Tag: Shambhavi River

  • ಒಬ್ಬನನ್ನು ಕಾಪಾಡಲು ಹೋಗಿ ನಾಲ್ವರು ನೀರುಪಾಲು – ಮದುವೆಗೆ ಬಂದು ಮಸಣ ಸೇರಿದ್ರು

    ಒಬ್ಬನನ್ನು ಕಾಪಾಡಲು ಹೋಗಿ ನಾಲ್ವರು ನೀರುಪಾಲು – ಮದುವೆಗೆ ಬಂದು ಮಸಣ ಸೇರಿದ್ರು

    – ಓರ್ವ ಯುವತಿ, ಮೂವರು ಯುವಕರು ನದಿಪಾಲು

    ಮಂಗಳೂರು: ನದಿ ನೀರಿನಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮದ ಶಾಂಭವಿ ನದಿಯಲ್ಲಿ ನಡೆದಿದೆ.

    ಮೃತರನ್ನು ಮೂಡುಶೆಡ್ಡೆಯ ನಿಖಿಲ್ (18), ಹರ್ಷಿತಾ (20), ವೇಣೂರಿನ ಸುಭಾಶ್ (19), ಬಜ್ಪೆಯ ರವಿ(30) ಎಂದು ಗುರುತಿಸಲಾಗಿದೆ. ಇದರಲ್ಲಿ ಮೊದಲಿಗೆ ಓರ್ವ ಮುಳುಗಿದ್ದು, ಅವನನ್ನು ಕಾಪಾಡಲು ಯುವತಿ ಸೇರಿ ಮೂವರು ನೀರಿಗೆ ಇಳಿದಿದ್ದಾರೆ. ನಾಲ್ವರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಈ ನಾಲ್ವರು ಮದುವೆಗೆಂದು ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಗ್ರಾಮದಲ್ಲಿ ಹರಿಯುವ ಶಾಂಭವಿ ನದಿಯಲ್ಲಿ ಆಟವಾಡಲು ಹೋಗಿದ್ದಾರೆ. ಈ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸದ್ಯ ಯುವತಿ ಮತ್ತು ಓರ್ವ ಯುವಕ ಮೃತದೇಹ ಸಿಕ್ಕಿದ್ದು, ಇನ್ನಿಬ್ಬರ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದೆ. ಮೂಡಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.