೇವ್, ನಂತರ ಕ್ರಮವಾಗಿ 159 ರನ್ ಸಿಡಿಸಿರುವ ರಿಷಬ್ ಪಂತ್ ಮತ್ತು 144 ರನ್ ಸಿಡಿಸಿರುವ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್
ಜಡೇಜಾ ತನ್ನ ಟೆಸ್ಟ್ ಕ್ರಿಕೆಟ್‍ನ ಎರಡನೇ ಶತಕ ಸಿಡಿಸಿದ ಬಳಿಕ ನಿನ್ನೆ ಹೃದಾಯಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಶೇನ್ ವಾರ್ನ್ ಅವರಿಗೆ ಅರ್ಪಿಸಿದ್ದಾರೆ. ವಾರ್ನ್ ಈ ಹಿಂದೆ ರವೀಂದ್ರ ಜಡೇಜಾ ಮುಂದೊಂದು ದಿನ ಕ್ರಿಕೆಟ್‍ನ ರಾಕ್‍ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ವಾರ್ನ್ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.
-ರವೀಶ್. ಹೆಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ
ಆ ಇಬ್ಬರು ಕ್ರಿಕೆಟ್ ಲೆಜೆಂಡ್‌ಗಳು ಮೈದಾನದಲ್ಲಿದ್ದರೆ ಸಾಕು ರೋಚಕ.. ರೋಮಾಂಚನ. ಬೌಂಡರಿ ಗೆರೆ ದಾಟಿಸಲೇಬೇಕು ಅಂತಾ ಒಬ್ಬಾತ ಕ್ರೀಸ್‌ನಲ್ಲಿದ್ದರೆ, ಕ್ರೀಸ್‌ನಿಂದಲೇ ಬಹುಬೇಗ ಕಳುಹಿಸಬೇಕು ಅಂತಾ ಬಾಲ್ ಎಸೆಯುತ್ತಿದ್ದ ಇನ್ನೊಬ್ಬ. ಆ ಇಬ್ಬರು ಮೈದಾನದ ಎದುರಾಳಿಗಳು ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರು. ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಂಡ್ ಮ್ಯಾಜಿಕಲ್ ಬೌಲರ್ ಶೇನ್ ವಾರ್ನ್. ಮೈದಾನದಲ್ಲಿ ಎದುರಾಳಿಗಳಾದ್ರೆ ಹೊರಗೆ ಸ್ನೇಹ ಜೀವಿಗಳು. ಇಬ್ಬರ ನಡುವಿನ ಅಸಲಿ ಆಟ ಹೇಗಿತ್ತು ಅನ್ನೋದರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಅದು 1992, ಜನವರಿ 2 ರಿಂದ 6. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ- ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿಯ ಮೂರನೇ ಪಂದ್ಯ. ಮ್ಯಾಜಿಕ್ ಸ್ಪಿನ್ನರ್, ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆಯ ಆರಂಭದ ದಿನಗಳು ಇವು. ಭಾರತದಲ್ಲಿ ಮಾಸ್ಟರ್ ಬ್ಲಾಸ್ಟರ್ ಎಂಬ ಧ್ರುವತಾರೆ ಮಿನುಗುವ ಆರಂಭದ ಕಾಲ ಅದು. ಮೊದಲ ಟೆಸ್ಟ್ ಆಡಲು ಮೈದಾನಕ್ಕೆ ಇಳಿದ ಯುವಕ ಶೇನ್ ವಾರ್ನ್, ಸಚಿನ್ ಬಗ್ಗೆ ಮೊದಲ ಹೊಡೆತ ತಿಂದದ್ದು ಸಿಡ್ನಿ ಮೈದಾನದಲ್ಲೇ ಎನ್ನುವುದು ಇತಿಹಾಸ.
5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಗಿ ಶೇನ್ ವಾರ್ನ್ ಪಾದಾರ್ಪಣೆ ಮಾಡ್ತಾರೆ. ಆ ಪಂದ್ಯದಲ್ಲಿ ಆಟದ ಬಗ್ಗೆ ಗಮನ ಕೊಡಬೇಕಾದ ಯುವಕ ವಾರ್ನ್, ಸಚಿನ್ ನೋಡಿ 10 ವರ್ಷದ ಬಾಲಕ ಅಂತಾ ಛೇಡಿಸ್ತಾರೆ. ಆದರೆ ಪರಿಣಾಮ ಗೊತ್ತಾಗಿದ್ದು ಮೊದಲ ಇನ್ನಿಂಗ್ಸ್ ಮುಗಿದ ಮೇಲೆ. ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ಸ್ಕೋರ್ 145. ಶೇನ್ ವಾರ್ನ್ 45 ಓವರ್ ಬೌಲಿಂಗ್ ಮಾಡಿ 150 ರನ್ ಕೊಟ್ಟು ಪಡೆದಿದ್ದು ಬರೀ 1 ವಿಕೆಟ್. ರವಿಶಾಸ್ತ್ರಿ ಡಬ್ಬಲ್ ಸೆಂಚುರಿ ಮಾಡಿ ಬಿಟ್ಟು ಕೊಟ್ಟ ವಿಕೆಟ್ ಅದು.
ಅವತ್ತು ಸಚಿನ್ ಕೊಟ್ಟ ಹೊಡೆತಕ್ಕೆ ಶೇನ್ ವಾರ್ನ್ ಪತರಗುಟ್ಟಿ ಹೋಗ್ತಾರೆ. ಅಲ್ಲಿಂದ ಶುರುವಾಗಿದ್ದು ಸಚಿನ್, ವಾರ್ನ್ ನಡುವಿನ ಸ್ನೇಹ, ಸಾಂಪ್ರಾದಾಯಿಕ ಎದುರಾಳಿ ಸ್ಪರ್ಧೆಯ ಪೈಪೋಟಿ. ನಾಲ್ಕನೇ ಟೆಸ್ಟ್‌ನಲ್ಲಿ ಶೇನ್ ವಾರ್ನ್ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ಕೊಡ್ತಾರೆ. ಆಗಲೇ ಆಸ್ಟ್ರೇಲಿಯಾ ಶೇನ್ ವಾರ್ನ್ ಅವರನ್ನು 5ನೇ ಟೆಸ್ಟ್‌ಗೆ ಕಣಕ್ಕಿಳಿಸದೇ ಕೂರಿಸ್ತಾರೆ. ತೆಂಡೂಲ್ಕರ್ 10 ವರ್ಷದ ಬಾಲಕ ಎಂದಿದ್ದನ್ನ ವಾರ್ನ್ ಅವರೇ ಪಂದ್ಯವೊಂದರ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ತಾರೆ.
ಇನ್ನು ಸಚಿನ್, ಶೇನ್ ವಾರ್ನ್ ಮೈದಾನದಲ್ಲಿ ಎದುರಾಳಿಗಳು. ಮೈದಾನದಲ್ಲಿ ಸಚಿನ್ ಕಟ್ಟಿ ಹಾಕಲು ಶೇನ್ ವಾರ್ನ್ ಮಾಡುವ ಮ್ಯಾಜಿಕ್‌ಗಳಿಗೇನೂ ಕಮ್ಮಿ ಇರಲಿಲ್ಲ. ಶೇನ್ ವಾರ್ನ್ ಮತ್ತು ಸಚಿನ್ ನಡುವಿನ ಆ ಟಾಪ್ 5 ಮ್ಯಾಚ್‌ಗಳಂತೂ ರೋಚಕವಾಗಿರುತ್ತಿದ್ದವು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, ಮಾರ್ಚ್ 1998 1st ಟೆಸ್ಟ್ ಮ್ಯಾಚ್, ಚೆನ್ನೈ . ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ 4 ರನ್ ಇದ್ದಾಗಲೇ ಶೇನ್ ವಾರ್ನ್ ವಿಕೆಟ್ ಕಬಳಿಸ್ತಾರೆ. ಅದೇ ಮುಯ್ಯಿಗೆ ಮುಯ್ಯಿ ಎಂಬಂತೆ ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್ not out 155 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಳ್ತಾರೆ. ಈ ಪಂದ್ಯ ಸಚಿನ್ ವರ್ಸಸ್ ವಾರ್ನ್ ಎಂಬಂತಾಗಿತ್ತು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, 1998, ಅದು ಶಾರ್ಜಾದಲ್ಲಿ ನಡೆದ ಕೊಕೋಕೋಲಾ ಕಪ್. ಫೈನಲ್ ಪಂದ್ಯದಲ್ಲಿ ಶೇನ್ ವಾರ್ನ್‌ಗೆ ಜ್ವರ ಬಂದು ಕನಸಲ್ಲಿ ಬರುವ ಥರಾ ಸಚಿನ್ ರನ್ ಹೊಡೆದರು. ಆ ಪಂದ್ಯದಲ್ಲಿ ಸಚಿನ್ 131 ಬಾಲ್‌ಗೆ 134 ರನ್ ಸಿಡಿಸಿದರೆ, ಶೇನ್ ವಾರ್ನ್ 10 ಓವರ್‌ಗಳನ್ನು ಬೌಲ್ ಮಾಡಿ ವಿಕೆಟ್ ಪಡೆಯದೇ 61 ರನ್ ಕೊಟ್ಟಿದ್ದರು. ಆ ಕಾಲಕ್ಕೆ 61 ತುಂಬಾ ಕಾಸ್ಟ್ಲೀ ಆಗಿತ್ತು. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್
ಇನ್ನುಳಿದಂತೆ ಡಿಸೆಂಬರ್ 1999ರಲ್ಲಿ ನಡೆದ ಆಡಿಲೇಡ್ ಟೆಸ್ಟ್ ಮ್ಯಾಚ್‌ನಲ್ಲಿ 61ರನ್ ಗಳಿಸಿ ಸಚಿನ್ ವಾರ್ನ್‌ಗೆ ಔಟ್ ಆದರೆ, ಡಿಸೆಂಬರ್ 1999 ಮೆಲ್ಬೋರ್ನ್ ಟೆಸ್ಟ್ ಮ್ಯಾಚ್ ನಲ್ಲಿ 116 ರನ್ ಬಾರಿಸಿದ ಸಚಿನ್, ಶೇನ್ ವಾರ್ನ್‌ಗೆ ಬಿಸಿ ಮುಟ್ಟಿಸಿದ್ದರು. ಇಬ್ಬರ ನಡುವಿನ ಆಟ ಮೇಲಾಟ ರೋಚಕವಾಗಿತ್ತು.
ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಪಂದ್ಯ, ಮಾರ್ಚ್ 2001ರಲ್ಲಿ ಇಂದೋರ್‌ನಲ್ಲಿ ನಡೆಯಿತು. ಈ ಮ್ಯಾಚ್‌ನಲ್ಲಂತೂ ಸಚಿನ್ ಏಟಿಗೆ ವಾರ್ನ್ ಮುಟ್ಟಿ ನೋಡಿಕೊಳ್ಳಬೇಕು ಹಂಗಿತ್ತು. ಸಚಿನ್ 125 ಬಾಲ್‌ಗೆ 139 ರನ್ ಪೇರಿಸಿದರೆ, ಶೇನ್ ವಾರ್ನ್ 10 ಓವರ್ ಮಾಡಿ ಯಾವುದೇ ವಿಕೆಟ್ ಪಡೆಯದೇ 64 ರನ್ ಕೊಟ್ಟಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ
ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ ಈ ಇಬ್ಬರು ದಂತ ಕಥೆಗಳು ಮೈದಾನಕ್ಕಿಳಿದರೆ ಸಿಗುತ್ತಿದ್ದ ರೋಮಾಂಚನಕಾರಿ ಆಟ ಎಂದಿಗೂ ಸಿಗಲಾರದು. ಮೈದಾನದಲ್ಲಿ ಎಷ್ಟೇ ಡೆಡ್ಲಿ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸಂಬಂಧ ತುಂಬಾ ಚೆನ್ನಾಗಿತ್ತು. ನನ್ನ ಕನಸಿನಲ್ಲಿ ಸಚಿನ್ ಬರ್ತಾರೆ ಎಂಬುದನ್ನ ಸ್ವತಃ ಶೇನ್ ವಾರ್ನ್ ಹೇಳಿಕೊಂಡಿದ್ದನ್ನ ಇಡೀ ವಿಶ್ವ ಕ್ರಿಕೆಟ್ ಅಚ್ಚರಿಯಿಂದ ನೋಡಿದ್ದನ್ನೂ ಯಾರೂ ಮರೆಯುಂತಿಲ್ಲ. ಮ್ಯಾಜಿಕಲ್ ಬೌಲರ್ ವೀರ, ವಿಶ್ವ ಕ್ರಿಕೆಟ್‌ನ ವಿಕೆಟ್‌ಗಳ ಸರದಾರ.. ಲೆಗ್ ಸ್ಪಿನ್ ಮೋಡಿಗಾರ.. ಈಗ ಎಲ್ಲರನ್ನು ಆಗಲಿದ್ದಾರೆ. ಅವರ ಆತ್ಮಕ್ಮೆ ಶಾಂತಿ ಸಿಗಲಿ.
ಸಿಡ್ನಿ: ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ಆ ಬಳಿಕ ಇದೀಗ ವಾರ್ನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಹೌದು ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಾಡ್ ಮಾರ್ಷ್ ನಿಧನಕ್ಕೆ ಟ್ವೀಟ್ ಮಾಡಿ ವಾರ್ನ್ ಸಂತಾಪ ಸೂಚಿಸಿದ್ದರು. ಆ ಬಳಿಕ ಇದೀಗ 12 ಗಂಟೆಗಳ ಅವಧಿಯಲ್ಲಿ 52 ವರ್ಷದ ವಾರ್ನ್ ಕೂಡ ಇಹಲೋಕ ತ್ಯಜಿಸಿದ್ದು ಕ್ರಿಕೆಟ್ ಲೋಕವೇ ಶಾಕ್ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ
Sad to hear the news that Rod Marsh has passed. He was a legend of our great game & an inspiration to so many young boys & girls. Rod cared deeply about cricket & gave so much-especially to Australia & England players. Sending lots & lots of love to Ros & the family. RIP mate❤️
ಟ್ವೀಟ್‍ನಲ್ಲಿ ಏನಿದೆ?
ರಾಡ್ ಮಾರ್ಷ್ ನಿಧನದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ರಾಡ್ ಮಾರ್ಷ್ ಲೆಜೆಂಡ್ ಆಟಗಾರ, ಹಲವು ಯುವಕ, ಯುವತಿಯರಿಗೆ ಸ್ಫೂರ್ತಿಯಾಗಿದ್ದರು. ಅವರಲ್ಲಿ ಕ್ರಿಕೆಟ್ ಬಗ್ಗೆ ತುಂಬಾ ಜ್ಞಾನವಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರಿಗೆ ಸಾಕಷ್ಟು ನೆರವಾಗಿದ್ದರು. ಆದರೆ ಇದೀಗ ನಮ್ಮೊಂದಿಗಿಲ್ಲ. ಅವರ ಕುಟುಂಬಕ್ಕೆ ದೇವರು ಅಗಲಿಕೆಯ ನೋವನ್ನು ತಡೆಯುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ
Cannot believe it. One of the greatest spinners, the man who made spin cool, superstar Shane Warne is no more. Life is very fragile, but this is very difficult to fathom. My heartfelt condolences to his family, friends and fans all around the world. pic.twitter.com/f7FUzZBaYX
ಶೇನ್ ವಾರ್ನ್ ನಿಧನದ ಸುದ್ದಿ ಕೇಳಿ ಮಾಜಿ ಆಟಗಾರರು ಸೇರಿದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಭಾರತ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
52 ವರ್ಷದ ಶೇನ್ ವಾರ್ನ್ಗೆ ಥಾಯ್ಲೆಂಡ್ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲ ನೀಡದೆ, ವಾರ್ನ್ ಕೊನೆಯುಸಿರೆಳೆದಿದ್ದಾರೆ.
ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹಾಗೂ ಲೆಜೆಂಡರಿ ವಿಕೆಟ್ ಕೀಪರ್ ಆದಂತಹ ರಾಡ್ ಮಾರ್ಷ್ (74) ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತವಾಗಿದ್ದು, ಅಡಿಲೇಡ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
Sad to hear the news that Rod Marsh has passed. He was a legend of our great game & an inspiration to so many young boys & girls. Rod cared deeply about cricket & gave so much-especially to Australia & England players. Sending lots & lots of love to Ros & the family. RIP mate❤️
ಆಸ್ಟ್ರೇಲಿಯಾದ ಮಾಜಿ ಬೌಲರ್ ಡೇನಿಸ್ ಲಿಲ್ಲೀ ಬೌಲಿಂಗ್‍ನಲ್ಲಿ 95 ರನ್‍ಗಳನ್ನು ಒಳಗೊಂಡಂತೆ ತಮ್ಮ ವಿಕೆಟ್ ಕೀಪರ್ ಶೈಲಿಯಿಂದ 355 ಟೆಸ್ಟ್ ಕ್ಯಾಚ್‍ಗಳನ್ನು ಹಿಡಿದ ದಾಖಲೆಯನ್ನು ಮಾರ್ಷ್ ಹೊಂದಿದ್ದರು. ಅವರು 1984 ರ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗುವ ಮೊದಲು ತಂಡಕ್ಕಾಗಿ 92 ಏಕದಿನ ಪಂದ್ಯಗಳನ್ನು ಆಡಿದ್ದರು.
ಎಡಗೈ ಬ್ಯಾಟಮ್ಯಾನ್ ಆಗಿರುವ ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಗಿದ್ದರು. ನಂತರ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಳನ್ನು ಮುನ್ನಡೆಸಿದ್ದರು. ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‍ನ ವಿಶ್ವ ಕೋಚಿಂಗ್ ಅಕಾಡೆಮಿಯ ಉದ್ಘಾಟನಾ ಮುಖ್ಯಸ್ಥರಾಗಿದ್ದರು.
Extremely sad to hear about the passing away of Rod Marsh.
My heartfelt condolences to his family and friends. pic.twitter.com/HWZW73b0z4
ಈ ಕುರಿತು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್‍ರವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದು, ರಾಡ್ ಮಾರ್ಷ್ ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಂತಕಥೆಯಾಗಿದ್ದರು. ಅವರು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ರಾಡ್ ಕ್ರಿಕೆಟ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರಿಗೆ ತುಂಬಾ ಕೊಡುಗೆ ನೀಡಿದ್ದಾರೆ. ರಾಡ್ ಅವರ ಅಗಲಿಕ್ಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಹಾಲ್ ಆಫ್ ಫೇಮ್‍ನ ಅಧ್ಯಕ್ಷ ಜಾನ್ ಬಟ್ರಾರ್ಂಡ್ ಅವರು ಮಾರ್ಷ್ ಅವರ ಬಗ್ಗೆ ಮಾತನಾಡಿ, ಮಾರ್ಷ್ ಯುದ್ಧತಂತ್ರದವರಾಗಿದ್ದರು, ಭಯವಿಲ್ಲದೆ ಮಾತನಾಡುತ್ತಿದ್ದರು. ಎಷ್ಟೋ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳಿದರು.
ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಸ್ಪಿನ್ ಪಾಠವನ್ನು ಹೇಳಿಕೊಟ್ಟಿದ್ದಾನೆ.
ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಸ್ಪಿನ್ನರ್ ಆಡಿಸದ ವಿಚಾರವನ್ನು ಶೇನ್ ವಾನ್ ಟ್ವಿಟ್ಟರ್ ನಲ್ಲಿ ಪ್ರಸ್ತಾಪ ಮಾಡಿ ಅಸಮಾಧಾನ ಹೊರ ಹಾಕಿದ್ದರು.
Very disappointed in Nz not playing a spinner in the #ICCWorldTestChampionship as this wicket is going to spin big with huge foot marks developing already. Remember if it seems it will spin. India make anything more than 275/300 ! The match is over unless weather comes in !
“ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡ ಒಬ್ಬ ಪರಿಣತ ಸ್ಪಿನ್ನರನ್ನು ಆಡಿಸದೇ ಇರುವುದು ನಿರಾಸೆ ತಂದಿದೆ. ಈ ಪಿಚ್‍ನಲ್ಲಿ ಸ್ಪಿನ್ನರ್ ಗಳು ದೊಡ್ಡ ತಿರುವು ಪಡೆಯಬಲ್ಲರು. ಈಗಾಗಲೇ ಪಿಚ್‍ನಲ್ಲಿ ಬೌಲರ್ ಗಳ ಪಾತ್ರ ದೊಡ್ಡದಾಗಿ ಕಾಣಿಸುತ್ತದೆ. ಒಂದು ವೇಳೆ ಈ ಪಿಚ್‍ನಲ್ಲಿ ಸ್ಪಿನ್ ಲಭ್ಯವಾದರೆ, ಭಾರತ ತಂಡ 270-300 ರನ್ ಗಳಿಸಿದರೆ ಈ ಪಂದ್ಯ ಕಿವೀಸ್ ಪಾಲಿಗೆ ಮುಗಿದಂತೆ. ಕೇವಲ ಹವಾಮಾನವಷ್ಟೇ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲದು ಎಂದು ವಾರ್ನ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್‍ಗೆ ಅಭಿಮಾನಿಯೊಬ್ಬ, “ಶೇನ್ ನಿಮಗೆ ನಿಜಕ್ಕೂ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆಯೇ? ಪಿಚ್ ಒಣಗಿದರೆ ಮಾತ್ರ ಸ್ಪಿನ್ ಆಗಲು ಸಾಧ್ಯ. ಎಲ್ಲಾ ದಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸ್ಪಿನ್ ಆಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾನೆ.
ಅಭಿಮಾನಿಯ ಟ್ವೀಟ್‍ಗೆ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿ,ಶೇನ್ ವಾರ್ನ್ ಅವರ ಕಾಲೆಳೆದಿದ್ದಾರೆ. “ಶೇನ್ ವಾರ್ನ್ ನಿಮ್ಮ ಈ ಟ್ವೀಟ್ ಅನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕು ಮತ್ತು ಸ್ಪಿನ್ ಹೇಗೆ ಆಗುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ” ಎಂದು ಹೇಳಿ ಗೂಗ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ
ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರೆ, ನ್ಯೂಜಿಲೆಂಡ್ ತಂಡ ಯಾವುದೇ ಸ್ಪಿನ್ನರ್‍ಗಳನ್ನು ತೆಗೆದುಕೊಳ್ಳದೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದೆ.
ಕಾನ್ಬೆರಾ: ಆಸ್ಪ್ರೇಲಿಯಾದ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ `ಬ್ಯಾಗಿ ಗ್ರೀನ್’ ಖರೀದಿಸಲು ಅಭಿಮಾನಿಗಳು ಮುಗಿಬಿದ್ದಿದ್ದು, ಈಗಾಗಲೇ ಈ ಕ್ಯಾಪ್ ಬೆಲೆ 5 ಲಕ್ಷ ಆಸ್ಪ್ರೇಲಿಯನ್ ಡಾಲರ್(ಅಂದಾಜು 2.45 ಕೋಟಿ ರೂ.) ಗಡಿದಾಟಿದೆ.
ಬ್ಯಾಗಿ ಗ್ರೀನ್ ಕ್ಯಾಪ್ ಟೆಸ್ಟ್ ಗೆ ಪಾದಾರ್ಪಣೆ ಮಾಡುವಾಗ ನೀಡುವ ಕ್ಯಾಪ್ ಆಗಿದ್ದು, ಇದನ್ನು ವಾರ್ನ್ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ಸಂಗ್ರಹಿಸಲು ಹರಾಜಿಗಿಟ್ಟಿದ್ದಾರೆ. ಕಾಡ್ಗಿಚ್ಚಿನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಹಣ ಸಂಗ್ರಹಿಸುವ ಪ್ರಯತ್ನದಲ್ಲಿರುವ ವಾರ್ನ್ ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದಾರೆ. ಜನವರಿ 6ರಂದು ಆರಂಭಗೊಂಡ ಈ ಹರಾಜು ಪ್ರಕ್ರಿಯೆ ಜನವರಿ 10ರ ವರೆಗೂ ನಡೆಯಲಿದೆ. ಇದನ್ನೂ ಓದಿ: ಬೆತ್ತಲೆ ಫೋಟೋ ಮಾರಾಟ ಮಾಡಿ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 5 ಕೋಟಿ ಸಂಗ್ರಹಿಸಿದ ಯುವತಿ
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಧರಿಸಿದ ಬ್ಯಾಗಿ ಗ್ರೀನ್ ಕ್ಯಾಪ್‍ನ ಬೆಲೆ ಈಗಾಗಲೇ 5,00,000 ಆಸ್ಪ್ರೇಲಿಯನ್ ಡಾಲರ್(ಅಂದಾಜು 2.45 ಕೋಟಿ ರೂ.) ಗಡಿದಾಟಿದೆ. ವಾರ್ನ್ ಕ್ಯಾಪ್ ಖರೀದಿಸಲು ತಾ ಮುಂದು ನಾ ಮುಂದು ಎಂದು ಅಭಿಮಾನಿಗಳು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ 10ರೊಳಗೆ ಈ ಮೊತ್ತ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದ್ದು, ವಾರ್ನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಯಾರ ಪಾಲಾಗಲಿದೆ ಎನ್ನುವುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ
ತನ್ನ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿರುವ ಬಗ್ಗೆ ಸ್ವತಃ ವಾರ್ನ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಜೊತೆಗೆ ಭಾರೀ ಮೊತ್ತ ನೀಡಿ ಕ್ಯಾಪ್ ಖರೀದಿಸಲು ಆಸಕ್ತಿ ತೋರಿದವರಿಗೆ ಧನ್ಯವಾದ ತಿಳಿಸಿದ್ದಾರೆ. 2003ರಲ್ಲಿ ಕ್ರಿಕೆಟ್ ಆಟಗಾರ ಸರ್ ಡೊನಾಲ್ಡ್ ಬ್ರಾಡ್ಮನ್ ಅವರು ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದರು. ಆಗ 4,25,000 ಆಸ್ಪ್ರೇಲಿಯನ್ ಡಾಲರ್ ಗೆ ಕ್ಯಾಪ್ ಹರಾಜಾಗಿತ್ತು. ಈ ದಾಖಲೆಯನ್ನು ವಾರ್ನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜು ಹಿಂದಿಕ್ಕಿದೆ.
ವಾರ್ನ್ ಅವರು ಆಸ್ಟ್ರೇಲಿಯಾಕ್ಕಾಗಿ 104 ಟೆಸ್ಟ್ ಮ್ಯಾಚ್‍ಗಳನ್ನು ಆಡಿದ್ದಾರೆ. ಅದರಲ್ಲಿ 708 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ. ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ವಾರ್ನ್ 2ನೇ ಸ್ಥಾನದಲ್ಲಿದ್ದಾರೆ.
ಆಸ್ಪ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚು ವಿಶ್ವವನ್ನೇ ನಡುಗಿಸಿದ್ದು, ಆಸ್ಪ್ರೇಲಿಯಾದ ಟೆನ್ನಿಸ್ ಆಟಗಾರರು, ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಈವರೆಗೆ ಸುಮಾರು 25ಕ್ಕೂ ಹೆಚ್ಚು ಮಂದಿ ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಲಕ್ಷಗಟ್ಟಲೆ ಕಾಡು ಪ್ರಾಣಿಗಳು, ಪಕ್ಷಿಗಳು ಜೀವ ಕಳೆದುಕೊಂಡಿವೆ.
ಸಾಮಾಜಿಕ ಜಾಲತಾಣಗಳಲ್ಲಿ `ಪ್ರೇ ಫಾರ್ ಆಸ್ಟ್ರೇಲಿಯಾ’ ಎಂದು ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಫೋಟೋಗಳು, ಸುಟ್ಟು ಕರಕಲಾಗಿರುವ ಪ್ರಾಣಿಗಳ ಮೃತದೇಹಗಳ ಫೋಟೋಗಳು ಹಾಗೂ ಸಹಾಯಕ್ಕಾಗಿ ಜನರ ಕಾಲು ಹಿಡಿದ ಕಾಂಗರುಗಳು ಹಾಗೂ ಇತರೆ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತಿದೆ.
ಇತ್ತ ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.