Tag: Shamanur Shivshankarappa

  • ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ, ಬಹಳ ದಿನ ಮೋದಿ ಅಧಿಕಾರದಲ್ಲಿ ಇರಲ್ಲ: ಶಾಮನೂರು ಭವಿಷ್ಯ

    ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ, ಬಹಳ ದಿನ ಮೋದಿ ಅಧಿಕಾರದಲ್ಲಿ ಇರಲ್ಲ: ಶಾಮನೂರು ಭವಿಷ್ಯ

    ದಾವಣಗೆರೆ: ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ. ಎಲ್ಲರಿಗೂ ಪ್ರಧಾನಿ ಹಾಗೂ ಪ್ರಭಾವಿ ಸಚಿವ ಸ್ಥಾನಗಳ ಮೇಲೆ ಆಸೆ ಇರುತ್ತದೆ. ಹೀಗಾಗಿ ಬಹಳ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕಾರದಲ್ಲಿ ಇರಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಕೇಂದ್ರ ಸರ್ಕಾರದ ಭವಿಷ್ಯ ನುಡಿದರು.

    ದಾವಣಗೆರೆಯ (Davanagere) ಬಾಪೂಜಿ ಎಂಬಿಎ ಹಾಲ್‌ನಲ್ಲಿ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಎನ್‌ಡಿಎ ಪಾಲುದಾರರಾಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿಯಂತೆ ಕಾಡಲಿದ್ದಾರೆ ಎಂದರು. ಇದನ್ನೂ ಓದಿ: ದರ್ಶನ್‌ ಪೊಲೀಸ್‌ ಕಸ್ಟಡಿಗೆ, ಪವಿತ್ರಾ ಗೌಡ ಜೈಲಿಗೆ

    ಮೋದಿ ಸರ್ಕಾರ ಬಹಳ ದಿನ ಮುಂದುವರಿಯುವುದಿಲ್ಲ. ಬಿಜೆಪಿಗೆ ಈಗಿರುವ ಸ್ಥಾನಕ್ಕಿಂತ ಹತ್ತು ಸ್ಥಾನಗಳು ಕಡಿಮೆ ಬಂದಿದ್ದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ಎಷ್ಟೇ ಮೋದಿ ಜಪ ಮಾಡಿದರೂ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ, ಅನಗತ್ಯವಾಗಿ ತುಟಿ ಬಿಚ್ಚಬೇಡಿ – ಮಂತ್ರಿಗಳಿಗೆ ಸಿಎಂ ವಾರ್ನಿಂಗ್‌

  • ಕಾಂತರಾಜು ಕಮಿಟಿ ವರದಿ ವಿರೋಧಿಸುವ ಡಿಕೆಶಿ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ: ರಾಮಚಂದ್ರಪ್ಪ

    ಕಾಂತರಾಜು ಕಮಿಟಿ ವರದಿ ವಿರೋಧಿಸುವ ಡಿಕೆಶಿ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ: ರಾಮಚಂದ್ರಪ್ಪ

    ಬೆಂಗಳೂರು: ಕಾಂತರಾಜು ಕಮಿಟಿ ವರದಿ ಸಂಬಂಧ ಶಾಸಕರ ಭವನದಲ್ಲಿ ನಡೆದ ಹಿಂದುಳಿದ ಜಾತಿ ಹಾಗೂ ಸಮುದಾಯಗಳ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಡಿಸಿಎಂ ಡಿಕೆಶಿ (DK Shivakumar) ರಾಜೀನಾಮೆ ಪಡೆಯಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಡಿಕೆಶಿ ಹಾಗೂ ಶಾಮನೂರು ಶಿವಶಂಕರಪ್ಪ (Shamanur Shivshankarappa) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುತ್ತಾರೆ. ಲಿಂಗಾಯತರು ಉಪ ಜಾತಿಯಲ್ಲಿ ಗುರುತಿಸಿಕೊಂಡು ಬೇರೆ ಬೇರೆ ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ನಾವಾ ಹೊಣೆ? ಅದು ಯಾಕೆ ಗೊತ್ತಾಗಿಲ್ಲ ಅವರಿಗೆ. ಈಗ ಲಿಂಗವಂತ ಅಂತ ಹಾಕ್ತಾರಾ ಇಲ್ಲವಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಾಮನೂರಿಗೆ ಓದೋಕೆ ಬರುತ್ತಾ? ಸುಮ್ನೆ ಬೂಟಾಟಿಕೆ ಮಾತಾಡ್ತಾರೆ: ಹೆಚ್.ವಿಶ್ವನಾಥ್

    ಈ ರಾಜ್ಯದ ಉಪ ಮುಖ್ಯಮಂತ್ರಿ ಸಹ ಕಾಂತರಾಜು ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ರಾಜ್ಯದ ಉಪ ಮುಖ್ಯಮಂತ್ರಿ ಅಲ್ಲ, ಅವರ ಜನಾಂಗದ ಉಪ ಮುಖ್ಯಮಂತ್ರಿ ಎನ್ನುವ ರೀತಿ ಆಡುತ್ತಿದ್ದಾರೆ. ನೀವು ಯಾವ ಉಪ ಮುಖ್ಯಮಂತ್ರಿ ಎಂದು ಅವರನ್ನ ಕೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಂವಿಧಾನ ಇಟ್ಟುಕೊಂಡು ಸ್ವಜನ ಪಕ್ಷಪಾತ ಮಾಡಲ್ಲ, ಜಾತಿ ಮಾಡಲ್ಲ ಎಂದು ಪ್ರಮಾಣ ಮಾಡಿರುತ್ತಾರೆ. ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ? ಅವರು ರಾಜೀನಾಮೆ ನೀಡಬೇಕು. ಅದಕ್ಕೆ ನಾವು ಒತ್ತಾಯಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದಲ್ಲಿ ಕಾಲ್ತುಳಿತಕ್ಕೆ ನಾಲ್ವರು ಬಲಿ, 55 ಮಂದಿಗೆ ಗಾಯ

  • ಶಾಮನೂರಿಗೆ ಓದೋಕೆ ಬರುತ್ತಾ? ಸುಮ್ನೆ ಬೂಟಾಟಿಕೆ ಮಾತಾಡ್ತಾರೆ: ಹೆಚ್.ವಿಶ್ವನಾಥ್

    ಶಾಮನೂರಿಗೆ ಓದೋಕೆ ಬರುತ್ತಾ? ಸುಮ್ನೆ ಬೂಟಾಟಿಕೆ ಮಾತಾಡ್ತಾರೆ: ಹೆಚ್.ವಿಶ್ವನಾಥ್

    ಬೆಂಗಳೂರು: ಶಾಮನೂರು ಶಿವಶಂಕರಪ್ಪ (Shamanur Shivshankarappa) ಅವರಿಗೆ ಓದಲು ಬರುತ್ತಾ ಎಂದು ಮೊದಲು ಕೇಳಿ, ಸುಮ್ಮನೆ ನಾಟಕ ಮಾಡಿಕೊಂಡು, ಬೂಟಾಟಿಕೆ ಮಾಡಿಕೊಂಡಿದ್ದರೆ ಯಾರು ಒಪ್ಪುವುದಿಲ್ಲ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಮತಗಳ ಮೇಲೆ ಅವರು ಬಂದಿದ್ದಾರೆ? ಯಾರ ಮತಗಳ ಮೇಲೆ ಅಪ್ಪ ಮಕ್ಕಳು ಗೆದ್ದಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕೇಸ್ ಗೊತ್ತಿದ್ದರೂ ತಿರುಚ್ತಿದ್ದಾರಾ ಸಿಎಂ?

    ಕಾಂತರಾಜ್ ಕಮಿಟಿ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಅಂತಹ ಪ್ರಾಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಇದರ ಬಗ್ಗೆ ಗಮನಹರಿಸಿರಲಿಲ್ಲ. ನಮ್ಮ ಸಮಾಜಕ್ಕೆ ವಿರೋಧ ಎಂದು ಅವರುಗಳು ಹೀಗೆ ಮಾಡಿದ್ದರು ಎಂದಿದ್ದಾರೆ.

    ಬಿಜೆಪಿ ಹಾಗೂ ಜೆಡಿಎಸ್‍ನವರು ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡಿಲ್ಲ. ಹಾವನೂರು ವರದಿಯನ್ನು ವಿರೋಧ ಮಾಡಿದ್ದರು. ಅದನ್ನು ಹೌಸ್‍ನಲ್ಲಿ ಹರಿದು ಹಾಕಿದ್ದರು, ಅಲ್ಲದೇ ಕತ್ತೆ ಮೇಲೆ ಮೆರವಣಿಗೆಯನ್ನೂ ಮಾಡಿದ್ದರು. ಇಷ್ಟೆಲ್ಲ ಆದರೂ ದೇವರಾಜ ಅರಸು ಅವರು ಎದೆಗುಂದದೆ ಜಾರಿ ಮಾಡಿದ್ದರು. ಆದ್ದರಿಂದ ಕಾಂತರಾಜ್ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಸ್ವೀಕಾರ ಮಾಡಿ ಸಾರ್ವಜನಿಕವಾಗಿ ಚರ್ಚೆಗೆ ಬಿಡಬೇಕು ಎಂದಿದ್ದಾರೆ. ಇದನ್ನೂ ಓದಿ: ಯತ್ನಾಳ್ ಮನೆಗೆ ಹೋಗೋರು ಯಾರು?: ಬಿಎಸ್‍ವೈ ಕಿಡಿ

  • ವೀರಶೈವ ಮುಖಂಡರು ಬಿಜೆಪಿ ಸೇರ್ತಾರಾ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ

    ವೀರಶೈವ ಮುಖಂಡರು ಬಿಜೆಪಿ ಸೇರ್ತಾರಾ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ

    ಬೆಂಗಳೂರು: ರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ಬಿರುಸಿನ ವಾತವರಣ ನಿರ್ಮಾಣವಾಗಿದೆ.

    ಅತಂತ್ರ ಫಲಿತಾಂಶದ ಪರಿಣಾಮ ಅನೇಕ ನಾಯಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗಿತ್ತಿದೆ. ಅದರಲ್ಲೂ ವೀರಶೈವ ಲಿಂಗಾಯತ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದಾರೆ ಎಂದು ವಂದಂತಿ ಹಬ್ಬಿತ್ತು. ಈಗ ಎಲ್ಲಾ ವದಂತಿಗಳ ಬಗ್ಗೆ ಶಾಮನೂರು ಶಿವಶಂಕರಪ್ಪ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ. ಬಿಜೆಪಿ ಏನೇ ಮಾಡಿದರೂ ಲಿಂಗಾಯತರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಪ್ರಮುಖ ಅಧ್ಯಕ್ಷರು, ವೀರಶೈವ ಮುಖಂಡರು ಹೋಗುವುದಿಲ್ಲ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಧರ್ಮ ಪ್ರಭಾವ ಬೀರಿಲ್ಲ ಎಂದ್ರು.

    ಸರ್ಕಾರ ನಡೆಸುವ ಕಸರತ್ತಿನಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದೆ. ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಜೆಡಿಎಸ್ ನ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಿದ್ದು, ಸಿಎಂ ಅಭ್ಯರ್ಥಿ ಆಗಲಿದ್ದಾರೆ. ಇದಾದ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಟ್ಟರೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯಲ್ಲಿ ಬಹುಮತ ಸಾಬೀತು ಮಾಡಬೇಕಾಗುತ್ತದೆ.

    ಇನ್ನು ಶಾಸಕಾಂಗ ಪಕ್ಷದ ಸಭೆ ಬಳಿಕ ಜೆಡಿಎಸ್ ಶಾಸಕರು ರೆಸಾರ್ಟ್ ಗೆ ಪ್ರಯಾಣ ಮಾಡುವ ಪ್ಲಾನ್ ಮಾಡಲಿದ್ದು, ಆಪರೇಷನ್ ಕಮಲದಿಂದ ಶಾಸಕರನ್ನ ತಪ್ಪಿಸಲು ಜೆಡಿಎಸ್ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದೆ. ಆದ್ದರಿಂದ ಕೇರಳದ ಕೊಚ್ಚಿನ್ ರೆಸಾರ್ಟ್ ಗೆ ಶಿಫ್ಟ್ ಆಗಲು ಕಾಂಗ್ರೆಸ್ ತೀರ್ಮಾನ ಮಾಡಿದ್ದು, ಪ್ರತ್ಯೇಕ ಬಸ್ ಮೂಲಕ ಕಾಂಗ್ರೆಸ್ ನಾಯಕರು ಕೊಚ್ಚಿನ್ ಗೆ ಶಿಫ್ಟ್ ಆಗುವ ಸಿದ್ಧತೆ ನಡೆಯುತ್ತಿದೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.