Tag: shamiyana

  • ಗಾಳಿಗೆ ಉರುಳಿ ಬಿದ್ದ ಶಾಮಿಯಾನದ ಕಂಬಗಳು- ಮಹಿಳೆ ಸಾವು

    ಗಾಳಿಗೆ ಉರುಳಿ ಬಿದ್ದ ಶಾಮಿಯಾನದ ಕಂಬಗಳು- ಮಹಿಳೆ ಸಾವು

    ಕೊಪ್ಪಳ: ಶಾಮಿಯಾನದ ಕಂಬಗಳು ಭಾರೀ ಗಾಳಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಪ್ಪಳ (Koppala) ಜಿಲ್ಲೆಯಲ್ಲಿ ನಡೆದಿದೆ.

    ಅಂಜಿನಮ್ಮ(45) ಮೃತ ದುರ್ದೈವಿ ಮಹಿಳೆಯಾಗಿದ್ದು, ಇವರು ಗಂಗಾವತಿ ತಾಲೂಕಿನ ಪ್ರಗತಿ ನಗರ ನಿವಾಸಿ. ಇನ್ನು ಶಾಮಿಯಾನದ ಕೆಳಗೆ ಸಿಲುಕಿ 4 ಜನರಿಗೆ ಗಂಭೀರ ಗಾಯಗಳಾಗಿವೆ.

    ಕಾರಟಗಿ ತಾಲೂಕು ಮುಷ್ಟೂರು ಕ್ಯಾಂಪ್ ನಲ್ಲಿ ಇಂದು ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಡುಗೆ ಮಾಡುವ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿತ್ತು. ಈ ವೇಳೆ ಜೋರಾದ ಗಾಳಿ ಬೀಸಿದ್ದರಿಂದ ಕಂಬ ಉರುಳಿ ಬಿದ್ದು, ಶಾಮಿಯಾನ ಹಾರಿ ಬಿದ್ದಿದೆ. ಇದನ್ನೂ ಓದಿ; ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

    ಘಟನೆಯಲ್ಲಿ ಗಾಯಗೊಂಡವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ; ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!

  • ವೇದಿಕೆ ತೆಗ್ದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ: ಶಾಮಿಯಾನ ಮಾಲೀಕನಿಗೆ ಪ್ರತಾಪ್ ಸಿಂಹ ಅವಾಜ್

    ವೇದಿಕೆ ತೆಗ್ದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ: ಶಾಮಿಯಾನ ಮಾಲೀಕನಿಗೆ ಪ್ರತಾಪ್ ಸಿಂಹ ಅವಾಜ್

    – ಪೊಲೀಸರ ಮೇಲೂ ಆಕ್ರೋಶ

    ಮೈಸೂರು: ದಸರಾ ಹೊಸ್ತಿಲಲ್ಲಿ ಮೈಸೂರಿನಲ್ಲಿ ಚಾಮುಂಡಿ ದಸರಾ ವರ್ಸಸ್ ಮಹಿಷ ದಸರಾ ಎಂಬ ಸೈದ್ಧಾಂತಿಕ ಸಮರ ಶುರುವಾಗಿದೆ. ಈ ಕಾರಣಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರಿಗೆ ಸಂಸದ ಪ್ರತಾಪ್ ಸಿಂಹ ತರಾಟೆ ತೆಗೆದುಕೊಂಡಿದ್ದಾರೆ.

    ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ಬಗ್ಗೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ, ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದಾರೆ.

    ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯಿತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದರು. ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ.

  • ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಶಾಮಿಯಾನ ಹಾಕುವ ವಿಚಾರಕ್ಕೆ ಪಾಲಿಟಿಕ್ಸ್ ಶುರುವಾಗಿದ್ದು, ದಸರಾ ಶಾಮಿಯಾನದ ಜಗಳ ಬೀದಿಗೆ ಬಂದು ನಿಂತಿದೆ.

    ಜೆಡಿಎಸ್ ಮತ್ತು ಬಿಜೆಪಿ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಗಳ ನಡೆದಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಿದ್ದಾಜಿದ್ದಿ ನಡೆದಿದೆ. ಒಂದೆಡೆ ಇಷ್ಟು ವರ್ಷ ದಸರಾಗೆ ನಾವು ಶಾಮಿಯಾನ ಹಾಕುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದರೆ, ಆಗ ನೀವು ಹಾಕಿಸುತ್ತಾ ಇದ್ರಿ, ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಈ ಬಾರಿ ನಾವು ಹಾಕಿಸುತ್ತೇವೆ ಎಂದು ಬಿಜೆಪಿ ಮುಖಂಡರು ಶಾಮಿಯಾನ ಹಾಕಿಸಲು ಪಟ್ಟು ಹಿಡಿದು ಕುಳಿತಿದ್ದಾರೆ.

    ಗುರುವಾರ ಶ್ರೀರಂಗಪಟ್ಟಣದಲ್ಲಿ ಶಾಮಿಯಾನ ವಿಚಾರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜೋರಾಗಿ ಜಗಳ ನಡೆದಿದ್ದು, ಎರಡು ಪಕ್ಷದವರೂ ಶಾಮಿಯಾನ ಲಾರಿಗಳನ್ನು ನಿಲ್ಲಿಸಿಕೊಂಡು ಗಲಾಟೆ ಮಾಡಿದ್ದಾರೆ. ನಮ್ಮವರೇ ಶಾಮಿಯಾನ ಹಾಕುತ್ತಾರೆ ಎಂದು ಜೆಡಿಎಸ್‍ನವರು, ಇಲ್ಲ ಈ ಸಲ ನಮ್ಮವರು ಹಾಕುತ್ತಾರೆ ಎಂದು ಬಿಜೆಪಿ ದಸರಾ ಶಾಮಿಯಾನ ವಿಚಾರಕ್ಕೂ ರಾಜಕೀಯ ಮಾಡುತ್ತಿದ್ದಾರೆ.

  • ಕಾಲೇಜಿನಲ್ಲಿ ಜಾಗವಿಲ್ಲದೆ ಶಾಮಿಯಾನದಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಕಾಲೇಜಿನಲ್ಲಿ ಜಾಗವಿಲ್ಲದೆ ಶಾಮಿಯಾನದಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೂರಲು ಜಾಗವಿಲ್ಲದೇ ಶಾಮಿಯಾನ ಖುರ್ಚಿ ಬಾಡಿಗೆಗೆ ತಂದು ಪರೀಕ್ಷೆ ಬರೆಸಲಾಗಿದೆ.

    ಹರಪ್ಪನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ವಿದ್ಯಾರ್ಥಿಗಳು ಶಾಮಿಯಾನದಡಿ ಪರೀಕ್ಷೆ ಬರೆಯುತ್ತಿದ್ದಾರೆ. ಕಾಲೇಜಿನಲ್ಲಿ ಎಲ್ಲಾ ವಿಭಾಗ ಸೇರಿ 1,394 ವಿದ್ಯಾರ್ಥಿಗಳಿದ್ದಾರೆ. ಆದರೆ ಕಾಲೇಜಿನಲ್ಲಿ ಕೇವಲ ಏಳು ಕೊಠಡಿಗಳಿವೆ. ಇದರಿಂದಾಗಿ ಪರೀಕ್ಷೆ ಬರೆಯಲು ಜಾಗವಿಲ್ಲದಂತಾಗಿದೆ. ಇದನ್ನು ಮನಗಂಡ ಉಪನ್ಯಾಸಕರು ಪ್ರತಿನಿತ್ಯ ಊಟದ ಟೇಬಲ್, ಚೇರ್, ಶಾಮಿಯಾನಕ್ಕೆ 7,660 ರೂಪಾಯಿ ಬಾಡಿಗೆ ಕೊಟ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸುತ್ತಿದ್ದಾರೆ.

    ವಿದ್ಯಾರ್ಥಿಗಳು ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟೇ ಸಾರಿ ಕಾಲೇಜಿನ ಪರಿಸ್ಥಿತಿ ಕುರಿತು ತಿಳಿಸಿದರು ನಮಗೆ ಸ್ಪಂದಿಸುತ್ತಿಲ್ಲ ಎಂದು ಕಾಲೇಜಿನ ಉಪನ್ಯಾಸಕರು ಆರೋಪಿಸಿದ್ದಾರೆ.

    ಈ ಮಧ್ಯೆ ವಿದ್ಯಾರ್ಥಿಗಳು ಮಾತ್ರ ಶಾಮಿಯಾನದಡಿ ಕುಳಿತು ಮಳೆ ಬಂದ್ರೆ ಏನು ಗತಿ ಎನ್ನುವ ಭಯದಲ್ಲಿ ಪ್ರತಿನಿತ್ಯ ಪರೀಕ್ಷೆ ಬರೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv