ರಾಘು, ಶೆಫ್ ಚಿದಂಬರದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಎಂ. ಆನಂದ್ ರಾಜ್ ಈಗ ಹೊಸ ಸಿನಿಮಾ ಕೈಗೆತ್ತಿಗೊಂಡಿದ್ದಾರೆ. ‘ಬಿಗ್ ಬಾಸ್ ಸೀಸನ್ 8’ರಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದಿರುವ, ಆ ಬಳಿಕ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಶಮಂತ್ ಅವರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಕೇಸ್: ಮೂವರು ಶಂಕಿತರು ವಶಕ್ಕೆ
‘ಲಕ್ಷ್ಮಿ ಬಾರಮ್ಮ’ ಧಾರವಾಹಿಯ ಬ್ರೋ ಗೌಡ ಶಮಂತ್ (Bro Gowda Shamanth) ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚಿತ್ರಕ್ಕೆ ಎಂ. ಆನಂದ್ ರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದು ಕನ್ನಡದ ಮೊದಲ ಝಾಂಬಿ ಸಿನಿಮಾ. ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್‌ಗಳು ಇರುತ್ತವೆ. ಹಾಲಿವುಡ್ ಸಿನಿಮಾಗಳಲ್ಲಿ ಇರುವಂತಹ ಆ್ಯಕ್ಷನ್ ಅನ್ನು ಇಲ್ಲಿ ನೋಡಬಹುದು. ಹಾಗಾಗಿ, ಇದನ್ನು ವೈಲೆಂಟ್ ಆಕ್ಷನ್ ಡ್ರಾಮಾ ಅಂತ ಆನಂದ್ ಹೇಳಿದ್ದಾರೆ.
ಬ್ರೋ ಮೀಡಿಯಾ ಮತ್ತು ಸನ್ ರೈಸ್ ಕ್ಯಾಮೆರಾಸ್ ಪ್ರೊಡಕ್ಷನ್ ನಡಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಪ್ರೊಡಕ್ಷನ್ 1’ ಅಂತ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಕೊಡಗು ಸುತ್ತಮುತ್ತ, ಅದರಲ್ಲೂ ಮುಖ್ಯವಾಗಿ, ಕಾಡುಗಳಲ್ಲಿ ಹೆಚ್ಚು ಶೂಟಿಂಗ್ ಇರಲಿದೆ. ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾ ಹಿಡಿಯುತ್ತಿದ್ದು, ವಿಜೇತ್ ಚಂದ್ರ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಡ್ರಾಮಾ ಕಥೆಗೆ ಎಂ ಆನಂದ್ ರಾಜ್ ಹಾರರ್ ಟಚ್ ಕೊಟ್ಟಿದ್ದಾರೆ.
ಬಿಗ್‍ಬಾಸ್ ಮನೆಯ ಮೋಸ್ಟ್ ಎಂಟರ್ಟೈನರ್ ಅಂದರೆ ಮಂಜು. ದೊಡ್ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲರ ಜೊತೆ ಬೆರೆಯುತ್ತಿದ್ದ ಮಂಜು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ರೀತಿ ತಮಗೆ ಕಂಫರ್ಟ್ ಇರುವವರೊಂದಿಗೆ ಮಾತ್ರ ಹೆಚ್ಚಾಗಿ ಬೆರೆಯುತ್ತಿದ್ದಾರೆ.
ಸದ್ಯ ಶುಭಾ ಪೂಂಜಾ ಮಂಜುಗೆ ಯಾವಾಗಲೂ ಹುಡುಗಿಯರ ಜೊತೆಯಲ್ಲಿಯೇ ಇರುತ್ತೀಯಲ್ಲ ಹೋಗಿ ಹುಡುಗರೊಟ್ಟಿಗೆ ಕೂಡ ಕುಳಿತುಕೊಂಡು ಮಾತನಾಡು ಎಂದು ಹೇಳುತ್ತಾರೆ. ಇದಕ್ಕೆ ಮಂಜು ಹುಡುಗರು ಸರಿಯಾಗಿಲ್ಲ. ಯಾಕೆ ಎಂದು ಕೇಳಿದಾಗ ಹುಡುಗರ ಬುದ್ಧಿ ಸರಿಯಾಗಿಲ್ಲ ಎನ್ನುತ್ತಾರೆ.
ಇದೇ ವೇಳೆ ಶಮಂತ್ ಎಲ್ಲೆಲ್ಲೋ ಇದ್ವಿ ನಾವು, ಹೆಂಗಾದ್ವಿ ನೋಡಿ ನೀವು, ಬರಬರುತ್ತಾ ಜೀವನ ಯಾಕೋ ಕಷ್ಟ ಆಗುತ್ತಿದೆ. ಬಜರ್ ಆದಾಗ ಓಡಿ ಹೋಗ್ತೀವಿ. ಸಣ್ಣ ಮ್ಯಾಟರ್‌ಗೆ ಕಿತ್ತಾಡ್ತೀವಿ ಎಂದು ಹಾಡು ಹೇಳುತ್ತಿರುತ್ತಾರೆ. ಆಗ ಮಂಜು, ಶಮಂತ್‍ರನ್ನು ವೈಷ್ಣವಿ ಹಾಗೂ ಶುಭಾಗೆ ತೋರಿಸಿ ಅರ್ಥ ಆಯ್ತಾ ನಾನು ಯಾಕೆ ಸೇರುವುದಿಲ್ಲ. ಇವನು ಈ ತರ ಎಂದು ಹೇಳುತ್ತಾರೆ.
ಬಳಿಕ ಚಕ್ರವರ್ತಿಯವರನ್ನು ತೋರಿಸಿ, ಅವರು ಅವರದ್ದೇ ಆದ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನೂ ಪ್ರಶಾಂತ್ ಕೇಸು, ಪಾಸು, ಕೋರ್ಟ್, ಜೈಲು, ಪೈಲು ಎಂದು ಕೊಂಡಿರುತ್ತಾರೆ. ಇನ್ನೊಬ್ಬ ಅರವಿಂದ್ ರನ್ನಿಂಗ್ ಎಂದು ಓಡುವ ಸನ್ನೆ ಮಾಡಿ ತೋರಿಸುತ್ತಾರೆ.
ಈ ಹಿಂದೆ ಕಿತ್ತಾಟದಿಂದ ಸುದ್ದಿಯಾಗುತ್ತಿದ್ದ ದಿವ್ಯಾ ಸುರೇಶ್, ಶಮಂತ್ ನಡುವೆ ಒಂದು ಉತ್ತಮ ಬಾಂಧವ್ಯ ಶುರುವಾಗಿದೆ. ಇಬ್ಬರು ಮುದ್ದಾಗಿ ಮಾತನಾಡುತ್ತಾ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಕ್ಯಾಪ್ಟನ್ ಬೆಡ್ ರೂಮ್‍ನಲ್ಲಿ ನಿಂತುಕೊಂಡು ದಿವ್ಯಾ ಸುರೇಶ್ ಅವರು ಶಮಂತ್ ನನ್ನು ವಿಶಿಲ್ ಹಾಕಿ ಕರೆದಿದ್ದಾರೆ. ಆಗ ಶಮಂತ್ ನೋಡಿದಾಗ, ದಿವ್ಯಾ ಗ್ಲಾಸ್ ಮೇಲೆ ಏನೋ ಬರೆದಿದ್ದಾರೆ. ಆಗ ಶಮಂತ್ ಏನು ಬರೆದೆ ಎಂದು ಕೇಳಿದಾಗ, ದಿವ್ಯಾ ನಾನು ಹೇಳುವುದಿಲ್ಲ ಎಂದು ನಗುತ್ತಾ ತಲೆ ಅಲ್ಲಾಡಿಸಿದ್ದಾರೆ. ಆಗ ಶಮಂತ್ ದಿವ್ಯಾ ಸುರೇಶ್ ಎಂದು ಬರೆದೆಯಾ ಎಂದು ಕೇಳಿದಾಗ ಇಲ್ಲ ಎಂದು ದಿವ್ಯಾ ಹೇಳಿದ್ದಾರೆ. ಆಗ ಸುರೇಶ್ ದಿವ್ಯಾ ಎಂದು ಬರೆದ್ಯಾ ಎಂದು ಕೇಳಿದಾಗ ಹೌದು ಎಂದು ಕೇಳಿದಾಗ ಇಬ್ಬರು ಒಟ್ಟಾಗಿ ನಕ್ಕಿದ್ದಾರೆ. ಆಗ ಶಮಂತ್ ನೀನು ಈಗ ಹೇಳಿಲ್ಲಾಂದ್ರೆ ನಾನು ಬಿಗ್‍ಬಾಸ್ ಮುಗಿದ ಮೇಲೆ ಮನೆಗೆ ಹೋಗಿ ನೋಡುತ್ತೇನೆ ಎಂದು ಶಮಂತ್ ಹೇಳಿದ್ದಾರೆ.
ಶಮಂತ್ ಲವ್ ಮಾಡೋಕೆ ಬಿಗ್‍ಬಾಸ್‍ಗೆ ಬಂದಿದ್ದಾರೆ ಎಂದು ದಿವ್ಯಾ ನೇರವಾಗಿ ಈ ಹಿಂದೆ ಶಮಂತ್‍ಗೆ ಹೇಳಿದ್ದರು. ಶಮಂತ್ ಕುರಿತಾಗಿ ದಿವ್ಯ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಶಮಂತ್ ಮಾತನಾಡಿಸಲು ಪ್ರಯತ್ನಿಸಿದರೂ ದಿವ್ಯಾ ಹೆಚ್ಚಾಗಿ ಶಮಂತ್ ಜೊತೆಗೆ ಬೆರೆಯುತ್ತಿರಲಿಲ್ಲ. ಆದರೆ ಈ ಸೀಸನ್‍ನಲ್ಲಿ ಇಬ್ಬರು ತುಂಬಾ ಬದಲಾಗಿದ್ದಾರೆ. ಹೆಚ್ಚಾಗಿ ಮಾತನಾಡುತ್ತಾ ಕುಳಿತಿರುತ್ತಾರೆ.
ಶಮಂತ್ ದಿವ್ಯಾ ಮಧ್ಯೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ಅನ್ಯೋನ್ಯತೆ ಬೆಳೆದಿದೆ. ಇಬ್ಬರು ತಮಾಷೆಯಾಗಿ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಇಬ್ಬರ ಮಧ್ಯೆ ಮೊದಲಿದ್ದ ಯಾವುದೇ ಜಗಳವಿಲ್ಲ. ಒಳ್ಳೆಯ ಸ್ನೇಹಿತರಾಗಿ ಚೆನ್ನಾಗಿ ಮಾತನಾಡುತ್ತಾ ಬಿಗ್‍ಬಾಸ್ ಮನೆಯಲ್ಲಿ ಗೇಮ್ ಆಡುತ್ತಿದ್ದಾರೆ. ದಿವ್ಯಾ ಮಂಜು ಬಾಲ, ಹೆಚ್ಚಾಗಿ ಅವನ ಜೊತೆಗೆ ಕಾಲ ಕಳೆಯುತ್ತಾಳೆ ಎಂದು ದಿವ್ಯಾ ಕುರಿತಾಗಿ ಇರುವ ಕೆಲವು ದೂರುಗಳು ಈ ಸೀಸನ್‍ನಲ್ಲಿ ದೂರವಾಗಿದೆ. ಶಮಂತ್ ಕೂಡಾ ಸೇಫ್ ಗೇಮ್ ಆಡುತ್ತಿದ್ದಾರೆ, ಸಂಬರಗಿ, ಚಕ್ರವರ್ತಿ ಜೊತೆಗೆ ಕಾಲಕಳೆಯುತ್ತಾರೆ ಎನ್ನುವ ಮಾತಿತ್ತು. ಆದರೆ ಇದೀಗ ಶಮಂತ್ ಪ್ರತಿನಿತ್ಯ ಹಾಡು, ಜೋಕ್, ಗೇಮ್ ಮಾಡುತ್ತಾ ತಮ್ಮದೇ ಆಗಿರುವ ರೀತಿಯಲ್ಲಿ ಮನರಂಜನೆ ನೀಡಿತ್ತಾ ಬಿಗ್‍ಬಾಸ್ ವೀಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ಇದೀಗ ಸ್ಪರ್ಧಿಗಳ ನಡುವೆ ಗುಂಪುಗಾರಿಕೆ ಶುರುವಾಗಿದೆ. ಒಂದಾಗಿದ್ದ ಮನೆಮಂದಿ ಇದೀಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಷ್ಟರ ಮಟ್ಟಿಗೆ ಮನಸ್ತಾಪ ಬೆಳೆದುನಿಂತಿದೆ. ಇದನ್ನು ಗಮನಿಸುತ್ತಿರುವ ಶಮಂತ್ ಮತ್ತು ರಘು ತಮ್ಮ ಭಾವನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡಿದ್ದಾರೆ.
ಈ ಮನೆಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರು ಒಂದಿಷ್ಟು ಜನ ಇದ್ದಾರೆ. ಅದಕ್ಕಿಂತ ಕಡಿಮೆ ವಯಸ್ಸಿನವರು ಒಂದಿಷ್ಟು ಜನ ಇದ್ದೇವೆ. ನಾವು ಈ ಮನೆಯಲ್ಲಿರುವವರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಒಳ್ಳೆಯ ಭಾವನೆ ಬರುವಂತೆ ನೋಡಿಕೊಳ್ಳಬೇಕೆಂದು ಅನಿಸುತ್ತಿದೆ ಎಂದು ಶಮಂತ್ ಅವರು ರಘು ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಮನೆಗೆ ಹೋಗ್ತೀನಿ – ಬಿಗ್ ಮನೆಯಲ್ಲಿ ಕಣ್ಣೀರಿಟ್ಟ ದಿವ್ಯಾ
ಈ ವೇದಿಕೆ ನಮಗೆ ತುಂಬಾ ದೊಡ್ಡದು. ನಾವು ಮೊದಲು ಇದ್ದಂತೆ ಈ ಮನೆಯಲ್ಲಿ ಇಲ್ಲ ತುಂಬಾ ಬದಲಾವಣೆಗಳು ಕಂಡು ಬರುತ್ತಿದೆ. ನಾವೆನಾ ಇಲ್ಲಿ ಇರೋದು ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಾಣಿಸುತ್ತಿದೆ. ಮನೆ ತುಂಬಾ ಖಾಲಿ, ಖಾಲಿ ಅನಿಸುತ್ತಿದೆ. ಅವರು ಇವರನ್ನು ಮಾತನಾಡಿಸುತ್ತಿಲ್ಲ. ಇವರು ಅವರನ್ನು ಮಾತನಾಡಿಸುತ್ತಿಲ್ಲ ಏನಿದು ಎಂದು ಶಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ರಘು ನಾನು ಯಾವ ಟೀಂ ಜೊತೆಗೂ ಗುರುತಿಸಿಕೊಂಡಿಲ್ಲ. ಟಾಸ್ಕ್ ಬಂದಾಗ ಟೀಂ ಓಕೆ ಅದನ್ನು ಹೊರತು ಪಡಿಸಿ ಗುಂಪುಗಾರಿಕೆ ಸರಿ ಅನಿಸಲಿಲ್ಲ. ನನಗೆ ಅರವಿಂದ್ ಅವರು ಮಾತನಾಡಿದ್ದು ಸರಿ ಅನಿಸಲಿಲ್ಲ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಬಾರದು ಎಂದರು. ಇದನ್ನು ಕೇಳಿಸಿಕೊಂಡ ಶಮಂತ್ ನಮ್ಮಲ್ಲಿ ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಮನೆಯ ಮಾತಿನ ಕಲಹದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗಿ ದಿನಗಳು ಕಳೆಯುತ್ತಿರುವ ನಡುವೆ. ಮನೆಯಲ್ಲಿ ಇಬ್ಬರು ಸಂಬಂಧಿಕರ ನಡುವೆ ತಮ್ಮ ಕುಟುಂಬದ ಬಗ್ಗೆ ಸಣ್ಣಮಟ್ಟದ ಹೆಲ್ದಿ ವಾರ್ ನಡೆದಿದೆ.
ಬಿಗ್‍ಬಾಸ್ ನೀಡಿರುವ ಟಾಸ್ಕ್ ನಲ್ಲಿ ಕೂತು ಕಾಲ ಕಳೆಯುತ್ತಿರುವ 6 ಜನ ಸ್ಪರ್ಧಿಗಳಲ್ಲಿ ಇಬ್ಬರು ಸ್ಪರ್ಧಿಗಳು ನಿಜ ಜೀವನದಲ್ಲಿ ಸಂಬಂಧಿಕರಾಗಿದ್ದಾರೆ. ಮೊದಲ ಇನ್ನಿಂಗ್ಸ್ ಕೊರೊನಾದಿಂದಾಗಿ ನಿಂತ ಮೇಲೆ ಮನೆಗೆ ತೆರಳಿದ ಬಳಿಕ ಶಮಂತ್ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರಗಿ ಸಂಬಂಧಿಕರೆಂಬ ವಿಷಯ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ರಾಖಿ ಇಲ್ಲ ಮಂಜಣ್ಣ ಇದನ್ನೇ ಕಟ್ತೀನಿ: ವೈಷ್ಣವಿ
ಈ ವಿಷಯವಾಗಿ ಟಾಸ್ಕ್ ವೇಳೆ ಶಮಂತ್ ಗೌಡ, ಸಂಬಂಧಿಕರೆಲ್ಲ ಬಿಗ್‍ಮನೆಯ ಹೊರಗೆ ಮನೆಯ ಒಳಗಲ್ಲ ಎಂದು ಸಂಬರಗಿಗೆ ಹೇಳಿದ್ದಾರೆ. ಇದನ್ನು ಕೇಳಿದ ಮಂಜು ಯಾರು ಸಂಬಂಧಿಕರು ಎಂದು ಕೇಳಿದ್ದಾರೆ. ಇದಕ್ಕೆ ಚಕ್ರವರ್ತಿ, ಶಮಂತ್ ಮತ್ತು ಸಂಬರಗಿ ಅವರು ನಿಜವಾಗಿಯೂ ಸಂಬಂಧಿಕರು ಎಂದು ವಿವರಿಸಿದ್ದಾರೆ.
ನಿಮ್ಮಿಬ್ಬರ ಸಂಬಂಧ ಹೇಗೆ ಎಂದು ಶಮಂತ್ ಮತ್ತು ಚಕ್ರವರ್ತಿ ಬಳಿ ಕೇಳಿದ್ದಾರೆ. ಇದಕ್ಕೆ ಸಂಬರಗಿ ನಮ್ಮಿಬ್ಬರ ಕಡೆಯಿಂದ ಒಬ್ಬರ ಕುಟುಂಬಕ್ಕೆ ಒಬ್ಬರು ಗಂಡು, ಹೆಣ್ಣು ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಶಮಂತ್ ಒಂದು ಮದುವೆಯನ್ನು ಇಷ್ಟು ಕೇವಲವಾಗಿ ಮಾತನಾಡುತ್ತಾರಾ ಎಂದು ಸಂಬರಗಿ ಮೇಲೆ ಗರಂ ಆಗಿದ್ದಾರೆ.
ಇದನೆಲ್ಲ ಗಮನಿಸಿದ ಚಕ್ರವರ್ತಿ ನಿಮ್ಮ ಕುಟುಂಬ ವಿಷಯ ನೀವೆ ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಶಮಂತ್ ಹೆಲ್ದಿಯಾಗಿ ಕುಟುಂಬ ವಿಷಯವನ್ನು ಮನೆಯಿಂದ ಹೊರಗೆ ಹೋದ ಮೇಲೆ ಇಟ್ಟುಕೊಳ್ಳೋಣ ಎಂದು ಸುಮ್ಮನಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.
ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.
ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.
ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.
ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.
ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.
ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.
ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.
ಅದ್ಯಾಕೋ ಗೊತ್ತಿಲ್ಲ ಶಮಂತ್ ಬ್ರೊ ಗೌಡಗೆ ಆರಂಭದಿಂದಲೂ ಅದೃಷ್ಟ ಅನ್ನೋದು ಬೆನ್ನಿಗಂಟಿಕೊಂಡೇ ಇದೆ. ಸತತವಾಗಿ ನಾಮಿನೇಟ್ ಆಗುತ್ತಿದ್ದರೂ, ಮನೆಯಿಂದ ಅವರು ಆಚೆ ಮಾತ್ರ ಬರುತ್ತಿಲ್ಲ. ಅದಕ್ಕೆ ಕಾರಣವೇನು ಎಂಬುದು ಮಾತ್ರ ನಿಗೂಢವಾಗಿದೆ.
ಬಿಗ್‍ಬಾಸ್ ಮನೆಯಲ್ಲಿರುವ ವೀಕ್ ಕಂಟೆಸ್ಟಂಟ್ ಎಂದರೆ ಶಮಂತ್ ಎಂದು ಹೇಳಬಹುದು. ಮನೆಯಲ್ಲಿರುವ ಸ್ಪರ್ಧಿಗಳು, ಬಿಗ್‍ಬಾಸ್ ವೀಕ್ಷರು ಮನೆಯಿಂದ ಶಮಂತ್ ಅವರನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು. ಶಮಂತ್ ಅವರ ಅದೃಷ್ಟ ಮಾತ್ರ ಚೆನ್ನಾಗಿದೆ ಎಂದು ಅನ್ನಿಸುತ್ತದೆ. ಬಿಗ್‍ಬಾಸ್‍ಮನೆಯಲ್ಲಿ ಇನ್ನು ಹೆಚ್ಚಿನ ಸಮಯವನ್ನು ಕೇಳುವ ಅವಕಾಶ ಮತ್ತೆ ಮತ್ತೆ ಬಂದೊದಗುತ್ತಿದೆ.
ಶಮಂತ್ ಅದೃಷ್ಟ ಕಂಡು ಮನೆಯವರು ಶಾಕ್!
ಈ ವಾರ ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಅರವಿಂದ್, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ನಾಮಿನೇಟ್ ಆಗಿದ್ದರು. ಆ ಪೈಕಿ ಶನಿವಾರದ ಎಪಿಸೋಡ್‍ನಲ್ಲಿ ನಿಧಿ ಮತ್ತು ಅರವಿಂದ್ ಸೇಫ್ ಆಗಿದ್ದರು. ಶಮಂತ್, ಪ್ರಶಾಂತ್, ದಿವ್ಯಾ ಸುರೇಶ್, ಶುಭಾ, ರಾಜೀವ್ ಅವರಲ್ಲಿ ಯಾರು ಹೊರಗೆ ಹೋಗೋದು ಅನ್ನೋ ವಿಚಾರ ಚರ್ಚೆ ಆಯ್ತು. ಈ ಐವರಲ್ಲಿ ರಾಜೀವ್, ದಿವ್ಯಾ, ಶುಭಾ ಅವರನ್ನು ಸೇಫ್ ಎಂದು ಸುದೀಪ್ ಘೋಷಿಸಿದರು. ಅಂತಿಮವಾಗಿ ಪ್ರಶಾಂತ್ ಮತ್ತು ಶಮಂತ್ ಉಳಿದುಕೊಂಡರು. ಅವರಿಬ್ಬರಲ್ಲಿ ಶಮಂತ್‍ಗೆ ಕಮ್ಮಿ ವೋಟ್ ಬಂದಿದ್ದರಿಂದ, ಅವರನ್ನು ಮನೆಯಿಂದ ಎಲಿಮಿನೇಟ್ ಎಂದು ಸುದೀಪ್ ಘೋಷಿಸಿದರು. ಆಗ ವೈಜಯಂತಿ ಅಡಿಗ ತಮ್ಮದೇ ಆಗಿರುವ ಕಾರಣವನ್ನು ಕೊಟ್ಟು ನಾನು ಶಮಂತ್‍ಅವರನ್ನು ಸೇಫ್ ಮಾಡಿ ನಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದರು.
ಶಮಂತ್‍ಗೆ ಸುದೀಪ್ ಹೇಳಿದ್ದೇನು
ಶಮಂತ್ ಸೇಫ್ ಆಗಿದ್ದು, ಸುದೀಪ್ ಅವರಿಗೂ ಕೂಡಾ ಶಾಕ್ ಆಗಿದೆ. ನೀವು ಇಲ್ಲಿಗೆ ಬರುತ್ತೀರಾ ಎಂದು ನಾನು ಸಂತೋಷ ಪಡುತ್ತಿದ್ದೇನು. ಏನ್ರೀ ನಿಮ್ಮ ಲಕ್. ನೀವು ವೈಜಯಂತಿ ಅವರಿಂದ ಸೇಪ್ ಆಗಿದ್ದೀರಾ. ನೀವು ಜನರ ಮನಸ್ಸನ್ನು ಗೆಲ್ಲಬೇಕು. ನಿಮಗೆ ಸಮಯ ಇದೆ. ಚೆನ್ನಾಗಿ ಆಡಿ ಇದೊಂದು ಅವಕಾಶ ನಿಮಗೆ ಸಿಕ್ಕಿದೆ. ಆದರೆ ಮುಂದಿನ ವಾರಕ್ಕೆ ನೇರವಾಗಿ ನಿಮ್ಮನ್ನು ನಾಮಿನೇಟ್ ಮಾಡುತ್ತಿದ್ದೇವೆ ಎಂದು ಸುದೀಪ್ ಶಮಂತ್‍ಗೆ ಹೇಳಿದ್ದಾರೆ.
ಈ ವಾರ ಸೇಪ್ ಆಗಿದ್ದೇನೆ ಎಂದು ಶಮಂತ್ ಸಂತೋಷಪಡುವಲ್ಲಿ ಸುದೀಪ್ ಅವರು ನೀಡಿದ ಶಾಕ್‍ಗೆ ಮತ್ತೆ ಶಮಂತ್ ಮುಂದಿನವಾರ ಹೊರ ಹೋಗುವವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಕೂಡಾ ಶಮಂತ್ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ಎಂದೂ ಆಗದ ಒಂದು ಘಟನೆ ಮಾತ್ರ ಬಿಗ್‍ಬಾಸ್ ಮನೆಯಲ್ಲಿ ನಡೆದಿದೆ. ಈ ಘಟನೆ ಬಿಗ್‍ಬಾಸ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದೆ.
ಬಿಗ್‍ಬಾಸ್ ಮನೆಯ ಎಲ್ಲ ಸದಸ್ಯರು ಒಂದೆ ಧ್ವನಿಯಲ್ಲಿ ಬಿಗ್‍ಬಾಸ್ ಶಮಂತ್ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿ ಎಂದು ಸಾಷ್ಟಾಂಗನಮಸ್ಕಾರ ಹಾಕಿದ್ದಾರೆ. ನೀವು ಒಪ್ಪುವವರೆಗೆ ನಾವು ಎದ್ದು ಹೋಗಲ್ಲಾ ಬಿಗ್‍ಬಾಸ್ ಎಂದಿದ್ದಾರೆ.
ಹೌದು. ಬಿಗ್‍ಬಾಸ್ ಮನೆಯ ಎದುರು ಮನೆ ಮಂದಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಶಮಂತ್ ಅವರನ್ನು ಇಲ್ಲಿಂದ ಕರೆದುಕೊಂಡು ಹೋಗಿ ನಮಗೆ ಬೆಡ್ ರೂಮ್ ಕೊಡಿ ಎಂದು ಕ್ಯಾಮೆರಾ ಮುಂದೆ ಬಂದು ಸದಸ್ಯರು ಕೈ ಮುಗಿದು ಅಡ್ಡಬಿದ್ದಿದ್ದಾರೆ. ಬಿಗ್‍ಬಾಸ್ ಉತ್ತರಕ್ಕಾಗಿ ಕೊಂಚ ಸಮಯ ಕಾದಿದ್ದಾರೆ. ಆದರೆ ಯಾವುದು ಉತ್ತರ ಬರದೆ ಗಂಟೆಯ ಸೌಂಡ್ ಬಂದಿದೆ.
ಶಮಂತ್ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ!
ಶಮಂತ್ ಮೈಕ್‍ನಲ್ಲಿ ಧ್ವನಿ ಕೇಳುವಂತೆ ಮಾತನಾಡದೆ ಕಿವಿಯಲ್ಲಿ ಹೋಗಿ ಕೆಲವೊಮ್ಮೆ ಮಾತನಾಡುತ್ತಾರೆ. ಬಿಗ್‍ಬಾಸ್ ಮನೆಯ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಈ ವಿಚಾರವಾಗಿ ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿತ್ತು.
ಶಮಂತ್ ಮೂರನೇ ವಾರದ ನಾಮಿನೇಶನ್‍ಗೆ ನೇರವಾಗಿ ನಾಮಿನೇಟ್ ಆಗುತ್ತಾರೆ. ಅವರು ನಾಮಿನೇಟ್ ಆಗಬಾರದು ಎಂದರೆ ಮನೆ ಮಂದಿ ಬೆಡ್‍ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಕೆಲವರು ವಿರೋಧ ವ್ಯಕ್ತಪಡಿಸಿದರು ಕೆಲವರು ಒಪ್ಪಿದರು. ಈ ವೇಳೆ ಶಮಂತ್ ನಮ್ಮ ಅಪ್ಪ ಅಮ್ಮಾ ಉಸಿರಾಡ್ತಿರೋದೆ ನನ್ನ ಹೆಸರಿನಿಂದ ಎಂದು ಭಾವುಕರಾದರು. ಈ ವೇಳೆ ಮನೆ ಮಂದಿ ಬೆಡ್ ರೂಂ ಬಿಡಲು ಒಪ್ಪಿಗೆ ಸೂಚಿಸಿದರು.
ಸಂಕಷ್ಟಕ್ಕೆ ಸಿಲುಕಿಕೊಂಡರಾ ಸೆಲೆಬ್ರಿಟಿಗಳು!
ಬೆಡ್ ರೂಂ ಬಿಟ್ಟುಕೊಟ್ಟಿರುವ ಕುರಿತಾಗಿ ಕೆಲವರಿಗೆ ಬೇಸರವಾಯಿತ್ತು. ಶಮಂತ್ ಉಳಿಸಲು ಹೋಗಿ ಈಗ ಮನೆಮಂದಿ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ಸರಿಯಾಗಿ ನಿದ್ದೆ ಬಂದಿಲ್ಲ. ಬೆಡ್ ಇಲ್ಲದೆ ಮಲಗಬೇಕು ಎನ್ನುವ ಕೋಪದಲ್ಲಿ ಮನೆ ಮಂದಿ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡ ತೊಡಗಿದರು. ಗಾರ್ಡ್‍ನ್ ಏರಿಯಾ ಹಾಗೂ ಲಿವಿಂಗ್ ಏರಿಯಾದಲ್ಲಿ ಮಲಗಿದ್ದರು.
ಶಮಂತ್ ನಾ ಕರೆದುಕೊಂಡು ಹೋಗಿ!
ಮನೆಮಂದಿ ಎಲ್ಲಾ ಸೇರಿ ಒಂದು ಕ್ಯಾಮೆರಾ ಮುಂದೆ ಬಂದು ಬಿಗ್‍ಬಾಸ್ ಆತುರದ ನಿಧಾರವನ್ನು ತೆಗೆದುಕೊಂಡೆವು. ದಯವಿಟ್ಟು ಹೀಗೆ ಮಾಡುವುದಿಲ್ಲ. ನಮೆ ಬೆಡ್ ರೂಂ ಕೋಡಿ .ಬೇರೆ ಯಾವುದಾದರೂ ಶಿಕ್ಷೆಯನ್ನು ನೀಡಿ ಇಲ್ಲವಾದರೆ ಶಮಂತ್‍ನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
2 ನೇವಾರದ ಎಲಿಮಿನೇಷನ್‍ಯಲ್ಲೊಬ್ಬ ಸ್ಪರ್ಧಿ ಮನೆಯಿಂದ ಆಚೆ ಹೋಗಿದ್ದಾರೆ. ಮೂರನೇವಾರವು ನಾವು ಸೇಫ್ ಆಗಬೇಕು ಎಂದು ಪ್ರತಿಯೊಬ್ಬರು ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳುವ ಆಟವನ್ನು ಪ್ರಾರಂಭಿಸಿದ್ದಾರೆ.