Tag: shamanth bro gowda

  • ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್ ಮಾಡಿದ ಕಿಚ್ಚ ಸುದೀಪ್

    ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್ ಮಾಡಿದ ಕಿಚ್ಚ ಸುದೀಪ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಶಮಂತ್ ಬ್ರೋ ಗೌಡ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಬ್ರೋ ಗೌಡ ಆವರ ಕಾರನ್ನು ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ರೈಡ್ ಮಾಡಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

    ಶಮಂತ್ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಈ ಕಾರನ್ನು ಸುದೀಪ್ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು. ಅದು ಈಗ ಈಡೇರಿದೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಶಮಂತ್ ಅವರು ತಮ್ಮ ಬಿಎಂಡಬ್ಲ್ಯೂ ಕಾರನ್ನು ಸುದೀಪ್ ಮನೆಗೆ ತಂದಿದ್ದಾರೆ. ಸುದೀಪ್ ಅವರು ಕಾರನ್ನು ಓಡಿಸಿದ್ದಾರೆ. ಅಲ್ಲದೆ ಕಾರಿನ ಮೇಲೆ ಸುದೀಪ್ ಆಟೋಗ್ರಾಫ್ ಕೂಡ ಹಾಕಿದ್ದಾರೆ. ಸದ್ಯ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಸುದೀಪ್ ಆಶೀರ್ವಾದ ಪಡೆದ ಶಮಂತ್ ಸಾಕಷ್ಟು ಖುಷಿಪಟ್ಟಿದ್ದಾರೆ. ಕಿಚ್ಚ ಸುದೀಪ್‍ಗೆ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಯಾವಾಗಲೂ ವಿಶೇಷ ಗೌರವ ಇದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಯಾಗಿದೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    SUDEEP

    ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕೊರೊನಾ ಸೋಂಕು ಅಬ್ಬರ ಕಡಿಮೆ ಆದರೆ ಮುಂದಿನ ತಿಂಗಳು ಚಿತ್ರ ರಿಲೀಸ್ ಆಗಲಿದೆ. ಇದರ ಮಧ್ಯೆ ಬಿಡುವು ಮಾಡಿಕೊಂಡು ಶಮಂತ್ ಬ್ರೋ ಗೌಡ ಕಾರನ್ನು ಅವರು ಓಡಿಸಿದ್ದಾರೆ. ಈ ವೀಡಿಯೋವನ್ನು ಬ್ರೋ ಗೌಡ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್‍ಗೆ ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಯಾವಾಗಲೂ ವಿಶೇಷ ಗೌರವ ಇದೆ.

  • ಶಮಂತ್ ಮುಂದೆ ಬೆಟ್ಟಿಂಗ್‍ನಲ್ಲಿ ಸೋತ ಪ್ರಶಾಂತ್

    ಶಮಂತ್ ಮುಂದೆ ಬೆಟ್ಟಿಂಗ್‍ನಲ್ಲಿ ಸೋತ ಪ್ರಶಾಂತ್

    ಬಿಗ್‍ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ದೊಡ್ಮನೆಯಲ್ಲಿ ಹೊಸ ಹೊಸ ತಿರುವುಗಳು ಬರುತ್ತಿದೆ. ಈ ಮಧ್ಯೆ ಬ್ರೋ ಗೌಡ ಶಮಂತ್ ಮತ್ತು ಪ್ರಶಾಂತ್ ಸಂಬರಗಿ ಬೆಟ್ಟಿಂಗ್ ಕಟ್ಟಿಕೊಂಡು ಆಟ ಆಡಿದ್ದಾರೆ.

    ಪ್ರಶಾಂತ್ ಮತ್ತು ಶಮಂತ್ ಇಬ್ಬರು ಒಟ್ಟಿಗೆ ಕಿಚನ್ ಏರಿಯಾದಲ್ಲಿ ಕುಳಿತು ಕಾಫಿ ಕುಡಿಯುತ್ತಿರುತ್ತಾರೆ. ಈ ವೇಳೆ ಶಮಂತ್ ಚಾಕೋಲೇಟ್ ಸಿರಪ್ ಇದ್ದಿದ್ರೆ ಕಾಫಿ ತರ ಮಾಡಿಕೊಂಡು ಕುಡಿಯಬಹುದಿತ್ತು, ಬಿಗ್‍ಬಾಸ್ ಮನೆಯ ಆರಂಭದಲ್ಲಿ ನಾವು ಅದನ್ನು ಚಪಾತಿಗೆ ಹಾಕಿಕೊಂಡು ತಿನ್ನುತ್ತಿದ್ದೇವು ಎಂದು ಹೇಳುತ್ತಾರೆ. ಆಗ ಪ್ರಶಾಂತ್ ದೊಡ್ಮನೆಯಲ್ಲಿ ಎಂದಿಗೂ ಚಾಕೋಲೇಟ್ ಸಿರಪ್ ಬಂದಿರಲಿಲ್ಲ ಎಂದು ವಾದ ಮಾಡಲು ಪ್ರಾರಂಭಿಸುತ್ತಾರೆ.

    ಆಗ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಮೊದಲು ಚಾಕೋಲೇಟ್ ಸಿರಪ್ ಇತ್ತಾ ಇಲ್ವಾ ಎಂದು ಮನೆಯಲ್ಲಿ ಯಾರನ್ನಾದರೂ ಕೇಳೋಣಾ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಒಂದು ವೇಳೆ ಚಾಕೋಲೇಟ್ ಸಿರಪ್ ಇರಲಿಲ್ಲ ಎಂದು ಹೇಳಿದರೆ 48 ಗಂಟೆಗಳ ಕಾಲ ನೀನು ದಿವ್ಯಾ ಸುರೇಶ್‍ರನ್ನು ಮಾತನಾಡಿಸಬಾರದು ಎಂದು ಪ್ರಶಾಂತ್ ಶಮಂತ್‍ಗೆ ಹೇಳುತ್ತಾರೆ. ಆಗ ಶಮಂತ್ ಒಕೆ ಮಾತನಾಡುವುದಿಲ್ಲ. ಆಕಸ್ಮಾತ್ ಚಾಕೋಲೇಟ್ ಸಿರಪ್ ಇತ್ತು ಎಂದರೆ ನೀವು ದಿವ್ಯಾ ಸುರೇಶ್ ಜೊತೆ 48 ಗಂಟೆಗಳ ಕಾಲ ಮಾತನಾಡುವಂತಿಲ್ಲ ಹಾಗೂ ಯಾವುದಕ್ಕೂ ರಿಯಾಕ್ಟ್ ಕೂಡ ಮಾಡುವಂತಿಲ್ಲ ಎಂದು ಇಬ್ಬರು ಹೇಳಿ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಾರೆ.

    ಇಬ್ಬರ ಪೈಕಿ ಯಾರ ವಾದ ಸರಿ ಎಂದು ತಿಳಿಯಲು ಗಾರ್ಡನ್ ಏರಿಯಾದಲ್ಲಿದ್ದ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಚಾಕೋಲೇಟ್ ಸಿರಪ್ ಬಂದಿತ್ತಾ ಎಂದು ಕೇಳಿದಾಗ, ಮೊದಲಿಗೆ ದಿವ್ಯಾ ಉರುಡುಗ, ಅರವಿಂದ್ ಬಂದಿಲ್ಲ ಎನ್ನುತ್ತಾರೆ. ಆದರೆ ನಂತರ ಉಳಿದ ಸದಸ್ಯರು ಹೌದು ಬಂದಿತ್ತು ಎಂದು ಹೇಳುತ್ತಾರೆ. ಅದಕ್ಕೆ ಶಮಂತ್ ಬಿಗ್‍ಬಾಸ್ ಕಣ್ಮಣಿಗೆ ಪ್ರಶಾಂತ್ ಅವರು ಚಾಕೋಲೇಟ್ ಸಿರಪ್ ಬಂದಿಲ್ಲ ಎಂದಿದ್ದರು. ಬಂದಿದೆ ಎಂಬುದು ನನ್ನ ವಾದವಾಗಿತ್ತು. ಅದಕ್ಕೆ ಮನೆಯವರ ಸಹಮತದ ಮೇರೆಗೆ ನಾನು ಗೆದ್ದಿದ್ದೇನೆ. ಇನ್ನೂ ಎರಡು ದಿನ ದಿವ್ಯಾ ಸುರೇಶ್ ಬಳಿ ಪ್ರಶಾಂತ್ ಮಾತನಾಡುವಂತಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ:ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್

  • ಶಮಂತ್‍ಗೆ ಕೈ ಕೊಟ್ಟ ಲಕ್ ?

    ಶಮಂತ್‍ಗೆ ಕೈ ಕೊಟ್ಟ ಲಕ್ ?

    ಬಿಗ್‍ಬಾಸ್ ಮನೆಯಲ್ಲಿ ಪ್ರತಿವಾರ ತಮ್ಮ ಲಕ್‍ನಿಂದ ಬಚಾವ್ ಆಗಿ ಬರುತ್ತಿದ್ದ ಶಮಂತ್ ಅವರಿಗೆ ಈ ವಾರ ಅವರ ಲಕ್ ಕೊಟ್ಟಿರುವಂತರಹ ಎಲ್ಲ ಲಕ್ಷಣಗಳಿವೆ. ಶಮಂತ್ ಈ ವಾರ ಮನೆಯಿಂದ ಆಚೆ ಹೋಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

    ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ನಾಮಿನೇಷನ್ ಲಿಸ್ಟ್​ನಲ್ಲಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಇಬ್ಬರು ಹೊರ ಹೋಗುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. ಒಂದೊಮ್ಮೆ ಡಬಲ್ ಎಲಿಮಿನೇಷನ್ ಆದರೆ ಚಕ್ರವರ್ತಿ ಚಂದ್ರಚೂಡ್?, ಪ್ರಶಾಂತ್ ಸಂಬರಗಿ ಮತ್ತು ಶುಭಾ ಪೂಂಜಾ ಮೂವರಲ್ಲಿ ಇಬ್ಬರು ಔಟ್ ಆಗಲಿದ್ದಾರೆ ಎಂಬುದು ಫ್ಯಾನ್ಸ್ ಲೆಕ್ಕಾಚಾರವಾಗಿತ್ತು. ಆದರೆ ಈ ಲೆಕ್ಕಾಚಾರ ತಲೆಕೆಳಗೆ ಆದಂತೆ ಕಾಣುತ್ತಿದೆ.

    ಬಿಗ್‍ಬಾಸ್ ಪ್ರಸಾರವಾಗುವ ಖಾಸಗಿವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಾರದ ಎಪಿಸೋಡ್‍ಗೆ ರೆಡಿ ಆಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳು ನಿಂತಿರುವ ಫೋಟೋ ಇದಾಗಿದ್ದು, ಶಮಂತ್ ಮಿಸ್ ಆಗಿದ್ದಾರೆ. ನೆಟ್ಟಿಗರು ಶಮಂತ್ ಎಲ್ಲಿ ಎಂದು ಕಮೆಂಟ್ ಮಾಡಿ ಕೇಳಿತ್ತಿದ್ದಾರೆ. ಹೀಗಾಗಿ ಈ ವಾರಾ ಶಮಂತ್ ಮನೆಯಿಂದ ಆಚೆ ಬಂದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

    ಶಮಂತ್ ಬ್ರೋ ಗೌಡ ಮೊದಲ ಇನ್ನಿಂಗ್ಸ್‍ನಲ್ಲಿ ಮನೆಯಲ್ಲಿ ಸತತ ಎರಡು ವಾರ ಕ್ಯಾಪ್ಟನ್ ಆದರು. ಇದಕ್ಕೆ ಮನೆಯವರ ಬೆಂಬಲ ಕೂಡ ಇತ್ತು. ನಂತರ, ಶಮಂತ್ ಗೋಸ್ಕರ ಬೆಡ್ ರೂಮ್ ಬಿಟ್ಟುಕೊಡೋ ಸಮಯ ಬಂದಾಗ ಎಲ್ಲರೂ ಇದನ್ನು ಬೆಂಬಲಿಸಿ, ಲಿವಿಂಗ್ ಏರಿಯಾದಲ್ಲಿ ಮಲಗಿದ್ದರು. ಇನ್ನು, ಅವರು ಬಿಗ್‍ಬಾಸ್‍ನಿಂದ ಎಲಿಮಿನೇಟ್ ಆಗಿದ್ದರು. ಆದರೆ, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ತಾವು ಬಿಗ್‍ಬಾಸ್ ಮನೆಯಿಂದ ಹೊರ ಹೋಗುತ್ತೇವೆ ಎಂದು ಶಮಂತ್ ಅವರನ್ನು ಸೇವ್ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್ ಲಕ್ಕಿ ಬಾಯ್ ಎಂದೇ ಕರೆಯಲ್ಪಟ್ಟಿದ್ದರು. ಅರ್ಧಕ್ಕೆ ನಿಂತಿದ್ದ ಬಿಗ್‍ಬಾಸ್ ಆರಂಭಕ್ಕೂ ಶಮಂತ್ ಅದೃಷ್ಟ ಕಾರಣ ಎಂದು ಟ್ರೋಲ್ ಪೇಜ್‍ಗಳು ಪೋಸ್ಟ್ ಮಾಡಿದ್ದವು. ಆದರೆ ಇದೀಗ ಅವರ ಲಕ್ ಕೈ ಕೊಟ್ಟಿರುವಂತೆ ಕಾಣುತ್ತಿದೆ.

  • ಬಿಗ್‍ಬಾಸ್‍ ಮನೆಯಲ್ಲಿ ಶಮಂತ್ ಬೇಡಿಕೆ ಇಡೇರಿಸಿದ ಕಣ್ಮಣಿ

    ಬಿಗ್‍ಬಾಸ್‍ ಮನೆಯಲ್ಲಿ ಶಮಂತ್ ಬೇಡಿಕೆ ಇಡೇರಿಸಿದ ಕಣ್ಮಣಿ

    ಬಿಗ್‍ಬಾಸ್ ಮನೆಯಲ್ಲಿರುವ ಸ್ಪರ್ಧಿ ಶಮಂತ್‍ಗೆ ಹಲವು ದಿನಗಳಿಂದ ಒಂದು ಬೇಡಿಕೆಯನ್ನು ಬಿಗ್‍ಬಾಸ್ ಬಳಿ ಇಡುತ್ತಿದ್ದರು. ಬಾ.. ಗುರು ಸಾಂಗ್ ಅನ್ನು ವೇಕ್ ಅಪ್ ಸಾಂಗ್ ಪ್ಲೇ ಮಾಡಿ ಎಂದು ಬಿಗ್‍ಬಾಸ್ ಬಳಿ ಮನವಿ ಮಾಡುತ್ತಿದ್ದರು. ಆದರೆ ಇಂದು ಸಾಂಗ್ ಪ್ಲೇ ಮಾಡಿರುವ ಹಿಂದಿನ ರಹಸ್ಯ ಸ್ಪರ್ಧಿಗಳಿಗೆ ತುಂಬಾ ಬೇಸರವನ್ನುಂಟು ಮಾಡಲಿದೆ.

    71ನೇ ದಿನಕ್ಕೆ ಬಿಗ್‍ಬಾಸ್ ಶಮಂತ್ ಬೇಡಿಕೆಯನ್ನು ಈಡೇರಿಸಿದ್ದಾರೆ. ಸಾಂಗ್ ಹಾಕುತ್ತಿದ್ದಂತೆ ಶಮಂತ್‍ಗೆ ತುಂಬಾ ಆಶ್ಚರ್ಯವಾಗಿದೆ. ನನ್ನದೇ ಹಾಡಾ ಎಂದು ಒಮ್ಮೆ ಗೊತ್ತಾಗದೆ ನೋಡಿದ್ದಾರೆ. ಬಾ ಗುರು..ಸಾಂಗ್ ಪ್ಲೇ ಆಗುತ್ತಿದ್ದಂತೆ ಶಮಂತ್ ಎದ್ದು ಡಾನ್ಸ್ ಮಾಡಲು ಶುರು ಮಾಡಿದ್ದಾರೆ. ಸಾಂಗ್ ಪ್ಲೇ ಆಗಿರುವುದಕ್ಕೆ ಶಮಂತ್ ಸಂತೋಷ ಇಮ್ಮುಡಿಯಾಗಿದೆ. ಬಾ.. ಗುರು.. ಬಾ.. ಬಾರು ಎನ್ನುವುದಕ್ಕೆ ಸ್ಪರ್ಧಿಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ತುಂಬಾ ಚೆನ್ನಾಗಿದೆ ಎಂದು ಮನೆಮಂದಿ ಶಮಂತ್‍ನನ್ನು ಹೊಗಳಿದ್ದಾರೆ. ನಾನು ಸಾಂಗ್ ಬರುವುದಿಲ್ಲ ಎಂದು ಅಂದುಕೊಂಡು ಮಲಗಿದ್ದೆ. ಆದರೆ ಇಂದು ಪ್ಲೇ ಮಾಡಿರುವುದು ತುಂಬಾ ಸಂತೋಷವಾಗಿದೆ. ಹೇಳಲು ಪದಗಳೆ ಬರುತ್ತಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಒಮ್ಮೆ ನನ್ನ ಸಾಂಗ್ ಪ್ಲೇ ಆಗಬೇಕು ಎನ್ನುವ ಆಸೆ ಇತ್ತು ಕಣ್ಮಣಿ ಈಡೇರಿಸಿದ್ದೀಯಾ ತುಂಬಾ ಸಂತೋಷವಾಗಿದೆ ಎಂದು ಶಮಂತ್ ಕ್ಯಾಮೆರಾ ಮುಂದೆ ನಿಂತುಕೊಂಡು ಹೇಳಿದ್ದಾರೆ.

    ಕಣ್ಮಣಿ 5 ದಿನಗಳಲ್ಲಿ ಒಂದೊಂದು ಹಾಡು ನೀವು ಕ್ರೀಯೇಟ್ ಮಾಡಿ ಹಾಡಿದರೆ ಶಮಂತ್ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಇದೀಗ ಶಮಂತ್ ಬೇಡಿಕೆ ಈಡೇರಿಸಿದೆ ಎನ್ನುವ ಸಮತೋಷವಿದೆ. ಆದರೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಇಂದು ಬಿಗ್‍ಬಾಸ್ ಮನೆಯಲ್ಲಿ ನಡೆಯಲಿರುವ ಮಹತ್ತರವಾದ ಬದಲಾವಣೆಯ ಕುರಿತಾಗಿ ತಿಳಿದರೆ ಸಖತ್ ಬೇಸರವಾಗುವುದು ಖಂಡಿತಾ ಹೌದು.

  • ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ?

    ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ?

    ಬಿಗ್ ಮನೆಯಲ್ಲಿ ಈ ವಾರದ ಕಳಪೆ ಪ್ರದರ್ಶನ ನೀಡಿದ ಸದಸ್ಯರನ್ನು ಒಮ್ಮತದಿಂದ ಗುರುತಿಸಿ ಸೂಕ್ತ ಕಾರಣವನ್ನು ಗುರುತಿಸಿ ಹೇಳಿ ಎಂದು ಬಿಗ್‍ಬಾಸ್ ಸೂಚಿಸಿದ್ದರು. ಮನೆಯ ಸದಸ್ಯರೆಲ್ಲರು ಶಮಂತ್ ಹೆಸರನ್ನು ಸೂಚಿಸಿದ್ದಾರೆ.

    ಶಮಂತ್‍ಗೆ ಬ್ಯಾಡ್ ಟೈಮ್!

    ಬಿಗ್‍ಬಾಸ್ ಮನೆಯಲ್ಲಿ ಮೊದಲವಾರವೇ ಕ್ಯಾಪ್ಟನ್ ಆಗಿ ಆಯ್ಕೆಯಾದ ಶಮಂತ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಮನೆ ಸದಸ್ಯರು ಮುಂದಿನವಾರವು ಅವರೆ ಇರಲಿ ಎಂದು ಸೂಚಿಸಿದ್ದರು. ಆದರೆ ಕ್ಯಾಪ್ಟನ್ ಪಟ್ಟ ಕಳೆದುಕೊಳ್ಳುತ್ತಿದ್ದಂತೆ ಕೆಟ್ಟ ಕಾಲ ಶುರುವಾಗಿದೆ. ಕಾಪ್ಟನ್ ರೂಮ್‍ನಲ್ಲಿ ಹಾಯಾಗಿದ್ದ ಶಮಂತ್ ಇಂದು ಜೈಲು ಪಾಲಾಗಿದ್ದಾರೆ.

    ಟಾಸ್ಕ್ ಮಾತ್ರವಲ್ಲದೇ ಕೆಲವರು ವೈಯಕ್ತಿಕ ಕಾರಣ ಮತ್ತು ಅವರ ನಡವಳಿಕೆಯನ್ನು ಆಧರಿಸಿ ಶಮಂತ್ ಅವರಿಗೆ ಕಳಪೆ ಪ್ರದರ್ಶನ ಎಂದು ಗುರುತಿಸಿದ್ದಾರೆ. ಖೈದಿಯ ಬಟ್ಟೆ ಧರಿಸಿ ಜೈಲು ಪ್ರವೇಶಿಸಿದ ಶಮಂತ್ ಕೊಂಚ ಬೇಸರವಾಗಿದ್ದಾರೆ.

    ನಿಧಿ ಅವರಿಗೆ ನಾನು ಎಷ್ಟು ಸಹಾಯ ಮಾಡಿದೆ. ಅವರು ನನ್ನ ಕಳಪೆ ಎಂದಿದ್ದಾರೆ. ಒಳ್ಳೆತನಕ್ಕೆ ಬೆಲೆ ಇಲ್ಲ. ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ? ಇಲ್ಲಿಂದ ಕಾಲು ಆಚೆ ಇಡುತ್ತಿದ್ದಂತೆ ನನ್ನಲ್ಲಿ ಎಷ್ಟು ಬದಲಾವಣೆ ಇರುತ್ತದೆ ನೋಡಿ. ನಾನು ಸೈಲೆಂಟ್ ಆಗಿ ಇದ್ದು ತಪ್ಪು ಮಾಡಿದೆ ಬಿಗ್‍ಬಾಸ್ ಎಂದು ಹೇಳಿದ್ದಾರೆ.

    ಕ್ಯಾಪ್ಟನ್ ಜವಾಬ್ದಾರಿಯಲ್ಲಿ ಶಮಂತ್ ಕೊಂಚ ಎಡವಿದಂತೆ ಕಾಣುತ್ತದೆ. ಮನೆಯ ಸದಸ್ಯರನ್ನು ನಿಭಾಯಿಸಿಕೊಂಡು, ಟಾಸ್ಕ್‍ನಲ್ಲಿ ಎಲ್ಲರೂ ಭಾಗವಹಿಸುತ್ತಿದ್ದಾರಾ? ಅವರ ಸಮಸ್ಯೆಗಳೆನು ಎಂಬುದನ್ನು ಕೇಳಿ ಸರಿದೂಗಿಸಿಕೊಂಡು ಹೋಗಬೇಕಿತ್ತು. ಆದರೆ ಮನೆಯವರ ದೃಷ್ಟಿಯಲ್ಲಿ ಅವರು ಕೊಂಚ ಎಡವಿದ್ದಾರೆ ಎಂದು ಅನ್ನುಸುತ್ತದೆ ಹೀಗಾಗಿ ಈವಾರದ ಕಳಪೆ ಹಣೆಪಟ್ಟಿಯನ್ನು ಧರಿಸಿ ಜೈಲುವಾಸ ಅನುಭವಿಸುತ್ತಿದ್ದಾರೆ.

    ಮೊದಲವಾರ ಧನುಶ್ರೀ ಎಲಿಮಿನೆಟ್ ಆಗಿ ಮನೆಯಿಂದ ಹೊರ ನಡೆದಿದ್ದರು. ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎನ್ನುವ ಕೂತುಹಲ ಎಲ್ಲರಲ್ಲಿದೆ. ವಾರದ ಕಟ್ಟೆಪಂಚಾಯ್ತಿಯಲ್ಲಿ ಸುದೀಪ್ ಇಂದು ಮನೆಯವರ ಬಳಿ ಯಾವೆಲ್ಲ ವಿಚಾರವಾಗಿ ಚರ್ಚೆಮಾಡಿ ಬುದ್ದಿವಾದ ಹೇಳಲಿದ್ದಾರೆ. ಯಾರು ಒಂಟಿ ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.